613. ಸೈಕೋ (೨೦೦೮)


ಸೈಕೋ ಚಲನಚಿತ್ರದ ಹಾಡುಗಳು 
  1. ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ 
  2. ನಿನ್ನ ಪೂಜೆಗೆ ಬಂದೆ ಮಹದೇಶ್ವರ
  3. ಪ್ರೀತಿಯ ಮನಶಾಂತಿಯ 
  4. ಏನೋ ಇದೆ ಈ ಪ್ರೀತಿಲಿ ಏನೋ ಇದೆ
  5. ಈ ತನುವು ನಿನ್ನದೇ ನಿನ್ನಾಣೆ ಈ ಮನವು 
  6. ಬೆಳದಿಂಗಳಂತೆ ಮಿನು ಮಿನುಗುತ 
ಸೈಕೋ (೨೦೦೮) - ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ 
ಸಂಗೀತ : ರಘು ದೀಕ್ಷಿತ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಸೈಂಧವಿ

ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೋ ಯಾವೂರೋ ಕಾಣೆ ಹೇಗೋ ನನ್ನಲ್ಲಿ ಸೇರಿ ಹೋದೆ
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮ ಸಂಯೋಗ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇನೆ
ನೀ ಪ್ರೀತಿ ಮಾತಾಡುತ ಬಲೆ ಬೀಸೆ ನಾ ಸಿಕ್ಕಿದೆ
ಹೊಸ ಪ್ರೇಮ ಸವಿಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ತಂದ ತಾಪ ನನ್ನ ಮನಸ ತಾಕದೇನೋ
ಬರಿ ಕಣ್ಣು ಕಾಣದ ತಂಗಾಳಿ, ತಂದಂತೆ ಕಂಪಿನ ರಂಗೋಲಿ
ನೀನಿಂತೆಯೋ ಈ ಹೆಣ್ಣಲ್ಲಿ, ನಿಜ ಬಂಧಿಯು ನೀನು ನನ್ನಲ್ಲಿ

ನರನಾಡಿಯ ವೀಣೆಯು ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನಿನ್ನ ಪ್ರೇಮಿ
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ
ನವ ಚೈತ್ರ ಕಂಡಂತ ಭೂಮಿ
ಅಲೆ ನೂರು ಆಸೆ ಕಡಲಲ್ಲಿ, ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದ ಚಂದ್ರ ಎಲ್ಲಿ, ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ, ಎದುರಲ್ಲಿ ಬಾ ಪ್ರಿಯ ಸಂತೋಷ
ನೀ ನಾಯಕ ಈ ಕಾವ್ಯಕ್ಕೆ, ಆ ಬ್ರಹ್ಮನು ತಂದ ಬಂಧಕ್ಕೆ
---------------------------------------------------------------------------------------------------------------------

ಸೈಕೋ (೨೦೦೮) - ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಸಂಗೀತ : ರಘು ದೀಕ್ಷಿತ ಸಾಹಿತ್ಯ : 
ರಘು ದೀಕ್ಷಿತ್, ವಿ.ಮನೋಹರ  ಗಾಯನ : ರಘು ದೀಕ್ಷಿತ್, ಹರಿಚರಣ್

ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
ಹೇ ಶಂಕರ ಪ್ರೇಮಾಂಕುರ ಆದ ನಂತರ ನೆಮ್ಮದಿ ದೂರ
ಯಾಕೀಥರ ಹೇಳು ಪ್ರೇಮಾಂಬೊದೆ ಹುನ್ನಾರ
ಇದರಿಂದ ಶಾಂತಿ ಸಂಹಾರ

ಒಮ್ಮೆ ಚಂದದಿ ನೋಡೋ ಮಹದೇಶ್ವರ
ಶಂಭೋ ಹುಂಬರು ನಂಬೋ ಈ ಪಂಜರ
ಟೇಕ್ ಎ ಬ್ರೇಕ್ ನೌ ವೆನ್ ಲೀಸನಿಂಗ್ ಟು ದಿ ಸಾಂಗ್ 
ಪ್ರೇಯಿಂಗ್ ಟು ದಿ ಲಾರ್ಡ್ ವೆನ್ ಹೀ ಇಸ್ ಆಲ್ ಅರೌಂಡ್ 
ಪ್ರೊಟೆಕ್ಟ್ ದಿಸ್ ವರ್ಲ್ಡ್ ಓ ಮಹದೇಶ್ವರ 
ಸುಪ್ರೀಂ ಡಿವೈನ್ ಶಂಭೋ ಶಂಭೋ ಹರ ಹರ 
ಈ ಪ್ರೇಮವು ದೇವರ ಹಾಗೆ ನನ್ನೊಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೆ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ ಬದುಕಿನ ಗತಿ ಬದಲಿಸೋ ಗಡಿಯಾರ
ನಿನ್ನ ಪೂಜೆಗೆ......

ಓ ಪ್ರೇಮವೇ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದಾ ಚೈತನ್ಯಧಾಮ
ಈ ಮುಗ್ದ ಹೃದಯದಿ ಚಿಗುರಿದೆ ಸಡಗರ ಗುನುಗುನಿಸಲಿ ಸುಮಧುರ ಝೇಂಕಾರ
ನಿನ್ನ ಪೂಜೆಗೆ ಬಂದೆ ಮಹದೇಶ್ವರ ಇವನ ಕರುಣದಿ ಕಾಯೋ ಮಹದೇಶ್ವರ
ಶಂಭೋ ಯಾರಿವನ್ಯಾರೋ ಮಹದೇಶ್ವರ ಪ್ರೇಮ ದೇವರು ಎಂದ ಪ್ರೇಮೇಶ್ವರ
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯ ಆಸೆ ಈಡೇರಿಸೋ ಹರ
ಇನ್ನಾಗಲಿ ಬಾಳು ಬಂಗಾರ.....
--------------------------------------------------------------------------------------------------------------------------

ಸೈಕೋ (೨೦೦೮) - ಪ್ರೀತಿಯ ಮನಶಾಂತಿಯ 
ಸಂಗೀತ : ರಘು ದೀಕ್ಷಿತ ಸಾಹಿತ್ಯ : ಜಯಂತ ಕಾಯ್ಕಿಣಿ, ರಘುದೀಕ್ಷಿತ  ಗಾಯನ : ರಘು ದೀಕ್ಷಿತ

ಪ್ರೀತಿಯ ಮನಶಾಂತಿಯ ಸಿರಿಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾ ಕಿರಣ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು

ಕಡಲಿನ ಮಲೆ ಮಡಿಲಿನ ಬಿಸಿ ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು ಎಳೆಯುವ ತೇರಿದು
ಜ್ಞಾನದ ಪರಿಕಾನದ ಹಂಬಲ ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ
ನಮ್ಮ ನಾಡು ಕರುನಾಡು ನಮ್ಮ ನಾಡು ಕರುನಾಡು
ಕನ್ನಡ ಸತ್ಯ....ನಮ್ಮ ನಾಡು ಕನ್ನಡ ನಿತ್ಯ....ಕರುನಾಡು
--------------------------------------------------------------------------------------------------------------------------

ಸೈಕೋ (೨೦೦೮) - ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಸಂಗೀತ : ರಘು ದೀಕ್ಷಿತ ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ರಘು ದೀಕ್ಷಿತ

ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಓ ತನ್ನ ರಾಗವನ್ನೇ ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ ಸರಿ ಉತ್ತರ ನೀಡು ಒಲವೆ.....
ಬೆಳದಿಂಗಳೇ ಮರೆಯಾಗಿದೆ ಮರೆಯಾಗಿದೆ
ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ

ಕಾಡುವಂತ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೇ ಬಯಲಾಗಿದೆ ಬಯಲಾಗಿದೆ
ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಬಾಳಿನ ದೀಪವೆ........
--------------------------------------------------------------------------------------------------------------------------

ಸೈಕೋ (೨೦೦೮) - ಈ ತನುವು ನಿನ್ನದೇ ನಿನ್ನಾಣೆ ಈ ಮನವು 
ಸಂಗೀತ : ರಘು ದೀಕ್ಷಿತ ಸಾಹಿತ್ಯ : ರಘು ದೀಕ್ಷಿತ, ದೇವದತ್ತ  ಗಾಯನ : ರಘು ದೀಕ್ಷಿತ

ಈ ತನುವು ನಿನ್ನದೇ ನಿನ್ನಾಣೆ ಈ ಮನವು ನಿನ್ನದೇ ನಿನ್ನಾಣೆ
ಈ ಒಲವು ನಿನ್ನದೇ ನಿನ್ನಾಣೆ ಈ ಉಸಿರು ನಿನ್ನದೇ ನಿನ್ನಾಣೆ
ನೀನೇನೆ ಅಂದರು ನೀ ನನ್ನ ಕೊಂದರು ಈ ಜೀವ ಹೋದರು ಪ್ರೇಮಿ ನೀನೆ
ನೀನೆ ಬೇಕು.....ನೀನೆ ಬೇಕು......ನಿಲ್ಲದೆ ಏನೀ ಬದುಕು
ನೀನೆ ಬೇಕು.....ನೀನೆ ಬೇಕು.....ಈ ಬಾಳಿಗೆ ನೀನೆ ಬೆಳಕು
ಈ ತನುವು ನಿನ್ನದೇ ನನ್ನಾಣೆ ಈ ಮನವು ನಿನ್ನದೇ ನನ್ನಾಣೆ
ಈ ಹೃದಯ ನಿನ್ನದೇ ನಿನ್ನಾಣೆ ಈ ಜನುಮ ನಿನ್ನದೇ ನಿನ್ನಾಣೆ

ನೀ ಶಾಪ ಕೊಟ್ಟರು ನಾ ನಾಶವಾದರು ನೂರಾರು ಜನ್ಮಕು ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಯಾಕಿ ಬದುಕು
ನಾ ನಿನ್ನನು ಮೆಚ್ಚಿದ ಕೂಡಲೆ ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದೆ ನೀ ಬೆರೆತು ಹೋಗಿಹೆ
ನನ್ನಾಣೆಗೂ ಎಂದಿಗೂ ಪ್ರೇಮಿ ನೀನೆ
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
ನೀನೆ ಬೇಕು ನೀನೆ ಬೇಕು ನೀನಿಲ್ಲದೆ ಏನೀ ಬದುಕು
-----------------------------------------------------------------------------------------------------------------------

ಸೈಕೋ (೨೦೦೮) - ಬೆಳದಿಂಗಳಂತೆ ಮಿನು ಮಿನುಗುತ 
ಸಂಗೀತ : ರಘು ದೀಕ್ಷಿತ ಸಾಹಿತ್ಯ : ಜಯಂತ ಕಾಯ್ಕಿಣಿ  ಗಾಯನ : ಹರಿಚರಣ್, ಸೈಂಧವಿ

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಅಲೆ ಅಲೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ ಅಪರೂಪ ರೂಪಸಿಯೇ ನಿನಗೆ ಪ್ರಣಾಮ

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೇ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೊಹಿತನೆ ನಿನಗೆ ಪ್ರಣಾಮ ಹಿತವಾದ ಸ್ನೇಹಿತನೇ ನಿನಗೆ ಪ್ರಣಾಮ

ಕನಸಲ್ಲೂ ಹುಚ್ಚನಂತೆ ನಿನಗಾಗಿ ಓಡುವೆ ಮೈಮರೆತು ಸಂತೆಯಲ್ಲೂ ನಿನ್ನನ್ನೇ ಕೂಗುವೆ
ಒರಗಿರಲು ನಿನ್ನ ಮಡಿಲಲಿ
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಝೀಕುವೆ
ನೀನಿರಲು ನನ್ನ ಕತೆಯಲಿ ನಾನಿರುವೆ ನಿನ್ನ ಜೊತೆಯಲಿ.......

ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲಿ ನಾನೆಂದೂ ನೋಡದಂತ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ ಕೈಯಿರಲು ನಿನ್ನ ಕೈಯಲಿ
ನಾನಿರುವೆ ನಿನ್ನ ಬಾಳಲಿ.....
-------------------------------------------------------------------------------

No comments:

Post a Comment