182. ಅಮೃತವರ್ಷಿಣಿ (1996)


ಅಮೃತ ವರ್ಷಿಣಿ ಚಿತ್ರದಹಾಡುಗಳು
  1. ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
  2. ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು (ಚಿತ್ರಾ)
  3. ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ,
  4. ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು
  5. ಮನಸೇ...... ಬದುಕು ನಿನಗಾಗಿ ಬವಣೆ ನಿನಗಾಗಿ
  6. ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು
  7. ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು (ಗಂಗಾಧರ )
  8. ಗಾಳಿ ಗಾಳಿ ತಂಪು ಗಾಳಿ
ಅಮೃತವರ್ಷಿಣಿ (1996) - ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು 
ಸಂಗೀತ: ದೇವ,  ಸಾಹಿತ್ಯ: ಕಲ್ಯಾಣ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮ ಸಮ ಹಂಚಿತು
ಝುಳು ಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ
ನಿನ್ನದೇ ತಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೆ ನಿನ್ನ ಮುಂದೆ ಮೌನವೆ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೊ ಕಾವಲಿದೆ
ಎಲ್ಲ ಕಾವಲುಗಾತೀರ ಚೋರಿಯು ನೀನೆನ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ
-------------------------------------------------------------------------------------------------------------------------

ಅಮೃತವರ್ಷಿಣಿ (1996) - ಈ ಸುಂದರ ಬೆಳದಿಂಗಳ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ದೇವ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ


ಹಾ ... ಆ ಆ ...
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ,
 ನನ್ನ ನಿನ್ನ ನಡುವಿನಲಿಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ - ಈ ಸುಂದರ
ದಿನ .. ದಿನ ....
ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ನಗೋ ತರ ಕಣ್ಣಂಚಲಿ ನಗಿಸಿರುವೆ
ಒಲವೇ ಆ ಆ ಆ ....
ಒಲವೇ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೇ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೊ ಮನಸು ನನದು - ಈ ಸುಂದರ
ಸಮ .. ಸಮ..
ಸ ರೀ ಗ ಮ ಸಮಾಗಮ, ಇಂಥ ವಿಸ್ಮಯ ಇದೇ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರೀ ತೊದಲು
ಉಸಿರೆ ..................................
ಉಸಿರೆ ನಿನ್ನ ಉಸಿರಾಗಿ ಈ ಉಸಿರಾ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೆ
ನಿನ್ನ ನೆರಳಿನ ಸನಿ ಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ - ಈ ಸುಂದರ (ಹ್ ...)
-----------------------------------------------------------------------------------------------------------------------

ಅಮೃತವರ್ಷಿಣಿ (1996) - ಕಣ್ಣಿನ ನೋಟಗಳು
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ದೇವ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ


ಗಂಡು : ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು
ಕೋರಸ್ : ಜಂಗ್ ಜಕತಾ ಜಂಗ್ ಜಂಗ್ ತಕತಾ ... ಓಹೋಹೋ
ಗಂಡು : ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು  ಕಣ್ಣಿನ ಮಾತುಗಳು ಬಿಡಿಸ್‍ಹೇಳದ ಒಗಟುಗಳು
            ಕಣ್ಣಿನ ಹಾಡುಗಳು ತಿರು ತಿರುಗಿಸೋ ರಾಟೆಗಳು ಇಂತೋಳ ಕಣ್ಣಿನಲಿ ನಾನು
            ಸೇರಿಕೊಳ್ಳಲೆ ಹಾಡಿಕೊಳ್ಳಲೆ ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ

ಹೆಣ್ಣು : ಮನಸು ...
ಗಂಡು :  ಓಹ್ ಓಹ್ ಓಹ್ ಜಿಗಿ ಜಿಗಿ ಜಿಗಿಯುವ ಹಾ ಹಾ ಹಾ ಮಿನು ಮಿನು ಮಿನುಗುವ
            ಹೇಹೇಹೇಹೇ  ಕಚಗುಳಿ ಕಲಿಸುವ ಹೂ ಮನಸಿದೆ
           ಮೈಮೇಲೆ ಹೊಸತನ ತರಿಸುವ ಉಯ್ಯಾಲೆ ತೂಗಲು ಕಲಿಸುವ
           ಸುವ್ವಾಲೆ ಪದಗಳ ಬರೆಸುವ ಹೊಮ್ಮನಸಿದೆ
           ಬರಸೆಳೆಯೋ ಒಳಗಿಳಿಯೋ ಚಿಲಿಪಿಲಿಯ ಆಸೆಯಲಿ
           ಅರೆಘಳಿಗೆ ಕಾಯದಲೇ ಚಡಪಡಿಸೋ ಪ್ರೀತಿ ಮನಸಿನಲಿ
          ಸೇರಿಕೊಳ್ಳಲೆ ಹಾಡಿಕೊಳ್ಳಲೆ ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
          ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು ಈ ಮನಸಿನ ಮಾತುಗಳು ಕವಿ ಬರೆಯದ ಕವನಗಳು

ಹೆಣ್ಣು : ಕನಸು
ಗಂಡು : ಹ ಹ ಹ ಅಹಹಹ ಅನಿಸುವ ಆಕಾಶ ಅಂಗೈಲಿರಿಸುವ  ಸಂಗಾತಿ ಸನಿಹವ ಬಯಸುವ ಹೊಂಗನಸಿದೆ
           ಎಲ್ಲೆಲ್ಲು ಚಿಗುರನು ಹುಡುಕುವ  ಏನೆಲ್ಲ ಸೊಗಸನು ಚೆಲ್ಲುವ ಸಂಗಾತಿ ಬಯಕೆಯ ಬೆಸೆಯುವ ಹಾಲ್ಗನಸಿದೆ
           ಕ್ಷಣದೊಳಗೆ ಸೆರೆಹಿಡಿಯೋ ತೆರೆಮರೆಯ ಚೆಲುವಿನಲಿ ಚೈತ್ರಗಳ ಸೋಲಿಸುವ ಹಾಡುಗಳ ಪ್ರೀತಿ ಕನಸಿನಲಿ
           ಸೇರಿಕೊಳ್ಳಲೆ ಹಾಡಿಕೊಳ್ಳಲೆ ಸ್ವರ್ಗ ಇಲ್ಲಿಯೆ ಕಂಡುಕೊಳ್ಳಲೆ
           ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು ಮನಸಿನ ಮಾತುಗಳು ಕವಿ ಬರೆಯದ ಕವನಗಳು
           ಕನಸಿನ ಹಾಡುಗಳು ಎದೆ ತಣಿಸುವ ಸೂತ್ರಗಳು ಇಂಥೋಳ ಸನಿಹದಲಿ ನಾನು
           ಸೇರಿಕೊಳ್ಳಲೆ ಹಾಡಿಕೊಳ್ಳಲೆ  ಸ್ವರ್ಗ ಇಲ್ಲಿಯೇ ಕಂಡುಕೊಳ್ಳಲೆ
-----------------------------------------------------------------------------------------------------------------------

ಅಮೃತವರ್ಷಿಣಿ(1996) - ಮನಸೇ ಮನಸೇ
ಸಾಹಿತ್ಯ: ಕೆ. ಕಲ್ಯಾಣ್ ಸಂಗೀತ: ದೇವ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಮನಸೇ...... ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ....... ಮನಸೇ ಮನಸೇ ||

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಕ್ಷಮಿಸೇ||...  ಮನಸೇ ಮನಸೇ ||

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ
ಮನಸೇ ಮನಸಾ ಹರಿಸೇ||...
ಮನಸೇ......ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲಾ ಸುಳ್ಳು ಅಲ್ಲವೇ ......
----------------------------------------------------------------------------------------------------------------------

ಅಮೃತವರ್ಷಿಣಿ (1996) - ತುಂತುರು
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ದೇವ ಗಾಯನ :  ಚಿತ್ರ


ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ
--------------------------------------------------------------------------------------------------------------------------

ಅಮೃತವರ್ಷಿಣಿ (1996) - ತುಂತುರು
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ದೇವ ಗಾಯನ : ಗಂಗಾಧರ


ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ಜೀವ ಗಂಗೆಯೇ ನಿನ್ನ ಜೀವವಾ
ನನ್ನ ಎದೆಗಿಂತ ಮಿಗಿಲಾಗಿ ಸೆರೆ ಮರೆಯೋದು ಯಾಕಾಗಿ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ನೆನಪಿನಲೇ ಚಿಲಿಪಿಲಿ ಹಾಡು ಎಲೆ ಮೇಲೆ,
ನಿನ್ನ ಪ್ರೀತಿ ಹಾಡು ಅಳುವಿನಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದು ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗಿದ ಇತಿಹಾಸವು
ನಿನ್ನ ವಿರಹಾನೇ ಕಡಿವಾಣ ನಿನ್ನ ದಾರಿನ ಕಾಯುವೆ ನಾ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು

ಚೆಲುವನೆ ನಿನ್ನ ಮುಗುಳುನಗೆ ಹುಡುಕುವುದೆಲ್ಲಿ ಕೊನೆವರೆಗೆ
ಬದುಕಿನ ದಾರಿ ಇರೋವರೆಗೆ ಬಾರದೆ ಹೋದೆ ಮರೆಯೊಳಗೆ
ಅಂದು ನೀನೇ ತಾಯಿ ತಂದೆ ಈಗ ನಾನು ಒಂಟಿ
ನಿನ್ನ ಸನಿಹ ಎಲ್ಲಿ ಹೋಯ್ತು ನನ್ನ ಬದುಕ
ಚಿವುಟಿ ಒಡನಾಡಿ ನಿನದೆ ನರನಾಡಿಯು
ಅಂದು ನೀ ತಂದಹುಣ್ಣಿಮೆಯ ಇಂದು ನ ಕಾಣೆನೊ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು 
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ಜೀವ ಗಂಗೆಯೇ ನಿನ್ನ ಜೀವವಾ
ನನ್ನ ಎದೆಗಿಂತ ಮಿಗಿಲಾಗಿ ಸೆರೆ ಮರೆಯೋದು ಯಾಕಾಗಿ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು 
-----------------------------------------------------------------------------------------------------------------------

ಅಮೃತವರ್ಷಿಣಿ (1996) - ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು
ಸಾಹಿತ್ಯ: ಕಲ್ಯಾಣ್ ಸಂಗೀತ: ದೇವ ಗಾಯನ: ಚಿತ್ರಾ 

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ
ಉಂ ಉಂ ಹೂಂ ಹೂಂ ...

ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ
ನಿನ್ನದೇ ಹೊಗಳಿಕೆ ಕೇಳಿತು ಮೈ ಪುಳಕ ಹೆಚ್ಚಿತು
ಓ.. ಝುಳು ಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ
ಅಬ್ಬಬ್ಬಾ ಅಲ್ಲಿಯೂ ನಿನ್ನದೇ ಕೈ ಚಳಕ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲ ಕಾಲವನ್ನು ಆಳುವ ದೊರೆಯು ನೀನೇನಾ
ಉತ್ತರ ಹೇಳದೇ ಇಲ್ಲಿ ಉತ್ತರ ದಕ್ಷಿಣ ಒಂದಾಗಿ ಮಾಡಿದೆಯಾ 
-------------------------------------------------------------------------------------------------------------------------

ಅಮೃತವರ್ಷಿಣಿ (1996) - ಗಾಳಿ ಗಾಳಿ ತಂಪು ಗಾಳಿ
ಸಾಹಿತ್ಯ: ಕಲ್ಯಾಣ್ ಸಂಗೀತ: ದೇವ ಗಾಯನ: ಚಿತ್ರಾ


ಗಾಳಿ ಗಾಳಿ ತಂಪು ಗಾಳಿ ಊರ ತುಂಬಾ ಇದೆಯೋ
ನಿನ್ನ ಗಾಳಿ ಎಂದೂ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗಿದ ಇತಿಹಾಸವೂ ನಿನ್ನ ವಿರಹಾನ ಕಡಿವಾಣ ನಿನ್ನ ದಾರಿ ಕಾಯುವೇ ನಾ 
ತುಂತುರು ಅಲ್ಲಿ ನೀರ ಹಾಡು ಕಂಬನಿ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ ನನ್ನ ಜೀವ ಗಂಗೆ ನಿನ್ನ ಜೀವವಾ
ನನ್ನ ಎದೆಗಿಂತ ಮಿಗಿಲಾಗಿ ಸೇರಿ ಮರೆಯಾದೇ ಯಾಕಾಗಿ
ನನ್ನ ಎದೆಗಿಂತ ಮಿಗಿಲಾಗಿ ಸೇರಿ ಮರೆಯಾದೇ ಯಾಕಾಗಿ
-------------------------------------------------------------------------------------------------------------------------

No comments:

Post a Comment