143. ಶ್ರೀ ಕೃಷ್ಣದೇವರಾಯ (1970)



ಶ್ರೀಕೃಷ್ಣದೇವರಾಯ ಚಿತ್ರದ ಹಾಡುಗಳು 
  1. ಶರಣು ವಿರೂಪಾಕ್ಷ ಶಶಿಶೇಖರ 
  2. ಖಾನ ಪಿನಾ 
  3. ಬಹು ಜನ್ಮದ ಪೂಜಾಫಲ 
  4. ಶ್ರೀ ಚಾಮುಂಡೇಶ್ವರಿ 
  5. ಚೆನ್ನರಸಿ ಚೆಲುವರಸಿ 
  6. ಬೆಳಗಲಿ ಬೆಳಗಲಿ 
  7. ತಿರುಪತಿ ಗಿರಿವಾಸ 
  8. ಕೃಷ್ಣನ ಹೆಸರೇ ಲೋಕಪ್ರಿಯಾ   
  9. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 

ಶ್ರೀ ಕೃಷ್ಣದೇವರಾಯ (1970) - ತಿರುಪತಿಗಿರಿ ವಾಸ ಶ್ರೀ ವೇಂಕಟ
ಚಿತ್ರಗೀತೆ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಟಿ ಜಿ ಲಿಂಗಪ್ಪ ಗಾಯನ: ಎಸ್ ಜಾನಕಿ, 

ಶರಣು ವಿರುಪಾಕ್ಷ ಶಶಿಶೇಖರ
ಶರಣು ವಿರುಪಾಕ್ಷ ಶಶಿಶೇಖರ  ಪಂಪಾವತಿ ಪ್ರಣಯ ಪರಮೇಶ್ವರಾ
ಶರಣು ವಿರುಪಾಕ್ಷ ಶಶಿಶೇಖರ  ಪಂಪಾವತಿ ಪ್ರಣಯ ಪರಮೇಶ್ವರಾ
ಶರಣು ವಿರುಪಾಕ್ಷ ಶಶಿಶೇಖರ

ಸಾರಂಗ ಬೃಂಗ ವಿಹಂಗ ಮುದ್ರ ಚತುರ... ಆಆಆ....
ಸಾರಂಗ ಬೃಂಗ ವಿಹಂಗ ಮುದ್ರ ಚತುರ
ತುಂಗಭದ್ರಾ ತೀರ್ಥ ಕ್ಷೇತ್ರವಿಹಾರ
ತುಂಗಭದ್ರಾ ತೀರ್ಥ ಕ್ಷೇತ್ರವಿಹಾರ
ಸಂಗೀತ ಸಾಹಿತ್ಯ ರತ್ನಾಕರಾ
ಸಂಗೀತ ಸಾಹಿತ್ಯ ರತ್ನಾಕರಾ
ಶೃಂಗಾರ ರಸನಾಟ್ಯ ನಟಶೇಖರ
ಶರಣು ವಿರುಪಾಕ್ಷ ಶಶಿಶೇಖರ

ಓಂಕಾರ ನಾದಮಯ ಮಧುರಾಕ್ಷರಾ
ಓಂಕಾರ ನಾದಮಯ ಮಧುರಾಕ್ಷರಾ
ಝೇಂಕಾರ ಗಾನಪ್ರೀಯ ಗಂಗಾಧರಾ
ಧರ್ಮಾವತಾರ ದಯಾಸಾಗರಾ
ಧರ್ಮಾವತಾರ ದಯಾಸಗರಾ
ಧರೆಯಾಳೊ ದೊರೆ ನೀನೆ ಕರುಣಾಕರಾ
ಧರೆಯಾಳೊ ದೊರೆ ನೀನೆ ಕರುಣಾಕರಾ
ಶರಣು ವಿರುಪಾಕ್ಷ ಶಶಿಶೇಖರ  ಪಂಪಾವತಿ ಪ್ರಣಯ ಪರಮೇಶ್ವರಾ
ಶರಣು ವಿರುಪಾಕ್ಷ ಶಶಿಶೇಖರ
--------------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ಬೆಳಗಲಿ ಬೆಳಗಲಿ
ಸಾಹಿತ್ಯ : ಪಂಡಿತ ದೀಪಕ ಸಂಗೀತ: ವಿಜಯನಾರಸಿಂಹ /ಟಿ.ಜಿ.ಲಿಂಗಪ್ಪ ಗಾಯನ : ಪಿ.ಸುಶೀಲಾ 

ಆಆಆ... ಖಾನ ಪೀನಾ ಮೌಜ್ ಉಡಾನಾ  ಯಹಿ ಹಮರಾ ಕಾಮ್
ದುನಿಯಾ ಲಾಖ್ ಕರೇ ಬದನಾಮ್.. ದುನಿಯಾ ಲಾಖ್ ಕರೇ ಬದನಾಮ್
ಖಾನ ಪೀನಾ... ಖಾನ ಪೀನಾ ಮೌಜ್ ಉಡಾನಾ  ಯಹಿ ಹಮರಾ ಕಾಮ್
ಖಾನ ಪೀನಾ ಮೌಜ್ ಉಡಾನಾ  ಯಹಿ ಹಮರಾ ಕಾಮ್
ದುನಿಯಾ ಲಾಖ್ ಕರೇ ಬದನಾಮ್.. ಏ ದುನಿಯಾ ಲಾಖ್ ಕರೇ ಬದನಾಮ್

ಆಆಆ.. ಆಆಆ.. ಆಆಆ.. ದೋ ದಿನಕೇಲಿ  ದುನಿಯಾ ದೀವಾನಿ 
ಆಜಾ ರಾಜಾ ಸಾಥ್ ಮೇ ಖೇಲೆ ಕಿಸಕ್ ಪತಾ ಹೈ  
ಕಲ್ ಕಾ ಕ್ಯಾ ಹೋಗಾ ಆಜಾ ಮೇರೇ  ಪಾಸ್ ರಂಗಿಲೇ 
ತೇರಿ ಉಲಫತ್ ಇನ್ ಆಂಖೊಮೇ ಯಾದೊಂಕೆ ತೇರಾ ನಾಮ್ 
ಹ್ಹಾಂ... ಲಬೊಂಪೆ  ತೇರಾ ನಾಮ್ 
ಖಾನ ಪೀನಾ... ಖಾನ ಪೀನಾ ಮೌಜ್ ಉಡಾನಾ  ಯಹಿ ಹಮರಾ ಕಾಮ್
ದುನಿಯಾ ಲಾಖ್ ಕರೇ ಬದನಾಮ್.. ಏ ದುನಿಯಾ ಲಾಖ್ ಕರೇ ಬದನಾಮ್
--------------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ಬಹು ಜನ್ಮದಾ ಪೂಜಾಫಲ 
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ : ಪಿ.ಬಿ.ಶ್ರೀನಿವಾಸ, ಎಸ.ಜಾನಕಿ 

ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನ
ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನ

ಒಲವಿನ ಸವಿಯ ಸವಿಯುವ ಶುಭದಿನ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಒಲವಿನ ಸವಿಯ ಸವಿಯುವ ಶುಭದಿನ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಹೃದಯದ ವೀಣಾ ಮಧುರ ವಿತಾನ 
ಹೃದಯದ ವೀಣಾ ಮಧುರ ವಿತಾನ 
ಈ ನಮ್ಮ ದಾಂಪತ್ಯ ರಸಜೀವನ
ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನ

ಸತಿಪತಿ ಒಲಿದ ರತಿಪತಿ ಗಾನ 
ಅತಿ ಮಧುರಾಧರ ಅಮೃತಪಾನ 
ಸತಿಪತಿ ಒಲಿದ ರತಿಪತಿ ಗಾನ 
ಅತಿ ಮಧುರಾಧರ ಅಮೃತಪಾನ 
ನವರಸ ಕವಿತಾ ಕಾವ್ಯ ಸಮಾನ 
ನವರಸ ಕವಿತಾ ಕಾವ್ಯ ಸಮಾನ 
ಈ ನಮ್ಮ ದಾಂಪತ್ಯ ಸುಖ ಸಾಧನ 
ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನ
ಬಹು ಜನ್ಮದಾ ಪೂಜಾಫಲ, ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ 
-----------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ಶ್ರೀ ಚಾಮುಂಡೇಶ್ವರೀ
ಚಿತ್ರಗೀತೆ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಪಿ.ಲೀಲಾ, ಶೀರ್ಕಾಳಿ ಗೋವಿಂದರಾಜನ್


ಶ್ರೀ ಚಾಮುಂಡೇಶ್ವರೀ ಶ್ರೀ ಚಾಮುಂಡೇಶ್ವರೀ ಅಮ್ಮ ಶ್ರೀ ಚಾಮುಂಡೇಶ್ವರೀ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ ಶ್ರೀ ಚಾಮುಂಡೇಶ್ವರೀ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ ಶ್ರೀ ಚಾಮುಂಡೇಶ್ವರೀ
ಹರನೇ ತಾನೊಲಿದ ಶೃಂಗಾರ ಲಹರಿ, ಹರಿಯೆ ಮರುಳಾದ ಮಹದೈಸಿರಿ
ಬ್ರಹ್ಮನೆ ಬೆರಗಾದ ವಾಘ್ವೈಕರಿ, ಬ್ರಹ್ಮನೆ ಬೆರಗಾದ ವಾಘ್ವೈಕರಿ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ, ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
ಶ್ರೀ ಚಾಮುಂಡೇಶ್ವರೀ ಅಮ್ಮ ಶ್ರೀ ಚಾಮುಂಡೇಶ್ವರೀ
ನಾಡಾಳೊ ರಾಯರ ರಾಜೇಶ್ವರಿ ನಾಡಾಳೊ ರಾಯರ ರಾಜೇಶ್ವರಿ
ಬೇಡಿದ ವರ ನೀಡು ಭಾಗ್ಯೇಶ್ವರಿ
ಒಡೆಯರ ಪಾಲಿಸು ಪರಮೇಶ್ವರೀ ಒಡೆಯರ ಪಾಲಿಸು ಪರಮೇಶ್ವರೀ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
ಶ್ರೀ ಚಾಮುಂಡೀ ಅಮ್ಮ ಶ್ರೀ ಚಾಮುಂಡೇಶ್ವರೀ
------------------------------------------------------------------------------------------------------------------------

ಶ್ರೀಕೃಷ್ಣದೇವರಾಯ (೧೯೭೦)....ಚೆನ್ನರಸಿ ಚೆಲುವರಸಿ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕಿ, ಪಿ.ಲೀಲಾ


ಆಆ......ಆ.....ಆ......ಆಆ....
ಎಸ್.ಜಾನಕಿ:   ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ  ಮಲ್ಲಾದಿ ಮಣ್ಣರ ಪಟ್ಟದರಸಿ  ಪಟ್ಟದರಸಿ
                     ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ   ತನುವಾದ ತವರಲ್ಲಿ ಬೆಳೆದ ಹೊಂಬಾಳೆ
                 
                    ಅನುವಾದ ಅಂಗಳವ ಬೆಳಗಿ ನೀ ಬಾರೆ  ಬೆಳಗಿ ನೀ ಬಾರೆ  ಪನ್ನೀರ ಜಾಜಿ................
                    ಪನ್ನೀರ ಜಾಜಿ ನಗೆ ಮುಡಿಯ ಮೇಲೆ  ಮುನ್ನಡೆದು ಬಾ ಹೊನ್ನಾದ ನವಿಲೆ
                    ಮುನ್ನಡೆದು ಬಾ ಹೊನ್ನಾದ ನವಿಲೆ
                    ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ

ಪಿ.ಲೀಲಾ:   ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
                 ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
                 ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
                 ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
                 ಮತ್ತೆ ಸವತಿಯ ಶಂಕೆ ನಿನಗಿಲ್ಲ ಮಗಳೆ
                 ಮತ್ತೆ ಸವತಿಯ ಶಂಕೆ ನಿನಗಿಲ್ಲ ಮಗಳೆ
                 ಯತಿವರರ ಹಾರೈಕೆ ನಿನಿಗುಂಟು ಮಗಳೆ

-----------------------------------------------------------------------------------------------------------------------
ಶ್ರೀ ಕೃಷ್ಣದೇವರಾಯ (1970) - ಬೆಳಗಲಿ ಬೆಳಗಲಿ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ವಿಜಯನಾರಸಿಂಹ /ಟಿ.ಜಿ.ಲಿಂಗಪ್ಪ ಗಾಯನ : ನಾಗೇಶ್ವರಾವ

ಬೆಳಗಲಿ ಬೆಳಗಲಿ ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೋಳಗಲಿ.......
ಬೆಳಗಲಿ ಬೆಳಗಲಿ

(ಶತ್ರುಗಳಿಗೆ ಅಭೇದ್ಯವಾದ ರಾಯಚೂರು ಕೋಟೆಯನ್ನು ಕೈ ವಶ
ಪಡಿಸಿಕೊಂಡು ಹರಿರಾಯರ ಗಂಡ ಶ್ರೀ ಕೃಷ್ಣದೇವರಾಯ ಮುದುಗಲ್
ಕೋಟೆಯತ್ತ ಮುನ್ನಡೆದಿದ್ದಾರೆ..)

ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ತಾಯ್ನಾಡಿಗೆ ಸಂಧಾನದ ಏಣೆ ಇಲ್ಲದ ತ್ಯಾಗ
ಕನ್ನಡಿಗರು ಮುನ್ನಡೆಯೆ ಅನುಪಮ ವೈಭೋಗ
ಇನ್ನಾರಿಗು ಕೈ ಸೇರದು ಈ ವೀರರ ಸ್ವರ್ಗ
ಬೆಳಗಲಿ ಬೆಳಗಲಿ

(ಪ್ರಸಿದ್ದವಾದ ಮುದಗಲ್ ಕೋಟೆಯನ್ನು ವಶಪಡಿಸಿಕೊಂಡ
ವಿಜಯನಗರದ ಸೈನ್ಯವು ರಣೋತ್ಸಾಹದೊಂದಿಗೆ
ಕಲಬುರ್ಗಿಯತ್ತ ಕಾಲಿಟ್ಟಿದೆ )

ನಡೆ ಮುಂದಕೆ ನಡೆ ಮುಂದಕೆ ಬಂದಿದೆ ವೇಳೆ
ಅಡಿ ಮುಂದಿಡೆ ನೀ ಧರಿಸುವೆ ಕೊರಳಲಿ ಜಯಮಾಲೆ
ಸುಮಪಾತದ ನರಕೇಶದಿ ಹೊನ್ನಾಡನು ಆಳೆ
ಈ ವೈಭವ ವಿಜಯೋನ್ನತಿ ರಾಜೇಶ್ವರಿ ಲೀಲೆ
ಬೆಳಗಲಿ ಬೆಳಗಲಿ
(ಸೈನ್ಯ ಕಲಬುರ್ಗಿ.. ದುರ್ಗಾಕ್ಕೆ ಮುತ್ತಿಗೆ ಹಾಕಿದೆ
ಅಲ್ಲಾಹೋ ಅಕ್ಬರ.. ಜೈ ವಿರೂಪಾಕ್ಷ
ಓ.. ಸೈನಿಕರೇ ಓಡಿರಿ ತಲೆ ತಪ್ಪಿಸಿಕೊಳ್ಳಿರಿ
ಶ್ರೀ ಕೃಷ್ಣಾ ದೇವರಾಯನಿಗೆ ಜಯವಾಗಲಿ...
ಜಯವಾಗಲಿ... )
--------------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ತಿರುಪತಿಗಿರಿ ವಾಸ ಶ್ರೀ ವೇಂಕಟ
ಚಿತ್ರಗೀತೆ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಟಿ ಜಿ ಲಿಂಗಪ್ಪ ಗಾಯನ: ಎಸ್ ಜಾನಕಿ, ಪಿ ಬಿ ಎಸ್, ಪಿ ಸುಶೀಲ


ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|
ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ||

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ

ಅಖಿಲಾಂಡ ಕೋಟಿ ಬ್ರಂಹಾಡ ಪಾಲ ಆ....
ಅಖಿಲಾಂಡ ಕೋಟಿ ಬ್ರಂಹಾಡ ಪಾಲ
ಅಲಮೇಲುಮಂಗ ಮನೊಲ್ಲಾಸ ಲೋಲ
ಅಲಮೇಲುಮಂಗ ಮನೊಲ್ಲಾಸ ಲೋಲ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ

ಪಂಕಜಲೋಚನ ಪತಿತೋದ್ದಾರ ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ ಶಿರಸಾ ನಮಾಮಿ ಮನಸಾ ಸ್ಮರಾಮಿ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ
------------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ಕೃಷ್ಣನ ಹೆಸರೇ ಲೊಕಪ್ರಿಯ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ :ಸೂಲಮಂಗಲಂ ರಾಜಲಕ್ಷ್ಮಿ


ಕೃಷ್ಣನ ಹೆಸರೇ ಲೊಕಪ್ರಿಯ
ಶ್ರೀಕೃಷ್ಣನ ಹೆಸರೇ ಲೊಕಪ್ರಿಯ ಆ ದೇವನ ನೆನೆದರೆ ಇಲ್ಲ ಭಯ..
ಕೃಷ್ಣನ ಹೆಸರೇ ಲೊಕಪ್ರಿಯ

ರಾಯರ ರಾಯ ಈ ಮಹರಾಯ
ರಾಯರ ರಾಯ ಈ ಮಹರಾಯ
ಆಡಿದ ನೋಡಿದೆ ಅಧ್ಭುತ ಲೀಲೆಯ ಆಡಿದ ನೋಡಿದೆ ಅಧ್ಭುತ ಲೀಲೆಯ
ಕೃಷ್ಣನ ಹೆಸರೇ ಲೊಕಪ್ರಿಯ
ನವರಸ ನಾಟಕ ಸೂತ್ರಧಾರಿ ನಾನಾ ವೇಷದ ಪಾತ್ರಧಾರಿ
ನವರಸ ನಾಟಕ ಸೂತ್ರಧಾರಿ ನಾನಾ ವೇಷದ ಪಾತ್ರಧಾರಿ
ನಾಯಕನೆಂದರೆ ಈತನೆ ಶ್ರೀ ಹರಿ ನಾಯಕನೆಂದರೆ ಈತನೆ ಶ್ರೀ ಹರಿ
ಭಾಮ ರುಕ್ಮಿಣಿ ಮನೋವಿಹಾರಿ ಭಾಮ ರುಕ್ಮಿಣಿ ಮನೋವಿಹಾರಿ
ಕೃಷ್ಣನ ಹೆಸರೇ ಲೊಕಪ್ರಿಯ ಆ ದೇವನ ನೆನೆದರೆ ಇಲ್ಲ ಭಯ..
ಕೃಷ್ಣನ ಹೆಸರೇ ಲೊಕಪ್ರಿಯ

ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ ನಾ ಕಂಡೆನಯ್ಯ
ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ ನಾ ಕಂಡೆನಯ್ಯ
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ
ಒಬ್ಬಳಲಿ ಪೋಗಿ ಪೋಗರವ ಮಾಡೆನಲು ಬೊಬ್ಬೆ ಏನಿದು ಕೊಬ್ಬೆ? ನಡೆ ಎಂದಳು
ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು ಅಬ್ಬಾ ಬಿಸಿ ಮುಟ್ಟಲಾಪೆನೆಂದಳೂ
ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ ನಾ ಕಂಡೆನಯ್ಯ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ ಆ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ಕಪಟನಾಟಕ ಸುತ್ರಧಾರಿ ನೀ ಅಡಿಸದಿರಲು ಜಡವನಕೆಯ ಗೊಂಬೆ
ಏನು ಮಾಡಲು ಬಲ್ಲದು ಬೇರೆ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಆ... ಜಗದೊಳಿರುವ ಮನುಜರೆಲ್ಲ
ಹಗರಣಮಾಡುವುದ ಕಂಡು ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ......
------------------------------------------------------------------------------------------------------------------------

ಶ್ರೀ ಕೃಷ್ಣದೇವರಾಯ (1970) - ಬಹು ಜನ್ಮದಾ ಪೂಜಾಫಲ 
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ : ಪಿ.ಬಿ.ಶ್ರೀನಿವಾಸ, 


ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ  ಎಂಬ ನುಡಿ ಮಂತ್ರವೇ
ಶ್ರೀ ರಕ್ಷೆ ನಮಗೆ ಆ ದಿವ್ಯ ಶಕ್ತಿಯೇ ತಾಯ್ದೇವಿ  ಕೊಡುಗೆ

ಬಾ ವೀರ ಕನ್ನಡಿಗ ಹೊಸ ಚರಿತ್ರೇ ಬರೆಯುವ
ಬಾ ವೀರ ಕನ್ನಡಿಗ ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ ಕನ್ನಡಿಗನೇ ಎನಿಸುವ
ಭಾರತಾಂಬೆ ಮುಕುಟಮಣಿ ಕನ್ನಡಿಗನೇ ಎನಿಸುವ
ದ್ವೇಷ ರೋಷ ಬಾಷೆ ಬೇಧ ಎಲ್ಲ ನೀಗಿ  ಬಾಳುವ
ಎಲ್ಲ ನೀಗಿ  ಬಾಳುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
ಬಾ ವೀರ ಕನ್ನಡಿಗ ಹೊಸ ಚರಿತ್ರೇ ಬರೆಯುವ

ವಿಜಯನಗರ ವೀರಗಾಥೆ ಸಂಸ್ಕೃತಿ ಸಂಕೇತ
ಸಂಸ್ಕೃತಿ ಸಂಕೇತ
ಕೀರ್ತಿ ಭರಿತ ಸ್ಫೂರ್ತಿಯುತ ಲೋಕ ಸನ್ಮಾನಿತ
ಲೋಕ ಸನ್ಮಾನಿತ
ಧನ್ಯ ಧನ್ಯ ಕನ್ನಡಿಗನ ಸಾಧನೆ ಮಹೋನ್ನತ
ಮಾತೃಭೂಮಿ ಸೇವೆಯಲ್ಲಿ ನಮ್ಮ ಖ್ಯಾತಿ ಶಾಶ್ವತ
ಮಾತೃಭೂಮಿ ಸೇವೆಯಲ್ಲಿ ನಮ್ಮ ಖ್ಯಾತಿ ಶಾಶ್ವತ
ಬಾ ವೀರ ಕನ್ನಡಿಗ ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ ಕನ್ನಡಿಗನೇ ಎನಿಸುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
--------------------------------------------------------------------------------------------------------------------------

No comments:

Post a Comment