178. ಈ ಬಂಧ ಅನುಬಂಧ (೧೯೮೪)

ಈ ಬಂಧ ಅನುಬಂಧ ಚಲನಚಿತ್ರಗಳು 
  1. ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ
  2. ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ
  3. ಮುದ್ದು ಕಂದ ಬಂದ ಬಂದ 
  4. ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ 
  5. ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ (ಎಸ್.ಜಾನಕೀ )
  6. ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ (ಪಲ್ಲವಿ )
ಈ ಬಂಧ ಅನುಬಂಧ (೧೯೮೪)...........ಚೈತ್ರ ಬರುವ ಕಾಲದೆ
ಸಂಗೀತ : ರಮೇಶ್ ನಾಯ್ಡು  ಸಾಹಿತ್ಯ : ಆರ್.ಎನ್. ಜಯಗೋಪಾಲ್    ಗಾಯನ : ಎಸ್.ಜಾನಕಿ

ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ
ನಗುತ ನಲಿವ ಕಾಲದೆ ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ
ಪೂಜೆ ಮಾಡೋ ಕಾಲದೆ   ಆ....ಆ....ಆಆಆ ...
ಪೂಜೆ ಮಾಡೋ ಕಾಲದೆ ಗುಡಿಯು ಮುಚ್ಚಿತೇಕೆ
ನೆನೆಪು ನೂರು ಮಾಸದೆ ಮನದೇ ಉಳಿಯಿತೇಕೆ
ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ

ಆ.....ಆ.....ಆ.....ಆಆಆ... ಆಆಆ
ಪ್ರ್ರೇಮ ತಂದ ಪಲ್ಲವಿ ನಾನು ಹಾಡೋ ಮುನ್ನ ಅರ್ಧದಲ್ಲಿ ಗೀತೆಯು ನಿಂತಿತೇಕೆ
ಪ್ರ್ರೇಮ ತಂದ ಪಲ್ಲವಿ ನಾನು ಹಾಡೋ ಮುನ್ನ ಅರ್ಧದಲ್ಲಿ ಗೀತೆಯು ನಿಂತಿತೇಕೆ
ನನ್ನ ಬಾಳ ಪಯಣವು ಗುರಿಯ ಸೇರೋ ಮುನ್ನ ನಡೆವ ದಾರಿ ಅರ್ಧದೆ ಅಗಲಿತೇತಕೇ
ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ

ಆ.....ಆ.....ಆ.....ಆಆಆ ಆಆಆ
ಹಾಡಿದಾಗ ತಾರದೆ ಹರುಷದಿಂದ ಕೋಗಿಲೆ ಮಾಮರಕೆ ಏಕಿಂಥ ಕೋಪಗೊಂಡಿತು
ಹಾಡಿದಾಗ ತಾರದೆ ಹರುಷದಿಂದ ಕೋಗಿಲೆ ಮಾಮರಕೆ ಏಕಿಂಥ ಕೋಪಗೊಂಡಿತು
ಉಸಿರುಸಿರು ಅಂದಾಗ ಸಂಗಾತಿ ತಪ್ಪೇನು ಅಭಿಮಾನವು ಏಕಿಂಥ ದೂರ ತಂದಿತು
ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ ನಗುತ ನಲಿವ ಕಾಲದೆ ನೋವು ತುಂಬಿತೇಕೆ
ಚೈತ್ರ ಬರುವ ಕಾಲದೆ ಆಷಾಢ ಬಂದಿತೇಕೆ
--------------------------------------------------------------------------------------------------------------------------

ಈ ಬಂಧ ಅನುಬಂಧ (೧೯೮೭) - ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ

ಸಂಗೀತ: ರಮೇಶ್ ನಾಯ್ಡು  ಸಾಹಿತ್ಯ: ಆರ್.ಎನ್.ಜಯಗೋಪಾಲ್   ಹಾಡಿದವರು: ಎಸ್.ಪಿ.ಬಿ.

ಗಂಡು : ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
           ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
           ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
           ಈ ಬಂಧ ಅನುಬಂಧ   ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ಗಂಡು : ಹಗಲಿಗೆ ಬೇಕು ಸೂರ್ಯನ ಕಿರಣ ನಿನಗೆ ಸಾಕು ಲಜ್ಜಾಭರಣ
            ನೋಡುತ ನಿನ್ನ ಕೆನ್ನೆಯ ಬಣ್ಣ ಮುಚ್ಚಲಿ ಹೇಗೆ ನನ್ನಯ ಕಣ್ಣ
            ನನ್ನಯ ಉಸಿರಿನ ಬಿಸಿ ನೀನು ನವ ಯೌವನದ ಶೃತಿ ನೀನು
            ನನ್ನಯ ಉಸಿರಿನ ಬಿಸಿ ನೀನು ನವ ಯೌವನದ ಶೃತಿ ನೀನು
            ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ಗಂಡು : ಶ್ರಾವಣ ಮಾಸದ ಮೋಡಗಳಲ್ಲಿ ಕಾಣುವ ನೋಟವು ಬಲು ಅಂದ
           ನಿನ್ನಯ ಮೋಹಕ ಮುಂಗುರುಳಲ್ಲಿ ಸಿಲುಕಿದರೆನಗೆ ಆನಂದ
           ನನ್ನದು ನಿನ್ನದು ಈ ಜಗದಲ್ಲಿ  ಚಂದ್ರ ಚಕೋರಿಯ ಸಂಬಂಧ
           ನನ್ನದು ನಿನ್ನದು ಈ ಜಗದಲ್ಲಿ  ಚಂದ್ರ ಚಕೋರಿಯ ಸಂಬಂಧ
           ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
           ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
          ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
          ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
--------------------------------------------------------------------------------------------------------------------------

ಈ ಬಂಧ ಅನುಬಂಧ (೧೯೮೭) - ಮುದ್ದು ಕಂದ ಬಂದ ಬಂದ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.

ಗಂಡು : ಹೇಹೇ ...ಯ್ಯಾ ..
           ಮುದ್ದು ಕಂದ ಬಂದ ಬಂದ         ಕೋರಸ್ : ಯವ್ವಾರೇ ಯವ್ವಿ ಯವ್ವಿ
ಗಂಡು : ಹೊಸ ಆಸೇ ತಂದಾ ತಂದಾ     ಕೋರಸ್ : ಯವ್ವಾರೇ ಯವ್ವಿ ಯವ್ವಿ
ಗಂಡು : ಮುದ್ದು ಕಂದಾ ಬಂದ ಬಂದ ಹೊಸ ಆಸೇ ತಂದ ತಂದ
            ನನ್ನ ಹಾಗೇ ಅವನೂ ಆಗೀ ನನ್ನ ಹೆಸರೂ ಹೇಳ್ತಾನೇ
            ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುಂದೆ ನನ್ನ..   ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುದ್ದು ಕಂದಾ ಬಂದ ಬಂದ ಹೊಸ ಆಸೇ ತಂದ ತಂದ
            ನನ್ನ ಹಾಗೇ ಅವನೂ ಆಗೀ ನನ್ನ ಹೆಸರೂ ಹೇಳ್ತಾನೇ
            ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುಂದೆ ನನ್ನ...   ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ...  ಹೇಹೇಹೇ

ಗಂಡು : ಹೊಯ್ ಅವನ ನಗೆಯೂ ನಮಗೇ ಚೆನ್ನ ಅವನೇ ನಮ್ಮ ಬಾಳಿನ ಚಿನ್ನ
            ವಂಶ ಬೆಳಗೋ ದೀಪ ಅವನೂ ನನ್ನ ಅವಳ ರೂಪ ಅವನೂ
            ಮುದ್ದುಲೂ ತೊದಲು ಮಾತನಾಡಿ ಆಟ ಆಡ್ತಾನೇ
            ಆಮೇಲೇ ಚಿಗುರು ಮೀಸೆಯನ್ನೂ ತೀಡಿ ನೋಡ್ತಾನೇ
            ಮೀಸೆಯನ್ನೂ ತೀಡಿ ನೋಡ್ತಾನೇ.. ಮೀಸೆಯನ್ನೂ ತೀಡಿ ನೋಡ್ತಾನೇ
ಕೋರಸ್ : ಅವ್ವಾರೇ ಯವ್ವಿ ಯವ್ವಿ (ಹೊಯ್ ಹೊಯ್ ಹೊಯ್ ಹೊಯ್ )
                ಅವ್ವಾರೇ ಯವ್ವಿ ಯವ್ವಿ ( ಹೂಹೂಹೂ )   ಅವ್ವಾರೇ ಯವ್ವಿ ಯವ್ವಿ  (ಹ್ಹಾ) ಅವ್ವಾರೇ ಯವ್ವಿ ಯವ್ವಿ
ಗಂಡು : ಮುದ್ದು ಕಂದಾ ಬಂದ ಬಂದ ಹೊಸ ಆಸೇ ತಂದ ತಂದ
            ನನ್ನ ಹಾಗೇ ಅವನೂ ಆಗೀ ನನ್ನ ಹೆಸರೂ ಹೇಳ್ತಾನೇ
            ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುಂದೆ ನನ್ನ..   ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ...  ಹೇಹೇಹೇ

ಗಂಡು : ಕೆಟ್ಟೋರಿಂದಾ ದೂರಾ ಇದ್ದೂ ಒಳ್ಳೇ ಜನರಾ ಮನವಾ ಗೆದ್ದೂ
           ಸೋಲನೆಂದೂ ಕಾಣದಂತೇ ಬಾಳುತ್ತಾನೇ ವೀರನಂತೇ
           ತಪ್ಪು ಮಾಡುವ ಜನಕೇ ಅವನೂ ಬಾರಕೋಲ ಆಗ್ತಾನೇ
           ನನ್ನ ಮುದಿ ವಯಸ್ಸನಲ್ಲಿ ಊರುಗೋಲ ಆಗ್ತಾನೇ
           ವಯಸ್ಸನಲ್ಲಿ ಊರುಗೋಲ ಆಗ್ತಾನೇ ... ವಯಸ್ಸನಲ್ಲಿ ಊರುಗೋಲ ಆಗ್ತಾನೇ
ಕೋರಸ್ : ಅವ್ವಾರೇ ಯವ್ವಿ ಯವ್ವಿ (ಅಹ್ಹಹ್  ಅಹ್ಹಹ್ ಅಹ್ಹಹ್  )
                ಅವ್ವಾರೇ ಯವ್ವಿ ಯವ್ವಿ ( ತೂರುರು ತುತ್ತೂರೂ ತೂರು ಕ್ಕೂಕ್ಕೂ )
                ಅವ್ವಾರೇ ಯವ್ವಿ ಯವ್ವಿ  (ಹೊಯ್ ) ಅವ್ವಾರೇ ಯವ್ವಿ ಯವ್ವಿ
ಗಂಡು : ಮುದ್ದು ಕಂದಾ ಬಂದ ಬಂದ ಹೊಸ ಆಸೇ ತಂದ ತಂದ
            ನನ್ನ ಹಾಗೇ ಅವನೂ ಆಗೀ ನನ್ನ ಹೆಸರೂ ಹೇಳ್ತಾನೇ
            ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುಂದೆ ನನ್ನ..   ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ...  ಅರೆರೇ
            ಮುದ್ದು ಕಂದಾ ಬಂದ ಬಂದ ಹೊಸ ಆಸೇ ತಂದ ತಂದ
            ನನ್ನ ಹಾಗೇ ಅವನೂ ಆಗೀ ನನ್ನ ಹೆಸರೂ ಹೇಳ್ತಾನೇ
            ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ
            ಮುಂದೆ ನನ್ನ..   ಮುಂದೆ ನನ್ನ ಗುರುತೂ ಆಗೀ ಲೋಕಲ್ಲ ಇರುತ್ತಾನೇ...  ಹ್ಹಹ್ಹಹ್ಹಾ
--------------------------------------------------------------------------------------------------------------------------

ಈ ಬಂಧ ಅನುಬಂಧ (೧೯೮೭) - ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಗೀತಪ್ರಿಯ ಹಾಡಿದವರು: ಎಸ್.ಜಾನಕೀ

ಹೆಣ್ಣು : ಆಆಆ .. ಆಆಆ.. ಆಆಆ..
ಕೋರಸ್ : ತನನನನಾ ತನನನನಾ ತನನನನಾ ತನನ ತನನ ತನನಾನನಾ
ಹೆಣ್ಣು : ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
          ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ ದೇವಕಿಗೇ ಹೊಸತೊಂದು ಸಂತೋಷ ತಂದಾ ..
         ದೇವಕಿಗೇ ಹೊಸತೊಂದು ಸಂತೋಷ ತಂದಾ .. ಆಆಆ...
         ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...

ಕೋರಸ್ : ಆಆಆ... ಆಆಆ... ಆಆಆ...
ಹೆಣ್ಣು : ಮರಳು ಕಾಡಲಿ ಹೂ ಬನ ಅರಳಿತೂ
          ಮರಳು ಕಾಡಲಿ ಹೂ ಬನ ಅರಳಿತೂ ಅವನ ನಗೆಗೇನೇ ನಿಂದಾ ಆಆಆಅ... ಆಆಆ..
          ಮೌನದ ವೀಣೆಯೂ ರಾಗವ ಮಿಡಿಯಿತು
          ಮೌನದ ವೀಣೆಯೂ ರಾಗವ ಮಿಡಿಯಿತು ಅವನ ಸವಿ ಮಾತಿನಿಂದಾ...
          ತುಂಬಿತು ಭಾವವೂ ನಲಿಯಿತು ಜೀವವೂ ಏನೋ ಆನಂದದಿಂದಾ ... ಆಆಆ...
          ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ ದೇವಕಿಗೇ ಹೊಸತೊಂದು ಸಂತೋಷ ತಂದಾ ..
         ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...

ಕೋರಸ್ : ಕಗ್ಗಗರಿರಲಲ್ಲ ಕಗ್ಗಗರಿರಲಲ್ಲ ಕಗ್ಗಗರಿರಲಲ್ಲ ಲಲಲಲಾ
ಹೆಣ್ಣು : ತೋರಿಸಲಾಗದೇ ಹೃದಯಲಿ ಉಳಿದ 
          ತೋರಿಸಲಾಗದೇ ಹೃದಯಲಿ ಉಳಿದ ಮಮತೆ  ಹೊಳೆ ಹೊಮ್ಮಿ ಬಂತೂ... ಆಆಆ...ಆಆಆ....ಆಆಆ
          ಅರಿಯದ ಕಣ್ಣನ್ನೂ ಕಂಗಳು ತುಂಬಿ
          ಅರಿಯದ ಕಣ್ಣನ್ನೂ ಕಂಗಳು ತುಂಬಿ  ಕಂಬನಿ ಹನಿ ಚಿಮ್ಮಿ ಬಂತೂ
          ಪ್ರೀತಿಯ ಸೂರಿಸಿ ಗಂಡನ ಹದಗಿ ತಾಳ್ಮೆಯೂ ಮೈತೂರಿ ಬಂತೂ....
         ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...
         ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ ದೇವಕಿಗೇ ಹೊಸತೊಂದು ಸಂತೋಷ ತಂದಾ ..
         ದೇವಕಿಗೇ ಹೊಸತೊಂದು ಸಂತೋಷ ತಂದಾ .. 
         ಗೋಕುಲದಿಂದ ಮಧುರೆಗೆ ಕೃಷ್ಣನು ಬಂದ...            
--------------------------------------------------------------------------------------------------------------------------

ಈ ಬಂಧ ಅನುಬಂಧ (೧೯೮೭) - ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಜಾನಕೀ .

ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
ಈ ಬಂಧ ಅನುಬಂಧ   ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ಚಿಗುರೊಂದು ನನ್ನ ನಿನ್ನಲ್ಲಿ ಇರಲೂ ನನಗಾಗಿ ಬಂದೇ ನೀನಾಗಿ ಹಗಲೂ
ಎರಡಾಟ ಪಾಲಲ್ಲಿ ತಾನೊಂದೇ ಎನ್ನಲೂ ಬರಡಾದ ಮನದಲ್ಲಿ ನೀ ಆದೇ ಹೊನಲೂ
ಆ ದೇವ ತಂದ ಈ ಹರನು ನೀನೂ ಈ ವರವೂ ನೀನೂ
ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ... ಸುಖ ಸ್ವಪ್ನ ನೀನೂ
ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ನನ್ನಿಂದ ಈಗ ನೀನಾಗೇ ದೂರ ಇನ್ನೆಲ್ಲಿ ಉಂಟೂ ಬಾಳಲ್ಲಿ ಸಾರ
ಬಳಿ ಬಂದು ನನ್ನ ನೀ ಅಪ್ಪಿಕೋ ನನ್ನಾಸೆ ನೀನೆಂದೂ ನೀ ಒಪ್ಪಿಕೋ ..
ನಿನ್ನಲ್ಲೀ ಇಹುದು ನನ್ನಾಸೆ ನೂರು.. ನನ್ನಾಸೆ ನೂರು
ನೀನಿಲ್ಲದಿರಲೂ ನನಗಿಲ್ಲ ಯಾರೂ.. ನನಗಿಲ್ಲ ಯಾರೂ ... 
ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
--------------------------------------------------------------------------------------------------------------------------

ಈ ಬಂಧ ಅನುಬಂಧ (೧೯೮೭) - ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಪಲ್ಲವಿ ಎಸ್.ಪಿ.

ಕೋರಸ್ :  ಆಆಆ... ಆಆಆ...
ಮಗು : ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
          ಹೃದಯದ ಜೊತೆಗೆ ಮಿಡಿತಕೆ ಇರುವ ಕಡಿದರು ಉಳಿಯುವ ಸಂಬಂಧ
          ಈ ಬಂಧ ಅನುಬಂಧ ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ಕೋರಸ್ : ಆಆಆ ... ಆಆಆ .... ಆಆಆ .... ಆಆಆ.  ಆಆಆ
ಮಗು : ಚಿಗುರೊಂದು ನನ್ನ ನಿನ್ನಲ್ಲಿ ಇರಲೂ ನನಗಾಗಿ ಬಂದೇ ನೀನಾಗೇ ಹಗಲೂ
           ಎರಡಾಟ ಪಾಲಲ್ಲಿ ತಾನೊಂದೇ ಎನ್ನಲೂ ಬರಡಾದ ಮನದಲ್ಲಿ ನೀನಾದೇ ಹೊನಲೂ
           ಆ ದೇವ ತಂದ ಈ ವರವೂ ನೀನೂ ಈ ವರವೂ ನೀನೂ
           ಕೊನೆಯುಸಿರ ತನಕ ಸುಖ ಸ್ವಪ್ನ ನೀನೂ ... ಸುಖ ಸ್ವಪ್ನ ನೀನೂ
           ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ

ಕೋರಸ್ : ಓಓಓಓ ... ಓಓಓಓ .... ಓಓಓಓ .... ಓಓಓಓ   ಓಓಓಓಓ
ಮಗು : ನನ್ನಿಂದ ಈಗ ನೀನಾಗೇ ದೂರ ಇನ್ನೆಲ್ಲಿ ಉಂಟೂ ಬಾಳಲ್ಲಿ ಸಾರ 
          ಬಳಿ ಬಂದು ನನ್ನ ನೀ ಅಪ್ಪಿಕೋ ನನ್ನಾಸೆ ನೀನೆಂದೂ ನೀ ಒಪ್ಪಿಕೋ ..
          ನಿನ್ನಲ್ಲೀ ಇಹುದು ನನ್ನಾಸೆ ನೂರು.. ನನ್ನಾಸೆ ನೂರು
         ನೀನಿಲ್ಲದಿರಲೂ ನನಗಿಲ್ಲ ಯಾರೂ.. ನನಗಿಲ್ಲ ಯಾರೂ ... 
         ಈ ಬಂಧ ಅನುಬಂಧ  ಕಣ್ಣಿನ ಜೊತೆಗೆ ಕಣ್ಣೆವೆಗಿರುವ ಈ ಬಂಧ ಅನುಬಂಧ
ಕೋರಸ್ : ಓಓಓಓ ... ಓಓಓಓ .... ಓಓಓಓ .... ಓಓಓಓ   ಓಓಓಓಓ
--------------------------------------------------------------------------------------------------------------------------

No comments:

Post a Comment