154. ನೀಲಕಂಠ (2006)


ನೀಲಕಂಠ ಚಿತ್ರದ ಹಾಡುಗಳು
  1. ಹೆಣ್ಣಿಗೇ ಸೀರೆ ಯಾಕೆ ಅಂದ 
  2. ದೇವರು ಬರೆದ ಕಥೆಯಲ್ಲಿ 
  3. ಅಂದದ ಬೊಂಬೆಗೆ 
  4. ಮಲ್ಲ ಮಲ್ಲ ಮಲ್ಲ 
  5. ಅಮ್ಮಮ್ಮಮ್ಮೋ 
  6. ದೇವರು ಬರೆದ ಕಥೆಯಲ್ಲಿ (ಎಸ್.ಪಿ.ಬಿ.) 
ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಶ್ರೀನಿವಾಸ, ಸುಮಾ ಶಾಸ್ತ್ರೀ


ಹೆಣ್ಣು : ಹೂಂ ಹೂಂ ಹೂಂ ಹೂಂ ತಾನಾನ ತಂದಾನ ತಾನನ
          ತಂದಾನ ತಾನನ   ತಂದಾನ ತಾನ
ಗಂಡು : ಹೆಣ್ಣಿಗೆ ಸೀರೆ ಯಾಕೆ ಅಂದ ? ತಾನಾನ ತಂದಾನ ತಾನ
            ಹೆಣ್ಣಿಗೆ ಸೀರೆ ಯಾಕೆ ಅಂದ?
           ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ಹೆಣ್ಣು : ತಾನಾನ ತಂದಾನ ತಾನನ
ಗಂಡು :   ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆಹಾ... ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ
ಹೆಣ್ಣು : ತೆರರರಾ...
ಗಂಡು : ಹಣೆಯಲ್ಲಿ ಸಿಂಧು ಅಂದದ ಬಂಧು
           ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ
           ಇಂದು ತೇಗೋ ಹೃದಯಕೆ ಹೆಣ್ಣಿನ ಅಂದವೇ,
           ಮದುವೆಯ ಭೋಜನವಂತೆ,ಮದುವೆಯ ಭೋಜನವಂತೆ
           ಹೆಣ್ಣಿಗೆ ಸೀರೆ ಯಾಕೆ ಅಂದ?
ಹೆಣ್ಣು : ತೆರರರಾ...

ಹೆಣ್ಣು : ರೇನಾ ಹೇನಾರೋ
ಗಂಡು : ಘಲ್ ಘಲ್ ಈ ಬಳೆಗಳು ನೋಡು..ಒಳ್ಳೆಯ ಶಕುನ ನೋಡು..
           ಜಲ್ ಜಲ್ ಗೆಜ್ಜೆಗಳು ನೋಡು.. ಸ್ವರಗಳ..ಸ್ವರಗಳ ಸರಿಗಮ ನೋಡು..
          ಹೆಣ್ಣು ನಕ್ಕರೆ ಆಹಾ  ದೀಪಾವಳಿ ಹೆಣ್ಣು ನಡೆದರೆ ಆಹಾ  ಸಂಕ್ರಾಂತಿಲಿ
          ಬಂದು ಹೋಗೋ ಹಬ್ಬಗಳು ಯಾಕೆ ಬೇಕು
         ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ
         ಹೆಣ್ಣಿಗೆ ಸೀರೆ ಯಾಕೆ ಅಂದ?
        ಆ..  ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ಹೆಣ್ಣು : ತೆರರರಾ... ತಾನನ...ತಂದಾನಾ..ನಾನನಾ
           ತೆರರರಾ.ತಂದಾನಾ.ತೆರರರಾ.ತಂದಾನಾ.
           ತೆರರರಾ.ತಂದಾನಾ.ತೆರರರಾ.ತಂದಾನಾ.

ಹೆಣ್ಣು : ರೇನಾ ಹೇನಾರೋ
ಗಂಡು : ನವಿಲೇ ನನ್ನವಳೇ ಕೇಳೇ ಹೃದಯದ ಮಾತು ಕೇಳೇ
           ಸುಳ್ಳು ಪುಳ್ಲ್ಲೂ ಎಲ್ಲ ಹೆಣ್ಣಿಗೆ..ಹೆಣ್ಣಿಗೆ ಒಡವೆ ಬೇಕಿಲ್ಲ..
           ನಗುವೇ ಅವಳ ಒಡವೆಯಂತೆ ಸಹನೆ ಅವಳ ಜೊತೆಯಂತೆ
           ಭುವಿಗೆ ಅಲಂಕಾರ ಈ ಹೆಣ್ಣು
           ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ
           ಹೆಣ್ಣಿಗೆ ಸೀರೆ ಯಾಕೆ ಅಂದ?
          ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
          ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ ಕರಗಿಹೋಗೊ ಆ ಹೃದಯದಂತೆ
ಹೆಣ್ಣು : ರೇನಾ ರೇನಾರೋ    ತಾನನ...ತಂದಾನಾ..ನಾನನಾ
           ತೆರರರಾ.ತಂದಾನಾ.ತೆರರರಾ.ತಂದಾನಾ.
           ತೆರರರಾ.ತಂದಾನಾ.ತೆರರರಾ.ತಂದಾನಾ.
------------------------------------------------------------------------------------------------------------------------

ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಸ್.ಪಿ.ಬಿ,ನಂದಿತಾ


ಗಂಡು : ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು :  ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು :  ಆರಾರಿರಾರೋ ಹಾಡು
ಹೆಣ್ಣು : ಪ್ರೀತಿಗೆ ಮೊದಲ ಹಾಡು
ಗಂಡು :   ಅಮ್ಮ ಅನ್ನೋ ಮಾತು
ಹೆಣ್ಣು : ಪ್ರೀತಿಗೆ ಮೊದಲ ತುತ್ತು
ಗಂಡು : ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು :  ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ

ಗಂಡು : ನೋವಿಗೆ ಮೊದಲ ಔಷದಿ ಅಮ್ಮ ಅನ್ನೋ ಕೂಗೆ
ಹೆಣ್ಣು  : ಕಂದನ ಮೊದಲಾ ಆಸೆಗೆ ತಾಯಿ ನಾಂದಿಯಂತೆ
ಗಂಡು : ಮೊದಲಿಗೆ ಮೊದಲಿಲ್ಲಿ ಈ ತಾಯಿಯೇ ಮೊದಲಿಲ್ಲಿ
ಹೆಣ್ಣು :  ಒಂಬತ್ತಾದರೂ ತೊಂಬತ್ತಾದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ಗರ್ಭದಗುಡಿಯಲಿ ಭಗವಂತ ತಾನೇ ಕುಳಿತ ಸ್ವಾರ್ಥಿ ಕಣೋ
            ತಾಯಿಯು ಗರ್ಭವ ಕಂದನಿಗೆ ಮೀಸಲು ಇಡುವ ನಿಸ್ವಾರ್ಥಿ ಕಣೋ

ಗಂಡು : ಕರುಳನೇ ತೊಟ್ಟಿಲ್ಲ ಮಾಡಿ ಕಂದನನ್ನು ತೂಗುವಳು
ಹೆಣ್ಣು : ಮನಸನ್ನೇ ಮೆಟ್ಟಿಲ್ಲ ಮಾಡಿ ಕನಸನು ಜಯಿಸುವಳು
ಗಂಡು : ಕೊನೆಗೆ ಕೊನೆಯಲ್ಲಿ ತಾಯಿ ಪ್ರೀತಿಗೆ ಕೊನೆಯಲ್ಲಿ
ಹೆಣ್ಣು : ಜೊತೆಗೆ ಇದ್ದರು ಇಲ್ಲದಿದ್ದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು :   ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ
--------------------------------------------------------------------------------------------------------------------------

ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಸ್.ಪಿ.ಬಿ,


ಕೋರಸ್ : ಸ ಸಾನಿ ಸಾರಿರಿಗಸ್ ಗಮಗರಿಸ್ ಸನಿ
               ಸನಿ ರಿಗಸ್ ಗಮಗರಿಸ್  ನಿಸನೀಸ
               ಗರಿಗಸ ರಿಸಾನಿ ಪಮರಿ ಗಮಗರಿಸಪ
              ಹೂಂ ಹೂಂ ಹೂಂ ಹೂಂ ಹೂಂ ಹೂಂ
ಗಂಡು : ಅಂದದ ಬೊಂಬೆಗೆ... ಗಂಧದ ಶೃಂಗಾರ..
           ಅಂದದ ಬೊಂಬೆಗೆ, ಗಂಧದ ಶೃಂಗಾರ
           ಚೆಂದದ ಬೊಂಬೆಗೆ, ಹೂವಿನ ವಯ್ಯಾರ
          ಬಂಗಾರಕೆ ಬಂಗಾರದ ಒಡವೆ ಯಾಕೆ ಹೇಳಿ ತಂದನೋ ..( ಸ ರಿಸನಿ ನಿಸಪ)
          ಹೂವಿಗೆ ಹೂವಿನ ಅಲಂಕಾರ ಯಾಕೆ ತಂದನೋ .( ಸ ರಿಸನಿ ನಿಸಪ)
         ನಿನ್ನ ನಗುವೆ ಬಂಗಾರ, ಮೌನಾಲಂಕಾರ
         ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
         ಅಂದಕೆ ಅಂದ ತಂದ ತಂದಾನಾ
         ಅಂದದ ಬೊಂಬೆಗೆ ಗಂಧದ ಶೃಂಗಾರ
         ಚೆಂದದ ಬೊಂಬೆಗೆ ಹೂವಿನ ವಯ್ಯಾರ

ಹೆಣ್ಣು : ಸ.. ನಿಸಾ ನಿಸಾ  ನಿಸಾ  ಸರಿಗರಿಸಾ ಪನೀಪಮ ಸಗಾ
ಗಂಡು : ನಮ್ಮೂರ ಶಿಲ್ಪ ನೀನೆ ಕೇಳೆ ಓ ಚೆಲುವೆ
            ಬೇಲೂರು ಹಳೆಬೀಡು ಯಾಕೆ ಹೇಳೆ
            ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ
           ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ )
           ಆ.. ಆ.. ನವಿಲು ಕೂಡ ಮಳೆಗೆ ಕಾಯದೆ
          ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ
          ಓ ರಾಜಕುಮಾರಿ, ಓ ರಾಜಕುಮಾರಿ
          ಊರಿಗೆ ಮೆರಗು ತಂದ ಅಂದಾನೆsss
         ನಿನ್ನ ನಗುವೆ ಬಂಗಾರ, ಮೌನಾಲಂಕಾರ
         ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
         ಅಂದಕೆ ಅಂದ ತಂದ ತಂದಾನಾ
         ಅಂದದ ಬೊಂಬೆಗೆ ಗಂಧದ ಶೃಂಗಾರ
       ಚೆಂದದ ಬೊಂಬೆಗೆ ಹೂವಿನ ವಯ್ಯಾರ

ಹೆಣ್ಣು : ಸ ಸರಿ ಸಾರಿಗರಿಸ ಗಮಗರಿಸ ಸಾನಿ
          ಸಾನಿ ರಿಗಸ ಮಪಗರಿಸ ರಿಸನೀಸ ಗರಿಗಸ
          ನಿಸನಿ ಪಪಗರಿ ಗರಿಸನೀಸ ಅ..
ಗಂಡು : ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ
           ಮೈಮರೆತಿವೆ ಯಾಕೆ ಹೇಳೆ ಚೆಲುವೆ
          ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
          ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ )
         ಆ.. ಆ.. ನಿನ್ನ ಅಂದ ಚಂದಾನೆ, ಅದಕೆ ಕಾರಣ ಓ ಚೆಲುವೆ
        ಓ ರಾಜಕುಮಾರಿ, ಓ ರಾಜಕುಮಾರಿ
        ಊರಿಗೆ ಮೆರಗು ತಂದ ಅಂದಾನೆsss
       ನಿನ್ನ ನಗುವೆ ಬಂಗಾರ, ಮೌನಾಲಂಕಾರ
       ನಿನ್ನ ಅಂದವ ನೋಡಿ, ನಾನು ಕವಿಯಾದ್ನಲ್ಲ
       ಅಂದಕೆ ಅಂದ ತಂದ ತಂದಾನಾ
--------------------------------------------------------------------------------------------------------------------------

ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಚೈತ್ರ


ಅಅಓ ಅಅಓ ಅಅಓ ಅಅಓ ಅಅಓ ಅಅಓ ಅಅಓ ಅಅಓ  ಓಓಓ 
ಅಅಓ ಅಅಓ ಅಅಓ ಅಅಓ ಅಅಓ ಅಅಓ ಅಅಓ ಅಅಓ  ಓಓಓ 
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ 
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ಗಲ್ಲ (ಉಹೂಂಹೂಂ )
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ 
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ಗಲ್ಲ 
ಮಾಹೀ... ಮಾಹೀ... ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ 
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ಗಲ್ಲ
(ಹೇ.. ಹೇ.. ಹೇ.. ಹೇ.. ಹೇ.. )
ಟಿವಿಂಕಲ್ ಟಿವಿಂಕಲ್ ಸ್ಟಾರ್ ಆಯ್ ವಂಡರ್ ವೇರ್ ಯೂ ಆರ್ 
ಕ್ರೇಜಿ ಸ್ಟಾರ್  ಕ್ರೇಜಿ ಸ್ಟಾರ್ ಆಯ್ ಲವ್ ಯು ವೇರ್ ಯು ಆರ್ 

ಗನ್ನು ಗನ್ನು ಕಣ್ಣಲ್ಲೇ ಕೊಲ್ಲುತ್ತಾನೆ ಗಂಡು ಗುಂಡು ಮಾತಲ್ಲೇ ಸಿಡೀತಾನೇ
ಓಓಓ..  ಸುತ್ತ ಮುತ್ತ ಅಂಥೋನು ಇಲ್ಲ ಕಣೇ ಅವನೇ ಎಂದು ನನ್ನ ರಾಜ ಕಣೇ
ಊರಿಗೆ ಒಬ್ಬ ಪ್ರೀತಿಗೆ ಒಬ್ಬ ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ಗಲ್ಲ 
(ಹೇ.. ಹೇ.. ಹೇ.. ಹೇ.. ಹೇ.. )

ಜಂತರ ಮಂತರ್ ಜಾದೂಗಾರ್ ಕಣೇ ಅಂದರ್ ಬಾಹರ್ ಎಲ್ಲಾ ಒಂದೇ ಕಣೇ
ಅಆಆಅಆಆ..  ಅಂಕು ಡೊಂಕು ಅವನಲ್ಲಿ ಇಲ್ಲಾ ಕಣೇ ಡಿಂಗು ಡಾಂಗು ಈ ದಿಲಗೇ ಕಿಂಗು ಕಣೇ
ಅಬ್ಬಬ್ಬಾಬ್ಬಾ ಪ್ರೀತಿಗೆ ಒಬ್ಬ ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ 
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ಗಲ್ಲ ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ಗಲ್ಲ ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
--------------------------------------------------------------------------------------------------------------------------

ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಸ್.ಪಿ.ಬಿ., ನಂದಿತಾ 


ಕೋರಸ್ : ಜೂ ಜೂ ಜೂ ಜೂ ಜೂ ಜೂ ಜೂ ಜೂ ಜೂ
                ತಾಮ್ ತದನ ತದನ ತತ ತಾಮ್  ತದನ
                ತಾಮ್ ತದನ ತದನ ತತ ತಾಮ್  ತದನ
ಗಂಡು : ಅಮ್ಮಮ್ಮಮ್ಮಮ್ಮೊ  ಒಯ್ಯಾರಮ್ಮಮ್ಮಮ್ಮೋ
           ಅಮ್ಮಮ್ಮಮ್ಮಮ್ಮೊ ನೀ  ಸಿಂಗಾರಮ್ಮಮ್ಮಮ್ಮೋ
          ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
          ಈ ಹೊನ್ನೇ ನಂದಮ್ಮಾ ಇವಳ ಅಂದ ನೋಡಮ್ಮಾ
          ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
         ಕಣ್ಣ ಕೇಡಿಸೋ ಮದನಾರಿ ನಾ ಪ್ರೇಮ ಪೂಜಾರಿ
         ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
        ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
 ಕೋರಸ್ : ತಾಮ್ ತಜಣು ತಜಣು ತಜಣು ತತ
                ತಾಮ್ ತಜಣು ತಜಣು ತಜಣು ತತ ತಕೀಟು
               ತಾಮ್ ತಜಣು ತಜಣು ತಜಣು

ಗಂಡು : ಆಡು ಮುಟ್ಟದ ಸೊಪ್ಪಿಲ್ಲಾ ನಿನ್ನ ಮೆಚ್ಚದವರ ಯಾರಿಲ್ಲ 
ಹೆಣ್ಣು : ಅಮ್ಮಮ್ಮಮ್ಮಮ್ಮೊ  ಅಮ್ಮಮ್ಮಮ್ಮಮ್ಮೊ 
ಗಂಡು : ಜೇನಿಗಿಂತ ಸಿಹಿ ಬೇರಿಲ್ಲ ನಿನ್ನ ಮುತ್ತಿಗಿಂತ ಸಿಹಿ ಬೇಕಿಲ್ಲ 
ಹೆಣ್ಣು : ಅಮ್ಮಮ್ಮಮ್ಮಮ್ಮೊ  ಅಯ್ಯೋ ಅಮ್ಮಮ್ಮಮ್ಮಮ್ಮೊ 
ಗಂಡು : ಕಣ್ಣು ಕುಕ್ಕುವ ಬೆಚ್ಚಿ ಬೀಳುವಾ ಅಂದವಾದ ಹೆಣ್ಣು 
           ರುಚಿ ರುಚಿಯ ಬಾಯಿ ಚಪ್ಪರಿಸುವ ಸಿಹಿಯಾದ ಹೆಣ್ಣು 
           ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು 
          ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
          ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ

ಗಂಡು : ಅಂಗೈಲಿ ನಿನ್ನ ಕೂಡ ಹಾಕಿ ಕಣ್ಣಲ್ಲೇ ನಿನ್ನ ಕಟ್ಟ ಹಾಕಿ     
ಹೆಣ್ಣು : ಅಮ್ಮಮ್ಮಮ್ಮಮ್ಮೊ  ಅಮ್ಮಮ್ಮಮ್ಮಮ್ಮೊ 
ಗಂಡು : ಮಾತಲ್ಲಿ ನಿನ್ನ ಗಂಟ ಹಾಕಿ ಎದೇಲಿ ಹೊಡೆದೆ ಪಟಾಕಿ 
ಹೆಣ್ಣು : ಅಮ್ಮಮ್ಮಮ್ಮಮ್ಮೊ  ಅಯ್ಯೋ ಅಮ್ಮಮ್ಮಮ್ಮಮ್ಮೊ 
ಗಂಡು : ಮನದ ಕೊಂಬೆಯಲ್ಲಿ ತೂಗಾಡುವ ನನ್ನ ಹಣ್ಣು ನೀನು 
           ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು
          (ಅಮ್ಮಮ್ಮಮ್ಮಮ್ಮೊ) ಒಯ್ಯಾರಮ್ಮಮ್ಮಮ್ಮೋ
          (ಅಮ್ಮಮ್ಮಮ್ಮಮ್ಮೊ )ನೀ ಸಿಂಗಾರಮ್ಮಮ್ಮಮ್ಮೋ
          ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
          ಈ ಹೊನ್ನೇ ನಂದಮ್ಮಾ ಇವಳ ಅಂದ ನೋಡಮ್ಮಾ
          ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
          ಕಣ್ಣ ಕೇಡಿಸೋ ಮದನಾರಿ ನಾ ಪ್ರೇಮ ಪೂಜಾರಿ 
 ಕೋರಸ್ : ತಾಮ್ ತಜಣು ತಜಣು ತಜಣು ತತ
                ತಾಮ್ ತಜಣು ತಜಣು ತಜಣು ತತ ತಕೀಟು
               ತಾಮ್ ತಜಣು ತಜಣು ತಜಣು
------------------------------------------------------------------------------------------------------------------------

ನೀಲಕಂಠ (೨೦೦೬)
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಸ್.ಪಿ.ಬಿ.  


ದೇವರು ಬರೆದ ಕತೆಯಲ್ಲಿ ಕೊನೆಯ ಪುಟವೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಗೆ ಕೊನೆಯಿಲ್ಲಿ
ಆರಾರಿರಾರೋ ಹಾಡು ಮೌನವಾಯಿತಲ್ಲೋ
ಅಮ್ಮ ಅನ್ನೋ ಮಾತು ಮಣ್ಣಾಗಿ ಹೋಯಿತಲ್ಲೋ
ದೇವರು ಬರೆದ ಕತೆಯಲ್ಲಿ ಕೊನೆಯ ಪುಟವೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಗೆ ಕೊನೆಯಿಲ್ಲಿ

ಅಮ್ಮ ಅನ್ನದೇ ದಿನವಿಲ್ಲ ಸೂರ್ಯ ಮುಳುಗೋದಿಲ್ಲ
ಅಮ್ಮ ಅನ್ನದ ಜೀವ ಇಲ್ಲ ಮರೆತರೇ ಸಾವಲ್ಲ
ಕೊನೆಗೆ ಕೊನೆ ಎಲ್ಲಿ ತಾಯಿ ಪ್ರೀತಿಗೆ ಕೊನೆ ಎಲ್ಲಿ
ಜೊತೆಗೆ ಇದ್ದರೂ ಇಲ್ಲದ್ದಿದ್ದರೂ ಈ ಪ್ರೀತಿ ಬದಲಾಗದು
ದೇವರು ಬರೆದ ಕತೆಯಲ್ಲಿ ಕೊನೆಯ ಪುಟವೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಗೆ ಕೊನೆಯಿಲ್ಲಿ

ಮನೆಯೇ ದೀಪ ಇರುವರೆಗೂ ಬೆಳಕಾಗಿರುವಳೂ ಅಮ್ಮಾ 
ಮನಸಲ್ಲಿ ನೆನಪು ಇರುವರೆಗೂ ಜೊತೆಯಾಗಿರುವಳೂ ಅಮ್ಮಾ 
ಕೊನೆಗೆ ಕೊನೆ ಎಲ್ಲಿ ತಾಯಿ ಪ್ರೀತಿಗೆ ಕೊನೆ ಎಲ್ಲಿ
ಜೊತೆಗೆ ಇದ್ದರೂ ಇಲ್ಲದ್ದಿದ್ದರೂ ಈ ಪ್ರೀತಿ ಬದಲಾಗದು
ದೇವರು ಬರೆದ ಕತೆಯಲ್ಲಿ ಕೊನೆಯ ಪುಟವೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಗೆ ಕೊನೆಯಿಲ್ಲಿ 
--------------------------------------------------------------------------------------------------------------------------

No comments:

Post a Comment