90. ಚಂದ್ರಮುಖಿ ಪ್ರಾಣಸಖಿ (1999)


ಚಂದ್ರಮುಖಿ ಪ್ರಾಣಸಖಿ ಚಲನಚಿತ್ರದ ಹಾಡುಗಳು 
  1. ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
  2. ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
  3. ನೆನಪುಗಳ ಮಾತು ಮಧುರಾ   ಮೌನಗಳ ಹಾಡು ಮಧುರಾ
  4. ಚಿಗುರು ಬೊಂಬೆಯೇ 
  5. ಚಂದ್ರಮುಖಿ ಹೊಯ್ 
  6. ಮೊದಲ ಪ್ರೇಮ ಪತ್ರವೇ 
  7. ಒಂದು ಪ್ರೇಮ ಪಲ್ಲಕಿಯ 
  8. ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ 
ಚಂದ್ರಮುಖಿ ಪ್ರಾಣಸಖಿ (1999) - ಅರಳೊ ಹುಣ್ಣಿಮೆ
ಸಾಹಿತ್ಯ:  &  ಸಂಗೀತ: ಕೆ.ಕಲ್ಯಾಣ್   ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೋರಸ್ 


ಗಂಡು : ಅರಳೊ ಹುಣ್ಣಿಮೆ ಹರಡೋ ಹುಣ್ಣಿಮೆ ನೀ ಅರಳು ಮರುಳು ಮಾಡೊ ಹುಣ್ಣಿಮೆ
            ಅರಳೊ ಹುಣ್ಣಿಮೆ ಹರಡು ಹುಣ್ಣಿಮೆ ನೀ ಕನಸು ಹೀರಿ ಹಾಡೊ ಹುಣ್ಣಿಮೆ
            ಯೌವನ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೊನ್ನೆ ಹುಣ್ಣಿಮೆ..
ಕೋರಸ್ : ಓಓಓಓಓ ಒಹೋ.. ಒಹೋ.. ಓಓಓಓಓ 
ಗಂಡು :  ಅರಳೊ ಹುಣ್ಣಿಮೆ ಹರಡೋ ಹುಣ್ಣಿಮೆ ನೀ ಅರಳು ಮರುಳು ಮಾಡೊ ಹುಣ್ಣಿಮೆ

ಗಂಡು : ಓ ಈ ಕಣ್ಣಿಗೆ ಸರಿದೂಗೊ ಕಣ್ಣೂಗಳಿಲ್ಲ ಈ ಹೊಳಪಿಗೇ ಸರಿದೂಗೊ ಬೆಳಕುಗಳಿಲ್ಲ
           ನಿನ ಕಾಂತಿ ಪ್ರಕ್ರುತಿಗೆ ಮೈಕಾಂತಿ ಈ ನಗುವ ಕಲೆಹಾಕೊ ಕೈಗಳು ಇಲ್ಲ
           ವೈಯ್ಯಾರಕೆ ತಲೆಹಾಕೊ ನಾಲಿಗೆ ಇಲ್ಲ ನಿನ ಸೊಗಸೆ ಈ ಬೊಗಸಿಗೆ ಮನಶಾಂತಿ
           ನಿನ್ನ ಬಂಗಿಯ! ಹಾ ಹಾ ಹಾ   ಪ್ರಪುಲ್ಲ ಲಲ್ಲೆಯ! ಒಹೊ ಒಹೊ ಒಹೊ
           ತಾಕೊದೆ ಸಾಹಿತ್ಯ ತೂಗೊದೆ ಸಂಗೀತ
           ಅರಳೊ ಹುಣ್ಣಿಮೆ ಹರಡು ಹುಣ್ಣಿಮೆ ನೀ ಕನಸು ಹೀರಿ ಹಾಡೊ ಹುಣ್ಣಿಮೆ

ಗಂಡು : ಓಓಓ ... ಈ ಹೊಣಪನು ಮರೆಮಾಚೊ ರೇಶಿಮೆ ಇಲ್ಲ ಈ ತಂಪನು ತುಸುಮಾಸುವ ಮಾಸಗಳಿಲ್ಲ
            ನಿನ ಸ್ಪರ್ಶ ಹೂಗಳಲಿ ಮೃದು ಹಾಸ್ಯ ಈ ನಡೀಗೆಯ ಕದಲಿಸೊ ನರ್ತನವಿಲ್ಲ
            ಈ ಸ್ಪೂರ್ತಿಯ ಬದಲಿಸೊ ಶಕ್ತಿಗಳಿಲ್ಲ ನಿನ ಇರುವಿಕೆ ಹೆಣ್ಗಲಿಗೆ ಉಪವಾಸ
            ಸುಮ್ಮನೆತಕೆ! ಹಾ ಹಾ ಹಾ ಸುಳ್ಳು ಹೊಲಿಕೆ! ಒಹೊ ಒಹೊ ಒಹೊ
           ನೀನಿರುವ ಸುಳ್ಳಲ್ಲು ನಾನಿರುವೆ ನಿಜವಾಗಲು
            ಅರಳೊ ಹುಣ್ಣಿಮೆ ಹರಡು ಹುಣ್ಣಿಮೆ ನೀ ಕನಸು ಹೀರಿ ಹಾಡೊ ಹುಣ್ಣಿಮೆ
            ಅರಳೊ ಹುಣ್ಣಿಮೆ ಹರಡು ಹುಣ್ಣಿಮೆ ನೀ ಕನಸು ಹೀರಿ ಹಾಡೊ ಹುಣ್ಣಿಮೆ
            ಯೌವನ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೊನ್ನೆ ಹುಣ್ಣಿಮೆ..
ಕೋರಸ್ : ಓಓಓಓಓ ಒಹೋ.. ಒಹೋ.. ಓಓಓಓಓ 
------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಮನಸೇ ಓ ಮನಸೇ

ಸಾಹಿತ್ಯ: ಕೆ.ಕಲ್ಯಾಣ್  ಸಂಗೀತ: ಕೆ.ಕಲ್ಯಾಣ್   ಹಾಡಿದವರು : ಚಿತ್ರ


ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ
ನಸಿನಿನ್ನಲಿ ಯಾವ ಮನಸಿದೆ  ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ ಮಧುರ ಮನಸಿಗೆಏಏಏ
ಮನಸು ಕೊಟ್ಟು ಮನಸನ್ನೆ ಮರೆತು ಬಿಟ್ಟೆಯಾ
ಮನಸು ಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ

ಓ ಮನಸೇ ಒಂದು ಮನಸು ಎರಡು ಮನಸು ಎಲ್ಲಾ ಮನಸ ನಿಯಮ
ಓ ಮನಸೆ ಎರಡು ಬಾಳು ಮನಸಲೊಂದೆ ಮನಸು ಇದ್ದರೆ ಪ್ರೇಮ
ಮನಸಾಗೊ ಪ್ರತಿ ಮನಸಿಗು ಮನಸೋತಿರುವ, ಎಳೆ ಮನಸು ಎಲ್ಲ ಮನಸಿನ ಮನಸೇರಲ್ಲ
ಕೆಲ ಮನಸು ನಿಜಮನಸಿನಾಲದ ಮನಸ ಹುಸಿ ಮನಸು ಅಂತ ಮನಸನ್ನು ಮನಸೆನ್ನೊಲ್ಲ
ಮನಸೆ ಮನಸೆ ಹಸಿ ಹಸಿ ಮನಸೆ ಮನಸು ಒಂದು ಮನಸಿರೋ ಮನಸಿನ ತನನನನ
ತಿರುಗೊ ಮನಸಿಗು ಮರಗೊ ಮನಸಿದೆ
ಮರದ ಮನಸಿಗು ಕರಗೊ ಮನಸಿದೆ
ಮೈ ಮನಸಲೆ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಒಮ್ಮಲ ಮನಸಿದ್ದರು ಮುಳುಗೇಲದು ಮನಸು
ಮನಸೆಲ್ಲೊ ಮನಸು ಮಾಡೊ ಮನಸಾಮನಸು
ಮನಸೆ ಓ ಮನಸೆ
ಓ ಮನಸೆ ಮನಸು ಮನಸಲ್ಲಿದ್ದರೇನೆ ಅಲ್ಲಿ ಮನಶಾಂತಿ
ಓ ಮನಸೆ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು
ಮನಸೂರಿ ಆಗೋದು ಮನಸಿಗು ಗೊತ್ತು
ಮನಸಿದ್ದರೆ ಮಾರ್ಗಾಂತ ಹೇಳುವ ಮನಸು
ಮನ್ನಿಸುವ ಮನದಲ್ಲಿ ಮನಸಿಡೋ ಹೊತ್ತು
ಮನಸೆ ಮನಸೆ ಬಿಸಿ ಬಿಸಿ ಮನಸೆ ಮನಸು ಒಂದು ಮನಸಿರೊ ಮನಸಿನ ಧಿರೆನನ
ತುಮುಲ ಮನಸಿಗು ಕೋಮಲ ಮನಸಿದೆ
ತೊದಲು ಮನಸಿಗು ಮೃದಲ ಮನಸಿದೆ
ಮನಸಿಚ್ಛೆ ಮನಸ ಒಳಗೆ ಮನಸ್ವೆಚ್ಛೆ ಮನಸ ಹೊರಗೆ
ಮನಸ್ಫೂರ್ತಿ ಮನಸ ಪೂರ್ತಿ ಇರುವುದೆ ಮನಸು
ಮನಸೆಲ್ಲೊ ಮನಸು ಮಾಡೊ ಮನಸಮನಸು
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಒಳ ಮನಸೇ
----------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ನೆನಪುಗಳ ಮಾತು ಮಧುರಾ
ಸಾಹಿತ್ಯ : ಕೆ.ಕಲ್ಯಾಣ್   ಸಂಗೀತ : ಕೆ.ಕಲ್ಯಾಣ್  ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರ


ಹೆಣ್ಣು : ನೆನಪುಗಳ ಮಾತು ಮಧುರಾ ಮೌನಗಳ ಹಾಡು ಮಧುರಾ
ಗಂಡು : ನೆನಪುಗಳ ಮಾತು ಮಧುರಾ ಮೌನಗಳ ಹಾಡು ಮಧುರಾ
            ಕನಸೆ ಇರಲಿ ನನಸೆ ಇರಲಿ  ಪ್ರೀತಿ ಕೊಡುವ
ಹೆಣ್ಣು :  ಕನಸೆ ಮಧುರಾ... ನೆನಪುಗಳ ಮಾತು ಮಧುರಾ

ಗಂಡು : ಸಾವಿರ ಹೂಗಳ ಹುಡುಕಿದರೆ ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೇ
ಹೆಣ್ಣು : ಸಾವಿರ ಹೃದಯವ ಹುಡುಕಿದರು ಅಳತೆ ಬೇರೆ ಸೆಳೆತ ಬೇರೆ ಪ್ರೀತಿ ಒಂದೇ
ಗಂಡು : ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೊ ಪ್ರೀತಿ
ಹೆಣ್ಣು : ಗಾಳಿಯ ಗಂಧವ ಪಡೆದು ಅಂದವ ಹೆಣೆಯೊ ಪ್ರೀತಿ
ಗಂಡು : ಸಂಖ್ಯೇ ಇರದೇ ಗುಣಿಸೊ ಪ್ರೀತಿ
ಹೆಣ್ಣು : ನಿದ್ದೆ ನುಂಗಿ ಕುಣಿಸೊ ಪ್ರೀತಿ
ಗಂಡು : ಶಬ್ದವಿರಲಿ! ಶಬ್ದವಿರಲಿ ಪ್ರೀತಿ ಕೊಡುವ
ಹೆಣ್ಣು : ಶಬ್ದ ಮಧುರ...
ಇಬ್ಬರು : ನೆನಪುಗಳ ಮಾತು ಮಧುರಾ  

ಹೆಣ್ಣು : ಸಾವಿರಾ ಹಾಡನು ಹುಡುಕಿದರು ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ
ಗಂಡು : ಸಾವಿರ ಪ್ರೇಮಿಯ ಹುಡುಕಿದರು ತವಕ ಬೇರೆ ಪುಳಕ ಬೇರೆ ಪ್ರೀತಿ ಒಂದೇ
ಹೆಣ್ಣು : ನದಿಗಳ ಕಲರವಗಳಲಿ ಅಲೆಗಳು ತೋಯೊ ಪ್ರೀತಿ
ಗಂಡು : ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೊ ಪ್ರೀತಿ
ಹೆಣ್ಣು : ಚಿಲುಮೆಯಂತೆ ಚಿಮ್ಮೊ ಪ್ರೀತಿ
ಗಂಡು : ಕುಲುಮೆಯೊಳಗೆ ಕಾಯ್ಸೊ ಪ್ರೀತಿ
ಹೆಣ್ಣು : ಸ್ವಾರ್ಥವಿರಲಿ! ನಿಸ್ವಾರ್ಥವಿರಲಿ ಪ್ರೀತಿ ಕೊಡುವ
ಗಂಡು : ಸ್ವಾರ್ಥ ಮಧುರ
            ನೆನಪುಗಳ ಮಾತು ಮಧುರಾ  ಮೌನಗಳ ಹಾಡು ಮಧುರಾ
--------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಚಿಗುರು ಬೊಂಬೆಯೇ ನವಿರು ಬೊಂಬೆಯೇ
ಸಾಹಿತ್ಯ: & ಸಂಗೀತ: ಕೆ.ಕಲ್ಯಾಣ್ ಗಾಯನ : ಚಿತ್ರಾ, ಕೋರಸ್ 


ಚಿಗುರು ಬೊಂಬೆಯೇ ನವಿರು ಬೊಂಬೆಯೇ ನೀ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ ನವಿರು ಬೊಂಬೆಯೇ ವಸಂತ ಕೊರೆದ ಸ್ವಂತ ಬೊಂಬೆಯೇ
ನಾಚಿಕೆ...... ನಿನ್ನ ಬಣ್ಣವೇ, ಕುತೂಹಲ...... ನಿನ್ನ ಒಡವೆಯೇ ನಿನ್ನವನೇ ನಿನಗೆ ಶಿಲ್ಪಿಯೇ ...
ಚಿಗುರು ಬೊಂಬೆಯೇ ನವಿರು ಬೊಂಬೆಯೇ ನೀ ದಂತ ತೀಡಿದಂತ ಬೊಂಬೆಯೇ

ಓ..... ಈ ಕ್ಷಣವೂ ಮರುಕ್ಷಣವೂ ಪ್ರತಿಕ್ಷಣವಿರಲಿ ಪ್ರತಿನಾಳೆಯ ಪ್ರತಿ ಕನಸು ಪ್ರತಿಫಲಿಸಲಿ
ನೀನೊಂದು ಸಿಹಿ ಪುತ್ಥಳಿ ಬೊಂಬೆ ಕಣೆ 
ಕೈ ಹಿಡಿಯೋ ಕಲೆಗಾರನ ಅಂಗೈಯೊಳಗೆ ನೀ ಸ್ಪರ್ಶ ಮಣಿಯಾಗೋ ದಿನಪ್ರತಿ ಘಳಿಗೆ
ನೀನೊಂದು ಸಂಜೀವಿನಿ ಬೊಂಬೆ ಕಣೆ
ಹಣೆಯ ಮನೆಯಲೇ ಹಾಆ ಆ ಆ ಹ ಹಸಿಯ ಮಣೆಯಿದೆ ಓ.. ಓ ಓ ಓ
ಮಧುಸುರಿವಾ ಮಧುಮಗಳೇ,  ಪ್ರತಿ ಇರುಳು ಮೊದಲಿರುಳೇ
ಚಿಗುರು ಬೊಂಬೆಯೇ ನವಿರು ಬೊಂಬೆಯೇ ನೀ ದಂತ ತೀಡಿದಂತ ಬೊಂಬೆಯೇ

ಓ.. ನಿನ್ನಂದ ನಿನಗೆ ಮಾತ್ರ ನಿನ್ನೆ ವರೆಗೆ ನಿನ ಹೃದಯ ನಿನ್ನೊಳಗೆ ಇದ್ದರೆ ಹೇಗೆ
ಅರ್ಧಾಂಗಿಗೂ ಅರ್ಧ ಸಿಗಬೇಕಿದೆ
ನಿನ್ನುಸಿರು ಬರಿಗಾಳಿಗೆ ಬೆರೆತರೆ ಹೇಗೆ ನಿನ್ ಹೆಸರಿಗೆ ಹೆಸರೊಂದು ಬರೆದುಕೋ ಹೀಗೆ
ಹೆಸರುಸಿರಲು ಸಂಗಾತಿಗೆ ಪಾಲು ಇದೆ
ಗಾಳಿ ನೀರಿಗೂ ಹಾಆ.. ಆ ಆ ಆ ಹಾ  ತಾಳಿನಂಟಿದೆ ಓ.. ಓ ಓ ಓ ಹೊ
ಹೊಸ ಬಾಳು ಹೊಸ ಬೆಳಕು, ನಿನ್ನೊಳಗೆ ನಗಬೇಕು
ಚಿಗುರು ಬೊಂಬೆಯೇ ನವಿರು ಬೊಂಬೆಯೇ ನೀ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ ನವಿರು ಬೊಂಬೆಯೇ ವಸಂತ ಕೊರೆದ ಸ್ವಂತ ಬೊಂಬೆಯೇ
ನಾಚಿಕೆ...... ನಿನ್ನ ಬಣ್ಣವೇ, ಕುತೂಹಲ...... ನಿನ್ನ ಒಡವೆಯೇ ನಿನ್ನವನೇ ನಿನಗೆ ಶಿಲ್ಪಿಯೇ .
--------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಚಂದ್ರಮುಖಿ ಪ್ರಾಣಸಖಿ
ಸಾಹಿತ್ಯ: & ಸಂಗೀತ: ಕೆ.ಕಲ್ಯಾಣ್ ಗಾಯನ : ಕೋರಸ್


ಚಂದ್ರಮುಖಿ ಪ್ರಾಣಸಖಿ
ಚಂದ್ರಮುಖಿ ಪ್ರಾಣಸಖಿ ಇಬ್ಬರಲಿ ಯಾರೂ ಸುಖೀ 
ತನ್ ಸೊಗಸಲೂ ತನ್ಮಯಗಳ ಚಂದ್ರಮುಖಿ  ತನ್ ಗುಣಗಳ ವಿಸ್ಮಯ ತರೋ ಪ್ರಾಣಸಖೀ 
ಚಂದಾನೋ ಚಂದಾನೋ ಮುಖಾ ಮುಖಿ ಓಓಓಓಓಓಓ 

ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ 
ಅಂಗ ಅಂಗ ತೆರೆದಿಟ್ಟರೇ ಅಂದಕೆ ಬೆಲೆ ಅಂತರಂಗ ತೆರೆದಿಟ್ಟರೇ ಹೃದಯಕ್ಕೇ ಬೆಲೆ 
ಮಾತುಗಳು ತೆರೆದಿಟ್ಟರೇ ರಾಗಕ್ಕೆ ಬೆಲೆ ಭಾವಗಳನು ತೆರೆದರೇ ಅನುರಾಗದ ಬೆಲೆ 
ಮೊಗ್ಗದು ಬೀರಿದೆನೇ ಗಂಧಕೇ ಬೆಲೆ ಘಂ ಘಮ ಘಂ ಘಮ ಘಂ 
ಚಿಗುರದು ತೆರೆದರೇನೇ ರೈತರಿಗೇ ಬೆಲೆ ತಂತನ  ತಂತನ  ನಂ 
ರೆಪ್ಪೆ ತೆರೆದರೇ ಕಣ್ ಬೆಲೆ ಸಿಪ್ಪೇ ತೆರೆದೆರೇ ಹಣ್ಣ್ ಬೆಲೆ 
ನೀರ್ ತೆರೆದರೇ ಮಣ್ ಬೆಲೆ ಪ್ರೀತಿ ತೆರೆದರೇ ಹೆಣ್ ಬೆಲೆ 
ಚಂದ್ರಮುಖಿ ಪ್ರಾಣಸಖಿ ಇಬ್ಬರಲಿ ಯಾರೂ ಸುಖೀ 

ಚೆಲುವ ಮಾಯಗಾರನೂ ಚಂದ್ರಮುಖಿ ಹೊಯ್ ಹೊಯ್ 
ಪ್ರಾಣವಾಯುವಾಗೋಳು ಪ್ರಾಣ ಸಖೀ ಹೊಯ್ ಹೊಯ್ 
ಶೃಂಗಾರದ ಶೃಂಗದವಳೂ ಚಂದ್ರಮುಖಿ ಹೊಯ್ ಹೊಯ್ 
ಲಾವಣ್ಯಕೇ ಲಾಂದ್ರ ಇವಳು ಪ್ರಾಣಸಖಿ ಹೊಯ್ 
ಆಚೇ ಇವಳು ಇದ್ದ ಮೇಲೆ ಕಾಣೋ ಚಂದ್ರಮುಖಿ ಝಂ ಝುಮಾ ಝಂ ಝುಮಾ ಝಂ 
ಒಳಗೇ ಇರಳು ಇದ್ದರೂನು ಬೆಳಗೋ ಪ್ರಾಣಸಖಿ ತಂ ತನ ತಂ ತಂ ತನ ತಂ 
ಗಿಡವಿದ್ದ ಕಡೇ ಮೂಲಿಕೆ ಶಿಲೆ ಇದ್ದ ಕಡೇ ಬಾಲಿಕೆ 
ಮನಸಿದ್ದ ಕಡೇ ಮಾಲಿಕೆ ಕನಸಿದ್ದ ಕಡೇ ಹೋಲಿಕೆ 
ಚಂದ್ರಮುಖಿ ಪ್ರಾಣಸಖಿ ಇಬ್ಬರಲಿ ಯಾರೂ ಸುಖೀ 
ತನ್ ಸೊಗಸಲೂ ತನ್ಮಯಗಳ ಚಂದ್ರಮುಖಿ  ತನ್ ಗುಣಗಳ ವಿಸ್ಮಯ ತರೋ ಪ್ರಾಣಸಖೀ 
ಚಂದಾನೋ ಚಂದಾನೋ ಮುಖಾ ಮುಖಿ ಓಓಓಓಓಓಓ 
--------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಚಂದ್ರಮುಖಿ ಪ್ರಾಣಸಖಿ
ಸಾಹಿತ್ಯ: & ಸಂಗೀತ: ಕೆ.ಕಲ್ಯಾಣ್ ಗಾಯನ : ಎಸ್.ಪಿ.ಬಿ. ಚಿತ್ರಾ, ಕೋರಸ್


ಕೋರಸ್ : ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೇ
               ಮೊದಲ ಪ್ರಣಯ ಪಾತ್ರವೇ ಕನಸುಗಳಿಗೇ ಸೇತುವೇ
               ಮೊದಲ ಪ್ರೇಮ ದಾರ ಬರಿದು ಎಲ್ಲಾ ಹುಡುಗ ಹುಡುಗಿಯರೂ ಪ್ರೀತಿಗೇ ಸೋಲದೇ ಇರುವರೇ
               ಸೋಲದೇ ಪ್ರೀತಿಯ ಕೊಡುವರೇ
ಗಂಡು : ಒಂದೇ ಒಂದು ಸಾರಿ ನಿನ್ನ ಕಂಡ ಒಡನೇ ಮರೆತ ನನ್ನ ಮರೆತು ಕೂಡ ಮರೆಯಲಾರೆ ನಾ .. ನಿನ್ನಾ
            ಎಷ್ಟು ಸಾರೀ ನೋಡಿದರೂ ಎಷ್ಟು ಸಾರೀ ಹಾಡಿದರೂ ಸವಿಯದಂಥ ಸವಿಯ ಕೊಡುವೇ ನಾ... ಇನ್ನಾ
            ಇದೇ ಮೊದಲ ಒಲವ ಓಲೆ ಇದೂ ಎದೆಯ ತೊದಲ ಕರೆಯೋಲೆ ಇದು ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನ..
ಹೆಣ್ಣು : ಒಂದೇ ಒಂದು ಸಾರಿ ಹೆಣ್ಣಾ ಕಂಡ ಒಡನೇ ಮರೆಯೋ ನಿನ್ನ ಮಚ್ಚಿ ಮೆಚ್ಚಿಕೊಂಡರೇನು ಚೆನ್ನಾ...

ಗಂಡು : ಓಓಓ .. ಎಷ್ಟೋ ಹುಡುಗಿಯರ ನೋಡಿದೆ ನಾ ನಿನ್ನಲೇನೋ ಹೊಸ ಸೆಳೆತ ಆಗಿನಿಂದ ನನ್ನಲೇನೋ ಕೊರೆತ
ಹೆಣ್ಣು : ಎಷ್ಟೋ ಹುಡುಗರ ಬಲ್ಲೇನು ನಾ ಎಲ್ಲಾ ಹೇಳೋ ಟೊಳ್ಳು ಮಾತಿದೂ ಇಂಥಾ ಸುಳ್ಳೂ ಪಳ್ಳು ಎಲ್ಲೂ ನಡೆಯದೂ
ಗಂಡು : ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೇ ಹೃದಯದ ಒಮ್ಮೇ ನೋಡು ಜಪವೂ ನಿನದೇ
ಹೆಣ್ಣು : ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೇ ಕಂಡಿಲ್ಲ ಕಾಣದ್ದೂ ಗೀಚಿದರೇ ಯಾರೂ ನಂಬೋಲ್ಲ
ಗಂಡು : ಬರೀ ಅಕ್ಷರ ಇಲ್ಲಮ್ಮ ನನ್ನ ಎದುರಿಸಿದೆಯಮ್ಮ ಈ ಉಸಿರ ಸಾಲಿಗೆ ಹಾಡೇ ನೀನಮ್ಮಾ
ಹೆಣ್ಣು : ಹಾಳೆ ಹರಿಬಹುದು ನಾಳೇ ಮರೀಬಹುದು ಈ ಆಗದ ಹೋಗದ ಮಾಗದ ಪಾಗದ
          ಪ್ರೀತಿಯ ಕಾಯುವ ಮೂರ್ಖಳೂ ನಾನಲ್ಲ
ಗಂಡು : ಒಂದೇ ಒಂದು ಸಾರಿ ನಿನ್ನ ಕಂಡ ಒಡನೇ ಮರೆತ ನನ್ನ ಮರೆತು ಕೂಡ ಮರೆಯಲಾರೆ ನಾ .. ನಿನ್ನಾ ಓಓಓ
ಹೆಣ್ಣು : ಓಓಓಓಓ                         ಗಂಡು : ಉಂ ಉಂಉಂಉಂಉಂ

ಹೆಣ್ಣು : ಎಷ್ಟೋ ಕವಿಗಳಿಗೆ ಕಾಲೇಳೆದು ಕಾಲು ತೊಳೆಯೋ ಪ್ರೀತಿ ಅಂತೀರಿ 
          ಆಮೇಲೆ ಕೈತೊಳೆದುಕೊಂಡು  ಹೋಗ್ತೀರಿ 
ಗಂಡು : ನನ್ನ ಪದಗಳಿವೂ ಪದವಲ್ಲ ನನ್ನ ಎದೆ ಕದಗಳಿವು ಒಳಗೆ ನಿಂದೇ ಪ್ರೀತಿ ಅಂತರಂಗವೂ 
ಹೆಣ್ಣು : ಏನೆಂದರೇನೂ ಪ್ರೀತಿ ಕಣ್ಣು ಕುರುಡೂ ಅನ್ನೋದು ಗಾದೆ ಬೇಕಿರಲೇ ಬಿದ್ದರೂನೂ ಬೀಳೋ ಕಾಯಿದೇ 
ಗಂಡು : ಕಣ್ಣಾಗೋ ಪ್ರೀತಿ ನಂಬಿ ನಿನ್ನ ಕಣ್ಣ ಬೋನು ನಾನಮ್ಮಾ ಕುರುಡಾದುರೂನು ನಂದು ಮೇಲೆ ನಡೆಯಮ್ಮಾ 
ಹೆಣ್ಣು : ಅಂದ ಹೋಗೋಳೋರು ಸಂಬಂಧ ಹುಡುಕೋರೂ ಈ ಪ್ರೀತಿ ಅನ್ನೋರೆಲ್ಲ ಹುಚ್ಚರೂ 
ಗಂಡು : ಯಾರೇನೇ ಅಂದರೂ ನಿನ್ನ ನನ್ನ ಕೊಂದರೂ ನಿನ್ ಪ್ರೀತಿ ಒಂದೇ ನನ್ನ ದೇವರೂ ... ಆಆಆ 
ಹೆಣ್ಣು : ತಂದನ್ನಾನನ ತಾನನ್ನಾನ  ... ತಂದನ್ನಾನನ ತಾನನ್ನಾನ  ಮರೆತೂ ಕೂಡಾ ಮರೆಯಲಾರೆ ನಾ ನಿನ್ನ 
ಗಂಡು : ಎಷ್ಟು ಸಾರೀ ನೋಡಿದರೂ ಎಷ್ಟು ಸಾರೀ ಹಾಡಿದರೂ 
ಹೆಣ್ಣು : ಸವಿಯದಂಥ ಸವಿಯ ಕೊಡುವೇ ನಾ... ಇನ್ನಾ 
ಕೋರಸ್ : ತಾನಾನಾ ನನಾ ತಾನಾನಾ ನನ್ನನಾನ್ನನಾನಾ 
--------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಒಂದು ಪ್ರೇಮ ಪಲ್ಲಕಿಯ ಮೇಲೆ
ಸಾಹಿತ್ಯ: & ಸಂಗೀತ: ಕೆ.ಕಲ್ಯಾಣ್ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರಾ, ಕೋರಸ್

ಗಂಡು : ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡೂ ಹೃದಯದ ಪಯಣ 
           ಎರಡು ಹೃದಯದ ಆಮೇಲೆ ಮೂರೂ ಕನಸಿನ ಕವನ 
          ಮೂರೂ ನೂರು ಕವನ ಹಾಡೋ ನಾಕು ಕಣ್ಣಿವೆ 
          ನಾಲ್ಕೂ ಕಣ್ಣು ಐದು ಇಂದ್ರಿಯಾನ ಮರೆಸಿದೆ 
ಗಂಡು : ಐದು ಆರು ಎಂಟು ಹತ್ತು ಪ್ರೀತಿ ಮೇಲೆ ಪ್ರೀತಿ ಗೊತ್ತು ಲೆಕ್ಕ ಇರದ ಪ್ರೀತಿ ನನ್ನದು  
ಹೆಣ್ಣು : ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡೂ ಹೃದಯದ ಪಯಣ 

ಗಂಡು : ಪ್ರೀತಿಗೇ ಬಾಷೇ ಇಲ್ಲ ಹಾಡುತ್ತಾರೇ ಪ್ರೀತಿಗೇ ರೂಪ ಇಲ್ಲ ನೋಡುತ್ತಾರೇ 
ಹೆಣ್ಣು : ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೇ 
ಗಂಡು : ಪ್ರೀತಿಗೆ ಯಾವ ಹೆಸರಿಲ್ಲ ಹೋ .. ಪ್ರೀತಿನೇ ಹೆಸರೆನ್ನುತ್ತಾರೆ ಹೋ .. ಸರಿಯಾ... 
ಹೆಣ್ಣು : ಸರಿ ಸರಿ ಸರಿ ಸರಿ ಸರಿ                   ಗಂಡು : ಸರಿಯ ಸರಿಯ  ಸರಿಯ 
ಹೆಣ್ಣು : ಪ್ರೀತಿಗೆ ಅರ್ಥ ಇಲ್ಲ ಹೋ .. ಪಂಡಿತರಾಗುತ್ತಾರೇ .. ಒಹೋ.. ಓಓಓಓ 
ಗಂಡು : ವಾರೆಂಟ್ ಇಲ್ಲದ ಪ್ರೀತಿ ನಮ್ಮದೂ .. 
ಹೆಣ್ಣು : ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡೂ ಹೃದಯದ ಪಯಣ 
ಗಂಡು : ಓಹೋಹೋ ಓಹೋಹೋ 

ಹೆಣ್ಣು : ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡು ಓ ... ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೇ 
          ಪ್ರೀತಿಗೇ ಕೊಳೆಯು ಇಲ್ಲ ತೊಳೆಯುತ್ತಾರೇ 
ಗಂಡು : ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತ್ತಾರೇ ಪ್ರೀತಿಗೆ ಆತುರವಿಲ್ಲ ಹಿಡಿದೇಳಿತಾರೆ 
ಹೆಣ್ಣು : ಪ್ರೀತಿಗೇ ಯಾವ ಜೋಡಿ ಇಲ್ಲ.. ಓ... ಪ್ರೀತಿ ಜೋಡಿ ಎಳ್ಳಿ ಬೀಡುತ್ತಾರೆ ಹೋ .. ಸರಿಯಾ .. 
ಗಂಡು : ಸರಿ ಸರಿ ಸರಿ ಸರಿ ಸರಿ                   ಹೆಣ್ಣು  : ಸರಿಯ ಸರಿಯ  ಸರಿಯ 
ಗಂಡು : ಪ್ರೀತಿಗೆ ಯಾವ ದೈವ ಇಲ್ಲ ಹೋ .. ಪ್ರೀತಿಸಿ ದೈವ ಅನ್ನುತ್ತಾರೇ ಹೋ .. 
           ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದೂ ... 
           ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡೂ ಹೃದಯದ ಪಯಣ 
           ಎರಡು ಹೃದಯದ ಆಮೇಲೆ ಮೂರೂ ಕನಸಿನ ಕವನ 
          ಮೂರೂ ನೂರು ಕವನ ಹಾಡೋ ನಾಕು ಕಣ್ಣಿವೆ 
          ನಾಲ್ಕೂ ಕಣ್ಣು ಐದು ಇಂದ್ರಿಯಾನ ಮರೆಸಿದೆ 
ಗಂಡು : ಐದು ಆರು ಎಂಟು ಹತ್ತು ಪ್ರೀತಿ ಮೇಲೆ ಪ್ರೀತಿ ಗೊತ್ತು ಲೆಕ್ಕ ಇರದ ಪ್ರೀತಿ ನನ್ನದು  
ಹೆಣ್ಣು : ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡೂ ಹೃದಯದ ಪಯಣ 
--------------------------------------------------------------------------------------------------------------------------

ಚಂದ್ರಮುಖಿ ಪ್ರಾಣಸಖಿ (1999) - ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ 
ಸಾಹಿತ್ಯ: & ಸಂಗೀತ: ಕೆ.ಕಲ್ಯಾಣ್ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಭುಟ್ಟೋ 

ಗಂಡು : ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ ಏಳ್ ಬಣ್ಣದ ಬಿಲ್ಲೂ ತರ್ತಿನ ಬಾ
            ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ ಏಳ್ ಮಿಂಚಿನ ಬಾಣ ಬಿಡ್ತಿನ್ ಬಾ
ಹೆಣ್ಣು : ಏ ಬಣ್ಣದ ಬಿಲ್ಲು ನಂಗ್ಯಾಕೇ ಹೇಳೂ ಹೋ ... ಹದಿನೇಳು ಬಣ್ಣ ಮೈಮೇಲಿದೆ.. ಹೇ..
          ಏಳು ಮಿಂಚಿನ ಬಾಣ ಇನ್ಯಾಕೇ ಹೇಳು... ಓ... ಹದಿನೇಳು ಮಿಂಚಿನ ಕಣ್ಣಿವೆ
ಗಂಡು : ಏಳು ಹದಿನೇಳು ಇನ್ಯಾಕೆ ನಂಗ್ ಹೇಳು ಏಳು ಸ್ವರದಲ್ಲೇ ಹಾಡೋಣ ಎದ್ದೇಳು
ಹೆಣ್ಣು : ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ ಏಳ್ ಪದಗೋ ಹೇಳ್ ಕೊಡ್ತಿನ್ ಬಾ

ಹೆಣ್ಣು : ಏಳು ಬೆಟ್ಟಾವ ಹತ್ತಿ ಏಳು ಸಮುದ್ರ ಸುತ್ತಿ ಏನ್ ತಂದೆ ಹೇಳು ನನಗೆ 
ಗಂಡು : ಏಳು ತರ ತರದ ಹೂವು ಏಳು ಫಳ್ ಫಳ್ನ್ ಮುತ್ತು ಕದ್ಕೊಂಡು ಬಂದೆ ಮೆಲ್ಲಗೇ 
ಹೆಣ್ಣು : ಏಳು ತರದ ಸ್ವರ ಪ್ರೇಮಲ್ಲಿದೇ ಪ್ರೇಮಕ್ಕೇ ಸ್ವರವೆಲ್ಲಿದೇ 
ಗಂಡು : ಏಳು ತರದ ಜ್ವರ ಕಾಮದಲ್ಲಿದೇ ಕಾಮಕ್ಕೆ ಜ್ವರವೆಲ್ಲಿದೇ 
ಇಬ್ಬರು : ಎಳ್ ಏಳ್ ಲೋಕ್ ನಮ್ಮದೇ 
ಹೆಣ್ಣು : ಏಳ್ ದಿವಸಕ್ಕೆ ಒಂದೇ ವಾರ ಅಂತ ಗೊತ್ತು ಓಓಓಓ .. ಯಾವತ್ತೂ ರಾಜ ನಿಮಗೆ 
ಗಂಡು : ಏಳು ವಾರನೂ ಏಳೇಳ್ ಮುತ್ತಿಟ್ಟು ಕೂರುದಿದ್ರೆ ರಾಜ ರಾಣಿ ನಾವೇ ನಮಗೇ 
ಹೆಣ್ಣು : ಏಳು ಋಷಿಯ ಮಂಡಲದೊಳಗೂ ಏಳು ಋಷಿಯ ಕಥೆಯು ನಿನಗೇ 
ಗಂಡು : ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ ಏಳ್ ಪದಗೋ ಹೇಳ್ ಕೊಡ್ತಿನ್ ಬಾ

ಗಂಡು : ಏಳು ಹೆಜ್ಜೆಗೆ ಮದುವೇ ಏಳು ಜನ್ಮಕ್ಕೇ ಪ್ರೀತಿ ಅಂಗ್ಯಾಕೆ ಹೇಳು ನಮಗೇ
ಹೆಣ್ಣು : ಏಳು ಅದ್ಬುತದಂತೆ ಏಳು ವಸಂತದಂತೇ ಎಲ್ಲಾ ಏಳು ನಮಗೆ ಏಳ್ಗೆ
ಗಂಡು : ಏಳು ಯುಗದ ಹಿಂದ್ ನಿನ್ನ ಕಂಡಿದ್ದೇ ಈಗ್ಲೂ ಹಂಗೆ ಇರೋದ ಹೆಂಗೆ
ಹೆಣ್ಣು : ಏಳು ಋತುವ ಒಳಗೆ ಭೂಮಿ ಇದ್ದಂಗೇ ನಿನ್ನ ಪ್ರೀತಿ ನನ್ನ ಒಳಗೆ
ಇಬ್ಬರು : ಏಳ್ ಏಳ್ ಲೋಕ ನಮ್ಮದೇ
ಗಂಡು : ಏಳು ಕ್ಷಣಕ್ಕೆ ಒಂದು ಯುಗಳ ಗೀತೆನಾ ಹೋ ... ಹಾಡುವ ಕೆಲಸ ನಮಗೆ
ಹೆಣ್ಣು : ಏಳು ಹಾಡಲ್ಲಿ ಕೊನೆ ಪಕ್ಷಕ್ಕೇ ಏಳಾದ್ರು ಪ್ರೇಮಿಗಳ ಗೆಲ್ಲೋದ ಕೊನೆಗೇ
ಗಂಡು : ಏಳು ಏಳು ಕೋಟಿ ಊರ್ ಜನರೇ ಇದ್ದರೂ ಏಳು ಹದಿನೇಳೂ ಕೋಟಿ ಮುತ್ತು ನಿನಗೇ
ಹೆಣ್ಣು : ಏಳ್ ಏಳ್ ಮಲ್ಲಿಗೇ ಏಳ್ ಸುತ್ತಿನ ಮೆಲ್ಲಗೇ ಏಳ್ ಪದಗೋ ಹೇಳ್ ಕೊಡ್ತಿನ್ ಬಾ
ಗಂಡು : ಏಳು ಹದಿನೇಳು ಇನ್ಯಾಕೆ ನಂಗ್ ಹೇಳು ಏಳು ಸ್ವರದಲ್ಲೇ ಹಾಡೋಣ ಎದ್ದೇಳು
--------------------------------------------------------------------------------------------------------------------------

No comments:

Post a Comment