92. ಜೀವನ ಚೈತ್ರ (1992)




ಜೀವನ ಚೈತ್ರ ಚಿತ್ರದ ಹಾಡುಗಳು 
  1. ಮಾನವನಾಗಿ ಹುಟ್ಟಿದ ಮೇಲೆ ಏನೇನ ಕಂಡೇ 
  2. ನಿನ್ನ ಚೆಲುವ ವದನ ನಯನ 
  3. ನನ್ನವಳು ನನ್ನವಳು  ನನ್ನದೆಯ 
  4. ಅರಳಿದ ತನುವಿದು 
  5. ಲಕ್ಷ್ಮಿ ಬಾರಮ್ಮ 
  6. ನಾದಮಯಾ 
ಜೀವನ ಚೈತ್ರ (1992) - ಮಾನವನಾಗಿ ಹುಟ್ಟಿದ ಮೇಲೆ
ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ ರಾಜ್ ಸಾಹಿತ್ಯ: ಮೂಗೂರು ಮಲ್ಲಪ್ಪ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ

ರಾಜ ರೋರರ್ ರಾಕೆಟ್ ಲೇಡಿ ಚತುರ್ಮುಖ
ಜೋಡೀಗೂಡಿ ಹಾಡುತಾವ ಹಿ೦ದಿನ್ ಸುಖ
ತಾನೂ ಬಿದ್ರೆ ಆದೀತೇಳು ತಾಯಿಗೆ ಬೆಳಕ
ಮು೦ದಿನವ್ರು ಕ೦ಡ್ರೆ ಸಾಕು ಸ್ವರ್ಗಸುಖ
ಒ೦ದು ಎರಡು ಮೂರು ನಾಲ್ಕು ಆದಾವ್ ಮತ
ಹಿ೦ದಿನಿ೦ದ ಹರಿದು ಬ೦ದಿದ್ದು ಒ೦ದೇ ಮತ
ಗು೦ಡಿಗೆ ಬಿದ್ದು ಹಾಳಾಗ್ಲಿಕ್ಕೆ ಸಾವಿರ್ ಮತ
ಮು೦ದೆ ಹೋಗಿ ಸೇರೋದಲ್ಲಿಗ್ ಒ೦ದೇ ಮತ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬ೦ಗಾರ್ ಬೆಳ್ಳಿತಾವ ಬೆಟ್ಟ ಕಾಡು
ಭೂಮಿ ತಾಯಿ ಮುಡಿದು ನಿ೦ತ ಮಾವಿನ್ ಜೋಡು
ಬಾಳಾವತಿ ಬೆಡಗಿನಿ೦ದ ಬರ್ತಾಳ್ನೋಡು
ಶರಾವತಿ ಕನ್ನಡ ನಾಡ ಭಾಗೀರಥಿ
ಪುಣ್ಯವ೦ತ್ರು ಬರ್ತಾರಿಲ್ಲಿ ದಿನ೦ಪ್ರತಿ
ಸಾವು ನೋವು ಸುಳ್ಯೋದಿಲ್ಲ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ ಮುಕ್ತಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೊತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗು೦ಡಿ
-------------------------------------------------------------------------------------------------------------------------

ಜೀವನ ಚೈತ್ರ (1992)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್


ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ
ಸಂತೋಷದಿ ನೀನಿರು ಬರುವನು ಕಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ

ಮೆದುವಾಗಿ ನಡಿ, ನಿನ್ನಾಸೆ ಏನೋ ನುಡಿ
ಬಯಕೆಗಳ ಸರವಿರಲಿ ಸಂಕೋಚವೇಕೆ
ದಿನವೆಲ್ಲ ನಗು ಆನಂದದಿಂದ ನಗು
ಬೆಳೆಯುತಿಹ ಹಸುಕಂದ ನಗುವಂತೆ ನಲ್ಲೆ
ಬದುಕೆಲ್ಲ ಹೀಗೆ ಇರು ಉಲ್ಲಾಸದಿಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ

ಒಲವೆಂಬ ಲತೆ ಹೂವೊಂದು ಬಿಡುವ ದಿನ
ಸಡಗರದಿ ಬರುತಿರಲು ಉಲ್ಲಾಸ ಕಂಡೆ
ಮಧುಮಾಸ ದಿನ ನೀನೆನಗೆ ಒಲಿದಾ ಕ್ಷಣ
ಬಾಳಲ್ಲಿ ಹೊಸದಾದ ಸುಖವನ್ನು ತಂದೆ
ನನ್ನ ಭಾಗ್ಯ ತಾನೆ ಇದು ನಿಜ ಹೇಳು ನೀನು
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ
ಸಂತೋಷದಿ ನೀನಿರು ಬರುವನು ಕಂದ
ಅರಳಿದ ತನುವಿದು ಅಂದವೋ ಅಂದ
ನಲಿದಿರುವ ಮನವಿನ್ನು ಚೆಂದವೋ ಚೆಂದ
------------------------------------------------------------------------------------------------------------------------

ಜೀವನ ಚೈತ್ರ (1992) - ನಾದಮಯ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ ರಾಜ


ತನನಂ ನ ಲಾ ಲ ಲ ದ ರ ರಾ ನ ನ ನಾ ದ ರ ರಾ ಲ ಲ ಲ ನ ನ ನಾ ದ ರ ಲ ನ ನಾ....ನಾ.....
ನಾ.....ನಾ.......ನಾ........ನ........ನ.......ನನ  ಅ ಆಆಅ..........ಅ ಎ ಎ ಎ ಎ ಅ...............
ನಾದಮಯ...........
ನಾದಮಯ ಈ ಲೋಕವೆಲ್ಲಾ ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು  ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ....... ನಾದಮಯ ಈ ಲೋಕವೆಲ್ಲಾ
ನಾದಮಯ.......

ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ  ಮೃಗಗಳ ತಣಿಸೆ ಖಗಗಳ ಕುಣಿಸೆ
ಸ್ವರಗಳ ಮಾಧುರ್ಯಾ ರಾಗದ ಸೌಂದರ್ಯ  ಮೃಗಗಳ ತಣಿಸೆ ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ ಆ.......ಆ.........ಆ......ಆ......
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ  ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ............

ಸ ಮ ಗ ರಿ ದಮದನಿಸ ನಾದಮಯ ಆ..........
ನಿ ದ ಮ ಗರಿಸ ದಾಮಗರಿಸ ಮಗರಿಸ ದನಿಸರಿಗಮ ದನಿಸ ನಾದಮಯ.
ಗರಿಸ ನಿದನಿ ರಿಸನಿ ದಪದ ಸಗಪದನಿ ನಾದಮಯ
ಸರಿಗರಿ ಸನಿದನಿ ಸನಿದಮಗರಿಸನಿ
ದ ಗ ದ ಗ ರಿಗಮಗರಿಸನಿ ರಿ ಮ ನಿ ರಿ
ಮಗರಿ ಮಗರಿಸನಿ ಸ ಸರಿಸನಿನಿಸದದಮದನಿಸ ಸನಿ ನಿಸನಿದ ದನಿದಮಗಮದನಿ
ಸರಿಗರಿ ಸನಿದನಿ ಸನಿದಪಮಗರಿಸ ದ ಮ ಗಮದನಿಸ ನಾದಮಯ
ಪಾಪಾಗಗಪಗಗಪಗರಿ ದ ದ ಸ ಸ ರಿ ರಿ ಗ ಗ ಮಪದಪಗ
ದ ದ ದ ಗಗ ದ ದ ರಿಸದದ ಪಸ ದಾಪಗ ರಿಸ ರಿಗಪ ಸದಾ
ಸಾ ಸಸಸಸ ಸಾ ಸಸಸಸ ಸಾ ಸಸಸಸ ರಿಸದ
ನಿನಿಪಮಪದ ನಿನಿಪಮಪದ ನಿನಿಪಮಪದ ದ ದ ದ ದ ದ ನಿ ಪ
ಆ..........ಆ.................ಆ.......ಆ....................
ಸನಿದಮಗಮ ದಾಮಗರಿನಿರಿಸ ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದಮಸರಿನಿಗರಿಸ ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ಗಪದನಿ
ದನನನ ದನನನ ದನನನ ದನನನನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ದೋಂತನನನನ ದೋಂತನನನನ ದೋಂತನನನನ
ನಾದಮಯಾ........ಈ ಲೋಕವೆಲ್ಲಾ ನಾದಮಯ
----------------------------------------------------------------------------------------------------------------------

ಜೀವನ ಚೈತ್ರ (1992)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌, ಮಂಜುಳಾ ಗುರುರಾಜ್


ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇ ದಿನ
ಕುಣಿಯಿತು ಮನ ತಣಿಸಿತು ನನ್ನ  ನಯನದಿ ನಯನ ಬೆರೆತಾ ಕ್ಷಣ
ನಯನದಿ ನಯನ ಬೆರೆತಾ ಕ್ಷಣ
ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇ ದಿನ
ಕುಣಿಯಿತು ಮನ ತಣಿಸಿತು ನನ್ನ  ನಯನದಿ ನಯನ ಬೆರೆತಾ ಕ್ಷಣ
ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ

ಶೃಂಗಾರದ ಸಂಗೀತದ ಸ್ವರ ಮೂಡುತಲಿರೆ
ಅನುರಾಗದ ನವಪಲ್ಲವಿ ಎದೆ ಹಾಡುತಲಿರೆ
ಹಣ್ಣಾದೆನೋ ಹೆಣ್ಣಾದೆನೋ ನಸು ನಾಚಿಕೆ ಬರೆ
ನಿನ್ನ ಆಸೆತು ನನ್ನ ಆಸೆಯು ಜೊತೆಯಾಗುತಲಿರೆ
ನಿನ್ನ ಚೆಲುವಿನಲಿ ನಿನ್ನ ಒಲವಿನಲಿ
ಹುಸಿ ನಗುವಿನಲಿ ಮೃದು ನುಡಿಗಳಲಿ
ಸಿಹಿಜೇನಿನ ಸವಿಕಂಡೆನು ನಿನ್ನ ನೋಡುತಲಿರೆ
ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಉಲ್ಲಾಸದಿ ತಂಗಾಳಿಯು ತನುಸೋಕುತಲಿರೆ
ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೆ
ಸಂತೋಷದ ಉಯ್ಯಾಲೆಯು ತೂಗಾಡುತಲಿರೆ
ಮಧುಮಾಸದ ನೆನಪಾಯಿತು ಹಿತವಾಗುತಲಿರೆ
ಮಾಮರಗಳಲಿ ಹಸಿರೆಲೆಗಳಲಿ
ಮನತಣಿಸುತಲಿ ಸುಖತುಂಬುತಲಿ
ಮರಿ ಕೋಗಿಲೆ ಹೊಸ ರಾಗದ ದನಿಮಾಡುತಲಿರೆ
ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇ ದಿನ
ಕುಣಿಯಿತು ಮನ ತಣಿಸಿತು ನನ್ನ
ನಯನದಿ ನಯನ ಬೆರೆತಾ ಕ್ಷಣ
ನಯನದಿ ನಯನ ಬೆರೆತಾ ಕ್ಷಣ
------------------------------------------------------------------------------------------------------------------------

ಜೀವನ ಚೈತ್ರ (೧೯೯೨)
ರಚನೆ: ಚಿ. ಉದಯಶಂಕರ್  ಸಂಗೀತ: ಉಪೇಂದ್ರ ಕುಮಾರ್ ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್


ಹೆ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
    ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
   ಬೆಳಗಲು ಮನೆಯನ್ನು ಸಿರಿದೇವಿಯೇ
ಗಂ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಹೆ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ
ಗಂ: ಕಾಲಲಿ ಕೀರು ಗೆಜ್ಜೆ ಗಲು ಗಲು ಎಂದಾಗ
ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ
ಜೊ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
      ಬೆಳಗಲು ಮನೆಯನ್ನು ಸಿರಿದೇವಿಯೇ

ಹೆ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ
ಗಂ: ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು ಸೇರಲು ಬಾರಮ್ಮ
ಹೆ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ
ಗಂ: ನಮ್ಮ ಸೊಸೆಯಾಗಿ ನರಹರಿ ಸತಿಯಾಗಿ, ನಮಗಾನಂದ ನೀಡುತಲೀ
ಹೆ: ನಮಗಾನಂದ ನೀಡುತಲೀ
ಗಂ: ಸುಖವನು ನೀ ತಾರೆ ನಮ್ಮ ಭಾಗ್ಯದೇವತೇ
ಜೊ: ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ

ಗಂ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಹೆ: ಹಿತವಾದ ಶ್ರುತಿಯಲ್ಲಿ ನಮ್ಮ ಬದುಕೆಂಬ ಗೀತೆಯ ಹಾಡಮ್ಮಾ
ಗಂ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ
ಹೆ: ಪ್ರೀತಿ ಸುಮವಾಗಿ ಜೇನಿನ ಹನಿಯಾಗಿ, ಹೊಸಸಂತೋಷ ತುಂಬುತಲೀ
ಗಂ: ಹೊಸಸಂತೋಷ ತುಂಬುತಲೀ
ಹೆ: ಕೀರ್ತಿಯ ತಾರಮ್ಮ ನಮ್ಮ ಭಾಗ್ಯದೇವತೇ
ಜೊ: ।। ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ
ಬೆಳಗಲು ಮನೆಯನ್ನು ಸಿರಿದೇವಿಯೇ ।।೨।।
-----------------------------------------------------------------------------------------------------------------------

ಜೀವನ ಚೈತ್ರ (1992)
ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಡಾ.ರಾಜ್‌, 


ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುವ ಹೆಣ್ಣೇಯ ಚೆನ್ನೇ ನನ್ನ ಮಡದಿ
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುವ ಹೆಣ್ಣೇಯ ಚೆನ್ನೇ ನನ್ನ ಮಡದಿ
ಕರೆದಾಗ ತೌರು ಮನೆ ನೆನೆದಾಗ ನನ್ನ ಮನೆ 
ಕರೆದಾಗ ತೌರು ಮನೆ ನೆನೆದಾಗ ನನ್ನ ಮನೆ 
ಹಳ್ಳಿಯೆರಡರ ಮುದ್ದು ಬಳ್ಳಿಯವಳು 
ಮುಚ್ಚುಮರೆ ಇಲ್ಲದೆಯೇ ಆಆಆ... ಆಆಆ .... 
ಮುಚ್ಚುಮರೆ ಇಲ್ಲದೆಯೇ ಅಚ್ಚ ಮಲ್ಲಿಗೆಯಂತೇ 
ಅರಳತಿಹುವುದು ಅವಳ ಬದುಕು... 
ಬಂಗಾರ ಒಡವೆಗಳ ಬಯಸಿಲ್ಲ ಮನಸಿನಲಿ 
ಬಂಗಾರದಂಥ ಹುಡುಗಿ    
ಬಂಗಾರದ  ಒಡವೆಗಳ...  ಬಯಸಿಲ್ಲ ಮನಸಿನಲಿ 
ಬಂಗಾರದಂಥ ಹುಡುಗಿ    
ನನ್ನೋಡವೇ ನನ್ನ  ಬೆಡಗಿ  
ಬಂಗಾರದಂಥ ಹುಡುಗಿ    
ನನ್ನೋಡವೇ ನನ್ನ  ಬೆಡಗಿ  
ನನ್ನೋಡವೇ ನನ್ನ  ಬೆಡಗಿ  
--------------------------------------------------------------------------------------------------------------------------

No comments:

Post a Comment