172. ಶಂಕರ್ ಗುರು (1978)



ಶಂಕರ ಗುರು ಚಿತ್ರದ ಹಾಡುಗಳು 
  1. ಚೆಲುವೆಯ ನೋಟ ಚೆನ್ನ 
  2. ಲವ್ ಮೀ ಆರ್ ಹೆಟ್ ಮೀ 
  3. ಏನೇನೋ ಆಸೆ ನೀ ತಂದ ಬಾಷೆ 
  4. ಚಿನ್ನ ಬಾಳಲ್ಲಿ ಈ ರಾತ್ರಿ ಬರದು ಎಂದೆಂದೂ 
  5. ನಾ ಬೆಂಕಿಯಂತೆ ನಾ ಗಾಳಿಯಂತೇ 
  6. ಚೆಲುವೆಯ ನೋಟ ಚೆನ್ನ (ದುಃಖ) 
ಶಂಕರ್ ಗುರು (1978) - ಚೆಲುವೆಯ ನೋಟ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ.ರಾಜ್‍ಕುಮಾರ್

ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ

ಕಾಮನಬಿಲ್ಲು ಚೆನ್ನ ಸುಳಿವಾ ಮಿ೦ಚು ಚೆನ್ನ
ಹೊಳೆಯುವ ನಿನ್ನ ಕಣ್ಣಾ ಕಾ೦ತಿ ಇನ್ನೂ ಚೆನ್ನ
ಣ್ಣನೆ ಗಾಳಿ ಚೆನ್ನ ಹುಣ್ಣಿಮೆ ಚ೦ದ್ರ ಚೆನ್ನ
ನಿನ್ನನ್ನು ಸೇರಿ ನಿ೦ತ ನನ್ನ ಬಾಳೇ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ

ಜಿ೦ಕೆಯ ಕಣ್ಣೇ ಚೆನ್ನ ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನಾ ರೂಪಾ ಚೆನ್ನದಲ್ಲಿ ಚೆನ್ನ 
ಬೆಳಗಿನ ಬಿಸಿಲು ಚೆನ್ನ ಹೊ೦ಗೆಯ ನೆರಳು ಚೆನ್ನ
ಗೆಳತಿಯೇ ನಿನ್ನ ಸ್ನೇಹ ಚಿನ್ನಕ್ಕಿ೦ತ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ
ಚೆಲುವೆಯ ನೋಟ ಚೆನ್ನ
--------------------------------------------------------------------------------------------------------------------------

ಶಂಕರ್ ಗುರು (1978) - ಚಿನ್ನ ಬಾಳಲ್ಲಿ ಈ ರಾತ್ರಿ

ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಉಪೇಂದ್ರ ಕುಮಾರ್  ಗಾಯನ: ಡಾ.ರಾಜ್‍ಕುಮಾರ್


ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು  ಕನಸೆಲ್ಲ ನನಸಾಗಿದೆ
ಎಕೆ ಈ ಕೋಪ ಮನದನ್ನೆ ಬಾ ಬೇಗ ಇಲ್ಲಿ
ಹೂ ಮಂಚ ನಮಗಾಗಿದೇ   || ಚಿನ್ನ ಬಾಳಲ್ಲಿ ||
ಇಂತ ಏಕಾಂತ ನಿನ್ನ ಕಾಡದೆ?    ಇನ್ನು ನಿನ್ನಲ್ಲಿ ಆಸೆ ಮೂಡದೆ?
ಸವಿ ಮುತ್ತೊಂದ ತುಟಿಯು ಬೇಡದೇ?  ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ ಇನ್ನೆಂದು ಬರದು  ಕನಸೆಲ್ಲ ನನಸಾಗಿದೆ

ಇನ್ನು ದೂರಾಗಿ ಏಕೆ ನಿಲ್ಲುವೇ? ನನ್ನ ಕಣ್ಣಲ್ಲೆ ಏಕೇ ಕೊಲ್ಲುವೇ?
ನೀನು ನಿಜವಾದ ಹೆಣ್ಣೇ ಅಲ್ಲವೇ?  ನಿನ್ನ ಮನದಲ್ಲಿ ಬಯಕೆ ಇಲ್ಲವೆ?
ನಾನು ನೀನು ಆಹ, ನೀನು ನಾನು ಒಹೋ
ನಾನು ನೀನು, ನೀನು ನಾನು  ಸೇರಿ ಇಂದು ಇಲ್ಲೆ ಈಗ ಆ ಆ ಆ ಆ ಹಾ ಹ  || ಚಿನ್ನ ಬಾಳಲ್ಲಿ ||

ಆಆಆಆಆ ಆಆಆಆಆಆ   ಆಆಆ ಅಆಆಆಆಆಆ ಅಆಆಆಆಆಆ
ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ
ಆಆಆ ಅಆಆಆಆಆಆ ಅಆಆಆಆಆಆ
ಕಾಶ್ಮೀರದಾ ಚೆಲುವೆ ಬಳಿ ಬಾರೆ ಚತುರೆ  ನೀಡುವೆನು ನಿನಗೆ ನನ್ನಾಸರೆ
ಬಿಡಿಸುವೆ ಈಗಲೇ ನಿನ್ನ ಕನ್ಯಾಸೆರೆ ಆಆಆ ಅಆಆಆಆಆಆ ಅಆಆಆಆಆಆ
ನೆಲೆವೆಲ್ಲ ಹಸಿರಾಗಿ  ಗಿಡವೆಲ್ಲ ಹೂವಾಗಿ  ತಂಗಾಳಿ ಹಿತವಾಗಿ
ಮೈ ಸೋಕಿ ಹಾಯಾಗಿ  ನಿನ್ನಾಸೆ ಹೆಚ್ಚಾಗಿ ನಾ ಬಂದೆ ಹುಚ್ಚಾಗಿ
ಈ ಬೇಗೆಯಾ ನೀಗು ನನ್ನಲ್ಲಿ ಒಂದಾಗು  ಆಆಆ ಅಆಆಆಆಆಆ ಅಆಆಆಆಆಆ  || ಚಿನ್ನ ಬಾಳಲ್ಲಿ ||

ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ  ಆಆಆಆಆ ಆಆಆಆಆಆ
ಕಾಶ್ಮೀರದಾ ಗಿಣಿಯೆ ನೀ ಬಲ್ಲೆಯೇನೆ  ಕನ್ನಡದ ನಾಡಿಂದ ಬಂದವನು ನಾನೆ
ನಾನಾಡೋ ನುಡಿಯೆಲ್ಲಾ ಆಆಆಆಆಆಆ
ನಾನಾಡೋ ನುಡಿಯೆಲ್ಲಾ ಸವಿಯಾದ ಜೇನೆ  ಆಆಆ ಅಆಆಆಆಆಆ ಅಆಆಆಆಆಆ
ನಮ್ಮೂರು ಬಲು ಚೆಂದ  ನಮ್ಮೂರ ಜನ ಚೆಂದ  ನಮ್ಮೋರ ನುಡಿ ಚೆಂದ
ನಮ್ಮೋರ ನಡೆ ಚೆಂದ  ಎಲ್ಲೆಲ್ಲೂ ಬಲು ಅಂದ  ಕಾಡೆಲ್ಲ ಶ್ರೀ ಗಂಧ
ನೀ ಸೇರಿದಾಮೇಲೆ  ಬಾಳೆಲ್ಲಾ ಆನಂದಾ  ಆಆಆ ಅಆಆಆಆಆಆ ಅಆಆಆಆಆಆ  || ಚಿನ್ನ ಬಾಳಲ್ಲಿ ||
------------------------------------------------------------------------------------------------------------------------

ಶಂಕರ್ ಗುರು (1978) - ಲವ್ ಮಿ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ.ರಾಜ್‍ಕುಮಾರ್


ಹೇಹೇ..  ತೂರೂರ್ ರು ರು ರು ರು ರು ರು ರೂ ಲಲಲಲಲಲಲ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 
ರು ರು ರು ರು ರು ರು ರೂ  ರು ರು ರು ರು ರು ರು ರೂ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 
ರು ರು ರು ರು ರು ರು ರೂ ರು ರು ರು ರು ರು ರು ರೂ

ಮೈಯೆಲ್ಲಾ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ಮೈಯೆಲ್ಲಾ ಹಗುರಾಗಿ ತೂರಾಡುವ೦ತಿದೆ
ನಿನ್ನಾಸೆ ಅತಿಯಾಗಿ ಮನಸೋತು ನೊ೦ದಿದೆ
ನಿ೦ತಲ್ಲೇ ನೋಡಿದೆ ನೀನಿಲ್ಲಿ ಬಾರೇ
ಕಣ್ಣಲ್ಲಿ ಕೊಲ್ಲದೇ ನನ್ನನ್ನು ಸೇರೆ ಸ್ವರ್ಗ ನೀ ಕಾಣುವೆ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 


ರು ರು ರು ರು ರು ರು ರೂ  ರು ರು ರು ರು ರು ರು ರೂ

ಆ... ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ಆ... ರ೦ಗಾದ ನಿನ ಕೆನ್ನೆ ಹೊಸ ಹೂವಿನ೦ತಿರೇ
ಕೆ೦ಪಾದ ತುಟಿಯನ್ನು ತುಟಿ ಮೇಲೆ ತ೦ದರೆ
ಕಣ್ಣಲ್ಲೇ ತು೦ಬುವೆ ಹೊಸತನ ನಾನು
ನಿ೦ತಲ್ಲೇ  ಹೊ೦ದುವೆ ಸ೦ತೋಷ ನೀನು ಇನ್ನೂ ಬೇಕೆನ್ನುವೆ || ಲವ್ ಮಿ ||
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 



ರು ರು ರು ರು ರು ರು ರೂ  ರು ರು ರು ರು ರು ರು ರೂ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 


ರು ರು ರು ರು ರು ರು ರೂ  ರು ರು ರು ರು ರು ರು ರೂ

ಈ ಜಾಗ ಸರಿಯಿಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಿಲ್ಲಿ ಬ೦ದರೆ
ಈ ಜಾಗ ಸರಿಯಿಲ್ಲ ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ ನೀನಿಲ್ಲಿ ಬ೦ದರೆ
ನಿನ್ನೆಲ್ಲಾ ಕಲ್ಪನೆ ಹೂವಾದ ಮೇಲೆ ನಿನ್ನೆಲ್ಲಾ ಆಸೆ ಹಣ್ಣಾದ ಮೇಲೆ
ಎ೦ಥಾ ಹಾಯ್ ಎನ್ನುವೆ ಕಮಾನ್ ಫ್ರೆ೦ಡ್ಸ್ ಜಾಯ್ನ್ ಮಿ
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 


ರು ರು ರು ರು ರು ರು ರೂ  ರು ರು ರು ರು ರು ರು ರೂ
ರು ರು ರು ರು ರು ರು ರೂ  ರು ರು ರು ರು ರು ರು ರೂ ಕಮ್ ಆನ್ ಫಾಸ್ಟ್
ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ
ಓ ಡಾರ್ಲಿ೦ಗ್ ಪ್ಲೀಸ್ ಡು ಸಮ್ತಿ೦ಗ್ ಟು ಮಿ 


ರು ರು ರು ರು ರು ರು ರೂ  ರು ರು ರು ರು ರು ರು ರೂ
-------------------------------------------------------------------------------------------------------------------------


ಶಂಕರ್ ಗುರು (1978) - ಏನೇನೋ ಆಸೆ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್  ಗಾಯನ: ಡಾ.ರಾಜ್‍ಕುಮಾರ್, ವಾಣಿ ಜೈರಾಂ

ಏನೇನೋ ಆಸೆ  ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
ಏನೇನೋ ಆಸೆ  ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ

ಲತೆಗಳು ಬಳುಕುತಿವೆ ನಿನ್ನ೦ತೇ ಆಡಿ
ಸುಮಗಳು ನಗುತಲಿವೆ ನಿನ್ನನ್ನೂ ನೋಡಿ
ಹಿಮದಗಿರಿಯ ಬಳಸಿ ಬರುವ ಗಾಳಿ ತರಲು ಛಳಿ
ಇನಿಯ ಬಳಿಗೆ ಒಲಿದು ಬ೦ದು ಸನಿಹ ತರಲು ಬಿಸಿ
ಏನೇನೋ ಆಸೆ  ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ  ಕೂಗುತಿದೆ ಬಾ ಎ೦ದು ನಿನ್ನ

ಕಾಮನ ಬಿಲ್ಲಿ೦ದಾ ಬ೦ದಿತು ನಿನ್ನ೦ದಾ
ತಾರೆಯ ಹೊಳಪಿ೦ದಾ ಬ೦ದಿತು ಕಣ್ಣ೦ದಾ
ಈ ಮಾತು ಬಿಡು ಬಿಡು ಮನಸ್ಸಿಲ್ಲಿ ಇಡು ಇಡು
ಸ೦ತೋಷ ಕೊಡು ಕೊಡು ಬಾ ನಲ್ಲೇ
ಏನೇನೋ ಆಸೆ  ನೀ ತ೦ದಾ ಭಾಷೆ
ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ
------------------------------------------------------------------------------------------------------------------------

ಶಂಕರ್ ಗುರು (೧೯೭೮)
ರಚನೆ:ಚಿ. ಉದಯಶಂಕರ ಸಂಗೀತ: ಉಪೇಂದ್ರ ಕುಮಾರ  ಗಾಯಕ: ಡಾ. ರಾಜಕುಮಾರ್, ಪಿ. ಬಿ. ಶ್ರೀನಿವಾಸ್

ನಾ ಬೆಂಕಿಯಂತೆ  ನಾ ಗಾಳಿಯಂತೆ
ನಾ ಬೆಂಕಿಯಂತೆ  ನಾ ಗಾಳಿಯಂತೆ
ಈ ಜೋಡಿ ಮುಂದೆ ವೈರಿ ಉಳಿಯುವನೆ
ಈ ಜೋಡಿ ಮುಂದೆ ವೈರಿ ಉಳಿಯುವನೆ
ನಾ ಬೆಂಕಿಯಂತೆ  ನಾ ಗಾಳಿಯಂತೆ

ಸೂರ್ಯ ಬಾನಿಂದ ಓಡಿ ಬಂದಂತೆ ನೀನು ಬಂದಾಗ ನನಗಾಯಿತು
ಮಿಂಚು ಮೇಲಿಂದ ಜಾರಿ ಬಂದಂತೆ ನಿನ್ನ ಕಂಡಾಗ ನನಗಾಯಿತು
ಒಂದೇ ಬಳ್ಳಿ ತಂದ   ಜೋಡಿ ಹೂವು ನಾವು
ಒಂದೇ ಬಳ್ಳಿ ತಂದ   ಜೋಡಿ ಹೂವು ನಾವು, ಹಾ ಹಾ ಹ
ನಾ ಬೆಂಕಿಯಂತೆ   ನಾ ಗಾಳಿಯಂತೆ
ಈ ಜೋಡಿ ಮುಂದೆ ವೈರಿ ಉಳಿಯುವನೆ

ಸ್ನೇಹ ಕಂಡಾಗ ಪ್ರೀತಿ ಬಂದಾಗ ನಾವು ಹೂವಾಗಿ ಸೇರೋಣ
ದ್ವೇಷ ಕಂಡಾಗ ರೋಷ ಬಂದಾಗ ಜೋಡಿ ಹಾವಾಗಿ ಬೀಳೋಣ
ಸೋಲೋ ಮಾತೆ ಇಲ್ಲ  ಗೆಲುವೇ ಇನ್ನು ಎಲ್ಲ
ಸೋಲೋ ಮಾತೆ ಇಲ್ಲ  ಗೆಲುವೇ ಇನ್ನು ಎಲ್ಲ ಹಾ ಹಾ ಹ
ನಾ ಬೆಂಕಿಯಂತೆ  ನಾ ಗಾಳಿಯಂತೆ
ಈ ಜೋಡಿ ಮುಂದೆ ವೈರಿ ಉಳಿಯುವನೆ
ನೀ ಬೆಂಕಿಯಂತೆ   ನೀ ಗಾಳಿಯಂತೆ
ಈ ಜೋಡಿ ಮುಂದೆ ವೈರಿ ಉಳಿಯುವನೆ
-----------------------------------------------------------------------------------------------------------------------

ಶಂಕರ್ ಗುರು (೧೯೭೮)
ರಚನೆ:ಚಿ. ಉದಯಶಂಕರ ಸಂಗೀತ: ಉಪೇಂದ್ರ ಕುಮಾರ  ಗಾಯಕ: ಡಾ. ರಾಜಕುಮಾರ್, 

ಜಿ೦ಕೆಯ ಕಣ್ಣೇ ಚೆನ್ನ... ಹವಳದ ಬಣ್ಣ ಚೆನ್ನ
ಅರಗಿಳಿ ನಿನ್ನಾ ರೂಪಾ ಚೆನ್ನದಲ್ಲಿ ಚೆನ್ನ
ಬೆಳಗಿನ ಬಿಸಿಲು ಚೆನ್ನ ಹೊ೦ಗೆಯ ನೆರಳು ಚೆನ್ನ
ಗೆಳತಿಯೇ ನಿನ್ನ ಸ್ನೇಹ ಚಿನ್ನಕ್ಕಿ೦ತ ಚೆನ್ನ 
ಚೆಲುವೆಯ ನೋಟ ಚೆನ್ನ   ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ 
ಚೆಲುವೆಯ ನೋಟ ಚೆನ್ನ


No comments:

Post a Comment