1358. ಚಿತ್ರಲೇಖ - (೧೯೯೨)

ಚಿತ್ರಲೇಖ ಚಲನಚಿತ್ರದ ಹಾಡುಗಳು 
  1. ಬೆಳದಿಂಗಳೇ ಬಿಸಿಲಾಗಿದೇ .. 
  2. ನೀನೂ ಹೆಣ್ಣು ನಾನು ಹೆಣ್ಣೂ 
  3. ರಾಮನೇನ್ನಲೇನೂ ನಿನ್ನ 
  4. ಓ ಮಂದಾಕಿನಿ ನನ್ನಾಕೆ ನೀ 
  5. ಸಾರಾಯಿ ಬಾಯಿಗೇ 
  6. ಹೆಣ್ಣೆಂದರೇ ರಾಮಾಯಾಣ 
ಚಿತ್ರಲೇಖ - (೧೯೯೨) - ಬೆಳದಿಂಗಳೇ ಬಿಸಿಲಾಗಿದೇ .. 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. 

ಬೆಳದಿಂಗಳೇ ಬಿಸಿಲಾಗಿದೇ .. ಬಿಡಿ ಹೂಗಳೇ ಬುಗಿಲಾಗಿವೇ 
ಬಾಳೆಲ್ಲ ಭ್ರಮೆಯಾಗಿದೇ .. ಭ್ರಮೆಯಲ್ಲಿ ಬಯಲಾಗಿದೇ 
ಬಯಕೆಯ ಭ್ರಾಂತೂ .. ಭ್ರಮರವಾಗಿರಲೂ ಬೆರೆಯುವೇ .. ಬಾ ಬೇಗ ಬಾ.. ಓಓಓಓಓ.. 
ಬೆಳದಿಂಗಳೇ ಬಿಸಿಲಾಗಿದೇ .. ಬಿಡಿ ಹೂಗಳೇ ಬುಗಿಲಾಗಿವೇ 

ಮಂದಾಕಿನೀ .... ಮಂದಾಕಿನೀ ... 
ಬಾ ನಾಡಿಗೇ .. ಬಾಸಿಂಗನ ಬಿನ್ನಾಣವೇ ಬಿಗುಮಾನವೇ 
ಬಾಯಾರಿದ ಬನವಾಸಿಗೆ ಭರವಸೆಗಳೇ ಬಹುಮಾನವೇ 
ಬರಿ ಮಾತಿಗೇ ಬಲಿಯಾದ ಮೇಲೂ 
ಬಯಕೆಯ ಭ್ರಾಂತೂ .. ಭ್ರಮರವಾಗಿರಲೂ ಬೆರೆಯುವೇ .. ಬಾ ಬೇಗ ಬಾ.. ಓಓಓಓಓ.. 
ಬೆಳದಿಂಗಳೇ ಬಿಸಿಲಾಗಿದೇ .. ಬಿಡಿ ಹೂಗಳೇ ಬುಗಿಲಾಗಿವೇ 

ಪ.. ಪ.. ಪ... ಪ.. ಪ.. ಪ ..
ಬಳಲಿರುವೇ ನಾ ಬಾಳಿರುವೇನಾ  ಬಾಗಿಲ ಬಳಿ 
ಬಂದಿರುವೇ ನಾ ಬೆನ್ನೇರಿದ ಬೇತಾಳನ 
ಬೇಡೆಂದರೂ ಬಿಡಲಾರೇ ನಾ ಬಾಂಧ್ಯವ್ಯವೇ ಬಿಡಿಯಾದ ಮೇಲೂ 
ಬಯಕೆಯ ಭ್ರಾಂತೂ .. ಭ್ರಮರವಾಗಿರಲೂ ಬೆರೆಯುವೇ .. ಬಾ ಬೇಗ ಬಾ.. ಓಓಓಓಓ.. 
ಬೆಳದಿಂಗಳೇ ಬಿಸಿಲಾಗಿದೇ .. ಬಿಡಿ ಹೂಗಳೇ ಬುಗಿಲಾಗಿವೇ 
ಬಾಳೆಲ್ಲ ಭ್ರಮೆಯಾಗಿದೇ .. ಭ್ರಮೆಯಲ್ಲಿ ಬಯಲಾಗಿದೇ 
ಬಯಕೆಯ ಭ್ರಾಂತೂ .. ಭ್ರಮರವಾಗಿರಲೂ ಬೆರೆಯುವೇ .. ಬಾ ಬೇಗ ಬಾ.. ಓಓಓಓಓ.. 
ಬೆಳದಿಂಗಳೇ ಬಿಸಿಲಾಗಿದೇ .. ಬಿಡಿ ಹೂಗಳೇ ಬುಗಿಲಾಗಿವೇ 
------------------------------------------------------------------------------------------------------------------

ಚಿತ್ರಲೇಖ - (೧೯೯೨) - ನೀನೂ ಹೆಣ್ಣು ನಾನು ಹೆಣ್ಣೂ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ 

ಗಂಡು : ಮಹಾಲಕ್ಷ್ಮೀ  ಮಹಾಗೌರೀ ಮಹಿಷಾಸುರ ಮರ್ಧಿನಿ 
            ಮಹೀಶ ಮಂಡಲಸ್ಥಾಚ ಮಧುರಾಗಮ ಪೂಜಿತ
            ಮಹಾ ಪ್ರಥಮ ಮಹಾ ಭೋಗದ ಮಹಾ ವಿಘ್ನ ವಿನಾಶಿನೀ   
            ಮಹಾನುಭಾವ ಮಂತ್ರಾಡ್ಯಾ ಮಹಾ ಮಂಗಳ ದೇವತಾ.. 
ಹೆಣ್ಣು : ನೀನೂ ಹೆಣ್ಣೂ ನಾನು ಹೆಣ್ಣೂ ವಾತ್ಸಲ್ಯವಿರಬಾರದೇ 
           ನಾನೂ ಅಬಲೆ ನೀನೂ ಪ್ರಭಲೇ ಅನುಕಂಪವಿರಬಾರದೇ 
           ಬದುಕಲ್ಲಿ ನಿನ್ನೇ ಬೆಳಕಿಲ್ಲ ಮುಂದೆ ಕೋಪ ಪ್ರತಾಪ ಈ ಬಡಪಾಯಿ ಮೇಲೇತಕೆ 
           ನೀನೂ ಹೆಣ್ಣೂ ನಾನು ಹೆಣ್ಣೂ ವಾತ್ಸಲ್ಯವಿರಬಾರದೇ 

ಗಂಡು : ಧಕ್ಷ ದಾಕ್ಷಾಯಿಣಿ ಬಿಕ್ಷಾ ದೃಷ್ಟಾ ರಕ್ಷಾ ವರಪ್ರದಾ 
            ದಕ್ಷಿಣಾ ದಕ್ಷಿಣಾರಾಜ್ಯ ದಕ್ಷಿಣಾಮೂರ್ತಿ ರೂಪಿಣೀ 
            ದಂಡಾಚ ದಮಯತ್ರೀಚ ದಂಡನೀ ದಮನಪ್ರೀಯ 
            ದಂಡತಾ ಪುಣ್ಯನಿಲಯ ದಂಡತಾತೀತ ವಿನಾಶಿನೀ .. 

ಹೆಣ್ಣು :  ಹಸಿವು ದಣಿವು ಮರೆವೆ ನಿನ್ನಾ ಜಗಕೇ....       
           ನಿದಿರೇ ಕನಸೂ ತೊರೆವೆ ನಿನ್ನಾ ಪ್ರಗತಿ 
            ಅಪವಾದವೆಂಬ ಸೆರೆವಾಸ ಬಿಡಿಸೂ...   
            ನನ್ನಾ ಪಡೆದಾ ಜನುಮಾ ಏನೋ ತಿಳಿಯೇ 
            ಪಡೆದಾ ಪಾಪ ಪುಣ್ಯ ಏನೋ ಅರಿಯೇ .. 
            ಅಪರಾಧಿಯೆಂಬಾ ಅಜ್ಞಾನ ಅಳಿಸೂ 
            ಬಡಜೀವೀ ಮೇಲೆ ಬ್ರಹ್ಮಾಸ್ತ್ರವೇನೋ  
            ಶಾಪ ಆರೋಪ ಈ ನಿರ್ದೋಷಿ ಮೇಲೇತಕೆ 
           ನೀನೂ ಹೆಣ್ಣೂ ನಾನು ಹೆಣ್ಣೂ ವಾತ್ಸಲ್ಯವಿರಬಾರದೇ 

ಗಂಡು : ಚಂಡೇಶ್ವರೀ ಚಂಡಮಾತಾ ಚಂಡರುಂಡ ವಿನಾಶಿನೀ 
            ಚಕೋರಾಕ್ಷಿ ಚಿರ ಪ್ರೇತಾ ಚತುರಾ ಚತುರಾಹತಾ 
            ಚಿಂತಾ ಚಿತ್ತಸ್ಪರ್ಶಮಣಿ ಚಿಂತಿತಾ ಫಲಪ್ರದಾ 
            ಶಾಂತೆಹೇ ಚಂಪಕ ಪ್ರೀತ ಚಂಡಿ ಚಂಡಾಘ್ರಹಾಸಿನೀ .. 
   
ಹೆಣ್ಣು : ಸತ್ಯ ಮಿತ್ಯ ಎರಡೂ ನಿನ್ನಾ ಜೀವಾ 
          ನಿನ್ನಾ ಗುಡಿಯೇ ನನಗೇ ನ್ಯಾಯಸ್ಥಾನ 
          ವಾದ ವಿವಾದ ನಾ ಪಾಡಲಾರೇ.. 
          ನೊಂದ ಮನದಾ ಒಳಗೆ ಬೆಂಕಿಯ ಜ್ವಾಲೇ       
          ಪ್ರೀತಿಯ ಕೊಡದ ನಿನಗೇ ಹೂವಿನ ಮಾಲೇ 
          ಸ್ತ್ರೀ ಜಾತಿಗೀರುವ ಅಭಿಮಾನ ಉಳಿಸು 
          ಅಣು ಮಾತ್ರ ನಾನೂ ಬ್ರಹ್ಮಾಂಡ ನೀನೂ 
          ಸಾಕು ಬೀಸಾಕು ಆ ಅಧಿಕಾರನಿನಗೆಲ್ಲಿದೇ .. 
          ನೀನೂ ಹೆಣ್ಣೂ ನಾನು ಹೆಣ್ಣೂ ವಾತ್ಸಲ್ಯವಿರಬಾರದೇ 
          ನಾನೂ ಅಬಲೆ ನೀನೂ ಪ್ರಭಲೇ ಅನುಕಂಪವಿರಬಾರದೇ 
ಇಬ್ಬರು: ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ವಿಶ್ವನುತೇ.. 
            ಗಿರಿವರ ವಿಂಧ್ಯಸಿರೋಧಿ ನಿವಾಸಿನೀ .. ವಿಷ್ಣು ವಿಲಾಸಿನಿ ಜಿಷ್ಣುನುತೇ 
            ಭಗವತೀ ಹೇ ಸ್ಥಿತಿ ಕಂಠ ಕುಟುಂಬಿನೀ ಭೂರಿ ಕುಟುಂಬಿನಿ ಭೂರಿ ಕೃತೇ .. 
            ಜಯ ಜಯ ಹೇ ಮಹಿಷಾಸುರ ಮರ್ಧಿನಿ ರಮ್ಯಕ ಪರ್ದಿನಿ ಶೈಲಸುತೇ  
------------------------------------------------------------------------------------------------------------------

ಚಿತ್ರಲೇಖ - (೧೯೯೨) - ರಾಮನೇನ್ನಲೇನೂ ನಿನ್ನ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ 

ಹೆಣ್ಣು : ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
          ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
ಗಂಡು : ರಾಮ ಶ್ಯಾಮರೂ ... ದೇವರಾದರೂ .. 
ಹೆಣ್ಣು : ದೇವರಲ್ಲವೇನೂ ನೀನು ನನ್ನ ನೊಂದ ಬಾಳಿಗೇ .. 
ಗಂಡು : ಜಾಣೆ ಅನ್ನಲೇನೂ ನಿನ್ನ ಮುಗ್ದೇ ಅನ್ನಲೇನೂ .. 
            ಜಾಣೆ ಅನ್ನಲೇನೂ ನಿನ್ನ ಮುಗ್ದೇ ಅನ್ನಲೇನೂ .. 
ಹೆಣ್ಣು : ದಾಸಿ ಎಂದರೇ .. ಏನೂ ತೊಂದರೇ ... 
ಗಂಡು : ಕಾಳಿದಾಸನಾಗುವಾಸೇ ನಿನ್ನ ಕಾವ್ಯ ಹಾಡಲೂ .. 
    
ಹೆಣ್ಣು : ತಪಿಸಿದೆ ನಾನೂ .. ಹೂವಾದರೂ ಕಂಪಿಲ್ಲವೇ .. ತಂಪಿಲ್ಲವೇ .. 
           ಗೆಳೆಯೆನೇ ನೀನೂ .. ಹೂಗಂಧವ ಕಂಪಂತಿದೆ ಇನಿ ಕರೆದಿದೆ 
           ನವಚೈತ್ರ ಬಂದಿದೆ ಬದುಕೆಲ್ಲಾ ಚಿಗುರಿದೆ 
           ಇನ್ನ ನಾನು ತಿಳಿಯದೇ .. ಮನಸೆಲ್ಲಾ ತೇಲಿದೆ.. 
ಗಂಡು : ಆ.. ಆರು ಋತುಗಳ ಸಂಗಮ ಜೀವನ.. ನೋವು ನಲಿವಿಗೇ ಅವುಗಳೇ ಕಾರಣ 
ಹೆಣ್ಣು : ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
          ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
ಗಂಡು : ರಾಮ ಶ್ಯಾಮರೂ ... ದೇವರಾದರೂ .. 
ಹೆಣ್ಣು : ದೇವರಲ್ಲವೇನೂ ನೀನು ನನ್ನ ನೊಂದ ಬಾಳಿಗೇ .. 

ಹೆಣ್ಣು : ಬಯಸಿದೇ ನಾನೂ .. ಮಧುಪಾನವ ನೀ ನೀಡಿದೇ .. ಅನುರಾಗವ...  
          ಬೇಡಿದೆ ನಾನೂ .. ಅಣುಮಾತ್ರವ ನೀ ನೀಡಿದೆ ಆಕಾಶವ 
          ಇದು ಪುಣ್ಯ ಎನ್ನಲೇ.. ಸೌಭಾಗ್ಯ ಎನ್ನಲೇ.. ಅತೀ ಆಸೆ ತಂದಿಹ ಆನಂದ ಎನ್ನಲೇ 
ಗಂಡು : ಆ.. ಆಸೆಯಿಲ್ಲದೇ ..  ಸುಮ್ನೇ ಈ ಜೀವನ.... ತೃಪ್ತಿ ಇದ್ದರೇ .. ಅಲ್ಪವೂ ಪೂರ್ಣ..    
ಹೆಣ್ಣು : ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
          ರಾಮನನ್ನಲೇನೂ ನಿನ್ನ ಶ್ಯಾಮನೆನ್ನಲೇನೂ 
ಗಂಡು : ರಾಮ ಶ್ಯಾಮರೂ ... ದೇವರಾದರೂ .. 
ಹೆಣ್ಣು : ದೇವರಲ್ಲವೇನೂ ನೀನು ನನ್ನ ನೊಂದ ಬಾಳಿಗೇ .. 
ಗಂಡು : ಜಾಣೆ ಅನ್ನಲೇನೂ ನಿನ್ನ ಮುಗ್ದೇ ಅನ್ನಲೇನೂ .. 
            ಜಾಣೆ ಅನ್ನಲೇನೂ ನಿನ್ನ ಮುಗ್ದೇ ಅನ್ನಲೇನೂ .. 
ಹೆಣ್ಣು : ದಾಸಿ ಎಂದರೇ .. ಏನೂ ತೊಂದರೇ ... 
ಗಂಡು : ಕಾಳಿದಾಸನಾಗುವಾಸೇ ನಿನ್ನ ಕಾವ್ಯ ಹಾಡಲೂ .. 
-----------------------------------------------------------------------------------------------------------------

ಚಿತ್ರಲೇಖ - (೧೯೯೨) - ಓ ಮಂದಾಕಿನಿ ನನ್ನಾಕೆ ನೀ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. 

ಓಹೋ .. ಮಂದಾಕಿನೀ .. ನನ್ನಾಕೇ ನೀ ನಾನಾಗೇ ನಿನ್ನ ಏನೂ ಕೇಳೋದಿಲ್ಲಾ 
ನೀನಾಗೇ ನೀಡಬೇಡ ಅನ್ನೊದಿಲ್ಲಾ ಇಂದಾದರೂ ಮುಂದಾದರೂ ಪಲ್ಲಂಗ ಸೇರಬೇಕೂ 
ಓಹೋ .. ಮಂದಾಕಿನೀ .. ನನ್ನಾಕೇ ನೀ 

ಮೇಘಗಳ ರಂಗಾವಳಿ ತಾರೆಗಳ ದೀಪಾವಳೀ 
ದಿನಕರನ ಬಿಸಿಯೋಗರ ಚಂದಿರನ ಪ್ರಣಯಾತುರ.. 
ಪ್ರತಿದಿನವೂ ಇರುವುದೂ ಯೌವ್ವನವೂ ಸರಿವುದೂ 
ಮದುವೆಗಳ ಮಾಧುಮಾಸವೂ ಮಿಲನಗಳ ಶುಭಕಾಲವೂ 
ಕೋಗಿಲೆಯ ಗಾನಾಮೃತ ಮಂಜುಮಳೆ ಪಂಚಾಮೃತ 
ಪ್ರತಿವರುಷವಿರುವುದೂ ಯೌವ್ವನವೂ ಸರಿವುದೂ.. 
ಓಹೋ .. ಮಂದಾಕಿನೀ .. ನನ್ನಾಕೇ ನೀ ನಾನಾಗೇ ನಿನ್ನ ಏನೂ ಕೇಳೋದಿಲ್ಲಾ 
ನೀನಾಗೇ ನೀಡಬೇಡ ಅನ್ನೊದಿಲ್ಲಾ ಇಂದಾದರೂ ಮುಂದಾದರೂ ಪಲ್ಲಂಗ ಸೇರಬೇಕೂ 
ಓಹೋ .. ಮಂದಾಕಿನೀ .. ನನ್ನಾಕೇ ನೀ 

ಬಯಕೆಗಳ ಬಯಲಾಟದಿ ಕನಸುಗಳ ಕೋಲಾಟಕೇ 
ನಾಚಿಕೆಯ ನವಿಲೂರಲೀ ಮನ್ಮಥನ ಹುಲಿ ವೇಷಕೇ.. 
ಕರೆಯುತಿದೇ ಯೌವ್ವನ ಸಿಂಗರಿಸಿ ಬರುವೇಯಾ .. 
ಸಂಗಮದ ನಡುನೀರಲೀ ಪ್ರೇಮಿಗಳ ಶಯನೋತ್ಸವ 
ಮನಸುಗಳ ಅಂಬಾರಿಲಿ  ಮಿಥುನಗಳ ವಿಜಯೋತ್ಸವ 
ಪಡೆಯಲಿದೆ ಯೌವ್ವನ.. ಸಮ್ಮತಿಯ ತರುವೇಯಾ .. 
ಓಹೋ .. ಮಂದಾಕಿನೀ .. ನನ್ನಾಕೇ ನೀ ನಾನಾಗೇ ನಿನ್ನ ಏನೂ ಕೇಳೋದಿಲ್ಲಾ 
ನೀನಾಗೇ ನೀಡಬೇಡ ಅನ್ನೊದಿಲ್ಲಾ ಇಂದಾದರೂ ಮುಂದಾದರೂ ಪಲ್ಲಂಗ ಸೇರಬೇಕೂ 
ಓಹೋ .. ಮಂದಾಕಿನೀ .. ನನ್ನಾಕೇ ನೀ..  ಮಂದಾಕಿನೀ... ನನ್ನಾಕೇ ನೀ 
------------------------------------------------------------------------------------------------------------------

ಚಿತ್ರಲೇಖ - (೧೯೯೨) - ಸಾರಾಯಿ ಬಾಯಿಗೇ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ರಿ . 

ಕೋರಸ್ :  ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
                 ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
                 ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
                 ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
                 ಸಾಯೋದಕ್ಕೇ ಮುಂಚೆ ತಿಂದೂ ಸಾಯೀ ಕುಡಿದು ಸಾಯಿ ತಮ್ಮಾ 
                 ಕುಡಿದೂ ಸಾಯಿ ತಮ್ಮಾ ಇಲ್ಲಾ ಕೆಟ್ಟು ಸಾಯಿ ತಮ್ಮಾ 
                 ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
                 ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  

ಕೋರಸ್ :  ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
                 ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
ಗಂಡು : ಹೋಡೆದ್ರೆ ಭಾಗ್ಯ ಹೊಡೆದೂ ಇಲ್ವಾ ನಿನ್ನ ಆಸೇ ತೀರ ಕೆಟ್ಟತೂ 
            ಹಿಡಿದ್ರೇ ರಂಭೇ ಹಿಡಿಕೋ ಇಲ್ವಾ ನಿನ್ನ ಒಂಬತ್ತ ರಂಧ್ರ ಮುಚ್ಚಕೋ 
            ಸ್ವರ್ಗ ಹಿಡಿಯೋಕ್ ಹೋಗಿ ಏಡಬಡಂಗಿ ಯಾಕೇ ಮಧ್ಯನ್ಯಾಕ ಬೇಡಾ    
             ಸಾಯೋದಕ್ಕೇ ಮುಂಚೆ ತಿಂದೂ ಸಾಯೀ ಕುಡಿದು ಸಾಯಿ ತಮ್ಮಾ 
             ಕುಡಿದೂ ಸಾಯಿ ತಮ್ಮಾ ಇಲ್ಲಾ ಕೆಟ್ಟು ಸಾಯಿ ತಮ್ಮಾ 
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  

ಕೋರಸ್ :  ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
                 ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
ಗಂಡು : ಹೆಣ್ಣೂ ಹೊನ್ನೂ ಮಣ್ಣೂ ಕಂಡ್ರೆ ಅಲ್ಲರೋಸೇ ಮತ್ತೊಂದ ಕಣ್ಣೂ 
            ಮಂತ್ರಕೇ ಉದುರಬೇಕ ಹಣ್ಣೂ ಇಲ್ವಾ ಶುರುವಾಗತೈತ ಹೊಟ್ಟ್ಯಾಗ ಹುಣ್ಣು 
            ಎಲ್ಲಾ ಮುಂದಕ ಹೋಗಿ ಗಂಟಲಲ್ಲಿ ಇಂದ್ದಂಗ್ಯಾಕೀ  ಸತ್ತು ಬದುಕಿ ಬ್ಯಾಡ   
             ಸಾಯೋದಕ್ಕೇ ಮುಂಚೆ ತಿಂದೂ ಸಾಯೀ ಕುಡಿದು ಸಾಯಿ ತಮ್ಮಾ 
             ಕುಡಿದೂ ಸಾಯಿ ತಮ್ಮಾ ಇಲ್ಲಾ ಕೆಟ್ಟು ಸಾಯಿ ತಮ್ಮಾ 
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  

ಕೋರಸ್ :  ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
                 ಜಕ್ಕಣ್ಣಕ್ಕ ನಕ್ಕ ಡಂಗಡಂಗಣಕ್ಕ ನಕ್ಕನಕ್ಕ ನಕ್ಕನಾ 
ಗಂಡು : ಹೋಗೋ ಜೀವ ಇರತ್ತದ ಅಹಾ ಇದ್ರೇ ಹೊಸ ಜೀವ ಈಗ ಬರ್ತದ 
            ಓದೋ ಜಾತಿ ಓದಲೀ ಅಹಾ ತಿಳೋಕ ಇಲ್ಲಿ ಬರೋರು ಕಮ್ಮಿ ಆಗಲೀ  
            ಗೊಜ್ಜು ಬೊಜ್ಜು ಹೋಗಲೀ ಕುಡುಕರ ರಾಜ್ಯ ಬರಲೀ ಬಿಟ್ಟಿ ಸಾರಾಯಿ ಸಿಗಲೀ .. 
             ಸಾಯೋದಕ್ಕೇ ಮುಂಚೆ ತಿಂದೂ ಸಾಯೀ ಕುಡಿದು ಸಾಯಿ ತಮ್ಮಾ 
             ಕುಡಿದೂ ಸಾಯಿ ತಮ್ಮಾ ಇಲ್ಲಾ ಕೆಟ್ಟು ಸಾಯಿ ತಮ್ಮಾ 
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
             ಸಾರಾಯಿ ಬಾಯಿಗೆ ಭೂಷಣ ತತ್ತಾರೋ ಕೈಯಿಗೇ ಜಾತಕ  
             ಸಾಯೋದಕ್ಕೇ ಮುಂಚೆ ತಿಂದೂ ಸಾಯೀ ಕುಡಿದು ಸಾಯಿ ತಮ್ಮಾ 
             ಕುಡಿದೂ ಸಾಯಿ ತಮ್ಮಾ ಇಲ್ಲಾ ಕೆಟ್ಟು ಸಾಯಿ ತಮ್ಮಾ 
------------------------------------------------------------------------------------------------------------------

ಚಿತ್ರಲೇಖ - (೧೯೯೨) - ಹೆಣ್ಣೆಂದರೇ ರಾಮಾಯಾಣ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ . 

ತಾಯಾದರೇನೂ ಸೋಸೆಯಾದರೇನೂ ಹೆಣ್ಣೂ .. 
ಉರಿಕಾರವೇನೂ ಕಡು ಮೂಢಜನರ ಕಣ್ಣೂ .. 
ಮಗಳಾದರೇನೂ ಸೊಸೆಯಾದರೇನೂ ಹೆಣ್ಣೂ ... 
ಹತವಾದ ಹೇಡಿ ಎಸೆದಾರೂ ಕಲ್ಲು ಮಣ್ಣೂ ... 
ಹೆಣ್ಣೆಂದರೇ ರಾಮಾಯಣ ಸೀತೆಯ ವನವಾಸ 
ಸ್ತ್ರೀ ಎಂದರೇ ಮಹಾಭಾರತ ದ್ರೌಪತಿ ಅವಮಾನ 
ಕೀಳಾದಳು ಹೆಣ್ಣೂ ಆ ಕಾಲಕೂ ಧೂಳಾದಳೂ ಹೆಣ್ಣೂ ಈ ಕಾಲಕೂ ಹೆಣ್ಣಿಗೇ ಉಳಿವೇಲ್ಲೀ ... ... 
ಹೆಣ್ಣೆಂದರೇ ರಾಮಾಯಣ ಸೀತೆಯ ವನವಾಸ 
ಸ್ತ್ರೀ ಎಂದರೇ ಮಹಾಭಾರತ ದ್ರೌಪತಿ ಅವಮಾನ 

(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. )
ಸುಗುಣೆ ನಾನೂ ಎಂದಳು ಸೀತೆ ಬೆಂಕಿಯ ಮೇಲೇರಿ... ಜೀವದ ಭಯವೇರಿ 
ಕಟುಕ ಎಂದೂ ಸಾರಿದ ರಾಮ ಬಸುರಿಯ ಹೊರ ದೂಡಿ ನಿಂದೆಗೇ ದಯ ನೀಡಿ 
ನೋವನೂ ತುಂಬಿದಳಂತೆ ಸೀತೆಯ ರೂಡಿಯ ಫಲವಾಗಿ.. (ಆಆಆ.. ಆಆಆ.. )
ಮಾಯೆಯ ತುಂಬಿದಳಂತೆ ಸೀತೆಯ ನೋವಿನ ಅರಿವಾಗೀ.. (ಆಆಆ.. ಆಆಆ....)  
ನಿತ್ಯ ಅವತ್ತೂ ಅಗ್ನಿಪರೀಕ್ಷೆಯೇ.. ಸುಖ ಕಣ್ಣಿರೂ ಬರೀ ನಿರೀಕ್ಷೆಯೇ  ಹೆಣ್ಣಿಗೇ ಸುಖವೆಲ್ಲಿ...  
ಹೆಣ್ಣೆಂದರೇ ರಾಮಾಯಣ ಸೀತೆಯ ವನವಾಸ 
ಸ್ತ್ರೀ ಎಂದರೇ ಮಹಾಭಾರತ ದ್ರೌಪತಿ ಅವಮಾನ 

ಹೆಣ್ಣೇ ಸಹನೆ ಶಾಂತಿ ಎಂದೂ ನುಡಿದರೂ ಕವಿಯಂತೇ.. ತಡೆಯಲು ನುಡಿದಂತೇ .. 
ಹೆಣ್ಣೇ ವಿದ್ಯೆಯ ಬುದ್ದಿ ಮಡದಿ ಎನ್ನುವರೂ ಋಷಿಯಂತೇ ... ಹಣವರು ಮರೆತಂತೇ .. 
ನಿಂದೆಗೆ ಸಿಲುಕಿದ ಹೆಣ್ಣೂ ತವರಿನ ಮನೆಗೂ ಹೊರೆಯೆಮ್ಮಾ (ಆಆಆ.. ಆಆಆ....)
ಮಾನಕೇ ಹೆದರುವ ಹೆಣ್ಣೂ ಕೊರಳಿಗೆ ಸಂಚಿದೇ ಉರುಳಮ್ಮಾ (ಆಆಆ.. ಆಆಆ....)
ದೇವಿಯೆಂದೂ ಪೂಜೆ ಮಾಡೋದಂತೇ ದೆವ್ವ ಎಂದೂ ದೂರ ಇಡೋದಂತೆ ಹೆಣ್ಣಿಗೇ ನೆರಳೆಲ್ಲಿ.... ಆಆಆ   
ಹೆಣ್ಣೆಂದರೇ ರಾಮಾಯಣ ಸೀತೆಯ ವನವಾಸ 
ಸ್ತ್ರೀ ಎಂದರೇ ಮಹಾಭಾರತ ದ್ರೌಪತಿ ಅವಮಾನ 
ಕೀಳಾದಳು ಹೆಣ್ಣೂ ಆ ಕಾಲಕೂ ಧೂಳಾದಳೂ ಹೆಣ್ಣೂ ಈ ಕಾಲಕೂ ಹೆಣ್ಣಿಗೇ ಉಳಿವೇಲ್ಲೀ ... ... 
ಹೆಣ್ಣೆಂದರೇ ರಾಮಾಯಣ ಸೀತೆಯ ವನವಾಸ 
ಸ್ತ್ರೀ ಎಂದರೇ ಮಹಾಭಾರತ ದ್ರೌಪತಿ ಅವಮಾನ 
------------------------------------------------------------------------------------------------------------------ 

No comments:

Post a Comment