142. ಪ್ರೇಮಾನುಬಂಧ (1981)


ಪ್ರೇಮಾನುಬಂಧ ಚಿತ್ರದ ಹಾಡುಗಳು 
  1. ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
  2. ಹೊಸ ಹೊಸ ಬಯಕೆಯ ಮಿಂಚಿನಲ್ಲೀ ಮುದ್ದು ಮುದ್ದು ಮಾತಿನ ಮಳೆಯಲೀ
  3. ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
  4. ಕರೆದಾಗ ನೀನು ಬರಬಾರದೇನೂ 
ಪ್ರೇಮಾನುಬಂಧ (1981) - ಬೆಳದಿಂಗಳೊಂದು ಹೆಣ್ಣಾಗಿ
ಸಂಗೀತ: ರಾಜನ್ - ನಾಗೇಂದ್ರ ಸಾಹಿತ್ಯ: ಚಿ||ಉದಯಶಂಕರ್ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ಕಂಡು ನಿಂತೆ, ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ಕಂಡು ನಿಂತೆ, ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಹೊಸದಾಗಿ ಮೊಗ್ಗೊಂದು ಹೂವಾಗಿ ಆ ಹೂವೆ ಈ ಹೆಣ್ಣ ಮೊಗವಾಗಿ
ಸುಳಿದಾಡೊ ಮಿಂಚಿಂದ ಕಣ್ಣಾಗಿ ಗಿಳಿಮಾತು ಅವಳಾಡೊ ಮಾತಾಗಿ
ತಂಗಾಳಿಗೆ ಓಲಾಡುವ....
ತಂಗಾಳಿಗೆ ಓಲಾಡುವ ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷ ಹೊಂದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ಕಂಡು ನಿಂತೆ, ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಆಆಆ... ಆಆಆ.. ಲಾಲಾ...ಒಹೋ
ಹಗಲಲ್ಲಿ ಕಣ್ಮುಂದೆ ನೀನಿರುವೆ ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೆ ಸಿಂಗಾರಿಯೆ.. ಆಆ...
ಬಂಗಾರಿಯೆ ಸಿಂಗಾರಿಯೆ ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ಕಂಡು ನಿಂತೆ, ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ... 
----------------------------------------------------------------------------------------------------------------------

ಪ್ರೇಮಾನುಬಂಧ (1981) - ಹೊಸ ಹೊಸ ಬಯಕೆಯ ಮಿಂಚಿನಲ್ಲೀ ಮುದ್ದು ಮುದ್ದು ಮಾತಿನ ಮಳೆಯಲೀ
ಸಂಗೀತ: ರಾಜನ್-ನಾಗೇಂದ್ರ,  ಸಾಹಿತ್ಯ: ಚಿ.ಉದಯಶಂಕರ್ ಗಾಯಕರು:ಎಸ್.ಪಿ.ಬಿ , ಎಸ್.ಜಾನಕಿ


ಗಂಡು : ಹೊಸ ಹೊಸ ಬಯಕೆಯ ಮಿಂಚಿನಲೀ ಮುದ್ದು ಮುದ್ದು ಮಾತಿನ ಮಳೆಯಲೀ
            ಛಳಿಯಾ ನೀನು ತಂದೇ ಸನಿಹಾ ನಾನು ಬಂದೇ
ಹೆಣ್ಣು : ನಾ ನಿನ್ನ ನೋಡಿದಾಗಾ ನೀ ನನ್ನ ಸೋಕಿದಾಗಾ ಇಂಥಾ ಸಂತೋಷವೇಕೇ..
          ಹೊಸ ಹೊಸ ಬಯಕೆಯ ಮಿಂಚಿನಲೀ ಮುದ್ದು ಮುದ್ದು ಮಾತಿನ ಮಳೆಯಲೀ
         ಛಳಿಯಾ ನೀನು ತಂದೇ  ಸನಿಹಾ ನಾನು ಬಂದೇ  ...

ಗಂಡು :ಚೆಲುವಾದ ಕೆನ್ನೆಯೇತಕೇ ನಸುಗೆಂಪಗಾಗಿದೇ
            ಮೃದುವಾದ ತುಟಿಗಳೇತಕೇ ಬಳಿ ನನ್ನ ಕೂಗಿದೇ
ಹೆಣ್ಣು :  ಪ್ರೇಮದಾ ಚಲ್ಲಾಟಕೇ ಉಲ್ಲಾಸ ತುಂಬಿ ಬಂದೂ
           ಮನಸಾರ ನನ್ನ ಪ್ರೀತಿಸೂ ಸಂಗಾತಿ ಎಂದಿದೇ
           ಸವಿಯಾದ ಒಂದು ಕಾಣಿಕೇ ಕೊಡು ಎಂದು ಬೇಡಿದೇ
ಗಂಡು : ನಲ್ಲೆಯಾ ಸಿಹಿ ಮಾತಿಗೇ ಬೆರಗಾಗಿ ಸೋತೆನಿಂದೂ
ಹೆಣ್ಣು : ಬೆರಗಾಗಿ ಸೋತೆನಿಂದೂ   ....
           ಹೊಸ ಹೊಸ ಬಯಕೆಯ ಮಿಂಚಿನಲ್ಲೀ
ಗಂಡು : ಮುದ್ದು ಮುದ್ದು ಮಾತಿನ ಮಳೆಯಲೀ
ಹೆಣ್ಣು : ಛಳಿಯಾ ನೀನು ತಂದೇ
ಗಂಡು : ಸನಿಹಾ ನಾನು ಬಂದೇ

ಹೆಣ್ಣು : ನೀನಾಡೊ ಮಾತು ಕೇಳುತಾ ನೂರಾಸೆ ನನ್ನಲೀ
           ತಾನಾಗಿ ಮೂಡಿ ಬಂದಿತೂ ಈಗೇನು ಮಾಡಲೀ
ಗಂಡು : ಆಸೆಯಾ ಪೂರೈಸಲೂ ನಾನಿಲ್ಲಿ ಇಲ್ಲವೇನೂ
            ಒಲವಿಂದ ಬಳಸು ನನ್ನನೂ ಹಿತವಾಗಿ ತೋಳಲೀ
            ಸೊಗಸಾದ ಕನಸೂ ಕಾಣುವೇ ಈ ನನ್ನ ಬಾಳಲೀ
ಹೆಣ್ಣು : ಹೀಗೆಯೆ ಅನುಗಾಲವೂ ಒಂದಾಗಿ ಇರುವೆ ನಾನೂ
ಗಂಡು :   ಒಂದಾಗಿ ಇರುವೆ ನಾನೂ  ...
ಗಂಡು : ಹೊಸ ಹೊಸ ಬಯಕೆಯ ಮಿಂಚಿನಲ್ಲೀ
ಹೆಣ್ಣು : ಮುದ್ದು ಮುದ್ದು ಮಾತಿನ ಮಳೆಯಲೀ
ಗಂಡು : ಛಳಿಯಾ ನೀನು ತಂದೇ
ಹೆಣ್ಣು : ಸನಿಹಾ ನಾನು ಬಂದೇ
ಇಬ್ಬರು : ನಾ ನಿನ್ನ ನೋಡಿದಾಗ ನೀ ನನ್ನ ಸೋಕಿದಾಗ ಇಂಥಾ ಸಂತೋಷವೇಕೇ..
          ಹೊಸ ಹೊಸ ಬಯಕೆಯ ಮಿಂಚಿನಲೀ ಮುದ್ದು ಮುದ್ದು ಮಾತಿನ ಮಳೆಯಲೀ
          ಛಳಿಯಾ ನೀನು ತಂದೇ  ಸನಿಹಾ ನಾನು ಬಂದೇ  ...
------------------------------------------------------------------------------------------------------------------------

ಪ್ರೇಮಾನುಬಂಧ (೧೯೮೧) - ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ।ಉದಯ್ ಶಂಕರ್  ಹಾಡಿದವರು : ಎಸ್ . ಜಾನಕಿ


ಆಆಆ... ಆಆಆ.... ಆಆಆ... ಅ..ಅ... ಅ...ಅ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ.......
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ....
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ.......

ಹೊಸಲಿನ ಪೂಜೆ ಮಾಡಿದೆಯಮ್ಮ..ಹಸಿರು ತೋರಣ..ಕಟ್ಟಿದೆಯಮ್ಮ..ಆಆಆ .......
ತುಪ್ಪದ ದೀಪ ಬೆಳಗಿದೆಯಮ್ಮ ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೇ.....
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೇ ......

ನೀನು ಬರುವಾಗ ಹೊನ್ನಕಾಲ್ಗೆಜ್ಜೆ ನಾದ ನಾ ಕೇಳುವಂತೆ.......
ನಿನ್ನ ನಗೆಯಿಂದ ನನ್ನ ಭಯವೆಲ್ಲಾ ಓಡಿ ಮರೆಯಾಗುವಂತೆ.......
ಮನೆಯು ಬೆಳಕಾಗಿ, ಮನವು ಬೆಳಕಾಗಿ, ಬಾಳು ಬೆಳಕಾಗುವಂತೆ.......
ದಯಮಾಡಿಸು.... ನಾರಾಯಣನ ಹೃದಯೇಶ್ವರಿಯೇ.....
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ.......

ನಿನ್ನ ಮನೆಯಿಂದ ನಿನ್ನ ಗುಡಿಯಿಂದ ಬಂದು ಸ್ಥಿರವಾಗಿ ನೆಲೆಸು.....
ಬಂದ ಕ್ಷಣದಿಂದ ತಂದ ಸುಖ-ಶಾಂತಿ ನಮ್ಮ ಬದುಕಲ್ಲಿ ಬೆರೆಸು......
ನಿತ್ಯ ಹರಿಪೂಜೆ ನಿತ್ಯ ಗುರುಸೇವೆ ಇಲ್ಲಿ ನಡೆವಂತೆ ಹರಸು.....
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ........
ಸೇವೆಯ ಸ್ವೀಕರಿಸು ಬಾ... ಭಾಗ್ಯಲಕ್ಷ್ಮಿಯೇ....
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ........
--------------------------------------------------------------------------------------------------------------------------

ಪ್ರೇಮಾನುಬಂಧ (೧೯೮೧) - ಕರೆದಾಗ ನೀನು ಬರಬಾರದೇನೂ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ।ಉದಯ್ ಶಂಕರ್ ಹಾಡಿದವರು : ಎಸ್ . ಜಾನಕಿ


ಕರೆದಾಗ ನೀನು ಬರಬಾರದೇನೂ
ಕರೆದಾಗ ನೀನು ಬರಬಾರದೇನೂ ನನ್ನ ದೈವ ನೀನು ನಿನ್ನ ದಾಸಿ ನಾನೂ
ಕರೆದಾಗ ನೀನು ಬರಬಾರದೇನೂ

ಯಾರ ಪುಣ್ಯವೋ ಕಾಣೇ ಯಾರ ಪೂಜೆಯೋ ಕಾಣೇ
ಯಾರ ಪುಣ್ಯವೋ ಕಾಣೇ ಯಾರ ಪೂಜೆಯೋ ಕಾಣೇ
ಕರೆಯದೇ ಬಂದೆ ಮನೆಯಲ್ಲಿ ನಿಂದೇ..... ಆಆಆ ಆಆಆ
ಮನಸಿನಲ್ಲಿ ಆಸೆ ತಂದೇ ಕಂಗಳಲ್ಲಿ ಕನಸು ತಂದೇ
ಚೆಲುವನೇ ನಿನಗೇ ಮರುಳಾಗಿ ಹೋದೇ
ಅರಿಯೆಯ ನನ್ನಾ ಬಯಕೆಯ ಚೆನ್ನಾ
ಅರಿಯೆಯ ನನ್ನಾ ಬಯಕೆಯ ಚೆನ್ನಾ ವೇದನೇ ನಾ ತಾಳೇನೂ ಸ್ವಾಮೀ
ಕರೆದಾಗ ನೀನು ಬರಬಾರದೇನೂ
ಕರೆದಾಗ ನೀನು ಬರಬಾರದೇನೂ ನನ್ನ ದೈವ ನೀನು ನಿನ್ನ ದಾಸಿ ನಾನೂ
ನನ್ನ ದೈವ ನೀನು ನಿನ್ನ ದಾಸಿ ನಾನೂ
ಕರೆದಾಗ ನೀನು ಬರಬಾರದೇನೂ

ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನ ಚೆಂದಾ
ನಿನ್ನ ಪೂಜೆಗೆಂದು ಬಂದ ಹೂವ ಮರೆವುದೇನ ಚೆಂದಾ
ಸ್ವೀಕರಿಸೆನ್ನನ್ನೂ ಪ್ರೇಮದಿಂದ ನೀನೂ
ಎಂದೂ ಹೀಗೆ ಮೌನವೇನೂ ನನ್ನಲೇನೂ ಕೋಪವೇನೂ
ಗೋಪಾಲ ನಿನ್ನನ್ನೂ ಬಿಡಲಾರೇ ನಾನೂ
ಸನಿಹಕೆ ಬಾರೋ ನಗುಮುಖ ತೋರೋ
ಸನಿಹಕೆ ಬಾರೋ ನಗುಮುಖ ತೋರೋ ಬೇಡುವೇ ನಾ ನಿನ್ನನೂ.. ಸ್ವಾಮೀ
ಕರೆದಾಗ ನೀನು ಬರಬಾರದೇನೂ
ಕರೆದಾಗ ನೀನು ಬರಬಾರದೇನೂ ನನ್ನ ದೈವ ನೀನು ನಿನ್ನ ದಾಸಿ ನಾನೂ
ನನ್ನ ದೈವ ನೀನು ನಿನ್ನ ದಾಸಿ ನಾನೂ
ಕರೆದಾಗ ನೀನು ಬರಬಾರದೇನೂ
--------------------------------------------------------------------------------------------------------------------------

No comments:

Post a Comment