ದೇವರು ಕೊಟ್ಟ ವರ ಚಿತ್ರದ ಹಾಡುಗಳು
- ಬೇಲೂರು ಗುಡಿಯಲ್ಲಿ ಶಿಲೆಯಾಗಿ ನಿಂತೋಳೆ
- ಕಂಗಳೇ ಕರಗಿ ನೀರಾದಾಗ
- ಇಂದಿನ ಈ ಇರುಳು ನಮ್ಮಿ ಬಾಳಲೇ ಮೊದಲು
- ಹಾಯಾಗಿದೆ ಈ ದಿನ ಮನ ಹಗುರಾಗಿದೆ
- ಮೊಗ್ಗೊಂದು ನಗುನಗುತಾ ಹೂವಾಯಿತು
ದೇವರು ಕೊಟ್ಟ ವರ (೧೯೭೬) - ಬೇಲೂರು ಗುಡಿಯಲ್ಲಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಸ್.ಪಿ.ಬಿ. ಮತ್ತು ವಾಣಿ ಜಯರಾಮ್
ಗ : ಬೇಲೂರು ಗುಡಿಯಲ್ಲಿ ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ.. ನನಗೆಂದು ನೀನೇನು ತಂದೆ
ಹೆ : ನನ್ನ ಮಾತೆ ಸಾಕಲ್ಲ ಅದಕ್ಕಿಂತ ಸಿಹಿಯಲ್ಲ
ಅದಕ್ಕಾಗಿ ಬರಿಗೈಲಿ ಬಂದೆ ನೀನೇಕೆ ಬೆರಗಾಗಿ ನಿಂದೆ
ಹೆ : ಶ್ರೀರಂಗಪಟ್ಟಣದಿ ಹಾಯಾಗಿ ಮಲಗೋನೆ
ಈ ದಾರಿಯಲ್ಲೇಕೆ ಬಂದೆ ನನಗಾಗಿ ನೀನೇನು ತಂದೆ
ಗ : ನಿನ್ನಾಸೆ ಹೆಚ್ಚಾಗಿ ನಿನ್ನಿಂದ ಹುಚ್ಚಾಗಿ ಮೈಮರೆತು ನಾನೋಡಿ ಬಂದೆ...
ನಿನಗಾಗಿ ನನ್ನನ್ನೇ ತಂದೆ
ಹೆ : ನುಡಿಗಿಂತ ನಡೆ ಚೆನ್ನ ನಡೆಗಿಂತ ನಡು ಚೆನ್ನ
ರತಿಗಿಂತ ತಾ ತಾನೇ ಚೆನ್ನ ನೀನದಕೆ ಬಿಡಲಾರೆ ನನ್ನ
ಗ : ಮಾತಿಂದ ಹಿತವೇನು ಯಾರಿಂದ ನನಗೇನು
ಕಣ್ಣಲ್ಲೇ ಹೀಗೇಕೆ ಕೊಲ್ಲುವೆ ಒಲವಿಂದ ಬಳಿ ಬಾರೆ ಚೆಲುವೆ
ಹೆ : ಶ್ರೀರಂಗಪಟ್ಟಣದಿ ಹಾಯಾಗಿ ಮಲಗೋನೆ ಈ ದಾರಿಯಲ್ಲೇಕೆ ಬಂದೆ
ಗಂಡು : ನಿನಗಾಗಿ ನಾನಿಲ್ಲಿ ಬಂದೆ
ಗ : ಹುಡುಗಾಟ ಬೇಕಿಲ್ಲ ಒಳಗಿಲ್ಲಿ ಬಾ ನಲ್ಲೇ ನಿನಿಲ್ಲದೇ ನಾನು ಇಲ್ಲ
ಈ ವಿರಹ ನಾ ತಾಳೇನಲ್ಲ ....
ಹೆಣ್ಣು : ನಿನ್ನಿಂದ ಬಾಳೆಲ್ಲ ಬೆಳೆದಿಂಗಳಾಯ್ತಲ್ಲ
ತೋಳಿಂದ ಬಳಸೆನ್ನ ನಲ್ಲ ನಮಗಾಗಿ ಏಕಾಂತವೆಲ್ಲ
ಗ : ಬೇಲೂರು ಗುಡಿಯಲ್ಲಿ ಶಿಲೆಯಾಗಿ ನಿಂತೋಳೆ
ಇಂದೇನು ನೀ ಹೇಗೆ ಬಂದೆ.. ನನಗೆಂದು ನೀನೇನು ತಂದೆ
ಹೆ : ನನ್ನ ಮಾತೆ ಸಾಕಲ್ಲ ಅದಕ್ಕಿಂತ ಸಿಹಿಯಲ್ಲ
ಅದಕ್ಕಾಗಿ ಬರಿಗೈಲಿ ಬಂದೆ ನೀನೇಕೆ ಬೆರಗಾಗಿ ನಿಂದೆ..
ಗಂಡು : .. ಆ.... ಹಾ...ಹಾ... ಆಹಾ.... ಹಾ ...
ಹೆಣ್ಣು : ಲಾಲಾಲ ಲಾಲಾಲ ಲಾಲಾಲ ಲಾಲಾಲ
ಗಂಡು : ಲಾಲಾಲ ಲಾಲಾಲ ಲಾಲಾಲ ಲಾಲಾಲ
------------------------------------------------------------------------------------------------------------------------
ದೇವರು ಕೊಟ್ಟ ವರ (1976) - ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕೀ
ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ, ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ, ರಕ್ಷಣೆ ಉಂಟೇನು
ಕೈಹಿಡಿದಾತನೆ ಕಂಗಾಲಾದರೆ, ಹೆಣ್ಣಿನ ಪಾಡೇನು
ಮುರಿದಿಹ ಕಾಲಿಗೆ ಮರಗಾಲುಂಟು, ಏನೂ ಭಯವಿಲ್ಲ
ಮುರಿದಿಹ ಕಾಲಿಗೆ ಮರಗಾಲುಂಟು, ಏನೂ ಭಯವಿಲ್ಲ
ಸೊಂಟವೆ ಮುರಿದರೆ ನಿಲ್ಲುವುದುಂಟೆ, ನರಕವೆ ಬಾಳೆಲ್ಲ, ನರಕವೆ ಬಾಳೆಲ್ಲ
ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ, ನೈದಿಲೆ ಗತಿಯೇನು
ಹೃದಯವೆ ಬೆದರಿ ನಡುಗುತಲಿರಲು, ದೇಹದ ಗತಿಯೇನು
ಹೃದಯವೆ ಬೆದರಿ ನಡುಗುತಲಿರಲು, ದೇಹದ ಗತಿಯೇನು
ನಿಂತಿಹ ನೆಲವೆ ಕಂಪಿಸಿ ಕುಸಿದರೆ, ಬದುಕುವ ಪರಿಯೇನು, ಬದುಕುವ ಪರಿಯೇನು
ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ, ನೈದಿಲೆ ಗತಿಯೇನು
ಆಸರೆ ನೀಡುವ ಮರವೇ ಮುರಿದರೆ, ಬಳ್ಳಿಯು ಉಳಿಯೋಲ್ಲ
ಆಸರೆ ನೀಡುವ ಮರವೇ ಮುರಿದರೆ, ಬಳ್ಳಿಯು ಉಳಿಯೋಲ್ಲ
ಭರವಸೆ ನೀಡುವ ನೀವೆ ಹೆದರೆ, ಬಾಳೇ ನನಗಿಲ್ಲ, ಬಾಳೇ ನನಗಿಲ್ಲ
ಕಂಗಳೇ ಕರಗಿ ನೀರಾದಾಗ, ಕಾಣುವುದುಂಟೇನು
ತಿಂಗಳ ಬೆಳಕೆ ಬಿಸಿಲಾದಾಗ, ನೈದಿಲೆ ಗತಿಯೇನು
ನಂಬಿದ ದೇವರೆ ಹೆದರುತ ನಿಂತರೆ, ರಕ್ಷಣೆ ಉಂಟೇನು
ಕೈಹಿಡಿದಾತನೆ ಕಂಗಾಲಾದರೆ, ಹೆಣ್ಣಿನ ಪಾಡೇನು
--------------------------------------------------------------------------------------------------------------------------
ದೇವರು ಕೊಟ್ಟ ವರ (1976) - ಇಂದಿನ ಈ ಇರುಳು ನಮ್ಮಿ ಬಾಳಲೆ ಮೊದಲು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ.
ಲಾಲಲ ಆಹಾಹಾಹಾ ಉಂಹೂಂ .. ಹೂ...ಲಾಲಲ
ಇಂದಿನ ಈ ಇರುಳು ನಮ್ಮಿ ಬಾಳಲೆ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
ಇಂದಿನ ಈ ಇರುಳು ನಮ್ಮಿ ಬಾಳಲೆ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
ತಾವರೆ ಮೊಗವಾಗಿ ನೈದಿಲೆ ಹೂಗಳು ಕಣ್ಣಾಗಿ
ಹುಣ್ಣಿಮೆ ಹೆಣ್ಣಾಗಿ ಧರೆಗೆ ಬಂದಿತೋ ನನಗಾಗಿ
ಇನ್ನೆಂದು ನಿನ್ನ ಬಿಡಲಾರೆ ಚಿನ್ನ
ನಾ ದುಂಬಿಯಂತಾಗಿ ಸವಿಯಲೇ ಜೇನ
ಇಂದಿನ ಈ ಇರುಳು ನಮ್ಮಿ ಬಾಳಲೆ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
ನಾಚಿಕೆ ನಿನಗೇಕೆ ಚೆಲುವೆ ಈ ಪರಿಭಯವೇಕೆ
ತಾಮಸವಿನ್ನೇಕೆ ಬಾರೆ ಪೂರೈಸಿ ಬಯಕೆ
ಈ ಮೌನವೇನು ಬಿನ್ನಾಣವೇನು ಏಕಾಂತವಿರುವಾಗ ಈ ದೂರವೇನು
ಇಂದಿನ ಈ ಇರುಳು ನಮ್ಮಿ ಬಾಳಲೆ ಮೊದಲು
ಕಂಗಳು ಕೂಗಿರಲು ಬಂದೆ ಸನಿಹಕೆ ಆಸೆಯೊಳು
--------------------------------------------------------------------------------------------------------------------------
ದೇವರು ಕೊಟ್ಟ ವರ (1976) - ಹಾಯಾಗಿದೆ ಈ ದಿನ ಮನ ಹಗುರಾಗಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
--------------------------------------------------------------------------------------------------------------------------
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ಕಂಡಾಗ ನಿನ್ನ ನೂರಾರು ವೀಣೆ ಮಿಡಿದಂತೆ ಭಾವ
ಎದೆಯಲ್ಲಿ ತಾನೇ ಆ ರಾಗಕೆ ಆಅಹ್ ಆ ಆಹಾ ಮನಸೋತೆ ನಾನೇ
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ಸವಿ ಮಾತಿನಲ್ಲೇ ಸುಖ ತಂದೆ ನೀನು
ಕುಡಿ ನೋಟದಲ್ಲೇ ಸೆರೆ ಆದೆ ನಾನು
ಈ ಅಂದಕೆ ಆಅಹ್ ಆಅಹ್ ಮೈಮರೆತೆ ನಾನು
ಹಾಯಾಗಿದೆ ಈ ದಿನ ಮನ ಹಗುರಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ತೂಗಾಡಿದೆ ತನು ಹೂವಾಗಿದೆ ಆನಂದವಾಗಿದೆ
ದೇವರು ಕೊಟ್ಟ ವರ (1976) - ಮೊಗ್ಗೊಂದು ನಗುನಗುತ ಹೂವಾಯಿತು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಬೆಂಗಳೂರು ಲತಾ
ಮೊಗ್ಗೊಂದು ನಗುನಗುತಾ ಹೂವಾಯಿತು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಬೆಂಗಳೂರು ಲತಾ
ಮೊಗ್ಗೊಂದು ನಗುನಗುತಾ ಹೂವಾಯಿತು
ತಿಳಿಯಾದ ಕೆಂಬಣ್ಣ ಮೈ ತುಂಬಿತು
ಹೊಸ ಆಸೆಯ ಜೇನು ಹರಿದಾಡಿತು
ಯೌವ್ವನದ ಪರಿಮಳವ ಹೊರಸೂಸಿತು
ಮೊಗ್ಗೊಂದು ನಗುನಗುತಾ ಹೂವಾಯಿತು
ಹೊಸ ಬಾಳು ಬಾಗಿಲು ತೆರೆದಾಗಿದೆ
ಹೊಸ ಕಾಂತಿ ತನುವಲ್ಲಿ ಮನೆ ಮಾಡಿದೆ
ಹೊಸ ಮಿಂಚು ಕಣ್ಣಲ್ಲಿ ಸುಳಿದಾಡಿದೆ
ಹೊಸದೇನೋ ಬೇಕೆಂದು ಮನಸಾಗಿದೆ
ಮೊಗ್ಗೊಂದು ನಗುನಗುತಾ ಹೂವಾಯಿತು
ಮರಿ ಕೋಗಿಲೆಯು ಹಾರುವಂತಾಗಿದೆ
ಇಂಪಾದ ಹಾಡಲ್ಲಿ ಓಲಾಡಿದೆ
ನೂರೆಂಟು ಕನಸಲ್ಲಿ ಕುಣಿದಾಡಿದೆ
ಸಂಗಾತಿ ಬೇಕೆಂದು ಮನ ಕಾಡಿದೆ
ಮೊಗ್ಗೊಂದು ನಗುನಗುತಾ ಹೂವಾಯಿತು
ತಿಳಿಯಾದ ಕೆಂಬಣ್ಣ ಮೈ ತುಂಬಿತು
ಹೊಸ ಆಸೆಯ ಜೇನು ಹರಿದಾಡಿತು
ಯೌವ್ವನದ ಪರಿಮಳವ ಹೊರಸೂಸಿತು
ಮೊಗ್ಗೊಂದು ನಗುನಗುತಾ ಹೂವಾಯಿತು
--------------------------------------------------------------------------------------------------------------------------
No comments:
Post a Comment