ಧರಣಿ ಮಂಡಲ ಮಧ್ಯದೊಳಗೆ ಚಲನ ಚಿತ್ರದ ಹಾಡುಗಳು
- ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸದುಯ್ಯಾಲೆ ತೂಗಿರೋ
- ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
- ಗೆಳತೀ ಓ ಗೆಳತೀ ಅಪ್ಪಿಕೋ ಎನ್ನ ತಬ್ಬಿಕೋ
- ಕಲಿಗಾಲವಯ್ಯಾ ಕಲಿಗಾಲ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಜಯಚಂದ್ರನ್, ವಾಣಿ ಜಯರಾಮ್
ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸದುಯ್ಯಾಲೆ ತೂಗಿರೋ

ನಾನು ಉಯ್ಯಾಲೆ, ನೀನು ಉಯ್ಯಾಲೆ ಜಗವೇ ದೇವನ ಉಯ್ಯಾಲೆ

ಮರೆಯದ ಹರೆಯದ ಉಯ್ಯಾಲೆ ಮೆರೆಯುವ ಹರುಷದ ಉಯ್ಯಾಲೆ

ಸುಖದ ಸರಸದ ಉಯ್ಯಾಲೆ ಸಂತಸದ ಉಸಿರಿನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸದುಯ್ಯಾಲೆ ತೂಗಿರೋ
ಭೂಮಿಯೆ ಗಗನದ ಉಯ್ಯಾಲೆ ವಿಶ್ವವೆ ಸೃಷ್ಟಿಯ ಉಯ್ಯಾಲೆ

ಸೋಲೆ ಗೆಲುವಿನ ಉಯ್ಯಾಲೆ ಜೀವನವೆ ನಿಲ್ಲದ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸದುಯ್ಯಾಲೆ ತೂಗಿರೋ
ನಾನು ಉಯ್ಯಾಲೆ, ನೀನು ಉಯ್ಯಾಲೆ ಜಗವೇ ದೇವನ ಉಯ್ಯಾಲೆ
ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸದುಯ್ಯಾಲೆ ತೂಗಿರೋ
------------------------------------------------------------------------------------------------------------------------
ಧರಣಿ ಮಂಡಲ ಮಧ್ಯದೊಳಗೆ (1983) - ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಆದಿತ್ಯ (ಸಿದ್ಧಲಿಂಗಯ್ಯ) ಹಾಡಿದವರು: ವಾಣಿ ಜಯರಾಮ್
ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು
ಬೀಸುವ ಗಾಳಿಯ ಕೊಳ್ಳುವಿರೇನು ನೋಟಿನ ಕಂತೆಯ ಉಳ್ಳವರೆ, ಉಳ್ಳವರೆ
ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
ದುಡ್ಡಿನ ಗಂಟನು ಮೇಲಕೆ ತೂರಿ ಹಾರುವ ಹಕ್ಕಿಯ ಇಳಿಸುವಿರ

ಬಣ್ಣದ ನೋಟಿನ ಬಲೆಯನು ಬೀಸಿ ಉರಿಯುವ ಸೂರ್ಯನ ಹಿಡಿಯುವಿರ
ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
ಕಾಸಿನ ಸದ್ದಿಗೆ ಗಿಡದಲಿ ಮೊಗ್ಗು ಅರಳುವುದೇನು ಹೂವಾಗಿ

ಕಾಸನು ಕಂಡು ಮರದಲಿ ಕಾಯಿ ತೂಗುವುದೇನು ಹಣ್ಣಾಗಿ
ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
ಮಿರುಗುವ ನೋಟಿನ ಕಟ್ಟನು ತೋರಿ ಕಂದನ ನಗೆಯನು ಕೊಳ್ಳುವಿರ

ಕಾಸನು ಕೊಟ್ಟರೆ ಕಾಮನಬಿಲ್ಲನು ನೀಲಿಯ ಗಗನದಿ ತೋರುವಿರ
ಕಾಸನು ಬೀಸಿ ಒಲವಿನ ಬೆಲೆಯನು ನಿಗದಿಮಾಡುವ ಅಂಧಕರೆ, ಅಂಧಕರೆ
ಬೀಸುವ ಗಾಳಿಯ ಕೊಳ್ಳುವಿರೇನು ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
ನೋಟಿನ ಕಂತೆಯ ಉಳ್ಳವರೆ ಉಳ್ಳವರೆ
--------------------------------------------------------------------------------------------------------------------------
ಧರಣಿ ಮಂಡಲ ಮಧ್ಯದೊಳಗೆ (1983) - ಗೆಳತೀ ಓ ಗೆಳತೀ ಅಪ್ಪಿಕೋ ಎನ್ನ ತಬ್ಬಿಕೋ
ಸಾಹಿತ್ಯ: ದಲಿತಕವಿ ಆದಿತ್ಯ (ಸಿದ್ಧಲಿಂಗಯ್ಯ) ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಎಸ್.ಪಿ.ಬಿ.
ಗೆಳತೀ ಓ ಗೆಳತೀ...
ಗೆಳತೀ ಓ ಗೆಳತೀ ಅಪ್ಪಿಕೋ ಎನ್ನ ಅಪ್ಪಿಕೋ
ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲಾ ನನ್ನ ತಬ್ಬಿಕೋ
ಗೆಳತೀ ಓ ಗೆಳತೀ...
ಜಗದ ಗೊಂದಲ ಬೇಡಾ ನಿನಗೇ ಎದೆಯಾ ಹಾಡು ನೀನೂ ನನಗೇ

ನಿನ್ನಾ ಮಾತೇ ಜೇನೂ ನನಗೇ ನಿನ್ನ ಜೊತೆಯೇ ಸಾಕೂ ನನಗೇ
ನಿನ್ನ ಜೊತೆಯೇ ಸಾಕೂ ನನಗೇ
ಗೆಳತೀ ಓ ಗೆಳತೀ ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲಾ ನನ್ನ ತಬ್ಬಿಕೋ
ಗೆಳತೀ ಓ ಗೆಳತೀ...
ಗೆಳತೀ ಓ ಗೆಳತೀ...
ಮೇಲು ಕೀಳಿನ ಬೇಲಿ ಜಿಗಿದೂ ಪ್ರೇಮಲೋಕದಿ ನಿನ್ನ ಬಿಗಿದು

ನೂರು ಮುತ್ತನೂ ಒತ್ತೀ ನಿನಗೇ ನಾನು ಆಗುವೇ ಕಣ್ಣು ನಿನಗೇ
ನಾನು ಆಗುವೇ ಕಣ್ಣು ನಿನಗೇ
ಗೆಳತೀ ಓ ಗೆಳತೀ ಅಪ್ಪಿಕೋ ಎನ್ನ ಅಪ್ಪಿಕೋ
ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲಾ ನನ್ನ ತಬ್ಬಿಕೋ
ಗೆಳತೀ ಓ ಗೆಳತೀ... ಗೆಳತೀ ಓ ಗೆಳತೀ...
ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲಾ ನನ್ನ ತಬ್ಬಿಕೋ
ಗೆಳತೀ ಓ ಗೆಳತೀ... ಗೆಳತೀ ಓ ಗೆಳತೀ...
--------------------------------------------------------------------------------------------------------------------------
ಧರಣಿ ಮಂಡಲ ಮಧ್ಯದೊಳಗೆ (1983) - ಕಲಿಗಾಲವಯ್ಯಾ ಕಲಿಗಾಲ
ಸಾಹಿತ್ಯ: ದಲಿತಕವಿ ಆದಿತ್ಯ (ಸಿದ್ಧಲಿಂಗಯ್ಯ) ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಎಸ್.ಪಿ.ಬಿ.
ಸಾಹಿತ್ಯ: ದಲಿತಕವಿ ಆದಿತ್ಯ (ಸಿದ್ಧಲಿಂಗಯ್ಯ) ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಎಸ್.ಪಿ.ಬಿ.
ಕಲಿಗಾಲವಯ್ಯಾ... ಓಓಓಓಓ...
ಕಲಿಗಾಲವಯ್ಯಾ ಕಲಿಗಾಲ ಇದು ಕಲಿಗಾಲವಯ್ಯಾ ಕಲಿಗಾಲ
ಪ್ರೀತಿಗೂ ಬಂತಯ್ಯಾ ... ಆಆಆ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ

ಥಳುಕಿನ ಮಾತು ಎಲ್ಲಡೇ ಕುಣಿಯಲೂ ಒಳ್ಳೆಯ ಮಾತಿಗೇ ಬರಗಾಲ

ಮೋಸದ ಮಂದಿಯ ಕೂಟವೂ ಬೆಳೆದೂ ಸತ್ಯದ ಮಹಿಮೆಗೇ ಬರಗಾಲ ಆಹ್ಹ್

ಪ್ರೀತಿಗೂ ಬಂತಯ್ಯಾ ... ಓಓಓಓಓ ಬರಗಾಲ
ಪ್ರೀತಿಗೂ ಬಂತಯ್ಯಾ ಬರಗಾಲ ಓಓಓ ಪ್ರೀತಿಗೂ ಬಂತಯ್ಯಾ ಬರಗಾಲ
ಅಪ್ಪ ಮಕ್ಕಳ ಆಸ್ತಿಯ ಜಗಳ ಕರುಳಿನ ನಂಟಿಗೇ ಬರಗಾಲ.. ಹ್ಹ.. ಅಹ್ಹಹ್ಹ
ಅಪ್ಪ ಮಕ್ಕಳ ಆಸ್ತಿಯ ಜಗಳ ಕರುಳಿನ ನಂಟಿಗೇ ಬರಗಾಲ
ಗಂಡ ಹೆಂಡಿರ ದುಡ್ಡಿನ ವಿರಸ ಸರಸದ ಬಾಳಿಗೇ ಬರಗಾಲ

-------------------------------------------------------------------------------------------------------------------------
No comments:
Post a Comment