1448. ನಮ್ಮ ಕಥೆ ನಿಮ್ಮ ಜೊತೆ (೨೦೨೦)

ನಮ್ಮ ಕಥೆ ನಿಮ್ಮ ಜೊತೆ ಚಲನಚಿತ್ರದ ಹಾಡುಗಳು 
  1. ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದಾ  
  2. ಭರ್ಜರಿ ನಾಕರೆ ಹಂಸದ ನಡಿಗೆ ಏನೋ ಮಜವಾಗಿದೆ
ನಮ್ಮ ಕಥೆ ನಿಮ್ಮ ಜೊತೆ (೨೦೨೦) - ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದಾ  
ಸಂಗೀತ : ಸುನೀಲ -ಶಂಕರ, ಸಾಹಿತ್ಯ : ಸುನೀಲ, ಚೇತನಶೆಟ್ಟಿ, ಗಾಯನ : ಸುನೀಲ 

ನೋಡಲು ಇವಳ ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದ
ಮಲ್ಲಿಗೆ ಮುಡಿದು ನಮಿಸಲು ಬಂದರೆ ವರವಾಗಿ ನಂಗೆ ಕೊಡಬಾರದ
ನೋಡಲು ಇವಳ ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದ
ಮಲ್ಲಿಗೆ ಮುಡಿದು ನಮಿಸಲು ಬಂದರೆ ವರವಾಗಿ ನಂಗೆ ಕೊಡಬಾರದ

ನೀನು ಜೊತೆಗಿರಲು ಬಳಿ ಇರಲು ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ ನಾ ನನ್ನಲಿಲ್ಲ ಹೇ ರಾಮ
ಮಾತು ಗೀತು ಆಡೋದಿಲ್ಲ ಇಷ್ಟ ಇದ್ರು ಹೇಳೋದಿಲ್ಲ
ಮನ್ಸಲ್ಲೇನೆ ನಗುತ್ತಾಳೆ ಮಳ್ಳಿ ವಾರೆ ಕಣ್ಣಲಿ ನೋಡುತ್ತಾಳೆ
ನೋಡಿ ಹುಬ್ಬು ಹಾರ್ಸುತ್ತಾಳೆ  ಲುಕಲ್ ವಲ್ಲಿ ಹಾಕುತ್ತಾಳೆ ಕಳ್ಳಿ
ತುಸುತಾಕಿ ನಿನ್ನ ಕೈ ಒಳಗೇನು ಸುಳಿದಂತೆ
ದಯಮಾಡಿ ಸಿಹಿಯಾದ ರುಜುಹಾಕು
ಬಡಪಾಯಿ ಹಾರ್ಟ್ ಹೊಡ್ಕೊತೈತೆ
ನೋಡಲು ಇವಳ ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದ
ಮಲ್ಲಿಗೆ ಮುಡಿದು ನಮಿಸಲು ಬಂದರೆ ವರವಾಗಿ ನಂಗೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ ನಾ ನನ್ನಲಿಲ್ಲ ಹೇ ರಾಮ

ಎಷ್ಟೇ ಬೈದ್ರೂ ಬೇಜಾರಿಲ್ದೆ ನಾಚೆಕೆಯೆಲ್ಲಾ ಆಚೆ ಬಿಟ್ಟು
ನಿನ್ನ ಹಿಂದೆ ಅಲೆಯೋದೆ ನನ್ನ ಡ್ಯೂಟಿ 
ಅಯ್ಯೋ ಮುತ್ತಿನಂತ ಹುಡುಗಿ ನೀನು ನಿನ್ನ ಮಾತು ಸವಿಜೇನು
ಮನ್ಸಲ್ಲೂನು ಕಾಣಿಸ್ತೀಯ ಕ್ಯೂಟ್ 
ನಿನಗಾಗಿ ಕೊಡುತ್ತೀನಿ ನನ್ನ ಎಲ್ಲಾ ಖುಷಿಯನ್ನು
ಇರಲಾರೆ ಕ್ಷಣಕೂಡ ನಿನ್ನ ಬಿಟ್ಟು ನೆರಳಾಗಿ ನಿನ್ನ ಹಿಂದೆ ಬರುವೆ
ನೋಡಲು ಇವಳ ಕಿಲ್ಲಿಂಗ್ ಸ್ಟೈಲ್ಲೂ ಎಕ್ಸಟ್ರಾ ಆಯ್ಸ್ ಇರಬಾರದ
ಮಲ್ಲಿಗೆ ಮುಡಿದು ನಮಿಸಲು ಬಂದರೆ ವರವಾಗಿ ನಂಗೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು ಇನ್ಯಾಕೆ ಬೇಕು ಆ ಸ್ವರ್ಗ
ಹೇ ರಾಮ ಹೇ ರಾಮ ನಾ ನನ್ನಲಿಲ್ಲ ಹೇ ರಾಮ
------------------------------------------------------------------------------------------------------------

ನಮ್ಮ ಕಥೆ ನಿಮ್ಮ ಜೊತೆ (೨೦೨೦) - ಭರ್ಜರಿ ನಾಕರೆ ಹಂಸದ ನಡಿಗೆ ಏನೋ ಮಜವಾಗಿದೆ
ಸಂಗೀತ : ಸುನೀಲ -ಶಂಕರ, ಸಾಹಿತ್ಯ : ಸುನೀಲ, ಚೇತನಶೆಟ್ಟಿ, ಗಾಯನ : ಪೃಥ್ವಿರಾಜ, ಪ್ರಿಯ 

ಭರ್ಜರಿ ನಾಕರೆ ಹಂಸದ ನಡಿಗೆ ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ

ಮರೆಯಲಿ ನಿನ್ನ ನೋಡಲು ನನ್ನ ಮನದಲಿ ಆಸೆ ಹುಟ್ಟಿದೆ ಮೆಲ್ಲ
ಹೃದಯಕ್ಕೆ ರೆಕ್ಕೆ ಬಂದಿಹುದು ಈಗ ನಾ ಹಾರುವ ಮುನ್ನ ಸೆಳೆದುಕೊ ನನ್ನ
ನನ್ನೀ ಜೀವಕೆ ನೀನು ಎಲ್ಲ ಎಂದು ನಂಬಿಹೆನು
ನಿನಗೆ ತಿಳಿಯದೆ ನಿನ್ನ ಹಿಂದೆ ಹಿಂದೆ ಸಾಗಿಹೆನು
ಭರ್ಜರಿ ನಾಕರೆ ಹಂಸದ ನಡಿಗೆ ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ

ಸನಿಹಕೆ ನಿನ್ನ ಕರೆದುಕೊ ನನ್ನ ನಾ ಜಾರುವ ಮುನ್ನ
ಬಚ್ಚಿಡು ನನ್ನ ಎಷ್ಟೊಂದು ವಿಷಯ ನಾ ಹೇಳೊ ಬೇಕಿರೊ
ತುಟಿ ಮೇಲೆ ಬಂದು ನಿಂತೋಗಿದೆಯೊ
ನೀನು ಸಾಗುವ ದಾರಿಯಲ್ಲಿ ನನ್ನೇ ಹಾಸಿರುವೆ
ಒಂದೇ ಉಸಿರಲಿ ತುಂಬ ಕನಸು ನೀನು ಹೇಳಿರುವೆ
ಭರ್ಜರಿ ನಾಕರೆ ಹಂಸದ ನಡಿಗೆ ಏನೋ ಮಜವಾಗಿದೆ
ಮಾಮುಲಿ ಹೃದಯ ನನ್ನದೇನಲ್ಲ ಆದರೂ ಸೋತಿದೆ
------------------------------------------------------------------------------------------------------------

No comments:

Post a Comment