651. ಮಲ್ಲ (೨೦೦೪)


ಮಲ್ಲ ಚಿತ್ರದ ಹಾಡುಗಳು 
  1. ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
  2. ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ
  3. ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ ನೋಡಬಾರ್ದಾನ ನಾ ನೋಡ್ದೆ
  4. ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
  5. ಕರುನಾಡೇ ಕೈ ಚಾಚಿದೆ ನೋಡೇ ಹಸಿರುಗಳೇ ಆ ತೋರಣಗಳೇ
  6. ಮಸ್ತು ನೀ ಮಸ್ತು 
  7. ಮಾಂಗಲ್ಯಮ್ 
  8. ಅಂಗದ ಅಂಗದ 
ಮಲ್ಲ (೨೦೦೪) - ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್  ಗಾಯನ : ಎಸ್ಪಿಬಿ. ಮತ್ತು ಚಿತ್ರಾ 

ಗ : ಈ ಪ್ರೀತಿಯ ಮರೆತೂ...
      ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ಹೆ : ನೀನಿಲ್ಲದ ಹೊತ್ತೂ ...
      ನೀನಿಲ್ಲದ ಹೊತ್ತೂ  ನಾ ಹೇಗೆ ಕಳೆಯಲೆ ಹೇಳು
     ಪಲ್ಲವಿ ಇರದ ಚರಣ  ನೇಸರನಿಲ್ಲದ ಗಗನ
ಗ : ಮೋಡದೊಳಗೆ ಸೂರ್ಯ ಇದ್ದರೂ ಬೆಳಗನೇನೂ
      ಮನಸಿನೊಳಗೆ ನಾನು ನೆನಪಾಗಿ ಉಳಿಯಲೇನೂ
ಹೆ: ಈ ಪ್ರೀತಿಯ ಮರೆತೂ...
     ಈ ಪ್ರೀತಿಯ ಮರೆತೂ... ಬಾಳೋದು ಹೇಗೇ ಹೇಳೋ....
ಗ : ನೀನಿಲ್ಲದ ಹೊತ್ತೂ ...
     ನೀನಿಲ್ಲದ ಹೊತ್ತೂ  ನಾ ಹೇಗೆ ಕಳೆಯಲೆ ಹೇಳು 

ಗ : ಅಂದು ಕೊಂಡಾಗೆಲ್ಲಾ ಜೀವನಾ ಸಾಗದು ಗೆಳೆಯಾ ವಿಧಿಯಾ ಆಟ
     ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲಾ ಮನಸೂ ಇಲ್ಲಾ
     ಓ ಹೂಗಳೇ ನಿಮ್ಮಂತಯೇ ನಾನು
     ಹೂವುಗಳಂತೇ ನಾನೂ ನಿಮಗಾಗಿ ಬಾಳಲೇನೂ
     ಮೇಣದಂತೇ ಅಳದೇ ನಗುತಾ ಬೆಳಗಳೇನೂ
ಹೆ : ಈ ಪ್ರೀತಿಯ ಮರೆತೂ...
      ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ಗ : ನೀನಿಲ್ಲದ ಹೊತ್ತೂ ...
      ನೀನಿಲ್ಲದ ಹೊತ್ತೂ  ನಾ ಹೇಗೆ ಕಳೆಯಲೆ ಹೇಳು 

ಹೆ : ಮುಂದೇನು ಅಂತಾ ಅರಿಯದೇ ತಪ್ಪು ಮಾಡಿದೇ ನಾನು ಹಡೆದೇ ಇವನ್ನನ್ನು
ಗ : ತಾಯಿ ಗರ್ಭವೇ ಕಂದನಿಗೇ ಕವಚ ಅಲ್ಲವೇ ಯಾಕೇ ಹಡೆದೇ
     ಓ.. ಹೂವುಗಳೇ  ನಿಮ್ಮಂತೆಯೇ ನಾನು
    ಹೂವುಗಳಂತೇ ನಾನೂ ನಿಮಗಾಗಿ ಬಾಳಲೇನೂ
    ಮೇಣದಂತೇ ಅಳದೇ ನಗುತಾ ಬೆಳಗಳೇನೂ
   ಈ ಪ್ರೀತಿಯ ಮರೆತೂ...
   ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ಹೆ : ನೀನಿಲ್ಲದ ಹೊತ್ತೂ ...
      ನೀನಿಲ್ಲದ ಹೊತ್ತೂ  ನಾ ಹೇಗೆ ಕಳೆಯಲೆ ಹೇಳು
-----------------------------------------------------------------------------------------------------------------------

ಮಲ್ಲ (೨೦೦೪) - ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಸ್ಪಿಬಿ. ಮತ್ತು ಚಿತ್ರಾ

ಬಾಂಗಡಿಯೋ... ಬಾಂಗಡಿಯೋ...
ಬಾಂಗಡಿ ಮೀನು ಬಳುಕಿದಾಗ
ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ
ಬಾಂಗಾಡಿ ಬಲೆಗೆ ಬಿದ್ದಾಗ
ಬಾಂಗಾಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯಿತ್ತಲ್ಲಾ
ಪ್ರೀತ್ಸೋರು ಸಾಯೋದಿಲ್ಲಾ ಇದ್ದಾಗ ಪ್ರೀತ್ಸೋದಿಲ್ಲಾ
ಏಳು ಜನ್ಮ ಈ ದಿನಾ ಈ ಕ್ಷಣ ಸಾಕೂ ಪ್ರೀತ್ಸೋಕೆ
ಪ್ರೀತ್ಸೋಕೆ ಈ ಪ್ರೀತಿಗೆ
ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ

ಪೋರ ಪೋರ ನೀನು ಕವಿಯಾಗಿದ್ಯಾವಾಗ
ಪೋರಿ ಪೋರಿ ನೀನು ಮನಸಲ್ಲಿ ಇಳಿದಾಗ
ಚೋರ ಚೋರ ಮನಸು ಕದ್ದಿದ್ದು ಯಾವಾಗ
ಚೋರಿ ಚೋರಿ ಹೃದಯ ಒಂದು ಕ್ಷಣ ನಿಂತಾಗ
ವಾರೆವ್ಹಾ ಈ ಪ್ರೀತಿಗೆ ನೂರಾರು ಕಣ್ಣುಗಳು
ಆ ನವಿಲಾ ಗರಿಯಲ್ಲಿ ಎಳೆದಾಡು ಕನಸುಗಳು
ಓ ಪ್ರೇಮಿಯೇ ನಿನ್ನ ಕಲ್ಪನೆ....
ಈ ಜನ್ಮ ಈ ದಿನಾ ಈ ಕ್ಷಣ ಸಾಕು ಪ್ರೀತ್ಸೋಕೆ
ಪ್ರೀತ್ಸೋಕೆ ಈ ಪ್ರೀತಿಗೆ
ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ
ಬಾಂಗಾಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯಿತ್ತಲ್ಲಾ

ಹಳ್ಳಿ ಹಳ್ಳಿ ಹುಡುಗಿ ಕನಸ ಕಂಡಿದ್ಯಾವಾಗ
ರೈತ ರೈತ ನೀನು ಬೆಳೆಯನ್ನು ಬಿತ್ತಾಗ
ಮಳ್ಳಿ ಮಳ್ಳಿ ಹೂವು ಅರಳಿದ್ದು ಯಾವಾಗ
ಮಾಲಿ ಮಾಲಿ ಪನ್ನೀರು ಮೈಯೆನ್ನ ಸೋಕಿದಾಗ
ಮಲೆನಾಡಿನ ಮಲ್ಲ ನೀಡುವೆ ನಿಂಗೆ ಎಲ್ಲಾ
ಈ ಮಲ್ಲನಾ ನಾಡಿ ನೀ ಅದರ ಗುಡಿಯು ನೀನೇ
ಓ ಪ್ರೇಮಿಯೇ ನಿನ್ನ ಕಲ್ಪನೆ
ಈ ಜನ್ಮ ಈ ದಿನ ಈ ಕ್ಷಣ ಸಾಕೂ ಪ್ರೀತ್ಸೋಕೆ
ಪ್ರೀತ್ಸೋಕೆ ಈ ಪ್ರೀತಿಗೆ
ಬಾಂಗಡಿ ಮೀನು ಬಳುಕಿದಾಗ ಎದೆ ತಾಳ ಬಳುಕಿತಲ್ಲ
ಬಾಂಗಾಡಿ ಬಲೆಗೆ ಬಿದ್ದಾಗ ಮನದಾಳ ತಿಳಿಯಿತ್ತಲ್ಲಾ


------------------------------------------------------------------------------------------------------------------------

ಮಲ್ಲ (೨೦೦೪) - ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್  ಗಾಯನ : ಶ್ರೀನಿವಾಸ್, ಅನುರಾಧ ಶ್ರೀರಾಮ್ 

ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದಾನ ನಾ ನೋಡ್ದೆ
ಯಮ್ಮೋ ಯಮ್ಮೋ ಮಾಡದೇ ಮಾಡದೇ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ ಯಮ್ಮೋ ಮಾಡದೇ ಮಾಡದೇ
ಮಾಡ್ಬಾರದನ್ನ ನಾ ಮಾಡ್ದೆ
ಬೆತ್ತಲೆಯಾ ಕತ್ತಲ್ಲಲ್ಲಿ ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊಂಡೆ ಅಪ್ಪಿಕೊಂಡು ತಪ್ಪು ಮಾಡ್ದೆ
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದಾನ ನಾ ನೋಡ್ದೆ
ನನ್ನೊಳಗೆ ಮನಸೊಳಗೆ ಬಂದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ ಬಂದೆ ನಾ ಒಳಗೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಹೊರಗೂ ನೀ ಒಳಗೂನೀ ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ ಮತ್ತಿಗೆ ಅವಳಮ್ಮ
ಸರಸ ಸರಸ ಅರಸ ಅರಸ ಪ್ರೇಮಕೆ ಸರಸಾನೇ ಅರಸ
ಯಮಹೋ ಯಮಹಾ ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದಾನ ನಾ ನೋಡ್ದೆ

ಮುತ್ತಿಗೂ ಮತ್ತಿಗೂ ನಂಟೇನು ಹೇಳು
ಆಧಾರಗಳ ಗುಟ್ಟನ್ನು ಕಣ್ಣಿಗೆ ಹೇಳು
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ನಾಚಿತು ಆ ಕಣ್ಣು ರೆಪ್ಪೆ ಮುಚ್ಚಿತು
ಕಣ್ಣಿಗೆ ಕಾಣದು ಆಧರಗಳಾ ಗುಟ್ಟು
ಸರಸ ಸರಸ ಅರಸ ಅರಸ ಪ್ರೇಮ ಸರಸಕೆ ನೀನೇ ಅರಸ
ಯಮಹೋ ಯಮಹಾ ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
---------------------------------------------------------------------------------------------------------------------

ಮಲ್ಲ (೨೦೦೪) - ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್  ಗಾಯನ : ಉದಿತ ನಾರಾಯಣ್, ಸುಮಾ 

ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಹೊರಗಿದ್ರೆ ಕಿರ್ ಕಿರ್ ಕಿರುಗುತ್ತೆ ಬಂಗಾರ
ಮದನನ್ನ ಮಕ್ಕಳ್ಳೆಲ್ಲಾ ಕರಗೋದ್ರು ನಿನ್ನ ನೋಡಿ
ಮದುವೆಯಾದವರೆಲ್ಲಾ ಮರೆತುಹೋದ್ರು ಹೆಂಡಿರಾ
ಬೆಳೆ ಕಾಲು ಬೇಯುತ್ತಿಲ್ಲಾ
ಗದ್ದೆ ಯಾರೂ ಉಳುತ್ತಿಲ್ಲಾ ನನ್ನಾ ಬಂಗಾರ
ಊರಿಗೆ ಹೇಳೇ ಒಂದು ಪರಿಹಾರ
ಎಲ್ಲಿರಬೇಕ್ ಅಲ್ಲಿದ್ರೆ ಅಂದ ಚಂದಾನೇ ಬಂಗಾರ
ಅಲ್ಲಿರಬೇಕಾದ್ ಇಲ್ಲಿದ್ರೆ ಕಿರ್ ಕಿರ್ ಕಿರುಗತ್ತೆ ಬಂಗಾರ

ಬೆತ್ತಲೆ ಹಣೆಗೆ ಸಿಂಧೂರ ಶೃಂಗಾರ ಅಂತಾರೆ ಕೇಳೇ ಬಂಗಾರ
ನಗ್ನ ಮೂಗಿಗೆ ಮುಗುತ್ತಿ ವಯ್ಯಾರ ಅಂತಾರೆ ಕೇಳೇ ಬಂಗಾರ
ಕೈಗೆ ಬಳೆಗಳ ಕಾಲಿಗೆ ಗೆಜ್ಜೆ ಕೊರಳಿಗೆ ಚಿನ್ನದ ಹಾರ
ಒಟ್ಟಾರೆ ಮೈತುಂಬಾ ಬಟ್ಟೆ ಅದನ್ನೇ ಯಾಕೆ ಬಿಟ್ಟೆ
ಬಣ್ಣದ ಚಿಟ್ಟೆ ಹಾರಿ ಹೋಯ್ತೆ ನನ್ನಾ ಬಂಗಾರ
ಊರಿಗೆ ಆಗ್ಬೇಡಾ ನೀ ಆಹಾರ
ಎಲ್ಲಿರಬೇಕ್ ಅಲ್ಲಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ

ಕೋಳಿ ಪುಕ್ಕ ಕೀಳೋದೆ ತಿನ್ನೋಕೆ ಕೇಳೆಲೆ ಜಂಭದ ಕೋಳಿಯೇ
ಸಿಪ್ಪೆ ಇಲ್ಲದ ಹಣ್ಣಂಗೆ ನೀನಮ್ಮ ಯಾಕಮ್ಮಾ ಆಗು ಗೌರಮ್ಮ
ರೇಶಿಮೆ ಸೀರೆ ಮೈಯಾ ಮೇಲೆ ಕೊಡುವ ಲುಕ್ಕೇ ಬೇರೆ
ಮಣ್ಣಿನ ಸೊಗಡು ಅರಿಯದ್ದಿದ್ದರೆ ಓದಿದ ಬುಕ್ಕು ವೆಷ್ಟೇ
ಬಣ್ಣದ ಚಿಟ್ಟೆ ನೀನೇ ಕೇಳೇ ನನ್ನ ಬಂಗಾರ
ಊರಿಗೆ ಸಿಕ್ತು ಒಂದು ಪರಿಹಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಹೊರಗಿದ್ರೆ ಕಿರ್ ಕಿರ್ ಕಿರುಗುತ್ತೆ ಬಂಗಾರ
--------------------------------------------------------------------------------------------------------------------------

ಮಲ್ಲ (೨೦೦೪) - ಕರುನಾಡೇ ಕೈ ಚಾಚಿದೆ ನೋಡೇ
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್  ಗಾಯನ : ಎಲ್.ಏನ್.ಶಾಸ್ತ್ರೀ 

ಕರುನಾಡೇ ಕೈ ಚಾಚಿದೆ ನೋಡೇ
ಹಸಿರುಗಳೇ ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
ಕರುನಾಡೇ ಎದೆ ಹಾಸಿದೆ ನೋಡೇ
ಹೂವೂಗಳೇ ಶುಭ ಕೋರಿವೇ ನೋಡೇ
ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
ಸಂಪಿಗೆ ಸಂಪಿಗೆ ಕೆಂಡ ಸಂಪಿಗೆ
ಭೂಮಾತೆಯ ಕೆನ್ನೆಯೇ ನಮ್ಮೂರ ಸಂಪಿಗೆ
ಕಾವೇರಿಯಾ ಮಡಿಲಲ್ಲಿ ಹಂಬಲಿಸಿದೆ ನಾನು
ಕನಸುಗಳಾ ರಾಣಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
ಕರುನಾಡೇ ಎದೆ ಹಾಸಿದೆ ನೋಡೇ
ಹೂವೂಗಳೇ ಶುಭ ಕೋರಿವೇ ನೋಡೇ

ಮೂಡಣ ಸೂರ್ಯನೇ ಅರಿಷಣ ಭಂಡಾರ
ಪಡುವಣ ಸೂರ್ಯನೇ ಕುಂಕುಮ ಭಂಡಾರ
ಕಾಮನ ಬಿಲ್ಲು ರಂಗೋಲಿ ಹಾಸಿದೆ
ಈ ಮಣ್ಣಿನ ವಾಸನೆ ಶ್ರೀಗಂಧದಂತಿದೆ
ಕಾವೇರಿಯ ಮಡಿಲಲ್ಲಿ ಹಂಬಲಿಸಿದೆ ನಾನು
ಕನಸುಗಳಾ ರಾಣಿ ಕರುನಾಡಲ್ಲೇ ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ... ಈ ಮಣ್ಣಿನಾ ಕೂಸು ನಾ ....
ಕರುನಾಡೇ ಎದೆ ಹಾಸಿದೆ ನೋಡೇ
ಹೂವೂಗಳೇ ಶುಭ ಕೋರಿವೇ ನೋಡೇ
--------------------------------------------------------------------------------------------------------------------------

ಮಲ್ಲ (೨೦೦೪) - ಮಸ್ತ ನೀ ಮಸ್ತ ನೀ ಮಸ್ತ 
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಹೇಮಂತ, ಕೋರಸ್ 

ಗಂಡು : ಏ ... ಬಾರೋ ಲೋ ನಾನು ಯಾರಿ ಅಂತ ಇವಳಿಗೇ ಹೇಳಲೋ
ಕೋರಸ್ : ಇವನೂ ... ಇವನೂ ...
ಹೆಣ್ಣು : ಭೂಪತಿ ನಮ್ಮೂರ ಅಧಿಪತಿ ಶರಣಾದರೇ ಇವನ ಗಜಪತಿ ಇಲ್ಲಾ ದೇವರೇ ಗತಿ
          ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರ್ ಸುಸ್ತು ಸುಸ್ತು
          ಮಸ್ತ ನೀ ಮಸ್ತ ನೀ ಮಸ್ತ ಊರಾನೇ ನಿನ್ನ ಮಾತಿಗೇ ಅಸ್ತು ಅಸ್ತು
ಗಂಡು : ಕೇಳೋರು ಕೇಳೋದಿಲ್ಲ ಇವನ ಹೇಳೋ ರೂಲ್ಸ್ ಎಲ್ಲಾ
ಕೋರಸ್ : ಹೂವು ಮೂಡಿದ ಮಾಯೆ ಇವನದನೆ ಸಾನೇ ನ್ಯಾಯ
                ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರೆ
ಗಂಡು : ರುದ್ರ ಇವ ರುಧ್ರ ಶಿವಾ
ಕೋರಸ್ : ಸುಮ್ಮನಿದ್ದರೆ ಸೂಜಿ ಕಣೇ ಇವ ಯಂಗ್ ಬಂದ್ರೆ ಕ್ರೇಜಿ ಇವಾ ಬುಸ್ ಅಂದರೆ ನಂಜು ಕಣೇ
ಗಂಡು: ನೂರು ಕಣ್ಣು ಇರಲು ನನ್ನೊಳಗೇ ಧಮ್ಮು ಇರಲಿ ಎದೆಯೊಳಗೆ ಹೆಂಡಾನೇ ನನಗೆ ಎಲ್ಲವೂ
           ಶರಾಬು ಕುಡಿದೇಳ ಗರಿಬು ನಾನಲ್ಲ ಊರ ನಂದು ಕೇಳಿರೋ ಯಾರಿಲ್ಲಾ ಆಲ್ ಇನ್ ನಾನ್ ನಾನಲ್ಲವಾ
           ಆಲ್ಕೋಹಾಲ್ ನನಗಲ್ಲವಾ ತಾಯಿ ಹಾಲು ಕುಡಿದ ಇಲ್ಲವಲ್ಲ
ಕೋರಸ್ : ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನೋಡಿದರೇ ಸುಸ್ತು ಸುಸ್ತು
               ಪರಮ ಶಿವ ಸಾಂಬ ಶಿವ ಶಕ್ತಿ ಶಿವ ಉಗ್ರ ಶಿವಯೋಗಿ ಶಿವಯೋಗಿ ನಾದ ಶಿವ ಬೇಧ ಶಿವ
ಗಂಡು : ಅಂಗಾ ಅಂಗಾ ನೂಲವ
ಕೋರಸ್ : ಹರಿದಲ್ಲಿ ಕೆಂಡ ಶಿವ ಇವನೀಗ ಯಮನಿಗೆ ಗಂಡನವ್ವಾ
ಗಂಡು :  ಹೇ... ಲಕ್ಷಕ್ಕೆ ಒಬ್ಬ ಧ್ರುವ
ಕೋರಸ್ : ಅವನಿಂದ ಸರ್ಪ ಶಿವ ಕಾಲು ಇಟ್ಟಲ್ಲಿ ಭಯವು ತಾಪ
ಗಂಡು : ನೂರು ಕಣ್ಣು ಇರಲಿ ನನ್ನೊಳಗೆ ಧಮ್ಮ ಎದೆಯೊಳಗೆ ಹೆಂಡಾನೇ ನನಗೆಲ್ಲವೋ
            ದೇವರೆಲ್ಲೋ ಗೊತ್ತಿಲ್ಲಾ ಸಾಕಿದವರೇ ನನಗೆಲ್ಲಾ ಉಪ್ಪಿನ ಋಣವ ಮರೆಯೋದೆ ಇಲ್ಲಾ
            ನಾನು ಯಾರಿಗೂ ಜಗ್ಗಲ್ಲಾ ಉಬ್ಬಿಸಿದರೇ ಹಿಗ್ಗಲ್ಲಾ  ನನ್ನಿಷ್ಟಕ್ಕೇ ನನ್ನ ಬಿಟ್ಟರೇ ಸಾಕಲ್ಲ
ಕೋರಸ್ : ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರ್ ಸುಸ್ತು ಸುಸ್ತು
              ಮಸ್ತ ನೀ ಮಸ್ತ ನೀ ಮಸ್ತ ಊರಾನೇ ನಿನ್ನ ಮಾತಿಗೇ ಅಸ್ತು ಅಸ್ತು
--------------------------------------------------------------------------------------------------------------------------

ಮಲ್ಲ (೨೦೦೪) - ಕರುನಾಡೇ ಕೈ ಚಾಚಿದೆ ನೋಡೇ
ಸಾಹಿತ್ಯ ಮತ್ತು ಸಂಗೀತ : ವಿ.ರವಿಚಂದ್ರನ್ ಗಾಯನ : ಎಲ್.ಏನ್.ಶಾಸ್ತ್ರೀ

--------------------------------------------------------------------------------------------------------------------------

No comments:

Post a Comment