952. ಮಮತೆ (೧೯೬೮)


ಮಮತೆ ಚಲನಚಿತ್ರದ ಹಾಡುಗಳು 
  1. ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ
  2. ಆಟದ ಗೊಂಬೆ ನಾವೆಲ್ಲಾ ನಿನಗೆ 
  3. ಚಿಕ್ಕ ಮಕ್ಕಳು ನಾವು ಪುಟ್ಟ ಮಕ್ಕಳು
  4. ಹೂ ಬಳ್ಳಿ ಕೈ ಬಿಸಿದಾಗ 
  5. ಈ ಮೌನ ಇನ್ನೇಕೆ ನೀ ನಾಚಿ ನಿಲ್ಲಬೇಕೆ 
ಮಮತೆ (೧೯೬೮) - ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ   
 
ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ
ತಾಯಿ ಎಂಬ ದೈವಕೆ ಬೇರಾರು ಸಾಟಿಯೇ... 
ಬೇರಾರು ಸಾಟಿಯೇ.... ಬೇರಾರು ಸಾಟಿಯೇ

ನವಮಾಸ ಧರಿಸಿ, ಹಾಲನು ಉಣಿಸಿ ಬೆಳೆಸಿದಳಾ ಮಾತೆ 
ಬೆಳೆಸಿದಳಾ ಮಾತೆ...  
ಕಣ್ಣೀರ ಒರೆಸಿ ನಗಿಸಿದಾ  ದೇವತೆ... 
ನಗಿಸಿದಾ  ದೇವತೆ... 
ಅವಳೇ ನಮ್ಮ ಜೀವಾಧಾತೇ
ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ
ತಾಯಿ ಎಂಬ ದೈವಕೆ ಬೇರಾರು ಸಾಟಿಯೇ... 
ಬೇರಾರು ಸಾಟಿಯೇ.... ಬೇರಾರು ಸಾಟಿಯೇ
 
ಮಮತೆಯ ಮಡಿಲು ಕರುಣೆಯ ಕಡಲು ತೋರಿದಳು ಪ್ರೀತಿಯ.... 
ತೋರಿದಳು ಪ್ರೀತಿಯ.... 
 ಹಗಲು ಇರುಳು ಮನದಲೇ ಇಹಳು ಬೆಳಗುತೇ ಜ್ಯೋತಿಯಾ.....
ಬೆಳಗುತೇ ಜ್ಯೋತಿಯಾ.....
ಮರೆಯುವರೇ ಆ ಪ್ರೇಮ ನಿಧಿಯಾ
ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ
ತಾಯಿ ಎಂಬ ದೈವಕೆ ಬೇರಾರು ಸಾಟಿಯೇ... 
ಬೇರಾರು ಸಾಟಿಯೇ.... ಬೇರಾರು ಸಾಟಿಯೇ
------------------------------------------------------------------------------------------------------------------------

ಮಮತೆ (೧೯೬೮) - ಆಟದ ಗೊಂಬೆ ನಾವೆಲ್ಲಾ ನಿನಗೆ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ   

ಆಟದ ಗೊಂಬೆ ನಾವೆಲ್ಲಾ ನಿನಗೆ 
ನಗುತಿಹೆಯೇನು ನೀ ಮನದೊಳಗೆ 
ಶೋಧನೆಯೇನು ಇಂದೆಮಗೆ ಓ..ದೇವಾ.. 

ಗಾಳಿಗೆ ಸಿಲುಕಿ ಹಣತೆಯ ದೀಪ ಉಗಲಾಡುತಿದೆ 
ಅರಳಿದ ಹೂವು ನೋವಿಗೆ ನೊಂದು ಬಾಡುತಿದೆ 
ಕಾಪಾಡು ನೀ ಕಂದನಾ ಓ ದೇವಾ 

ತಾಯಾಗ ಬಂದೆ ನಾ ಒಲಗಿಂದೆ ಅಂದು ಈ ಮನೆಗೆ 
ತೋರಿದ ಪ್ರೀತಿಗೆ ಹಗೆಯೇ ಫಲವೇ ಏನಿದು ವಿಷ ಘಳಿಗೆ 
ಸ್ತ್ರೀ ಜನ್ಮವೇ ಶಾಪವೇ ಓ..ದೇವಾ... 
--------------------------------------------------------------------------------------------------------------------------

ಮಮತೆ (೧೯೬೮) - ಚಿಕ್ಕ ಮಕ್ಕಳು ನಾವು ಪುಟ್ಟ ಮಕ್ಕಳು
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ   

ಚಿಕ್ಕ ಮಕ್ಕಳು ನಾವು ಪುಟ್ಟ ಮಕ್ಕಳು
ಹಕ್ಕಿಯಂತೆಯೇ ಹಾಡಿ ಆಡೋ ಮಕ್ಕಳು
ಕೈ ನೀಡಿ ರೂಡಿ ಇಲ್ಲ ಇನ್ನೇನೂ ದಾರಿಯಿಲ್ಲ

ಈ ತಂಗಿ ಹಸಿವೆ ತಾಗಲಾರಳನ್ನಾ
ನೀವು ಕರುಣೆ ತೋರಿ ಕಾಸ ನೀಡಿರಣ್ಣಾ
ತಿರುಕರೆಂದು ನೋಡಬೇಡಿರಣ್ಣ
ನಾ ನಿಮ್ಮ ಕಂದನೆಂದು ತಿಳಿಯಿರಮ್ಮಾ
ಅರೆ ರೊಟ್ಟಿ ನಮಗೆ ಸಾಕು ಅದಕ್ಕಾಗಿ ಕಾಸು ಬೇಕು

ಈ ದಾರಿ ತಪ್ಪಿ ಬಳಲಿ ಅಲೆವ ಹೊತ್ತು
ನಾ ನೆನೆವೆ ತಾಯಿ ಇತ್ತ ಕೈಯ್ ತುತ್ತು
ಅಣ್ಣಾ ಅಂದು ನಮಗೆ ಕೊಡುವ ಮುತ್ತು
ಆ ಮುತ್ತಿನಲ್ಲಿ ಎಂಥ ಪ್ರೀತಿ ಇತ್ತು
ಅವನೆಲ್ಲೋ ಇಂದು ಕಾಣೆ ಗತಿಯಿಲ್ಲ ದೇವರಾಣೆ
------------------------------------------------------------------------------------

ಮಮತೆ (೧೯೬೮) - ಈ ಮೌನ ಇನ್ನೇಕೆ ನೀ ನಾಚಿ ನಿಲ್ಲಬೇಕೆ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ    

------------------------------------------------------------------------------------

ಮಮತೆ (೧೯೬೮) - ಹೂ ಬಳ್ಳಿ ಕೈ ಬಿಸಿದಾಗ 
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

------------------------------------------------------------------------------------

No comments:

Post a Comment