99. ಪೂಜಾ (1996)

ಪೂಜಾ ಚಿತ್ರದ ಹಾಡುಗಳು 
  1. ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು 
  2. ಓ.. ಪೂಜಾ ನಿನಗೆ ಪ್ರೇಮದಾ ರೋಜಾ 
  3. ಹುಲ್ಲೆ ಹುಲ್ಲೆ ಹುಲ್ಲೆ ಚಿನ್ನ ಮೈಯ್ಯ ಹುಲ್ಲೆ 
  4. ನನ್ನ ಕವನದ ಹೆಣ್ಣಿವಳು ಮಿನುಗು ತಾರೆ ತಾರೆ 
  5. ನೂರಾರು ಹುಡುಗಿಯರಲ್ಲಿ ನೀನೇ ನೀನೇ ನನಗಿಷ್ಟ 
ಪೂಜಾ (1996) - ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಸಾಹಿತ್ಯ,ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ

ಗಂಡು : ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
           ಹರೆಯದ ಅರಮನೆ ಬಾಗಿಲ ತೆರೆಸಿದಳು
          ಪ್ರೇಮದ ರಾಜ್ಯದ ಓಲಗ ನಡೆಸಿದಳೂ
         ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹೆಣ್ಣು : ಹರೆಯದ ಅರಮನೆ ಬಾಗಿಲ ತೆರೆಸಿದನು
          ಪ್ರೇಮದ ರಾಜ್ಯದ ಓಲಗ ನಡೆಸಿದನೂ...ಅನುರಾಗ...
ಗಂಡು : ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
           ಹರೆಯದ ಅರಮನೆ ಬಾಗಿಲ ತೆರೆಸಿದಳು
          
ಗಂಡು : ದೇವಲೋಕದ ಮುಗಿಲಿಂದ ಕಾಲು ಜಾರಿದಾ ರತಿ ಇವಳು ನನ್ನವಳು ಕಾರಂಜಿ
            ಪ್ರೇಮಲೋಕದ ಬನದಲ್ಲಿ ಗಿಳಿಯು ಸೋಕದಾ ಹಣ್ಣಿವಳೂ ನನ್ನವಳೂ ಅಪರಂಜಿ
            ಕೋಟಿ ಕಣ್ಣನ್ನು ದಾಟಿ ನನ್ನಾ ಕಣ್ಣನ್ನೆ ಮೀಟಿ ನಿಂತಾ 
            ರಥಾನ ಎಳೆದೂ ನನ್ನಾ ವ್ರತಾನ ಮುರಿದೂ 
            ಒಲವಿನ ಹಾಲಲಿ..ಆ..ಆ.. ಚೆಲುವಿನ ಜೇನಲಿ..ಆ.. ಬದುಕಿನ ಬಾಯಿಗೆ ಚುಂಬಿಸುತಾ...
ಗಂಡು : ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
           ಹರೆಯದ ಅರಮನೆ ಬಾಗಿಲ ತೆರೆಸಿದಳು
ಹೆಣ್ಣು : ಮಾಯ ಮಾಡಿ ಮನದಲ್ಲಿ ಪ್ರೇಮ ಶಾಸನವ ಕಡೆದವನೂ ನನ್ನವನೂ ಕಲೆಗಾರ
          ನಾನು ನೀನು ಒಂದೆಂದು ಭಾವಲಿಪಿಯಲೀ ಬರೆದವನೂ ನನ್ನವನೂ ಮನಚೋರಾ
         ನಾನು ಹೂ ಬಿಟ್ಟ ಮಳ್ಳಿ ಇವನಾ ಮೈಯಲ್ಲಿ ಬಳ್ಳೀ
        ಸುಗ್ಗಿ ಸುವ್ವಾಲೆಯಂತೆ ನಾವೂ ಒಂದಾದೆವಿಲ್ಲೀ
        ಪದಗಳ ಪೋಣಿಸಿ..ಆ..ಆ.. ಸ್ವರಗಳ ಸೇರಿಸಿ..ಆ.. ಪ್ರೇಮದ ರೂಪವ ತೋರಿಸುವಾ...
ಗಂಡು : ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
           ಹರೆಯದ ಅರಮನೆ ಬಾಗಿಲ ತೆರೆಸಿದಳು
--------------------------------------------------------------------------------------------------------------------------

ಪೂಜಾ (1996) - ಓ.. ಪೂಜಾ ನಿನಗೆ ಪ್ರೇಮದಾ ರೋಜಾ
ಸಾಹಿತ್ಯ,ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ 

ಓ.. ಪೂಜಾ ನಿನಗೆ ಪ್ರೇಮದಾ ರೋಜಾ
ದೇವತೆ ಓ ನನ್ನ ದೇವತೆ ಇಂದಿಗೆ ನನ್ನ ಮನಸಾಯಿತೇ
ಓ.. ಪೂಜಾ ನಿನಗೆ ಪ್ರೇಮದಾ ರೋಜಾ ದೇವತೆ ಓ ನನ್ನ ದೇವತೆ ಇಂದಿಗೆ ನನ್ನ ಮನಸಾಯಿತೇ 
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು ಅಪ್ಪಿಕೊಂಡ ಮೇಲೆ ನೀ ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
ದೇವತೆ ಓ ನನ್ನ ದೇವತೆ ಇಂದಿಗೆ ನನ್ನ ಮನಸಾಯಿತೇ 

ತುಂಟ ತುಂಟತನದಿಂದ ನೋಡಿ ನಗುವುದು ಸಾಕು 
ಕೆಂಪು ಕೆಂಪು ತುಟಿಯಿಂದ ಪ್ರೇಮ ಮುದ್ರೆಯನು ಹಾಕು 
ಮೌನವಾಗಿ ಸಮ್ಮತಿಸುವೆ ಜಾಣೆಯಾಗಿ ಜಾರುತಿರುವೇ ಆಡು ಆಡು ಮಾತಾಡು 
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು ಅಪ್ಪಿಕೊಂಡ ಮೇಲೆ ನೀ ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
ದೇವತೆ ಓ ನನ್ನ ದೇವತೆ ಇಂದಿಗೆ ನನ್ನ ಮನಸಾಯಿತೇ 

ನಿನ್ನ ಕಣ್ಣ ಕಡಲಲ್ಲಿ ಆಳ ಅಲೆಯಗೂಡು ಹೆಣ್ಣೇ 
ನಿನ್ನ ಹೆಣ್ಣು ತನವೆಲ್ಲ ಮೂಲ ತಿಳಿಯ ಬಿಡು ಹೆಣ್ಣೇ 
ಚತುರನಾರಿ ತೋಳಿನಲ್ಲಿ ಮದನ ಚೋರಿ ಬಾಳಿನಲ್ಲಿ 
ಹಾಡು ಹಾಡು ನಲಿದಾಡು 
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು ಅಪ್ಪಿಕೊಂಡ ಮೇಲೆ ನೀ ಸೋಲೊಪ್ಪಿಕೊಳ್ಳಬೇಕು 
ನಿನ್ನ ನಾ ಪೂಜಿಸುವೇ ದೇವತೆ 
ದೇವತೆ ಓ ನನ್ನ ದೇವತೆ ಇಂದಿಗೆ ನನ್ನ ಮನಸಾಯಿತೇ 
--------------------------------------------------------------------------------------------------------------------------

ಪೂಜಾ (1996) - ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ 
ಸಾಹಿತ್ಯ,ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಜಿಗಿಯೋ ಸಾರಂಗ ನನ್ನಂತರಂಗ ಬಾರೆ ಡಿಂಗ ರಿಂಗ ನೀ ನನ್ನ ಸಂಗ
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ

ಲಕುಮಿಯ ಗಂಡ ವಸುಧೆಗೇ ಸೋತ ಪಾರ್ವತಿ ಗಂಡ ಗಂಗೆಗೆ ಸೋತ
ಈ ಹುಲ್ಲೆಯ ಹುಲ್ಲೆ ನಲ್ಲೆಯ ನಲ್ಲ ನಿನಗೆ ಮಾತ್ರ ಸೋತನು
ಈ ಮಲ್ಲೆಯ ಮಲ್ಲೆ ನಲ್ಲೆಯ ಮಲ್ಲಿ ಬೇರೆ ಯಾರನು ನೋಡನು
ಅಭಿಷೇಕ ಅಭಿಷೇಕ ಮುತ್ತುಗಳ ಅಭಿಷೇಕ ನೈವೇದ್ಯ ನೈವೇದ್ಯ ಅಪ್ಪುಗೆಯ ನೈವೇದ್ಯ
ನನನ್ ಕನಸಿನ ಒಳಗೆ ಬಂದೆ ಯುವ ಪ್ರೇಮದ ಪೂಜೆ ತಂದೆ
ಬರಿ ಕನಸಿನಲ್ಲಿ ನಾನು ಹೀಗೆ ಹೇಗಿರಲೀ
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ

ನುಡಿಯೋ ನಡೆಯೋ ತುಂಬೂರಿ ಎಂದು ನೋಡೋ ಹುಡುಗರು ಬೀದಿ ಹುಡುಗರೂ 
ಬಾಯಿ ಬಿಡುವಳು ಇವಳ ನೋಡುವರು 
ಈ ಚೆಲುವನೂ ಈ ಚೆಲುವೆಗೇ ಪ್ರಾಣ ಕೊಡುವನು ಇವಳ ಪಡೆವನು 
ನವನೀತ ನವನೀತ ವನಿತೆ ನೀ ನವನೀತ ಅಭಿಜಾತ ಅಭಿಜಾತ ನನಗೆ ನೀ ಪಾರಿಜಾತ 
ನನ್ನ ಹೃದಯದ ಒಳಗೆ ಬಂದೆ ಹೊಸ ಬಾಳಿನ ಮೇಳ ತಂದೆ ಬರಿ ನೆನಪಿನಲ್ಲೇ ನಾನು ಹೀಗೆ ಹೇಗಿರಲೇ 
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
ಜಿಗಿಯೋ ಸಾರಂಗ ನನ್ನಂತರಂಗ ಬಾರೆ ಡಿಂಗ ರಿಂಗ ನೀ ನನ್ನ ಸಂಗ
ಹುಲ್ಲೇ ಹುಲ್ಲೇ ಹುಲ್ಲೇ ಚಿನ್ನ ಮೈಯ್ಯ ಹುಲ್ಲೇ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಮನದ ಮುದ್ದು ನಲ್ಲೇ
--------------------------------------------------------------------------------------------------------------------------

ಪೂಜಾ (1996) - ನನ್ನ ಕವನದ ಹೆಣ್ಣಿವಳು ಮಿನುಗು ತಾರೆ 
ಸಾಹಿತ್ಯ,ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ನನ್ನ ಕವನದ ಹೆಣ್ಣಿವಳು ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು ಪ್ರೀತಿ ಧಾರೆ ಧಾರೆ ಧಾರೆ

ಕನಸೇ ಕಾಣದ ಹುಡುಗನ ಕವಿಯ ಮಾಡಿದಳು
ಸೊಬಗೇ ನೋಡದ ತರುಣನ ರವಿಯ ಮಾಡಿದಳು
ಕವಿಯು ಮಾಡಿದ ಪದಗಳ ಮದುವೆ ನೋಡಿದಳು
ಮದುವೆ ಮಾಡಿದ ಕವಿಯನು ರಮಿಸಿ ಹಾಡಿದಳು
ದಿನವೂ ಕನಸಲಿ ಇಣುಕುತ ಮೊಗವ ತೋರಿದಳು
ನಗುವ ಬೀರಿದಳು ಮೆಚ್ಚುಗೇ ಹೇಳಿದಳು ಬೆಚ್ಚಗೇ ಮಾಡಿದಳು
ಸನಿದನಿ ಸಗಮದ ಸ್ವರ ಕುಸುಮ ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿಸದಳು
ನನ್ನ ಕವನದ ಹೆಣ್ಣಿವಳು ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು ಪ್ರೀತಿ ಧಾರೆ ಧಾರೆ ಧಾರೆ

ಒಲವೇ ಕಾಣದ ಹುಡುಗನ ಹೃದಯ ಕಾಡಿದಳು
ಓಓ.... ಕರೆಯೋ ಕಾವ್ಯದ ಮಳೆಯನು ಎನುತ ಬೇಡಿದಳು
ನಗುವ ಹೂವಿನ ಉಡುಗೊರೆ ನನಗೆ ನೀಡಿದಳು
ಬಯಸೋ ದುಂಬಿಯ ತುಟಿಯ ಜೇನ ತೀಡಿದಳು
ಒಲವ ಬರೆಯುವ ಕವಿಯಲಿ ನುಡಿಯ ಬೇಡಿದಳು ನುಡಿದು ಹಾಡಿದಳು
ಎಲ್ಲರ ಕೂಗಿದಳು ಕವನ ತೋರಿದಳಾ
ಸನಿದನಿ ಸಗಮದ ಸ್ವರ ಕುಸುಮ ಎದೆಯಲಿ ಅರಳಿದೆ ಇದೇ ಪ್ರಥಮ
ಪ್ರೇಮ ಪದವಿಗೆನ್ನ ಏರಿಸಿಸದಳು
ನನ್ನ ಕವನದ ಹೆಣ್ಣಿವಳು ಮಿನುಗು ತಾರೆ ತಾರೆ ತಾರೆ
ನನ್ನ ಎದೆಯಲಿ ತುಂಬಿದಳು ಪ್ರೀತಿ ಧಾರೆ ಧಾರೆ ಧಾರೆ
--------------------------------------------------------------------------------------------------------------------------

ಪೂಜಾ (1996) - ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ 
ಸಾಹಿತ್ಯ,ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ
ಚಂದ ಕಾಣುತಿ ಅಂತ ಚೆಂದ ನೋಡುತಿ ಅಂತ
ಚಂದ ಹಾಡುತಿ ಅಂತ ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ

ಅತಿಯಾದ ಮಾತಿಲ್ಲ ಮಿತಿ ಮೀರೋ ನಗುವಿಲ್ಲ 
ಗತಿಮೀರೋ ನಡೆಯಿಲ್ಲ ಯತಿ ಪ್ರಾಸ ಚೆಲುವೆಲ್ಲ 
ಬಯಲು ಸೀಮೆಯ ಸೊಗಡೇಲ್ಲ ತುಂಬಿದೆ ಓ.. ಹೂವೇ 
ತುಂಬಿ ತುಳುಕುವ ಜಗದಲ್ಲಿ ಪ್ರೇಮಿಗಳು ನಾವೇ ಓಓಓ ... ಹಾಹಾ.. ಬೆಡಗಿ ಸೊಬಗಿ ನನ್ನಹುಡುಗಿ 
ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ 
ಚಂದ ಕಾಣುತಿ ಅಂತ ಚೆಂದ ನೋಡುತಿ ಅಂತ 
ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ 

ಸುಖವಾಗಿ ಸ್ವೀಕರಿಸು ಶುಭವಾಗಿ ಮೇಳೈಸು
ರತಿಯಾಗಿ ಓಲೈಸು ಸತಿಯಾಗಿ ಆದರಿಸೂ
ಒಲವ ಮೋಹದ ಓಟದಲ್ಲಿ ಮೊದಲಿಗ ನಾನಮ್ಮಾ
ಹೃದಯ ಕದಿಯುವ ಪಂದ್ಯದಲ್ಲಿ ಬಹುಮತಿ ನೀನಮ್ಮಾ
ಆಆ ... ಲಲಲಲಾಲಾ ... ಸರಸಿ ಸರಸಿ ನನ್ನರಸಿ
ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ 
ಚಂದ ಕಾಣುತಿ ಅಂತ ಚೆಂದ ನೋಡುತಿ ಅಂತ 
ಚಂದ ಹಾಡುತಿ ಅಂತ ಚಂದ ಬಾಳುತಿ ಅಂತ
ನೂರಾರು ಹುಡುಗಿಯರಲ್ಲಿ ನೀನೆ ನೀನೇ ನನಗಿಷ್ಟ 
--------------------------------------------------------------------------------------------------------------------------

No comments:

Post a Comment