118. ಆಕಸ್ಮಿಕ (1993)



ಆಕಸ್ಮಿಕ ಚಿತ್ರದ ಹಾಡುಗಳು 
  1. ಬಾಳುವಂಥ ಹೂವೇ ಬಾಡುವಾಸೆ ಏಕೇ 
  2. ಅನುರಾಗದ ಭೋಗಾ
  3.  ಈ ಕಣ್ಣಿಗೂ ಹೆಣ್ಣಿಗೂ ಏನೋ ಸ್ನೇಹವೋ 
  4. ಆಗುಂಬೆಯಾ ಪ್ರೇಮ ಸಂಜೆಯಾ 
  5. ಹುಟ್ಟಿದರೇ ಕನ್ನಡ ನಾಡಲ್ಲ ಹುಟ್ಟಬೇಕು 
ಆಕಸ್ಮಿಕ (1993) - ಬಾಳುವಂತ ಹೂವೆ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯಕರು : ಡಾ. ರಾಜ್

ಬಾಳುವಂಥ  ಹೂವೆ ಬಾಡುವ ಆಸೆ ಏಕೆ
ಬಾಳುವಂಥ  ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂಥ  ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ ಮದ್ಯ ಮದಗಳಿಂದ ಚಿಂತೆ ಬೇಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು
ಬಾಳುವಂಥ  ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ

ಬಾಳ ಕದನದಲ್ಲಿ ಭರವಸೆಗಳು ಬೇಕು ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜಯಿಸಬೇಕು ನಾಗರಿಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೇ ಜಗವನೇಕೆ ನೀ ದೂರುವೇ
ಬಾಳುವಂಥ  ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂಥ  ಹೂವೆ ಬಾಡುವ ಆಸೆ ಏಕೆ ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
--------------------------------------------------------------------------------------------------------------------------

ಆಕಸ್ಮಿಕ (1993) - ಹುಟ್ಟಿದರೆ ಕನ್ನಡನಾಡಲ್ಲಿ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯನ - ಡಾ. ರಾಜ್‍ಕುಮಾರ್


ಹೇ ಹೇ ತಾಜೂ.. ತಾರ್ ತಕಟಟತ   ಲಾಲ ತಕಟಟಟ ಲಾಲ ತಕಟಟಟ ಹೇ ಹೇ ...
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ ವಿಧಿ ಅಲೆದಾಡಿಸುವ ಬಂಡಿ...
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಕಾಶಿಲಿ ಸ್ನಾನ ಮಾಡು   ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರನ  ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕ್ಕೆ ಒಂದೇ ಭಾಷೆ
ಕನ್ನಡಾ..ಕನ್ನಡಾ..ಕಸ್ತೂರಿ ಕನ್ನಡಾ
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ ವಿಧಿ ಗುರಿ ತೋರಿಸುವ ಬಂಡಿ...  

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ ....ಗೋಕಾಕಿನ ಕನ್ನಡಾ..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ ವಿಧಿ ದಡ ಸೇರಿಸುವ ಬಂಡಿ...  

ಬಾಳಿನ ಬೆನ್ನು ಹತ್ತಿ  ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ  ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸಂ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ....ಇಲ್ಲಿಯೇ.... ಎಂದಿಗೂ ನಾನಿಲ್ಲಿಯೇ.....
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ, ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ ವಿಧಿ ದಡ ಸೇರಿಸುವ ಬಂಡಿ...  
ಆಆಆ.... ಆಆಆ..ಆಆಆ.....  
-------------------------------------------------------------------------------------------------------------------------

ಆಕಸ್ಮಿಕ (೧೯೯೩) - ಆಗುಂಬೆಯಾ ಪ್ರೇಮಸಂಜೆಯಾ
ರಚನೆ ಮತ್ತು ಸಂಗೀತ: ಹಂಸಲೇಖ  ಗಾಯಕರು: ಡಾ. ರಾಜಕುಮಾರ್, ಮಂಜುಳಾ ಗುರುರಾಜ್


ಗಂ:ಹೇ..ಹೇ. ಹೇ.. ಹೇ.. ಹೋಹೋ.. ಹೋಹೋ ..ಹೋಹೋ... ಹೋಹೋ.
      ಅಂಬರದ ಅಂಜುರದಿ ನೇಸರನು  ಅಂಗೈಯ್ಯಿಗೆ ಹತ್ತಿರದಿ ನೇಸರನು
      ಕಾಸಗಳ ಕುಂಕುಮದ ನೇಸರನು  ಬಾನಗಲ ಭೀಗುವಲ್ಲಿ ನೇಸರನು
      ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ
ಗಂ: ಆಗುಂಬೆಯಾ ಪ್ರೇಮಸಂಜೆಯಾ
       ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
       ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ...  ಗೆಳತಿಯೆ
ಹೆ: ಆಗುಂಬೆಯಾ ಪ್ರೇಮಸಂಜೆಯಾ
     ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
      ಓ ಗೆಳೆಯೆನೆ.... ಓ ಗೆಳೆಯೆನೆ... ಓ ಗೆಳೆಯೆನೆ....  ಗೆಳೆಯೆನೆ

ಹೆ: ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
     ಕೊಡುವೆ ನಿನಗೆ ಕೊಡುವೇ  ಈ ನನ್ನಾ ಹೃದಯ
ಗಂ: ಆಆಆ ... ನದಿಯ ಮೊಗದಲ್ಲಿ ರವಿ ತಂಪಾಗೊ ಸಮಯ
       ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಹೆ: ಆ... ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಗಂ: ಆ...  ಆಸೆ ತೀರದಂತೆ ನಾವ್ ...
ಹೆ: ಹಕ್ಕಿಗಳ ಅಂತರಂಗ ಹಾಡುತಿದೆ, ಹೂವುಗಳ ವರ್ಣಗಳ ಮಿಂಚುತಿದೆ
ಗಂ: ಗುಡ್ಡಗಳ ತಂಬೆಲರು ಬೀಸುತಿದೆ, ಎಲ್ಲ ಮರ ಹಣ್ಣುಗಳು ತೂಗುತಿವೇ
ಹೆ: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ
     ಆಗುಂಬೆಯಾ ಪ್ರೇಮಸಂಜೆಯಾ
ಗಂ: ಆಗುಂಬೆಯಾ ಪ್ರೇಮಸಂಜೆಯಾ ಮರೆಯಲಾರೆ ನಾನು ಎಂದಿಗೂ
       ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ...  ಗೆಳತಿಯೆ

ಗಂ: ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
      ಬದುಕೆ ಬನವಾಗಿರಲು ನಿಜ ನೀನೆ ಕಾರಣ
ಹೆ: ಓ... ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
     ಕನಸೆ ನನಸಾಗಿರಲು ನಿಜ ನೀನೆ ಕಾರಣ
ಗಂ: ಓ... ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಹೆ: ಇನ್ನು ನಾನು ನೀನು ಒಂದ್ ...
ಗಂ: ಶ್!...  ಏಳು ಬಣ್ಣ ಒಂದು ಮಾಡೊ ನೇಸರನು
      ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ಹೆ: ನಾಳೆಗಳ ಹೊತ್ತು ತರೋ ನೇಸರನು
     ಪ್ರೇಮಿಗಳ ಕದ್ದು ಕದ್ದು ನೋಡುವನು
ಗಂ: ನನ್ನ ನಿನ್ನ ಪ್ರೀತಿ ಕಂಡ ಸೂರ್ಯ ಮೆಲ್ಲ ಜಾರಿಕೊಂಡ
      ಆಗುಂಬೆಯಾ ಪ್ರೇಮಸಂಜೆಯಾ
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಮರೆಯಲಾರೆ ನಾನು ಎಂದಿಗೂ
       ಓ ಗೆಳತಿಯೆ .... ಓ ಗೆಳತಿಯೆ... ಓ ಗೆಳತಿಯೆ...  ಗೆಳತಿಯೆ
----------------------------------------------------------------------------------------------------------------------

ಆಕಸ್ಮಿಕ (೧೯೯೩)  - ಈ...  ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ರಚನೆ ಮತ್ತು ಸಂಗೀತ: ಹಂಸಲೇಖ ಗಾಯಕ/ನಟ: ಡಾ. ರಾಜಕುಮಾರ್

ಗಂಡು : ಆ..        ಹೆಣ್ಣು : ಆ....          ಗಂಡು : ಆ..        ಹೆಣ್ಣು : ಆ....
ಗಂಡು : ಆ..        ಹೆಣ್ಣು : ಆ...           ಗಂಡು : ಆ..        ಹೆಣ್ಣು : ಆ....
ಗಂಡು : ಆ..        ಹೆಣ್ಣು : ಆ....         ಗಂಡು : ಆ..        ಹೆಣ್ಣು : ಆ....
ಗಂಡು : ಸ ..        ಹೆಣ್ಣು : ರಿ ....       ಗಂಡು : ಸ ..        ಹೆಣ್ಣು : ಗ ....
ಗಂಡು : ರಿ ..        ಹೆಣ್ಣು : ಮ....       ಗಂಡು : ಗ ..        ಹೆಣ್ಣು : ಪ .... 
ಗಂಡು : ನಿ ..        ಹೆಣ್ಣು : ಸ ....       ಗಂಡು : ನಿ ..        ಹೆಣ್ಣು : ರಿ .... 
ಗಂಡು : ಸ ..        ಹೆಣ್ಣು : ಗ ....       ಗಂಡು : ರಿ ..        ಹೆಣ್ಣು : ಮ .... 
ಗಂಡು : ಓ..ಓ....ಓ...ಓ.....        ಹೆಣ್ಣು : ಓ..ಓ....ಓ...ಓ.....
ಗಂಡು : ಓ..ಓ....ಓ...ಓ.....        ಹೆಣ್ಣು : ಓ..ಓ....ಓ...ಓ.....
ಗಂಡು : ಈ...  ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
            ಈ...  ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
            ನೋಡಲು ಮೋಹಕ ಕೂಡಲು ಪ್ರೇರಕ ಏನು ಮಾಯಾವೋ....
            ಈ...  ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
           ಈ..  ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಹೆಣ್ಣು : ಓಓಓಓಓ... ಓಓಓ ಓಓಓಓಓ... ಓಓಓ... ಓಓಓಓಓ... ಓಓಓ..ಆಆಆ.... ಆಆಆಅ..
ಗಂಡು : ಮನದ ಕೊಳದ ತಿಳಿಯ ಜಲದ ಮೇಲೆ ಮನವೆಸೆದು
          ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
          ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
          ಇಹದ ಪರದ ಜನುಮಾಂತರದ ಕಥೆಯ ಪುಟ ತೆರೆದು
          ಆಕಸ್ಮಿಕ ಎಂದಳೀ ಚಲುವ ಬಾಲೇ ಅನಿರೀಕ್ಷಿತ ತಂದಳೀ ಒಲವ ಮಾಲೆ
          ಗಂಧದ ಕನ್ಯೆಯೋ, ದಂತದ ಬೊಂಬೆಯೋ ಏನು ಮಾಯೆಯೋ
          ಈ..  ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
          ಈ..  ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಗಂಡು : ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
            ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
           ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
           ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
           ಆಕಸ್ಮಿಕ ಆಗದಿ ಪ್ರೇಮ ಯೋಗ ಅನಿರೀಕ್ಷಿತ ಅನಿಸದಿ ಪ್ರಣಯ ರಾಗ
           ಸ್ವರ್ಗದಿ ಸ್ಪರ್ಶವು ಸೌಖ್ಯದಿ ಸಂಗವು ಏನು ಮಾಯೆಯೋ....
           ಈ...  ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
           ಈ...  ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
-------------------------------------------------------------------------------------------------------------------------

ಆಕಸ್ಮಿಕ (೧೯೯೩)
ರಚನೆ ಮತ್ತು ಸಂಗೀತ: ಹಂಸಲೇಖ ಗಾಯಕ: ಡಾ. ರಾಜಕುಮಾರ್

ಆಆಆ... ಆಆಆ .. ಅನುರಾಗವ ಭೋಗಾ ಸುಖದಾ
ಅನುರಾಗವ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗವ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ .. ಅನುರಾಗವ

ಮನ ಮೋಹನಾ..  ಆಂಗೀ  ಮುಖ ತೋರಲೇ..  ನೀರೇ
ಮನ ಮೋಹನಾ..  ಆಂಗೀ..  ಆಆಆಆ ಆಅಅಅಅ  ಆಆಆ... ಆಆಆ 
ಮನ ಮೋಹನಾ..  ಆಂಗೀ  ಮುಖ ತೋರಲೇ ನೀರೇ  ಮನ ಮೋಹನಾ.....
ಮನ ಮೋಹನಾ..  ಆಂಗೀ  ಮುಖ ತೋರಲೇ..  ನೀರೇ ಮನ ಮೋಹನಾ..... 

ಮನ ಮೋಹನಾ.. ಆಂಗೀ  ಮುಖ ತೋರಲೇ..  ನೀರೇ
ಧ್ಯಾನ ನಿನ್ನೊಳಗೇ ... ಧ್ಯಾನ ನಿನ್ನೊಳಗೆ ಎನ್ನ ಸಾಮ್ರಾಜ್ಯ ಇದೇ   
ಅನುರಾಗವ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ...  
ಅನುರಾಗವ ... ಅನುರಾಗವ ... ಅನುರಾಗವ ...
ಅನುರಾಗವ ... ಆಆಆ...  ಅನುರಾಗವ ...
ಅನುರಾಗವ ...ಆಆಆಅ... ಅನುರಾಗವ ... ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ 
ಅನುರಾಗವ ...ಆಆಆಅ... ಅನುರಾಗವ ... ಅನುರಾಗವ .
-------------------------------------------------------------------------------------------------------------------------

No comments:

Post a Comment