110. ಜ್ವಾಲಾಮುಖಿ (1985)


ಜ್ವಾಲಾಮುಖಿ ಚಿತ್ರದ ಹಾಡುಗಳು 
  1. ಬಾಳೇ ಪ್ರೇಮಗೀತೆ ನಲ್ಲ ನಲ್ಲೆ ಸೇರಿದಾಗ 
  2. ಏಕೋ ಏನೋ ಈ ನನ್ನ ಮನವು 
  3. ಹೇಳುವುದು ಒಂದು ಮಾಡೋದು ಇನ್ನೊಂದು 
  4. ನೋಡಿ ನೋಡಿ ಎಲ್ಲಾ ನೋಡಿ 
ಜ್ವಾಲಾಮುಖಿ (1985) - ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಡಾ|| ರಾಜ್‌ಕುಮಾರ್

ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ
ಬಾಳೇ ಪ್ರೇಮ ಗೀತೆ   ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
ಬಾಳೇ ಪ್ರೇಮ ಗೀತೆ  ನಲ್ಲ ನಲ್ಲೆ ಸೇರಿದಾಗ

ಆಡೋ ಮಾತೂ ಹಾಡೇ  ಮೌನ ಕೂಡ ಹಾಡೇ
ಆಡೋ ಮಾತೂ ಹಾಡೇ   ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗಿ ಕೂಗಿ ಹೀಗೇ
ಹರುಷ ತರುತಿದೇ
ಬಾಳೇ ಪ್ರೇಮ ಗೀತೆ  ನಲ್ಲ ನಲ್ಲೆ ಸೇರಿದಾಗ

ನೀಲೀ ಬಾನು ಎಲ್ಲೋ   ನಿಂತ ಭೂಮಿ ಎಲ್ಲೋ
ನೀಲೀ ಬಾನು ಎಲ್ಲೋ   ನಿಂತ ಭೂಮಿ ಎಲ್ಲೋ
ತೇಲುವ ಬಿಳಿ ಮುಗಿಲಲೆಯಲಿ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೇ ಆಗೀ
ಮನವು ನಲಿದಿದೇ
ಬಾಳೇ, ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
ಬಾಳೇ ಪ್ರೇಮ ಗೀತೆ  ನಲ್ಲ ನಲ್ಲೆ ಸೇರಿದಾಗ
-------------------------------------------------------------------------------------------------------------------------

ಜ್ವಾಲಮುಖಿ (1985) - ಹೇಳುವುದು ಒಂದು ಮಾಡುವುದು ಇನ್ನೊಂದು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಡಾ|| ರಾಜ್‌ಕುಮಾರ್ ಹಾಗು ಬೆಂಗಳೂರು ಲತಾ


ಆಆಆಆಅ
ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು|
ನಂಬುವುದು ಹೇಗೊ ಕಾಣೆ, ಪದ್ಮಾವತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು|
ಹೇಳುವುದು ಒಂದು ಮಾಡುವುದು ಇನ್ನೊಂದು|
ನಂಬುವುದು ಹೇಗೊ ಕಾಣೆ, ಪದ್ಮಾವತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು|
ಪಮಪ ದದಪ ಪಮಪ ದದಪ ಪಮಪದದಪ ಪಮಪದದಪ ಮಗರಿಸರೀ....
ನಿದನಿ ಸರಿಸ ನಿದನಿ ಸರಿಸ ನಿದನಿಸರಿಸ ನಿದನಿಸರಿಸ ಮಗರಿಸರೀ....ರಿ, ಎನ್ ರೀ?

ಸಾವಿರ ಸುಳ್ಳನು ಹೇಳಿ ಮದುವೆ ಮಾಡು ಎಂದರು|
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು||
ಮನೆಯೆಲ್ಲೆ ಇರುವೆನು ಎಂದ, ಅಹ, ಅವರು ಏನು ಮಾಡಿದರು| ಏನ್ ಮಾಡಿದ್ರು?
ಗುಲಗಂಜಿಗೆ ಕನ್ನಾ ಕಕ್ಕು, ಒಹೊ, ಕಾಣದೆಂದು ಹೇಳುವರು|| ಹಾ...
ಮೈಸೂರು ಎಲ್ಲಿ ಎಂದು ಏಕೆ ಮರೆತುಹೋದರೋ....ಮೈಸೂರು ಎಲ್ಲಿ ಎಂದು ಹೇಗೆ ಮರೆತುಹೋದರೋ....|
ನಿಜವನ್ನೇ ಹೇಳಿ ಜಗದಿ, ಯಾರು ಸುಖವ ಹೊಂದಿದರು.....?
ಹೇಳುವುದು ಒಂದು ಮಾಡುವುದು ಇನ್ನೊಂದು|
ನಂಬುವುದು ಹೇಗೊ ಕಾಣೆ, ಪದ್ಮಾವತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು|

ಶ್ರೀಮತಿಯನು ಪ್ರಶ್ಣಿಸಲೆಂದೆ ಸಂಗೀತ ಕಲಿತದ್ದೇನು?|
ಕೈಹಿಡಿವ ಮುಂಚೆ ನುಡಿದ ಮಾತು ಮರೆತು ಹೋಯ್ತೇನು?||
ಗಂಗೆಯಂತೆ ಮಾತನಾಡಿ ಅಂದು ಕತೆಯ ಹೇಳಿದ್ದೇನು?|
ಅವಳ ಹಾಗೆ ಒಂದು ಮಗುವಾ ಕೈಗೆ ಕೊಡದೆ ಹೋದದ್ದೇನು?||
ಅತ್ತೆಯೆದುರೆ ಈ ಮಾತಾಡಲು ಸಂಕೋಚ ಬರದೇನು?, ಅತ್ತೆಯೆದುರೆ ಈ ಮಾತಾಡಲು ಸಂಕೋಚ ಬರದೇನು?|
ರೀ ಮೊಮ್ಮೊಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು, ಮೊಮ್ಮೊಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು||
ಹೇಳುವುದು ಒಂದು ಮಾಡುವುದು ಇನ್ನೊಂದು|
ನಂಬುವುದು ಹೇಗೊ ಕಾಣೆ, ಪದ್ಮಾವತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು|
ಹೇಳುವುದು ಒಂದು ಮಾಡುವುದು ಇನ್ನೊಂದು|
------------------------------------------------------------------------------------------------------------------------

ಜ್ವಾಲಾಮುಖಿ (1985) - ಏಕೊ ಏನೊ ಈ ನನ್ನ ಮನವು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗರಾವ್ ಗಾಯನ: ಡಾ.ರಾಜ್‍ಕುಮಾರ್, ಬೆಂಗಳೂರು ಲತಾ


ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೇ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ
ಎಂದೂ ಕಾಣೆ ನೂರೆಂಟು ಬಯಕೆ
ಎಂದೂ ಕಾಣೆ ನೂರೆಂಟು ಬಯಕೆ  ಹೊಸ ರಾಗವನ್ನು ಹಾಡಿದೆ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೇ
ಎಂದೂ ಕಾಣೆ ನೂರೆಂಟು ಬಯಕೆ
ಎಂದೂ ಕಾಣೆ ನೂರೆಂಟು ಬಯಕೆ   ಹೊಸ ರಾಗವನ್ನು ಹಾಡಿದೆ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ

ಬಿಸಿಲಾದರೇನು, ಮಳೆಯಾದರೇನು ಇಂದೇಕೊ ನಾಕಾಣೆ ಹಾಯಾಗಿದೇ
ಹೂವಾದರೇನು ಮುಳ್ಳಾದರೇನು ಇಂದೇನೊ ನನಗೆಲ್ಲ ಸೊಗಸಾಗಿದೆ
ಎದೆಯಲ್ಲಿ ಸಂತೋಷ ಕಡಲಾಗಿದೆ
ಎದೆಯಲ್ಲಿ ಸಂತೋಷ ಕಡಲಾಗಿದೆ  ಮನದಲ್ಲಿ ಹೊಸ ಆಸೆ ಕುಣಿದಾಡಿದೆ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೇ
ಬದುಕೆಲ್ಲ ಹೀಗೆ ಉಲ್ಲಾಸದಿಂದ ಒಂದಾಗಿ ಇರುವಾಸೆ ನನಗಾಗಿದೆ
ಅನುರಾಗ ತಂದ ಆನಂದದಿಂದ  ಈ ಬಾಳ ಸಂಗೀತ ಹಿತವಾಗಿದೇ 
ನೀನಾಡೊ ಮಾತೆಲ್ಲ ಸವಿಯಾಗಿದೇ
ನೀನಾಡೊ ಮಾತೆಲ್ಲ ಸವಿಯಾಗಿದೆ ಇಂದೇಕೊ ನನಗೆಲ್ಲ ಹೊಸದಾಗಿದೆ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೇ
ಎಂದೂ ಕಾಣೆ ನೂರೆಂಟು ಬಯಕೆ
ಎಂದೂ ಕಾಣೆ ನೂರೆಂಟು ಬಯಕೆ  ಹೊಸ ರಾಗವನ್ನು ಹಾಡಿದೇ
ಏಕೊ ಏನೊ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೇ..  
ಆಆಆಆಆ ಆಆಆಆಆ ಆಆಅ ಹಾಹಾ ಆಆಅ ಹಾಹಾ
--------------------------------------------------------------------------------------------------------------------------

ಜ್ವಾಲಾಮುಖಿ (1985) - ಏಕೊ ಏನೊ ಈ ನನ್ನ ಮನವು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗರಾವ್ ಗಾಯನ: ಡಾ.ರಾಜ್‍ಕುಮಾರ್, ಎಸ್.ಜಾನಕೀ


ಹೆಣ್ಣು : ಆ.... ಆಆಆ...
          ನೋಡಿ ನೋಡಿ ನೋಡಿ ಎಲ್ಲ ನೋಡಿ ಅಂದ ನೋಡಿ ಚೆಂದ ನೋಡಿ
          ಹೊಳೆವ ಕಣ್ಣ ಮೈಯ ಬಣ್ಣ ಕುಣಿವ ಹೆಣ್ಣ ಚೆನ್ನ ನೋಡಿ
          ನೋಡಿ ನೋಡಿ ನೋಡಿ ಎಲ್ಲ ನೋಡಿ ಅಂದ ನೋಡಿ ಚೆಂದ ನೋಡಿ

         ಆ... ಆ... ಆ... ಆ... ಆ... ಆ..
         ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
         ತೋಳಿನಿಂದ ತನವಿಗೊಮ್ಮೆ ಬಳಿಸಿ ಹಾಡಿರಿ
         ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
         ತೋಳಿನಿಂದ ತನವಿಗೊಮ್ಮೆ ಬಳಿಸಿ ಹಾಡಿರಿ
         ಕಾಣದಂತೆ ಸುಖವ ಕೊಡುವೇ ಬೇಗ ಬನ್ನೀರಿ 
         ಕಾಣದಂತೆ ಸುಖವ ಕೊಡುವೇ ಬೇಗ ಬನ್ನೀರಿ 
         ನೀವು ಆಗ ಇನ್ನೂ ಇನ್ನೂ  ಬೇಕು ಎನ್ನುವಿರೀ 
         ನೋಡಿ ನೋಡಿ ನೋಡಿ ಎಲ್ಲ ನೋಡಿ ಅಂದ ನೋಡಿ ಚೆಂದ ನೋಡಿ
         ಹೊಳೆವ ಕಣ್ಣ ಮೈಯ ಬಣ್ಣ ಕುಣಿವ ಹೆಣ್ಣ ಚೆನ್ನ ನೋಡಿ
     
ಗಂಡು :  ಆ..ಆ... ಆ... ಆ ಸೂರ್ಯ ಚೆಲ್ಲುವನು ಬೆಳಕನ್ನು ಜಗಕೆ
            ಕಾರ್ಮೋಡ ಸುರಿಸುವುದು ಮಳೆಯನ್ನೂ ಭೂವಿಗೆ
            ಈ ಭೂಮಿ ನೀಡುವುದು ಬೆಳೆಯನ್ನು ಜನಕೆ
            ನೆಮ್ಮದಿಯ  ನೀಡಲು ಈ ಲೋಕಕೆ .....
            ಇದನ್ನರಿತೂ ಬಾಳಿದರೇ ಭೂಮಿಯೇ ಸ್ವರ್ಗ...
            ಬರಿ ಸ್ವಾರ್ಥಿಗಳೇ ಬದುಕಿದರೇ ಲೋಕವೇ ನರಕ
            ಲೋಕವೇ ನರಕ
ನೋಡಿ ನೋಡಿ ನೋಡಿ ಎಲ್ಲ ನೋಡಿ ಅಲ್ಲಿ ನೋಡಿ ಒಮ್ಮೆ ನೋಡಿ
ಮತ್ತಿನಿಂದ ಮುಚ್ಚಿಕೊಂಡ ಕಣ್ಣನೊಮ್ಮೆ ಬಿಟ್ಟು ನೋಡಿ...
ನೋಡಿ ನೋಡಿ ನೋಡಿ ಎಲ್ಲ ನೋಡಿ ಅಲ್ಲಿ ನೋಡಿ ಒಮ್ಮೆ ನೋಡಿ

ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ  
ನರಕದಲ್ಲಿ ನರಳುತಿರುವ ಜನರ ಕಾಣಿರಿ 
ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ  
ನರಕದಲ್ಲಿ ನರಳುತಿರುವ ಜನರ ಕಾಣಿರಿ 
ವಿಸ್ಕಿ ಬ್ರಾಂದಿ ಹೆಂಡವನ್ನು ನಾಳೆ ಕುಡಿಯಿರಿ 
ಕುಡಿವ ನೀರಿಗಾಗಿ ಅಳುವ ಜನರ ನೋಡಿರಿ   
ನೋಡಿ ನೋಡಿ ನೋಡಿ ಎಲ್ಲ ನೋಡಿ ಅಲ್ಲಿ ನೋಡಿ ಒಮ್ಮೆ ನೋಡಿ

ತಿಂದು ತಿಂದು ರೋಗದಿಂದ ನರಳಬೇಡಿರಿ 
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ 
ತಿಂದು ತಿಂದು ರೋಗದಿಂದ ನರಳಬೇಡಿರಿ 
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ 
ನಿಮ್ಮ ಹಾಗೆ ಅವರು ಎಂಬ ಸತ್ಯ ಮರೆತಿರಿ  
ಅವರ ರೋಷ ನಿಮ್ಮ ನಾಶ ಮರೆಯಬೇಡಿರಿ... .
ಮರೆಯಬೇಡಿರಿ.... ಮರೆಯಬೇಡಿರಿ 
--------------------------------------------------------------------------------------------------------------------------

No comments:

Post a Comment