1271. ಮರೆಯದ ಮಾಣಿಕ್ಯ (1985)

ಮರೆಯದ ಮಾಣಿಕ್ಯ ಚಲನಚಿತ್ರದ ಹಾಡುಗಳು 
  1. ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ 
  2. ಕಾಳಿದಾಸ ಕಾಣದ ಭವ್ಯ ರೂಪಸಿ 
  3. ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ 
  4. ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ 
ಮರೆಯದ ಮಾಣಿಕ್ಯ (1985) - ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ

ಗಂಡು : ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
            ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
            ಹೊಸ ಸಂಗೀತ.. ಅನುರಾಗ ಮಿಡಿದಾಗ ಮನಸು ಆಡಿ ಹಾಡಿದೇ ..
ಹೆಣ್ಣು : ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
          ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
          ಹೊಸ ಸಂಗೀತ.. ಅನುರಾಗ ಮಿಡಿದಾಗ ಮನಸು ಆಡಿ ಹಾಡಿದೇ ..

ಗಂಡು : ಹರೆಯದ ಆಸೇ ಹೃದಯದ ಬಾಷೇ ಕಲಿತಿರುವಂಥ ವೇಳೆ
            ಒಲವಿನ ಹೂವು ಪರಿಮಳ ಚೆಲ್ಲಿ ನಗುತಿರುವಂಥ ವೇಳೆ
ಹೆಣ್ಣು : ಶೃತಿಲಯದಂತೆ ಮನಸುಗಳಿಲ್ಲಿ ಬೆರೆತಿರುವಂಥ ವೇಳೆ
           ಕನಸುಗಳಿಂದು ಹೊಸ ಸವಿಯೊಂದ ತರುವಂಥ ವೇಳೆ
ಗಂಡು : ನಲೀ ನಲೀ ಬೆರೆತು ನಲೀ ನಲೀ
ಹೆಣ್ಣು : ನಗುವಲ್ಲಿ ಜಗವಾ ಮರೇ ಮರೇ
ಗಂಡು : ದಿನವೂ ಹೊಸದು ಒಲವೂ
ಹೆಣ್ಣು : ದಿನವೂ ಹೊಸದು ಸುಖವೂ
ಗಂಡು : ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
            ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
            ಹೊಸ ಸಂಗೀತ.. ಅನುರಾಗ ಮಿಡಿದಾಗ ಮನಸು ಆಡಿ ಹಾಡಿದೇ ..

ಹೆಣ್ಣು : ಸಾಗರದಲ್ಲಿ ಸಂಗಮಕ್ಕಾಗಿ ಸಂಭ್ರಮ ಗಂಗೆಯಲ್ಲಿ
          ಜೀವನದಲ್ಲಿ ಸಂಗಮಕ್ಕಾಗಿ ಸಂಭ್ರಮವಿಲ್ಲಿ
ಗಂಡು : ಧೂಳಿಯ ಸಂಗ ಸಂಗಮಕ್ಕಾಗಿ ಸಂಭ್ರಮ
            ಬಾನಿನಲ್ಲಿ ಹೂವಿನ ಸಂಗ ಸಂಗಮಕ್ಕಾಗಿ ಸಂಭ್ರಮ ದುಂಬಿಯಲ್ಲಿ
ಹೆಣ್ಣು : ಸವಿ ಸವಿ                   ಗಂಡು : ಸುಖ ಸುಖ ಮೋಹ ಸುಖ ಸುಖ
ಹೆಣ್ಣು :  ನಡೆವಾ ಜೊತೆಗೆ ಕಲೆತು
ಗಂಡು : ನಗುವಾ ಚಿಂತೆ ಮರೆತು
ಹೆಣ್ಣು : ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
          ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
          ಹೊಸ ಸಂಗೀತ.. ಅನುರಾಗ ಮಿಡಿದಾಗ ಮನಸು ಆಡಿ ಹಾಡಿದೇ ..
ಗಂಡು : ನನ್ನೆದೆಯಲಿ ತಂದೆ ನೀನು ಪ್ರೇಮದ ಗೀತೆ
            ಸಾವಿರ ಮಿಂಚು ತಂದಿತು ನಿನ್ನಾ ಕಣ್ಣಿನ ಮಾತೇ
            ಹೊಸ ಸಂಗೀತ.. ಅನುರಾಗ ಮಿಡಿದಾಗ ಮನಸು ಆಡಿ ಹಾಡಿದೇ .. 
-------------------------------------------------------------------------------------------------------

ಮರೆಯದ ಮಾಣಿಕ್ಯ (1985) - ಕಾಳಿದಾಸ ಕಾಣದ ಭವ್ಯ ರೂಪಸಿ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ

ಗಂಡು : ಕಾಳಿದಾಸ ಕಾಣದ ಭವ್ಯ ರೂಪಸಿ
            ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
            ಓ.. ಬಾನ ತಾರೇ ನೀ ಮಿಂಚಿ ಬಾರೆ ಕಂಡೆ ನಿನ್ನಾ ತಂದೆ ನನ್ನಾ
ಹೆಣ್ಣು : ಕಾಳಿದಾಸ ಕಾಣದಾ ಭವ್ಯ ಕಲ್ಪನೇ
          ನಿನ್ನಲಿ ಪ್ರೀತಿ ಹಾಡಲಿ ಗೆದ್ದೇ ನನ್ನಲ್ಲಿ
          ಈ ಹೂವ ಸಂಗ ನೀ ಆಡು ಬಾರಾ ಮಾತೇಕೆ ಇನ್ನೂ ಸೋತೆ ನಾನು

ಗಂಡು : ನೀಲಿ ಕಣ್ಣಾ ತುಂಬ ಆಸೆಯ ರಂಗಿದೆ ನೂರು ಹೆಜ್ಜೆ ಹಾಕೋ ವೇಳೆ
            ಚಲಿಸುವ ಹೂವಿನ ತೇರು ಬಿಂಕ ವಯ್ಯಾರ ನಿನ್ನಾ ಸಿಂಗಾರ
            ಕಾಮದೇವ ಬಿಟ್ಟ ಹೂವ ಬಾಣ ಕಣ್ಣ ನೋಟ
ಹೆಣ್ಣು : ಕಾಳಿದಾಸ ಕಾಣದಾ ಭವ್ಯ ಕಲ್ಪನೇ
          ನಿನ್ನಲಿ ಪ್ರೀತಿ ಹಾಡಲಿ ಗೆದ್ದೇ ನನ್ನಲ್ಲಿ
          ಈ ಹೂವ ಸಂಗ ನೀ ಆಡು ಬಾರಾ ಮಾತೇಕೆ ಇನ್ನೂ ಸೋತೆ ನಾನು

ಹೆಣ್ಣು : ಹೂವ ದೋಣಿ ಮೇಲೆ ಜಾರುತ ಸೇರುವೆ ನಾನು
          ಕಾಮನ ಬಿಲ್ಲ ಮೇಲೆ ಹಾರುವ ಸೇರುವೆ ನಾನು
          ಪ್ರೇಮ ಬಂದಾಗ ನೀನು ಆವೇಗ ಈ ತನಕ ಯಾರು ಕಾಣದಂಥ ಪ್ರೀತಿ ನಮ್ಮದು
ಗಂಡು : ಕಾಳಿದಾಸ ಕಾಣದ ಭವ್ಯ ರೂಪಸಿ
            ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
            ಓ.. ಬಾನ ತಾರೇ ನೀ ಮಿಂಚಿ ಬಾರೆ ಕಂಡೆ ನಿನ್ನಾ ತಂದೆ ನನ್ನಾ
ಹೆಣ್ಣು : ಕಾಳಿದಾಸ ಕಾಣದಾ ಭವ್ಯ ಕಲ್ಪನೇ
          ನಿನ್ನಲಿ ಪ್ರೀತಿ ಹಾಡಲಿ ಗೆದ್ದೇ ನನ್ನಲ್ಲಿ
          ಈ ಹೂವ ಸಂಗ ನೀ ಆಡು ಬಾರಾ ಮಾತೇಕೆ ಇನ್ನೂ ಸೋತೆ ನಾನು
--------------------------------------------------------------------------------------------------------

ಮರೆಯದ ಮಾಣಿಕ್ಯ (1985) - ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ

ಗಂಡು : ಈ ಒಡಲಿನ ಕಣಕಣದಲ್ಲಿ ನೆಲೆಸಿರುವೆ ನೀ
            ಸನ್ನಿದಿಯಲಿ ನಿಂತಿರುವ ನಾ ನೀನೆನಗೆ ದರ್ಶನ
            ಪ್ರೀತಿಯ ತೋರು ನಗೆಯನು ಬೀರು
            ತುಂಬಿದೆ ನಿನ್ನಾ ನಂಬಿಕೆ ನೀಗಿ ನೀಗಿ
            ಈ ಒಡಲಿನ ಕಣಕಣದಲ್ಲಿ ನೆಲೆಸಿರುವೆ ನೀ
            ಸನ್ನಿದಿಯಲಿ ನಿಂತಿರುವ ನಾ ನೀನೆನಗೆ ದರ್ಶನ

ಗಂಡು : ಕಣ್ಣಲಿ ಸದಾ ತುಂಬಿದೆ ಹಾಲಿರುಳು ನಿನ್ನಯ ಮುಖ
            ನಿನ್ನನು ಮನ ಸೇರಿಸಿದೆ ಉಸಿರುಸಿರು ನೂತನ ಸುಖ
            ಪಾದಕೆ ಪೂಜೆಯ ಮಾಡುವೆ ನಿತ್ಯ ಮಲ್ಲೆ ಹೂವಲ್ಲಿ
            ಅಂಗ ಪ್ರದಕ್ಷಿಣೆ ಹಾಕುವೆ ದೇವಿ ಬಲಿಯೇ ನನ್ನಲ್ಲಿ
            ವರವನು ಕೊಡು ನಿನ್ನೊಲವನು ನೀಡು
            ಛಲವನು ಬಿಡು ಕರುಣೆಯಲಿ ನೋಡು
            ಈ ಒಡಲಿನ ಕಣಕಣದಲ್ಲಿ ನೆಲೆಸಿರುವೆ ನೀ
            ಸನ್ನಿದಿಯಲಿ ನಿಂತಿರುವ ನಾ ನೀನೆನಗೆ ದರ್ಶನ

ಹೆಣ್ಣು :  ನಿನ್ನಲ್ಲಿ ಇದೋ ಒಲಿದಿರು ನಲಿವಿನಲಿ ಪೂಜೆಯ ಫಲ
           ಬೇಡಿದ ವರ  ತರುವೆನು ಹರುಷದಲಿ ಸಾವಿರ ಸಲ
ಗಂಡು : ನಿನ್ನ ಸಂಗದ ಸ್ವರ್ಗ ಸುಖ ಸೌಖ್ಯ ನೀಡು ನೀನಿಂದೂ
            ನಿನ್ನಲ್ಲಿ ನನ್ನನು ಮಾಡಿಕೊ ಒಂದು ಇನ್ನೂ ಎಂದೆಂದೂ
ಹೆಣ್ಣು : ಇರುವೇನು ಸದಾ ಸನಿಹದಲಿ ನಾನು ಬದುಕಿದು ಸುಖ ಜೊತೆಯಿರಲೂ ನೀನು
ಗಂಡು : ಈ ಒಡಲಿನ ಕಣಕಣದಲ್ಲಿ ನೆಲೆಸಿರುವೆ ನೀ
            ಸನ್ನಿದಿಯಲಿ ನಿಂತಿರುವ ನಾ ನೀನೆನಗೆ ದರ್ಶನ
            ಪ್ರೀತಿಯ ತೋರು ನಗೆಯನು ಬೀರು
            ತುಂಬಿದೆ ನಿನ್ನಾ ನಂಬಿಕೆ ನೀಗಿ ನೀಗಿ
            ಈ ಒಡಲಿನ ಕಣಕಣದಲ್ಲಿ ನೆಲೆಸಿರುವೆ ನೀ
            ಸನ್ನಿದಿಯಲಿ ನಿಂತಿರುವ ನಾ ನೀನೆನಗೆ ದರ್ಶನ
-------------------------------------------------------------------------------------------------------

ಮರೆಯದ ಮಾಣಿಕ್ಯ (1985) - ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ
ಸಂಗೀತ: ಶಂಕರಗಣೇಶ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ: ರಾಜಾಸೀತಾರಾಂ, ಮಂಜುಳಾ, ಬೆಂ.ಲತಾ

ಹೆಣ್ಣು : ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ
          ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ
          ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ
          ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ

ಹೆಣ್ಣು : ಆನಂದವೆಂಬ ಸೌಗಂಧ ತಂದ ಹೂವು ನೀನೇ ಇಂದು
          ಆಧಾರ ಸ್ಥಂಬ ನೀನೇ ಕಂದ ನಮ್ಮ ಮನೆಗೇ ಎಂದೂ
          ಆನಂದವೆಂಬ ಸೌಗಂಧ ತಂದ ಹೂವು ನೀನೇ ಇಂದು
          ಆಧಾರ ಸ್ಥಂಬ ನೀನೇ ಕಂದ ನಮ್ಮ ಮನೆಗೇ ಎಂದೂ
          ನಿನ್ನ ಬಾಳೆಲ್ಲವೂ ಹಾಲು ಜೇನಾಗಿ ನಿನ್ನ ಸಂತೋಷ ನಿನ್ನ ಪಾಲಾಗಲೀ ..
          ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ
          ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ

ಗಂಡು : ಈ ತಾಯಿ ಪ್ರೇಮ ಈ ತಂಗಿ ಪ್ರೀತಿ
            ಪಡೆದ ನಾನೇ ಧನ್ಯ ಏಳೇಳೂ ಜನ್ಮ ಸಿಗಲಮ್ಮ ನನಗೇ
            ನಿಮ್ಮ ಪಡೆವ ಪುಣ್ಯ
            ನಿಮ್ಮ ಪಡೆವ ಪುಣ್ಯ ಕರುಳ ಕುಡಿಯಾಗುವ ಕನಸು ನನಸಾಗಲಿ
            ಸೇವೆ ಸೌಭಾಗ್ಯದ ಸುಖವು ನನದಾಗಲಿ ಎಂದೂ ನಾನು ನಿಮ್ಮ ಸನಿಹ
            ಇರುವೆ ಹಾಯಾಗಿ  ಪ್ರೀತಿ ತಂದ ತಾಯೇ ನಿಮ್ಮ ಮಡಿಲ ಮಗುವಾಗಿ
  ಹೆಣ್ಣು : ಎಂದೂ ನೀನು ಹೀಗೆ ನಗುತಾ ಬಾಳು ಹಾಯಾಗಿ
          ಪ್ರೀತಿ ಎನುವ ಜ್ಯೋತಿ ಬೆಳಗು ನಮ್ಮ ಕಣ್ಣಾಗಿ
--------------------------------------------------------------------------------------------------------

No comments:

Post a Comment