1095. ಮುತ್ತಣ್ಣ (೧೯೯೪)

ಮುತ್ತಣ್ಣ ಚಿತ್ರದ ಹಾಡುಗಳು
  1. ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ 
  2. ಮುಖ ನೋಡಿ ಮೊಳ ಹಾಕಬೇಡಾ ಗುಣ ನೋಡಿ ತಿಳಿಯಮ್ಮಾ 
  3. ಹೃದಯದಾ ಬಾಗಿಲಾ ಮರೆಯಲೀ ಲವ್ವಿದೇ 
  4. ನೂರು ನೂರು ಕೊಹಿನೂರು ಕೂಡಿ ಕೊಟ್ಟರು 
  5. ನಂಗೂ ಆಸೇ ನಿಂಗೂ ಆಸೇ ಮೊದಲಿನಿಂದಲೂ 
ಮುತ್ತಣ್ಣ (೧೯೯೪) - ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ
ಸಂಗೀತ, ಸಾಹಿತ್ಯ  : ಹಂಸಲೇಖ,  ಗಾಯನ : ಎಸ್.ಪಿ.ಬಿ., ಚಿತ್ರಾ

ಮುತ್ತಣ್ಣ ಪೀಪಿ ಉದುವಾ... ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಪೀಪಿ ಉದುವಾ  ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ ನನ್ನ ತಂಗಿಯ ಮದುವೇ ....
ನನ್ನ ತಂಗಿಯ ಮದುವೇ
ಜೋರು ಜೋರು ಜೋರು ಜೋರು ಜೋರು ಜೋರು ಭಲೇ ಜೋರು ಜೋರು ಜೋರು

ರೇಷಿಮೆಯ ಸೀರೆ ಉಟ್ಟ ಮಲ್ಲಿಗೇ ಮೂಗುತಿ ಓಲೆಯ ತೊಟ್ಟ ಸಂಪಿಗೇ
ಬರುತಾಳಮ್ಮಾ ಬರುತಾಳೆ ದಿಬ್ಬಣದಲ್ಲಿ ಬರುತಾಳೆ
ನಗುವ ಅಳುವ ಕುಣಿವ ಮುತ್ತಣ್ಣ... ಕಣ್ಣ ನೀರ ತೋರದೇ ಬೇರೆ ದಾರಿ ಕಾಣದೇ
ಕನ್ಯಾದಾನ ಮಾಡಿ ಕಳಿಸುವಾ ...
ಮುತ್ತಣ್ಣ ಪೀಪಿ ಉದುವಾ... ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ ನನ್ನ ತಂಗಿಯ ಮದುವೇ ....
ನನ್ನ ತಂಗಿಯ ಮದುವೇ
ಜೋರು ಜೋರು ಜೋರು ಜೋಡಿಗೊಂದು ಕಾರು ಆ ಕಾರೇ ಹೂವಿನ ತೇರು

ಚಂದಿರನಿಲ್ಲದ ಬೋಳು ಅಂಬರ ತಂಗಿಯು ಇಲ್ಲದ ಬಾಳ ಮಂದಿರ
ಬರುತಾಳಮ್ಮ ಬರುತಾಳೆ  ತಿಂಗಳ ತಂಗಿ ಬರುತಾಳೆ
ಚೊಚ್ಚಲ ಹೆರಿಗೆ ಅಣ್ಣನ ಮನೆಯಲ್ಲೇ ... ಹೇಯ್
ತಾಯಿ ತಂದೆ ಹೋಲುವಾ ಜೋಡಿ ಕೂಸ ನೀಡುವಾ ತಂಗಿಯನ್ನೇ ತಾಯಿ ಎನ್ನುವಾ..
ಮುತ್ತಣ್ಣ ಪೀಪಿ ಉದುವಾ... ಮುತ್ತಣ್ಣ ಡೋಲು ಬಡಿಯುವಾ...
ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ..
ಮುತೈದೆರೆಲ್ಲಾ ಹರಸುವಾ ನನ್ನ ತಂಗಿಯ ಬಾಳೂ ....
ನನ್ನ ತಂಗಿಯ ಬಾಳು ಜೋರು ಜೋರು ಜೋರು ಜೋರು ಜೋರು ಜೋರು
ಭಲೇ ಜೋರು ಜೋರು ಜೋರುಪಿಪಿ ಪಿಪಿ ಪಿಪಿ ಪಿಪ್ಪಿಪಿಪಿಪ್ಪಿ  ಪಿಪಿ ಪಿಪಿ ಪಿಪಿ ಪಿಪ್ಪಿಪಿಪಿಪ್ಪಿ
--------------------------------------------------------------------------------------------------------------------------

ಮುತ್ತಣ್ಣ (೧೯೯೪) - ಮುಖ ನೋಡಿ ಮೊಳ ಹಾಕಬೇಡಾ ಗುಣ ನೋಡಿ ತಿಳಿಯಮ್ಮಾ
ಸಂಗೀತ, ಸಾಹಿತ್ಯ  : ಹಂಸಲೇಖ,  ಗಾಯನ : ಎಸ್.ಪಿ.ಬಿ.,

ಮುಖ ನೋಡಿ ಮೊಳ ಹಾಕಬೇಡ ಹ್ಹಾಂ ...
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಬಟ್ಟೆ ನೋಡಿ ಬೆರಗಾಗಬೇಡ ಬುದ್ದಿ ನೋಡಿ ಕಲಿಯಮ್ಮಾ
ಮುಖ ಮುದುಡುವುದೂ ಬಟ್ಟೆ ಹರಿಯುವುದೂ ಸತ್ಯ ಉಳಿಯುವುದೂ ಕೊನೆಗೇ
ಹಣ ನೋಡಿ ಹಣ್ಣಾಗಬೇಡ ನಡೆ ನೋಡಿ ನಡೆಯಮ್ಮಾ...
ಬಣ್ಣ ನೋಡಿ ಬಲಿಯಾಗಬೇಡ ನಿಜ ಆಡಿ ನಲಿಯಮ್ಮಾ
ಹಣ ಹರಿಯುವುದೂ ಬಣ್ಣ ಕರಗುವುದೂ ನಿಜ ಜಯಸಿವುದೂ ಕೊನೆಗೇ
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...

ಗೋವು ಹಾಲಿಗೆ ಮಣ್ಣು ಪೈರಿಗೇ ಮರವು ಹಣ್ಣಿಗೆ ತಾಯಿ ನರನು ಎಲ್ಲದಕು ಬರಿ ಬಾಯಿ
ತಾನೂ ತಿನ್ನನ್ನೂ ತಿನ್ನಲೂ ನೀಡನು ಕದ್ದು ಕೊಡಿಸುವ ಎಲ್ಲಾ ನರನು  ಸ್ವಾರ್ಥಿಗಳ ದೊರೆ ತಾಯಿ
ಒಳಗೆ ಕತ್ತಿ ಮಸೆದು ನಗುವಾ ಹಲ್ಲು ಕಿರಿದೂ ಬೆನ್ನಿನಾ ಹಿಂದೆ ಹಿರಿದು ಅಳುವಾ ನೀರು ಸುರಿದೂ 
ಆನಂದಕೆ ಪ್ರೀತಿಯೇ ಸಾಕು ಆಡಂಬರ ಯಾತಕೇ ಬೇಕೂ 
ಉಸಿರಾಟಕೆ ಗಾಳಿಯೇ ಸಾಕೂ ಒಣ ಜಂಭವೂ ಯಾತಕೆ ಬೇಕೂ 
ಜಂಭ ಜರಿಯುವುದೂ ಅಹಂ ಅಳಿಯುವುದೂ ಪ್ರೀತಿ ಉಳಿಯುವುದೂ ಕೊನೆಗೇ
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಬಟ್ಟೆ ನೋಡಿ ಬೆರಗಾಗಬೇಡ ಬುದ್ದಿ ನೋಡಿ ಕಲಿಯಮ್ಮಾ

ಮನಸು ಮಲ್ಲಿಗೆ ನಗಲಿ ಮೆಲ್ಲಗೆ ಮೇಲೂ ಕೀಳೂ ನಡುವಲ್ಲಿ ಪ್ರೀತಿ ಗಂಧವನ್ನು ಹೊರಚೆಲ್ಲೀ
ಹೃದಯ ಕೋಗಿಲೇ ಹೊರಗೆ ಬಾರಲೇ ನಿನಗೆ ಯಾವ ತಡೆ ಇಲ್ಲಿ ಹಾಡು ಜಾನಪದ ಬದುಕಲ್ಲಿ 
ಕಬ್ಬಿನ  ಜಲ್ಲೆ ಡೊಂಕಿದೇ ಸಿಹಿಗೆ ಯಾವ ಡೊಂಕಿದೆ ಬಿದಿಗೆ ಚಂದ್ರ ಕೊಂಕಿದೆ ತಂಪಿಗೆ ಯಾವ ಕೊಂಕಿದೇ 
ಈ ಮುಖದಲಿ ಏನಿದೆ ಮಣ್ಣು ಶಿವ ಮುನಿದರೇ ಸಾವಿರ ಹುಣ್ಣು 
ನೀ ತೆರೆದರೇ ಹೃದಯದ ಕಣ್ಣೂ ಇದೆ ಸತ್ಯದ ಸುಂದರ ಹಣ್ಣೂ 
ಕೋಟಿ ಕೊಳೆಯುವುದೂ ಮನೆ ಒಡೆಯುವುದೂ ಹಾಡು ಉಳಿಯುವುದೂ ಕೊನೆಗೇ 
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಬಟ್ಟೆ ನೋಡಿ ಬೆರಗಾಗಬೇಡ ಬುದ್ದಿ ನೋಡಿ ಕಲಿಯಮ್ಮಾ
ಮುಖ ಮುದುಡುವುದೂ ಬಟ್ಟೆ ಹರಿಯುವುದೂ ಸತ್ಯ ಉಳಿಯುವುದೂ ಕೊನೆಗೇ
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಬಟ್ಟೆ ನೋಡಿ ಬೆರಗಾಗಬೇಡ ಬುದ್ದಿ ನೋಡಿ ಕಲಿಯಮ್ಮಾ
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳಿಯಮ್ಮಾ...
ಬಟ್ಟೆ ನೋಡಿ ಬೆರಗಾಗಬೇಡ ಬುದ್ದಿ ನೋಡಿ ಕಲಿಯಮ್ಮಾ
--------------------------------------------------------------------------------------------------------------------------

ಮುತ್ತಣ್ಣ (೧೯೯೪) - ಹೃದಯದಾ ಬಾಗಿಲಾ ಮರೆಯಲೀ ಲವ್ವಿದೇ
ಸಂಗೀತ, ಸಾಹಿತ್ಯ  : ಹಂಸಲೇಖ,  ಗಾಯನ : ಎಸ್.ಪಿ.ಬಿ., ಚಿತ್ರಾ

ಗಂಡು : ರಿಪ್ಪಾ ರಿಬರಿಬರಿಬ ರಿಪ್ಪಾ  ರಿಪ್ಪಾ ರಿಬರಿಬರಿಬ ರಿಪ್ಪಾ
ಹೆಣ್ಣು : ರಿಪ್ಪಾ ರಿಬರಿಬರಿಬ ರಿಪ್ಪಾ  ರಿಪ್ಪಾ ರಿಬರಿಬರಿಬ ರಿಪ್ಪಾ
ಗಂಡು : ಹೃದಯದಾ ಬಾಗಿಲಾ ಮರೆಯಲಿ ಲವ್ವಿದೇ  ಢವ ಢವ ಎನ್ನುತಾ ಬಲೆಯಾ ಬೀಸುತಿದೆ
            ಒಮ್ಮೆ ಜೈ ಜೈ ಹಾಕುತಪ್ಪ ಲವ್ ಲವ್ ಲವ್ ಒಮ್ಮೆ ಥೈ ಥೈ ಕುಣಿಸುತಪ್ಪ ಲವ್ ಲವ್
            ಒಮ್ಮೆ ಹಾಯ್ ಹಾಯ್ ಅನಿಸುತಪ್ಪ  ಲವ್ ಲವ್ ಲವ್ ಒಮ್ಮೆ ಬಾಯ್ ಬಾಯ್ ಬಿಡಿಸುತಪ್ಪ ಲವ್ ಲವ್ ಲವ್
ಹೆಣ್ಣು : ಹೃದಯದಾ ಬಾಗಿಲಾ ಮರೆಯಲಿ ಲವ್ವಿದೇ ಢವ ಢವ ಎನ್ನುತಾ ಬಲೆಯ ಬೀಸುತಿದೆ
          ಒಮ್ಮೆ ಝಂ ಝಂ ಅನಿಸುತಪ್ಪ ಲವ್ ಲವ್ ಲವ್ ಒಮ್ಮೆ ಧೀಮ್ ಧೀಮ್ ನುಡಿಸುತಪ್ಪ ಲವ್ ಲವ್ ಲವ್

          ಒಮ್ಮೆ ಬಾ ಬಾ ಅನ್ನುತಪ್ಪ ಲವ್ ಲವ್ ಲವ್ ಒಮ್ಮೆ ಬಾಯ್ ಬಾಯ್ ಅನ್ನುತಪ್ಪ ಲವ್ ಲವ್ ಲೆವ್ 

ಗಂಡು : ಬೆಳ್ಳಗೆ ಇರಲಿ ತೆಳ್ಳಗೆ ಇರಲಿ ಕುಳ್ಳು ಕುಳ್ಳಾಗಿ ಇರಲಿ
           ಲವ್ ಲವ್ ಈ ಲವ್ ಲವ್ ಕುಚುಗುಳಿ ಇಡೋ ಕಳ್ಳ ಲವ್ ಇದು
ಹೆಣ್ಣು : ಕುರುಡಿರಲಿ ಕಿವುಡಿರಲಿ ಮಲಗಲು ಬಿಡದಿದು ..  ಹೇಹೇಹೇಹೇ
ಗಂಡು : ಸರಿ ಇರಲಿ ಬೆಸೆ ಇರಲಿ ಹೆದರಲೂ ಬಿಡದಿದು.. ಹೇಹೇಹೇಹೇಹೇ
ಇಬ್ಬರು : ಕೊಡುವಾಗ ಪಡೆವಾಗ ಬೇಡವೇ ಅನ್ನಲೇ ಬೇಡ
ಗಂಡು : ಹೃದಯದಾ ಬಾಗಿಲಾ ಮರೆಯಲಿ ಲವ್ವಿದೇ
ಹೆಣ್ಣು :    ಢವ ಢವ ಎನ್ನುತಾ ಬಲೆಯ ಬೀಸುತಿದೆ
ಗಂಡು : ಒಮ್ಮೆ ಜೈ ಜೈ ಹಾಕುತಪ್ಪ ಲವ್ ಲವ್ ಲವ್ ಒಮ್ಮೆ ಥೈ ಥೈ ಕುಣಿಸುತಪ್ಪ ಲವ್ ಲವ್ 
ಹೆಣ್ಣು :  ಒಮ್ಮೆ ಬಾ ಬಾ ಅನ್ನುತಪ್ಪ ಲವ್ ಲವ್ ಲವ್ ಒಮ್ಮೆ ಬಾಯ್ ಬಾಯ್ ಅನ್ನುತಪ್ಪ ಲವ್ ಲವ್ ಲವ್ 

ಕೋರಸ್ : ಪಪ್ಪಾ ಬಪ್ಪ  ಬಪ್ಪಪ್ಪಾ ಪಪ್ಪಾ ಬಪ್ಪ  ಬಪ್ಪಪ್ಪಾ ಪಪ್ಪಾ ಬಪ್ಪ  ಬಪ್ಪಪ್ಪಾ
ಹೆಣ್ಣು : ರಿಪ್ಪಾ ರಿಬರಿಬರಿಬ ರಿಪ್ಪಾ  ರಿಪ್ಪಾ ರಿಬರಿಬರಿಬ ರಿಪ್ಪಾ
ಗಂಡು : ರಿಪ್ಪಾ ರಿಬರಿಬರಿಬ ರಿಪ್ಪಾ  ರಿಪ್ಪಾ ರಿಬರಿಬರಿಬ ರಿಪ್ಪಾ
ಹೆಣ್ಣು : ಅರ್ಜುನ ಸೋತ ಕೃಷ್ಣನು ಸೋತ ಶಂಭು ಶಂಕರನು ಸೋತ
          ಲವ್ ಲವ್ ಈ ಲವ್ ಲವ್ ಲವಲವಿಕೆಯಾ ಯುವ ಲವ್ವಿಗೇ
ಗಂಡು : ಕಾಡಿರಲೀ ಕಡಲಿರಲಿ ಕಾಡದೆ ಬಿಡದಿದು... ಹೇಹೇಹೇಹೇ
ಹೆಣ್ಣು : ಕಾಸ್ ಇರಲೀ ಲಾಸ್ ಇರಲೀ ಕೂಡದೇ ಬಿಡದಿದೂ . ಹೇಹೇಹೇಹೇ
ಇಬ್ಬರು : ಕೊಡುವಾಗ ಪಡೆವಾಗ ಬೇಡವೇ ಅನ್ನಲೂಬೇಡಾ ..
ಹೆಣ್ಣು : ಹೃದಯದಾ ಬಾಗಿಲಾ ಮರೆಯಲಿ ಲವ್ವಿದೇ
ಗಂಡು :  ಢವ ಢವ ಎನ್ನುತಾ ಬಲೆಯಾ ಬೀಸುತಿದೆ
ಹೆಣ್ಣು : ಒಮ್ಮೆ ಝಂ ಝಂ ಅನಿಸುತಪ್ಪ ಲವ್ ಲವ್ ಲವ್ ಒಮ್ಮೆ ಧೀಮ್ ಧೀಮ್ ನುಡಿಸುತಪ್ಪ ಲವ್ ಲವ್ ಲವ್
ಗಂಡು :ಒಮ್ಮೆ ಹಾಯ್ ಹಾಯ್ ಅನಿಸುತಪ್ಪ  ಲವ್ ಲವ್ ಲವ್ ಒಮ್ಮೆ ಬಾಯ್ ಬಾಯ್ ಬಿಡಿಸುತಪ್ಪ ಲವ್ ಲವ್ ಲವ್
--------------------------------------------------------------------------------------------------------------------------

ಮುತ್ತಣ್ಣ (೧೯೯೪) - ನೂರು ನೂರು ಕೊಹಿನೂರು ಕೂಡಿ ಕೊಟ್ಟರೂ
ಸಂಗೀತ, ಸಾಹಿತ್ಯ  : ಹಂಸಲೇಖ,  ಗಾಯನ : ಎಸ್.ಪಿ.ಬಿ., ಚಿತ್ರಾ

ಗಂಡು : ನೂರು ನೂರು ಕೊಹಿನೂರು ಕೂಗಿ ಕೊಟ್ಟರು
            ಬೇಡ ಅಂಬುತೀನಿ ಚೆಲುವೇ ...  ಬೇಡ ಅಂಬುತೀನಿ ಚೆಲುವೇ
            ಸೇಬುಗಲ್ಲದಾ ಬಾಯಿ ಚೆಲ್ಲಿದಾ ರಾಶಿ ರಾಶಿ ಮುತ್ತು ಸಾಲದೇ....  ಚೆಲುವೇ
ಹೆಣ್ಣು : ನೂರು ನೂರು ಕೊಹಿನೂರು ಕೂಗಿ ಕೊಟ್ಟರು
           ಬೇಡ ಅಂಬುತೀನಿ ಚೆಲುವಾ ಹೊಯ್.. ಬೇಡ ಅಂಬುತೀನಿ ಚೆಲುವಾ
          ನಾನು ಮೆಚ್ಚಿದ ಜೇನು ಹಚ್ಚಿದ ರಾಶಿ ರಾಶಿ ಮುತ್ತು ಸಾಲದೇ..  ಚೆಲುವಾ..

ಗಂಡು : ಹೊನ್ನಿಗಿಂತಲೂ ನಿನ್ನ ನಂಬುತೀನಿ ಚಿನ್ನಾ ನಿನ್ನ ಬಣ್ಣ
           ಮಾತನಾಡೋ ನವಿಲೇ ಬಿಡಬೇಡ ಬೊಗಸೆಗಣ್ಣಾ
ಹೆಣ್ಣು : ವಿರಹದಿಂದಲೇ ನಾನು ಅಂಜುತೀನಿ ನಿನ್ನಾ ಲತೆ ನಾನು
          ತೋಳು ಸಾವಿರವಿಲ್ಲ ಇದರಲ್ಲಿ ಬಂಧಿ ನೀನು
ಗಂಡು : ಕೋಟಿ ಕೋಟಿ ಹೂಗಳಲ್ಲಿ ನೀನು ಇದ್ದೆ ಮಲ್ಲಿಗೆಯಲ್ಲೇ
            ತೋರಿ ಕೊಟ್ಟ ಕಣ್ಣಿಗೆ ಈಗ ವಂದಿಸಮ್ಮ ಮುತ್ತುಗಳಲ್ಲಿ
ಹೆಣ್ಣು : ನೂರು ನೂರು ಕೊಹಿನೂರು ಕೂಗಿ ಕೊಟ್ಟರು
           ಬೇಡ ಅಂಬುತೀನಿ ಚೆಲುವಾ ಹೊಯ್.. ಬೇಡ ಅಂಬುತೀನಿ ಚೆಲುವಾ
          ನಾನು ಮೆಚ್ಚಿದ ಜೇನು ಹಚ್ಚಿದ ರಾಶಿ ರಾಶಿ ಮುತ್ತು ಸಾಲದೇ..  ಚೆಲುವಾ..

ಹೆಣ್ಣು : ರಾಜ್ಯ ಕೊಟ್ಟರೂ ಬೇಡ ಅಂಬುತೀನಿ ನೀನೇ ಮುತ್ತುರಾಜ
          ಪ್ರೇಮ ಚಾಮರ ಬೀಸೋ ನನ್ನದೆಯೇ ನಿನ್ನ ಲೋಕ
ಗಂಡು : ಸೋಲಿಗಿಂತಲೂ ಸಾವು ನಂಬುತೀನಿ ನನ್ನ ಜಯ ನೀನು
            ಬಾಳ ನೋವುಗಳಲ್ಲಿ ನೀ ಹಿಂದೆ ನಾನೇ ಮುಂದೆ
ಹೆಣ್ಣು: ಕೋಟಿ ಕೋಟಿ ನಾಯಕರಲ್ಲಿ ನೀನು ಇದ್ದೆ ಗಂಡೆದೆಯಲ್ಲಿ
         ತೋರಿ ಕೊಟ್ಟ ಗುಂಡಿಗೆ ಗಂಡು ಹಾರ ಹಾಕು ತೋಳುಗಳಲ್ಲಿ
ಗಂಡು : ನೂರು ನೂರು ಕೊಹಿನೂರು ಕೂಗಿ ಕೊಟ್ಟರು
            ಬೇಡ ಅಂಬುತೀನಿ ಚೆಲುವೇ ...  ಬೇಡ ಅಂಬುತೀನಿ ಚೆಲುವೇ
            ಸೇಬುಗಲ್ಲದಾ ಬಾಯಿ ಚೆಲ್ಲಿದಾ ರಾಶಿ ರಾಶಿ ಮುತ್ತು ಸಾಲದೇ....  ಚೆಲುವೇ
ಹೆಣ್ಣು : ನೂರು ನೂರು ಕೊಹಿನೂರು ಕೂಗಿ ಕೊಟ್ಟರು
           ಬೇಡ ಅಂಬುತೀನಿ ಚೆಲುವಾ ಹೊಯ್.. ಬೇಡ ಅಂಬುತೀನಿ ಚೆಲುವಾ
          ನಾನು ಮೆಚ್ಚಿದ ಜೇನು ಹಚ್ಚಿದ ರಾಶಿ ರಾಶಿ ಮುತ್ತು ಸಾಲದೇ..  ಚೆಲುವಾ..
--------------------------------------------------------------------------------------------------------------------------

ಮುತ್ತಣ್ಣ (೧೯೯೪) - ನಂಗೂ ಆಸೇ ನಿಂಗೂ ಆಸೇ ಮೊದಲಿನಿಂದಲೂ
ಸಂಗೀತ, ಸಾಹಿತ್ಯ  : ಹಂಸಲೇಖ,  ಗಾಯನ : ಎಸ್.ಪಿ.ಬಿ., ಚಿತ್ರಾ

ಗಂಡು : ಹೇ... ಹೇ..  ಹೆಹೆ ಆಹಾ ಓಹೋ ಆಹಾ
           ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ಹೆಣ್ಣು : ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ
ಗಂಡು : ಹೊರಗಡೆ ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ
ಹೆಣ್ಣು : ಮನಸನು ತಡೆವುದು ಸಾಕಾಗಿದೆ ಈಗೇನೂ ಬೇಕಾಗಿದೆ
ಇಬ್ಬರು : ಏರಿದೆ ಪ್ರಾಯದಾ ಗುಂಗೂ ಏರಿದೇ
ಗಂಡು: ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ
ಹೆಣ್ಣು : ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ 

ಗಂಡು : ಈ...  ಹೆಣ್ಣಲ್ಲಿ ಗುಟ್ಟು ನಿಲ್ಲದೂ ಕಣ್ಣಲ್ಲಿ ಸುಳ್ಳುಗಲ್ಲದು 
            ಕೆಳಗಿಳಿಯೋ ಮಿಂಚಿಗೆ ಕರಿಮೋಡ ಅಡ್ಡವಾಗದು 
ಹೆಣ್ಣು : ಈ...  ಗಂಡಲ್ಲಿ ಆಸೆ ನಿಲ್ಲದೂ ಕಣ್ಣಲ್ಲಿ ಕೊಲ್ಲಬಲ್ಲದು 
          ಎದೆಗಿಳಿಯೋ ಬಾಣವಾ ಹುಸಿವೇಷ ಕಾಯಲಾರದು 
ಗಂಡು : ಅನುಮತಿ ಕೇಳಲು ಒದ್ದಾಡಿದೆ ಈಗ್ಯಾಕೊ ಮುದ್ದಾಡಿದೆ 
ಹೆಣ್ಣು : ವಿರಹವ ತಡೆವುದು ಸಾಕಾಗಿದೆ ಈಗೇನೂ ಬೇಕಾಗಿದೆ 
ಇಬ್ಬರು : ಕಾದಿದೆ ಆಸೆಯ ಬೆಂಚು ಕಾದಿದೆ 
ಗಂಡು : ನಂಗು ಆಸೆ ನಿಂಗು ಆಸೆ ಮೊದಲಿನಿಂದಲೂ (ಹೂಂಹೂಂಹೂಂ)
ಹೆಣ್ಣು : ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ (ಹೂಂಹೂಂಹೂಂ)

ಕೋರಸ್ : ಆಆಆಆ  ಆಆಆಆ  ಆಆಆಆ ಹೂಂಹೂಂಹೂಂ
ಹೆಣ್ಣು : ಓ... ನಾನೊಂದು ಪ್ರೇಮ ಪುಸ್ತಕ ನೀನಿದರ ಬೇರೆ ನಾಯಕ 
          ತೆರೆದಿಟ್ಟ ನಿನ್ನ ನನ್ನ ಪುಟವೆಲ್ಲ ನಿನಗಾಗಿ 
ಗಂಡು : ಈ...  ದಾಳಿಂಬೆ ಹೆಣ್ಣು ಕಿಲಕಿಲ ರಸಪೂರಿ ಹೆಣ್ಣು ಘಮ ಘಮ 
            ಬರೆದಿಟ್ಟೆ  ನನ್ನ ಬದುಕೆಲ್ಲ ನಿನಗಾಗಿ 
ಹೆಣ್ಣು : ಹೃದಯದ ಬಡಿತವು ಸಾಕಾಗಿದೆ ಈಗೇನೋ ಬೇಕಾಗಿದೆ 
ಗಂಡು : ನಿಜವನು ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ 
ಇಬ್ಬರು : ಹಾಡಿದೆ ಪ್ರಣಯದಾ ಹಕ್ಕಿ ಹಾಡಿದೆ 
ಗಂಡು : ಹೊರಗಡೆ ಹೇಳಲು ಒದ್ದಾಡಿದೆ ಈಗ್ಯಾಕೋ ಮುದ್ದಾಡಿದೆ (ಹೂಂಹೂಂಹೂಂ)
ಹೆಣ್ಣು : ನಂಗೂ ಬಿಂಕ ನಿಂಗೂ ಬಿಂಕ ಆಗಿನಿಂದಲೂ (ಹೂಂಹೂಂಹೂಂ)
--------------------------------------------------------------------------------------------------------------------------

No comments:

Post a Comment