1388. ವಿಷಕನ್ಯೆ (೧೯೭೨)

ವಿಷಕನ್ಯೆ ಚಲನಚಿತ್ರದ ಹಾಡುಗಳು
  1. ಆಡೋ ಸಮಯದಲೀ ಆಡಬೇಕೂ
  2. ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
  3. ನಾನೂ ನಾನೂ ನಾನೂ ನಾನೇ ನಾನಯ್ಯಾ 
  4. ತಾಯೀ ನಾಡಿಗಾಗಿ ನೀನೂ 
  5. ಏನೋ ಇದೇನೋ ಯಾಕೋ ಅಳಕ ಅಳಕೋ 
  6. ಮಾರೋ ತಿಂಡಿ ಮಜಾ ಏನ್ ಕಂಡೀ 
ವಿಷಕನ್ಯೆ (೧೯೭೨) - ಆಡೋ ಸಮಯದಲೀ ಆಡಬೇಕೂ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ 

ಕೋರಸ್ :  ಅಹ್ಹ.. ಹ್ಹಾ..  ಅಹ್ಹ.. ಹ್ಹಾ..  ಅಹ್ಹ.. ಹ್ಹಾ..  ಅಹ್ಹ.. ಹ್ಹಾ.. ಲಲಲಲ್ಲಲ ಲಲಲಲಾ 
ಹೆಣ್ಣು : ಆಡೋ ಸಮಯದಲ್ಲಿ ನೀ ಆಡಬೇಕೂ ಓದೋ ಸಮಯದಲ್ಲಿ ನೀ ಓದಬೇಕೂ ಲಲಾ .. 
ಕೋರಸ್ : ಓದೋ ಸಮಯದಲ್ಲಿ ನೀ ಓದಬೇಕೂ.. 
ಹೆಣ್ಣು : ಆಡುವಾಸ ಓದುವಾಸ ಬೆರೆತ ಯೌವ್ವನ.. ಇಂದಿಗುಂಟೂ ನಾಳಿಗೇನು ಅನುಮಾನ   
ಕೋರಸ್ : ಅಹ್ಹಹಾ.. ಆಡೋ ಸಮಯದಲ್ಲಿ ನೀ ಆಡಬೇಕೂ ಓದೋ ಸಮಯದಲ್ಲಿ ನೀ ಓದಬೇಕೂ 

ಹೆಣ್ಣು : ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡೂ.. ನೀರಿನಲ್ಲಿ ನೀರಾಗಿ ಮುಳಗಾಡೂ ..  
ಕೋರಸ್ : ಗಾಳಿಯಲ್ಲಿ ಗಾಳಿಯಾಗಿ ಬೆರೆತಾಡೂ.. ನೀರಿನಲ್ಲಿ ನೀರಾಗಿ ಮುಳಗಾಡೂ ..  
ಹೆಣ್ಣು : ಅಹ್ಹಹ್ಹಾ.. ಅಹ್ಹಹ್ಹಹ್ಹಾ ಆಆಆ ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡೋ 
          ಹಾರೋ ಹಕ್ಕಿ ರೆಕ್ಕೆಯಾಗಿ ಹಾರಾಡೋ ಬದುಕಿ ಬಂದ ಬೇಧವಿಂದು ಸವಿದಾಡೂ 
ಕೋರಸ್ : ಅಹ್ಹಹಾ.. ಆಡೋ ಸಮಯದಲ್ಲಿ ನೀ ಆಡಬೇಕೂ (ಲಲ್ಲಲ್ಲಲ್ಲಾ) 
                ಓದೋ ಸಮಯದಲ್ಲಿ ನೀ ಓದಬೇಕೂ 
                ಆಡುವಾಸ ಓದುವಾಸ ಬೆರೆತ ಯೌವ್ವನ.. ಇಂದಿಗುಂಟೂ ನಾಳಿಗೇನು ಅನುಮಾನ   
                ಆಡೋ ಸಮಯದಲ್ಲಿ ನೀ ಆಡಬೇಕೂ ಓದೋ ಸಮಯದಲ್ಲಿ ನೀ ಓದಬೇಕೂ 

ಕೋರಸ್ : ಲಲಲಾ ಲಾ ಲಾ ಲಲಲಾ ಲಾ ಲಾ 
ಹೆಣ್ಣು : ಅಂತೇ ಕಂತೆ ಎಂಬ ಚಿಂತೇ ಗಾಳಿಗೇ ಬರಲೀ .. 
          ಬಂಡಿಯಂತೇ ಬದುಕಿಗೆಂಬ ಭಾವ ತೊಲಗಲೀ 
ಕೋರಸ್ : ಅಂತೇ ಕಂತೆ ಎಂಬ ಚಿಂತೇ ಗಾಳಿಗೇ ಬರಲೀ .. 
               ಬಂಡಿಯಂತೇ ಬದುಕಿಗೆಂಬ ಭಾವ ತೊಲಗಲೀ 
ಹೆಣ್ಣು :  ಆಹ್ಹಾಹಾಆಆಅ ... ಆಆಆ ನಿಂತೇ ಕುಂತೂ ನಕ್ಕು ನಗಿಸಿ ಜೀವ ನಲಿಯಲೀ ..  
           ನಿಂತೂ ಕಂತೂ ನಕ್ಕು ನಗಿಸಿ ಜೀವ ನಲಿಯಲೀ 
           ನಿತ್ಯ ಸುಖವ ಜೇನ ಸವಿದೂ ಬಾಳು ಬೆಳಗಲೀ ..  
ಕೋರಸ್ : ಅಹ್ಹಹಾ.. ಆಡೋ ಸಮಯದಲ್ಲಿ ನೀ ಆಡಬೇಕೂ (ಲಲ್ಲಲ್ಲಲ್ಲಾ) 
                ಓದೋ ಸಮಯದಲ್ಲಿ ನೀ ಓದಬೇಕೂ 
                ಆಡುವಾಸ ಓದುವಾಸ ಬೆರೆತ ಯೌವ್ವನ.. ಇಂದಿಗುಂಟೂ ನಾಳಿಗೇನು ಅನುಮಾನ   
                ಲಾಲಾ ಲಾಲಾ ಲಲ್ಲಲ್ಲಲ್ಲಾ ಲಾಲಾ ಲಾಲಾ ಲಲ್ಲಲ್ಲಲ್ಲಾ (ಅಹ್ಹಹ್ಹಾ ) 
                ಲಾಲಾ ಲಾಲಾ ಲಲ್ಲಲ್ಲಲ್ಲಾ (ಅಹ್ಹಹ್ಹಾ ಹಾ ಅಹ್ಹಹ್ಹಾ.. )          
-----------------------------------------------------------------------------------------------------------------
  
ವಿಷಕನ್ಯೆ (೧೯೭೨) - ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ  

ಮದುವೇ... ಆಆಆ.. ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ  ಹೇಳೇ ಮೆಲ್ಲಗೇ 
ಹೃದಯ ತುಂಬ ಅದರ ಮರ್ಮ ಕೇಳೋ ವಧುವಿಗೇ .. 
ಏನೋ ರಂಗೂ ಏನೋ ಗುಂಗೂ ತಂದು ಕಣ್ಣಿಗೇ .. 
ಮೈಯ್ಯಲ್ಲೆಲ್ಲಾ ಮಿಂಚೂ ತಂದೆ ರಾತ್ರೀ ಹೆಣ್ಣಿಗೇ .. 
ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
ಹೃದಯ ತುಂಬ ಅದರ ಮರ್ಮ ಕೇಳೋ ವಧುವಿಗೇ .. 

ಮೊದಲ ರಾತ್ರಿ ಮೋಜದೂ ಏನೆಂದೂ ತಿಳಿಯದೂ 
ತಿಳಿಯದೆಂದೂ ದೂರವಿರಲೂ ಮನಸ್ಸ ಜಾತವಲ್ಲದೂ  
ಮೊದಲ ರಾತ್ರಿ ಮೋಜದೂ ಏನೆಂದೂ ತಿಳಿಯದೂ 
ತಿಳಿಯದೆಂದೂ ದೂರವಿರಲೂ ಮನಸ್ಸ ಜಾತವಲ್ಲದೂ  
ಮೌನವಾಗಿ ಕಣ್ಣಿನಲ್ಲೇ ಮಾತನಾಚೂ ಕರೆಯಲೇ 
ಮೌನವಾಗಿ ಕಣ್ಣಿನಲ್ಲೇ ಮಾತನಾಚೂ ಕರೆಯಲೇ 
ಮೋಹ ತುಂಬಿ ಬಂದಿತೆಂಬ ಮುಖವ ನೆತ್ತೀ ಹಿಡಿಯಲೇ 
ಲಲಾ ...  ಲಲಾ ...  ಲಲಾ ...  ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
ಹೃದಯ ತುಂಬ ಅದರ ಮರ್ಮ ಕೇಳೋ ವಧುವಿಗೇ .. 

ಎದುರು ಜಾಗೆ ನಿಲ್ಲಲೇ ಏನೆಂದೂ ಕೂಗಲೇ 
ಎದೆಯ ಮೇಲೆ ತಲೆಯನಿಟ್ಟೂ ಎಲ್ಲಾ ನಿನ್ನದೆನ್ನಲೇ 
ಎದುರು ಜಾಗೆ ನಿಲ್ಲಲೇ ಏನೆಂದೂ ಕೂಗಲೇ 
ಎದೆಯ ಮೇಲೆ ತಲೆಯನಿಟ್ಟೂ ಎಲ್ಲಾ ನಿನ್ನದೆನ್ನಲೇ 
ನಲ್ಲೇ ಮಾತಿನಿಂದ ಅವನೂ ಬಲ್ಲ ಚಿವುಟೂ ಕೆಣಕಲೇ 
ನಲ್ಲೇ ಮಾತಿನಿಂದ ಅವನೂ ಬಲ್ಲ ಚಿವುಟೂ ಕೆಣಕಲೇ 
ಹೆಜ್ಜೇ ಮೇಲೆ ಹೆಜ್ಜೆ ಹಾಕೀ ಲಜ್ಜೇ ಬಿಟ್ಟೂ ಕುಣಿಯಲೇ 
ಘಲ್ ಗಘಲ್ ಗಘಲ್ ತಕಧಿಮಿತಾ  
ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
ಹೃದಯ ತುಂಬ ಅದರ ಮರ್ಮ ಕೇಳೋ ವಧುವಿಗೇ .. 
ಏನೋ ರಂಗೂ ಏನೋ ಗುಂಗೂ ತಂದು ಕಣ್ಣಿಗೇ .. 
ಮೈಯ್ಯಲ್ಲೆಲ್ಲಾ ಮಿಂಚೂ ತಂದೆ ರಾತ್ರೀ ಹೆಣ್ಣಿಗೇ .. 
ಮದುವೇ ಅಂದರ್ಥವೇನೇ ಹೇಳೇ ಮೆಲ್ಲಗೇ 
ಹೃದಯ ತುಂಬ ಅದರ ಮರ್ಮ ಕೇಳೋ ವಧುವಿಗೇ .. 
-----------------------------------------------------------------------------------------------------------------
  
ವಿಷಕನ್ಯೆ (೧೯೭೨) - ನಾನೂ ನಾನೂ ನಾನೂ ನಾನೇ ನಾನಯ್ಯಾ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಲ್.ಆರ್.ಈಶ್ವರಿ 

ನಾನೂ ನಾನೂ ನಾನೂ ನಾನೂ ನಾನೇ ನಾನಯ್ಯಾ 
ನನ್ನ ಬಿಟ್ಟರೇ ಲೋಕದಲ್ಲಿ ಎಲ್ಲೂ ಇಲ್ಲಯ್ಯಾ 
ನಾನೂ ನಾನೂ ನಾನೂ ನಾನೂ ನಾನೇ ನಾನಯ್ಯಾ 
ನನ್ನ ಬಿಟ್ಟರೇ ಲೋಕದಲ್ಲಿ ಇಲ್ವೇ ಇಲ್ಲಯ್ಯಾ 
ನಾನಯ್ಯಾ...  ನಾನಯ್ಯಾ... ನಾನಯ್ಯಾ... ಯ್ಯಾಯ್ಯಾಯ್ಯಾ... ನಾನೂ ನಾನೇ ನಾನಯ್ಯಾ... 

ರೂಪ ನಾನೂ ರಂಗೂ ನಾನೂ ರಸಿಕರೆದೆಯಾ ರಾಗ ನಾನೂ 
ಮನಸ್ಸೂ ರಮೀಸಿ ಮೈಯ್ಯ ಮರೇಸೀ ಮತ್ತನೇರಸೋ ಮದಿರ ನಾನೂ 
ರೂಪ ನಾನೂ ರಂಗೂ ನಾನೂ ರಸಿಕರೆದೆಯಾ ರಾಗ ನಾನೂ 
ಮನಸ್ಸೂ ರಮೀಸಿ ಮೈಯ್ಯ ಮರೇಸೀ ಮತ್ತನೇರಸೋ ಮದಿರ ನಾನೂ 
ನನ್ನ ಮುಂದೇ ನೀನಲ್ಲಾ ನಿನಗೇನೂ ತಿಳಿದಿಲ್ಲಾ ನಾನಿಲ್ಲದೇ ನಿನ್ನಾಟ ಸಾಗಲ್ಲಾ... ಸಾಗಲ್ಲಾ... ಸಾಗಲ್ಲಾ... 
ನಾನೂ ನಾನೂ ನಾನೂ ನಾನೂ ನಾನೇ ನಾನಯ್ಯಾ 
ನನ್ನ ಬಿಟ್ಟರೇ ಲೋಕದಲ್ಲಿ ಇಲ್ವೇ ಇಲ್ಲಯ್ಯಾ 
ನಾನಯ್ಯಾ...  ನಾನಯ್ಯಾ... ನಾನಯ್ಯಾ... ಯ್ಯಾಯ್ಯಾಯ್ಯಾ... ನಾನೂ ನಾನೇ ನಾನಯ್ಯಾ... 

ಕಾಮ ನಾನೂ ಮೋಹ ನಾನೂ ಕದನ ಹೂಡೋ ಕ್ರೋಧ ನಾನೂ 
ಮದವ ನಾನೂ ಲೋಭ ನಾನೂ ಮತ್ಸರಗಳಾ ಕೂಪ ನಾನೂ 
ಕಾಮ ನಾನೂ ಮೋಹ ನಾನೂ ಕದನ ಹೂಡೋ ಕ್ರೋಧ ನಾನೂ 
ಮದವ ನಾನೂ ಲೋಭ ನಾನೂ ಮತ್ಸರಗಳಾ ಕೂಪ ನಾನೂ 
ನನ್ನ ರೂಪ ನೋಡಯ್ಯಾ.. ಎಲ್ಲದಕ್ಕೂ ಮುಂದಯ್ಯಾ ನಿನ್ನ ಜನ್ಮ ಏನೇನೂ ಇಲ್ಲಯ್ಯಾ.. ಇಲ್ಲಯ್ಯಾ.. ಇಲ್ಲಯ್ಯಾ.. 
ನಾನೂ ನಾನೂ ನಾನೂ ನಾನೂ ನಾನೇ ನಾನಯ್ಯಾ 
ನನ್ನ ಬಿಟ್ಟರೇ ಲೋಕದಲ್ಲಿ ಇಲ್ವೇ ಇಲ್ಲಯ್ಯಾ 
ನಾನೂ ನಾನೇ  ನಾನೇ ನಾನೂ ನಾನೇ ನಾನೇ ನಾನೇ...... 
----------------------------------------------------------------------------------------------------------------
  
ವಿಷಕನ್ಯೆ (೧೯೭೨) - ತಾಯೀ ನಾಡಿಗಾಗಿ ನೀನೂ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ 

ಓ.. ರಾಮಣ್ಣ ನಿಂಗಣ್ಣ ಹನುಮಣ್ಣ ಜಕ್ಕಣ್ಣ ಚಂದಣ್ಣ ಬೇಕರಣ್ಣಾ 
ಓ.. ರಾಮಣ್ಣ ನಿಂಗಣ್ಣ ಹನುಮಣ್ಣ ಜಕ್ಕಣ್ಣ ಚಂದಣ್ಣ ಬೇಕರಣ್ಣಾ 
ತಾಯಿ ನಾಡಿಗಾಗಿ ನೀನೂ ಏನೇನೋ ತ್ಯಾಗ ಮಾಡಿ ಯಾವ್ಯಾವ ಕೆಲಸ ಮಾಡ್ದೆ ಹೇಳೋ ಚಂದ್ರಣ್ಣಾ.. 
ತಾಯಿ ನಾಡಿಗಾಗಿ ನೀನೂ ಏನೇನೋ ತ್ಯಾಗ ಮಾಡಿ ಯಾವ್ಯಾವ ಕೆಲಸ ಮಾಡ್ದೆ ಹೇಳೋ ಚಂದ್ರಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. ಅಹ್ಹಾ.. ಅಹ್ಹಾ.. 

ಹೂಮಾಲೇ ಹಾಕಿಸಿಕೊಂಡೂ ಚಪ್ಪಾಳೆ ತಟ್ಟಿಸಿಕೊಂಡೂ ಭಾರೀ ಪುಡಾರಿ ಆಗೋ ಆಸೇ ಪಟ್ಟೇ 
ಹೂಮಾಲೇ ಹಾಕಿಸಿಕೊಂಡೂ ಚಪ್ಪಾಳೆ ತಟ್ಟಿಸಿಕೊಂಡೂ ಭಾರೀ ಪುಡಾರಿ ಆಗೋ ಆಸೇ ಪಟ್ಟೇ 
ಹಳ್ಳಿಯ ದಿಲ್ಲಿ ಮಾಡೀ ದಿಲ್ಲಿಯ ಹಳ್ಳಿ ಮಾಡೀ ಎಲ್ಲ ಸಮ ಮಾಡ್ತಿನಂತಾ ಭಾಷೆ ಕೊಟ್ಟೇ 
ಆಡಿದ್ದೂ ಮರೆತೇ ಬಿಟ್ಟೇ .. ಬೆಳೆಸಿದೇ ಡೊಳ್ಳು ಹೊಟ್ಟೇ 
ಆಡಿದ್ದೂ ಮರೆತೇ ಬಿಟ್ಟೇ .. ಬೆಳೆಸಿದೇ ಡೊಳ್ಳು ಹೊಟ್ಟೇ 
ಕೈಕೈ ಕೊಟ್ಟೇ ದಾರಿ ಬಿಟ್ಟೇ ಬಡವ ಬಾಳೋದು ಶೋಕಿಗೆಂದೂ ಅಂದ್ಬಿಟ್ಟೇ 
ಬಡವ ಗೋಳಾಡೋ ಗತಿಗಿಂದು ತಂದ್ಬಿಟ್ಟೇ.. 
ತಾಯಿ ನಾಡಿಗಾಗಿ ನೀನೂ ಏನೇನೋ ತ್ಯಾಗ ಮಾಡಿ ಯಾವ್ಯಾವ ಕೆಲಸ ಮಾಡ್ದೆ ಹೇಳೋ ಚಂದ್ರಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 

ದೇಶವೇ ತಾಯಿಯಂತೇ ಸೇವೆಯೇ ಧರ್ಮವೆಂದೇ ವೇದಿಕೆಯ ಮೇಲೆ ನಿಂತು ಭಾಷಣ ಹೊಡೆದೇ 
ದೇಶವೇ ತಾಯಿಯಂತೇ ಸೇವೆಯೇ ಧರ್ಮವೆಂದೇ ವೇದಿಕೆಯ ಮೇಲೆ ನಿಂತು ಭಾಷಣ ಹೊಡೆದೇ 
ಸಂಚೂ ಮಾಡೀ ಮೇಲೇರಿ ಲಂಚ ತಿಂದೂ ಅಮಲೇರಿ ವಂಚನೆಯ ಮಾಡಿದ್ದೆಲ್ಲೋ ದೇಶದ್ರೋಹೀ 
ಕೇಳೋದೂ ರಾಮ ನಾಮ ಹಾಕೋದೂ ಪಂಗನಾಮ 
ಕೇಳೋದೂ ರಾಮ ನಾಮ ಹಾಕೋದೂ ಪಂಗನಾಮ 
ಸತ್ಯಧರ್ಮ ಮರೆತವರನ್ನ ಅಯ್ಯಯ್ಯೋ ಸುಡಬೇಕೋ ನಿನ್ನ ಹಾಳೂ ಜನ್ಮ.. 
ಅಯ್ಯಯ್ಯೋ ಸುಡಬೇಕೋ ನಿನ್ನ ಹಾಳೂ ಈ ಜನ್ಮ.. 
ತಾಯಿ ನಾಡಿಗಾಗಿ ನೀನೂ ಏನೇನೋ ತ್ಯಾಗ ಮಾಡಿ ಯಾವ್ಯಾವ ಕೆಲಸ ಮಾಡ್ದೆ ಹೇಳೋ ಚಂದ್ರಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 
ಬಯಲಾಗಲೋ ನಿನ್ನ ನವರಂಗೀ ಬಣ್ಣಾ.. 
----------------------------------------------------------------------------------------------------------------
  
ವಿಷಕನ್ಯೆ (೧೯೭೨) - ಏನೋ ಇದೇನೋ ಯಾಕೋ ಅಳಕ ಅಳಕೋ  
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ 

ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೋ 
ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೋ 
ಎದೆಯಲ್ಲಿ ಬೆಳಕೋ ಇರದಂಥ ಬದುಕೂ ನನಗೇಕೆ ಬೇಕೂ .. ಬೇಕೂ ... 
ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೂ 

ಗುಡಿಯಲ್ಲಿ ಶಿವನಾ ಮುಡಿಸೇರಲೆಂದೋ ಮಡಿಲಾಗಿ ಹೋಳೊಂದು ಬಿರಿದೂ 
ಗುಡಿಯಲ್ಲೇ ಕುಣಿದೂ ಕಳೆಗೊಂಡು ನಲಿದು ಸೌಗಂಧ ಚೆಲ್ಲಾಡುತಿರಲೂ ಆಆಆ... 
ಗುಡಿಯಲ್ಲಿ ಶಿವನಾ ಮುಡಿಸೇರಲೆಂದೋ ಮಡಿಲಾಗಿ ಹೋಳೊಂದು ಬಿರಿದೂ 
ಗುಡಿಯಲ್ಲೇ ಕುಣಿದೂ ಕಳೆಗೊಂಡು ನಲಿದು ಸೌಗಂಧ ಚೆಲ್ಲಾಡುತಿರಲೂ 
ವಿಧಿ ಕೈಯ್ ವಿಷ ಸೋಕಿ ಸೊರಗಿ...  ಹಾಳಾಯ್ತು ನಿಮ್ಮಯ ದಾಸೀ .. 
ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೂ 

ಪರಮೇಶ ಮುಡಿದಾ ಪರಮ ಪ್ರಸಾದ ಎನುವಂಥ ಆ ಕನ್ಯೆ ಒಲಿದು 
ಕಸದಲ್ಲೇ ಕಳೆತು ಅಪವಾಗಿ ಕೊಳೆತು ಕೀಳಾಗಿ ತಾ ನಾಶವಾಯ್ತು.. ಹೂಂಹೂಂಹೂಂಹೂಂ
ಪರಮೇಶ ಮುಡಿದಾ ಪರಮ ಪ್ರಸಾದ ಎನುವಂಥ ಆ ಕನ್ಯೆ ಒಲಿದು 
ಕಸದಲ್ಲೇ ಕಳೆತು ಅಪವಾಗಿ ಕೊಳೆತು ಕೀಳಾಗಿ ತಾ ನಾಶವಾಯ್ತು.. 
ಹೂವಂತೇ ನನಗಾಯ್ತು ಪತನಾ... ಸಾಕಯ್ಯೋ ಕಣ್ಣೀರ ಕಥನಾ ... 
ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೋ 
ಎದೆಯಲ್ಲಿ ಬೆಳಕೋ ಇರದಂಥ ಬದುಕೂ ನನಗೇಕೆ ಬೇಕೂ .. ಹ್ಹಾ..  ... 
ಏನೋ ಇದೇನೋ ಯಾಕೋ ಅಳಕ ಅಳಕೋ 
ಕಾಣೋದೆಲ್ಲಾ ಮಸಮಸಮಸಕೂ 
----------------------------------------------------------------------------------------------------------------
  
ವಿಷಕನ್ಯೆ (೧೯೭೨) - ಮಾರೋ ತಿಂಡಿ ಮಜ ಏನ್ ಕಂಡೀ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ :ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಲ್.ಆರ್.ಈಶ್ವರಿ, ನಾಗೇಂದ್ರ 

ಹೆಣ್ಣು : ಹ್ಹಾ... ಮಾರೋ ತಿಂಡಿ ಮಜ ಏನ್ ಕಂಡೀ ನೋಡೂ ನೀನೀಲ್ಲಿ 
          ಹಲ್ವಾ ಗಿಲ್ವಾ ಎಲ್ಲಾ ಐತೇ 
          ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
          ಮಾರೋ ತಿಂಡಿ ಮಜ ಏನ್ ಕಂಡೀ ನೋಡೂ ನೀನೀಲ್ಲಿ 
          ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
          ಬಿಸಿ ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 

ಹೆಣ್ಣು : ತುಪ್ಪ ಸುರಿದೂ ಕರೆದಿರುವಂಥ ಕಪ್ಪೂ ಬಣ್ಣದ ಜಾಮೂನೂ 
          ಹ್ಹಾ.. ತುಪ್ಪ ಸುರಿದೂ ಕರೆದಿರುವಂಥ ಕಪ್ಪೂ ಬಣ್ಣದ ಜಾಮೂನೂ 
ಗಂಡು : ಓ.. ಕಡ್ಲಿ ತಿಂದೂ ತೇಗುತಿದ್ದ ರಾಮನ ಬಂಟ ಹನುಮನ... 
ಹೆಣ್ಣು : ಅಹ್ಹ ಅಹ್ಹ ಅಹ್ಹ ಅಹ್ಹ ಮಸ್ತಿಯಿಂದ ಕುಸ್ತಿ ಗೆದ್ದ ಹಲ್ವಾ ತಿಂದ ಪೈಲ್ವಾನ್ 
          ಮಸ್ತಿಯಿಂದ ಕುಸ್ತಿ ಗೆದ್ದ ಹಲ್ವಾ ತಿಂದ ಪೈಲ್ವಾನ್    
ಇಬ್ಬರು : ಹೇ.. ಒಪ್ಪತ್ತಾದರೂ ತಿನ್ನೋಣ ಈ ಬೆಪ್ಪ ತಕ್ಕಡಿ  ಇನ್ಸಾನ್   
             ಈ ಬೆಪ್ಪ ತಕ್ಕಡಿ  ಇನ್ಸಾನ್   
             ಮಾರೋ ತಿಂಡಿ ಮಜ ಏನ್ ಕಂಡೀ ನೋಡೂ ನೀನೀಲ್ಲಿ 
             ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
            ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 

ಗಂಡು : ಅಜ್ಜನೂ ತಿಂದಾ ಕರ್ಚಿಕಾಯೀ.. 
ಹೆಣ್ಣು : ಭರ್ಜರಿಯಾಗಿದೇ ತೇಗಿಯೋ ಬಾಯೀ ... 
ಗಂಡು : ಅಜ್ಜನೂ ತಿಂದಾ ಕರ್ಚಿಕಾಯೀ.. 
ಹೆಣ್ಣು : ಭರ್ಜರಿಯಾಗಿದೇ ತೇಗಿಯೋ ಬಾಯೀ ... 
ಗಂಡು : ಭೀಮಾ ಉಂಡಾ ಬೊಂಬಾಯಿ ಬೋಂಡಾ... 
            ಭೀಮಾ ಉಂಡಾ ಬೊಂಬಾಯಿ ಬೋಂಡಾ... 
ಹೆಣ್ಣು : ಬೇಡಾ ಅಂದೋನ ಜನ್ಮಾ ದಂಡಾ.. 
ಗಂಡು : ಆಹ್ಹಾ.. ಆಹ್ಹಾ.. ಆಹ್ಹಾ.. ಆಹ್ಹಾ.. 
            ಹಾಲು ಜೊತೆ ಬಜ್ಜೀ ಇದನ್ ಹೇಳಿಕೊಟ್ಟೋನ್ ನಮ್ಮಜ್ಜೀ .. 
            ಹಾಲು ಜೊತೆ ಬಜ್ಜೀ ಇದನ್ ಹೇಳಿಕೊಟ್ಟೋನ್ ನಮ್ಮಜ್ಜೀ .. 
ಇಬ್ಬರು : ಆಗಾಗ ಅಷ್ಟೂ ತಿಂತಾಯಿದ್ರೇ ಯಾರಿಗೂ ಬರದೂ ಕಜ್ಜೀ.. 
             ಓಹೋಹೋ   ಯಾರಿಗೂ ಬರದೂ ಕಜ್ಜೀ.. 
             ಮಾರೋ ತಿಂಡಿ ಮಜ ಏನ್ ಕಂಡೀ ನೋಡೂ ನೀನೀಲ್ಲಿ 
             ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
             ಅರೆರೆರೆರೇ..  ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 

ಗಂಡು : ಸಂತೇ ಹುಡುಗೀ ಬರ್ತಾಳೇ ಸಂಜೆ ತನಕ ಇರ್ತಾಳೇ .. 
            ಸಂತೇ ಹುಡುಗೀ ಬರ್ತಾಳೇ ಸಂಜೆ ತನಕ ಇರ್ತಾಳೇ .. 
            ಸಾರೀ ಸಾರೀ ಕೂಗ್ತಾಳೇ .. ಸರಕ್ ಮಾರೀ ಹೋಗ್ತಾಳೇ .. 
ಹೆಣ್ಣು : ಓಹೋ.. ಓಹೋ.. ಓಹೋ.. ಓಹೋ.. 
          ತಕ್ಕಡಿ ಹಿಡಿದೂ ತೂಗಲ್ಲ.. ತಿಕ್ಕಲ್ಲ ಮಾತೂ ಆಡಲ್ಲ 
          ಆಹ್ .. ತಕ್ಕಡಿ ಹಿಡಿದೂ ತೂಗಲ್ಲ.. ತಿಕ್ಕಲ್ಲ ಮಾತೂ ಆಡಲ್ಲ 
          ರೊಕ್ಕದ ಆಸೇ ಹೆಚ್ಚಿಲ್ಲಾ.. ಸಿಕ್ಕಿದ ಗಿರಾಕೀ ಬೀಡೋಲ್ಲಾ.. 
          ಸಿಕ್ಕಿದ ಗಿರಾಕೀ ಬೀಡೋಲ್ಲಾ..  
ಇಬ್ಬರು :  ನಾವ್ ಮಾರೋ ತಿಂಡಿ ಮಜ ಏನ್ ಕಂಡೀ ನೋಡೂ ನೀನೀಲ್ಲಿ 
             ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
             ಬಿಸೀ ಹಲ್ವಾ ಗಿಲ್ವಾ ಎಲ್ಲಾ ಐತೇ ಹೇಳೂ ಏನ್ ಕೋಡ್ಲಿ .. 
-----------------------------------------------------------------------------------------------------------------

No comments:

Post a Comment