174. ಚಲಿಸುವ ಮೋಡಗಳು (1982)



ಚಲಿಸುವ ಮೋಡಗಳು ಚಿತ್ರದ ಗೀತೆಗಳು
  1. ಚಂದಿರ ತಂದ ಹುಣ್ಣಿಮೆ ರಾತ್ರಿ 
  2. ಜೇನಿನ ಹೊಳೆಯೋ ಹಾಲಿನ ಮಳೆಯೋ 
  3. ನೀನೆಲ್ಲೋ ನಾನಲ್ಲೇ 
  4. ಕಾಣದಂತೆ ಮಾಯವಾದನು ನಮ್ಮ ಶಿವ 
  5. ಮೈ ಲಾರ್ಡ್ ನನ್ನ ವಾದ 

ಚಲಿಸುವ ಮೋಡಗಳು (1982) - ಚಂದಿರ ತಂದ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಜಾನಕಿ, ಡಾ. ರಾಜ್ ಕುಮಾರ್


ಹೆಣ್ಣು : ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
          ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು 
          ಈ ನನ್ನ ನಲ್ಲನ ತೂಗೆಂದಿತು
ಗಂಡು : ಚಂದಿರ ತಂದ ಹುಣ್ಣಿಮೆ ರಾತ್ರಿ  ಗಾಳಿಯು ತಂದ ತಣ್ಣನೆ ರಾತ್ರಿ
            ಹಾಯಾಗಿ ನಾ ಮಲಗಿರಲು ಊಊಊಊಊ
            ಈ‌ ನನ್ನ ಮಂಚವು ಮಾತಾಡಿತು  ನಿನ್ನನ್ನು ಆಚೆಗೆ ನೂಕೆಂದಿತು

ಹೆಣ್ಣು : ಎನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
          ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು
ಗಂಡು : ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ
            ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ
ಹೆಣ್ಣು :  ಬಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ
ಗಂಡು : ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ
ಹೆಣ್ಣು : ಪ್ರೀತಿಯೆಂದರೆ ಗೊತ್ತೆ ಇಲ್ಲ
ಗಂಡು : ನನಗೆ ಪ್ರೀತಿಯೆ ಬೇಕಾಗಿಲ್ಲ
ಹೆಣ್ಣು : ಬೇಡವೆಂದರು ನಾ ಬಿಡುವುದಿಲ್ಲ
ಗಂಡು : ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ  ಗಾಳಿಯು ತಂದ ತಣ್ಣನೆ ರಾತ್ರಿ
            ಹಾಯಾಗಿ ನಾ ಮಲಗಿರಲು ಊಊಊಊಊ
            ಈ‌ ನನ್ನ ಮಂಚವು ಮಾತಾಡಿತು  ನಿನ್ನನ್ನು ಆಚೆಗೆ ನೂಕೆಂದಿತು
ಹೆಣ್ಣು : ಆ ದಿಂಬು ಹಾಸಿಗೆ ನನ್ನ ನೂಕಿತು  ಈ ನನ್ನ ನಲ್ಲನ ತೂಗೆಂದಿತು

ಗಂಡು : ಅತ್ತೆ ಕಂಡರೆ ಮಾವ ಬಂದರೆ ಮಾನ ಹೊಗುವುದು
            ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು
ಹೆಣ್ಣು : ಎಕೆ ಹೆದರುವೆ ಕದವ ಹಾಕುವೆ ಏನು ಕೇಳಿಸದು
          ಸದ್ದು ಮಾಡದೆ ದೇಪ ಆರಿಸು ಏನು ಕಾಣಿಸದು
ಗಂಡು : ಅಯ್ಯೊ ನಿನ್ನಾ - ನಿನ್ನ ಹೆಣ್ಣು ಅಂದೊರಿಗೆ ಬುದ್ದಿ ಇಲ್ಲ
ಹೆಣ್ಣು : ಎನೆ ಹೇಳು ನಿನ್ನ ಬಿಟ್ಟು ಬಾಳೊದಿಲ್ಲ
ಗಂಡು :  ಕೋಪ ಬಂದರೆ ಸುಮ್ಮನಿರಲ್ಲ
ಹೆಣ್ಣು : ಆಗಲೆ ನೀನು ಚೆನ್ನ ನಲ್ಲ್
ಗಂಡು : ಅಯ್ಯೊ ಎನು ಮಾಡಲಿ ಆ ದೇವರೆ ಬಲ್ಲ
ಹೆಣ್ಣು :  ಚಂದಿರ ತಂದ ಹುಣ್ಣಿಮೆ ರಾತ್ರಿ  ಗಾಳಿಯು ತಂದ ತಣ್ಣನೆ ರಾತ್ರಿ
          ಹಾಯಾಗಿ ನಾ ಮಲಗಿರಲು ಊಊಊ
          ಆ ದಿಂಬು ಹಾಸಿಗೆ ನನ್ನ ನೂಕಿತು  ಈ ನನ್ನ ನಲ್ಲನ ತೂಗೆಂದಿತು
ಗಂಡು : ಈ‌ ನನ್ನ ಮಂಚವು ಎನೆಂದಿತು  ನಿನ್ನನ್ನು ಆಚೆಗೆ ನೂಕೆಂದಿತು
----------------------------------------------------------------------------------------------------

ಚಲಿಸುವ ಮೋಡಗಳು (1982) - ಜೇನಿನ ಹೊಳೆಯೊ ಹಾಲಿನ ಮಳೆಯೊ
ಸಾಹಿತ್ಯ: ಚಿ. ಉದಯಶಂಕರ್  ಸಂಗೀತ: ರಾಜನ್ ನಾಗೇಂದ್ರ  ಗಾಯನ: ಡಾ|| ರಾಜ್‍ಕುಮಾರ್ 


ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ....
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ....
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ ಆಹಾ..
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ 
ದಪದ ರಿಸರಿ ಗಾಪಾದಪದಸ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ....
ಕವಿ ನುಡಿ ಕೋಗಿಲೆ ಹಾಡಿದ ಹಾಗೆ 
ಸವಿ ನುಡಿ ತಣ್ಣನೆ ಗಾಳಿಯ ಹಾಗೆ....
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ ಸುಧೆಯೊ ಕನ್ನಡ ಸವಿ ನುಡಿಯೊ
ಹ ಹಾ ಹ ಹ ಹ!! ಅಹ ಅಹಾ  ಅಹ ಅಹಾ!! ಹ ಹಾ ಹ ಹ ಹ!!

ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಜ್ಞನ ಪದಗಳ ಅಂದ
ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಜ್ಞನ ಪದಗಳ ಅಂದ
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರಮಧುರ್ಯವೋ  ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ  ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ
----------------------------------------------------------------------------------------------------------------------

ಚಲಿಸುವ ಮೋಡಗಳು (1982) - ಕಾಣದಂತೆ ಮಾಯವಾದನು
ಗಾಯನ: ಪುನೀತ್  / ಲೋಹಿತ ರಾಜ್‌ಕುಮಾರ್   ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ: ಚಿ||ಉದಯಶಂಕರ್

ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು
ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿಹೋದನೂ
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು

ಆಕಾಶ ಮೇಲೆ ಇಟ್ಟನೂ ನಮ್ಮ ಶಿವ ಪಾತಾಳ ಕೆಳೆಗೆ ಬಿಟ್ಟನು
ಆಕಾಶ ಮೇಲೆ ಇಟ್ಟನೂ ನಮ್ಮ ಶಿವ  ಪಾತಾಳ ಕೆಳೆಗೆ ಬಿಟ್ಟನು
ನಡುವೆ ಈ ಭೂಮಿಯನ್ನು ದೋಣಿ ಅಂತೆ ತೇಲಿಬಿಟ್ಟು
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು

ಹೆಣ್ಣಿಗೆಂದು ಅಂದ ಕೊಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನೊ
ಹೆಣ್ಣಿಗೆಂದು ಅಂದ ಕೊಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನೊ
ಹೆಣ್ಣು ಗಂಡು ಸೇರಿಕೊಂಡು ಯುದ್ಧವನ್ನು ಮಾಡುವಾಗ
ಕಾಣದಂತೆ ಶಿವ
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು

ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನು
ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನು
ಹೂವು ಹಣ್ಣು ಕಾಯಿ ಕೊಟ್ಟು ಜಗಳವಾಡೊ ಬುದ್ಧಿ ಕೊಟ್ಟು
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು

ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ ಕಣ್ಣುಗಳಾ ಕಟ್ಟಿಬಿಟ್ಟನೊ
ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ ಕಣ್ಣುಗಳಾ ಕಟ್ಟಿಬಿಟ್ಟನೊ
ನ್ಯಾಯನೀತಿಗಾಗಿ ತಲೆಯ ಚೆಚ್ಚಿಕೊಳ್ಳಿರೆಂದು ಹೇಳಿ
ಕಾಣದಂತೆ ಶಿವ
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು
ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿಹೋದನೂ
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು
ಹಾ ಲಾ ಲಾ ಲಾ ಲಲಲಾಲ.... ಲಾ ಲಾ ಲಾ ಲಲಲಾಲ....
----------------------------------------------------------------------------------------------------------------------

ಚಲಿಸುವ ಮೋಡಗಳು (1982) - ನೀನೆಲ್ಲೋ ನಾನಲ್ಲೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೆಂದ್ರ ಗಾಯನ: ಡಾ| ರಾಜ್‍ಕುಮಾರ್ ಮತ್ತು ಎಸ್. ಜಾನಕಿ


ಗಂಡು : ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ ||೨||
            ನಾನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
           ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ
ಹೆಣ್ಣು :  ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ
           ನಾನಿನ್ನ ಕಣ್ಣಾಗಿ, ನೀನಾಡೋ ನುಡಿಯಾಗಿ
           ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೇ
ಗಂಡು : ನೀನೆಲ್ಲೋ ನಾನಲ್ಲೇ, ಈ ಜೀವ ನಿನ್ನಲ್ಲೇ

ಗಂಡು : ಬಳಿಯಲೆ ಬಂಗಾರ ಇರುವಾಗಾ ಅದನೂ ನೋಡದೇ
           ಅಲೆಯುತಾ ದಿನ ಬಳಲಿದೆ  ಕಣ್ಣೀಗ ತೆರೆಯಿತೂ...
ಹೆಣ್ಣು: ಬಯಸಿದ ಸೌಭಾಗ್ಯ ಕೈಸೇರಿ ಹರುಷಾ ಮೂಡಿತೂ
         ಒಲವಿನಾ ಲತೆ ಚಿಗುರಿತು  ಕನಸಿನ್ನೂ ಮುಗಿಯಿತು
ಗಂಡು : ಇನ್ನೆಂದೂ ನಿನ್ನನ್ನೂ ಚೆಲುವೇ ಬಿಡಲಾರೆ ನಾ
           ಓ ಬಾಗಿಲಿಗೆ ಹೊಸಿಲಾಗಿ, ತೋರಣದ ಹಸಿರಾಗಿ
          ಪೂಜಿಸುವಾ ಹೂವಾಗಿ, ಇಂಪಾದ ಹಾಡಾಗಿ
          ಮನಸಾಗಿ ಕನಸಾಗಿ ಬಾಳೆಲ್ಲ ಹಾಯಾಗಿ ನಾ ಬರುವೆ
ಗಂಡು : ನೀನೆಲ್ಲೋ ನಾನಲ್ಲೇ  
ಹೆಣ್ಣು : ಈ ಜೀವ ನಿನ್ನಲ್ಲೇ

ಹೆಣ್ಣು: ಬದುಕಿನ ಹಾಡಲ್ಲಿ ಜೊತೆಯಾಗಿ ಶೃತಿಯಾ ಬೆರೆಸುವೆ
         ರಾಗದಿ ಹೊಸರಾಗದಿ ಇಂಪನ್ನೂ ತುಂಬುವೇ..
ಗಂಡು : ಹೃದಯದ ತುಡಿಯಲ್ಲಿ ಓ ನಲ್ಲೇ ನಿನ್ನಾ ಇರಿಸುವೆ
           ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ
ಹೆಣ್ಣು: ಆನಂದ ಹೆಚ್ಚಾಗಿ ಕಾಣ್ಣಾಲಿ ತುಂಬಿದೆ
ಗಂಡು: ಓ... ನಿನ್ನೊಡಲಾ ಉಸಿರಾಗಿ ನಿನ್ನಾಸೆ ಕಡಲಾಗಿ 
          ಚೆಂದುಟಿಯ ನಗೆಯಾಗಿ  ಒಲವೆಂಬ ಸಿರಿಯಾಗಿ
          ಜೇನಾಗಿ, ಸವಿಯಾಗಿ  ಸಂತೋಷ ನಿನಗಾಗಿ ನಾ ತರುವೇ
ಹೆಣ್ಣು: ನೀನೆಲ್ಲೋ ನಾನಲ್ಲೇ
ಗಂಡು: ಈ ಜೀವ ನಿನ್ನಲ್ಲೇ
ಇಬ್ಬರು :  ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

---------------------------------------------------------------------------------------------------------------------

ಚಲಿಸುವ ಮೋಡಗಳು (1982) - ನೀನೆಲ್ಲೋ ನಾನಲ್ಲೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೆಂದ್ರ ಗಾಯನ: ಡಾ| ರಾಜ್‍ಕುಮಾರ್ ಮತ್ತು ಎಸ್. ಜಾನಕಿ


ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ  ಕದ್ದಳು ತುಂಬುತಾ ಅನುರಾಗ
ಹೃದಯವ  ಕದ್ದಳು ತುಂಬುತಾ ಅನುರಾಗ
ವಿರಹ ಎದೆಗೆ ತಂದು ಕೊಂದಳು ಶಾಂತಿಯ....
ಮೈ ಲಾರ್ಡ್ ನನ್ನ ಮನವಿ ಕೇಳಿ ಕೇಳಿ ಕೇಳಿ
ಎದುರಲಿ ಬರುತಿರೆ ತುಟಿಗಳ ಅರಳಿಸಿ
ಹುಸಿನಗೆ ಚೆಲ್ಲುತ್ತಾ ಸೆಳೆದನು ಬಲೇ ಬಿಸಿ
ಹುಸಿನಗೆ ಚೆಲ್ಲುತ್ತಾ ಸೆಳೆದನು ಬಲೇ ಬಿಸಿ
ವಂಚಕನಿವನೇ ತಾನೇ ನ್ಯಾಯವ ಹೇಳಿರಿ....

ನೋಡಿದೆ ನೋಡಿದೆ ಮದುವೆಯ ಮನೆಯಲಿ
ಹಾಡಿದಳು ಪ್ರೇಮದ ಗೀತೆಯ ಮೌನದಲಿ
ಚಿಮ್ಮಿತ್ತು ಚಿಮ್ಮಿತು ಬಯಕೆಯ ಚಿಲುಮೆ
ಹೊಮ್ಮಿತು ಹೊಮ್ಮಿತು ಎದೆಯಲಿ ಒಲುಮೆ
ಪ್ರಣಯದ ಮತ್ತೇರಿ ನಾ ಕರಗಿ ಹೋಗಿ...  ಬಲೆಯ ಮೀನಾಗಿ...

ರಾತ್ರಿಯಲಿ ಮೈ ಬಿಸಿಯಾಗಿ ಏನೇನೋ ಚಿಂತೆ
ನೂರಾರು ಆಸೆ ಮೂಡಿ ಕನಸುಗಳು ಕಾಡಿತೇ...
ಈ ಹೆಣ್ಣಿನ ನೆನಪೇ ಎದೆಯಲ್ಲಿ ತುಂಬಿದೆ
ಆ ರಾತ್ರಿಯೇ ಹೃದಯ ಕಾಣಿಸದೆ ಹೋಯಿತೇ
ಚೆಲುವನ ನುಡಿ ಸುಳ್ಳಿನ ಕಿಡಿ ನನ್ನಾಣೆ ನಂಬಿರಿ
ಅರಿಯದ ಹೆಣ್ಣಿನ ಮನಸನು.. ಇವನೇ ಕದ್ದ.. ಓಡಿ ಹೋದ... ನೋಡಿ... ನೀವೇ.. ನೋಡಿ..
ಈಗಲೂ ನನ್ನ ಮನಸೂ ಇವನ ಹತ್ರಾನೇ   ಇದೆ..
ಆರ್ಡರ್... ಆರ್ಡರ್... ಆರ್ಡರ್..
ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ
ನಯನವ ಸೆಳೆದಳು ಮನವನು ಬೆರೆತಳು
ಹೃದಯವ  ಕದ್ದಳು ತುಂಬುತಾ ಅನುರಾಗ
ಹೃದಯವ  ಕದ್ದಳು ತುಂಬುತಾ ಅನುರಾಗ

ಎಂಥ ಸುಂದರ ನಯನ ಎಂಥ ಸುಂದರ ವದನ
ಹೆಣ್ಣ ಎದೆಗೆ ನೋಟ ನೂರು ಹೂಬನ
ಸವಿ ಮಾತನಾಡುತಾ ಸವಿಯಾಗಿ ಹಾಡುತಾ
ಬಳಿಗೆ ಬಂದನು ನನ್ನ ಬೇಟೆಯಾಡುತ್ತಾ
ನನ್ನವನ ನೋಡುತಿರೆ ಆವ ನನ್ನ ನೋಡುತಿರೆ
ಸೂಜಿಗಲ್ಲಿನ ಹಾಗೆ ಮನವ ಸೆಳೆಯುತಿರೆ
ಕಂಗಳಲ್ಲಿ ತುಂಬಿತು ಅಂದೇ ಈತನದೇ ಬಿಂಬ
ಈ ರೂಪ ತುಂಬಿ ಹೋಯ್ತು ನನ್ನ ಮನದ ತುಂಬಾ
ಹಸಿವು ಬಾಯಾರಿಕೆ ಇಲ್ಲ ಕಣ್ಣುಮುಚ್ಚಲಿಲ್ಲ
ನೆನಪಿಂದ ನೊಂದು ಬೆಂದು ಸುಖ ಶಾಂತಿ ಇಲ್ಲಾ..
ಮಾತಲಿ ಸಿಹಿ ಮನದಲಿ ಕಹಿ ನನ್ನಾಣೆ ನಂಬಿರಿ
ಆಸೆಯ ತೋರಿಸಿ ಮೋಹಿಸಿ ಇವಳೇ.. ಮೋಸ ಮಾಡಿದ್ದು... ಸುಮ್ನೇ ಬಿಡಬೇಡಿ..
ಈ ತಪ್ಪಿಗೆ ಸರಿಯಾಗಿ ಶಿಕ್ಷೆ ವಿಧಿಸಬೇಕು
ನನ್ನ ಹೃದಯ ನಂಗೆ ಕೊಡಿಸಬೇಕು  ಕೊಡಿಸಬೇಕು ಕೊಡಿಸಬೇಕು
ಆರ್ಡರ್ ಆರ್ಡರ್ ಆರ್ಡರ್
ಲಲಲಲಲಲ ಲಲಲಲಲಲಲಾ 

No comments:

Post a Comment