96. ಗಾಳಿ ಗೋಪುರ (1962)




ಗಾಳಿ ಗೋಪುರ ಚಿತ್ರದ ಹಾಡುಗಳು 
  1. ಒಹ್ ಚೆನ್ನಯ್ಯ 
  2. ಬಾಳೇ ಬಂಗಾರ ನಾಳೆ 
  3. ನಾನ್ಯಾಕೇ ನೀ ಹಾಗೆ ನೋಡುವೆ 
  4. ಅನುರಾಗದೇ ನೀ ಪಾಡಲೇಕೆ 
  5. ಧೂಳಿಯಾಯಿತು ಗಾಳಿ ಗೋಪುರ 
  6. ನೀನೇ ಕಿಲಾಡಿ ಹೆಣ್ಣು 
  7. ಯಾರಿಗೆ ಯಾರುಂಟು ಎರವಿನ ಸಂಸಾರ 

ಗಾಳಿ ಗೋಪುರ (1962)
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಗಂಡು : ಅನುರಾಗದೆ ನೀ ಪಾಡಲೇಕೆ ಮನ ನಾಟ್ಯದೆ ತೂಗಾಟ ಏಕೆ
ಹೆಣ್ಣು : ಎದೆಯಾಸೆ ಇಂದು ಜತೆ ಸೇರಲಿ ಗಾನ  ಮುದ ಮೀರಿದಾಲಾಪನ
ಗಂಡು : ಅನುರಾಗದೆ ನೀ ಪಾಡಲೇಕೆ  ಮನ ನಾಟ್ಯದೆ ತೂಗಾಟ ಏಕೆ

ಹೆಣ್ಣು : ಪ್ರಿಯ ನೀನಾಗೆ ಈ ಜೀವ ಜೋಡಿ
          ಈ ಬಾಳಾಗೆ ಹೊಂದಿಕೆಯ ಗಾಡಿ (ಹೂಂ ಹೂಂ ಹೂಂ )
          ಪ್ರಿಯ ನೀನಾಗೆ ಈ ಜೀವ ಜೋಡಿ   ಈ ಬಾಳಾಗೆ ಹೊಂದಿಕೆಯ ಗಾಡಿ
ಗಂಡು : ಸರಿಯಾದ ಜೋಡಿ ಇರೆ ಜೊತೆಯಾಗಿ ಹೂಡಿ
           ಬಿಡು ಗಾಡಿ ಆನಂದ ದಾರಿ ಹಿಡಿ
            ಅನುರಾಗದೆ ನೀ ಪಾಡಲೇಕೆ  ಮನ ನಾಟ್ಯದೆ ತೂಗಾಟ ಏಕೆ

ಹೆಣ್ಣು : ಈ ಕೆಸರಾಗೆ ಹಸುರಾಗಿ ತೂಗಿ ಹೊಂಬಯಲಾಗಿ ತೆನೆಯಾಗಿ ಬಾಗಿ
           ಭೂತಾಯಿ ಬಂದು ನಗುಮೊಗದಿಂದ ನಿಂದು
          ಸಂತೋಷ ಎಮಗಾಗಿ ತಂದಳಿಂದು
          ಅನುರಾಗದೆ ನೀ ಪಾಡಲೇಕೆ  ಮನ ನಾಟ್ಯದೆ ತೂಗಾಟ ಏಕೆ

ಗಂಡು : ಬರಿ ಆರಂಭದಿ ಬೆಡಗು ಸಾಕೆ ಇದು ಅನುಗಾಲ ಇರಬೇಕು ಜೋಕೆ (ಹೂಂ ಹೂಂ ಹೂಂ )
           ಬರಿ ಆರಂಭದಿ ಬೆಡಗು ಸಾಕೆ  ಇದು ಅನುಗಾಲ ಇರಬೇಕು ಜೋಕೆ
           ಜೊತೆಗೂಡಿದಾಕೆ ನೀ ಇದ ಕೇಳಬೇಕೆ
           ನಮಗೀಗ ಸೊಗ ಬೇರೆ ಬೇಕೇ ಸಾಕೆ
           ಅನುರಾಗದೆ ನೀ ಪಾಡಲೇಕೆ
ಹೆಣ್ಣು : ಮನ ನಾಟ್ಯದೆ ತೂಗಾಟ ಏಕೆ
ಇಬ್ಬರು : ಎದೆಯಾಸೆ ಇಂದು ಜತೆ ಸೇರಲಿ ಗಾನ
            ಮುದಮೀರಿದಾಲಾಪನ
            ಅನುರಾಗದೆ ನೀ ಪಾಡಲೇಕೆ ಮನ ನಾಟ್ಯದೆ ತೂಗಾಟ ಏಕೆ
----------------------------------------------------------------------------------------------------------------------

ಗಾಳಿ ಗೋಪುರ (೧೯೬೨)......ಯಾರಿಗೆ ಯಾರುಂಟು

ರಚನೆ : ಶ್ರೀ ಪುರಂದರದಾಸರು  ಸಂಗೀತ : ಟಿ.ಜಿ.ಲಿಂಗಪ್ಪ  ಗಾಯನ : ಘಂಟಸಾಲ


ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೇ ನಿಜವಲ್ಲಾ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೇ ನಿಜವಲ್ಲಾ ಹರಿಯೇ
ಯಾರಿಗೆ ಯಾರು...

ಬಾಯಾರಿತು ಎಂದು ಬಾವಿ ನೀರಿಗೆ ಪೋದೇ
ಬಾವಿ ಜಲ ಬತ್ತಿ ಬರಿದಾಯ್ತೊ ಹರಿಯೇ
ಬಾಯಾರಿತು ಎಂದು ಬಾವಿ ನೀರಿಗೆ ಪೋದೇ
ಬಾವಿ ಜಲ ಬತ್ತಿ ಬರಿದಾಯ್ತೊ ಹರಿಯೇ
ಬಿಸಿಲಾ ತಾಳದೇ ಮರದ ನೆರಳಿಗೇ ಪೋದೇ
ಬಿಸಿಲಾ ತಾಳದೇ ಮರದ ನೆರಳಿಗೇ ಪೋದೇ
ಮರ ಬಗ್ಗಿ ಶಿರದ ಮೇಲೆ ಎರಗಿತೋ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೇ ನಿಜವಲ್ಲಾ ಹರಿಯೇ
ಯಾರಿಗೆ ಯಾರು...

ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟೆ
ತೊಟ್ಟಿಲಿನ ಶಿಶುವೇ ಮಾಯವಾಯಿತೋ ಹರಿಯೇ
ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟೆ
ತೊಟ್ಟಿಲಿನ ಶಿಶುವೇ ಮಾಯವಾಯಿತೋ ಹರಿಯೇ
ತಂದೆ ಸಿರಿಪುರoದರ ವಿಠ್ಠಲನಾರಾಯಣ
ತಂದೆ ಸಿರಿಪುರoದರ ವಿಠ್ಠಲನಾರಾಯಣ
ಮರೆಯದೇ ಎನ್ನನು ನೀನೇ ಸಲಹೋ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೇ ನಿಜವಲ್ಲಾ ಹರಿಯೇ
ಯಾರಿಗೆ ಯಾರು...  ಆ.....ಆ......ಆ.....ಆ.......
-----------------------------------------------------------------------------------------------------------------------

ಗಾಳಿ ಗೋಪುರ (೧೯೬೨) 
ಸಂಗೀತ : ಟಿ.ಜಿ.ಲಿಂಗಪ್ಪ  ರಚನೆ : ಜಿ.ವಿ.ಅಯ್ಯರ  ಗಾಯನ : ಘಂಟಸಾಲ, ರೇಣುಕಾ 

ಗಂಡು : ಓ... ಚನ್ನಅಯ್ಯ... ಹೊಯ್....
           ಓ... ಚನ್ನಅಯ್ಯ... ಓಓಓಓಓಓಓಓಓ
           ಬಂಢತನ ಎಂದುಕೊಂತ ಸುಗ್ಗಿ ಹಾಡು ಹಾಡಿಕೊಂತಾ  
           ಕಣದಾಗೆ ಭತ್ತ ಸುರಲೋ 
ಕೋರಸ್:  ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 
               ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 

ಹೆಣ್ಣು : ಬೆಳ್ಳಂ ಬೆಳ್ಳಗ್ಗೆ ಎದ್ದು ಬಂದು ಬಿಸಿಲಾಗೆ ಕಾದುಕುಂತೇ
          ಓಓಓಓಓ.. ಓಓಓಓಓ..ಓಓಓಓಓ..  
         ಬುತ್ತಿಗಿತ್ತಿ ಖಾರನಂಬಿ  ಬುತ್ತಿಕಟ್ಟಿ ನೆತ್ತಿ ಇಟ್ಯಾಲೊ  
         ಓ.. ಚನ್ನಯ್ಯಾ ನಿನ್ನ ಹೆಜ್ಜೇ  ಮುಂದೆ ಸಾಗಲೋ 
ಕೋರಸ್ :  ಓ.. ಚನ್ನಯ್ಯಾ ನಿನ್ನ ಹೆಜ್ಜೇ  ಮುಂದೆ ಸಾಗಲೋ 
               ಓ.. ಚನ್ನಯ್ಯಾ ನಿನ್ನ ಹೆಜ್ಜೇ ಮುಂದೆ ಸಾಗಲೋ 
ಗಂಡು : ಮೇಲ ಬಯಲಲಿ ಹುಲ್ಲೇ ಎಲ್ಲಾ ಹೊಯ್... 
            ಕೀಳು ಬಯಲೆ ಎಳ್ಳೇ ಇಲ್ಲಾ... 
            ನಾಳೆ ವರುಷ ಸಾಲದಿಲ್ಲಾ ಭೂ ತಾಯಿ ನಿನಕಡೆಗವ್ಳೋ 
            ಓ ಚನ್ನಯ್ಯ ಧ್ಯಾನಲಕ್ಷ್ಮಿ ಬಂದು ನಿಂತಳೋ 
ಕೋರಸ್ :  ಓ ಚನ್ನಯ್ಯ ಧ್ಯಾನಲಕ್ಷ್ಮಿ ಬಂದು ನಿಂತಳೋ 
                ಬಂಢತನ ಎಂದುಕೊಂತ ಸುಗ್ಗಿ ಹಾಡು ಹಾಡಿಕೊಂತಾ  
                ಕಣದಾಗೆ ಭತ್ತ ಸುರಲೋ 
               ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 
              ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 
              ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ

ಇಬ್ಬರು : ಊರಾಚೆ ಲಾಲಿರಿ ಸಿರಿ ಹೊಯ್..
             ಕಣ ಪ್ರೇಮ ದಯವಿರಲೋ ನಮಗಿನ್ನೂ ಕೊರತೆಯೇನು
             ನಮಗೆ ಈ ರಾಜ್ಯ ತಾನೆಲೋ
             ಓ.. ಚನ್ನಯ್ಯಾ... ನಮ ಮಾತಿಗೆ ಎದುರು ಯಾರಲೋ
ಕೋರಸ್ :  ಓ.. ಚನ್ನಯ್ಯಾ... ನಮ ಮಾತಿಗೆ ಎದುರು ಯಾರಲೋ
              ಬಂಢತನ ಎಂದುಕೊಂತ ಸುಗ್ಗಿ ಹಾಡು ಹಾಡಿಕೊಂತಾ  
              ಕಣದಾಗೆ ಭತ್ತ ಸುರಲೋ 
              ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 
             ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ 
             ಓ.. ಚನ್ನಅಯ್ಯ.. ಗದ್ಯಾಗ್ ಎತ್ತ ಹೋದ್ಯಲೋ
--------------------------------------------------------------------------------------------------------------------------

ಗಾಳಿ ಗೋಪುರ (೧೯೬೨) 
ಸಂಗೀತ : ಟಿ.ಜಿ.ಲಿಂಗಪ್ಪ  ರಚನೆ : ಜಿ.ವಿ.ಅಯ್ಯರ  ಗಾಯನ : ರೇಣುಕಾ 

ಕೃಷ್ಣಾ....  ಕೃಷ್ಣಾ....
ಬಾಳೇ ಬಂಗಾರ.. ಬಾಳೇ ಬಂಗಾರ ನಾಳೆ ಬಾಳೆ ಬಂಗಾರ
ನಲಿದು ಕುಣಿವ ಚೆಲುವ ಬಾರಾ..
ನಲಿದು ಕುಣಿವ ಚೆಲುವ ಬಾರಾ ಕರೆವೇ ಮಾನಸಾರ
ಬಾಳೇ ಬಂಗಾರ ನಾಳೆ ಬಾಳೆ ಬಂಗಾರ

ಸ್ವರ್ಣ ಮಾಲೆ ಹಿಡಿದು ನಾಳೆ ಬಂದು ಕಾಯುವೇನು
ಸ್ವರ್ಣ ಮಾಲೆ ಹಿಡಿದು ನಾಳೆ ಬಂದು ಕಾಯುವೇನು
ನುಡಿಯ ಬಾರಾ ನುಡಿಸಿ ಬಾರಾ 
ನುಡಿಯ ಬಾರಾ ನುಡಿಸಿ ಬಾರಾ ಕರೆಯೇ ಮನಸಾರ
ಬಾಳೇ ಬಂಗಾರ ನಾಳೆ ಬಾಳೆ ಬಂಗಾರ

ನಿನ್ನ ರಾಧೆ ನಿನ್ನ ದಾರಿ ಕಾದು  ನಿಂದಿಹಳೋ.....
ನಿನ್ನ ರಾಧೆ ನಿನ್ನ ದಾರಿ ಕಾದು  ನಿಂದಿಹಳೋ
ನಿನ್ನ ನೆನೆವಾ ಸೊಗದ ನೋವೇ ಎನಗೆ ಸ್ಥಿರವಿರಲೋ
ನೋವು ನೂರಾ ಮರೆಸು ಬಾರಾ ಕರೆಯೇ ಮಣಭಾರ...
ಬಾಳೇ ಬಂಗಾರ ನಾಳೆ ಬಾಳೆ ಬಂಗಾರ

ಕನಸಿನಂಥ ಬಾಳಿಮಂತ್ರ ಮನಕೆ ಬಲು ಮಧುರಾ..
ಕನಸಿನಂಥ ಬಾಳಿಮಂತ್ರ ಮನಕೆ ಬಲು ಮಧುರಾ..
ಮರಳಿ ಬಾರಾ ವಧುವ ಸೇರಾ ಕದಡಿ ಮನಸಾರ
ಬಾಳೇ ಬಂಗಾರ.. ಬಾಳೇ ಬಂಗಾರ ನಾಳೆ ಬಾಳೆ ಬಂಗಾರ
-------------------------------------------------------------------------------------------------------------------------

ಗಾಳಿ ಗೋಪುರ (೧೯೬೨) 
ಸಂಗೀತ : ಟಿ.ಜಿ.ಲಿಂಗಪ್ಪ  ರಚನೆ : ಜಿ.ವಿ.ಅಯ್ಯರ  ಗಾಯನ : ಘಂಟಸಾಲ, ರೇಣುಕಾ 

ಹೆಣ್ಣು : ಹಂಗ್ಯಾಕೀ ನೀ ಹಾಗೇ ನೋಡುವೇ ಮಾತಾಡಿ ಬಾಯಿ ಇಲ್ಲವೇ
ಗಂಡು : ಓಓ... ಮಾತಾಡದಾ ಬೋಂಬೆ ಪ್ರೇಮದಿ ನಾ ಬಂದು ಮಾತಾಡಲೇ
ಹೆಣ್ಣು : ಓಓ..ಸಂನ್ಯಾಸಿ  ನೀ ಹಾಗೇ ನೋಡುವೇ ಮಾತಾಡಿ ಬಾಯಿ ಇಲ್ಲವೇ
ಗಂಡು : ಓಓ... ಮಾತಾಡದಿ ಈ ಬೋಂಬೆ

ಹೆಣ್ಣು : ಕಣ್ಣಾಸೆ ತೀರಾ ಇದೇ ನೋಟವೇ
         ಇದೇನಿಂದು ನಂಗೆಕೋ ಸಂಕೋಚವೇ (ಆಆಆ...)
         ಕಣ್ಣಾಸೆ ತೀರಾ ಇದೇ ನೋಟವೇ
        ಇದೇನಿಂದು ನಂಗೆಕೋ ಸಂಕೋಚವೇ
ಗಂಡು : ಈ ಸೋಂಕು ಈ ಬಿಂಕ ಇನ್ನೇತಕೇ 
            ಈ ಸೋಂಕು ಈ ಬಿಂಕ ಇನ್ನೇತಕೇ 
            ಕೈಕೈಯ್ ಕಾಲಹಿಡಿಯೇ ಛಳಿಯೇತಕೆ 
ಹೆಣ್ಣು : ಸಂನ್ಯಾಸಿ  ನೀ ಹಾಗೇ ನೋಡುವೇ ಮಾತಾಡಿ ಬಾಯಿ ಇಲ್ಲವೇ
ಗಂಡು : ಓಓ... ಮಾತಾಡದಿ ಈ ಬೋಂಬೆ

ಹೆಣ್ಣು : ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
         ನಲ್ಲೆಯ ಈ ದೇಹ ಝಲ್ಲೆಯನ್ನದೆ (ಆಆಆ...)
         ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
         ನಲ್ಲೆಯ ಈ ದೇಹ ಝಲ್ಲೆಯನ್ನದೆ
ಗಂಡು : ನೀ ನಿಂದು ಬಳಿ ನಿಂದು ನಗು ಬೀರಿದೆ 
           ನೀ ನಿಂದು ಬಳಿ ನಿಂದು ನಗು ಬೀರಿದೆ 
           ಜೇನಂಥ ಎದೆಹಿಂಡಿ ಚೆಲ್ಲಾಡಿದೇ.. 
ಹೆಣ್ಣು : ಸಂನ್ಯಾಸಿ  ನೀ ಹಾಗೇ ನೋಡುವೇ ಮಾತಾಡಿ ಬಾಯಿ ಇಲ್ಲವೇ
ಗಂಡು : ಓಓ... ಮಾತಾಡದಿ  ಈ ಬೋಂಬೆ
ಹೆಣ್ಣು : ಈ ಮೋಜುಗಾರ ಇದು ಕೈಬಳೆ
          ಇದೆ ನಿನ್ನ ನಿನ್ನಾಣೆ ಸಿರಿಕೋಮಲೆ  (ಓಓಓ ...)
         ಈ ಮೋಜುಗಾರ ಇದು ಕೈಬಳೆ
         ಇದೆ ನಿನ್ನ ನಿನ್ನಾಣೆ ಸಿರಿಕೋಮಲೆ
ಗಂಡು : ಹೌದೇನೇ ಮೊಗವೆತ್ತಿ ನೀ ಹೇಳೆಲೇ
           ಹೌದೇನೇ ಮೊಗವೆತ್ತಿ ನೀ ಹೇಳೆಲೇ
           ಅದೆಂಗೆ ಇದೇ ಎಂದು ನಾ ತೋರಲೇ....
ಹೆಣ್ಣು : ಸಂನ್ಯಾಸಿ  ನೀ ಹಾಗೇ ನೋಡುವೇ ಮಾತಾಡಿ ಬಾಯಿ ಇಲ್ಲವೇ
ಗಂಡು : ಓಓ... ಮಾತಾಡದಿ  ಈ ಬೋಂಬೆ
------------------------------------------------------------------------------------------------------------------------

ಗಾಳಿ ಗೋಪುರ (೧೯೬೨) 
ಸಂಗೀತ : ಟಿ.ಜಿ.ಲಿಂಗಪ್ಪ  ರಚನೆ : ವಿಜಯನಾರಸಿಂಹ ಗಾಯನ : ರಾಘವಲು 

ಧೂಳಿಯಾಯಿತು ಗಾಳಿ ಗೋಪುರ 
ತೂರಿಹೋಯಿತೀ ದೂರ ಗಗನ ದಾರ... ಆಆಆ.... 
ನೀನು ಮಾಡಿದ ಪಾಪ ಪುಣ್ಯವೇ ಬುದ್ದಿಯಾಗಿದೇ ನಿನ್ನ ಬಾಳಿಗೇ... ಆಆಆ... 

ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 
ನೀನು ಹೆತ್ತ ಮಗನೇ ಹಗೆಯ ಸಾಧಿಪ ಕಾಲವಿದುವಯ್ಯಾ...    
ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 

ನಂಬಿದೆಲ್ಲಾ ನಡೆಯುವುದೆಂಬುವುದು ಮೂರ್ಖನ ಮತವಯ್ಯಾ 
ಅತೀ ಆಸೆ ಗತಿ ಕೇಡು ಎಂಬ ಗಾದೆಯ ತಿಳಿಯಯ್ಯಾ 
ಅಂದಿನ ಆ ಮೋಸ ನಿನ್ನ ಇಂದಿನ ಈ ನಾಶ 
ಇದುವೇ ನಿಜವೂ ಕೇಳಯ್ಯಾ..... 
ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 

ತ್ಯಾಗ ನಿನ್ನ ರಕ್ಷೆಯು ಎಂಬ ನಂಬಿಕೆ ಬೀಡಬೇಡಾ
ತಾಳಿದವನನೇ ಬಾಳುವನೆಂಬ ಸತ್ಯವ ಮರಿಬೇಡಾ 
ವೇದನೇ ಕ್ಷಣ ಮಾತ್ರ ಇದು ಜೀವನದ ಸೂತ್ರ 
ಇದುವೇ ನಿಜವೂ ಕೇಳಯ್ಯಾ ......  
ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 

ನೀನು ಹೆತ್ತ ಮಗನೇ ಹಗೆಯ ಸಾಧಿಪ ಕಾಲವಿದುವಯ್ಯಾ...    
ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 

ಕಾಲನಮ್ಮಾ ಆಳು ಎಂಬ ಕನಸು ಕಾಣುವೆಯಾ 
--------------------------------------------------------------------------------------------------------------------------


ಗಾಳಿ ಗೋಪುರ (೧೯೬೨) 

ಸಂಗೀತ : ಟಿ.ಜಿ.ಲಿಂಗಪ್ಪ  ರಚನೆ :ಜಿ.ವಿ.ಅಯ್ಯರ ಗಾಯನ : ಜಮುನಾ ರಾಣಿ, ಪಿ.ನಾಗೇಶ್ವರ್ ರಾವ್   

ಗಂಡು : ನೀನೇ ಕಿಲಾಡಿ ಹೆಣ್ಣು ಎಂದೇಕೆ ಜಂಭ ಇನ್ನೂ 
            ಈ ಕಣ್ಣತೊಳಿ ಕಣ್ಣು ಥಕ ಥೈ ನಾಟ್ಯವಿನ್ನೂ 
            ನೀನೇ ಕಿಲಾಡಿ ಹೆಣ್ಣು 
ಹೆಣ್ಣು : ಬೀಡಬೇಡ ನಿನ್ನ ಹಲ್ಲೂ ಭಂಡಾಶ ನಡೆಯದೆಂದು 
          ಬಂದೀತೂ ಕೈಗೆ ಕಲ್ಲು ಜೋಪಾನವಾಗು ಇಂದೂ 
          ಬೀಡಬೇಡ ನಿನ್ನ ಹಲ್ಲೂ 

ಗಂಡು : ರಂಗಾದ ಹೆಣ್ಣೇ ನಿಲ್ಲೂ.. ನಿಂಗೇಕೇ ಬೇಕೇ ಕಲ್ಲೂ... 
            ರಂಗಾದ ಹೆಣ್ಣೇ ನಿಲ್ಲೂ.. ನಿಂಗೇಕೇ ಬೇಕೇ ಕಲ್ಲೂ... 
            ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರ್ಮ ಪ್ರೇಮ ಜೋಲ್ಲು   
            ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರ್ಮ ಪ್ರೇಮ ಜೋಲ್ಲು....    
            ನೀನೇ ಕಿಲಾಡಿ ಹೆಣ್ಣು 

ಹೆಣ್ಣು : ವ್ಹಾಹರೇ ವ್ಹಾ ಶೂರ ಹುಲಿಯೇ ಜಗಜಲ್ದಿ ಗುಳ್ಳೇ ನರಿಯೇ 
          ವ್ಹಾಹರೇ ವ್ಹಾ ಶೂರ ಹುಲಿಯೇ ಜಗಜಲ್ದಿ ಗುಳ್ಳೇ ನರಿಯೇ 
          ಸರಿಬರದು ನನಗು ನಿನಗೂ ಅದು ನೋಡದೇನೆ ತೊಲಗು 
          ಸರಿಬರದು ನನಗು ನಿನಗೂ ಅದು ನೋಡದೇನೆ ತೊಲಗು.....  
          ಬೀಡಬೇಡ ನಿನ್ನ ಹಲ್ಲೂ 

 ಗಂಡು: ಇದ ಕೇಳಿ ಹಾರ್ಟ್ ಫೇಲೂ ನಿನ್ನಾಣೆಗೂ ಆಗದಿ ಹೇಳು  
            ಇದ ಕೇಳಿ ಹಾರ್ಟ್ ಫೇಲೂ ನಿನ್ನಾಣೆಗೂ ಆಗದಿ ಹೇಳು  
ಹೆಣ್ಣು : ಹಂಗಾಗದೇ ಇರಲೆಂದೇ ನಾನೊಲಿದು ಬಂದು ನಿಂದೇ 
          ಹಂಗಾಗದೇ ಇರಲೆಂದೇ ನಾನೊಲಿದು ಬಂದು ನಿಂದೇ .... 
ಇಬ್ಬರು : ಲಲ್ಲಲಾ  ಲಲ್ಲಲಾ ಲಲ್ಲಲಾ ಲಲ್ಲಲಾ ಲಲ್ಲಲಾ ಲಲ್ಲಲಾ 
            ಡಡ್ಡಡಡಾ ಡಡ್ಡಡಡಾ   ಡಡ್ಡಡಡಾ   ಡಡ್ಡಡಡಾ   ಡಡ್ಡಡಡಾ   
--------------------------------------------------------------------------------------------------------------------------

No comments:

Post a Comment