133. ಮರೆಯಲಾಗದ ಕಥೆ (1982)



ಮರೆಯಲಾಗದ ಕಥೆ ಚಿತ್ರದ ಹಾಡುಗಳು 
  1. ಬರೆಯುವೆ ನಿನಗಾಗಿ 
  2. ಮೊದಲೆಲ್ಲೋ ಕೊನೆಯಲ್ಲೋ 
  3. ಕಣ್ಣಲ್ಲಿ ಧೀಮ್ ಧೀಮ್ 
  4. ಇರುವಾಗ ಚಿಂತೆಯಲಿ 
  5. ಈ ಜೀವನ ಸುಖವಾಗಿದೇ 
  6. ಮಾತನು ಬಲ್ಲ ಮನುಜನಗಿಂತ 
ಮರೆಯಲಾಗದ ಕಥೆ (1982) - ಬರೆಯುವ ನಿನಗಾಗಿ 
ಸಂಗೀತ: ಉಪೇಂದ್ರಕುಮಾರ್,  ರಚನೆ: ಚಿ| ಉದಯಶಂಕರ್,  ಗಾಯನ: ಎಸ್.ಪಿ.ಬಿ, ರಮಣಿ 


ಗಂಡು : ಬರೆಯುವೆ ನಿನಗಾಗಿ...
           ಬರೆಯುವೆ ನಿನಗಾಗಿ...  ಹೃದಯದಿ ಹಿತವಾಗಿ
           ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ...
           ಬರೆಯುವೆ ನಿನಗಾಗಿ...  ಹೃದಯದಿ ಹಿತವಾಗಿ
          ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ...

ಗಂಡು : ಆ... ಹೂಂ... ಹೂಂ... 
           ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ
           ಸಂಪಿಗೆಯ ಸಂಪಿನಲ್ಲಿ ಇಂಪಾದ ರಾಗದಲಿ
           ನಾ ಬರೆಯುವೆ
           ಅರಗಿಣಿಯ ಭಾಷೆಯಲ್ಲಿ ಕೋಗಿಲೆಯ ರಾಗದಲ್ಲಿ
           ಹಂಸನಡೆ ತಾಳದಲ್ಲಿ ಮುತ್ತಂಥ ಮಾತಿನಲಿ
           ಹೊಸ ಕವಿತೆಯ... ಓ ಗೆಳತಿ... 
ಹೆಣ್ಣು : ಆಆಆ... ಆಆಆ...
ಗಂಡು : ಬರೆಯುವೆ ನಿನಗಾಗಿ...  ಹೃದಯದಿ ಹಿತವಾಗಿ
           ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ...

ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಹೂ ಬನದಿ ಆಯ್ದು ತಂದ ಮೊಗ್ಗಾದ ಮಲ್ಲಿಗೆಯಿಂದ
           ಸವಿಜೇನ ಹನಿಹನಿಯಿಂದ ಪ್ರಣಯದಾನಂದದಿಂದ
           ನಾ ಬರೆಯುವೆ
           ನನ್ನಂತರಾಳದಿಂದ ಪುಟಿದೇಳೋ ಭಾವದಿಂದ
           ಬಯಕೆಗಳ ಭಾರದಿಂದ ಕಣ್ಣುಗಳ ಮಿಂಚಿನಿಂದ
          ಹೊಸ ಕವಿತೆಯ  ಓ ಗೆಳತಿ
ಹೆಣ್ಣು : ಆಆಆ... ಆಆಆ...
ಗಂಡು : ಬರೆಯುವೆ ನಿನಗಾಗಿ...  ಹೃದಯದಿ ಹಿತವಾಗಿ
           ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ...
-------------------------------------------------------------------------------------------------------------------------

ಮರೆಯಲಾಗದ ಕಥೆ (1982)
ಸಂಗೀತ: ಉಪೇಂದ್ರಕುಮಾರ್,  ರಚನೆ: ಚಿ| ಉದಯಶಂಕರ್,  ಗಾಯನ: ಎಸ್.ಜಾನಕೀ 

\ಮೊದಲೆಲ್ಲೋ ಕೊನೆಯಲ್ಲೋ 
ಮೊದಲೆಲ್ಲೋ ಕೊನೆಯಲ್ಲೋ ನೀ ಬರೆದ ಕಥೆಗೆ 
ಮೊದಲೆಲ್ಲೋ ಕೊನೆಯಲ್ಲೋ ನೀ ಬರೆದ ಕಥೆಗೆ 
ಅನುಕ್ಷಣವೂ ಹೊಸ ಘಟನೆಯೇ ತುಂಬುತಲೇ ಇರುವೇ 
ಮೊದಲೆಲ್ಲೋ ಕೊನೆಯಲ್ಲೋ ನೀ ಬರೆದ ಕಥೆಗೆ 

ಇಂದೇನೋ ಮುಂದೇನೋ ತಿಳಿಯದು ಏನೆಂದೂ 
ಇಂದೇನೋ ಮುಂದೇನೋ ತಿಳಿಯದು ಏನೆಂದೂ 
ಕಾರಣವ ಹೇಳುವರಾ ಕಾಣೆನು ನಾನೆಂದೂ 
ಬಾಳೊಂದು ನಗೆಯಂತೇ ಓಡುತ ಹೋಗುವುದೂ 
ಬಾಳೊಂದು ನಗೆಯಂತೇ ಓಡುತ ಹೋಗುವುದೂ 
ಕಾಡೇನೋ ನಾಡೆನೋ ಪಯಣವ ಸಾಗುವುದೂ 
ಮೊದಲೆಲ್ಲೋ ಕೊನೆಯಲ್ಲೋ ನೀ ಬರೆದ ಕಥೆಗೆ 

ಹೊಸಬಗೆಯ ಪಾತ್ರಗಳ ರಚಿಸುತಲೇ ಇರುವೇ 
ಹೊಸಬಗೆಯ ಪಾತ್ರಗಳ ರಚಿಸುತಲೇ ಇರುವೇ 
ಕಲ್ಪನೆಗೂ ಸಿಗದಂತ ಜಾಣ್ಮೆಯ ತೋರಿರುವೇ 
ಆಸೆಗಳ ತೋರುತಲಿ ಬದುಕನು ಸಾಗಿಸುವೇ 
ಆಸೆಗಳ ತೋರುತಲಿ ಬದುಕನು ಸಾಗಿಸುವೇ 
ಮುಗಿಯದ ಈ ಕಥೆಯನ್ನು ಬರೆಯುತಲೇ ಇರುವೇ 
ಮೊದಲೆಲ್ಲೋ ಕೊನೆಯಲ್ಲೋ ನೀ ಬರೆದ ಕಥೆಗೆ 
----------------------------------------------------------------------------------------------------------------------- 

ಮರೆಯಲಾಗದ ಕಥೆ (1982)
ಸಂಗೀತ: ಉಪೇಂದ್ರಕುಮಾರ್,  ರಚನೆ: ಚಿ| ಉದಯಶಂಕರ್,  ಗಾಯನ: ಎಸ್.ಜಾನಕೀ 

ಹ್ಹಾಂ... ಹ್ಹಾಂ... ಹ್ಹಾಂ... ಹ್ಹಾಂ... ಹ್ಹಾಂ... ಹ್ಹಾಂ...
ಹೇ..ಹೇ..ಹೇ..ಹೇ  ಹ್ಹಾಂ... ಹ್ಹಾಂ... ಹ್ಹಾಂ...
ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್
ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್ 
ಈ ಹೂವೂ ಘಮ್ ಘಮ್ ಬಳಿಗೆ ಬಾ ಬೇಗ ಹ್ಹಹ್ಹಹ್ಹಹಾ..  
ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್ 
ಈ ಹೂವೂ ಘಮ್ ಘಮ್ ಬಳಿಗೆ ಬಾ ಬೇಗ

ತನುವು ಬಿಸಿಯಾಗಿ ಕೆನ್ನೇ ಕೆಂಪಾಗಿ ಆಆಆ... 
ತನುವು ಬಿಸಿಯಾಗಿ ಕೆನ್ನೇ ಕೆಂಪಾಗಿ 
ನಡುವು ಲತೆಯಾಗಿ ಬಳುಕಿ ಸೊಗಸಾಗಿ ಹ್ಹಹ್ಹಹ್ಹಹ್ಹ.. 
ಜೊತೆಯೂ ಬೇಕೆಂದೂ ಹುಡುಕಿ ಬಂತೀಗ
ಜೊತೆಯೂ ಬೇಕೆಂದೂ ಹುಡುಕಿ ಬಂತೀಗ
ಬಳಿಗೆ ಬಾ ಬೇಗ ಹ್ಹೋ ಹ್ಹೋಹ್ಹೋಹ್ಹೋ
ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್ 
ಈ ಹೂವೂ ಘಮ್ ಘಮ್ ಬಳಿಗೆ ಬಾ ಬೇಗ ಆಂ...ಆಹ್ಹ್ ಆಹ್ಹ್ 

ಕಾಲ ಕಳೆದಂತೇ ಸಂಜೆ ಬಂದಂತೇ ಆಆಆ... 
ಕಾಲ ಕಳೆದಂತೇ ಸಂಜೆ ಬಂದಂತೇ 
ವಯಸು ಮುಗಿದಂತೇ ತನುವು ಸೋತಂತೇ ಹ್ಹಹ್ಹಹ್ಹಹ್ಹ.. 
ಇರದು ಉಲ್ಲಾಸ ಸಿಗದು ಸಂತೋಷ 
ಇರದು ಉಲ್ಲಾಸ ಸಿಗದು ಸಂತೋಷ 
ಬಳಿಗೆ ಬಾ ಬೇಗ ಆಂ...ಆಹ್ಹ್ ಆಹ್ಹ್ ಆಂ...ಆಹ್ಹ್ ಆಹ್ಹ್ 
ಕಣ್ಣಲ್ಲಿ ಧೀಮ್ ಧೀಮ್ ಮೈಯೆಲ್ಲಾ ಜುಮ್ ಜುಮ್ 
ಈ ಹೂವೂ ಘಮ್ ಘಮ್ ಬಳಿಗೆ ಬಾ ಬೇಗ ಆಂ...ಆಹ್ಹ್ ಆಹ್ಹ್ 
-------------------------------------------------------------------------------------------------------------------------

ಮರೆಯಲಾಗದ ಕಥೆ (1982)
ಸಂಗೀತ: ಉಪೇಂದ್ರಕುಮಾರ್, ರಚನೆ: ಚಿ| ಉದಯಶಂಕರ್, ಗಾಯನ: ಪಿ.ಸುಶೀಲಾ


ಶಾಂತಿ ಈಗ ನಿನಗೆ ಚಿರಶಾಂತಿ ಓ.ಓ .ಓ..ಒಹೋ... ಇರುವಾಗ
ಇರುವಾಗ ಚಿಂತೆಯಲಿ ನಿನ್ನ ಜೀವ ಸುಟ್ಟರೂ
ಇರುವಾಗ ಚಿಂತೆಯಲಿ ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು ಸುಡುವರೂ ಓ..ಓ..ಒಹೋ...
ಇರುವಾಗ ಚಿಂತೆಯಲಿ ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು ಸುಡುವರೂ ಆಆಆ..ಓ..ಓ

ಬಾಳಿನಲೀ... ಮಗನಂತೇ ಬಂದವನು ಒಬ್ಬನು
ಬಳಿಗೆ ಮೃಗದಂತೇ ಬಂದವನು ಒಬ್ಬನು
ಒಲವನ್ನು ಪಡೆದವನೂ ಒಬ್ಬನು
ನಿನ್ನ ಕರವನ್ನು ಹಿಡಿದವನು ಒಬ್ಬನು
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೇ
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೇ
ಆದರೂ ವಿಷಾದವ ಕಂಡೇ ಓಓಓ... ಓಓಓ
ಇರುವಾಗ ಚಿಂತೆಯಲಿ ನಿನ್ನ ಜೀವ ಸುಟ್ಟರೂ
ಇರುವಾಗ.. ಏನನ್ನೂ ಬಯಸಲಿಲ್ಲಾ ನೀನೂ
ಎಂದೂ ಯಾರನ್ನೂ ಕೇಳಲಿಲ್ಲ ಏನೂ 
ಉಪಕಾರ ಪಡೆದವರೂ ನಿನಗೆ
ಅಯ್ಯೋ ನೆಮ್ಮದಿಯ ತರಲಿಲ್ಲ ಕೊನೆಗೆ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ನೋವಲೂ ಸಂತೋಷವ ಕಂಡೇ ಓಓಓ... ಓಓಓ
ಇರುವಾಗ ಚಿಂತೆಯಲಿ ನಿನ್ನ ಜೀವ ಸುಟ್ಟರೂ ಓಓಓ... ಓಓಓ
-------------------------------------------------------------------------------------------------------------------------

ಮರೆಯಲಾಗದ ಕಥೆ (1982)
ಸಂಗೀತ: ಉಪೇಂದ್ರಕುಮಾರ್, ರಚನೆ: ಚಿ| ಉದಯಶಂಕರ್, ಗಾಯನ: ವಾಣಿಜಯರಾಂ


ಹೂಂಹೂಂ ಹೂಂ ಹೂಂ
ಈ ಜೀವನ ಸುಖವಾಗಿದೇ
ಈ ಜೀವನ ಸುಖವಾಗಿದೇ ಈ ಸೇವೆ ಹೀತವಾಗಿದೆ
ಈ ಜೀವನ ಸುಖವಾಗಿದೇ ಈ ಸೇವೆ ಹೀತವಾಗಿದೆ
ತಾನಾಗಿ ಬಂದ ಅನುರಾಗದಿಂದ ಆನಂದವೇ ತುಂಬಿದೆ
ಈ ಜೀವನ ಸುಖವಾಗಿದೇ ಈ ಸೇವೆ ಹೀತವಾಗಿದೆ

ಬಿರುಗಾಳಿ ಬೀಸಿ ಬಂದರೂ ಮಿಂಚಂತೆ ಓಡಿ ಹೋಯಿತು
ಭಯದಿಂದ ಜೀವ ನೊಂದರೂ ಹೊಸ ದಾರಿ ನೋಡಿತು
ನಿನ್ನೆಯಂತೇ ಇಂದು ಇಲ್ಲಾ ನಾಳೆಯೇನೋ ಹೇಳೋರಿಲ್ಲಾ
ಈ ಜೀವನ ಸೊಗಸಾಗಿದೇ ದಿನವೊಂದು ಬಗೆಯಾಗಿದೆ
ಈ ಜೀವನ ಸೊಗಸಾಗಿದೇ ದಿನವೊಂದು ಬಗೆಯಾಗಿದೆ
ಎಂದೆಂದೂ ಹೀಗೆ ಇರುವಾಸೆ ಇಂದೂ ಮನದಲ್ಲಿ ತೇಲಾಡಿದೇ
ಈ ಜೀವನ ಸುಖವಾಗಿದೇ ಈ ಸೇವೆ ಹೀತವಾಗಿದೆ

ಉಯ್ಯಾಲೆಯಂತೇ ಸ್ನೇಹವೂ ಹಾಯಾಗಿ ತೂಗಿದೆ
ತಂಗಾಳಿಯಂತೇ ಸಂತಸ ಉಲ್ಲಾಸ ತಂದಿದೇ
ಇನ್ನೂ ಇನ್ನೂ ನೋಡೋ ಆಸೆ ಹೀಗೆ ಎಂದೂ ಬಾಳೋ ಆಸೆ
ಈ ಜೀವನ ಹೊಸದಾಗಿದೆ ನೂರೆಂಟೂ ಕನಸಾಗಿದೇ
ಈ ಜೀವನ ಹೊಸದಾಗಿದೆ ನೂರೆಂಟೂ ಕನಸಾಗಿದೇ
ಈ ಮೌನದಲ್ಲೂ ಈ ಪ್ರೇಮದಲ್ಲೂ ಆನಂದವೇ ತುಂಬಿದೆ
ಈ ಜೀವನ ಸುಖವಾಗಿದೇ ಈ ಸೇವೆ ಹೀತವಾಗಿದೆ
-------------------------------------------------------------------------------------------------------------------------

ಮರೆಯಲಾಗದ ಕಥೆ (1982)
ಸಂಗೀತ: ಉಪೇಂದ್ರಕುಮಾರ್, ರಚನೆ: ಚಿ| ಉದಯಶಂಕರ್, ಗಾಯನ: ವಾಣಿಜಯರಾಂ


ಮಾತನು ಬಲ್ಲ ಮನುಜನಿಗಿಂತ ಕ್ರೂರಿಗಳಿಲ್ಲ ಸ್ವಾರ್ಥಿಗಳಿಲ್ಲಾ
ಮಾತನು ಬಲ್ಲ ಮನುಜನಿಗಿಂತ ಕ್ರೂರಿಗಳಿಲ್ಲ ಸ್ವಾರ್ಥಿಗಳಿಲ್ಲಾ
ಮಾತೇ ಬರದ ಪ್ರಾಣಿಗಳೆಂದು ಕೆಣಕದೇ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲಲಲಾ ಲಾಲಲಲಲಲಾ ಲಾಲಲಲಲಲಾ

ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ
ಹಾವೇ ಏನೂ ಬರಲಿಲ್ಲ ನಾವಿರುವಲ್ಲಿಗೇ
ನಾವೇ ತಾನೇ ಬಂದವರೂ ಈ ಹಾವಿದ್ದೇಡಗೆ
ನಮ್ಮನ್ನು ಕಂಡ ಭಯಕೆ ಹೆಡೆಯನು ತೋರಿಸಿ ನಮಗೆ
ನಮ್ಮನ್ನು ಕಂಡ ಭಯಕೆ ಹೆಡೆಯನು ತೋರಿಸಿ ನಮಗೆ
ಬುಸ್ಸ್ ಬುಸ್ಸ್ ಎಂದು ಹೆದರಿಸಿ ನಮ್ಮ ಓಡಿತು ಎಲ್ಲೋ ಕೊನೆಗೆ

ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ
ಹುಲಿಯನು ಕ್ರೂರಿ ಎನ್ನುವರೂ ಮಾನವರೇ ತಾನೇ
ಬೇಟೆಯನಾಡಿ ಕೊಲ್ಲುವುದು ನಮ್ಮವರೇ ತಾನೇ
ನಮ್ಮ ಚರ್ಮವನೆಂದೂ ಹುಲಿಯು ಗುಹೆಯಲ್ಲಿಡದು
ನಮ್ಮ ಚರ್ಮವನೆಂದೂ ಹುಲಿಯು ಗುಹೆಯಲ್ಲಿಡದು
ವ್ಯಾಘ್ರವ ಕೊಂದು ಚರ್ಮವ ಸುಲಿದು ಮಾನವನೇ ಮಾರುವುದೂ
ಮಾತನು ಬಲ್ಲ (ಮಾತನು ಬಲ್ಲ ) ಮನುಜನಿಗಿಂತ(ಮನುಜನಿಗಿಂತ)
ಕ್ರೂರಿಗಳಿಲ್ಲ (ಕ್ರೂರಿಗಳಿಲ್ಲ ) ಸ್ವಾರ್ಥಿಗಳಿಲ್ಲಾ (ಸ್ವಾರ್ಥಿಗಳಿಲ್ಲಾ )
ಮಾತೇ ಬರದ ಪ್ರಾಣಿಗಳೆಂದು ಕೆಣಕದೇ ಹಾನಿ ಮಾಡುವುದಿಲ್ಲಾ
ಲಾಲಲಲಲಲಾ ಲಾಲಲಲಲಲಾ ಲಾಲಲಲಲಲಾ ಲಾಲಲಲಲಲಾ
-------------------------------------------------------------------------------------------------------------------------

No comments:

Post a Comment