- ಬೆಳ್ಳಿ ಮೋಡವೇ ಎಲ್ಲಿ ಓಡುವೇ
- ದೇವನು ತಂದ ಈ ಅನುಬಂಧ
- ನಡೆಯಲು ನಡುವೂ ಆಡಿರಲೂ
- ಹೆಣ್ಣುಗಳೆಂದು ಅಬಲೆಯರಲ್ಲಾ
- ಕಣ್ಣು ಕಣ್ಣು ಬಿಟ್ಟು ಕೊಂದು ನೋಡಬೇಡಾ
ವಸಂತ ಲಕ್ಷ್ಮಿ (1978) - ಬೆಳ್ಳಿ ಮೋಡವೇ.. ಎಲ್ಲಿ ಓಡುವೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ , ವಾಣಿ ಜಯರಾಂ
ಹೆಣ್ಣು : ಬೆಳ್ಳಿ ಮೋಡವೆ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ
ನನ್ನ ನಲ್ಲೆಯ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ
ಹೆಣ್ಣು : ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ಗಂಡು : ಮೋಹದ ಮೋಡಿಗೆ ಸಿಲುಕಿರುವೆ ತೀರದ ದಾಹದಿ ಬಳಲಿರುವೆ
ಹೆಣ್ಣು : ಒ ಇನಿಯಾ ಬಾ ಸನಿಹ ಎಂದೆನ್ನ ಮನ ನೊಂದು ತೂಗಾಡಿದೆ
ಗಂಡು : ಬೆಳ್ಳಿ ಮೋಡವೆ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ
ಹೆಣ್ಣು : ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ
ಗಂಡು : ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಲೆಯುತಲಿರಲು
ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಲೆಯುತಲಿರಲು
ಹೆಣ್ಣು : ಜೀವನ ನೀರಸ ಎನಿಸಿರಲು ಬೇಸರ ತುಂಬುತ ದಣಿದಿರಲು
ಗಂಡು : ನೀ ಬರಲು ಈ ಇರುಳು ಆನಂದ ನಮಗೆಂದೂ ಮನ ಹೇಳಿದೆ
ಹೆಣ್ಣು : ಬೆಳ್ಳಿ ಮೋಡವೆ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ
ಗಂಡು : ನನ್ನ ನಲ್ಲೆಯ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ
ಹೆಣ್ಣು : ನಾ ಒಂಟಿ ನಿಂತಾಗ ಹೂಗಳು ಉದರಿ
ನೋವಿಂದ ಬೆಂಡಾಗಿ ಹರಡಿದೆ ಚದರಿ
ಗಂಡು : ಬಾನಿನ ಚಂದಿರ ಅಣುಕಿರುವಾ ಮಂಜಿನ ಹಾಗೆಯೇ ಕರಗಿರುವಾ
ಹೆಣ್ಣು : ಬಾ ಬಳಿಗೆ ಈ ಸೆರೆಗೆ ಹೊಸ ಬಾಳು ನಮಗಾಗಿ ಕೈ ಚಾಚಿದೆ...
ಗಂಡು : ಬೆಳ್ಳಿ ಮೋಡವೆ ಎಲ್ಲಿ ಓಡುವೆ
ಹೆಣ್ಣು : ನನ್ನ ಬಳಿಗೆ ನಲಿದು ಬಾ
ಹೆಣ್ಣು : ನನ್ನ ಬಳಿಗೆ ನಲಿದು ಬಾ
ಗಂಡು : ನನ್ನ ನಲ್ಲೆಯ ಕಂಡು ಈ ಕ್ಷಣ
ಇಬ್ಬರು : ನನ್ನ ಒಲವ ತಿಳಿಸಿ ಬಾ
ಇಬ್ಬರು : ನನ್ನ ಒಲವ ತಿಳಿಸಿ ಬಾ
ವಸಂತಲಕ್ಷ್ಮಿ (1978) - ದೇವನು ತಂದ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ ಸುಶೀಲ
ಜೋ ಜೋ ಜೋ ಜೋ ಜೋ
ದೇವನು ತಂದ ಈ ಅನುಬಂಧ ತಂದಿದೆ ಮನಕೆ ಮಹದಾನಂದ
ದೇವನು ತಂದ ಈ ಅನುಬಂಧ ತಂದಿದೆ ಮನಕೆ ಮಹದಾನಂದ
ಎಲ್ಲಿಯ ನೀನು ಎಲ್ಲಿಯ ನಾನು ಕಾಣಲು ನಿನ್ನ ಕಾತುರವೇನು
ಹೃದಯದ ತುಂಬ ಹರುಷದ ಜೇನು
ಹೃದಯದ ತುಂಬ ಹರುಷದ ಜೇನು ಆಸೆಯ ಕಡಲ ಹೊನ್ನಿನ ಮೀನು
ದೇವನು ತಂದ ಈ ಅನುಬಂಧ ತಂದಿದೆ ಮನಕೆ ಮಹದಾನಂದ
ಹುಣ್ಣಿಮೆ ಬೆಳಕ ಸೆರೆಯಲಿ ಹಿಡಿದು ಗೊಂಬೆಯ ಹಾಗೆ ಎರಕವ ಹೊಯ್ದು
ಜೀವವ ತುಂಬಿ ಕಾಣಿಕೆ ತಂದು
ಜೀವವ ತುಂಬಿ ಕಾಣಿಕೆ ತಂದು ನೀಡಿದನೇನು ದೇವನು ಇಂದು
ದೇವನು ತಂದ ಈ ಅನುಬಂಧ ತಂದಿದೆ ಮನಕೆ ಮಹದಾನಂದ
ಮನೆಯನು ತುಂಬಿ ಹೊಂಬೆಳಕಾದೆ
ಮನೆಯನು ತುಂಬಿ ಹೊಂಬೆಳಕಾದೆ ನಿನ್ನನ್ನು ಕಂಡು ಪರವಶಳಾದೆ
ದೇವನು ತಂದ ಈ ಅನುಬಂಧ ತಂದಿದೆ ಮನಕೆ ಮಹದಾನಂದ
ಲಾಲಲಾ ಲಾಲಲಾ ಲಾಲಲಾ ಲಾಲಲಾ
--------------------------------------------------------------------------------------------------------------------------ಲಾಲಲಾ ಲಾಲಲಾ ಲಾಲಲಾ ಲಾಲಲಾ
ವಸಂತಲಕ್ಷ್ಮಿ (1978) - ನಡೆಯಲು ನಡುವೂ
ಸಂಗೀತ:ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ:ಎಸ್.ಪಿ.ಬಿ., ಕೆ.ಜೆ.ಏಸುದಾಸ್, ಎಸ್.ಜಾನಕೀ, ವಾಣಿಜಯರಾಂ
ಕೆ.ಜೆ.ಏ : ನಡೆಯಲು ನಡುವೂ ಆಡಿರಲೂ ಕೈ ಬಳೆ ಘಲ್ ಘಲ್ ಎನುತಿರಲು
ಬಿಂಕದ ಹೆಣ್ಣೇ ನಿನ್ನ ಕಣ್ಣೆ ನನ್ನ ಕೊಲ್ಲಲೂ ಓಡೋಡಿ ನಾ ಬಂದೆನೂ... ಸೇರಲೂ
ಎಸ್ಪಿ : ನಡೆಯಲು ನಡುವೂ ಆಡಿರಲೂ ಕೈ ಬಳೆ ಘಲ್ ಘಲ್ ಎನುತಿರಲು
ಬಿಂಕದ ಹೆಣ್ಣೇ ನಿನ್ನ ಕಣ್ಣೆ ನನ್ನ ಕೊಲ್ಲಲೂ ಓಡೋಡಿ ನಾ ಬಂದೆನೂ... ಸೇರಲೂ
ಹೆಣ್ಣು : ಜಾಣನೇ ನಾ ಸೋಲೇ ನಿನ್ನಾಟಕೇ ಎದೆಯನು ಸೀಳುವ ಕಣ್ಣೋಟಕೇ
ನಲ್ಲನೇ ಹೇಳೀಗ ನಿನ್ನಾಸೆಗೇ ಏನನೂ ನೀಡುವೇ ನೀ ಕಾಣಿಕೇ
ಕೆ.ಜೆ.ಏ : ಪ್ರೀತಿಯ ಒಡವೇ (ಆಹಾ..) ಈಗಲೇ ಕೊಡುವೇ (ಆಹಾ..)
ಪ್ರೀತಿಯ ಒಡವೇ (ಆಹಾ..) ಈಗಲೇ ಕೊಡುವೇ (ಆಹಾ..)
ನೀ ಹೇಳದ ಮನದಾಸೆಯ ಪೊರೈಸುವೇ
ಎಸ್ಪಿ : ನಡೆಯಲು ನಡುವೂ ಆಡಿರಲೂ ಕೈ ಬಳೆ ಘಲ್ ಘಲ್ ಎನುತಿರಲು
ಬಿಂಕದ ಹೆಣ್ಣೇ ನಿನ್ನ ಕಣ್ಣೆ ನನ್ನ ಕೊಲ್ಲಲೂ (ಅಹಹಹ್ಹ್ )
ಓಡೋಡಿ ನಾ ಬಂದೆನೂ... ಸೇರಲೂ
ಎಸ್ಪಿ : ತಣ್ಣನೇ ಗಾಳಿಯು ಮೈ ಸೋಕದೂ ಹೌದು ಚಳಿಯನು ಚೆಲ್ಲಲೂ ಜುಮ್ಮೆನ್ನದೇ
ಕೆ.ಜೆ.ಏ : ಆಸರೆಯ ಆಸೆಯು ನಿನಗಾಗದೇ ನನ್ನನ್ನು ಸೇರಲೂ ಮನಸಾಗದೇ
ಹೆಣ್ಣು : ಆತುರವೇಕೇ... (ಲಲಲ ) ಕಾತರವೇಕೇ
ಆತುರವೇಕೇ... (ಲಲಲ ) ಕಾತರವೇಕೇ
ಮಾತಲ್ಲಿಯೇ ಮರುಳಾಗಿಸೋ ಛಲವೇತಕೆ
ನಡೆಯಲು ನಡುವೂ ಆಡಿರಲೂ ಕೈ ಬಳೆ ಘಲ್ ಘಲ್ ಎನುತಿರಲು
ಕೆ.ಜೆ.ಏ : ಬಿಂಕದ ಹೆಣ್ಣೇ ನಿನ್ನ ಕಣ್ಣೆ ನನ್ನ ಕೊಲ್ಲಲೂ
ಎಸ್ಪಿ : ಓಡೋಡಿ ನಾ ಬಂದೆನೂ... ಸೇರಲೂ
ಹೆಣ್ಣು : ಸರಸದ ನೆಪದಲ್ಲಿ ಕೈ ಚಾಚಿದೇ ಸಲಿಗೆಯ ತೋರಲೂ ಮೈ ಸೋಕಿದೆ
ಒಡಲಲಿ ಮಿಂಚನು ನೀ ತುಂಬಿದೆ ಬಯಕೆಯು ಕೆರಳಲು ನೋವಾಗಿದೇ
ಎಸ್ಪಿ : ಇನ್ನೇಕೇ ದೂರ (ಅಹ್ಹಹ್ಹಾ ) ಹತ್ತಿರ ಬಾರೇ (ಅಹ್ಹಹ್ಹಾ )
ಇನ್ನೇಕೇ ದೂರ ಹತ್ತಿರ ಬಾರೇ ನೀ ಕಾಣದಾ ಸುಖ ಕಾಣುವೇ ಹಾಯ್ ಎನ್ನವೇ
ಎಲ್ಲರೂ : ನಡೆಯಲು ನಡುವೂ ಆಡಿರಲೂ (ಅಹ್ಹ ) ಕೈ ಬಳೆ ಘಲ್ ಘಲ್ ಎನುತಿರಲು (ಹ್ಹಾ )
ಬಿಂಕದ ಹೆಣ್ಣೇ ನಿನ್ನ ಕಣ್ಣೆ ನನ್ನ ಕೊಲ್ಲಲೂ (ಅಹಹೋ )
ಓಡೋಡಿ ನಾ ಬಂದೆನೂ...( ಲಲಲಲಲಲ) ಸೇರಲೂ
--------------------------------------------------------------------------------------------------------------------------
ವಸಂತಲಕ್ಷ್ಮಿ (1978) - ಹೆಣ್ಣುಗಳೆಲ್ಲಾ ಅಬಲೆಯರಲ್ಲಾ
ಸಂಗೀತ:ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ:ಎಸ್.ಜಾನಕೀ, ವಾಣಿಜಯರಾಂ
ಲಲ್ಲ ಲಲ್ಲಾಲ್ಲ ಲಲ್ಲಾ ಲಲ್ಲ ಲಲ್ಲಾ ಅಹ್ಹ ಓಹೋಹೋ ಹೇಹೇ ಓಹೋಹೋ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಸಂಗೀತ:ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ:ಎಸ್.ಜಾನಕೀ, ವಾಣಿಜಯರಾಂ
ಲಲ್ಲ ಲಲ್ಲಾಲ್ಲ ಲಲ್ಲಾ ಲಲ್ಲ ಲಲ್ಲಾ ಅಹ್ಹ ಓಹೋಹೋ ಹೇಹೇ ಓಹೋಹೋ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಗಂಡಿನಂತೇ ಹೆಣ್ಣಿಗೂ ಕೂಡಾ ಸ್ವಾಭಿಮಾನವೂ ಉಂಟೂ
ಸಮಯದಲ್ಲಿ ಸಾಹಸ ಶೌರ್ಯ ತೋರುವಾಸೆಯೂ ಉಂಟೂ
ಸುಮದ ಹಾಗೇ ಆ... ಲತೆಯ ಹಾಗೇ ಆ.. ಎನ್ನುವರೆಲ್ಲಾ ಆ...
ಕವಿಯ ಹಾಗೇ ಆ.. ಯಾರೋ ನಂಬೋರೂ ಇದನೂ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ವೈರಿ ಯಾರೋ ಗೆಳೆಯನು ಯಾರೋ ಒಂದೂ ತಿಳಿಯುವುದಿಲ್ಲಾ
ಆ.. ಮೋಸ ಮಾಡೋ ಜನಗಳು ಯಾರೋ ಯಾರು ಹೇಳುವರಿಲ್ಲಾ
ಸಹನೆ ಎಂದೂ ಆ.. ಗೆಳೆಯನಂತೇ ಹೇ ..
ಜಾಣ್ಮೆಯೆಂದೇ ಹೇ.. ದೈವವಂತೇ ಎಂದು ಅರಿತಾಗ ಗೆಲುವೇ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಎಲ್ಲರಲ್ಲಿ ಸಲಿಗೆಯ ರೀತಿ ನೀಡದೆಂದಿಗೂ ಸುಖವ
ಎಲ್ಲರಲ್ಲಿ ತೋರುವ ಪ್ರೀತಿ ಕೊಡದು ಹರುಷದ ನಗುವ
ಜನರ ರೀತಿ ತಿಳಿದ ಮೇಲೆ ಮನವ ಆಳ ಅರಿತ ಮೇಲೆ
ಮಾತನಾಡೋನೇ ಜಾಣ
ಹೆಣ್ಣುಗಳೆಂದು ಅಬಲೆಯರಲ್ಲಾ ಧೈರ್ಯ ತುಂಬಿರಲೂ
ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಲಾಲಾ ಲಾಲ ಲಾಲಾ ಲಾಲಲಾಲಾ ಲಾಲಲಾಲಾ ಲಾಲ
--------------------------------------------------------------------------------------------------------------------------ಹ್ಹಾಂ.. ಬಾಳಲಿ ಎಂದೂ ಸೋಲೇ ಇಲ್ಲಾ ಛಲವ ತೋರಲೂ
ಲಾಲಾ ಲಾಲ ಲಾಲಾ ಲಾಲಲಾಲಾ ಲಾಲಲಾಲಾ ಲಾಲ
ವಸಂತಲಕ್ಷ್ಮಿ (1978) - ಕಣ್ಣು ಕಣ್ಣು ಬಿಟ್ಟು
ಸಂಗೀತ:ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಜಾನಕೀ,
ಹೇ.. ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡಾ
ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ .. ಅಹ್ಹಹ್ಹಹ್ಹ..
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡ
ಯೌವ್ವನ ಕೊಳದಲಿ ಈಜಾಡು ಪ್ರೇಮದ ಬನದಲಿ ಹಾರಾಡು
ಯೌವ್ವನ ಕೊಳದಲಿ ಈಜಾಡು ಪ್ರೇಮದ ಬನದಲಿ ಹಾರಾಡು
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡ
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಹ್ಹಹ್ಹ ಹಾಲು ಜೇನೂ ಕಲಸಿ ನೋಡ
ಸಂಗೀತ:ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಜಾನಕೀ,
ಹೇ.. ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡಾ
ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ .. ಅಹ್ಹಹ್ಹಹ್ಹ..
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡ
ಯೌವ್ವನ ಕೊಳದಲಿ ಈಜಾಡು ಪ್ರೇಮದ ಬನದಲಿ ಹಾರಾಡು
ಚಳಿ ಚಳಿಯಾದರೇ ಬಿಸಿ ಬೇಕೇ.. ಕಳವಳ ನೀಗುವ ಖುಷಿ ಬೇಕೇ
ಬಳಿ ಬರಲು ಏಕೇ ಅನುಮಾನ ಕೊಡುವೆನು ಹೊಸತರ ಬಹುಮಾನ
ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ ..ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಾಲು ಜೇನೂ ಕಲಸಿ ನೋಡ
ಪ್ರಣಯದ ಕಾವ್ಯವು ನಾನಂತೇ ಪುಟ ಪುಟ ರಸಿಕತೆ ಜೇನಂತೇ
ಪ್ರಣಯದ ಕಾವ್ಯವು ನಾನಂತೇ ಪುಟ ಪುಟ ರಸಿಕತೆ ಜೇನಂತೇ
ಹಸಿ ಹಸಿ ಹರೆಯದ ಪ್ರತಿಬಿಂಬ ಕಸಿವಿಸಿ ತಂದಿದೇ ಎದೆತುಂಬಾ
ಅನುಭವ ಪಡೆಯುವ ಅವಕಾಶ ತರುವುದು ತಡೆಯದ ಸಂತೋಷ
ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ ..ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ ಹಹ್ಹಹ್ಹ ಹಾಲು ಜೇನೂ ಕಲಸಿ ನೋಡ
ಮೈಕೆಡಕಿ ವ್ಯಾಧಿಯೂ ಬಂತೇನೂ ಹೆಣ್ಣಿಗಿವಳೆ ಔಷಧವೂ ಗೊತ್ತೇನೂ
ತುಟಿ ತುಟಿ ಸೇರಿಸಿ ರಸದೂಟ ಮೈ ಮೈ ಸೋಕಿಸಿ ಹೊಸ ಆಟ
ಕಲಿಸುವೆ ನಿನಗೇ ಹೊಸ ಪಾಠ ಅಹ್ಹಹ್ಹ ಮರೆಯದ ಮೋಜಿನ ತುಂಟಾಟ
ಕಣ್ಣು ಕಣ್ಣು ಬಿಟ್ಟುಕೊಂಡು ನೋಡಬೇಡ ಹೇ.. ಹೆಣ್ಣ ನೋಡಿ ಕಕ್ಕಾಬಿಕ್ಕಿ ಆಗಬೇಡ .. ಹೇ
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ
ಹಣ್ಣ ರುಚಿ ನೋಡಲಿಕ್ಕೇ ಅಂಜಬೇಡ
ಹಾಲು ಜೇನೂ ಕಲಸಿ ನೋಡ
--------------------------------------------------------------------------------------------------------------------------
ವಸಂತ ಲಕ್ಷ್ಮಿ (1978) - ಬೆಳ್ಳಿ ಮೋಡವೇ.. ಎಲ್ಲಿ ಓಡುವೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ
ಹೆಣ್ಣು : ಬೆಳ್ಳಿ ಮೋಡವೆ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ
ಹೆಣ್ಣು : ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ಮೋಹದ ಮೋಡಿಗೆ ಸಿಲುಕಿರುವೆ ತೀರದ ದಾಹದಿ ಬಳಲಿರುವೆ
ಒ ಇನಿಯಾ ಬಾ ಸನಿಹ ಎಂದೆನ್ನ ಮನ ನೊಂದು ತೂಗಾಡಿದೆ
-------------------------------------------------------------------------------------------------------------------------
No comments:
Post a Comment