1132. ಚದುರಂಗ (೧೯೮೫)

ಚದುರಂಗ ಚಲನಚಿತ್ರದ ಹಾಡುಗಳು 
  1. ಅರಳಿದ ತನುವಲ್ಲಿ ಮಿಂಚೂ ಮೂಡಿದೆ 
  2. ಅಂತೂ ಇಂತೂ ನೀನೂ 
  3. ಗೆಳೆಯನೇ ಅರೆಯೇನೂ 
ಚದುರಂಗ (೧೯೮೫)  - ಅರಳಿದ ತನುವಲ್ಲಿ ಮಿಂಚೂ ಮೂಡಿದೆ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ 

ಹೆಣ್ಣು : ಅರಳಿದ ತನುವಲಿ ಮಿಂಚೂ ಮೂಡಿದೆ ಕೆರಳಿದ ಮನದಲಿ ಆಸೇ ಮೂಡಿದೆ
          ಮೈಯಲೀ ರೋಮಾಂಚನ ಏಕೋ ಕಾಣೆ ನಾ ಓ.. ಗೆಳೆಯನೇ ನೀ ಕಾರಣ ಹೇ..ಳೂ...
ಗಂಡು : ಅರಳಿದ ತನುವಲಿ ಮಿಂಚೂ ಮೂಡಿದೆ ಕೆರಳಿದ ಮನದಲಿ ಆಸೇ ಮೂಡಿದೆ

ಗಂಡು : ಇರುಳಿನ ಮೋಡಿಗೆ ಪ್ರಣಯದ ಹಾಡಿಗೇ ಕಾಮನ ಬಾಣಕೆ ವಯಸ್ಸಿನ ದಾಹಕೇ
ಹೆಣ್ಣು : ನಿನ್ನಾ ಸೇರದೇ ಶಾಂತಿ ಮೂಡದೇ ಗೆಳೆಯಾ ಬಾರೇಯಾ ನೀನೂ
          ಅರಳಿದ ತನುವಲಿ ಮಿಂಚೂ ಮೂಡಿದೆ ಕೆರಳಿದ ಮನದಲಿ ಆಸೇ ಮೂಡಿದೆ

ಹೆಣ್ಣು : ತನುವಿಗೇ ತನುವಿನ ಗೆಳೆತನ ದೊರಕಲೂ ಬೆರಳಿನ ಸರಸಕೇ ಮೈಮನ ಕುಣಿಯಲೂ
ಗಂಡು : ಏನೂ ಕೇಳಲೂ ಏನೂ ಹೇಳಲೂ ಮನಸೂ ಕಾಡಿದೇ.. ಏಕೇ ..
ಹೆಣ್ಣು : ಅರಳಿದ ತನುವಲಿ ಮಿಂಚೂ ಮೂಡಿದೆ ಕೆರಳಿದ ಮನದಲಿ ಆಸೇ ಮೂಡಿದೆ
ಗಂಡು : ಮೈಯಲೀ ರೋಮಾಂಚನ ಏಕೋ ಕಾಣೆ ನಾ ಓ.. ಗೆಳೆತಿಯೇ ನೀ ಕಾರಣ ಹೇ..ಳೂ...
ಇಬ್ಬರು : ಅರಳಿದ ತನುವಲಿ ಮಿಂಚೂ ಮೂಡಿದೆ ಕೆರಳಿದ ಮನದಲಿ ಆಸೇ ಮೂಡಿದೆ
ಗಂಡು : ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ
ಇಬ್ಬರು : ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ
             ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ
  -------------------------------------------------------------------------------------------------------------------------

ಚದುರಂಗ (೧೯೮೫)  - ಅಂತೂ ಇಂತೂ ನೀನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ

ಗಂಡು : ಅಂತೂ ಇಂತೂ ನೀನು ಪಾಠ ಕಲಿಯುವೆಯೇನೂ
           ಸೊಗಸ ಬಡಿತ ಕಲಿಯುವ ಬಯಕೆ ಕೆಣಕಿದೆಯೇನೂ ಹೆಣ್ಣೇ ನಿನ್ನಲ್ಲೀ ಆಸೇ ಏನಿದೇ ಹೇಳೂ ನನ್ನಲ್ಲಿ...
ಹೆಣ್ಣು : ಪ್ರೀತಿ ಏನೂ ಪ್ರೇಮ ಏನೂ ಕಲಿಯಲೂ ಬಂದೇ ನಿನ್ನಾ ಸೇರಿ ಆಟ ಆಡೋ ಕನಸನೂ ಕಂಡೇ
          ಆಸೇ ಹೆಚ್ಚಿದೇ.. ನಿನ್ನಾ ಹುಚ್ಚಿದೇ ಬಾರೋ ಬೆಚ್ಚದೇ ...

ಗಂಡು : ಗಮನವೂ ಎಲ್ಲಿದೇ ಚಲನೆಯೇ ಕಾಣದೇ ನಯನವೂ ಆಡದೇ ಮನದಲಿ ಏನಿದೇ
ಹೆಣ್ಣು : ನಿನ್ನ ಕಂಡ ಮೇಲೆ ಮನಸ್ಸಾಯಿತು ನಿನ್ನಾ ಮೇಲೆ
          ನಿನ್ನ ಕಂಡ ಮೇಲೆ ಮನಸ್ಸಾಯಿತು ನಿನ್ನಾ ಮೇಲೆ
          ದಿನವೂ ಇರುಳೂ ಬರುವೇ ಕರವ ಹಿಡಿದು ನಗುವೇ ತುಟಿಗೆ ಸಿಹಿಯ ಕೊಡುವೇ
          ಕನಸಲ್ಲೂ ನಿನ್ನಿಂದ  ನಾ ನಾಚುವೇ
ಗಂಡು : ಅಂತೂ ಇಂತೂ ನೀನು ಪಾಠ ಕಲಿಯುವೆಯೇನೂ (ಅಹ್ಹಹ್ಹ)
            ಸೊಗಸ ಬಡಿತ ಕಲಿಯುವ ಬಯಕೆ ಕೆಣಕಿದೆಯೇನೂ ( ಹ್ಹ.. ಓ.. )
            ಹೆಣ್ಣೇ ನಿನ್ನಲ್ಲೀ ಆಸೇ ಏನಿದೇ ಹೇಳೂ ನನ್ನಲ್ಲಿ...

ಹೆಣ್ಣು : ಮರೆಯೇನೂ ಹಾಡನು ಗೆಳೆಯನೇ ಹೇಳುವಾ ಪ್ರಣಯದ ಪಲ್ಲವಿ ಜೊತೆಯಲಿ ಹಾಡುವಾ
ಗಂಡು : ನಿನ್ನಾ ರಾಗ ಕೇಳಿ ಮಧುಮಾಸ ಬಂದ ಹಾಗೇ
           ನಿನ್ನಾ ರಾಗ ಕೇಳಿ ಮಧುಮಾಸ ಬಂದ ಹಾಗೇ
           ಮರವೀ ಹಜುಡು ಚಿಗುರೀ ಲತೆಯ ಸುಮವೂ ಅರಳಿ ಭ್ರಮರ ಮಧುವ ಬಯಸೀ
           ಬಂದಂತೇ ಕನಸನ್ನೂ ನಾ ಕಂಡೇನೇ
ಹೆಣ್ಣು : ಪ್ರೀತಿ ಏನೂ ಪ್ರೇಮ ಏನೂ ಕಲಿಯಲೂ ಬಂದೇ ನಿನ್ನಾ ಸೇರಿ ಆಟ ಆಡೋ ಕನಸನೂ ಕಂಡೇ
          ಆಸೇ ಹೆಚ್ಚಿದೇ.. ನಿನ್ನಾ ಹುಚ್ಚಿದೇ ಬಾರೋ ಬೆಚ್ಚದೇ ...
-------------------------------------------------------------------------------------------------------------------------

ಚದುರಂಗ (೧೯೮೫)  - ಗೆಳೆಯನೇ ಅರೆಯೇನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ 

ಹೆಣ್ಣು : ಗೆಳೆಯನೇ ಅರಿಯೇನೂ ಹೇಳು ನನಗೇ ಈಗ
         ಒಲವೆಂದರೇನೂ ಸುಖವೆಂದರೇನೂ... ಸುಖವೆಂದರೇನೂ
ಗಂಡು: ಗೆಳತಿಯೇ ಅರಿಯುವೇ ಹೀಗೆ ಜೊತೆಯಾಗಿ ಸವಿಮಾತನಾಡು ನೀನಾಗ ನೋಡೂ... ನೀನಾಗ ನೋಡೂ

ಹೆಣ್ಣು : ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ
          ಎದೆಯಲ್ಲಿ ವೀಣೆ ತಂತಿ ಶೃತಿ ಮಾಡಿದಂತೇ ನನಗಾಯ್ತು ನಲ್ಲ ನಿನ್ನ ನೋಡಿದಾಗ
ಗಂಡು : ಆ ವೀಣೆಯಿಂದ ಬಂದ ಇಂಪಾದ ರಾಗ ತಂದ 
            ಆ ವೀಣೆಯಿಂದ ಬಂದ ಇಂಪಾದ ರಾಗ ತಂದ  ಆನಂದದಿಂದ ನಾನು ಮೈಮರೆತನೂ ... ಮೈಮರೆತನೂ
ಹೆಣ್ಣು : ಗೆಳೆಯನೇ ಅರಿಯೇನೂ ಹೇಳು ನನಗೇ ಈಗ
         ಒಲವೆಂದರೇನೂ ಸುಖವೆಂದರೇನೂ... ಸುಖವೆಂದರೇನೂ

ಗಂಡು : ಅನುರಾಗವೇನೂ ಎಂದೂ ಕಣ್ಣಲ್ಲಿ ಕಂಡೇ
           ಅನುರಾಗವೇನೂ ಎಂದೂ ಕಣ್ಣಲ್ಲಿ ಕಂಡೇ ಸವಿಯಾದ ಜೇನ ತುಟಿಯಲ್ಲಿ ಕಂಡೇ
ಹೆಣ್ಣು : ಹಾರಾಡೋ ಹಕ್ಕಿ ಹಾಗೇ ಮುಗಿಲಲ್ಲಿ ತೇಲೋ ಹಾಗೇ
          ಹಾರಾಡೋ ಹಕ್ಕಿ ಹಾಗೇ ಮುಗಿಲಲ್ಲಿ ತೇಲೋ ಹಾಗೇ ನಿನ್ನಲ್ಲಿ ಸೇರಿದಾಗ ನನಗಾಗಿದೇ... ನನಗಾಗಿದೇ
ಗಂಡು: ಗೆಳತಿಯೇ ಅರಿಯುವೇ ಹೀಗೆ ಜೊತೆಯಾಗಿ ಸವಿಮಾತನಾಡು ನೀನಾಗ ನೋಡೂ... ನೀನಾಗ ನೋಡೂ
-------------------------------------------------------------------------------------------------------------------------

No comments:

Post a Comment