901. ಅವಳ ನೆರಳು (೧೯೮೩)



ಅವಳ ನೆರಳು ಚಿತ್ರದ ಹಾಡುಗಳು 
  1. ಸ್ನೇಹ ಪ್ರೇಮರೂಪ ತಂದು 
  2. ಕಾವೇರಿ ತೀರದ ಮೇಲೆ ತಂಗಾಳಿ ಬೀಸಿದ ಹಾಗೇ 
  3. ರಂಗೇರಿ ಬಂತು ಸುಮ್ಮಾನ ತಂತು 
  4. ನಿನ್ನ ಬಲ್ಲೆನು ನಾನು ಎಲ್ಲ ಬಲ್ಲೆನು 
ಅವಳ ನೆರಳು (೧೯೮೩)
ಸಂಗೀತ : ಜೋಯ್, ಸಾಹಿತ್ಯ : ವಿಜಯನಾರಸಿಂಹ, ಗಾಯನ :ವಾಣಿಜಯರಾಂ 

ಆಆಆ.... ಆಆಆ...
ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ದೂರ ಸಾಗಿದೆ  ದೂರ ಸಾಗಿದೆ
ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು

ನೆನಪಾಗಿ ನೀಡು ನಿಂದೆ ನೆರಳಾಗಿ ನಾನು ಬಂದೆ
ಇರುಳೆಲ್ಲಾ ಸಾಗೂ ಚಿಂತೆಯಾ... 
ಆಸೆಯ ಜೀವಾ ತಾಳದು ನೋವಾ
ನೀ ನಿಲ್ಲ ಜೀವನ
ಆಸೆಯ ಜೀವಾ ತಾಳದು ನೋವಾ
ನೀ ನಿಲ್ಲ ಜೀವನ
ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ದೂರ ಸಾಗಿದೆ  ದೂರ ಸಾಗಿದೆ 

ಒಲವೆಂಬ ಬಿಂಬದಲ್ಲಿ ಮನದಾಸೆಯಲ್ಲಾ ಹೀರಿ
ಶಿಲೆಯಾಗಿ ಮೌನಾ ತಾಳೇನಾ
ಕಾಣಲು ನಿನ್ನಾ ಕಾಡಿತು  ನನ್ನಾ ಪ್ರೇಮ ಸಂಗಮ
ಕಾಣಲು ನಿನ್ನಾ ಕಾಡಿತು ನನ್ನಾ ಪ್ರೇಮ ಸಂಗಮ
ಸ್ನೇ.... ಹಾ ಪ್ರೇಮರೂಪ ತಂದು
ಸ್ನೇ.... ಹಾ ಪ್ರೇಮರೂಪ ತಂದು
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ಮರೆಯಲಿಂದು ಸೇರದೆ ನಿಂದು ದೂರ ಸಾಗಿದೆ
ದೂರ ಸಾಗಿದೆ  ದೂರ ಸಾಗಿದೆ
--------------------------------------------------------------------------------------------------------------------------


ಅವಳ ನೆರಳು (೧೯೮೩)
ಸಂಗೀತ : ಜೋಯ್, ಸಾಹಿತ್ಯ : ಆರ್,ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ


ಗಂಡು : ಆಆಆ..ಹೆಣ್ಣು : ಆಆಆಅ..
ಗಂಡು : ಆಆಆ  ಹೆಣ್ಣು ಓಹೋಹೋ..
ಇಬ್ಬರು : ಲಾಲಾ
ಗಂಡು : ಕಾವೇರಿ ತೀರದ ಮೇಲೆ ತಂಗಾಳಿ ಬೀಸಿದ ಹಾಗೆ
            ಕಾವೇರಿ ತೀರದ ಮೇಲೆ ತಂಗಾಳಿ ಬೀಸಿದ ಹಾಗೆ
            ಬಾಳಲ್ಲಿ ತಂದೆ ನೀನು ಹೊಸಕಂಪನಾ
            ಶ್ರೀಗಂಧ ಗೊಂಬೆಯಂತೆ ನನುಗಂಪನ
ಹೆಣ್ಣು : ಮುಂಜಾನೆ ಮಂಜಲಿ ನೀವು  ಹೊಳೆವಂಥ ಕಿರಣದ ಹಾಗೆ
          ಮುಂಜಾನೆ ಮಂಜಲಿ ನೀವು  ಹೊಳೆವಂಥ ಕಿರಣದ ಹಾಗೆ
         ಬಾಳಲ್ಲಿ ತಂದೆ ನೀವು ನವಚೇತನ ಹೊಸ ಆಸೆ ನೂರು ತಂದ ಸವಿಬಂಧನ

ಗಂಡು : ನೀ ಬೀಸಿದ ಕುಡಿ ನೋಟದ ಹೂಬಾಣವು ನಾಟಿತು ನನ್ನ ಎದೆ
ಹೆಣ್ಣು : ನೀ ಆಡಿದ ಹುಡುಗಾಟವು ಹೊಸ ರಂಗನು ಇಲ್ಲಿಗೆ  ತಂದಿದೇ
ಗಂಡು : ಈ ಜೋಡಿ ಚೆನ್ನ ಚಿನ್ನ ಬಿಡಲಾರೆ ಇನ್ನೂ ನಿನ್ನ
ಹೆಣ್ಣು : ಮೈಯೆಲ್ಲಾ ಮಿಂಚು ತಂದ ಸಿಹಿ ಚುಂಬನ
ಗಂಡು : ಕಾವೇರಿ ತೀರದ ಮೇಲೆ ತಂಗಾಳಿ ಬೀಸಿದ ಹಾಗೆ
ಹೆಣ್ಣು : ಬಾಳಲ್ಲಿ ತಂದೆ ನೀನು ನವಚೇತನ
ಗಂಡು : ಬಾಳಲ್ಲಿ ತಂದೆ ನೀನು ಹೊಸಕಂಪನಾ 

ಗಂಡು : ಆಆಆ...  ಓಹೋಹೋ ... ಇಬ್ಬರು : ಲಾಲಾಲಲಲ 
ಹೆಣ್ಣು : ಪ್ರತಿ ಹೆಜ್ಜೆಗೂ ಜೋತೆ ನೀಡುವಾ ಸಂಗಾತಿಯ ನಿನ್ನಲೇ ಕಂಡೇನಾ
ಗಂಡು : ಶೃಂಗಾರದ ರಸಕಾವ್ಯವ ನೀ ನಾಡುವ ಮಾತಲಿ ಕಂಡೇ ನಾ
ಹೆಣ್ಣು : ಈ ಹಾಡು ಮರೆಯದ ಹಾಡು ಈ ಗೂಡು ಸ್ವರ್ಗದ ಬೀಡು
ಗಂಡು : ಇದೇ ನಮ್ಮ ಪ್ರೇಮ ಪೂಜೆ ಆರಾಧಾನಾ
ಹೆಣ್ಣು : ಮುಂಜಾನೆ ಮಂಜಲಿ ನೀವು (ಆಆ)  ಹೊಳೆವಂಥ ಕಿರಣದ ಹಾಗೆ (ಓಓಓ )
          ಮುಂಜಾನೆ ಮಂಜಲಿ ನೀವು (ಆಆ)  ಹೊಳೆವಂಥ ಕಿರಣದ ಹಾಗೆ (ಓಓಓ )
ಗಂಡು : ಬಾಳಲ್ಲಿ ಬಂದೇ ನೀನು ಹೊಸಕಂಪನಾ  ಶ್ರೀಗಂಧ ಗೊಂಬೆಯಂತೆ ನನುಗಂಪನ  
ಇಬ್ಬರು : ಲಾಲಲಲಲಲ ಲಲಲಲಲಾಲಾಳ 
-------------------------------------------------------------------------------------------------------------------------


ಅವಳ ನೆರಳು (೧೯೮೩)
ಸಂಗೀತ : ಜೋಯ್, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ

ರಂಗೇರಿ ಬಂತು ಸುಮ್ಮಾನ ತಂತು ಮೈಯೆಲ್ಲಾ ಜುಂ ಎಂದಿತು
ಹೂವಂಥ ಮನಸು ಹಾಯಾದ ವಯಸು ಹಾಡಾಗಿ ಹೊನಲಾಯಿತು
ಏನೋ ಅಂದ ಎಂಥ ಚಂದ ಎಲ್ಲೆಲ್ಲೂ ಏನಿಂಥ ಆನಂದವೊ
ಏನೋ ಅಂದ ಎಂಥ ಚಂದ ಎಲ್ಲೆಲ್ಲೂ ಏನಿಂಥ ಆನಂದವೊ
ರಂಗೇರಿ ಬಂತು ಸುಮ್ಮಾನ ತಂತು ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು ಹಾಡಾಗಿ ಹೊನಲಾಯಿತು 

ಲಲ್ಲಲಾ ಹೂಂ  ಲಲ್ಲಲಾ ಹೂಂ  ಲಲ್ಲಲಾ ಹೂಂ 
ಸುಗ್ಗಿ ಸುಗ್ಗಿ ಹಿಗ್ಗಿ ಹಿಗ್ಗಿ ಹಾಡು ಕಾಲ,  ಹಾಡಿ ಹಾಡಿ ಜೋಡಿ ಜೋಡಿ ಕೂಡೋ ಕಾಲ ಓಓಓ 
ಚೆಲ್ಲೋ ಚೆಲ್ಲಾದ ತುಂಟಾಟ ತೋರಿ ನೀ ಕುಣಿವೇ ಕುರಿ ಮರಿಯೇ 
ನಾಳೆ ನೀ ಹೋಯ್ತೆ ಈ ಕೈಯ್ ಜಾರಿ ಶಿವ ಬಲ್ಲ ಆ ದಾಳಿ 
ನೋಡು ಅಲ್ಲಿ ಬಂತು ಹುಲಿ
ನೋಡು ಅಲ್ಲಿ ಬಂತು ಹುಲಿ ಓ... ಡೋ ಜಾಣ ಮರೀ 
ರಂಗೇರಿ ಬಂತು ಸುಮ್ಮಾನ ತಂತು ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು ಹಾಡಾಗಿ ಹೊನಲಾಯಿತು 

ಓಓಓ... ಓಓ ಓಓಓ... ಓಓ ಓಓಓ... ಓಓ 
ಹೆಣ್ಣು ಹಣ್ಣಂತೆ ರಸತುಂಬಿದಾಗ ಏನೇನೋ ಆಗತೈತೆ 
ನನ್ನ ಹಣೆಯಾಗೆ ಏನಾಯಿತೋ ಕಾಣೇ ಆ ಚಿಂತೇ...  ಈಗ್ಯಾಕೇ 
ನನ್ನ ಮ್ಯಾಲೇ ಕಣ್ಣು ನೂರು 
ನನ್ನ ಮ್ಯಾಲೇ ಕಣ್ಣು ನೂರು ಯಾರೋ ದಿಕ್ಕು ನಂಗೇ 
ರಂಗೇರಿ ಬಂತು ಸುಮ್ಮಾನ ತಂತು ಮೈಯೆಲ್ಲಾ ಜುಂ ಎಂದಿತು...
ಹೂವಂಥ ಮನಸು ಹಾಯಾದ ವಯಸು ಹಾಡಾಗಿ ಹೊನಲಾಯಿತು 
ಏನೋ ಅಂದ ಎಂಥ ಚಂದ ಎಲ್ಲೆಲ್ಲೂ ಏನಿಂಥ ಆನಂದವೊ
ರಂಗೇರಿ ಬಂತು ಸುಮ್ಮಾನ ತಂತು ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು ಹಾಡಾಗಿ ಹೊನಲಾಯಿತು 
--------------------------------------------------------------------------------------------------------------------------

ಅವಳ ನೆರಳು (೧೯೮೩)
ಸಂಗೀತ : ಜೋಯ್, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. 

ಹೊಯ್... ಕ್ರೂರರ್... ತಾರಡಾನ ತಾರಡನ  ತದ್ಧನ
 ಓಯ್ ಓಯ್ ತದ್ಧನ ತದ್ಧನ  ತತಾ ತತಾ ತತಾ
ಓಯ್  ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ಹಳ್ಳಿ ದಿಲ್ಲಿ ಗಲ್ಲಿ ಎಲ್ಲಾ ನಾ ತೋರಿ ಬಂದೆನು
ನೋಡು ನನ್ನನು ನೀ ತೆರೆದು ಕಣ್ಣನು
ಕಟ್ಟು ಮಸ್ತು ಮೈಯ ನಿಂಗೆ ಮೀಸಲಿಟ್ಟೆನು
ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು
ಅರೇ  ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು
ಓಯ್  ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ಹಳ್ಳಿ ದಿಲ್ಲಿ ಗಲ್ಲಿ ಎಲ್ಲಾ ನಾ ತೋರಿ ಬಂದೆನು
ನೋಡು ನನ್ನನು ನೀ ತೆರೆದು ಕಣ್ಣನು
ಕಟ್ಟು ಮಸ್ತು ಮೈಯ ನಿಂಗೆ ಮೀಸಲಿಟ್ಟೆನು
ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು 

ಇನ್ನು ಯಾಕೆ ಹಿಂಗಾಡ್ತಿ ಹೇಳೇ ಅಮ್ಮಿ
ಬೆನ್ನ ಮೇಲೆ ಮಚ್ಚೆ ಐತೆ ನಂಗೇನ್ ಕಮ್ಮಿ ಅಹ್ಹಹ್
ಇನ್ನು ಯಾಕೆ ಹಿಂಗಾಡ್ತಿ ಹೇಳೇ ಅಮ್ಮಿ
ಬೆನ್ನ ಮ್ಯಾಗೇ ಮಚ್ಚೆ ಐತೆ ನಂಗೇನ್ ಕಮ್ಮಿ
ನೀನೇ ನನ್ನ ಜೋಡಿ ಎಂದೂ ಅರೇ ಜೋಯಿಸ್ ಹೇಳಿದಾ ಹ್ಹಾ.. 
ಅವನ ಮಾತು ಸಸುಕೆ ಎಂದು ನಂಬು ಹೆಣ್ಣೇ 
ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು 
ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ಹಳ್ಳಿ ದಿಲ್ಲಿ ಗಲ್ಲಿ ಎಲ್ಲಾ ನಾ ತೋರಿ ಬಂದೆನು
ನೋಡು ನನ್ನನು ನೀ ತೆರೆದು ಕಣ್ಣನು
ಕಟ್ಟು ಮಸ್ತು ಮೈಯ ನಿಂಗೆ ಮೀಸಲಿಟ್ಟೆನು
ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು 

ಎತ್ತಿಕೊಂಡು ಸುತ್ತಿ ಸುತ್ತಿ ಹಾರಾಡ್ತಿನಿ
ಮುತ್ತಿನಂತ ಹೆಂಡ್ತಿ ಎಂದು ಊರಗೆ ಹೇಳ್ತಿನಿ
ನಿನ್ನ ಎತ್ತಿಕೊಂಡು ಸುತ್ತಿ ಸುತ್ತಿ ಹಾರಾಡ್ತಿನಿ
ಮುತ್ತಿನಂತ ಹೆಂಡ್ತಿ ಎಂದು ಊರಗೆ ಹೇಳ್ತಿನಿ
ವೇಷ ಹಾಕೋ ನಿನ್ನ ಆಟ ಸಾಗೋದಿಲ್ಲಾ ಅರೆ ಹ್ಹಾಂ ... 
ಎಲ್ಲೇ ಹೋದ್ರು ಮಲ್ಲಿ ಮದುವೆ ಆಗ್ತೀನಲ್ಲಾ 
ನೋಡಿ ನಿನ್ನನು ನಾ ಮಾರು ಹೋದೆನು
ತಾಳಿ ಕಟ್ಟಲು ನಾ ಓಡಿ ಬಂದೆನು 
ನಿನ್ನ ಬಲ್ಲೆನು ನಾನು ಎಲ್ಲಾ ಬಲ್ಲೆನು
ಹಳ್ಳಿ ದಿಲ್ಲಿ ಗಲ್ಲಿ ಎಲ್ಲಾ ನಾ ತೋರಿ ಬಂದೆನು
ನೋಡು ನನ್ನನು ನೀ ತೆರೆದು ಕಣ್ಣನು
ಕಟ್ಟು ಮಸ್ತು ಮೈಯ ನಿಂಗೆ ಮೀಸಲಿಟ್ಟೆನು
ನೋಡಿ ನಿನ್ನನು ನಾ ಮಾರು ಹೋದೆನು
ಅರೇ..  ತಾಳಿ ಕಟ್ಟಲು ನಾ ಓಡಿ ಬಂದೆನು
ಪಪ್ಪಾರಾ ಪರಪಾ ಪಪ್ಪಾರಾ ಪರಪಾ ಅರೇ
ತರತ್ ತಾರಾತ್ ತರತ್ ತಾರಾತ್ ಲಲ್ಲಲ್ಲಾ 
--------------------------------------------------------------------------------------------------------------------------






No comments:

Post a Comment