1124. ಕಾಲೇಜ್ ಹೀರೋ (೧೯೯೦)

ಕಾಲೇಜ್ ಹೀರೋ ಚಿತ್ರದ ಹಾಡುಗಳು
  1. ಕೂಗಿದಳು ನನ್ನ ಕೂಗಿದಳು
  2. ಬಯಾಲಜಿ ಕ್ಲಾಸಿನಲ್ಲಿ ಪ್ರೇಮಾಲಾಜಿ
  3. ಬುಕ್ಕಮ್ಮಾ ಬುಕ್ಕಮ್ಮಾ ನಿನ್ನ ಕೈಲ್ಯಾವ ಬುಕೈತಮ್ಮಾ
  4. ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ 
  5. ಕಮಲಾ ಕಮಲಹಾಸನೇ
ಕಾಲೇಜ್ ಹೀರೋ (೧೯೯೦) - ಕೂಗಿದಳು ನನ್ನ ಕೂಗಿದಳು
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, 

ಕೂಗಿದಳು ನನ್ನ ಕೂಗಿದಳು ಕಾಲೇಜಿಗೇ ಬೇಕಾದವಳೂ ಓಯ್ ಓಯ್ ಓಯ್
ಬೆಳ್ಳನೇ ಹಾಳೆಯ ಹಾಗಿರೋ ಹೃದಯದ ಮೇಲೆ ಗೊಂಬೆಯ ಗೀಚಿದಳೂ
ನೋಡಿದಳು ನನ್ನ ನೋಡಿದಳು ಮ್ಯಾರೇಜಿಗೇ ರೆಡಿಯಾದವಳು ಅರೆರೇ ..
ಒಂಟಿಯ ಕಂಬದ ಹಾಗಿರೋ ಬದುಕಿನ ಮೇಲೆ ದೀಪವ ಹಾಕಿದಳು
ಕೂಗಿದಳು ನನ್ನ ಕೂಗಿದಳು ಕಾಲೇಜಿಗೇ ಬೇಕಾದವಳೂ ಓಯ್ ಓಯ್ ಓಯ್

ಕ್ಲಾಸಲ್ಲಿ ಬೋರ್ಡನ್ನೇ ನೋಡೋಳು ಟೀಚರಿಗೇ ಕಿವಿ ಮಾತ್ರ ಕೊಟ್ಟೋಳು 
ಕೂತಿದ್ದರೆ ಜಡೇ ಅಲ್ಲಾಡದು ಇವಳಿದ್ದರೇ ಪಾಠ ತಲೆಗ್ಹೋಗದು 
ಹುಡುಗರಿಗವಳೇ ಬೋರ್ಡ ಇವಳಿಗೆ ನಾನೇ ಗ್ಲಾಸು 
ತೋರಿದಳು ಹಲ್ಲು ತೋರಿದಳು ಅಯ್ಯಯ್ಯಯ್ಯೊ ಮುದ್ದಿಸಲು ಸಿದ್ಧವಾದವಳೂ 
ಜೇನಿನ ಮೇಣದ ಹಾಗಿರೋ ಆಸೆಯ ಮೇಲೆ ಕಡ್ಡಿಯ ಗೀರಿದಳು 
ಕೂಗಿದಳು ನನ್ನ ಕೂಗಿದಳು ಕಾಲೇಜಿಗೇ ಬೇಕಾದವಳೂ ಓಯ್ ಓಯ್ ಓಯ್ 

ಲೈಬರಿ ಬುಕ್ಕಲಿ ಮುಳುಗೋಳು ಬಾಯ್ಮುಚ್ಚಿ ಆನಂದ ನುಂಗೋಳು 
ಹೀರೋಗಳಾ ಕಥೆ ಓದುತ್ತಾಳೆ ವಿಲ್ಲಾನಗಳು ಇವಳೇ ಓದುತ್ತಾಳೆ 
ಅವರಿಗೆ ಇವಳೇ ಬುಕ್ಕು ನನಗಿದೆ ಬುಕ್ಕಿನ ಲಕ್ಕು 

ಹೆಣ್ಣು : ಹೀರೋ ... ಕಾಲೇಜ್ ಹೀರೋ ... ಬಾರೋ .. ಕಾಲೇಜ್ ಹೀರೋ 
ಗಂಡು : ಯಾಹೂ... ನೀಡಿದಳು ಸಿಗ್ನಲ್ ನೀಡಿದಳು ಹೇಯ್  ಹೇಯ್ ಇಂಜನ್ನಿಗೇ ಭೋಗಿಯಾದವಳೂ 
            ರೈಲಿನ ಕಂಬಿಯ ಹಾಗಿರೋ ಬಾಳಿನ ಮೇಲೆ ಸಿಟಿಯ ಊದಿದಳು 
          ಕೂಗಿದಳು ನನ್ನ ಕೂಗಿದಳು ಕಾಲೇಜಿಗೇ ಬೇಕಾದವಳೂ ಓಯ್ ಓಯ್ ಓಯ್
         ಬೆಳ್ಳನೇ ಹಾಳೆಯ ಹಾಗಿರೋ ಹೃದಯದ ಮೇಲೆ ಗೊಂಬೆಯ ಗೀಚಿದಳೂ 
         ನೋಡಿದಳು ನನ್ನ ನೋಡಿದಳು ಮ್ಯಾರೇಜಿಗೇ ರೆಡಿಯಾದವಳು ಅರೆರೇ ..
         ಒಂಟಿಯ ಕಂಬದ ಹಾಗಿರೋ ಬದುಕಿನ ಮೇಲೆ ದೀಪವ ಹಾಕಿದಳು
        ಕೂಗಿದಳು ನನ್ನ ಕೂಗಿದಳು ಕಾಲೇಜಿಗೇ ಬೇಕಾದವಳೂ ಓಯ್ ಓಯ್ ಓಯ್
--------------------------------------------------------------------------------------------------------------------------

ಕಾಲೇಜ್ ಹೀರೋ (೧೯೯೦) - ಬಯಾಲಜಿ ಕ್ಲಾಸಿನಲ್ಲಿ ಪ್ರೇಮಾಲಾಜಿ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾ ಹಂಸಲೇಖ 

ಕೋರಸ್ : ಬಯಾಲಜಿ ಕ್ಲಾಸಿನಲಿ ಪ್ರೇಮಾಲಜಿ ಪ್ರೇಮಾಲಜಿ ಪಾಠದಲಿ ಉಂತಾನಾಜಿ
                ಬಯಾಲಜಿ ಕ್ಲಾಸಿನಲಿ ಪ್ರೇಮಾಲಜಿ ಪ್ರೇಮಾಲಜಿ ಪಾಠದಲಿ ಉಂತಾನಾಜಿ
ಹೆಣ್ಣು : ಯಾವ ಊರನವ ಮಾಯಾ ಮಾಡದವಾ ಸನ್ನೆಯಲಿ ಕೆನ್ನೆಯಲಿ ಗಾಯಾ ಮಾಡಿದಾ
ಗಂಡು : ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಈ ಸುತ್ತ ಮುತ್ತ ಮುತ್ತಿನಲ್ಲಿ ನಾ ಜಾಣ
           ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಈ ಸುತ್ತ ಮುತ್ತ ಮುತ್ತಿನಲ್ಲಿ ನಾ ಜಾಣ
            ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಜಾಣ ಚೆಲುವೆರೆಗೆ ನಾನಲ್ವೇ ಪ್ರಾಣ
            ನಾ ಮೆಚ್ಚಿಕೊಂಡ ಹೆಣ್ಣಿಗೇ ಪರಮಾನ್ನ ಗುರಿ ತಪ್ಪೊಲ್ಲ ನನ್ ಹೂವಿನ ಬಾಣ
           ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಈ ಸುತ್ತ ಮುತ್ತ ಮುತ್ತಿನಲ್ಲಿ ನಾ ಜಾಣ

ಗಂಡು : ಕಟ್ಟಡದ ಪಟ್ಟಣ ಕೆಲಸಕ್ಕಿಲ್ಲಿ ಭಣ ಭಣ ಕೆಲಸವೂ ಸಿಕ್ಕರೇ ಪುಣ್ಯವಂತ ನಾ
            ನೀ ಬಂದರೇ ಕಾಡಿನಲ್ಲಿ ಕಾಫಿ ಬೆಳೆಯುವೇ
            ಹೂಂ ಅಂದರೇ ಕಣಿವೆಯಲ್ಲಿ ಮೆಣಸು ಬೆಳೆಯುವೆ
            ನೀ ನಕ್ಕರೇ ಉಕ್ಕೋ ನದಿಗೆ ಕಟ್ಟೇ ಹಾಕುವೇ
            ಸೈ ಅಂದರೇ ಗುಡ್ಡ ಕಡಿದು ಮಟ್ಟ ಮಾಡುವೇ
           ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಈ ಸುತ್ತ ಮುತ್ತ ಮುತ್ತಿನಲ್ಲಿ ನಾ ಜಾಣ

ಗಂಡು : ನಾ ನೇಗಿಲ ಹಿಡಿದು ಗದ್ದೆಗೆ ಹೋದ್ರೇ ಬಲು ಜಾಣ 
            ನಂಗೆ ಬೇಸಾಯ ಅಂದ್ರೇನೆ ಪ್ರಾಣ ನಾ ಉಳುವುದಕ್ಕೆ ನಿಂತೇ ಅಂದ್ರೇ ಭಾರಿ ಕೋಣ 
            ಕಾಳು ಬಿತ್ತೋರ್ಗೆ ನಾನಲ್ವೇ ಪ್ರಾಣ 
           ಚಿನ್ನಾ ಕೇಳ ಬೇಡವೇ ನನ್ನಾ ಪುರಾಣ ಈ ಸುತ್ತ ಮುತ್ತ ಮುತ್ತಿನಲ್ಲಿ ನಾ ಜಾಣ 
ಕೋರಸ್ : ಬಾಳಾ ಹುಷಾರ್ ಬಾಳಾ ಹುಷಾರ್ ಬಾಳಾ ಹುಷಾರ್ ಮೇಷ್ಟ್ರು ಬಂದ್ರೂ ಭಾಳಾ ಹುಷಾರ್ 
ಗಂಡು : ೧೯೩೦ರಲ್ಲಿ ಉಪ್ಪಿನ ಚಳುವಳಿ ೧೯೪೦ರಲ್ಲಿ ಇಷ್ಟಾ ಚಲಿ ಲೀಲೆ 
            ಬಾಷೆ ರಾಜ್ಯ ಭಾಗ ಭಾಗ ಯಾವಾಗ ಆಯಿತು ೬೦ರಲ್ಲಿ ಒಂದೇ ನಾಡು ಅರ್ಧ ಆಯಿತು 
            ಏಯ್ ಷಹಜಾನ ಹುಟ್ಟಿದ ಅವನು ಏನು ಕಟ್ಟಿದ ಅಮೃತ ಶಿಲೆಯಲ್ಲಿ ಗುಡಿಯ ಕಟ್ಟಿದ 
            ಮಮತಾಜ ಪ್ರೇಮದಾ ನೆನಪು ಉಳಿಸಿದಾ 
           ಬೇಲೂರಿದು ಹೊಯ್ಸಳ ಕಲೆಯ ಆಲಯ ಮೈಸೂರು ರಾಜಋಷಿಯ ನೆನಪಿನಾಲಯ 
           ವಿಶ್ವೇಶ್ವರಯ್ಯ ಕಟ್ಟಿಹೋದ ಕನ್ನಂಬಾಡಿಗೆ ನಾನು ನೀನು ಕಟ್ಟೋಣವೇ ಋಣದ ಬಾಡಿಗೆ 
ಕೋರಸ್ : ಚೆನ್ನಾಗಿದೆ ಚೆನ್ನಾಗಿದೆ ಚೆನ್ನಾಗಿದೆ ಕ್ಲಾಸು ಇಲ್ಲಿ ಶಿಸ್ತಿನಲ್ಲಿ ಮುಂದು ಇದೆ 
--------------------------------------------------------------------------------------------------------------------------

ಕಾಲೇಜ್ ಹೀರೋ (೧೯೯೦) - ಬುಕ್ಕಮ್ಮಾ ಬುಕ್ಕಮ್ಮಾ ನಿನ್ನ ಕೈಲ್ಯಾವ ಬುಕೈತಮ್ಮಾ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, 

ಬುಕ್ಕಮ್ಮಾ ಬುಕ್ಕಮ್ಮಾ ...
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..
ನೀನು ಉಂ ಅಂದ್ರೇ ನಂಗೆ ಕ್ಷಮಾಪನೆ  ನೀ ಈ ಅಂದ್ರೇ ಕ್ಷೇಮಾ ಕಣೇ
ಇಷ್ಟಾದರೂ ಅಷ್ಟಾದರೂ ಎಷ್ಟಾದರೂ ನಾನು ನಿನ್ನೋನೇ
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..

ಪಾಪದ ಕೆನ್ನೆಗೆ ಕೋಪವೇ ಭಾರ ಕೋಪದ ಮನಸಿಗೆ ತಾಪವೇ ಭಾರ 
ತಾಪದ ಮೈಯಿಗೇ ವಿರಹವೇ ಭಾರ ವಿರಹವು ಕರಗುವ ಮಂತ್ರವ ಹೇಳುವೇ 
ಬಾ ಪ್ರಿಯೇ ಬಾ ಪ್ರಿಯೇ ಬಾ ಪ್ರಿಯೇ  ಬಾ 
ಗುರುವಿನ ಕಾಣಿಕೆ ಕೇಳದೆ ಕಲಿಸುವೆ ಬಾ ಪ್ರಿಯೇ ಬಾ ಪ್ರಿಯೇ ಬಾ ಪ್ರಿಯೇ  ಬಾ 
ನೀನು ಛೀ ಅಂದ್ರೇ ನಂಗೆ ವನವಾಸವೇ ನೀನು ಸೈ ಅಂದ್ರೇ ನಂಗೆ ಕೈಲಾಸವೇ 
ಇಷ್ಟಾದರೂ ಕಷ್ಟಾದರೂ ನಷ್ಟಾದರೂ ನಾನು ನಿನ್ನೋನೇ
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..

ಲೈಲಾ ನೀನು ಮಜನು ನಾನು ಮಜನು ಪ್ರೇಮದೇ ಭಿಕ್ಷೆಯು ನೀನು 
ಅರೇ ಪ್ರೇಮದ ಬಿಕ್ಷೆಯ ಭಕ್ಷಕ ನಾನು ಭಕ್ಷಕ ರಕ್ಷಕ ವೀಕ್ಷಕ ಶಿಕ್ಷಕ ನಾ ಪ್ರಿಯೆ ನಾ ಪ್ರಿಯೆ ನಾ 
ತಕ್ಷಣ ಕೆಲಸದ ಲಕ್ಷಣ ಹುಡುಗನು ನಾ ಪ್ರಿಯೆ ನಾ ಪ್ರಿಯೆ ನಾ 
ನೀನು ಕಣ್ಣಿಟ್ಟರೇ ನಾ ಕುರುಡಾ ಕಣೇ ನೀನು ಕೈ ಬಿಟ್ಟರೇ ಕುಂಟಾ ಕಣೇ 
ಗುಟ್ಟಾದರೂ ರಟ್ಟಾದರೂ ಕಟ್ಟಾದರೂ ನಾನು ನಿನ್ನೋನೇ 
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..
ನೀನು ಉಂ ಅಂದ್ರೇ ನಂಗೆ ಕ್ಷಮಾಪನೆ  ನೀ ಈ ಅಂದ್ರೇ ಕ್ಷೇಮಾ ಕಣೇ
ಇಷ್ಟಾದರೂ ಅಷ್ಟಾದರೂ ಎಷ್ಟಾದರೂ ನಾನು ನಿನ್ನೋನೇ
ಬುಕ್ಕಮ್ಮಾ ಬುಕ್ಕಮ್ಮಾಬುಕ್ಕಮ್ಮಾ ನಿನ್ನ ಕೈಲಾವ್ ಬುಕೈತಮ್ಮಾ
ಲಕ್ಕಮಾ... ಲಕ್ಕಮಾ ಲಕ್ಕಮ್ಮಾ.. ನಿನ್ನ ಲೂಕ್ ಇಲ್ದೇ ಲಕ್ಕಿಲ್ಲಮ್ಮಾ..
--------------------------------------------------------------------------------------------------------------------------

ಕಾಲೇಜ್ ಹೀರೋ (೧೯೯೦) - ಕೆಲಸವೊಂದೇ ನಿನ್ನ ಕೆಲಸ ಅದರ ಫಲವು ನಿನ್ನದಲ್ಲ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, 

ಗಂಡು : ಕೆಲಸವೊಂದೇ ನಿನ್ನ ಕೆಲಸ ಅದರ ಫಲವು ನಿನ್ನದಲ್ಲ
            ದಾನವರಿಗೆ ಮಾನವನೇ ಮಾರಕ ...  ಮಾನವನೇ ಮಾರಕ
            ಸಜ್ಜನರಿಗೇ ಈಶ್ವರನೇ ಸೇವಕ ... ಈಶ್ವರನೇ ಸೇವಕ
ಕೋರಸ್ : ಗೆಳೆಯ ಗೆಳೆಯ ಭಯ ಪಟ್ರೆ ನೀನು ಖಾಲಿ
                ದುನಿಯಾ ದುನಿಯಾ ದುನಿಯಾಕು ಮಾರೋ ಗೋಲಿ
ಗಂಡು : ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ
            ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ
           ಬುದ್ದಿ ಇದ್ದರೇ ಶಕ್ತಿ ಇರದೂ ಶಕ್ತಿ ಇದ್ದರೇ ಬುದ್ದಿ ಇರದೂ
           ಶಕ್ತಿ ಬೆಳೆಸು ತೋಳಿಗೇ ಬುದ್ದಿ ಬಳಸು ಬಾಳಿಗೇ
           ಶಾಲೆಯ ಒಂದು ಆಲಯ ತಿಳಿದರೆ ನೀನು ಸಾಕಯ್ಯಾ
          ವಿದ್ಯೆಯೊಂದು ಮಹಾಸಾಗರ ಅದಕೆ ಕೊನೆಯೇ ಇಲ್ಲ
          ಓದಿನಿಂದ ಬರುವುದು ವಿನಯ ವಿನಯದಿಂದ ಬದುಕಿಗೆ ಗೌರವ
ಕೋರಸ್ : ಗೆಳೆಯ ಗೆಳೆಯ ಭಯ ಪಟ್ರೆ ನೀನು ಖಾಲಿ
                ದುನಿಯಾ ದುನಿಯಾ ದುನಿಯಾಕು ಮಾರೋ ಗೋಲಿ
ಗಂಡು : ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ
            ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ

ಗಂಡು : ಕರಗೋ ಕರುಳಿನ ಮನವಿರಲಿ ಮರುಗೋ ಹೃದಯದ ನುಡಿ ಇರಲಿ 
            ನೋವುಂಡರಿಗೇ ಹೂವೂ ನೀ ನೋವಿಡುವವರಿಗೇ ಖಡ್ಗ ನೀ 
            ಜನರೇ ನಿನ್ನಯ ಪರಿವಾರ ಪಾಪಾ ಕಳೆವುದೇ ವ್ಯವಹಾರ 
           ಸಿಡಿದೇಳಲೀ ನಿನ್ನ ಪಾತ್ರವೂ ಹಿಂದಿದೆ ದೇವರ ಸೂತ್ರವೂ 
           ಕೆಲಸವೊಂದೇ ನಿನ್ನ ಕೆಲಸ ಅದರ ಫಲವು ನಿನ್ನದಲ್ಲ
           ದಾನವರಿಗೆ ಮಾನವನೇ ಮಾರಕ ...  ಮಾನವನೇ ಮಾರಕ
           ಸಜ್ಜನರಿಗೇ ಈಶ್ವರನೇ ಸೇವಕ ... ಈಶ್ವರನೇ ಸೇವಕ
ಕೋರಸ್ : ಗೆಳೆಯ ಗೆಳೆಯ ಭಯ ಪಟ್ರೆ ನೀನು ಖಾಲಿ
                ದುನಿಯಾ ದುನಿಯಾ ದುನಿಯಾಕು ಮಾರೋ ಗೋಲಿ
ಗಂಡು : ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ
            ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಓದಿದರೇ ಕಾಲೇಜ್ ಹೀರೋ
--------------------------------------------------------------------------------------------------------------------------

ಕಾಲೇಜ್ ಹೀರೋ (೧೯೯೦) - ಕಮಲಾ ಕಮಲಹಾಸನೇ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, 

ಕಮಲಾ .. ಕಮಲಾ .. ಕಮಲಹಾಸನೇ ರಜನಿ ... ರಜನಿ.. ರಜನಿಕಾಂತನೇ
ಗೋಪಿನಾಥ ಕಾಶಿನಾಥ ಘಾಸಿ ಕೊಟ್ಟರೇ ನಿನಗೇ ಘಾಸಿ ಕೊಟ್ಟರೇ
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ ಬಿಟ್ಟರೋ ಬಿಟ್ಟರೋ
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ

ವೈಜಯಂತಿಮಾಲಾ ಸಿಮ್ಮಿ ಪದ್ಮನಿ ಈಗ ಭೂತಕಾಲ ಅವರ ಕಲಿತೆ ನೀ 
ಹಿಂದಿ ಯಾರೋ ಹೇಮಾಮಾಲಿನಿ ನೋಡಿ ನೋಡಿ ಮೂರೂ ಹೊತ್ತು ಇಲ್ಲೇ ಮ್ಯಾಟನಿ 
ಸಿನಿಮಾ ನೋಡಿ ನೋಡಿ ಊರು ಕೆಟ್ಟಿತು ಟಿ.ವಿ. ನೋಡಿ ನೋಡಿ ಅಡಿಗೆ ಕೆಟ್ಟಿತು 
ಈಗ ಎಲ್ಲಿ ಲಂಗ ದಾವಣಿ ಸುತ್ತ ಮುತ್ತ ಟೀನಾ ಮೀನಾ ಎಲ್ಲ ರೂಪಿಣಿ 
ಓದಲೆಂದೂ ಕಾರು ಬೈಕಲಿ ಬಂದ ಹೈದರಿಲ್ಲಿ 
ಜಾಕಿಚಾನು ಚಾಕು ಚೈನು ಐಲು ಫೈಲು ಲೈನು ಲೈನು 
ಅರೆರೇ ಶಿವನೇ ಹೆಲ್ಪ್ ಹೆಲ್ಪ್ ಹೆಲ್ಪ್ 
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ 

ಮೂತಿ ನೋಡಿ ಮೂತಿ ನೀರು ಸಿಕ್ಕದು ಕೇಕೆ ಮಾತು ಕೇಳಿ ಸಿದ್ದ ನಿಲ್ಲದು 
ಇವರ ಬಾಯಿ ಭೂತ ಬಂಗಲೇ ಇವರ ಮಾತು ಹಳಸಿ ಹಳಸಿ ಹೋದ ತಂಗಳೂ 
ದುಡ್ಡಿನೋರ ಆಟ ದೊಂಬರಾಟವೂ ಪಾಠಕ್ಕಿಲ್ಲಿ ಟಾಟಾ ಬಂಢಾಟವು 
ಓತಿಕ್ಯಾತರಂತೇ ಬಂದರು ಓದಲಿಕ್ಕೆ ಕ್ಯಾತೆ ಮಾಡಿ ಚಿಂತೆ ಕೊಟ್ಟರೂ 
ಶಾಲೆ ನಮಗೆ ಶಿವಾಲಯ ಇವರಿಗೆ ಇದುವೇ ಮೃಗಾಲಯ 
ಒಂದು ದಂಡ ಫೀಸೂ ದಂಡ ಅನ್ನ ದಂಡ ಪಿಂಡ ದಂಡ ಅರೆರೇ ಶಿವನೇ ಹೆಲ್ಪ್ ಹೆಲ್ಪ್ ಹೆಲ್ಪ್ 
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ 
ಕಮಲಾ .. ಕಮಲಾ .. ಕಮಲಹಾಸನೇ ರಜನಿ ... ರಜನಿ.. ರಜನಿಕಾಂತನೇ
ಗೋಪಿನಾಥ ಕಾಶಿನಾಥ ಘಾಸಿ ಕೊಟ್ಟರೇ ನಿನಗೇ ಘಾಸಿ ಕೊಟ್ಟರೇ
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ ಬಿಟ್ಟರೋ ಬಿಟ್ಟರೋ
ವಿಠಲ ವಿಠಲ ಪಂಢರಾಪುರ ಕುಟಿಲಾ ಜಟಿಲಾ ಜನರ ತಂತರ
--------------------------------------------------------------------------------------------------------------------------

No comments:

Post a Comment