739. ನಿನ್ನಿಂದಲೇ (೨೦೧೪)

ನಿನ್ನಿಂದಲೇ ಚಲನಚಿತ್ರದ ಹಾಡುಗಳು 
  1. ನೀನು ಇರುವಾಗ ಬೇರೇನೂ ಬೇಕಿಲ್ಲಾ
  2. ಡೋಂಟ್ ಕೇರ್ 
  3. ಹಾರು ಹಾರು 
  4. ನಿಂತೇ ನಿಂತೇ 
  5. ಬೋಲೋ ಭಾಮಾ ಭಾಮಾ 
  6. ಮೌನ ತಾಳಿತೇ 
ನಿನ್ನಿಂದಲೇ (೨೦೧೪) - ನೀನು ಇರುವಾಗ ಬೇರೇನೂ ಬೇಕಿಲ್ಲಾ
ಸಂಗೀತ : ಮಣಿ ಶರ್ಮ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಕಾರ್ತೀಕ, ಅನುರಾಧ ಭಟ್

ನೀನು ಇರುವಾಗ ಬೇರೇನೂ ಬೇಕಿಲ್ಲಾ ನೀನು ನಗುವಾಗ ನನ್ನಲ್ಲಿ ನಾನಿಲ್ಲಾ
ನೋಡುವಾಗ ನೀನಾಗಿ... ಕಳೆದು ಹೋದೆ ನಾನಾಗಿ..
ಪ್ರೀತಿ ಬಂತು ತಾನಾಗಿ ನಿನ್ನಿಂದಲೇ ಸೋತೇ ಒಪ್ಪಿಕೊ
ನೀನೇ ನನ್ನ ಪ್ರಾಣ ಅಪ್ಪಿಕೋ  ನಿನ್ನಿಂದಲೇ ಸೋತೇ ಒಪ್ಪಿಕೊ

ನಿನ್ನ ಮಾತಿಗೆ ಕಾದಿರುವೆ ದಿನವೆಲ್ಲ ಒಂದು ಗೆರೆ ಹಾಕು ಕನಸಲ್ಲೂ ದಾಟೋಲ್ಲ
ಎಲ್ಲಕಿಂತ ಮೇಲಾಗಿ ನಿನ್ನಲ್ಲಿರುವೆ ಹಾಯಾಗಿ 
ಬಾಳಲಾರೆ ಬೇರಾಗಿ  ನಿನ್ನಿದಂಲೇ ಕಲೆತೆ ಪ್ರೀತಿಯ
ನೀನೇ ನನ್ನ ಎಲ್ಲ ಆಶಯ ನಿನ್ನಿದಂಲೇ ಕಲೆತೆ ಪ್ರೀತಿಯ
ನೀ ಬರೋ ದಾರಿಯ ಕಾಯತ ಕುಳಿತರೇ ಹಗಲಿಗೂ ರಾತ್ರಿಗೂ ಯಾಕೋ ಸಂಶಯ
ನಿನ್ನ ಈ ಹೆಸರೇನು ಮೆಲ್ಲಗೆ ಕರೆದರೆ ಗಾಳಿಗೂ ನಾಚಿಕೆ ಏನು ವಿಸ್ಮಯ
ನಿನ್ನೊಳಗಿರುವ ನನ್ನ ನಿನ್ನ ಕಣ್ಣಲಿ ಕಂಡೆನು ನಾ.. 
ಕಣ್ಣ ಮುಚ್ಚಿದರೂನು ನೀನೇ.. ಎ..  ಎ..  ಎ..  ಎ..  
ನಿನ್ನಿಂದಲೇ ಎಲ್ಲ ಕಲ್ಪನೆ...  ಎಲ್ಲಿದ್ದರೂ  ಬಿಡದ ಯೋಚನೆ.. 
ನಿನ್ನಿಂದಲೇ ಎಲ್ಲ ಕಲ್ಪನೆ... 

ನಾಳೆಯ ಚಿಂತೆಯು ಪ್ರೀತಿಗೆ ಬಾರದು ನಿನ್ನನು ಮರೆತರೆ ಭೂಮಿ ತಿರಗದು...
ನಿನ್ನ ಈ ಮಾತನೆ ನನಗೆ ನಾ ಜ್ಞಾಪಿಸಿ ಹೃದಯವ ಕೋಟೆ ನಾ ಚಂದಗಾಣಿಸಿ 
ನಿನ್ನನ್ನು ಬಿಟ್ಟಿರಲಾರೆ ಯಾರೇನೇ ಹೇಳಿದರು ಪ್ರಾಣಾ ಹೋದರು ನಾವು ಒಂದೇ.ಏಏಏ.ನೇ
ನಿನ್ನಿಂದಲೇ ನನ್ನ ನಾಳೆಯು... ನೀನೇ ಬರೆದ ಹಳೆಯ ಹಾಳೆಯೂ..
ನಿನ್ನಿಂದಲೇ ನನ್ನ ನಾಳೆಯು... 
--------------------------------------------------------------------------------------------------------------

ನಿನ್ನಿಂದಲೇ (೨೦೧೪) - ಡೋಂಟ್ ಕೇರ್
ಸಂಗೀತ : ಮಣಿ ಶರ್ಮ ಸಾಹಿತ್ಯ: ಕವಿರಾಜ ಗಾಯನ : ವಿಶಾಲ ದಾದ್ಲ್ಯಾನಿ

ಡೂ ಡೂ ಡೂ ಡೂ ಔರ್ ಡೈ... ಎಲ್ಲಾಕ್ಕೂ ನಾವೂ ಸೈ ಯಾರ ಮಾತು ನಾವು ಕೇಳಲ್ಲಾ 
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೇ  ಫ್ರೀ ಆಗಿ ಅಡ್ವೈಸ್ ಬೇಕಿಲ್ಲಾ.. 
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ ನನಗಂತೂ ಗೊತ್ತೇ ಇಲ್ಲಾ 
ಡೋಂಟ್ ಕೇರ್ ಗೊಣಗೋರಿಗೆಲ್ಲಾ.. ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ 
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ ಡೋಂಟ್ ಕೇರ್ ಇದು ನಮ್ಮ ಕಾಲ 
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ ಡೋಂಟ್ ಕೇರ್  ನಾವ್ ಅಂಜೋದಿಲ್ಲಾ 
ಡೂ ಡೂ ಡೂ ಡೂ ಔರ್ ಡೈ... ಎಲ್ಲಾಕ್ಕೂ ನಾವೂ ಸೈ ಯಾರ ಮಾತು ನಾವು ಕೇಳಲ್ಲಾ 
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೇ  ಫ್ರೀ ಆಗಿ ಅಡ್ವೈಸ್ ಬೇಕಿಲ್ಲಾ.. 
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ ನನಗಂತೂ ಗೊತ್ತೇ ಇಲ್ಲಾ 

ಕಲಿಗಾಲ ಮುರಿಯುವ ಮನಗಳ ಬೆಸೆಯುವ ಅನುದಿನ ಹುಡುಕುವ ಹೊಸತನ ಗೆಳೆತನ 
ಈ ಸುಂದರ ಭುವಿಯೇ ನಮ್ಮದೂ ನೋಡೋಕೆ ಜನ್ಮ ಸಾಲದು 
ಬೆನ್ನಹತ್ತುವ ಓಡೋ ಈ ಕಾಲವ ನಿಂತೋನೆ ಇಲ್ಲಿ ಸೋಲೋದು ಗುರಿಮುಟ್ಟ ಬೇಕು ನಾವೂ .. 

ಮುಗಿಲನು ಹಿಡಿಯುವ ಕಡಲನು ಕುಡಿಯುವ ಭರವಸೇ ನಮಗಿದೇ ಜಗವನು ಗೆಲ್ಲುವುದೇ  
ಬಿಟ್ಟುಬಿಡಿ ಹಳೇ ವೇದಾಂತವ ನಾವಂತೂ ಕುಂತೂ ಕೇಳಲ್ಲಾ ಯಾರೊಪ್ಪಿಗೇ ಯಾಕೆ ಬೇಕು ಗುರೂ 
ನಾವೇನೇ ನಮ್ಮ ರಾಜರೂ... ತಡೆಯೋರ್ಗೆ ಮಾರೋ ಗೋಲಿ 
ಡೋಂಟ್ ಕೇರ್ ಗೊಣಗೋರಿಗೆಲ್ಲಾ.. ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ 
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ ಡೋಂಟ್ ಕೇರ್ ಇದು ನಮ್ಮ ಕಾಲ 
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ ಡೋಂಟ್ ಕೇರ್  ನಾವ್ ಅಂಜೋದಿಲ್ಲಾ 
--------------------------------------------------------------------------------------------------------------
ನಿನ್ನಿಂದಲೇ (೨೦೧೪) - ಹಾರು ಹಾರು
ಸಂಗೀತ : ಮಣಿ ಶರ್ಮ ಸಾಹಿತ್ಯ: ಕವಿರಾಜ ಗಾಯನ : ಸ್ವೀಕಾರ, ಚೈತ್ರ ಎಚ್ ಸಿ

ಹಾರು ಹಾರು ಹಾರು ರೆಕ್ಕೆ ಬಿಚ್ಚಿ ಹಾರು.. ಬಿಟ್ಟುಬಿಡು ಇನ್ನು ಬೇಜಾರೂ 
ನೂರು ಕೊಹಿನೂರು ನೀನು ನಕ್ಕರೆ ಚೂರು  ನಕ್ಕುಬಿಡೇ ಈಗ ಒಂಚೂರೂ .. 
ನೀನಕ್ಕರೇ ನಗುವುದು ಜಗವಿದು ಕನ್ನಡಿ ನಡೆಯುತ ಹೋದರೆ ಗುರಿಗಳು ಕಾಲಾಡಿ 
ಏನಾದ್ರೂ ಟೇಕ್ ಇಟ್ ಈಜಿ ಗೆಲ್ಲೋಕೇ ಇಲ್ಲಿ ಬಾಜೀ 
 
ಕಾಲೇಳೆಯೊ ಜನರ ನಡುವೆ ನಿಲ್ಲುವುದೇ ನಿಜ ಗೆಲುವೇ ನೀನೆಂದೂ ಸೋಲದೇ 
ಮೋಡಗಳು ಮುಸುಕಿದೊಡನೇ ಆ ರವಿಯು ಹೆದರಿಬಿಡನೇ ನಿಲ್ಲು ಅಂಜದೇ 
ಯಾರೇ ಏನೇ ಅಂದರೂ ನಿನ್ನ ಹಾಗೇ ನೀನೀರೂ 
ಏನೇ ಅಡ್ಡಿ ಬಂದರೂ ಮುಂದೇ ನುಗ್ಗುತಿರೂ   

ಜೀವನವೇ ನಮಗೆ ಗುರುವೂ ಪಾಠಗಳೇ ಅನುಭವವೂ ಪರೀಕ್ಷೆ ನಿತ್ಯವೂ 
ಕಾಡಿಸುವ ಕನಸೂ ಇರಲಿ ಸಾಧಿಸುವ ಛಲವೂ ಇರಲೀ ಎಂದೆಂದೂ ಬಾಳಲ್ಲಿ.. 
ಭೂಮಿ ಮೇಲೆ ಯಾರಿಗೂ ನೋವುಗಳು ತಪ್ಪದೂ ನಿನ್ನ ಜೊತೆ ಎಂದಿಗೂ ನಿಲ್ಲೋ ಸ್ನೇಹ ನಮ್ಮದೂ 
ಏನಾದ್ರೂ ಟೇಕ್ ಇಟ್ ಈಜಿ ಗೆಲ್ಲೋಕೇ ಇಲ್ಲಿ ಬಾಜೀ... ಏನಾದ್ರೂ ಟೇಕ್ ಇಟ್ ಈಜಿ.. ಓಹೋ ...  
--------------------------------------------------------------------------------------------------------------

ನಿನ್ನಿಂದಲೇ (೨೦೧೪) - ನಿಂತೇ ನಿಂತೇ
ಸಂಗೀತ : ಮಣಿ ಶರ್ಮ ಸಾಹಿತ್ಯ: ಕವಿರಾಜ ಗಾಯನ : ವಿಜಯಪ್ರಕಾಶ, ಚಿನ್ಮಯಿ, ಸುಧಾಮಯೀ

ನಿಂತೆ, ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ ಕೂಗಿ ಹೇಳೋದಾ?
(ಸೇ ಯೂ ಲವ್ ಮೀ ಏಂಡ್ ಟೇಕ್ ಮೈ ಬ್ರೇಥ್ ಅವೇ )
ಕೂಗಿ ಹೇಳೋದಾ ನಾನೇ ಲೋಕಕೆ? ನೀನೇ ಸಂಗಾತಿ ನನ್ನ ಜೀವಕೆ
ನೋಡೋ ಕಡೆ ಎಲ್ಲ ಬರೀ ನೀನೇ ಮೂಡಿದ ಹಾಗೆ
ಹೋಗೋ ಕಡೆ ಎಲ್ಲ ನಿನ್ನ ದನಿಯೇ ಕೇಳಿದ ಹಾಗೆ
(ಸೇ ಯೂ ಲವ್ ಮೀ ಏಂಡ್ ಟೇಕ್ ಮೈ ಬ್ರೇಥ್ ಅವೇ  
ಹೇ, ಬೇಬಿ ಕಮ್ ಫಾರ್ ಮೀ ಎಂಡ್ ಟೇಕ್ ಮೀ ಹಾರ್ಟ್ ಅವೇ)

ನೀನೇ ತಂಗಾಳಿ ನನ್ನ ಹಾದಿಲಿ ನನ್ನ ಸಂಭ್ರಮ ಹೇಗೆ ನಿನಗೆ ಹೇಳಲಿ?
ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ ನಿನ್ನ ತೋಳಲೇ ನನ್ನ ಉಸಿರು ನಿಲ್ಲಲಿ
ನಾನು ತಾಳುವೆನು ನನಗಾಗೋ ನೋವನು ನಿಂಗೆ ನೋವಾದರೆ ಅದ ನಾನು ತಾಳೆನು
ಸಾಗಲು ಮುಂದಕೆ, ತುಂಬಿದೆ ನಂಬಿಕೆ ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ
(ಸೇ ಯೂ ಲವ್ ಮೀ ಏಂಡ್ ಟೇಕ್ ಮೈ ಬ್ರೇಥ್ ಅವೇ 
ಹೇ, ಬೇಬಿ ಕಮ್ ಫಾರ್ ಮೀ ಎಂಡ್ ಟೇಕ್ ಮೀ ಹಾರ್ಟ್ ಅವೇ)

ನೋಡು, ನಾ ಬಂದೆ ನಿನ್ನ ಹಿಂದಿಂದೆ ನಿನ್ನ ಮೋಡಿಗೆ ನನ್ನ ಹೃದಯ ಹಿಗ್ಗಿದೆ
ನಿನ ಒಂದೊಂದು ಹೆಜ್ಜೆನೂ ನಂದೆ ಇನ್ಮುಂದೆ ಅಷ್ಟೇ ಸಾಲದು, ನನ್ನ ಬದುಕು ನಿನ್ನದೇ
ನನ್ನ ಉಸಿರಾಡೋ ಪಿಸುಮಾತು ಆಲಿಸು ನಿನ್ನ ನೆರಳಾಗುವ ಅವಕಾಶ ಕಲ್ಪಿಸು
ಎಲ್ಲವ ಗೆಲ್ಲುವೆ ನೀ ಜೊತೆ ನಿಂತರೆ ತಲ್ಲಣವೇಕೋ ಸ್ವಲ್ಪವೇ ನೀನು ದೂರ ಹೋದರೆ?
(ಸೇ ಯೂ ಲವ್ ಮೀ ಏಂಡ್ ಟೇಕ್ ಮೈ ಬ್ರೇಥ್ ಅವೇ 
ಹೇ, ಬೇಬಿ ಕಮ್ ಫಾರ್ ಮೀ ಎಂಡ್ ಟೇಕ್ ಮೀ ಹಾರ್ಟ್ ಅವೇ)
ನಿಂತೆ, ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ
ಕೂಗಿ ಹೇಳೋದಾ? ಕೂಗಿ ಹೇಳೋದಾ?  
(ಸೇ ಯೂ ಲವ್ ಮೀ ಏಂಡ್ ಟೇಕ್ ಮೈ ಬ್ರೇಥ್ ಅವೇ )
ಕೂಗಿ ಹೇಳೋದಾ ನಾನೇ ಲೋಕಕೆ? ನೀನೇ ಸಂಗಾತಿ ನನ್ನ ಜೀವಕೆ
ನೋಡೋ ಕಡೆ ಎಲ್ಲ ಬರೀ ನೀನೇ ಮೂಡಿದ ಹಾಗೆ
ಹೋಗೋ ಕಡೆ ಎಲ್ಲ ನಿನ್ನ ದನಿಯೇ ಕೇಳಿದ ಹಾಗೆ
-------------------------------------------------------------------------------------------------------------

ನಿನ್ನಿಂದಲೇ (೨೦೧೪) - ಬೋಲೋ ಭಾಮಾ ಭಾಮಾ
ಸಂಗೀತ : ಮಣಿ ಶರ್ಮ ಸಾಹಿತ್ಯ: ವಿ.ನಾಗೇಂದ್ರಪ್ರಸಾದ ಗಾಯನ : ಕಾರ್ತೀಕ, ಶ್ರಾವಣ ಭಾರ್ಗವಿ

ಬೋಲ್ ಬೋಮ್ ಬೋಮ್ ಬೋಲಾರೇ ಯಾಕೇ ಹುಡುಗೀರ್ ಹಿಂಗವರೇ ಲೂಸ್ ಲೂಸಂಗೇ ಆಡ್ತಾರೇ  
ನೋ ನೋ ನೋ ಕಿಲಾಡಿ ಹುಡುಗೀರೂ ನೋ ನೋ ನೋ ಹುಷಾರೂ ನಾವೇಲ್ಲಾರೂ 
ಬೋಲ್ ಬೋಮ್ ಬೋಮ್ ಬೋಲಾರೇ ಯಾರನ ಇಷ್ಟಪಡ್ತಾರೇ ಯಾರಗೋ ಕೊರಳು ಕೊಡ್ತಾರೇ 
ನೋ ನೋ ನೋ ಸ್ಪೆಷಲ್ ಹುಡ್ಗಿರೂ ನೋ ನೋ ನೋ ನೋ ಕಮಾಲು ನಾವೆಲ್ಲರೂ 
ಯಾರೂ ನಿಮಗಿಷ್ಟರೀ ಏನು ನಿಮಗಿಷ್ಟಾರೀ ಬೈಕು ಮಜಾ ಅಂತೀರಿ ಕಾರು ಸರಿ ಅಂತೀರಿ 
ಎಂತೋನ ನಿಮ್ಗ್ ಬೇಕೂ ಅಂತಾ ಕನ್ಫ್ಯೂಸ್ ಆಗೇ ಇರ್ತೀರಲ್ಲಾ.. 
ಬೇಕು ಮುತ್ತು ಮಗಧೀರ ಮುತ್ತು ರಾ ಚೋರ ಬೇಕು ರಾಜಕುಮಾರ ಪೋರ   
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ ಲಾಕ್ ಮಾಡುತ್ತೀರಿ ಲೇಡಿ.. 
ನೋ ನೋ ನೋ ಕಿಲಾಡಿ ಹುಡ್ಗಿರೂ ನೋ ನೋ ನೋ  ನೋ ಹುಷಾರೂ ನಾವೆಲ್ಲರೂ 

ನಾಳೇನೇ ಆ ಶಾದಿ ಡಾಟ್  ಕಂಮನಲ್ಲಿ ಹಾಕೀ ಟ್ರೈ ಮಾಡಿ ನೋಡ್ಲಾ 
ನೆಟ್ ನಲ್ಲಿ ಸಿಗೋ ಎಲ್ಲಾ ಗಂಡಸು ನೆಟ್ಟಗಿರ್ತಾನೆ ಅನ್ನೋದು ಏನ್ ಗ್ಯಾರಂಟೀ .. 
ಟಿವಿನಲ್ಲಿ ಗಂಡೊಂದು ಬೇಕು ಅಂತಾ ಎಡ್ ಕೊಡಲೇನೇ ಹೇಳೇ .. 
ಬೊಗಸಗ್ಗಳು ಡ್ಯಾಮೇಜ್ ಪೀಸುಗಳೂ ವಿಗ್ ಹಾಕೊಂಡು ಬರ್ತಾರೆ ನೋ ವಾರಂಟಿ 
ಯಾರೆಲ್ಲಾ ಪರ್ಫೆಕ್ಟ್ ಲೈಫ್ ಎ ಒಂದ್ ಅಡ್ಜಸ್ಟ್ ನಾನು ಬಲ್ ಪರ್ಫೆಕ್ಟ್ ನೋಡು ಇದು ನನ್ನ ಗುಟ್ಟೂ 
ಎಂಥೋನ್ ನಿಮ್ಗ ಬೇಕು ಅಂತಾ ಕನ್ಫ್ಯೂಸ್ ಆಗೇ ಇರ್ತೀರಲ್ಲಾ 
ಬೇಕು ಮುತ್ತು ಮಗಧೀರ ಮುತ್ತು ರಾ ಚೋರ ಬೇಕು ರಾಜಕುಮಾರ ಪೋರ   
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ ಲಾಕ್ ಮಾಡುತ್ತೀರಿ ಲೇಡಿ.. 
ನೋ ನೋ ನೋ ಕಿಲಾಡಿ ಹುಡ್ಗಿರೂ ನೋ ನೋ ನೋ  ನೋ ಹುಷಾರೂ ನಾವೆಲ್ಲರೂ 

ಶ್ರೀ ರಾಮ ಆ ಬಿಲ್ಲು ಮುರುದು ಸೀತೇನ ಗೆದ್ದ ಅಂಥೋನು ಬೇಕ.. 
ಮುರಿಯೋದಕ್ಕೆ ಇಲ್ಲೀ ಬಿಲ್ಲೇ ಇಲ್ಲ ನಿನ್ನ ರಾಮಾಯಣ ನನ್ ಮುಂದೆ ನಡೆಯೋದಿಲ್ಲ 
ಆ ಪಾರ್ಥ ದ್ರೌಪದಿಗಾಗಿ ಬಾಣ ಹೋಡ್ದ ಅಂತೋನು ಬೇಕಾ 
ಪಾಂಚಾಲೀ ನಾ ಆ ಐದು ಜನ ಹಣ್ಣು ಅಂತಾ ಹಂಚಕೊಂಡು ತಿಂದ್ರೂ ದಿನ 
ಯಾಕೆ ಕಲೆ ಹುಡ್ಕೊದು ನೋಡೇ ಬಿಳಿ ಚಂದಿರನ ನಾವು ಹುಡಕೋದೊಂದು ಒಳ್ಳೆ ಇದ್ದೋನ  
ಎಂಥೋನ್ ನಿಮ್ಗ ಬೇಕು ಅಂತಾ ಕನ್ಫ್ಯೂಸ್ ಆಗೇ ಇರ್ತೀರಲ್ಲಾ 
ಬೇಕು ಮುತ್ತು ಮಗಧೀರ ಮುತ್ತು ರಾ ಚೋರ ಬೇಕು ರಾಜಕುಮಾರ ಪೋರ   
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್ ಮಾಡಿ ಲಾಕ್ ಮಾಡುತ್ತೀರಿ ಲೇಡಿ.. 
ನೋ ನೋ ನೋ ಕಿಲಾಡಿ ಹುಡ್ಗಿರೂ ನೋ ನೋ ನೋ  ನೋ ಹುಷಾರೂ ನಾವೆಲ್ಲರೂ 
--------------------------------------------------------------------------------------------------------------

ನಿನ್ನಿಂದಲೇ (೨೦೧೪) - ಮೌನ ತಾಳಿತೇ
ಸಂಗೀತ : ಮಣಿ ಶರ್ಮ ಸಾಹಿತ್ಯ: ಜಯಂತ ಕಾಯ್ಕಣಿ ಗಾಯನ : ಅರ್ಜಿತಸಿಂಗ

ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ
ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ
ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ

ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ
ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ
ಕುಶಲ ಕೇಳುತಿವೆ (ಕುಶಲ ಕೇಳುತಿವೆ)
ನಡೆದ ದಾರಿಗಳು (ನಡೆದ ದಾರಿಗಳು)
ಅಳಿಸಲಾಗುವುದೇ, ಹಸಿಯ ಗೋಡೆಯ ಗೀಚಿದ ಸಾಲು
ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

ಕರಗಲಾರದೆ ಹೋದೆನೇ ಪದವಿಲ್ಲದ ಪರಿಭಾಷೆಗೆ
ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ
ಹಿಡಿದು ನಿಲ್ಲಿಸಿವೆ (ಹಿಡಿದು ನಿಲ್ಲಿಸಿವೆ)
ಕಡೆಯ ಮಾತುಗಳು (ಕಡೆಯ ಮಾತುಗಳು)
ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ
ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ
--------------------------------------------------------------------------------------------------------------

No comments:

Post a Comment