201 ಮಿಸ್. ಲೀಲಾವತಿ (1965)

ಮಿಸ್. ಲೀಲಾವತಿ ಚಲನಚಿತ್ರದ ಹಾಡುಗಳು 
  1. ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
  2. ನೋಡು ಬಾ ನೋಡು ಬಾ ನಮ್ಮೂರ
  3. ಹಿರಿಯ ನಾಗರ ನಂಜೂ .. ಮರಿಯ ನಾಗನ ಪಾಲು 
  4. ಬಯಕೆ ಬಳ್ಳಿ ಚಿಗುರಿ ನಗುತಿದೆ 
  5. ನೀರಿನಲ್ಲಿ ನೀನೂ ಮೀನೂ  
ಮಿಸ್. ಲೀಲಾವತಿ (1965) - ದೋಣಿ ಸಾಗಲಿ ಮುಂದೆ ಹೋಗಲಿ
ಸಾಹಿತ್ಯ: ಕುವೆಂಪು    ಸಂಗೀತ: ಆರ್. ಸುದರ್ಶನಂ   ಗಾಯನ: ಎಸ್. ಜಾನಕಿ, ರಾಮಚಂದ್ರರಾವ್

ಹೆಣ್ಣು : ಆಹಾಹಾ... ಆಹಾಹಾಹಾಹಾಹಾ ..ಹೂಂಹುಂಹುಂ.ಹುಂಹೂಂ
          ಹುಂಹೂಂ  ಆಹಾಹಾ ಹುಂಹೂಂಹುಂಹೂಂ
          ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
             ಬೀಸು ಗಾಳಿಗೆ ಬೀಳುತೇಲುವ ತೆರೆಯ ಮೇಗಡೆ ಹಾರಲಿ
ಇಬ್ಬರು : ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
             ಬೀಸು ಗಾಳಿಗೆ ಬೀಳುತೇಲುವ ತೆರೆಯ ಮೇಗಡೆ ಹಾರಲಿ
ಹೆಣ್ಣು : ಆಹಾಹಾ... ಆಹಾಹಾಹಾಹಾಹಾ ..   ಗಂಡು : ಹೂಂಹುಂಹುಂ.ಹುಂಹೂಂ

ಹೆಣ್ಣು : ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೀ
          ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ಗಂಡು : ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ಹೆಣ್ಣು : ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ
ಇಬ್ಬರು : ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
             ಬೀಸು ಗಾಳಿಗೆ ಬೀಳುತೇಲುವ ತೆರೆಯ ಮೇಗಡೆ ಹಾರಲಿ

ಹೆಣ್ಣು : ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಗಂಡು : ಆಆಆ.. ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
           ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹೆಣ್ಣು : ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ
          ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ
ಇಬ್ಬರು : ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
             ಬೀಸು ಗಾಳಿಗೆ ಬೀಳುತೇಲುವ ತೆರೆಯ ಮೇಗಡೆ ಹಾರಲಿ

ಗಂಡು : ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಹೆಣ್ಣು : ಆಆಆ.. ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
          ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ಇಬ್ಬರು : ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ಹೆಣ್ಣು : ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ
ಇಬ್ಬರು : ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
             ಬೀಸು ಗಾಳಿಗೆ ಬೀಳುತೇಲುವ ತೆರೆಯ ಮೇಗಡೆ ಹಾರಲಿ
ಹೆಣ್ಣು : ಆಹಾಹಾ... ಆಹಾಹಾಹಾಹಾಹಾ ..   ಗಂಡು : ಹೂಂಹುಂಹುಂ.ಹುಂಹೂಂ
ಹೆಣ್ಣು : ಆಹಾಹಾ... ಆಹಾಹಾಹಾಹಾಹಾ ..   ಗಂಡು : ಹೂಂಹುಂಹುಂ.ಹುಂಹೂಂ
-------------------------------------------------------------------------------------------------------------------------

ಮಿಸ್.ಲೀಲಾವತಿ (೧೯೬೫).....ನೋಡು ಬಾ ನೋಡು ಬಾ
ಸಾಹಿತ್ಯ : ವಿಜಯನಾರಸಿಂಹ  ಸಂಗೀತ : ಆರ್.ಸುದರ್ಶನಂ  ಗಾಯನ : ಎಸ್.ಜಾನಕಿ

ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ ನೋಡು ಬಾ ಕಣ್ಣಾರ ನೋಡು ಬಾ ನಮ್ಮೂರ

ಕಸ್ತೂರಿ ಕನ್ನಡದ ನಮ್ಮೂರು  ಕಲೆಗೆ ಕಣ್ಣಾದ ನಮ್ಮೂರು
ಕಸ್ತೂರಿ ಕನ್ನಡದ ನಮ್ಮೂರು  ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು  ರಸಜೀವಿ ನೀನಾಗೂ ಬಾ ಬಾ ಬಾ ಬಾ
ನೋಡು ಬಾ...  ನೋಡು ಬಾ ನೋಡು ಬಾ ನೋಡು ಬಾ ನಮ್ಮೂರ

ನಂದನವೇ ಭೂವಿಗಿಳಿದ ಬೃಂದಾವನ... ಇಲ್ಲಿಹುದು ನೂರಾರೂ ಪ್ರೇಮಯಣ
ನಂದನವೇ ಭೂವಿಗಿಳಿದ ಬೃಂದಾವನ... ಇಲ್ಲಿಹುದು ನೂರಾರೂ ಪ್ರೇಮಯಣ
ಕಾವೇರಿ ವಿಶ್ವಕವಿ ಕಾವ್ಯರಸಧಾರೇ ಆ ತಾಯೇ ಮೈಸೂರ ಜೀವನ ಧಾರೇ
ನೋಡು ಬಾ...  ನೋಡು ಬಾ ನೋಡು ಬಾ ನೋಡು ಬಾ ನಮ್ಮೂರ

ಕರ್ಣಾಟ ಸಂಗೀತ ಸಮ್ಮೋಹಿನಿ  ಆ...ಆ...ಆ.... ಆಆಆ... ಆಆಆ... ಆಆ ಆಆ ಆಆ..ಆಆಆ  ಆಆಆ..
ಕರ್ಣಾಟ ಸಂಗೀತ ಸಮ್ಮೋಹಿನಿ  ಕನ್ನಡದ ಸಾಹಿತ್ಯ ಸುಧೇವಾಹಿನಿ
ಕನ್ನಡದ ಕಣಕಣವು ಸಂಜೀವಿನಿ  ರಸಜೀವಿ ನೀನಾಗೂ ಬಾ ಬಾ ಬಾ ಬಾ
ನೋಡು ಬಾ  ನೋಡು ಬಾ ನೋಡು ಬಾ ನಮ್ಮೂರ ನೋಡು ಬಾ ನೋಡು ಬಾ ಕಣ್ಣಾರ ನೋಡು ಬಾ ನಮ್ಮೂರ
-------------------------------------------------------------------------------------------------------------------------

ಮಿಸ್. ಲೀಲಾವತಿ (1965) - ಹಿರಿಯ ನಾಗರ ನಂಜೂ .. ಮರಿಯ ನಾಗನ ಪಾಲು 
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ವಿಜಯನಾರಸಿಂಹ ಗಾಯನ: ಪಿ.ಜಯದೇವ

ಹಿರಿಯ ನಾಗರ ನಂಜೂ .. ಮರಿಯ ನಾಗನ ಪಾಲು
ತಂದೇ ಮಾಡಿದ ಪಾಪ ಕುಲದ ಪಾಲೂ... ಕುಲದ ಪಾಲು
ಹಿರಿಯ ನಾಗರ ನಂಜೂ .. ಮರಿಯ ನಾಗನ ಪಾಲು
ತಂದೇ ಮಾಡಿದ ಪಾಪ ಕುಲದ ಪಾಲೂ... ಕುಲದ ಪಾಲು

ಮನುಜ ಮಾಡಿದ ಪಾಪ  ಅವನಳಿದು ಹೋದರೂ ಕಾಣುವುದೂ ಇಳೆಯಲ್ಲಿ ವಿವಿಧ ರೂಪ
ಮನುಜ ಮಾಡಿದ ಪಾಪ  ಅವನಳಿದು ಹೋದರೂ ಕಾಣುವುದೂ ಇಳೆಯಲ್ಲಿ ವಿವಿಧ ರೂಪ
ಅವನ ಕುಲ ವಿಷದ ಫಲ ಹಂಚುತಿದೇ ತಲೆ ತಲೆಗೇ
ಅವನ ಕುಲ ವಿಷದ ಫಲ ಹಂಚುತಿದೇ ತಲೆ ತಲೆಗೇ
ಇದು ಮನುಜ ಕುಲಕಾವ ಘೋರ ಶಾಪ... ಘೋರ ಶಾಪ...

ನೀನೇ ನಾವಿಕ ನೀನೇ ನಾಯಕ ನಿನ್ನ ಜೀವನ ಯಾನಕೇ
ನೀನೇ ರಂಧ್ರವ ಕೊರೆದೆಯಾದರೇ ದಾರಿಯದೂ ಪಾತಾಳಕೇ
ನಿನ್ನ ವಂಶವೂ ನಡೆವ ಹಾದಿಗೇ ನೀನೇ ಆಗಿಹೇ ದೀವಿಗೇ
ನೀನೇ ಪಡೆದರೇ ಕತ್ತಲಾಸಾರೇ ಜನಕೂ ಕಾಣದೂ ಪೀಳಿಗೆ....
ಬೆಳಕೂ ಕಾಣದು ಪೀಳಿಗೆ...
ಹಿರಿಯ ನಾಗರ ನಂಜೂ .. ಮರಿಯ ನಾಗನ ಪಾಲು
ತಂದೇ ಮಾಡಿದ ಪಾಪ ಕುಲದ ಪಾಲೂ... ಕುಲದ ಪಾಲು
--------------------------------------------------------------------------------------------------------------------------

ಮಿಸ್. ಲೀಲಾವತಿ (1965) - ಬಯಕೆ ಬಳ್ಳಿ ಚಿಗುರೀ ನಗುತಿದೆ
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ವಿಜಯನಾರಸಿಂಹ ಗಾಯನ: ಪಿ.ಬಿ.ಎಸ್, ಎಸ್ ಜಾನಕೀ

ಗಂಡು :ಬಯಕೆ ಬಳ್ಳಿ ಚಿಗುರೀ ನಗುತಿದೆ...
           ಬಯಕೆ ಬಳ್ಳಿ ಚಿಗುರೀ ನಗುತಿದೆ ಬಾಳ ಮನೆಯ ಬೆಳಗುವಂಥ ಬೆಳಕು ಬರಲಿದೇ
           ಬಯಕೆ ಬಳ್ಳಿ ಚಿಗುರೀ ನಗುತಿದೆ...

ಹೆಣ್ಣು : ಮಂದಹಾಸ ಬೀರುತ ಮಧುಚಂದಿರ ಬಂದಾ... ಆಆಆ... ಆಆಆ...
          ಮಂದಹಾಸ ಬೀರುತ ಮಧುಚಂದಿರ ಬಂದಾ ಧರೆಗೇ ಜೇನ ಮಳೆಯ ನೇರೆದು ಸಂತಸವನು ತಂದಾ
          ಎಂಥ ಒಲವೂ ಎಂಥ ನಲಿವೂ ಈ ಅನುಬಂಧ..
          ಎಂಥ ಒಲವೂ ಎಂಥ ನಲಿವೂ ಈ ಅನುಬಂಧ ಎನೂ ಅಂದ ಎನಿತು ಚಂದ ಅನುರಾಗದ ಬಂಧ
          ಬಯಕೆ ಬಳ್ಳಿ ಚಿಗುರೀ ನಗುತಿದೆ ಬಾಳ ಮನೆಯ ಬೆಳಗುವಂಥ ಬೆಳಕು ಬರಲಿದೇ
          ಬಯಕೆ ಬಳ್ಳಿ ಚಿಗುರೀ ನಗುತಿದೆ...

ಗಂಡು : ಲತೆಯು ನಿನ್ನ ಮುಡಿಗೇ ತನ್ನ ಕೊಡುಗೆಯನ್ನೂ ನೀಡಿದೇ
            ಲತೆಯು ನಿನ್ನ ಮುಡಿಗೇ ತನ್ನ ಕೊಡುಗೆಯನ್ನೂ ನೀಡಿದೇ
            ರಸಿಕರೊಲುಮೆಗಿಂದ  ಜನುಮಾ ಸಫಲತೆಯನು ಹೊಂದಿದೆ
            ರಸಿಕರೊಲುಮೆಗಿಂದ  ಜನುಮಾ ಸಫಲತೆಯನು ಹೊಂದಿದೆ
ಹೆಣ್ಣು : ಅಯ್ಯೋ ಪಾಪ ನನ್ನ ಹಿತಕೆ ಹೂವಿನ ಬಲಿದಾನವೇ...           
          ಅಯ್ಯೋ ಪಾಪ ನನ್ನ ಹಿತಕೆ ಹೂವಿನ ಬಲಿದಾನವೇ...           
           ತಾಯಿ ಮಡಿಲನಿಂದ ಮಲರ ದೂರ ಆಗಿತೇ ನ್ಯಾಯವೇ ...
          ಬಯಕೆ ಬಳ್ಳಿ ಚಿಗುರೀ ನಗುತಿದೆ...

ಗಂಡು : ನಗೆಯೂ ನೋವು ಬೆಸುಗೆಯಿಂದ ಜೀವ ಧರ್ಮ ಉದಿಸಿದೆ.... ಆಆಆ... ಆಆಆ... ಆಆಆ...
            ನಗೆಯೂ ನೋವು ಬೆಸುಗೆಯಿಂದ ಜೀವ ಧರ್ಮ ಉದಿಸಿದೆ 
            ಇದುವೇ ಧರ್ಮ ಇದುವೇ ಮರ್ಮ ಎಂದು ಲತೆಯೂ ಹಾಡಿದೇ
ಇಬ್ಬರು : ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವೂ ಜೇನಾಗಿದೇ
             ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವೂ ಜೇನಾಗಿದೇ
             ನಮ್ಮ ಹೃದಯ ಗಾನದಲ್ಲಿ ದೇವರ ಧನಿ ಕೂಡಿದೆ..
             ಬಯಕೆ ಬಳ್ಳಿ ಚಿಗುರೀ ನಗುತಿದೆ ಬಾಳ ಮನೆಯ ಬೆಳಗುವಂಥ ಬೆಳಕು ಬರಲಿದೇ
            ಬಯಕೆ ಬಳ್ಳಿ ಚಿಗುರೀ ನಗುತಿದೆ...
--------------------------------------------------------------------------------------------------------------------------

ಮಿಸ್. ಲೀಲಾವತಿ (1965) - ನೀರಿನಲ್ಲಿ ನೀನೂ ಮೀನು
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ವಿಜಯನಾರಸಿಂಹ ಗಾಯನ: ಪಿ.ಬಿ.ಎಸ್, ಎಸ್ ಜಾನಕೀ

ಗಂಡು : ನೀರಿನಲ್ಲಿ ಮೀನು ನೀನೂ ನಿನ್ನ ಜಾಡು ಬಲ್ಲವ ನಾನೂ
            ನಿನ್ನಿಂದ ಅಗಲಿರೇ ನಾನು ನೀರಿನಿಂದ ತೆಗೆದ ಮೀನು
ಹೆಣ್ಣು : ಏನೂ ...           
ಗಂಡು : ನೀರಿನಲ್ಲಿ ಮೀನು ನೀನೂ ನಿನ್ನ ಜಾಡು ಬಲ್ಲವ ನಾನೂ
           ನಿನ್ನಿಂದ ಅಗಲಿರೇ ನಾನು ನೀರಿನಿಂದ ತೆಗೆದ ಮೀನು..
           ನೀರಿನಲ್ಲಿ ಮೀನು ನೀನೂ
ಹೆಣ್ಣು : ಒಹೋ

ಹೆಣ್ಣು : ದಕ್ಕದಂತ ಮೀನು ಸಿಕ್ಕೀತೆಂದೂ ನೀನೂ ಬೆಪ್ಪನಾದೇ ಏನೂ ಬೆಚ್ಚುಬಿದ್ದೇ ಇನ್ನೂ
          ದಕ್ಕದಂತ ಮೀನು ಸಿಕ್ಕೀತೆಂದೂ ನೀನೂ ಬೆಪ್ಪನಾದೇ ಏನೂ ಬೆಚ್ಚುಬಿದ್ದೇ ಇನ್ನೂ
ಗಂಡು : ನೀರಿನಲ್ಲಿ ತಂಪಿರುವಂತೇ .. ಮಿಂಚು ಕೂಡ ಅಡಗಿದೆಯಂತೇ
            ನಿನ್ನ ಮನವೂ ಮಲ್ಲಿಗೆಯಂತೇ... ಮಾತು ಮುಳ್ಳೂ ಬೇಲಿಯಂತೇ ... ( ಆಯ್ ಸೀ )
            ನೀರಿನಲ್ಲಿ ಮೀನು ನೀನೂ (ಆಹಾ )
--------------------------------------------------------------------------------------------------------------------------

No comments:

Post a Comment