1244. ಚಾಣಕ್ಯ (೧೯೮೪)


ಚಾಣಕ್ಯ ಚಲನಚಿತ್ರದ ಹಾಡುಗಳು 
  1. ಯಾರಿಗೂ ಕಾಣದೇ 
  2. ಮೋಹಿನಿ ನವ ಮೋಹಿನಿ 
  3. ಸಂಜೆ ನೋಡು ಬಂದಿದೇ 
  4. ನಿನ್ನ ನೋಡಲೆಂದೇ 
ಚಾಣಕ್ಯ (೧೯೮೪) - ಯಾರಿಗೂ ಕಾಣದೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಸ್.ಪಿ.ಬಿ.

ಆಹಾಹಾ.. ಆಹಾಹಾ... ಆಹಾಹಾಹಾಹಾ..
ಯಾರಿಗೂ ಕಾಣದೇ ಮರೆಯಲಿ ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೇ ನಿಂತಿಹರೂ ಹೆತ್ತವರೇ ನನ್ನ ದೇವರೂ ..
ಯಾರಿಗೂ ಕಾಣದೇ ಮರೆಯಲಿ ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೇ ನಿಂತಿಹರೂ ಹೆತ್ತವರೇ ನನ್ನ ದೇವರೂ ..

ಜನುಮವ ನನಗೇ ನೀಡಿದರು ಪ್ರೇಮದಿ ನನ್ನ ಬೆಳೆಸಿದರು..
ವಿದ್ಯೆಯ ಬುದ್ದಿಯ ಕಲಿಸಿದರು .. ಬದುಕಿನ ಅರ್ಥವ ತಿಳಿಸಿದರು
ಬಾಳುವ ರೀತಿಯ ತೋರಿದರು ನನ್ನ ಬಾಳಿಗೆ ಬೆಳಕನು ನೀಡಿದರೂ... ಓಓಓಓಓ
ಯಾರಿಗೂ ಕಾಣದೇ ಮರೆಯಲಿ ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೇ ನಿಂತಿಹರೂ ಹೆತ್ತವರೇ ನನ್ನ ದೇವರೂ ..

ಈ ಮನೆಗವರು ಕಣ್ಣಂತೆ ಮಕ್ಕಳ ಪಾಲಿಗೇ .. ಉಸಿರಂತೇ ..
ಎಂದಿಗೂ ಅವರೂ ನಗುತಿರಲು ಈ ಮನೆಯಾಗ ಸ್ವರ್ಗದೊಲು
ಸಾವಿರ ವರುಷ ಬದುಕಿರಲೀ ತಮ್ಮ ಮಕ್ಕಳಿಗೆ ನೆರಳಾಗಿರಲೀ ..  ಆಆಆಅ..
ಯಾರಿಗೂ ಕಾಣದೇ ಮರೆಯಲಿ ಎಲ್ಲೋ ದೇವರು ಅಡಗಿಲ್ಲಾ..
ಬೆಟ್ಟದ ಮೇಲಿನ ಗುಡಿಯಲಿ ಅವನು ಕಲ್ಲಾಗೂ ಇಲ್ಲಾ..
ಕಣ್ಣೆದುರೇ ನಿಂತಿಹರೂ ಹೆತ್ತವರೇ ನನ್ನ ದೇವರೂ ..
ಕಣ್ಣೆದುರೇ ನಿಂತಿಹರೂ ಹೆತ್ತವರೇ ನನ್ನ ದೇವರೂ ..
-----------------------------------------------------------------------------------------------------------------

ಚಾಣಕ್ಯ (೧೯೮೪) - ಮೋಹಿನಿ ನವ ಮೋಹಿನಿ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ

ಹೆಣ್ಣು :ಆಆಆಆಆಆಆಆಆಆಆಆ .. ಆಆಆ
ಗಂಡು : ಮೋಹಿನೀ ... ನವಮೋಹಿನಿ... ಸುಡುವಾ ವಿರಹ ತಾಳೇನೂ ರಾಣೀ ..
            ಮೋಹಿನೀ ನವಮೋಹಿನಿ ಸುಡುವಾ ವಿರಹ ತಾಳೇನೂ ರಾಣೀ .. 
            ಸೋತೇನೂ ಸೋತೇನೂ ಆಸೆಯ ತಾಳೇನೂ ಬಾ ಕಾಮಿನೀ ..
            ಮೋಹಿನೀ ನವಮೋಹಿನಿ ಸುಡುವಾ ವಿರಹ ತಾಳೇನೂ ರಾಣೀ .. 

ಹೆಣ್ಣು : ಸಗಮಗ ಗಮಗ ಗಮಗ ಗಮ ಗಮಗಮ ಮದಮ ಮದಮ ಮದಮ
          ಮಮಮಮ ದದದದ ನಿನಿನಿನಿ ಸಸಸಸ ಸಗನಿಸ           
ಗಂಡು : ಅರಳಿದ ನಯನವೋ ಬಿರಿದಿಹ ಕಮಲವೋ ಅಧರವೋ ಹವಳವೋ ನಾನರಿಯೇ ..
ಹೆಣ್ಣು :ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ನಗುವಿನ ಲಾಸ್ಯವೋ ಬಳುಕುವ ಬಳ್ಳಿಯೋ ನವಿಲಿನ ನಾಟ್ಯವೋ ನಾ ತಿಳಿಯೇ .. 
            ರತಿಯೇ ಶಾಪದಿ ಭೂಮಿಗೇ ತಂದಳೋ ಆ ಸಿರಿ ದೇವಿಯೇ ಕಣ್ಣಿಗೇ ಕಂಡಳೋ 
            ಅರಿಯಲಾರದೇ ಮನಸೂ ಕೂಗಿದೇ ಸನಿಹ ಸೇರುವಾ ಬಯಕೇ ಮೂಡುವಾ .. 
            ಮೋಹಿನೀ ನವಮೋಹಿನಿ ಸುಡುವಾ ವಿರಹ ತಾಳೇನೂ ರಾಣೀ ..   
ಹೆಣ್ಣು : ರಿಗಗ ಗಸ ಸಗಮಗ.. ಆಆಆ... ಆಆಆ... ಆಆಆ.. ಆಆಆ.. 

ಗಂಡು : ಅರಳಿದ ಸುಮಗಳೂ ಪರಿಮಳ ಚೆಲ್ಲುತಾ ಹೊಸ ಹೊಸ ಕನಸನೂ ತುಂಬುತಿವೇ .. 
ಹೆಣ್ಣು :ಆಆಆ ಆಆಆ ಆಆಆ ಆಆಆ .. ಆಆಆ
ಗಂಡು : ಭೃಮರದ ಗಾನವೂ ವಿರಹದ ಗೀತೆಯ ನೆನಪನೂ ನನ್ನಲ್ಲೀ ತರುತಲಿದೇ .. 
            ತಣ್ಣನೇ ಗಾಳಿಯೂ ಮೆಲ್ಲನೇ ಮೀಟಿದೆ ತನುವಿಗೇ ಮದನನ ಬಾಣವೂ ಸೋಕಿದೆ 
            ನುಡಿಯಲಾರದ ಮಧುರ ವೇದನೇ ತಾಳಲಾರೆನೇ ಅರಗಿಣಿ ಬಾರೇ .. 
            ಮೋಹಿನೀ ನವಮೋಹಿನಿ ಸುಡುವಾ ವಿರಹ ತಾಳೇನೂ ರಾಣೀ ..               
            ಸೋತೇನೂ ಸೋತೇನೂ ಆಸೆಯ ತಾಳೇನೂ ಬಾ ಕಾಮಿನೀ ..
            ಮೋಹಿನೀ ನವಮೋಹಿನಿ ಸುಡುವಾ ವಿರಹ ತಾಳೇನೂ ರಾಣೀ .. 
-----------------------------------------------------------------------------------------------------------------

ಚಾಣಕ್ಯ (೧೯೮೪) - ಸಂಜೆ ನೋಡು ಬಂದಿದೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಸ್.ಪಿ.ಬಿ. ಎಸ್.ಜಾನಕೀ

ಹೆಣ್ಣು : ಲಾ.. ಲಾ.. ಲಾಲಾಲಲ್ಲಲ್ಲಲ್ಲಾ ಲಾ.. ಲಾ..ಲಾ  ಲಾಲಾಲಲ್ಲಲ್ಲಲ್ಲಾ ಲಲಲಲ ಲಲಲಲ
ಗಂಡು : ಸಂಜೆ ನೋಡು ಬಂದಿದೇ..  ಕೆಂಪು ರಂಗು ಚೆಲ್ಲಿದೇ ..
            ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ
            ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ.. ಹ್ಹಹ್ಹ..ಹ್ಹಹ್ಹ .. ಹ್ಹಾ..
ಹೆಣ್ಣು : ಸಂಜೆ ನೋಡು ಬಂದಿದೇ..  ಕೆಂಪು ರಂಗು ಚೆಲ್ಲಿದೇ ..
            ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ
            ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ.. 

ಗಂಡು : ಹೂವುಗಳು ಅರಳಿ ಪರಿಮಳ ಚೆಲ್ಲಿ ದುಂಬಿಯ ಕರೆಯುತಲಿರಲೂ .. 
            ಮಾಮರ ಚಿಗುರಿ ಒಲವಿನ ಗೀತೆ ಕೋಗಿಲೇ ಹಾಡುತಲಿರಲೂ .. ಆಹಾ... 
ಹೆಣ್ಣು : ಈ ಸುಮಗಾಳಿ ಮೈಯ್ಯನೂ ಸೋಕಿ ಚಳಿಯನು ತುಂಬುತಲಿರಲೂ .. 
           ಹಾಸಿದ ಹಸಿರೂ ಹಾಸಿಗೆಯಾಗಿ ಪ್ರೇಮದಿ ಕೂಗತಲಿರಲೂ .. 
ಗಂಡು : ಪ್ರಣಯದ ಆಸೇ ಮೂಡದೇ ನನ್ನ ಸ್ನೇಹವ ಮನಸೂ ಬಯಸದೇ .. 
ಹೆಣ್ಣು : ಸಂಜೆ ನೋಡು ಬಂದಿದೇ..  ಕೆಂಪು ರಂಗು ಚೆಲ್ಲಿದೇ ..
ಗಂಡು : ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ.. ಹ್ಹಹ್ಹ..ಹ್ಹಹ್ಹ .. ಹ್ಹಾ..
            ಆಸೇ ನಿನ್ನ ಕಾಡದೇನೋ.. ನನ್ನ ಪ್ರೀತಿ ಕೇಳದೇನೋ.. (ಅರೇ .. ಹ್ಹ.. ಅಹ್ಹಹ್ಹಾ )

ಹೆಣ್ಣು : ಕಣ್ಣುಗಳಲ್ಲಿ ಕಾಮನವಿಲ್ಲಾ ಅಂದವ ಕಾಣುತಲಿರಲೂ (ಹೂಂಹೂಂಹೂಂ)
          ಕಲ್ಪನೆಯಲ್ಲಿ ಮೊದಲನೇ ರಾತ್ರೀ ಸೊಗಸನೂ ನೋಡುತಲಿರಲೂ .. 
ಗಂಡು : ಹಾಲಲಿ ಜೇನೂ ಬೆರೆತಿರುವಂತೇ ಮನಗಳೂ ಒಂದಾಗಿರಲೂ.. 
            ಹೃದಯವೂ ನಿನ್ನ ಸನಿಹವ ಸೇರೋ ಕಾತರ ತೋರುತಲಿರಲೂ 
ಹೆಣ್ಣು : ಕಂಡೇನೂ ಇಲ್ಲೇ ಸ್ವರ್ಗವ ನನ್ನ ನಲ್ಲನೇ ನಿನ್ನ ನಗೆಯಲೀ 
ಗಂಡು  : ಸಂಜೆ ನೋಡು ಬಂದಿದೇ.. 
ಹೆಣ್ಣು : ಕೆಂಪು ರಂಗು ಚೆಲ್ಲಿದೇ ..
ಗಂಡು : ಆಸೇ ನಿನ್ನ ಕಾಡದೇನೋ..
ಹೆಣ್ಣು : ನನ್ನ ಪ್ರೀತಿ ಕೇಳದೇನೋ..
ಗಂಡು : ಅರೆರೆರೆರೇರೇ... ಆಸೇ ನಿನ್ನ ಕಾಡದೇನೋ..
ಹೆಣ್ಣು :  ನನ್ನ ಪ್ರೀತಿ ಕೇಳದೇನೋ.. (ಹ್ಹ.. ಹ್ಹ..ಹ್ಹ .. ಅಹ್ಹಹ್ಹಾ ... ಹ್ಹ.. ಹ್ಹ..)
-------------------------------------------------------------------------------------------------------------

ಚಾಣಕ್ಯ (೧೯೮೪) - ನಿನ್ನ ನೋಡಲೆಂದೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಸ್.ಪಿ.ಬಿ. ವಾಣಿಜಯರಾಂ

ಹೆಣ್ಣು : ಆಹ್ಹ್ ..  ಆಂ...  (ಹೇ) ಆಂ...(ಅ .. ಆಹ್ ) ಆಂ...(ಹ್ಹ.. ಹ್ಹಹ್ಹಹ್ಹ.. ) ಆಹ್ಹಹ್ಹ.. (ಹೂಂ )
           ಹೂಂ (ಆಹ್ಹಹ್ಹಹ್ಹ.. ) ಹೇ..   (ಆಹ್ಹಹ್ಹಹ್ಹ.. ) ಹ್ಹಾ.. (ಆಹ್ಹಹ್ಹಹ್ಹ.. )  ಆಂ .. (ಹೂ ) (ಅಹ್ಹಹ್ಹಹ್ಹ )
           (ಅಹ್ಹಹ್ಹಹ್ಹ )
ಗಂಡು : ಹೋಯ್.. ನಿನ್ನ ನೋಡಲೆಂದೇ ಇಲ್ಲಿ ಓಡಿ ಬಂದೇ .. ನಿನ್ನ ಅಂದ ಕಂಡು ನನ್ನ ಮನವೂ ಹಾಡಿದೇ..
           ನಿನ್ನ ನೋಡಲೆಂದೇ (ಲಲಲಲಲಲಲಾ )  ಇಲ್ಲಿ ಓಡಿ ಬಂದೇ (ಲಲಲಲಲಲಲಾ ) 
           ನಿನ್ನ ಅಂದ ಕಂಡು ನನ್ನ ಮನವೂ ಹಾಡಿದೇ..ಆಆಆ...   ನಿನ್ನ ನೋಡಲೆಂದೇ (ಲಲಲಲಲಲಲಾ )

ಹೆಣ್ಣು : ನಿನ್ನ ರೂಪವನ್ನೂ ಕಂಡ ಈ ರಾತ್ರಿ ಎಂಥ ಚೆಂದ ನಮ್ಮ ಮಿಲನವನ್ನೂ ತಂದ ಈ ತಾಣ ಎಂಥ ಅಂದ
          ನಿನ್ನ ರೂಪವನ್ನೂ ಕಂಡ ಈ ರಾತ್ರಿ ಎಂಥ ಚೆಂದ ನಮ್ಮ ಮಿಲನವನ್ನೂ ತಂದ ಈ ತಾಣ ಎಂಥ ಅಂದ
          ನಿನ್ನ ಹಾಗೇ ಯಾರೂ ಇಲ್ಲಾ.. ನಿನ್ನ ಬಿಟ್ಟೂ ಹೋಗೋಳಲ್ಲಾ.. ಉನ್ಮಾಗಿ ಹಿತವಾಗಿ ಕುಣಿಯೋಣ ಬಾರೋ
          ಬಾರೋ.. ಬಾರೋ..
ಗಂಡು :ನಿನ್ನ ನೋಡಲೆಂದೇ (ಲಲಲಲಲಲಲಾ )  ಇಲ್ಲಿ ಓಡಿ ಬಂದೇ (ಲಲಲಲಲಲಲಾ )
           ನಿನ್ನ ಅಂದ ಕಂಡು ನನ್ನ ಮನವೂ ಹಾಡಿದೇ..ಆಆಆ...   ನಿನ್ನ ನೋಡಲೆಂದೇ (ಲಲಲಲಲಲಲಾ )

ಗಂಡು : ನೀ ನನ್ನ ಅರಿಯೇ ಹೆಣ್ಣೇ ನಾ ನಿನ್ನ ಬಲ್ಲೇ ಜಾಣೆ ಇಂಥ ಜೋಡಿಯನ್ನೂ ನೀನೂ ಬಾಳಲ್ಲೇ ಎಂದೂ ಕಾಣೇ ..
            ನೀ ನನ್ನ ಅರಿಯೇ ಹೆಣ್ಣೇ ನಾ ನಿನ್ನ ಬಲ್ಲೇ ಜಾಣೆ ಇಂಥ ಜೋಡಿಯನ್ನೂ ನೀನೂ ಬಾಳಲ್ಲೇ ಎಂದೂ ಕಾಣೇ ..
            ನನ್ನ ಕೆಲಸ ಆದ ಮೇಲೆ ನೋಡು ನೀನೂ ನನ್ನ ಲೀಲೆ ಬಾಳೆಲ್ಲ ಮರೆಯೋಲ್ಲ ನೀ ನನ್ನ ನಲ್ಲೇ ..
            ಆಹಾ .. ಒಹೋ .. ನಿನ್ನ ನೋಡಲೆಂದೇ (ಲಲಲಲಲಲಲಾ )  ಇಲ್ಲಿ ಓಡಿ ಬಂದೇ (ಲಲಲಲಲಲಲಾ )
           ನಿನ್ನ ಅಂದ ಕಂಡು ನನ್ನ ಮನವೂ ಹಾಡಿದೇ..ತರರರಡದದದದ..  ನಿನ್ನ ನೋಡಲೆಂದೇ (ಲಲಲಲಲಲಲಾ )
----------------------------------------------------------------------------------------------------------------

No comments:

Post a Comment