607. ವಂಶಿ (೨೦೦೮)




ವಂಶಿ ಚಲನಚಿತ್ರದ ಹಾಡುಗಳು 
  1. ಅಮಲು ಅಮಲು ಅಮಲು ಗೆಳತಿ ನೀನು ಸಿಗಲು
  2. ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ 
  3. ಭುವನಂ ಗಗನಂ ಸಕಲಂ ಶರಣಂ
  4. ಏನಾಯ್ತು ಇದ ಏನಾಯ್ತು 
  5. ಮಾಯಗಾತಿ ನಿಂಗವ್ವ ನಿಂಗವ್ವಾ
  6. ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ವಂಶಿ (೨೦೦೮) - ಅಮಲು ಅಮಲು ಅಮಲು ಗೆಳತಿ ನೀನು ಸಿಗಲು
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ಜಯಂತ್ ಕಯಾಕ್ನಿ ಗಾಯನ: ರಾಜೇಶ್ ಕೃಷ್ಣನ್, ಹರಿಣಿ ಸುಧಾಕರನ್

ಗಂಡು : ಅಮಲು ಅಮಲು ಅಮಲು ಗೆಳತಿ ನೀನು ಸಿಗಲು
            ಮರುಳೀಗ ಮಿತಿ ಮೀರಿ ನನಗಂತು ದಿಗಿಲು
ಹೆಣ್ಣು : ಅಮಲು ಅಮಲು ಅಮಲು ಗೆಳೆಯ ನೀನು ನಗಲು
          ನನಗಂತು ಯಾರಿಲ್ಲ ನಿನಗಿಂತ ಮಿಗಿಲು
ಗಂಡು : ಅಮಲು ಅಮಲು ಅಮಲು          ಹೆಣ್ಣು : ಗೆಳೆಯ ನೀನು ನಗಲು
 
ಗಂಡು : ಬಾರೆ ಬಳಿ ಬಾರೆ ಏಕೆ ಕಾಲ ಹರಣ 
ಹೆಣ್ಣು : ಎಲ್ಲ ಪಿಸು ಮಾತು ಮುತ್ತಾಗೋ ಲಕ್ಷಣ
ಗಂಡು : ತಿಳಿಯದೆ ತೆರೆದಿದೆ ಕನಸಿನ ಕದ
ಹೆಣ್ಣು : ಅರಿಯದೆ ಅರಳಿದೆ ಹಸಿ ಬಿಸಿ ಪದ 
ಗಂಡು : ಹರೆಯ ನೋಡಿದೆ ಮಾತಾಡಲು......
ಹೆಣ್ಣು : ಅಮಲು ಅಮಲು ಅಮಲು           ಗಂಡು : ಗೆಳತಿ ನೀನು ಸಿಗಲು
 
ಗಂಡು : ನಿನ್ನ ಉಸಿರಿಂದ ನೇರ ಜೀವದಾನ
ಹೆಣ್ಣು : ಜೀವ ಹಸಿರಾಗಿ ಬದುಕೀಗ ಶ್ರಾವಣ
ಗಂಡು : ಪರದೆಯ ಸರಿಸಿದೆ ಪರವಶ ಮನ
ಹೆಣ್ಣು : ಹೃದಯವೆ ಅರಿತಿದೆ ಹೃದಯದ ಗುಣ
ಗಂಡು : ಸಮಯ ನಿಂತಿದೆ ಹಾರೈಸಲು.....
           ಅಮಲು ಅಮಲು ಅಮಲು          ಹೆಣ್ಣು : ಗೆಳೆಯ ನೀನು ನಗಲು
ಗಂಡು : ಮರುಳೀಗ ಮಿತಿ ಮೀರಿ ನನಗಂತು ದಿಗಿಲು
ಹೆಣ್ಣು : ಅಮಲು ಅಮಲು ಅಮಲು ಗೆಳೆಯ ನೀನು ನಗಲು
ಗಂಡು : ಅಮಲು ಅಮಲು ಅಮಲು ಗೆಳತಿ ನೀನು ಸಿಗಲು
ಇಬ್ಬರು : ಅಮಲು ಅಮಲು ಅಮಲು ಅಮಲು ಅಮಲು ಅಮಲು
--------------------------------------------------------------------------------------------------------------------------

ವಂಶಿ (೨೦೦೮) - ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ 
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ಜಯಂತ್ ಕಾಯ್ಕಣಿ  ಗಾಯನ: ಪುನೀತ್ ರಾಜಕುಮಾರ್, ಶ್ರೇಯ ಗೋಶಲ್

ಹೆಣ್ಣು : ಹೇಯ್ .. ತತತತರರರತ್ ಓಓಓಓಓಓಓ  
ಗಂಡು : ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ 
ಹೆಣ್ಣು : ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ ನುಡಿದಿದೆ ಮನ ಹರಸಿ ಹರಸಿ
ಗಂಡು : ಹೀಗೆ ಸಾಗಲಿ ನಮ್ಮೀ ಪಯಣ 
ಹೆಣ್ಣು : ಹಾಡಿ ನಲಿದು 
ಇಬ್ಬರು : ಸ ಸ ರಿ ರಿ ಗ ಗ ಮ ಮ 
ಗಂಡು : ವ್ವವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ  
           ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ 

ಗಂಡು : ದಿನ ದಿನ ದಿನ ಏನಾದರು ಚಿನ್ನ ಕರಗದು ಈ ಪ್ರೇಮ
ಹೆಣ್ಣು : ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ ಸಹಿಸದು ಈ ಪ್ರೇಮ
ಗಂಡು : ಆ ಬಾನಿಗಾದರೆ ಮಿನುಗು ತಾರೆ ಈ ಬಾಳಿಗಾಸರೆ ನೀನೆ ಬಾರೆ
ಹೆಣ್ಣು : ನಾವಾಡೋ ಒಲವಿನ ಮಾತು ಕೇಳಿ ಹಾರಾಡೋ ಗಿಳಿಗಳ ಗಾನ 
ಇಬ್ಬರು : ಸ ಸ ರಿ ರಿ ಗ ಗ ಮ ಮ ......
ಗಂಡು : ವ್ವವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ  
           ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ನಡೆದಿದೆ ದಿನ ಬಯಸಿ ಬಯಸಿ 
ಹೆಣ್ಣು : ಸಿಹಿ ಸಿಹಿ ಸಿಹಿ ಮಾತು ಸಿಹಿ ಸಿಹಿ ನುಡಿದಿದೆ ಮನ ಹರಸಿ ಹರಸಿ

ಹೆಣ್ಣು : ಕಣ ಕಣ ಕಣ ಹೊಸ ಹುರುಪಿನ ಚಿಲುಮೆಯು ಈ ಪ್ರೇಮ
ಗಂಡು : ಮಿಣ ಮಿಣ ಮಿಣ ಹೊಸ ಬೆಳಕಿನ ಹೊಳಪಿದು ಈ ಪ್ರೇಮ
ಹೆಣ್ಣು : ಏಳೇಳು ಜನುಮದಾ ಜೋಡಿಯಾಗಿ ಹೀಗೇನೆ ಬಾಳುವೆ ಪ್ರೇಮಿಯಾಗಿ
ಗಂಡು : ಈ ನಮ್ಮ ಪ್ರೀತಿಯ ನೋಡಿ ನೋಡಿ ಲೋಕವೇ ಹಾಡಿದೆ ಹಾಡು 
ಇಬ್ಬರು : ಸ ಸ ರಿ ರಿ ಗ ಗ ಮ ಮ ......
ಗಂಡು : ವ್ವವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ  
           ಜೊತೆ ಜೊತೆಯಲಿ        ಹೆಣ್ಣು : ಪ್ರೀತಿ ಜೊತೆಯಲಿ ನಡೆದಿದೆ ದಿನ 
ಗಂಡು : ಬಯಸಿ ಬಯಸಿ ಹೀಗೆ ಸಾಗಲಿ ನಮ್ಮೀ ಪಯಣ 
ಹೆಣ್ಣು : ಹಾಡಿ ನಲಿದು 
ಇಬ್ಬರು : ಸ ಸ ರಿ ರಿ ಗ ಗ ಮ ಮ 
ಗಂಡು : ವ್ವವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ ವ್ವ  (ಅಆಆಆಆ ಆಆಆಅ ಓಓಓಓಓಓಓ )
--------------------------------------------------------------------------------------------------------------------

ವಂಶಿ (೨೦೦೮) - ಭುವನಂ ಗಗನಂ ಸಕಲಂ ಶರಣಂ
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ: ಸೋಹಂ ಚಕ್ರವರ್ತಿ 

(ಧೋಮತನ ದೇರೆನನಾ ಧೋಮತನ ದೇರೆನನಾ ಧೋಮತನ ದೇರೆನನಾ ತೇರೆನನಾ 
ಧೋಮತನ ದೇರೆನನಾ ಧೋಮತನ ದೇರೆನನಾ ಧೋಮತನ ದೇರೆನನಾ ತೇರೆನನಾ )
ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲೂ..  ಹಸಿರನು ನೀಡಿದ ಇರುಳನು ನೀಗಲೂ ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ ಎದುರು ನಿಲ್ಲಲು ಇವನು ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ

(ಸಗರೇಮಗರೇ ಸನಿ ಸಗರೇಪ..  ಗಮಪಸ ದಮಗ 
ಸಗರೇಮಗರೇ ಸನಿ ಸಗರೇಪ.. ಗಮಪಸದ ಮಗಪ ಗಪಮಗರಸನೀ ಆಆಆಅ... )     
ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೇ ದೈವ 
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು (ಆಆಆ) 
ಜಗದಾ ಬಾರಿ ಸಾಗರವ, ಜಿಗಿದು ಈಜಿ ಮೀರಿಸುವ ಪ್ರಬಲ ಧೈರ್ಯ ನೀಡಿರುವ ಶಿವನೇ...
(ಏ ... ಶಿವನೇ )
ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ… ಶರಣಂ

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ, 
ಜನರು ಮಾಡೋ ಕಾಯಕವ ನಿಜದ ಅಂಕೆ ನೀಡಿರುವ ತಿಳಿಯೋ...
(ಏ ... ಶಿವನೇ )
ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ ಎದುರು ನಿಲ್ಲಲು ಇವನು ಮುನಿದೇ ಬಿಡುವ... 
ಭುವನಂ ಗಗನಂ ಸಕಲಂ ಶರಣಂ ಅಖಿಲಂ ನಿಖಿಲಂ ಶಿವನೇ ಶರಣಂ... ಆಆಆ... 
(ಧೋಮತನ ದೇರೆನನಾ ಧೋಮತನ ದೇರೆನನಾ ಧೋಮತನ ದೇರೆನನಾ ತೇರೆನನಾ 
ಧೋಮತನ ದೇರೆನನಾ ಧೋಮತನ ದೇರೆನನಾ ಧೋಮತನ ದೇರೆನನಾ ತೇರೆನನಾ )
------------------------------------------------------------------------------------------------------

ವಂಶಿ (೨೦೦೮) - ಏನಾಯ್ತು ಇದ ಏನಾಯ್ತು 
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ: ಸೋನು ನಿಗಮ್,

ಏನಾಯ್ತೋ ಇದೇ ಏನಾಯ್ತು ವಿಧಿ ಆಟ ಏನಾಯ್ತೋ  
ನೀನಿಲ್ಲ ನಿನ್ನೋರಿಲ್ಲಾ ನಿನ್ನ ನೇರಳೆ ನಿನಗಿಲ್ಲ.. ಸಂಚಾರೀ... .. 
ಸಂಚಾರೀ  ಸಂಚಾರೀ ನಡೆ ನಡೆಸೋನೂ 
ವಿಧಿ ನೋಡು ನಡೆಯೋದೇ ನಿನ್ನಪಾಡೂ 
ಏನಾಯ್ತೋ ಇದೇ ಏನಾಯ್ತು ವಿಧಿ ಆಟ ಏನಾಯ್ತೋ  

ಯಾರನೂ ಕೊಲ್ಲಲೂ ಆಯುಧ ನೀನೂ ಏನನ್ನೂ ಗೆಲ್ಲ ದಳವು ನೀನೂ   
ನಿನ್ನ ಕೂಪ ತಾಪ ನಿನಗೇನೆ ಶಾಪ ಮುಂದೇನೂ ನೀ ಹೇಳೇಯಾ.. 
ನೂಚ್ಚುರೂ ಆಯ್ತೆ ಹೆತ್ತೋಳ ಆಸೇ ಕರಗುವುದೇ ವಿಧಿ ಹೃದಯ
ಅದುವರೆಗೂ ತಡೆಯುವೇಯಾ  
ಏನಾಯ್ತೋ ಇದೇ ಏನಾಯ್ತು ವಿಧಿ ಆಟ ಏನಾಯ್ತೋ  
ನೀನಿಲ್ಲ ನಿನ್ನೋರಿಲ್ಲಾ ನಿನ್ನ ನೇರಳೆ ನಿನಗಿಲ್ಲ.. ಸಂಚಾರೀ .. 

ನನ್ನವರಿಲ್ಲ ತನ್ನವರಿಲ್ಲ ವಿಧಿಯ ಎದುರೂ ನಿಲ್ಲುವರಿಲ್ಲಾ... 
ನಿನ್ನ ಪ್ರೀತಿ ಪ್ರೇಮ ನೀರಲ್ಲಿ ಹೋಮ ಆಗೋಯ್ತೆ ಓ..ಜೀವವೇ 
ನಿನ್ನ ಮಿತ್ರ ನೀನೇ ಶತ್ರೂನೂ ನೀನೇ ನಿಂಗ ಯಾರೋ ಕಡಿವಾಣ
ಅವತಾರ ಸರಿಯೇನಾ  
ಏನಾಯ್ತೋ ಇದ್ ಏನಾಯ್ತು ವಿಧಿ ಆಟ ಏನಾಯ್ತೋ  
ನೀನಿಲ್ಲ ನಿನ್ನೋರಿಲ್ಲಾ ನಿನ್ನ ನೇರಳೆ ನಿನಗಿಲ್ಲ.. ಸಂಚಾರೀ .. 
ಏನಾಯ್ತೋ ಇದೇ ಏನಾಯ್ತು ವಿಧಿ ಆಟ ಏನಾಯ್ತೋ  
ಏನಾಯ್ತೋ ಇದೇ ಏನಾಯ್ತು ವಿಧಿ ಆಟ ಏನಾಯ್ತೋ  
------------------------------------------------------------------------------------------------------------

ವಂಶಿ (೨೦೦೮) - ಮಾಯಗಾತಿ ನಿಂಗವ್ವ ನಿಂಗವ್ವಾ 
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ: ಉದಿತನಾರಾಯಣ, ಮಾಲತೀ   

ಗಂಡು : ಮಾಯಗಾತಿ ನಿಂಗವ್ವ ನಿಂಗವ್ವ ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಹೆಣ್ಣು : ಮಾಯಗಾರ ನಿಂಗಯ್ಯಾ ನಿಂಗಯ್ಯಾ ನನ್ನ ಒಪ್ಪಿಕೊಳ್ಳದಿದ್ದರೇ ಹೆಂಗಯ್ಯಾ
ಗಂಡು : ಹೇ ಕೆಂಚಕ್ಕ , ರಂಗಕ್ಕ , ಚೆನ್ನಕ್ಕ , ಮಲ್ಲಕ್ಕ ನೋಡಿರಕ್ಕ (ಹೊಯ್) , ನನ್ನ ದುಖಃ (ಆಹಾ)
           ಮೈಯಾಮ್ಯಾಲೆ ಬೀಳುತಾಳೆ ನಿಂಗವ್ವ ತಪ್ಪು ಮಾಡಬ್ಯಾಡ ಅಂತವೊಸಿ ಹೇಳ್ಳ್ರವ್ವಾ
ಹೆಣ್ಣು : ಊರು ಊರೇ ಹೇಳಿದರು ಕೇಳಲ್ಲಾ ನೀನು ಒಪ್ಪೊಗಂಟ ನಾನು ಸುಮ್ಕೇ ಇರಲ್ಲಾ

ಹೆಣ್ಣು : ಚಂದವಳ್ಳಿ ತೋಟದಾಗೆ ಸಂಜೆ ಮಬ್ಬು ಆದಮ್ಯಾಗೆ 
          ಸಿಕ್ಕದರೇ ನೀನು ನಂಗೆ ಮುತ್ತುಗಳ ಮೂಟೆ ಕೊಡುವೆ 
          ಬಾರಯ್ಯೋ…ಓ ಓ ಓ ಓ ಬಾರಯ್ಯೋ
ಗಂಡು : ಜೊಲ್ಲುಬಿಡೋ ಹೈದನೂ ನಾನಲ್ಲ ಅರೇ ಎನೆಯಾದ್ರು ನಿಂಗಂತೂ ಬೀಳಲ್ಲ
ಹೆಣ್ಣು : ಹಾ.. ಕೋಳ್ಳೆಗಾಲ ನಮ್ಮೂರು ಕಣ್ಣಯ್ಯ ಮಂತ್ರಹಾಕಿ ನಿನ್ನ ಮೆಚ್ಚಿಸುವೆ ಮಾವಯ್ಯಾ
ಗಂಡು : ಅಮ್ಮಮ್ಮಮ್ಮ  ಅಮ್ಮಯ್ಯಾ ಅಮ್ಮಯ್ಯಾ ದಮ್ಮಯ್ಯಾ ದಮ್ಮಯ್ಯಾ ಅಂಗಿಬಿಡೇ ನನ್ನಾ ಬಿಟ್ಟುಬಿಡೇ
            ಮಾಯಗಾತಿ ನಿಂಗವ್ವ ನಿಂಗವ್ವ ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವಾ...
ಹೆಣ್ಣು : ಮಾಯಗಾರ ನಿಂಗಯ್ಯಾ ನಿಂಗಯ್ಯಾ ನನ್ನ ಒಪ್ಪಿಕೊಳ್ಳದಿದ್ದರೇ ಹೆಂಗಯ್ಯಾ…
ಕೋರಸ್ :  ಒಹೋ ಓ ಒಹೋ ಓ ಒಹೋ ಓ ಒಹೋ ಓ ಒಹೋ ಓ ಒಹೋ ಓ 
ಹೆಣ್ಣು : ಓಯ್ ಜೇಜ್ಜಿನಕ್ ಜಿಂಜಿನಕ್ ಜಿಂಜಿನಕ್ ರೇ 
          ಓಯ್ ಜೇಜ್ಜಿನಕ್ ಜಿಂಜಿನಕ್ ಜಿಂಜಿನಕ್ ರೇ 
ಗಂಡು : ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ದಿದ್ದೀರೇ ಓಯ್ ಹೇ ಓಯ್ 
           ಓಯ್ ಹೇ ಓಯ್ ಓಯ್ ಹೇ ಓಯ್ 

ಕೋರಸ್ : ಅಹ್ ಅಹ್ ಅಹ್ ಅಹ್ ಅಹ್ ಅಹ್ ಅಹ್ ಅಹ್ ಅಹ್ ಅಹ್ ಅಹ್ 
ಗಂಡು : ಹೋಯ್ .. ಮಾರನಾಮಿ ಹಬ್ಬದಾಗೆ ನಮ್ಮ ಹಳ್ಳಿ ಹಳ್ಳದಾಗೆ 
            ಹಿಂದೆಯಿಂದ ಬಂದು ನೀನು ಇಂಗ್ಲೀಸು ಭಾಸೆಯಾಗೆ ಏನಂದೇ...ಹೇ
            ಹೇಹೇಹೇಹೇ…..ಏನಂದೇ ….ಹಾಯ್
ಹೆಣ್ಣು : ಐಯಿ… ಲವ್ವು .. ಯು ಎಕ್ಕಳು ಎಕ್ಕಡು ಅಂದ್ರೆ ನಿನ್ನ ಪ್ರೀತಿಮಾಡುವೇ ಅಂತಾನೋ
ಗಂಡು : ನೀನು ಯಾವ ಸೀಮೆ ಹೆಣ್ಣಮ್ಮಾ ಹೆಣ್ಣಮ್ಮಾ ನನ್ನಾ ಬೆನ್ನು ಬಿದ್ದ ಬೇತಾಳ ನೀನಮ್ಮೋ
ಹೆಣ್ಣು : ಹೇ ಹಬ್ಬಿದ್ದು ಆಗೈತೇ ಹಳ್ಳಿಗೆ ಗೊತೈತೇ ಒಪ್ಪಕೊಳ್ಳಯ್ಯೋ (ಆ) ವಾಲಗ ಉದಿಸಯ್ಯೋ
ಗಂಡು : ಹೊಯ್ ಹೊಯ್ ಮಾಯಗಾತಿ ನಿಂಗವ್ವ ನಿಂಗವ್ವ ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಹೆಣ್ಣು : ಹ್ಹಾ ಹ್ಹಾ ಮಾಯಗಾರ ನಿಂಗಯ್ಯಾ ನಿಂಗಯ್ಯಾ ನನ್ನ ಒಪ್ಪಿಕೊಳ್ಳದಿದ್ದರೇ ಹೆಂಗಯ್ಯಾ
---------------------------------------------------------------------------------------------------

ವಂಶಿ (೨೦೦೮) - ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ಸಂಗೀತ : ಆರ್.ಪಿ.ಪಾಟ್ನಾಯಕ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ: ಡಾ||ರಾಜಕುಮಾರ 

(ಆಆಆ... ಆಆಆ )
ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ, ಹೆರುವಳು ತಾಯಿ ನೋವ ತ್ಯಾಗಮಯಿ ಈ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ ಲಾಲಿ ಹಾಡೋ ಹೆತ್ತ ತಾಯಿಗೆ

ಕರುಳ ಕುಡಿಯ ಸುಖ ಕೋರಿ ಗೂಡಿನಿಂದ ಹೊರ ಹಾರಿ 
ಅಲೆವಳು ದಣಿವಳು ಅನುಕ್ಷಣಾ ಮಿಡಿವಳು
ಕಾಲಕೂಟವನೂ ಸಹಿಸಿ ಕಾಮಕೂಟವನೂ ಕ್ಷಮಿಸಿ
ಜಗವನೇ ಮಗುವಿನ ತೆರದಲಿ ಹೆರೆವಳು ಅಳುವಳು ಅಬಲೆಯು ಎಂದೂ
ಉಳಿವಳು ಮಗುವಿಗೆ ಎಂದೂ ಪ್ರೇಮಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೇ ತಾಯಿಯ ಸ್ವರ್ಗ...  ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ... ವಹಿಸಿದಾ ತಾಯಿಗೆ ಬ್ರಹ್ಮ
ಈ ಬದುಕಿಗಾಗಿ ಈ ಮೌನದ ಆಕ್ರಂದನ...  ಆಆಆ....
ಅನುಮಾನವಿಲ್ಲ ಇದು ಮಾಯದ ಮಹ ಕಲಿಯುಗ
ಹೊರುವಳು ಭೂಮಿ ಭಾರ ಹೆರುವಳು ತಾಯಿ ನೋವ ತ್ಯಾಗಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿತಾಯಿಗೆ ಲಾಲಿ ಹಾಡೋ ಹೆತ್ತ ತಾಯಿಗೆ
------------------------------------------------------------------------------------------------------------------

No comments:

Post a Comment