128. ಮಾತು ತಪ್ಪದ ಮಗ (1978)


ಮಾತು ತಪ್ಪದ ಮಗ ಚಿತ್ರದ ಹಾಡುಗಳು 
  1. ಬಾನು ಭೂಮಿಯ ಮಿಲನವ 
  2. ಎಂಥಾ ಸೌಂದರ್ಯ ನೋಡು 
  3. ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ 
  4. ಮರೆಯದ ಹರುಷದ ಸುದಿನ 
ಮಾತು ತಪ್ಪದ ಮಗ (1978) - ಬಾನು ಭೂಮಿಯ
ಆರ್.ಎನ್.ಜಯಗೋಪಾಲ್ ಸಂಗೀತ: ಇಳಯರಾಜ ಗಾಯಕರು: ಎಸ್.ಪಿ.ಬಿ,  ಎಸ್. ಜಾನಕಿ

ಗಂಡು : ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
           ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
          ಸವಿ ಸಂಭ್ರಮ ಸಂಗಮದೇ
ಹೆಣ್ಣು : ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
          ಮುಗಿಲಿಂದ ಮಿಂಚೋಡಿದೇ ಹೂ ಚಿಂತೆ ರವಿಗೆಲ್ಲಿದೆ (ಹೂಂ )
          ಭ್ರಮೆ ತುಂಬಿದೆ ಸಂಗಮದೆ  (ಹೂಂಹೂಂಹೂಂ)

ಗಂಡು : ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಹೆಣ್ಣು : ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂತೆ
ಗಂಡು : ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಹೆಣ್ಣು : ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
          ಮುಗಿಲಿಂದ ಮಿನ್ಚೋಡಿದೆ ಹೂ ಚಿಂತೆ ರವಿಗೆಲ್ಲಿದೆ

ಹೆಣ್ಣು : ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಗಂಡು : ಎಂದಿಗೂ ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಹೆಣ್ಣು : ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ
ಗಂಡು : ಬಾನು ಭೂಮಿಯ (ಹೂಂಹೂಂಹೂಂ)
           ಮಿಲನವ ಬಯಸುತ ಬಾಗಿದೆ (ಹೂಂಹೂಂಹೂಂ)
          ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ ಸವಿ ಸಂಭ್ರಮ ಸಂಗಮದೇ
          (ಹೂಂಹೂಂಹೂಂ) ಹೂಂಹೂಂ (ಹೂಂಹೂಂಹೂಂ) ಹೂಂಹೂಂ (ಲಾಲಾಲಾಲಾ)
--------------------------------------------------------------------------------------------------------------------------

ಮಾತು ತಪ್ಪದ ಮಗ (೧೯೭೮)
ಸಂಗೀತ: ಇಳೆಯರಾಜ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಹೆಯ್...ಹೆಯ್ ಹೆಯ್, ಹಾ..ಹಾಹಾಹಾ
ಎ ಹೆಯ್ ಹೆಯ್, ಎ ಹೆಯ್ ಹೆಯ್  ಎ ಹೆಯ್ ಹೆಯ್ ಹೆಯ್ ಹೆಯ್...
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸೋಂಪು, ಎಲ್ಲೂ ಆ ತಾಯ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸೋಂಪು, ಎಲ್ಲೂ ಆ ತಾಯ ನಗೆಯೇ
ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ
------------------------------------------------------------------------------------------------------------------------

ಮಾತು ತಪ್ಪದ ಮಗ (೧೯೭೮)
ಸಂಗೀತ: ಇಳೆಯರಾಜ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಜಾನಕೀ 


ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ
ಇಲ್ಲಿಲ್ಲಾ ಆಸೆಗೆ ಏನೊಂದು ಬೇಲಿ
ಕಣ್ಣ ಕರೆಯೋಲೆಯ ನೋಡಿಲ್ಲಿ
ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ
ಇಲ್ಲಿಲ್ಲಾ ಆಸೆಗೆ ಏನೊಂದು ಬೇಲಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಮೈ..  ಚಿನ್ನದ ಚಂದದ ರಂಗು, ಈ ಕಣ್ಣಲ್ಲಿ ಮಾದದ ಗುಂಗು
ಮುಟ್ಟಿದರೆ ಫಟ್ ಎನ್ನುವ ನಾಜೂಕಿನ ಹೊಕ್ಕು
ಕಂಡೋರ ಅಂಜಿಕೆ ನನಗೇಕೆ ನಿಂಗೇಕೆ,
ಬೇಕಾದ್ದು ಇಲ್ಲುಂಟು ನೀ ಬಾ ಬಾ
ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ
ಇಲ್ಲಿಲ್ಲಾ ಆಸೆಗೆ ಏನೊಂದು ಬೇಲಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಈ..  ಹೆಣ್ಣಿದು ಕಡಲಿನ ಮುತ್ತು, ಕೈ ಹಾಕಿದ ಧೀರನ ಸ್ವತ್ತು
ಇಪ್ಪತ್ತಕ್ಕೂ ಎಪ್ಪತ್ತಕ್ಕೂ ಸೈ  ಎನ್ನುವ ಆಸೆ
ಕುಡಿ ಮೀಸೆ  ಹುರಿ ಮೀಸೆ , ಕರಿ ಮೀಸೆ ಬಿಳಿ ಮೀಸೆ
ಎಲ್ಲಾರು ಸಣ್ಣೋರೇ ನೀ ಬಾ ಬಾ
ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ
ಇಲ್ಲಿಲ್ಲಾ ಆಸೆಗೆ ಏನೊಂದು ಬೇಲಿ
ಕಣ್ಣ ಕರೆಯೋಲೆಯ ನೋಡಿಲ್ಲಿ

ಈ... ಸುಂದರ ಸಂಜೆಯ ಹೊತ್ತು, ನೀ ಸ್ವರ್ಗಕ್ಕೆ ಮೆಟ್ಟಿಲ ಹತ್ತು
ಈ ಹಕ್ಕಿಯು ತಾ ಸಿಕ್ಕದು ಕೈ ಜಾರಲು ಹೊತ್ತು
ಸ್ನೇಹಕೆ ನೀನುಂಟು ಮೋಹಕ್ಕೆ ನಾನ್ನುಂಟು
ಸಂದೇಹ ಎನ್ನುಂಟು ನೀ ಬಾ ಬಾ
ಹೇಳೋರು ಕೇಳೋರು ಯಾರಿಲ್ಲಾ ಇಲ್ಲಿ
ಇಲ್ಲಿಲ್ಲಾ ಆಸೆಗೆ ಏನೊಂದು ಬೇಲಿ
ಕಣ್ಣ ಕರೆಯೋಲೆಯ ನೋಡಿಲ್ಲಿ
--------------------------------------------------------------------------------------------------------------------------

ಮಾತು ತಪ್ಪದ ಮಗ (೧೯೭೮) - ಮರೆಯದ ಹರುಷದ ಸುದಿನ
ಸಂಗೀತ: ಇಳೆಯರಾಜ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಪಿ.ಸುಶೀಲಾ 

ಹೂಂಹೂಂಹೂಂಹೂಂಹೂಂ ಲಲಾಲಾಲ ಲಲಾಲಾಲ
ಮರೆಯದ ಹರುಷದ ಸುದಿನ ಹರಕೆಯು ಫಲಿಸಿದ ದಿನ ಧಾರೆ ಸುದಿನ
ಮರೆಯದ ಹರುಷದ ಸುದಿನ ಹರಕೆಯು ಫಲಿಸಿದ ದಿನ ಧಾರೆ ಸುದಿನ
ಮರೆಯದ ಹರುಷದ ಸುದಿನ

ಒಲವೇ ಅನ್ನುವಾ ಚೈತ್ರವದು ಹೃದಯದಿ ಬರೆದಿಹ ಕವನ
ಸಪ್ತಪದಿ ತುಳಿದಿರಲು ಶುಭಾಷಯ ಭರಿತವಿದೀಗ ಆತ್ಮ ಮಿಲನ
ಎನಿತೋ ಜನ್ಮದ ಬಂಧನ ಮದುವೇ ಶುಭ ದಿನ
ಮರೆಯದ ಹರುಷದ ಸುದಿನ ಹರಕೆಯು ಫಲಿಸಿದ ದಿನ ಧಾರೆ ಸುದಿನ
ಮರೆಯದ ಹರುಷದ ಸುದಿನ ಹರಕೆಯು ಫಲಿಸಿದ ದಿನ ಧಾರೆ ಸುದಿನ 

ಪ್ರೇಮವೇನೋ ಪೌರ್ಣಿಮೆಯೂ ಬಾಳಲ್ಲಿ ಬೆಳಗುವ ಸಮಯ
ವಧು ವರರ ಹೃದಯಗಳು ಸಮಾಗಮಾ ಸರಸ ಸಂತೋಷ ಪೂರ್ಣ ನಿಲಯ,
ಮಧುರ ಅನುಭವ ನೂತನ ಕರದ ಸವಿ ದಿನ
ಮರೆಯದ ಹರುಷದ ಸುದಿನ ಹರಕೆಯು ಫಲಿಸಿದ ದಿನ ಧಾರೆ ಸುದಿನ
ಮರೆಯದ ಹರುಷದ ಸುದಿನ
--------------------------------------------------------------------------------------------------------------------------

No comments:

Post a Comment