- ಕಣ್ಣಿಗೆ ಚೆಂದ ಕಾಡಿಗೆ ಚೆಂದ
- ಸಂಜೆ ಕೆಂಪು ಮೂಡಿತು (ಎಸ್.ಪಿ.ಬಾಲು)
- ರಾಧಿಕೆ ಸರಸ ಇದೇನೇ
- ನಾ ಬಿರುಗಾಳಿಗೆ
- ಮುಗಿಲೆತ್ತ ಓಡುತಿದೆ
- ಸಂಜೆ ಕೆಂಪು ಮೂಡಿತು
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಾಲು
ಕಣ್ಣಿಗೆ ಚೆಂದ ಕಾಡಿಗೆ ಚೆಂದ, ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ, ನಿನ್ನಂದ ಚೆಂದ ಯಾವನು ತಂದ
ಅಹ್ಹಹ.. ಕಣ್ಣಿಗೆ ಚೆಂದ ಕಾಡಿಗೆ ಚೆಂದ, ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ, ನಿನ್ನಂದ ಚೆಂದ ಯಾವನು ತಂದ
ಕುಂಕುಮ ಚೆಂದ ಈ ಹೆಣೆಗೆ, ಸಿಂಧೂರ ಚಂದ ಬೈತೆಲೆಗೆ ....
ಕುಂಕುಮ ಚೆಂದ ಈ ಹೆಣೆಗೆ, ಸಿಂಧೂರ ಚಂದ ಬೈತೆಲೆಗೆ ....
ಕಂಕಣದಿಂದ ಕೈಗಳಿಗೆ ಅಂದ...
ಕಂಕಣದಿಂದ ಕೈಗಳಿಗೆ ಅಂದ ಕುಲವಧು ಗಂಧ ಸೆರಗಿಂದ..
ಓಹೋಹೋ . ಕಣ್ಣಿಗೆ ಚೆಂದ ಕಾಡಿಗೆ ಚೆಂದ, ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ, ನಿನ್ನಂದ ಚೆಂದ ಯಾವನು ತಂದ
ಆಆಆ.. ಗೋಪುರವಂದ ಗುಡಿಗಳಿಗೆ ನೂಪರವಂದ ಕಾಲ್ಗಳಿಗೇ
ಚಂದಿರನಿಂದ ಬಾನಿಗೆ ಅಂದ ಬಾಳಿಗೆ ಅಂದ ಹೆಣ್ಣಿಂದ
ಹೊಯ್ ಹೊಯ್.. ಕಣ್ಣಿಗೆ ಚೆಂದ ಕಾಡಿಗೆ ಚೆಂದ, ಹೆಣ್ಣಿಗೆ ಅಂದ ನಾಚಿಕೆ ಅಂದ
ನೀ ತೆರೆ ನಾಚಿಕೆಯ ತೆರೆ, ನಿನ್ನಂದ ಚೆಂದ ಯಾವನು ತಂದ
--------------------------------------------------------------------------------------------------------------------
ತಂದೆ ಮಕ್ಕಳು (೧೯೭೧) ಕಣ್ಣಿಗೆ ಚೆಂದ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ಎಸ್.ಪಿ.ಬಾಲು
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಹಕ್ಕಿ ಗೂಡು ಸೇರಿತು ಹೂವು ಮೊಗವ ಮುಚ್ಚಿತು
ದೂರ ತಾರೆ ಮಿನುಗಿತೂ ನಗರವೆಲ್ಲ ಮಲಗಿತು
ಒರೆಸು ಕಣ್ಣ ಕಂಬನಿ ಸುರಿಸು ನಿನ್ನ ನಗೆ ಹನಿ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಹೃದಯ ಭಾರವಾಗಿದೆ ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೇ ಜೀವವಿನ್ನೂ ಉಳಿದಿದೆ
ನಿದಿರೆ ತಾಯ ತೋಳಲಿ ನಿನಗೆ ಸುಖವು ಕಾಣಲಿ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಯಾರು ಇಲ್ಲಿ ಬರುವರೋ ಯಾರ ದಾರಿ ಕಾವುದೋ
ಪ್ರೀತಿಯಿಂದ ಕರೆಯುವಾ ಕೊರಳು ಇನ್ನೂ ಕೇಳದೋ
ಯಾರು ಇಲ್ಲ ಆಸರೆ ಕಾವ ನಮ್ಮ ದೇವರೇ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
-------------------------------------------------------------------------------------------------------------------------
ತಂದೆ ಮಕ್ಕಳು (೧೯೭೧) - ರಾಧಿಕೆ ನಿನ್ನ ಸರಸ ಇದೇನೇ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಾಲು
ಆ..ಆಆಆ...ಆ..ಆ..ಆಆಆ..
ರಾಧಿಕೆ ನಿನ್ನ ಸರಸ ಇದೇನೇ
ರಾಧಿಕೆ ನಿನ್ನ ಸರಸ ಇದೇನೇ
ಮುರಳಿಯ ಮರೆಸಿ, ನಗುತಿಹ ತರಸಿ
ಮುರಳಿಯ ಮರೆಸಿ, ನಗುತಿಹ ತರಸಿನಿನ್ನ ವಿನೋದವಿದೇ... ಹೇಳೇ ಇದೇನೇ ..
ರಾಧಿಕೆ ನಿನ್ನ ಸರಸ ಇದೇನೇ
ರಾಧಿಕೆ ನಿನ್ನ ಸರಸ ಇದೇನೇ
ಮುರಳಿಯ ಮರೆಸಿ, ನಗುತಿಹ ತರಸಿ
ಮುರಳಿಯ ಮರೆಸಿ, ನಗುತಿಹ ತರಸಿನಿನ್ನ ವಿನೋದವಿದೇ..ಹೇಳೇ ಇದೇನೇ ..
ರಾಧಿಕೆ ನಿನ್ನ ಸರಸ ಇದೇ... ನೇ
ರಾಧಿಕೆ ನಿನ್ನ ಸರಸ ಇದೇ... ನೇ
ಅರಿಯೆನು ಎಂದು ನಟಿಸುವ ಜಾಣೆ.. ಆಆಆ...
ಅರಿಯೆನು ಎಂದು ನಟಿಸುವ ಜಾಣೆ..
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಮೆರೆಸಿಹೆ ಎಲ್ಲೋ ಮುರಳಿಯ ಕಾಣೆ
ಕಾಡುವೆ ಸುಮನ್ನೇ ಏಕೆ ನನ್ನಾಣೆ ...
ರಾಧಿಕೆ ನಿನ್ನ ಸರಸ ಇದೇನೇ
ರಾಧಿಕೆ ನಿನ್ನ ಸರಸ ಇದೇನೇ
ಆಆಅ.. ವೈರಿಯೂ ಅಲ್ಲಾ
ಸವತಿಯು ಅಲ್ಲ... ವೈರಿಯೂ ಅಲ್ಲಾ.
ನನ್ನ ಮುರುಳಿಯ ಮೋಹಿಪರೆಲ್ಲಾ
ನನ್ನ ಮುರುಳಿಯ ಮೋಹಿಪರೆಲ್ಲಾ
ಆದರೊಡ ನೀ ಛಲವೇ ಏನೇ ಇಂದೇನೇ...
ರಾಧಿಕೆ ನಿನ್ನ ಸರಸ ರಾಧಿಕೆ ನಿನ್ನ ಸರಸ ಇದೇನೇ
ಪ್ರತಿದಿನ ನಿನ್ನಾ ಗೀತೆಯ ನುಡಿದು
ರಾಧಾ ರಾಧಾ ಎನ್ನುತ ಕರೆದು
ರಾಧಾ ರಾಧಾ ಎನ್ನುತ ಕರೆದು
ನಲಿಯುವ ವೇಣುವಿದೇ ಏಕೋ ಜಾಣೆ..
ರಾಧಿಕೆ ನಿನ್ನ ಸರಸ ಇದೇನೇ
ರಾಧಿಕೆ ನಿನ್ನ ಸರಸ ಇದೇನೇ
ನಿನ್ನ ವಿನೋದವಿದೇ..ಏನೇ ಇದೇನೇ ..
ರಾಧಿಕೆ ನಿನ್ನ ಸರಸ ಇದೇ... ನೇ
ರಾಧಿಕೆ ನಿನ್ನ ಸರಸ ಇದೇ... ನೇ
ಮುರಳಿಯ ಮರೆಸಿ, ನಗುತಿಹ ತರಸಿ
ಮುರಳಿಯ ಮರೆಸಿ, ನಗುತಿಹ ತರಸಿನಿನ್ನ ವಿನೋದವಿದೇ..ಏನೇ ಇದೇನೇ ..
ರಾಧಿಕೆ ನಿನ್ನ ಸರಸ ಇದೇ... ನೇ
ರಾಧಿಕೆ ನಿನ್ನ ಸರಸ ಇದೇ... ನೇ
-------------------------------------------------------------------------------------------------------------------------
ತಂದೆ ಮಕ್ಕಳು (೧೯೭೧)
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಾಲು
ನಾ ಬಿರುಗಾಳಿಗೇ ಆರದ ದೀಪ
ಎದೆ ಗುಂದದ ನಡೆಯುವ ಭೂಪ
ಸಾವಿರ ನೋವೇ ಬರಲೀ ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೇ ನಗುತಾ ಸಾಗುವೇ ಮುಂದೇ
ನಾ ಬಿರುಗಾಳಿಗೇ ಆರದ ದೀಪ
ಬಾಳಿಗೆ ಹೆದರಿ ಓಡುವೇ ಏಕೇ ಆಸೆಯ ನಿಗುವೇ ಏಕೇ
ಕತ್ತಲೇ ಹಿಂದೇ ಬರುವುದು ಬೆಳಕು ಭರವಸೆಯಿಂದ ಬದುಕು
ಸೇಡಿಗೆ ಸಾವಿರ ಸಾವೂ ದಿನ ನಿತ್ಯವೂ ತೀರದ ನೋವೂ
ಸೇಡಿಗೆ ಸಾವಿರ ಸಾವೂ ದಿನ ನಿತ್ಯವೂ ತೀರದ ನೋವೂ
ಎದುರಿಸಿ ನಿಲ್ಲಲ್ಲೂ ನಾವೂ ಜೀವನ ನಗುವ ಹೂವೂ
ನಾ ಬಿರುಗಾಳಿಗೇ ಆರದ ದೀಪಎದೆ ಗುಂದದ ನಡೆಯುವ ಭೂಪ
ಸಾವಿರ ನೋವೇ ಬರಲೀ ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೇ ನಗುತಾ ಸಾಗುವೇ ಮುಂದೇ
ನಾ ಬಿರುಗಾಳಿಗೇ ಆರದ ದೀಪ
ಏಟುಗಳೆನಿತೂ ಉಳಿಯಲಿ ತಿಂದೂ ಮೂರುತಿ ಆಯಿತು ಶಿಲೆಯೂ
ಸೋಲಿನ ಮೆಟ್ಟಲ ಮೇಗಡೆಯಲ್ಲಿ ನಿಂತಿದೆ ಗೆಲುವಿನ ಗುಡಿಯೂ
ಕವಲೊಡೆದಂತ ದಾರಿ ಎಲ್ಲಾದರೂ ಸೇರಲೇಬೇಕು
ಕವಲೊಡೆದಂತ ದಾರಿ ಎಲ್ಲಾದರೂ ಸೇರಲೇಬೇಕು
ನಾಳೆಯ ಬರೆಯುವ ಚರಿತೆ ನಮ್ಮದೇ ಆಗಿರಬೇಕೂ
ನಾ ಬಿರುಗಾಳಿಗೇ ಆರದ ದೀಪ
ಎದೆ ಗುಂದದ ನಡೆಯುವ ಭೂಪ
ಸಾವಿರ ನೋವೇ ಬರಲೀ ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೇ ನಗುತಾ ಸಾಗುವೇ ಮುಂದೇ
ಲಾ.. ಲಾ... ಲಾ.. ಲಾ... ಲಾ.. ಲಾ... ಲಾ.. ಲಾ...
ಎದೆ ಗುಂದದ ನಡೆಯುವ ಭೂಪ
ಸಾವಿರ ನೋವೇ ಬರಲೀ ಮುಳ್ಳಿನ ಹಾದಿಯೇ ಇರಲಿ
ನಂಬಿಕೆ ಎಂದಿಗೂ ಬಿಡದೇ ನಗುತಾ ಸಾಗುವೇ ಮುಂದೇ
ಲಾ.. ಲಾ... ಲಾ.. ಲಾ... ಲಾ.. ಲಾ... ಲಾ.. ಲಾ...
-------------------------------------------------------------------------------------------------------------------------
ತಂದೆ ಮಕ್ಕಳು (೧೯೭೧)
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಾಲು, ಎಸ್.ಜಾನಕೀ
ಗಂಡು : ಅಲೆಯೆತ್ತ ಸಾಗುತಿದೆ ಹೆಣ್ಣು : ತೀರದ ಕಡೆಗೇ
ಗಂಡು : ಬಾನೆತ್ತ ಬಾಗುತಿದೆ ಹೆಣ್ಣು : ಭೂಮಿಯ ಕಡೆಗೇ
ಗಂಡು : ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಗಂಡು : ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಗಂಡು : ಮುಗಿಲೆತ್ತ ಓಡುತಿದೆ ಹೆಣ್ಣು : ಗಿರಿಗಳ ಕಡೆಗೇ
ಹೆಣ್ಣು : ಹಗಲಲಿ ಮಿತ್ರ ಇರುಳಲಿ ಶತ್ರು ಏನದು ಹೇಳೂ
ಗಂಡು : ಸೂರ್ಯ (ಹಹ) ಚೋರ (ಹೂಂಹೂಂಹೂಂ )
ಹಗಲಲಿ ಮಿತ್ರ ಇರುಳಲಿ ಶತ್ರು ಏನದು ಹೇಳೂ
ಹೆಣ್ಣು : ಇನಿಯನ ಒಲವೂ ಹಗಲಲಿ ನಲಿವೂ ವಿರಹವೂ ಇರುಳಿನಲಿ
ನಿದಿರೆಯೂ ದೂರದಲಿ.. ನಿದಿರೆಯೂ ದೂರದಲಿ..
ಗಂಡು : ಆಆಆ...ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಹೆಣ್ಣು : ಮುಗಿಲೆತ್ತ ಓಡುತಿದೆ ಗಂಡು: ಗಿರಿಗಳ ಕಡೆಗೇಹೆಣ್ಣು : ಹೂವೂ (ಅಹಹಹಾ) ಬಳ್ಳಿ (ಹೂಂಹೂಂಹೂಂ )
ಹರಡಲು ಮೋಡ ಹೆಣೆಯಲು ಹಾವು ಏನದು ಹೇಳೂ
ಗಂಡು : ನಿನ್ನಯ ಜಡೆಯೇ ಹಾವಿನ ಹೆಡೆಯೂ ಮೋಡವೇ ಮುಂಗುರುಳೂ...
ನಿನ್ನ ಮೋಹಕ ಮುಂಗುರುಳೂ... ಮೋಹಕ ಮುಂಗುರುಳೂ
ಹೆಣ್ಣು : ಆಆಆ...ಕಣ್ಣೆತ್ತ ಸಾಗುತಿದೆ ಗಂಡು : ನಿನ್ನಯ ಕಡೆಗೇ
ಗಂಡು : ಮುಗಿಲೆತ್ತ ಓಡುತಿದೆ ಹೆಣ್ಣು : ಗಿರಿಗಳ ಕಡೆಗೇಹೆಣ್ಣು : ಕೊಟ್ಟರೇ ಒಮ್ಮೇ ಬಾರದು ಹಿಂದೇ ಏನದು ಹೇಳೂ
ಗಂಡು : ಸಾಲ (ಹ್ಹಾಂಹ್ಹಾ) ಹ್ಹಾಂ ..ಶೀಲಾ (ಹೂಂಹೂಂಹೂಂ )
ಗಂಡು : ಕೊಟ್ಟರೇ ಒಮ್ಮೇ ಬಾರದು ಹಿಂದೇ ಏನದು ಹೇಳೂ
ಹೆಣ್ಣು : ಹಹ್ಹಹ್ಹ ಮನಸನು ಕಳಿಸೇ ಇನಿಯನ ಬಳಿಗೆ ಉಳಿವುದು ತಾನೆಲ್ಲೇ
ಅದು ನಲ್ಲನ ಬಳ್ಳಿಯಲ್ಲೇ...ನಲ್ಲನ ಬಳ್ಳಿಯಲ್ಲೇ...
ಗಂಡು : ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಹೆಣ್ಣು : ಮುಗಿಲೆತ್ತ ಓಡುತಿದೆ ಗಂಡು : ಗಿರಿಗಳ ಕಡೆಗೇ
ಗಂಡು : ಅಲೆಯೆತ್ತ ಸಾಗುತಿದೆ ಹೆಣ್ಣು : ತೀರದ ಕಡೆಗೇ
ಹೆಣ್ಣು : ಬಾನೆತ್ತ ಬಾಗುತಿದೆ ಗಂಡು : ಭೂಮಿಯ ಕಡೆಗೇ
ಗಂಡು : ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಹೆಣ್ಣು : ಕಣ್ಣೆತ್ತ ಸಾಗುತಿದೆ ಗಂಡು : ನಿನ್ನಯ ಕಡೆಗೇ
ಇಬ್ಬರು : ಲಾಲಲ್ಲಲ್ಲಲ್ಲಲಾ ಲಾಲಲ್ಲಲ್ಲಲ್ಲಲಾ
-------------------------------------------------------------------------------------------------------------------------
ತಂದೆ ಮಕ್ಕಳು (೧೯೭೧)ಹೆಣ್ಣು : ಮುಗಿಲೆತ್ತ ಓಡುತಿದೆ ಗಂಡು : ಗಿರಿಗಳ ಕಡೆಗೇ
ಗಂಡು : ಅಲೆಯೆತ್ತ ಸಾಗುತಿದೆ ಹೆಣ್ಣು : ತೀರದ ಕಡೆಗೇ
ಹೆಣ್ಣು : ಬಾನೆತ್ತ ಬಾಗುತಿದೆ ಗಂಡು : ಭೂಮಿಯ ಕಡೆಗೇ
ಗಂಡು : ಕಣ್ಣೆತ್ತ ಸಾಗುತಿದೆ ಹೆಣ್ಣು : ನಿನ್ನಯ ಕಡೆಗೇ
ಹೆಣ್ಣು : ಕಣ್ಣೆತ್ತ ಸಾಗುತಿದೆ ಗಂಡು : ನಿನ್ನಯ ಕಡೆಗೇ
ಇಬ್ಬರು : ಲಾಲಲ್ಲಲ್ಲಲ್ಲಲಾ ಲಾಲಲ್ಲಲ್ಲಲ್ಲಲಾ
-------------------------------------------------------------------------------------------------------------------------
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ಪಿ.ಸುಶೀಲಾ
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಹಕ್ಕಿ ಗೂಡು ಸೇರಿತು ಹೂವು ಮೊಗವ ಮುಚ್ಚಿತು
ದೂರ ತಾರೆ ಮಿನುಗಿತೂ ನಗರವೆಲ್ಲ ಮಲಗಿತು
ಒರೆಸು ಕಣ್ಣ ಕಂಬನಿ ಸುರಿಸು ನಿನ್ನ ನಗೆ ಹನಿ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಹೃದಯ ಭಾರವಾಗಿದೆ ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೇ ಜೀವವಿನ್ನೂ ಉಳಿದಿದೆ
ಹೃದಯ ಭಾರವಾಗಿದೆ ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೇ ಜೀವವಿನ್ನೂ ಉಳಿದಿದೆ
ನಿದಿರೆ ತಾಯ ತೋಳಲಿ ನಿನಗೆ ಸುಖವು ಕಾಣಲಿ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು
ಯಾರು ಇಲ್ಲಿ ಬರುವರೋ ಯಾರ ದಾರಿ ಕಾವುದೋ
ಪ್ರೀತಿಯಿಂದ ಕರೆಯುವಾ ಕೊರಳು ಇನ್ನೂ ಕೇಳದೋ
ಯಾರು ಇಲ್ಲಿ ಬರುವರೋ ಯಾರ ದಾರಿ ಕಾವುದೋ
ಪ್ರೀತಿಯಿಂದ ಕರೆಯುವಾ ಕೊರಳು ಇನ್ನೂ ಕೇಳದೋ
ಯಾರು ಇಲ್ಲ ಆಸರೆ ಕಾವ ನಮ್ಮ ದೇವರೇ
ಇಂದು ನಾಳೆಯ ಸೇರಿತು ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು ಇರುಳು ಸೆರಗು ಹಾಸಿತು
ಹೂಂ ಹೂಂ ಹೂಂ ಹೂಂ ಹೂಂ ಹೂಂ
-------------------------------------------------------------------------------------------------------------------------
No comments:
Post a Comment