ಋಣ ಮುಕ್ತಳು ಚಿತ್ರದ ಹಾಡುಗಳು
- ದೇವರ ಒಲಿಸಲು ನುಡಿಯಲು ಬೇಕು
- ಆಕಾಶದುದ್ದಾದ ಮಾಮರವು ಚೆಂದ
- ಕಣ್ಣಾರೆ ಕಂಡೇ ನಾ
ಋಣ ಮುಕ್ತಳು (1984)
ತಾಯಿಯ ಮನವನು ಸಂತಸಪಡಿಸಲು ಒಂದೇ ಕರೆಯು ಸಾಕು
ದೇವರ ಒಲಿಸಲು ನುಡಿಯಲು ಬೇಕು ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ.. ಅಮ್ಮ.. ಅಮ್ಮ..
ನೋವನು ಹೊತ್ತು ನಗೆಯನು ಬಿತ್ತು ಜನುಮವ ಕೊಡುವಳು ತಾಯಿ
ನೋವನು ಹೊತ್ತು ನಗೆಯನು ಬಿತ್ತು ಜನುಮವ ಕೊಡುವಳು ತಾಯಿ
ಹಾಲನು ಇತ್ತು ಒಲವಿನ ಮುತ್ತಿನ ಮಳೆಯನು ಕರೆವಳು ತಾಯಿ, ತಾಯಿ
ಕರುಳಿನ ಕುಡಿಯ ಚಿಗುರನು ಕಂಡು ನಲಿಯುವ ಒಲವೆ ತಾಯಿ
ದೇವರ ಒಲಿಸಲು ನುಡಿಯಲು ಬೇಕು ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ.. ಅಮ್ಮ.. ಅಮ್ಮ..
ನೀಚನೆ ಇರಲಿ ಮಗನನು ಮನ್ನಿಸಿ ನಗುವ ದೇವಿ ತಾಯಿ
ನೀಚನೆ ಇರಲಿ ಮಗನನು ಮನ್ನಿಸಿ ನಗುವ ದೇವಿ ತಾಯಿ
ಕಂಬನಿಯಲ್ಲು ಕರುಣೆಯ ತೋರಿ ಕಾಯುವ ಕೈಯೆ ತಾಯಿ, ತಾಯಿ
ಬಾಳಿಗೆ ಬೆಳಕಿನ ಹಾದಿ ತೋರುವ ದಾರಿ ದೀಪವೆ ತಾಯಿ
ದೇವರ ಒಲಿಸಲು ನುಡಿಯಲು ಬೇಕು ಸಾವಿರ ಸಾವಿರ ನಾಮ
ತಾಯಿಯ ಮನವನು ಸಂತಸಪಡಿಸಲು ಒಂದೇ ಕರೆಯು ಸಾಕು
ಅದು ಅಮ್ಮ.. ಅಮ್ಮ.. ಅಮ್ಮ.. ಅಮ್ಮ..
------------------------------------------------------------------------------------------------------------------------
ಋಣ ಮುಕ್ತಳು (1984)
ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಜಾನಕೀ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಮಾಮರದ ಗಿಣಿರಾಮ ಹಾಡಿದನು ಏನಂತ
ಮಾಮರಕೆ ಮೂಡ್ಯಾವು ಎರಡು ಹಣ್ಣಂತ
ಜೋ.. ಜೋ ಜೋ.. ಜೋ
ಹಣ್ಣು ಎರಡಂದರೇ ಕಣ್ಣಿನ ಹಾಂಗೇ..
ಕಣ್ಣು ಎರಡಾದವೂ ನೋಟವು ಒಂದೇ
ಹಣ್ಣು ಎರಡಂದರೇ ಕಣ್ಣಿನ ಹಾಂಗೇ..
ಕಣ್ಣು ಎರಡಾದವೂ ನೋಟವು ಒಂದೇ
ಕಣ್ಣು ಎರಡಾದರೂ ದೃತಿ ಮಾತ್ರ ಒಂದೇ
ಬೇರು ಒಂದಾದರೂ ಕೊಂಬೆಯು ಬೇರೆ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಜೋ.. ಜೋ ಜೋ.. ಜೋ
ಚಿತ್ರ ಎರಡಾದರೂ ಬರೆದವ ಒಬ್ಬನೇ
ಮೂರ್ತಿ ಎರಡಾದರೂ ಕೆತ್ತಿದವ ಒಬ್ಬನೇ
ಚಿತ್ರ ಎರಡಾದರೂ ಬರೆದವ ಒಬ್ಬನೇ
ಮೂರ್ತಿ ಎರಡಾದರೂ ಕೆತ್ತಿದವ ಒಬ್ಬನೇ
ನಿಮ್ಮ ಜೋಡಿಯ ಕಂಡು ಬನದಾಗೆ ನವಿಲು
ಹರಸುತ ರೆಕ್ಕೆಯ ಬಿಚ್ಚಿ ಕುಣಿದಾವೂ
ಆಕಾಶದುದ್ದಾದ ಮಾಮರವು ಚೆಂದ
ಮಾಮರದ ಮ್ಯಾಗಿನ ಗಿಣಿರಾಮ ಚೆಂದ
ಜೋ.. ಜೋ ಜೋ.. ಜೋ
------------------------------------------------------------------------------------------------------------------------
ಋಣ ಮುಕ್ತಳು (1984)
ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಾಣಿಜಯರಾಮ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಾಣಿಜಯರಾಮ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೇ ಪದ್ಮಿನಿಯಾ... ಆಆಆ
ಪರಮ ಕಲ್ಯಾಣಿಯ ಪದ್ಮಲೋಚನೆಯ
ಪದ್ಮನಾಭಪ್ರಿಯೇ ಪದ್ಮಿನಿಯಾ...
ಪದ್ಮ ಮಂದಿರದ ಪದ್ಮ ಸುಂದರಿಯ
ಪದ್ಮ ಮಂದಿರದ ಪದ್ಮ ಸುಂದರಿಯ
ಪದ್ಮ ಗಂಭಿನಿಯ ಪಾದಾರವಿಂದವ
ಕಂಡೆ ನಾ... ಕಂಡೆ ನಾ ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಂಡೆ ನಾ... ಕಂಡೆ ನಾ ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಸಂಗೀತಲೋಲೆಯ ಸ್ವರದವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ...ಆಆಆ...
ಸಂಗೀತಲೋಲೆಯ ಸ್ವರದವಾಣಿಯ
ಸುರಲೋಕ ಸೌಭಾಗ್ಯ ಸಂಪನ್ನೆಯಾ
ಶ್ರೀಮಂತೇ ಧಿಮಂತೇ ಜಯಲಕ್ಷ್ಮಿಯ
ಶ್ರೀಮಂತೇ ಧಿಮಂತೇ ಜಯಲಕ್ಷ್ಮಿಯ
ಗಜಲಕ್ಷ್ಮೀ ಶ್ರೀ ಲಕ್ಷ್ಮಿ ಪಾದಾರವಿಂದವ
ಕಂಡೆ ನಾ... ಕಂಡೆ ನಾ ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಬೇಡಿದ ವರ ಕೊಡುವ ವರಲಕ್ಷ್ಮಿಯಾ
ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ
--------------------------------------------------------------------------------------------------------------------------
No comments:
Post a Comment