1529. ಜಿಲ್ಕ (೨೦೨೦)

ಜಿಲ್ಕ್ ಚಲನಚಿತ್ರದ ಹಾಡುಗಳು 
  1. ಒಲವೇ ಜೀವ ಒಲವೇ ದೈವ 
  2. ಆಜಾರೇ 
  3. ನಡೆದಿದೆ ಸೊಗಸಾದ 
  4. ಜೊತೆಯಾಗಲು 
  5. ಜಿಲ್ಕ್ ಥೀಮ್ 
ಜಿಲ್ಕ (೨೦೨೦) - ಒಲವೇ ಜೀವ ಒಲವೇ ದೈವ
ಸಂಗೀತ : ಪ್ರಾಂಶು ಜಾ, ಸಾಹಿತ್ಯ : ಕವಿಷ ಶೆಟ್ಟಿ, ಗಾಯನ : ನಿಹಾಲ್ ತೌರು, ಸಂಗೀತ ರವೀಂದ್ರನಾಥ 
   
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
ಉಸಿರಿಗೇಕೆ ಒಲವ ಬೈಕೇ
ನಿನ್ನ ಒಲವೇ ನನ್ನ ಗೆಲುವು
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ

ನಿನ್ನೆಯಾ ನೆನಪುಗಳೆಲ್ಲ ಕಾಡುವ ಕನಸೀನಂತೆ
ಮರೆಯೋಕೆ ನೀ ಕಾರಣ
ಕೈ ಹಿಡಿದು ನಡೆಯುವ ಆಸೆ
ಉಸಿರಲ್ಲೂ ಬೆರೆಯುವ ಆಸೆ
ಕನಸಲ್ಲೂ ನಿನ್ನೊಂದಿಗೆ
ನಿನ್ನ ಸನಿಹ ಬೀಸೋ ತಂಗಾಳಿಯಂತೆ
ನಗುತ ಛೆಲ್ಲೋ ಒಲವಿನ ಹೂ ಮಳೆ
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ

ಮೌನ ಮುರಿದ ಮಾತಿಂಬ ತೇರು
ತೀರಾ ಪಯಣ ಕನಸಿಂಬ ಊರು
ಮೌನ ಮುರಿದ ಮಾತಿಂಬ ತೇರು
ತೀರಾ ಪಯಣ ಕನಸಿಂಬ ಊರು
ವರ್ಣಿಸಲಾಗದ ಕವಿಯ್ ಕಲ್ಪನೆ ನೀನು
ಪದವ ಹುಡುಕೋ ಪರ್ಯಾಯ ಹೇಳು
ಒಲವೇ ಜೀವ ಒಲವೇ ದೈವ
ಒಲವೇ ಮೌನ ಒಲವೇ ಧ್ಯಾನ
------------------------------------------------------------------------------------------------------------

ಜಿಲ್ಕ (೨೦೨೦) - ಆಜಾರೇ ಆಜಾರೇ 
ಸಂಗೀತ : ಪ್ರಾಂಶು ಜಾ, ಸಾಹಿತ್ಯ : ಕವಿಷ ಶೆಟ್ಟಿ, ಗಾಯನ : ಬ್ರಿಜೇಶ ಶಾಂಡಿಲ್ಯ 

ಈ ಸಂಜೆ ಮೌನಿಯಾಗಿದೆ ನೆನಪಲೆ ನೆನದಿಯೇ 
ನಿನ್ನ ಮರೆಯುವ ನೆಪದಲೇ ನೂರೊಂದು ಕನಸೊಂದು 
ಕಣ್ಣೀರ ಹನಿಯಾಗಿ ಕೊಲ್ಲುತ್ತಿದೆ ಉಸಿರನ್ನು 
ತೊರೆದು ಬದುಕಲೆಂತು ನಾನೆ ಉಸಿರನು 
ಆಜಾರೇ ಆಜಾರೇ ಆಜಾ ಆಜಾರೇ ಆಜಾರೇ ಆಜಾ 
ಆಜಾರೇ ಆಜಾ ನನ್ನ ಜೀವ ನೀ 
ಆಜಾರೇ ಆಜಾರೇ ಆಜಾ ಆಜಾರೇ ಆಜಾರೇ ಆಜಾ 
ಆಜಾರೇ ಆಜಾ ನನ್ನ ಜೀವ ನೀ 

ಮುಳುಗೋ ಸೂರ್ಯನು ಮರಳಿ ಬಾರನೇ 
ಎಲ್ಲ ಮರೆಯಲು ಮರೆವೂ... ಬೇಕಿದೇ.... 
ನಾ ನಿನ್ನ ನೆನಪಲೇ ದಹಿಸಿಯೇ 
ಈ ಕ್ಷಣವೂ ಕನವರಿಸಿಯೇ 
ನಾಳೆ ಎಂಬುದೇ ಅರಿಯದೆ ನಿಂತಿಯೇ 
ಆಜಾರೇ ಆಜಾರೇ ಆಜಾ ಆಜಾರೇ ಆಜಾರೇ ಆಜಾ 
ಆಜಾರೇ ಆಜಾ 
------------------------------------------------------------------------------------------------------------

ಜಿಲ್ಕ (೨೦೨೦) - ನಡೆದಿದೆ ಸೊಗಸಾದ ಈ ದೋಣಿ 
ಸಂಗೀತ : ಪ್ರಾಂಶು ಜಾ, ಸಾಹಿತ್ಯ : ಕವಿಷ ಶೆಟ್ಟಿ, ಗಾಯನ :ಪ್ರಣವ ಚಂದ್ರನ್ 

ನಡೆದಿದೆ ಸೊಗಸಾದ ಈ ದೋಣಿ 
ಸ್ನೇಹದ ಜೊತೆಯಲಿ ಪ್ರೀತಿಯ ತಯಾರಿ 
ಮನಸಲಿ ಮಾನಸ ಜೊತೆಯಲಿ ಹೊರಟಿದೆ ಸವಾರಿ 
ನಡೆದಿದೆ ಸೊಗಸಾದ ಈ ದೋಣಿ 
ಸ್ನೇಹದ ಜೊತೆಯಲಿ ಪ್ರೀತಿಯ ತಯಾರಿ 

ಅರಿತು ಮರಿಯದೆ ಒಲವ ವಯಸಿದೆ 
ನನ್ನನು ನೀನಲಿ ನಾ ಮರೆತಿರುವೆ 
ಹೃದಯ ನನದೇ ಬಡಿತ ನಿನ್ನದೇ 
ನನ್ನಲ್ಲಿ ನಿನ್ನ ಉಸಿರು ಬೆರೆತಿಹುದೆ  
ಹೇಳಲಾಗದ ನೂರು ಕನಸಿದೆ 
ನೀ ನನ್ನ ಕನಸಿಗೆ ಮುನ್ನಡೆಯು 
ಎಲ್ಲ ಅರಿತಿಹೆ ಸನಿಹ ನೀನಿಹೆ 
ನಿನ್ನ ನಗುವನೇ ತೀರಿಸಿರುವೆ 

ನನ್ನ ಪ್ರತಿ ಕವನಕೆ ನಿನ್ನದೇ ಕಲ್ಪನೆ 
ನಿನ್ನ ನಗುವಲಿದೆ ಗೆಲುವಿನ ಸೂಚನೆ 
ಹೆಸರು ಜೊತೆಯಾಗಲು ನೀಡು ನೀ  ಅನ್ಮಯೇ 
ಅರಿತು ಮರಿಯದೆ ಒಲವ ವಯಸಿದೆ 
ನನ್ನನು ನೀನಲಿ ನಾ ಮರೆತಿರುವೆ 
ಹೃದಯ ನನದೇ ಬಡಿತ ನಿನ್ನದೇ 
ನನ್ನಲ್ಲಿ ನಿನ್ನ ಉಸಿರು ಬೆರೆತಿಹುದೆ  
ಹೇ... ಹೇ... ನನ್ನ ನನ್ನ ನ ನನ್ನ ನ 
------------------------------------------------------------------------------------------------------------

ಜಿಲ್ಕ (೨೦೨೦) - ಜೊತೆಯಾಗಲು ನೀ ಬಯಸಿದೆ 
ಸಂಗೀತ : ಪ್ರಾಂಶು ಜಾ, ಸಾಹಿತ್ಯ : ಕವಿಷ ಶೆಟ್ಟಿ, ಗಾಯನ : ಸಂಗೀತ ರವೀಂದ್ರನಾಥ, ಪ್ರಾಂಶು ಜಾ 

ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 
ನಾ ನಿನ್ನ ಪ್ರೀತಿ ಅತಿಥಿಯ ಮುಂಚೆ 
ನಾ ನಿನ್ನ ಪ್ರೀತಿ ಅತಿಥಿಯ ಮುಂಚೆ 
ಮುತ್ತೆಂದರೇ ಮತ್ತೇನಿದೆ 
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 

ಈ ಮೌನವೇ ರೋಮಾಂಚನ ನೀನ್ ಉಸಿರಿನ ಶೃತಿ ಸಿಂಚನ 
ನಿಷ್ಕಲ್ಮಷ ನಿನ್ನ ಆನಂದನ ಅವಕಾಂಷಕೆ ಮನಸೋತೆ ನಾ... 
ನೀನೊಂದು ಕರಗೋ ಕೈಗೊಂಬೆಯಂತೇ 
ನೀನೊಂದು ಕರಗೋ ಕೈಗೊಂಬೆಯಂತೇ 
ಎದೆ ಬಡಿತಕೆ ಮಿತಿ ಇಲ್ಲದೇ   
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 

ಋತುಗಳು ಇಲ್ಲಿ ಕ್ಷಣ ಮಾತ್ರವೂ 
ಪ್ರೀತಿಯ ನೂತನ ದಿನನಿತ್ಯವೂ  
ಅರಿಯದ ಮಾಯೆ ನಿನ್ನಲ್ಲಿದೆ 
ನಾ ನಿನ್ನ ಮಡಿಲ ಮಗುವಾಗಿದೆ 
ನಿನ್ನೊಳ ಬೇಧ ಬೆರಿತೋದೇ ಎಂದೋ 
ನಿನ್ನೊಳಗೆ ನಾ ಬೆರಿತೋದೇ ಎಂದೋ  
ಮಧುಶಾಲಿಯೇ ಮನೆಯಾಗಿದೆ 
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 
ಜೊತೆಯಾಗಲು ನೀ ಬಯಸಿದೆ ನಾನು ನಿನ್ನ ಅನ್ವಯಿಸಿದೆ 
------------------------------------------------------------------------------------------------------------

ಜಿಲ್ಕ (೨೦೨೦) - ಜಿಲ್ಕ ಥೀಮ್ 
ಸಂಗೀತ : ಪ್ರಾಂಶು ಜಾ, ಸಾಹಿತ್ಯ : ಸುನಿಲ ಬಿಲ್ವ್, ಗಾಯನ : ಸುನಿಲ ಬಿಲ್ವ್, ಬ್ರಟಬೀಟ 

------------------------------------------------------------------------------------------------------------

No comments:

Post a Comment