91. ಇಂತಿ ನಿನ್ನ ಪ್ರೀತಿಯ (2008)


ಇಂತಿ ನಿನ್ನ ಪ್ರೀತಿಯ ಚಲನಚಿತ್ರದ ಹಾಡುಗಳು 
  1. ಅರಿಯದಂತೆ ಕಳೆದು ಹೋದ
  2. ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ
  3. ಮಧುವನ ಕರೆದರೆ ತನು ಮನ ಸೆಳೆದರೆ 
  4. ಒ೦ದೊ೦ದೆ.. ಬಚ್ಚಿಟ್ಟ ಮಾತು
  5. ಯಾರೋ ಯಾರೋ ಒಲಿದೋರು ಯಾರೋ
  6. ಇಂತಿ ನಿನ್ನ ಪ್ರೀತಿಯ ನಾನ್ಯಾರು ?
ಇಂತಿ ನಿನ್ನ ಪ್ರೀತಿಯ (2008)  - ಅರಿಯದಂತೆ ಕಳೆದು ಹೋದ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ಸಾಧು ಕೋಕಿಲ ಹಾಡಿದವರು: ಹೇಮಂತ್ ಕುಮಾರ್

ಅರಿಯದಂತೆ ಕಳೆದು ಹೋದ ಆ ನಲುಮೆಯ ಕ್ಷಣಗಳ
ಮರಳಿ ಕೊಡುವೆಯ ಗೆಳತಿ ತಿರುಗಿ ಬರುವೆಯ
ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು

ಸ್ವಪ್ನದ ಸೆರೆಮನೆಗೆ ತೆರಳಿದೆ ಒಲವಿಂದು
ನಗುವ ಕಂಗಳಲಿ ಮಿಂಚಿದೆ ಹನಿಯೊಂದು
ಅರಿಯದಂತೆ ಕಳೆದು ಹೋದ ಆ ನಲುಮೆಯ ಕ್ಷಣಗಳ 
ಮರಳಿ ಕೊಡುವೆಯ ಗೆಳತಿತಿರುಗಿ ಬರುವೆಯ
ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು
ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು

ಪದಗಳ ಬರೆಯದೆಲೆ ಪತ್ರವು ಮುಗಿದಾಗ
ನೆನಪಿನ ಜಾತ್ರೆಯಲಿ ತಬ್ಬಲಿ ಅನುರಾಗ
ಎದೆಯ ಗೂಡಿನಲ್ಲಿ ಬೆಳಗುವ ಪ್ರೇಮದಾ ಹಣತೆಯ ಸುತ್ತ
ಕಪ್ಪು ಕವಿದಿದೆ, ಕುರುಡು ಕನಸು ಮಲಗಿದೆ
ಕಪ್ಪು ಕವಿದಿದೆ, ಕುರುಡು ಕನಸು ಮಲಗಿದೆ
--------------------------------------------------------------------------------------------------------------------------

ಇಂತಿ ನಿನ್ನ ಪ್ರೀತಿಯ - ಹೂ ಕನಸ ಜೋಕಾಲಿ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ಸಾಧು ಕೋಕಿಲ ಹಾಡಿದವರು: ಹೇಮಂತ್ ಕುಮಾರ್ ಮತ್ತು ನಂದಿತಾ

ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ ಹೂ ಕನಸ..

ಬಿಡದ ಕನಸು ಬಿಡದ ನೋವು ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ ತಂಪು ನೆನಪುಗಳೋ
ಪ್ರತಿಯೊಬ್ಬರಲೂ ಕಾಡುವಳು ಅವಳು
ಬೆಂಬಿಡದಂಥ ಆ ನಗುವಿನ ನೆರಳು
ನಗುತ ಕೊಲುವ ಒಲವೋ.. ಹೂ ಕನಸ..

ಮೊದಲ ನೋಟ, ಮೊದಲ ಮಾತು, ಮೊದಲ ಸ್ಪರ್ಶ, ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ
ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣಾ ಮನವಾ ತಿಳಿಯೋ..

ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ
ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಶವಕೆಲ್ಲಿ ಸಾವಿದೆಯೋ.. ಏಕಾಂಗಿ ಯಾನದಲಿ...
------------------------------------------------------------------------------------------------------------------------

ಇಂತಿ ನಿನ್ನ ಪ್ರೀತಿಯ (2008) - ಮಧುವನ ಕರೆದರೆ
ಸಾಹಿತ್ಯ: ಯೋಗರಾಜ್ ಭಟ್ ಸಂಗೀತ: ಸಾಧು ಕೋಕಿಲ ; ಗಾಯನ: ವಾಣಿ / ಚಿನ್ಮಯೀ

ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೇ ... 
ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೇ ... 
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು ಬಾ ಬಳಿಗೆ ಎಂದಿದೇ ಶರಣಾ..ಆಗು ಆದರೆ
ಸೆರೆ ಆಗು ಆದರೆ ಮಧುವನ ...

ಕಂಗಳಲಿ ಕನಸಿನ ಕುಲುಮೆ ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ..ಏ 
ಮೈಯೆಲ್ಲಾ ಚಂದ್ರನ ಗುರುತು ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ 
ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ ನೀನೆಳೆವಾ ರೇಖೆಗಳಲ್ಲಿ ನಾ ಮೂಡಬೇಕು ಆದರೇ..ಏ
ಎದುರಿದ್ದು ಕರೆಯುವೇ ಏಕೆ ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ
ಮಧುವನ ಕರೆದರೆ ತನು ಮನ ಸೆಳೆದರೆ ಶರಣಾಗು ನೀನು ಆದರೆ
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು ಬಾ ಬಳಿಗೆ ಎಂದಿದೇ
ಶರಣಾ..ಆಗು ಆದರೆ ಸೆರೆ ಆಗು ಆದರೆ
--------------------------------------------------------------------------------------------------------------------------

ಇ೦ತಿ ನಿನ್ನ ಪ್ರೀತಿಯ (2008) - ಒ೦ದೊ೦ದೆ.. ಬಚ್ಚಿಟ್ಟ ಮಾತು
ಸ೦ಗೀತ: ಸಾಧು ಕೋಕಿಲ ಗಾಯನ: ರಾಜೇಶ್ ಕೃಷ್ಣನ್,ರಕ್ಷಾ ಅರವಿ೦ದ್

ಒ೦ದೊ೦ದೆ.. ಬಚ್ಚಿಟ್ಟ ಮಾತು ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು ನಾ ಕ೦ಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ ಮಾತಾಡು ಹೇ ಹೇ ಹೆ ಹೇ
ಒ೦ದೊ೦ದೆ .. ಬಚ್ಚಿಟ್ಟ ಮಾತು ಒ೦ದೊ೦ದಾಗಿ ಕೂಡಿಟ್ಟ ಕವನ

ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸ೦ಜೆಯ ಮಬ್ಬಲ್ಲಿ ಮುತ್ತಿಟ್ಟೋರ್ಯಾರು
ಕೆನ್ನೆ ನಿ೦ದಾ, ಮುತ್ತು ನ೦ದಾ
ಬಗೆ ಹರಿಯದ ಒಗಟು ಇದೂ ಊ ಊ ...
ಮೊದಲು ಅಪ್ಪಿಕೊ೦ಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೊ
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯ.. ಆ ಆ
ಒ೦ದೊ೦ದೆ .. ಬಚ್ಚಿಟ್ಟ ಮಾತು ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು ನಾ ಕ೦ಡೆ ಮಾತಾಡೊ ಮೌನ

ಸಣ್ಣ ತಪ್ಪಿಗಾಗಿ ಮಾತು ಸತ್ತು ಹೋಗಿ
ಆ ಮ೦ಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು
ತಪ್ಪು ನಿ೦ದಾ ತಪ್ಪು ನ೦ದಾ
ಕೊನೆಗಾಣದ ಒಗಟು ಇದು
ಮು೦ಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ ಕನಸು
ಅದನ್ಯಾಕೆ ಬಯಸಿದೆ ಮನಸು ಹೇಳುವೆಯಾ ಆ ಆ
ಒ೦ದೊ೦ದೆ .. ಬಚ್ಚಿಟ್ಟ ಮಾತು ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು ನಾ ಕ೦ಡೆ ಮಾತಾಡೋ ಮೌನ
---------------------------------------------------------------------------------------------------------------------

ಇಂತಿ ನಿನ್ನ ಪ್ರೀತಿಯ (2008) - ಯಾರೋ ಯಾರೋ ಒಲಿದೋರು ಯಾರೋ
ಸಾಹಿತ್ಯ: ಯೋಗರಾಜ್ ಭಟ್, ರಂಗನಾಥ್ ಸಂಗೀತ: ಸಾಧು ಕೋಕಿಲ ಹಾಡಿದವರು: ಅಸ್ಲಂ

ಯಾರೋ ಯಾರೋ ಯಾರೋ ಒಲಿದೋರು ಯಾರೋ
ನಿನ್ನ ತೊರೆದೋರು ಯಾರೋ ಜೊತೆ ಉಳಿದೋರು ಯಾರೋ
ಕಡೆಗ್ ಉಳಿಯೋರು ಯಾರೋ ಯಾರೋ
ಪ್ರೀತಿಯ ಮಳೆಯಲ್ಲಿ ಬೆಂಕಿಯ ಕೊಡೆ ಕೊಟ್ಟು ನಿಲ್ಲಿಸಿದವರ್ಯಾರೋ
ಪ್ರೀತಿಯ ಹೊಳೆಯಲ್ಲಿ ಈಜಲು ಬರದವನ ಬೀಳಿಸಿದವರ್ಯಾರೋ
ಮುಳುಗಿಸಿದವರ್ಯಾರೋ

ನಗುವನು ತುಟಿಗಿಟ್ಟೋರು ಯಾರೋ ಅದರಲಿ ವಿಷವಿಟ್ಟೋರು ಯಾರೋ
ಕನಸುಗಳನು ಸುಟ್ಟೋರು ಯಾರೋ ಪ್ರೀತಿಯ ಬಲಿ ಕೊಟ್ಟೋರು ಯಾರೋ
ಉತ್ತರಿಸೋರ್ಯಾರೋ
ನನ್ನ ಅವಳ ಒಲವಿಗೆ ಕೊನೆಯೇ ಇರದ ಕಡಲಿಗೆ
ಸಾವೇ ಬರದ ನೆನಪಿಗೆ ಅಂತ್ಯವು ಎಲ್ಲಿದೆ
----------------------------------------------------------------------------------------------------------------------

ಇಂತಿ ನಿನ್ನ ಪ್ರೀತಿಯ (2008) - ಇಂತಿ ನಿನ್ನ ಪ್ರೀತಿಯ
ಸಂಗೀತ: ಸಾಧು ಕೋಕಿಲ ಗಾಯನ: ರಾಜೇಶ್

ಎಂದು ಎಂದು ಮುಗಿಯದ , ಯಾವ ಪದಕು ನಿಲುಕದ
ನಿನಗೆ ಬರೆದು ಕಳೆಸದ ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ ನಾನ್ಯಾರು ?

ನೆನಪು ತಿವಿದ ಗಾಯದ ಮಿಡಿತ ಮಡಿದ ಭಾವದ
ಕೈಯ ಮುಗಿವ ಮೌನದ ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ ನಾನ್ಯಾರು ?

ಎಂದೋ ಬಂದ ಮರಣದ ಬದುಕೇ ಇರುವ ಕರ್ಮದ
ಇದ್ದು ಇರದ ಜೀವದ ಖಾಲಿ ಖಾಲಿ ಕಾಗದ
ಇಂತಿ ನಿನ್ನ ಪ್ರೀತಿಯ ನಾನ್ಯಾರು ?

ತಾಯಿ ತೊರೆದ ಮಗುವಿನ ಅಳುವ ಮರೆಸೋ ನಗುವಿನ
ನಗುತ ಅಳುವ ಜೀವನ ಖಾಲಿ ಪುಟದ ಸ್ಪಂದನ
ಇಂತಿ ನಿನ್ನ ಪ್ರೀತಿಯ ನಾನ್ಯಾರು ? ನಾನ್ಯಾರು ? ನಾನ್ಯಾರು ?

ಈ ಸುಳ್ಳನ್ನು ಕಲಿಸುವುದೆ ಕನಸು ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ ಆ ಆ ಒ೦ದೊ೦ದೆ .. ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು ನಾ ಕ೦ಡೆ ಮಾತಾಡೋ ಮೌನ
--------------------------------------------------------------------------------------------------------------------

No comments:

Post a Comment