166. ಸತ್ಕಾರ (1986)

ಸತ್ಕಾರ ಚಿತ್ರದ ಹಾಡುಗಳು
  1. ಚೆಲುವೆಯ ಮೊಗ ನಗುನಗುತಿರೆ ಮನಸಿಗೆ ಸಂತೋಷ
  2. ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
  3. ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ
  4. ಎಂದೂ ಒಲ್ಲೆಂದೂ ಚಿಂತೇ ಮಾಡೋನು
ಸತ್ಕಾರ (1986) - ಚೆಲುವೆಯ ಮೊಗ ನಗುನಗುತಿರೆ ಮನಸಿಗೆ ಸಂತೋಷ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಕೆ.ಜೆ.ಯೇಸುದಾಸ್, ಚಿತ್ರಾ

ಗಂಡು : ಚೆಲುವೆಯ ಮೊಗ ನಗುನಗುತಿರೆ ಮನಸಿಗೆ ಸಂತೋಷ
            ಒಲವಿನ ನುಡಿ ಸುಡಿಯುತಲಿರೆ ಹೃದಯಕೆ ಸಂತೋಷ
           ಅನುದಿನವು ಹೊಸತನದ ಪ್ರೇಮ ಸಂದೇಶ
           ಬರುತಲಿರೆ ಬದುಕಿನಲಿ ಎಂಥ ಸಂತೋಷ
ಹೆಣ್ಣು : ಚೆಲುವನ ಮೊಗ ನಗುನಗುತಿರೆ ಮನಸಿಗೆ ಸಂತೋಷ
          ಒಲವಿನ ನುಡಿ ಸುಡಿಯುತಲಿರೆ ಹೃದಯಕೆ ಸಂತೋಷ
          ಅನುದಿನವು ಹೊಸತನದ ಪ್ರೇಮ ಸಂದೇಶ
          ಬರುತಲಿರೆ ಬದುಕಿನಲಿ ಎಂಥ ಸಂತೋಷ
ಇಬ್ಬರು : ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ

ಗಂಡು : ಮಾಗಿಯ ಕಾಲ ಬೆಳಗಿನ ವೇಳೆ ಎಳೆ ಬಿಸಿಲಲ್ಲಿ ನೀ ನಡೆದಿರುವಾಗ
ಹೆಣ್ಣು : ಕಾಮನ ಬಿಲ್ಲು ಬಾನಲಿ ಮೂಡಿ ಕಣ್ಣನು ಕೂಗಿ ಬಾ ನೋಡೆನುವಾಗ
ಗಂಡು : ಬಳ್ಳಿಯು ಬಳಕಿರುವಾಗ           ಹೆಣ್ಣು : ಸುಮಗಳು ಅರಳಿರುವಾಗ
ಗಂಡು : ಪರಿಮಳ ಚೆಲ್ಲಿರುವಾಗ            ಹೆಣ್ಣು : ಭ್ರಮರವು ಆಡಿರುವಾಗ
ಗಂಡು : ಕಂಗಳು ಕುಣಿದಿರುವಾಗ ಕಾಣದ ಆನಂದ ತಾನೆ
ಹೆಣ್ಣು : ಚೆಲುವನ ಮೊಗ ನಗುನಗುತಿರೆ ಮನಸಿಗೆ ಸಂತೋಷ
ಗಂಡು : ಒಲವಿನ ನುಡಿ ಸುಡಿಯುತಲಿರೆ ಹೃದಯಕೆ ಸಂತೋಷ

ಗಂಡು : ಬಯಸಿದ ಹೆಣ್ಣ ಕೈ ಹಿಡಿದಾಗ ನಲ್ಲೆಯ ಅಪ್ಪಿ ನಾ ಮುದ್ದಿಸುವಾಗ
ಹೆಣ್ಣು : ನಲ್ಲನ ಮನಸು ಅರಳಿರುವಾಗ ಮಲ್ಲಿಗೆ ಮುಡಿಸಿ ಅವ ನಗುತಿರುವಾಗ
ಗಂಡು : ತಾಯಿಯ ಪ್ರೇಮದ ಮಾತು           ಹೆಣ್ಣು : ಗೆಳೆಯನ ಸರಸದ ಮಾತು
ಗಂಡು : ಕಂದನ ತೊದಲುವ ಮಾತು            ಹೆಣ್ಣು : ಅರಗಿಣಿ ಆಡುವ ಮಾತು
ಗಂಡು : ಕೇಳುತ ಮೈ ಮರೆತಾಗ ಕಾಣದ ಉಲ್ಲಾಸ ತಾನೆ
ಹೆಣ್ಣು : ಚೆಲುವನ ಮೊಗ ನಗುನಗುತಿರೆ ಮನಸಿಗೆ ಸಂತೋಷ
          ಒಲವಿನ ನುಡಿ ಸುಡಿಯುತಲಿರೆ ಹೃದಯಕೆ ಸಂತೋಷ
ಗಂಡು : ಅನುದಿನವು ಹೊಸತನದ ಪ್ರೇಮ ಸಂದೇಶ
           ಬರುತಲಿರೆ ಬದುಕಿನಲಿ ಎಂಥ ಸಂತೋಷ
ಇಬ್ಬರು : ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ ಲಲಲ್ಲಲಲಲ ಲಾಲಾ
-----------------------------------------------------------------------------------------------------------------------

ಸತ್ಕಾರ (1986) - ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಕೆ.ಜೆ.ಯೇಸುದಾಸ್, ಎಸ್.ಜಾನಕಿ

ಹೆಣ್ಣು : ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ
          ಅನುರಾಗವ ತಂದೆ ತಂದೆ ತಂದೆ ತಂದೆ
         ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು ಒಲವಿಂದ ನೀ ಸೇರೆಯಾ.. ಓಯ್
ಗಂಡು : ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ
          ಅನುರಾಗವ ತಂದೆ ತಂದೆ ತಂದೆ ತಂದೆ
          ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ ಆನಂದವಾ ನೀಡೆಯಾ.. ಹೊಯ್ ...

ಹೆಣ್ಣು : ಎಂದೂ ಬಳಿಯೆ ಹೀಗೆ ಇರುವೆ ಹೂವಾಗಿ ತಂಪಾಗಿ ಹಿತವಾಗಿ
ಗಂಡು : ಎಂದೂ ನಗುತ (ಆಆಆ)  ಹೀಗೆ ಇರುವೆ (ಆಆಆ) ಕನಸಾಗಿ ನನಸಾಗಿ ಹಾಯಾಗಿ
ಹೆಣ್ಣು : ಸವಿನುಡಿಯ ಸರಸದಲಿ ಹೊಸ ಲೋಕ ನಾ ಕಂಡೆ
ಗಂಡು : ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ ಅನುರಾಗವ ತಂದೆ ತಂದೆ ತಂದೆ ತಂದೆ
           ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ ಆನಂದವಾ ನೀಡೆಯಾ.. ಹೊಯ್
ಹೆಣ್ಣು : ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ ಅನುರಾಗವ ತಂದೆ ತಂದೆ ತಂದೆ ತಂದೆ

ಗಂಡು : ಸಂಜೆ ಸೊಗಸು ಬಾನು ಸೊಗಸು ಸೊಗಸೇನೆ ನಮಗೆಲ್ಲ ನಿನ್ನಿಂದ ... ಓಓಓ
ಹೆಣ್ಣು : ಹೂವು ಸೊಗಸು ದುಂಬಿ ಸೊಗಸು ಸೊಗಸೇನೆ ಇರುವಾಗ ಆನಂದ
ಗಂಡು : ಓ ಗೆಳತಿ ಓ ಸುಮತಿ ಹೊಸ ಪ್ರೀತಿ ನಾ ಕಂಡೆ
ಹೆಣ್ಣು : ಕನಸಿಂದ ನಾ ಬಂದೆ ಬಂದೆ ಬಂದೆ ಬಂದೆ ಅನುರಾಗವ ತಂದೆ ತಂದೆ ತಂದೆ ತಂದೆ
          ಚಿಂತೆಯೇಕೆ ಬಿಡು ಮನಸು ಇಲ್ಲಿ ಕೊಡು ಒಲವಿಂದ ನೀ ಸೇರೆಯಾ.. ಹೊಯ್...
ಗಂಡು : ನೆನಪಿಂದ ನೀ ಬಂದೆ ಬಂದೆ ಬಂದೆ ಬಂದೆ ಅನುರಾಗವ ತಂದೆ ತಂದೆ ತಂದೆ ತಂದೆ
           ಎಂದೂ ಹೀಗೆ ಇಲ್ಲೆ ಸೇರಿ ನನ್ನಾ ನಲ್ಲೆ ಆನಂದವಾ ನೀಡೆಯಾ... ಹೊಯ್
-----------------------------------------------------------------------------------------------------------------------

ಸತ್ಕಾರ (1986) - ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ವಾಣಿಜಯರಾಂ

ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ ಆಸೆಯೂ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ ಆಸೆಯೂ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ಅಹ್ಹಹ್ಹಾ... ಆಹಾಹಾ ಅಹ್ಹಹ್ಹಾ... ಆಹಾಹಾ ಅಹ್ಹಹ್ಹಾ... ಹೂಂಹೂಂಹುಂ

ಮಲ್ಲಿಗೆ ಮೊಗ್ಗು ಜಾಜಿಯ ಮೊಗ್ಗು ಅರಳಿ ನಕ್ಕಾಗ
ತಣ್ಣನೆ ಗಾಳಿ ಸುಂಯ್ ಎಂದು ಬಿಸಿ ಮುತ್ತನು ಕೊಟ್ಟಾಗ
ಗಾಳಿಯ ತುಂಬ ಗಂಧವ ತುಂಬಿ ಮತ್ತನು ತಂದಾಗ
ದುಂಬಿಯು ಹಾಡಿ ಶೃಂಗಾರ ಮಾಸ ಬಂದಾಯ್ತು ಎಂದಾಗ
ತಲೆಯಲಿ ಧೀಮ್ ಎಂದು ಮೈಯಲ್ಲಿ ಜುಮ್ ಎಂದು
ದಾಹದಿ ನಾ ನೊಂದು ಮೋಹದಿ ನಾ ಬೆಂದು ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ ಆಸೆಯೂ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..

ಬೆಳ್ಳಿಯ ಬಟ್ಟೆ ಹಾಸಿದ ಹಾಗೆ ಇಬ್ಬನಿ ಬಂದಾಗ
ಒಬ್ಬಳೇ ಹೆಣ್ಣು ಬಿಸಿಲಂತೆ ಬೀದಿಲಿ ನಿಂತಾಗ
ಕನ್ನಡಿ ಮುಂದೆ ಕಾಡಿಗೆ ಕಣ್ಣು ಅಂದವ ಕಂಡಾಗ ಅಹ್ಹಹ್ಹ ..
ಕಣ್ಣಲ್ಲಿ ನಿನ್ನ ಬಿಂಬವ ನೋಡಿ ನಾ ಬೆಚ್ಚಿ ಬಿದ್ದಾಗ
ಹಸಿರಿನ ಮತ್ತೇಲಿ ಮಲಗಿದ ಹೊತ್ತಲ್ಲಿ ಯೌವ್ವನ ಕಾಡುತ ನಿಂತೆನು ಮತ್ತಲ್ಲಿ ಅಹ್ ಅಹ್ ಅಹ್ ಅಹ್ ಅಹ್
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..
ರಾತ್ರಿಯು ಬಂದಾಗ ಚಂದಿರ ನಕ್ಕಾಗ ಹಾಸಿಗೆ ಕಂಡಾಗ ಆಸೆಯೂ ತಂದಾಗ
ಗುಮ್ಮ ಗುಮ್ಮ ಗುಮ್ಮ ಗುಮ್ಮ ..ಗುಮ್ಮ ಗುಮ್ಮ ಗುಮ್ಮ ಗುಮ್ಮ ..
-------------------------------------------------------------------------------------------------------------------------

ಸತ್ಕಾರ (1986) - ಎಂದೂ ಒಲ್ಲೆಂದೂ ಚಿಂತೆ ಮಾಡೋನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ರಮೇಶ

ಕೋರಸ್ : ಕೂಕ್ಕೂಕೂಕೂ ...   ಕೂಕ್ಕೂಕೂಕೂ ... 
ಗಂಡು : ಹೊಯ್ ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
            ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ..  ರಪಪ್ಪಪಾ..
            ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
            ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ
           ಸಂತೋಷದ ಸಂಗೀತದ ಕಡಲಲ್ಲಿಯೇ ತೇಲಾಡುವಾ
           ಸಂತೋಷದ ಸಂಗೀತದ ಕಡಲಲ್ಲಿಯೇ ತೇಲಾಡುವಾ
           ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
           ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ .. ಅಹ್ಹಹ್ಹಾ..
ಹೆಣ್ಣು : ಲಾಲಲಲಾ ಲಾಲಲಲಾ ಲಾಲಲಲಾ ಲಾಲಲಲಾ ಲಾಲಲಲಾ ಲಾಲಲಲಾ

ಕೋರಸ್ : ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ.. ಲಾ..
ಗಂಡು : ಸೌಂದರ್ಯ ಅನ್ನೋದೂ (ಆಆಆಅ) ಕಣ್ಣನ್ನೂ ತುಂಬಲೂ (ಆಆಆಅ)
            ಆನಂದ ಅನ್ನೋದೂ ಮನಸ್ಸನ್ನೂ ತುಂಬಲೂ
            ಸೌಂದರ್ಯ ಅನ್ನೋದೂ (ಆಆಆಅ) ಕಣ್ಣನ್ನೂ ತುಂಬಲೂ (ಆಆಆಅ)
            ಆನಂದ ಅನ್ನೋದೂ ಮನಸ್ಸನ್ನೂ ತುಂಬಲೂ ಒಲವೆಂಬಾ.. ಬಂಗಾರ
            ಒಲವೆಂಬ ಬಂಗಾರ ಬಾಳನ್ನೂ ಸಂಡೂವೇ ಹೇಯ್ ..
           ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
           ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ .. ಅಹ್ಹಹ್ಹಾ..
 ಕೋರಸ್ : ತೂರುತೂತು ತೂರುತೂತು ತೂರುತೂತುರು
ಹೆಣ್ಣು : ತೂರುತೂತು ತೂರುತೂತು ತೂರುತೂತುರು ತೂರುತೂತು ತೂರುತೂತು ತೂರುತೂತು

ಗಂಡು : ಆವೇಶ ಅನ್ನೋದೂ (ಆಆಆಅ) ಮುಳ್ಳಂತೆ ಚುಚ್ಚೋದೂ (ಆಆಆಅ)
            ಆಕ್ರೋಶ ಅನ್ನೋದೂ ನಿನ್ನನ್ನೇ ಕೊಲ್ಲೋದು ಹ್ಹಾ...
            ಆವೇಶ ಅನ್ನೋದೂ (ಆಆಆಅ) ಮುಳ್ಳಂತೆ ಚುಚ್ಚೋದೂ (ಆಆಆಅ)
            ಆಕ್ರೋಶ ಅನ್ನೋದೂ ನಿನ್ನನ್ನೇ ಕೊಲ್ಲೋದು ಸೇಡನ್ನೂ ಮರೆತಾಗ
            ಸೇಡನ್ನೂ ಮರೆತಾಗ ಸುಖ ಶಾಂತಿ ಕಾಣುವೇ ಹೊಯ್ 
           ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
           ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ .. ಅಹ್ಹಹ್ಹಾ.. 
           ಸಂತೋಷದ ಸಂಗೀತದ ಕಡಲಲ್ಲಿಯೇ ತೇಲಾಡುವಾ
           ಎಂದೂ ಒಳ್ಳೇದೇ ಚಿಂತೇ ಮಾಡೋನು ಜಾಣ ಆಗುವಾ
           ಬಾಳ ಹಾದೀಲಿ ಅವನೂ ಎಂದೆಂದೂ ಸುಖವಾ ಕಾಣುವಾ .. ರಪಪ್ಪಪಾ.. 
-------------------------------------------------------------------------------------------------------------------------

No comments:

Post a Comment