117. ಜೇನು ಗೂಡು (1963)


ಜೇನುಗೂಡು ಚಿತ್ರದ ಹಾಡುಗಳು 
  1. ಬಾಳೊಂದು ನಂದನ ಅನುರಾಗ ಬಂಧನ 
  2. ಜೇನಿರಲು ಜೊತೆಗೂಡಿರಲೂ 
  3. ಒಂದಾಗಿ ಬಾಳುವಾ ಒಲವಿಂದ ಆಳುವಾ 
  4. ಜಿಗಿ ಜಿಗಿಯುತ ನಲಿ ಗಗನದ ಬಯಲಲಿ  ಪಟಗಳಿಯಲಿ ತೇಲಿ 
  5. ಹೆಸರಿಗೆ ರಂಗ ವಿಚಾರಿಸೇ 
ಜೇನು ಗೂಡು (1963)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ಘಂಟಸಾಲ

ಬಾಳೊಂದು ನಂದನ ಅನುರಾಗ ಬಂಧನಅನುರಾಗ ಬಂಧನ
ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ

ಒಂದೊಂದು ಸೌಖ್ಯ ಬಿಂದು ಜೊತೆಗೂಡಿ ತುಂಬಿ ದಂದು
ಒಂದೊಂದು ಸೌಖ್ಯ ಬಿಂದು ಜೊತೆಗೂಡಿ ತುಂಬಿ ದಂದು
ಬಿರುಗಾಳಿಯೊ ಪರಗಾಳಿಯೊ ಭರದಿಂದ ಕಾಡಿತು
ಬದುಕಿಂದು ಬಾಡಿತು
ಬಾಳೊಂದು ನಂದನ   ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ

ಹಲವಾರು ಮಂದಿಗಾಗಿ ಕೃಷಿಗೈವ ಕರ್ಮ ಯೋಗಿ
ಹಲವಾರು ಮಂದಿಗಾಗಿ ಕೃಷಿಗೈವ ಕರ್ಮ ಯೋಗಿ
ಗೃಹ ನಾಯಕ ಹಿತ ಸಾಧಕ ಹೊರೆ ಘಾಸಿ ಗೊಂಡನೆ
ಪರದೇಸಿಯಾದನೆ
ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ
------------------------------------------------------------------------------------------------------------

ಜೇನು ಗೂಡು (1963)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ಘಂಟಸಾಲ

ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ

ತೊರೆದಲ್ಲಿ ಜೇನುಗೂಡು ಹೊರಗೆಲ್ಲಾ ಕಾಡುಮೇಡು
ಕೈಗೂಡಿದ ಮೈಮೂಡಿದ ಹುಲು ಬಾಳ ಹೂಬನ
ಹೊಲಸಾಯ್ತು ಈ ದಿನಾ
ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ

ಸೀಮೆಗೊಯ್ದ ಪ್ರಿಯನೆಂದು ದೂರನಾದ
ಸಖ ನಿಲ್ಲದೇ ಸುಖವೆಲ್ಲಿದೇ ಪ್ರಿಯೆವಾಯಿತೀಗ ಈ ಜಗ
ದೊರೆಯಿಲ್ಲದ ಓಲಗ
ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ

ವಿಧಿ ಹೂಡಲಂದೂ ಸಂತಿ ಸುಖ ದುಃಖ ಇಂಚು ಮುಂಚೂ
ಮನದಾಸೆಯ ಮೊಗದಾಸೆಯ ಮಣ್ಣಾಗಲಲ್ಲದೇ
ಹಣ್ಣಾಗಬಲ್ಲದೇ
ಬಾಳೊಂದು ನಂದನ  ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ
------------------------------------------------------------------------------------------------------------

ಜೇನುಗೂಡು (1963)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


ಹೆಣ್ಣು : ಜೇನಿರುಳು ಜತೆಗೂಡಿರಲು ಬೇಕೇನು
         ಹೊರಹೊಮ್ಮಿರಲು ರಸಹೊನಲು ಬೇಡೆನು ನಾನೇನು
ಗಂಡು : ಜೇನಿರುಳು ಜತೆಗೂಡಿರಲು ಬೇಕೇನು
           ಹೊರಹೊಮ್ಮಿರಲು ರಸಹೊನಲು ಬೇಡೆನು ನಾನೇನು

ಹೆಣ್ಣು : ನುಡಿ ನವಿರು ಮೈ ನಿಮಿರು ತರುತಿಹುದೇಕೆ ಸೈ ಏನರು
ಗಂಡು :ಆಹಹಾ..ಆಆಆ... ಅಳುಕದಿರು ಅಂಜದಿರು  ಅರಿವುದು ತಾನೆ ಸುಮ್ಮನಿರು
ಹೆಣ್ಣು :ಓಓಓ ...  ಬಾಳುವೆಯ ಹೂಬಳ್ಳಿ  ಚಿಗುರುವ ವೈಖರಿ ಹೀಗೇನೆ
ಗಂಡು : ಕೇಳದಿರು ಮುಂದೇನೂ  ಹೊಸತನ ನನಗೂ ಶಿವನಾಣೆ
ಹೆಣ್ಣು : ಜೇನಿರುಳು ಜತೆಗೂಡಿರಲು ಬೇಕೇನು
         ಹೊರಹೊಮ್ಮಿರಲು ರಸಹೊನಲು ಬೇಡೆನು ನಾನೇನು

ಗಂಡು : ನೀನಾರೋ ನಾನಾರೋ  ಅರಿತೆವು ಬೆರೆತೆವು ಪ್ರೇಮದಲಿ
ಹೆಣ್ಣು : ಆಆಆ.. ಎರಡೆಂಬ ಅರಿವಳಿದು ಮೈಮನ ಮರೆತವು ಮೋಹದಲಿ
ಗಂಡು : ಓಓಓ..  ಒಡಲೆರಡು ಉಸಿರೊಂದು  ಎಂಬುವ ಮಂತ್ರವ ಜಪಿಸೋಣ
ಹೆಣ್ಣು : ನೆರೆ ಹೊರೆಯ ನಾಚಿಸುವ ನಲ್ಮೆಯ ಜೀವನ ರಚಿಸೋಣ
ಇಬ್ಬರು : ಜೇನಿರುಳು ಜತೆಗೂಡಿರಲು ಬೇಕೇನು
            ಹೊರಹೊಮ್ಮಿರಲು ರಸಹೊನಲು ಬೇಡೆನು ನಾನೇನು
            ಆಆಆ... ಓಹೋಹೋ.. ಹೂಂಹುಂ ಹೂಂ
            ಆಆಆ... ಓಹೋಹೋ.. ಹೂಂಹುಂ ಹೂಂ
--------------------------------------------------------------------------------------------------------------------------

ಜೇನು ಗೂಡು (1963)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ಘಂಟಸಾಲ


ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ

ಬೆರೆತಾಗ ಜೇನು ಗೂಡು ಬಿರಿದಾಗ ಮಾನ ಗೇಡು
ಬೆರೆತಾಗ ಜೇನು ಗೂಡು ಬಿರಿದಾಗ ಮಾನ ಗೇಡು
ಇದಕೆಂಬರು ಮತಿವಂತರು
ಬಾಳೊಂದು ನಂದನ  ಅನುರಾಗ ಬಂಧನ
ಒಂದಾಗಿ ಬಾಳುವ  ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ

ನಿಸ್ವಾರ್ಥವೆಂಬ ಮಂತ್ರ   ಜಪಗೈದು ಬಾಳ ಯಂತ್ರ
ನಿಸ್ವಾರ್ಥವೆಂಬ ಮಂತ್ರ  ಜಪಗೈದು ಬಾಳ ಯಂತ್ರ
ಸಿಹಿಯಾಗಲಿ ಕಹಿಯಾಗಲಿ  ಕಸುವಿಂದ ಸಾಗಲಿ
ರಸಪೂರ್ಣ ವಾಗಲಿ  
ಒಂದಾಗಿ ಬಾಳುವ  ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ
--------------------------------------------------------------------------------------------------------------------------

ಜೇನು ಗೂಡು (1963)
ಸಾಹಿತ್ಯ:ಸೋರಟ್ ಅಶ್ವಥ, ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ರಘುವಲು, ಎಲ್.ಆರ್.ಈಶ್ವರಿ 


ಗಂಡು : ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ
            ನೆಲದಿಂದ ದೂರ ಕೂಡಿ ದಾರ ಹಾರು ಹೊಡೆಯದೆ ಜೋಲಿ
ಹೆಣ್ಣು : ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ
           ನೆಲದಿಂದ ದೂರ ಕೂಡಿ ದಾರ ಹಾರು ಹೊಡೆಯದೆ ಜೋಲಿ

ಗಂಡು : ಓಓಓ .. ನೀಲ ಗಗನದ ರಾಣಿ ನೀನೇರುತಲಿ ನೂಲೇಣಿ  
ಹೆಣ್ಣು : ಓ..ನಗೆ ಮಾತಿದು ಬಿಡು ಓ..ಪ್ರಾಣಿ ಪಟ ಹಾರಿಸಿ ಕಲಿ ಸಾಂಬ್ರಾಣಿ
ಗಂಡು : ಈ ಆಗದಂಥ  ಮಾತಿಗೆ ಸೋಲುವ ಗಂಡಿದಲ್ಲ
           ಏಕಿ ಕೀಟಲೇ...  ಸಾಕು ಹೋಗೇಲೇ
ಹೆಣ್ಣು : ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ
         ನೆಲದಿಂದ ದೂರ ಕೂಡಿ ದಾರ ಹಾರು ಹೊಡೆಯದೆ ಜೋಲಿ 

ಹೆಣ್ಣು : ಓ.. ಆಕಾಶದಲಿ ಗೋರಂಟಿ ಹೊಡೆವೇ ನೀ ಉಲ್ಟಾ ಪಲ್ಟಿ 
ಗಂಡು : ಓ.. ಓ.. ಜಂಭದ ಮಾತಿನ ತುಂಟಿ ನೀ ನೋಡಲೇ ಹಾರುವ ಜಂಟಿ 
ಹೆಣ್ಣು :   ಬಿರುಗಾಳಿಯಲ್ಲಿ ತೂರಿಕೊಂಡು ಸೂತ್ರಗಂಟು ಕಿತ್ತುಕೊಂಡು 
            ಹೊಡೆಯೇ ಗೋತವಾ  ಅಳುವೇ ಮಾನವ 
ಗಂಡು : ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ
            ನೆಲದಿಂದ ದೂರ ಕೂಡಿ ದಾರ ಹಾರು ಹೊಡೆಯದೆ ಜೋಲಿ 

ಗಂಡು : ಓಓಓ.. ಬಿಗುಮಾತಿನ ಬಿಂಕದ ಹೆಣ್ಣೇ ನೀನಾಡುವ ಮಾತಿದು ಚೆನ್ನೆ 
ಹೆಣ್ಣು : ಓಓಓ ... ಬಿಡು ಕೋಪವಾ ಜರಿಯೇನು ನಿನ್ನಾ ಜತೆ ಸೇರುವೆ ಬಿಡು ಪಟವನ್ನ 
ಇಬ್ಬರು : ನಗೆಬಾಳಿನಲ್ಲಿ ಹಾಲು ಜೇನು ಸೇರುವಂತೆ ಸೇರಿಕೊಂಡು 
             ಕೂಡಿ ಆಡುವಾ ಸೇರಿ ಹಾಡುವಾ 
            ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಪಟಗಾಳಿಯಲಿ ತೇಲಿ
           ನೆಲದಿಂದ ದೂರ ಕೂಡಿ ದಾರ ಹಾರು ಹೊಡೆಯದೆ ಜೋಲಿ 
-------------------------------------------------------------------------------------------------------------------------

ಜೇನುಗೂಡು (1963) ಹೆಸರಿಗೇ ರಂಗ ವಿಚಾರಿಸೇ ಮಂಗ ಮಹಾ ಸಾಧಕ  
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯ ಕೃಷ್ಣಮೂರ್ತಿ ಹಾಡಿದವರು: ಎಸ್.ಜಾನಕೀ
ಹೆಸರಿಗೇ ರಂಗ ವಿಚಾರಿಸೇ ಮಂಗ ಮಹಾ ಸಾಧಕ
ಪ್ರಳಯಾಂತಕ ಕಲಿಯಲ್ಲ ಹುಲಿಯಲ್ಲ ನರವಾನರ 
ಈ ಮಹಾ ಮಲ್ಲ ಮೈಗಳ್ಳ ಕುಲಶೇಖರ

ಹಸಿಯೋ ಬೀಸಿಯೋ ಹಸಿದಲ್ಲಿ ಹುಂಬಾ ಹುಂಬೂ 
ನುಡಿಯಲ್ಲಿ ಕಂಪು ಮುನ್ನಡೆಯಲ್ಲಿ ಡೊಂಕು 
ನುಡಿಯಲ್ಲಿ ಕಂಪು ಮುನ್ನಡೆಯಲ್ಲಿ ಡೊಂಕು 
ಬಲು ಮಾತು ಬಿನ್ನಾಣ... ಭಲ್ಲಂತ ಭಲೇ ಜಾಣ 
ಬಲವಾದ ಉಂಡಾಡಿಗ   
ಹೆಸರಿಗೇ ರಂಗ ವಿಚಾರಿಸೇ ಮಂಗ ಮಹಾ ಸಾಧಕ
ಪ್ರಳಯಾಂತಕ ಕಲಿಯಲ್ಲ ಹುಲಿಯಲ್ಲ ನರವಾನರ 
ಈ ಮಹಾ ಮಲ್ಲ ಮೈಗಳ್ಳ ಕುಲಶೇಖರ 

ಮನೆಗೂ ಮಠಕೂ ಅಲೆಅಲೆದು ದಣಿವ ಧೀರ..   
ಊರುಗಲ ಬಾಯಿ ಬಡಾಯಿ ಸಿಪಾಯಿ 
ಊರುಗಲ ಬಾಯಿ ಬಡಾಯಿ ಸಿಪಾಯಿ 
ಇತಿಹಾಸ ಓದಿಲ್ಲಾ... ಭೂಗೋಳ ಕಂಡೇ ಇಲ್ಲಾ 
ತಿಳಿಗೇಡಿಗಳ ಕನ್ನಡಿ  
ಹೆಸರಿಗೇ ರಂಗ ವಿಚಾರಿಸೇ ಮಂಗ ಮಹಾ ಸಾಧಕ
ಪ್ರಳಯಾಂತಕ ಕಲಿಯಲ್ಲ ಹುಲಿಯಲ್ಲ ನರವಾನರ 
ಈ ಮಹಾ ಮಲ್ಲ ಮೈಗಳ್ಳ ಕುಲಶೇಖರ 
-------------------------------------------------------------------------------------------------------------------------

No comments:

Post a Comment