708. ಮುದ್ದಿನ ಮಾವ (೧೯೯೩)

ಮುದ್ದಿನ ಮಾವ ಚಿತ್ರದ ಹಾಡುಗಳು 
  1. ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
  2. ವರನೇ ಮದುವೇ ಮದುವೇ 
  3. ಆರಾಧಾನ ಪ್ರೇಮಾರಾಧನಾ 
  4. ಪ್ರೇಮಕ್ಕೆ ಶಾಲೆ ಇಲ್ಲಾ 
  5. ಕಣ್ಣಪ್ಪ ಕೊಟ್ಟನು ಕಣ್ಣನು 
ಮುದ್ದಿನ ಮಾವ (೧೯೯೩)
ಸಂಗೀತ : ಎಸ್ಪಿಬಿ ಸಾಹಿತ್ಯ : ಹಂಸಲೇಖ ಗಾಯನ ಡಾ।। ರಾಜ ಮತ್ತು ಎಸ್ಪಿ.ಬಿ.

ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಅಳಿಯ ಮಗನಾದನು ಓ..ಓ.. ಮಾವ ಮಗುವಾದನು
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಅಳಿಯ ಮಗನಾದನು ಓ..ಓ.. ಮಾವ ಮಗುವಾದನು
ತಾನಿತಂದಾನ ತಂದಾನಿತನಾ ತಾನಿತಂದಾನ

ಹೆತ್ತೋರ ಆಸೆಯೂ ಮನ್ನಣೆ ಮಾಡಿ
ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ
ಇದ್ದಾಗ ಹೋಳಿಗೆ ತಿನ್ನುತ ಮಾಡಿ
ಕಣ್ಣಲ್ಲಿ ಕಂಬನಿ ಮುದ್ದಾಗಿ ಮಾಡಿ
ಸಲಹೋ ಅಳಿಮಯ್ಯ ರಾಮನಿಗೂ ಮೇಲೂ
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು
ಚಂದನ ಸುತ್ತಿ ಮಲ್ಲಿಗೆ ಮುತ್ತಿ
ಮನೆ ಮಗನಿಗೆ ಆರತಿ ಎತ್ತಿ
ಬಾಳು ಬನವಾಯಿತು ... ಓ..ಓ.ಓ.. ಇರುಳು ಬೆಳಕಾಯಿತು
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಅಳಿಯ ಮಗನಾದನು ಓ..ಓ.. ಮಾವ ಮಗುವಾದನು
ತಾನಿತಂದಾನ ತಂದಾನಿತನಾ ತಾನಿತಂದಾನ

ಮಾವಯ್ಯ ನೀನಿಂದು ನಮಗೆ ಜೀವ
ಮನದ ತುಂಬಾ ನಿನ್ನ ಬಳ್ಳಿಯದೇ ಹೂವಾ
ಅಪ್ಪಯ್ಯ ನಾ ನಿನ್ನ ಋಣದ ಮೇಲೆ
ಮನಸೆ ಹೂವ ಮಾಡಿ ಹಾಕುವೆನು ಮಾಲೆ
ನೆನಕೆ ಹರಕೆಯಲ್ಲಾ ದೇವರಿಗೆ ಹೇಳಿ
ನಗುತಾ ನೀವು ಹೀಗೆ ನೂರು ಕಾಲ ಬಾಳಿ
ಹಬ್ಬದ ದೀಪ ಗಂಧದ ದೀಪ
ಮನೆಹಿರಿಯರೇ ದೇವರೇ ರೂಪ
ಬಾಳು ಬೆಳಕಾಯಿತು ಓ.. ಓ.. ಇರುಳು ಬೆಳಕಾಯಿತು
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಅಳಿಯ ಮಗನಾದನು ಓ..ಓ.. ಮಾವ ಮಗುವಾದನು
ತಾನಿತಂದಾನ ತಂದಾನಿತನಾ ತಾನಿತಂದಾನ
--------------------------------------------------------------------------------------------------------------------------

ಮುದ್ದಿನ ಮಾವ (೧೯೯೩) - ಕಣ್ಣಪ್ಪ ಕೊಟ್ಟನು ಕಣ್ಣನು ನಮ್ಮಪ್ಪ ಕೊಡುವೆನು ನನ್ನನೂ 
ಸಂಗೀತ : ಎಸ್ಪಿಬಿ ಸಾಹಿತ್ಯ : ಹಂಸಲೇಖ ಗಾಯನ ಡಾ।। ರಾಜ ಮತ್ತು ಕೋರಸ್ 

ಶಿವನೇ ಹರನೇ ಗುರುವೇ ಶರಣು 
ಕಣ್ಣಪ್ಪ ಕೊಟ್ಟನು ಕಣ್ಣನು ನಮ್ಮಪ್ಪ ಕೊಡುವೆನು ನನ್ನನೂ 
ನನ್ನ ಜೀವಾ ಹೂವಾಗಿಡುವೆ ಕರುಣೆ ತೋರಯ್ಯಾ... 

ಕೋರಸ್ : ಆಹ್ ಆಹ್ ಆಹ್ ಆಹ್ ಆಹ್ 
ಗಂಡು : ಧರ್ಮಕ್ಕೆ ಸ್ಥಳವೂ ನೀನೂ ಅಣ್ಣಪ್ಪನ ಒಡೆಯ ನೀನೂ 
            ಪ್ರಮಾದ ನೀಗಿಸು ಒಹೋ ಮಂಜುನಾಥನೇ 
            ಏಳಯ್ಯ ಕಾಮಧೇನೂ ಪ್ರಲಾಪ ಕೇಳದೇನೂ 
            ಪವಾಡ ತೋರಿಸೂ ಓ.. ರಾಘವೇಂದ್ರನೇ... 
            ಕರುಣೇ ಸುರಿಸೇ ಶೃಂಗೇರಿ ಆಶಾ ಹೇ... ಅರಳೋ ಹೂವ ಮಣ್ಣಾಗದೇ ಕಾಯೇ 
            ಬಾಡೋ ಹೂವ ನನ್ನ ಜೀವ ಸ್ವೀಕರಿಸೂ ... ಜೀವ ಆಹಾ... 
            ಕಣ್ಣಪ್ಪ ಕೊಟ್ಟನು ಕಣ್ಣನು ನಮ್ಮಪ್ಪ ಕೊಡುವೆನು ನನ್ನನೂ 
            ನನ್ನ ಜೀವಾ ಹೂವಾಗಿಡುವೆ ಕರುಣೆ ತೋರಯ್ಯಾ... 

ಗಂಡು : ಕೊಲ್ಲೂರ ಮೂಕ ಮಾತೇ ಎಲ್ಲಾರ ಜೀವ ಧಾತೇ ವಿನೋದ ನೋಡದೇ ಉಸಿರಾಡಿಸೂ ತಾಯೇ 
            ಕರುನಾಡ ದುರ್ಗ ನೀನೂ ವರನಾಡ ಪೂರ್ಣೇ ನೀನೂ ಚಾಮುಂಡಿ ಮೂರ್ತಿಯೇ ನಿನ್ನ ಕೀರ್ತಿ ಮೇರೆಯೇ 
            ಶಿರಡಿ ಬಾಬಾ ಶಿರ ಬಾಗುವೇ ಬಾಬಾ ಸತ್ಯ ಸತ್ತರೇ ನಿನಗೇನಿದೇ ಲಾಭ 
            ಹಾರೋ ಹಣತೆ ನನ್ನ ಪ್ರಾಣ ಸ್ವೀಕರಿಸೂ ಪ್ರಾಣ ಸ್ವೀಕರಿಸೂ 
           ಕಣ್ಣಪ್ಪ ಕೊಟ್ಟನು ಕಣ್ಣನು ನಮ್ಮಪ್ಪ ಕೊಡುವೆನು ನನ್ನನೂ 
          ನನ್ನ ಜೀವಾ ಹೂವಾಗಿಡುವೆ ಕರುಣೆ ತೋರಯ್ಯಾ... 
--------------------------------------------------------------------------------------------------------------------------

ಮುದ್ದಿನ ಮಾವ (೧೯೯೩) - ಪ್ರೇಮಕ್ಕೇ ಶಾಲೆ ಇಲ್ಲಾ ಕಾಮಕ್ಕೆ ವೇಳೆ ಇಲ್ಲಾ 
ಸಂಗೀತ : ಎಸ್ಪಿಬಿ ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾ ಗುರುರಾಜ 

ಪ್ರೇಮಕ್ಕೇ ಶಾಲೇ ಇಲ್ಲಾ... ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ ತಾನು ಸವಿಯುವ ತನಕ ಬಿಡದು
ಪ್ರೇಮಕ್ಕೇ ಶಾಲೇ ಇಲ್ಲಾ... ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ ತಾನು ಸವಿಯುವ ತನಕ ಬಿಡದು

ಸರಸಕ್ಕೆ ಸರಿ ತಪ್ಪು ಇಲ್ಲ ಸ್ಪರ್ಶಕ್ಕೆ ಮಡಿ ಅಂಟು ಇಲ್ಲಾ ರಾಜ ಓ ರಾಜ 
ಆಟಕ್ಕೆ ನಯ ವಿನಯವಿಲ್ಲ ನೋಟಕ್ಕೆ ಭಯ ಭಕ್ತಿಯಿಲ್ಲ ರಾಜ ಓ ರಾಜ 
ನೀನಾಗಿ ನೀಡು ಮುದ್ದು ಪಾವನ ಹೂವಲ್ಲಿ ತಾರೋ ಕಂಪನ ನೀಡುವೆ ನಿನಗೆ ನನ್ನ ಜೇನು ಯೌವ್ವನ 
ಪ್ರೇಮಕ್ಕೇ ಶಾಲೇ ಇಲ್ಲಾ... ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ ತಾನು ಸವಿಯುವ ತನಕ ಬಿಡದು 

ಪಾದಕ್ಕೆ ನಡುವು ಭಾರವಲ್ಲ ಸೊಂಟಕ್ಕೆ ಎದೆ ಭಾರವಲ್ಲ ಬಾರಾ ಬಾ ಬಾರಾ 
ಜೀವಕ್ಕೆ ತನು ಭಾರವಲ್ಲ ದೇಹಕ್ಕೆ ಪ್ರಿಯೆ ಭಾರವಲ್ಲ ಬಾರಾ ಬಾ ಬಾರಾ 
ತಾನಾಗಿ ಹೆಣ್ಣು ಕೋರಿ ಬಂದರೇ ಜೇನಾಗಿ ಸೇರು ಓ ದೊರೆ ಕಾಡುವೆ ನಿನ್ನ ನನ್ನ ಜೇನು ಯೌವ್ವನ 
ಪ್ರೇಮಕ್ಕೇ ಶಾಲೇ ಇಲ್ಲಾ... ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ ತಾನು ಸವಿಯುವ ತನಕ ಬಿಡದು 
-------------------------------------------------------------------------------------------------------------------------

ಮುದ್ದಿನ ಮಾವ (೧೯೯೩) - ಆರಾಧನಾ ಪ್ರೇಮಾರಾಧನಾ 
ಸಂಗೀತ : ಎಸ್ಪಿಬಿ ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ, ಮತ್ತು ಎಸ್ಪಿ.ಬಿ.

ಹೆಣ್ಣು : ಆರಾಧನಾ ಪ್ರೇಮಾರಾಧನಾ ಆಲಿಂಗನಾ ಹೃದಯಾಲಿಂಗನ
         ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
ಗಂಡು : ಆರಾಧನಾ ಪ್ರೇಮಾರಾಧನಾ ಆಲಿಂಗನಾ ಹೃದಯಾಲಿಂಗನ
         ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
ಹೆಣ್ಣು : ಆರಾಧಾನಾ ಪ್ರೇಮಾರಾಧಾನಾ 
ಗಂಡು : ಆಲಿಂಗನಾ ಹೃದಯಾಲಿಂಗನಾ 

ಗಂಡು : ಸಿಂಧೂರ ಸಿಂಗಾರ ನೀನಾದರೇ ಮನಸ್ಸಾರ ಮಾಂಗಲ್ಯ ನಾನಾಗುವೇ 
ಹೆಣ್ಣು : ಮುಂಬಾಳ ಮುಂಗಾರು ನೀನಾದರೇ ಹೊಂಬಾಳೆ ಹಿಂಗಾರು ನಾನಾಗುವೇ 
ಗಂಡು : ಅರುಣೋದಯ ನವ ಕಿರಣೋದಯ ಈ...  ತನುವಲ್ಲಿ ತರುಣೋದಯ 
ಹೆಣ್ಣು : ಕಾವೇರಿ ದಡವೇರಿ ನಲಿದಂತೆಯೇ ಈ...  ಎದೆಯಲ್ಲಿ ಪ್ರಣಯೋದಯ 
ಗಂಡು : ಆರಾಧಾನಾ ಪ್ರೇಮಾರಾಧಾನಾ 
ಹೆಣ್ಣು  : ಆಲಿಂಗನಾ ಹೃದಯಾಲಿಂಗನಾ 

ಗಂಡು : ಮನಸ್ಸೇ ವಯಸ್ಸೇ 
ಹೆಣ್ಣು : ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
ಗಂಡು : ಆರಾಧಾನಾ ಪ್ರೇಮಾರಾಧಾನಾ 

ಹೆಣ್ಣು  : ಆಲಿಂಗನಾ ಹೃದಯಾಲಿಂಗನಾ 

ಹೆಣ್ಣು : ಶೃಂಗಾರ ಸಂಸಾರ ಶುಭರಾತ್ರಿಗೇ ಹೂ ಹಾಸಿ ಹಾಲಿವೇ ಶುಭ ಮೈತ್ರಿಗೇ 
ಗಂಡು : ಅನುರಾಗದಾನಂದ ಆಹ್ವಾನಕೇ ಹೊಸ ಜೀವ ನಾ ನೀವೇ ಕಿರುಕಾಣಿಕೆ 
ಹೆಣ್ಣು : ಮತಿಯಾಗುವೆ ಶ್ರೀಮತಿಯಾಗುವೇ ನಾ...  ಮನೆ ತುಂಬ ಬೆಳಕಾಗುವೇ 
ಗಂಡು : ತಂಬೂರ ತಂತಿಯಲಿ ಶ್ರುತಿಯಂತೆಯೇ ನಾ.. ಮನದಲ್ಲಿ ನೆಲೆಯಾಗುವೇ 
ಹೆಣ್ಣು : ಆರಾಧನಾ ಪ್ರೇಮಾರಾಧನಾ
ಗಂಡು : ಆಲಿಂಗನಾ ಹೃದಯಾಲಿಂಗನ
ಹೆಣ್ಣು :  ಮನಸ್ಸೇ ವಯಸ್ಸೇ
ಗಂಡು : ಮನಸ್ಸೇ ವಯಸ್ಸೇ
ಇಬ್ಬರು : ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
            ಆರಾಧಾನಾ ಪ್ರೇಮಾರಾಧಾನಾ ಆಲಿಂಗನಾ ಹೃದಯಾಲಿಂಗನಾ 
-------------------------------------------------------------------------------------------------------------------------

ಮುದ್ದಿನ ಮಾವ (೧೯೯೩) - ವರನೇ ಮದುವೆ ಮದುವೆ ಸುಖದ ಮಜನೆನೆದು ನೋಡು 
ಸಂಗೀತ : ಎಸ್ಪಿಬಿ ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ ಮತ್ತು ಎಸ್ಪಿ.ಬಿ.

ಹೆಣ್ಣು : ವರನೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
          ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ಗಂಡು : ವಧುವೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
            ಝಂ ಎನ್ನವುದೂ ಝಂ ಎನ್ನವುದೂ ಗುಂ ಎನ್ನುವುದೂ ಮೈ ಗುಂ ಎನ್ನುವುದೂ

ಗಂಡು : ಅರಿಶಿನದ ಸ್ನಾನವಾಗೋಕೆ ಮೈಯಿ ಕಾದಿದೆ ಈ ಮೈಯಿ ಕಾದಿದೆ
           ಹಸಿ ಮೈಯಿ  ಬಿಸಿಯ ಮಾಡೋ ಶಾಸ್ತ್ರ ಕೇಳಿದೇ
ಹೆಣ್ಣು : ಒಹೋ ಶ್ರೀಗಂಧದ ಲೇಪವಾಗೋಕೆ ಕೆನ್ನೆ ಕಾದಿದೆ ಈ ಕೆನ್ನೆ ಕಾದಿದೆ
          ಬರಿ ಮೈಯ್ಯ ಕಂಪು ಮಾಡೋ ಪುಣ್ಯ ಕೇಳಿದೇ
ಗಂಡು : ನೂರಾರು ಹಾರೈಕೆ ಕೇಳಿ ಪಡೆದ ಮೇಲೆ ಮುಂದೆ ಮಧುಚಂದ್ರವೇ
ಹೆಣ್ಣು : ಓಹೋಹೋ ಮುತೈದೆ ಭಾಗ್ಯವಾ ತಾಳಿ ಪಡೆದೆ ಮೇಲೆ ರಾತ್ರಿ ರಸದೂಟವೇ
ಗಂಡು : ಶೋಭಾನೇ                ಹೆಣ್ಣು : ಶೋಭಾನೇ
ಇಬ್ಬರೂ : ಬಾಳೆಲ್ಲವೂ
ಹೆಣ್ಣು : ವರನೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
          ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ಗಂಡು : ವಧುವೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
            ಝಂ ಎನ್ನವುದೂ ಝಂ ಎನ್ನವುದೂ ಗುಂ ಎನ್ನುವುದೂ ಮೈ ಗುಂ ಎನ್ನುವುದೂ

ಹೆಣ್ಣು : ಕೆನೆಹಾಲಿನ ಕೆನ್ನೆ ಸಾಕಂತೆ ಮೊದಲ ರಾತ್ರಿಗೇ ಪ್ರೀತಿ ಮೊದಲ ರಾತ್ರಿಗೇ
          ಹಣ್ಣೇಕೆ ಹಂಪಲಕೇ ಹೆಣ್ಣು ಸಾಲದೇ
ಗಂಡು : ಆಹ್ ಆಹ್  ಹೆಜ್ಜೇನಿನ ಸಂಘ ಸಾಕಂತೆ ಮಧುರ ಮೈತ್ರಿಗೇ ಅತಿ ಮಧುರ ಮೈತ್ರಿಗೇ
            ದಿಂಡೇಕೆ ಹೂಗಳೇಕೆ ಗಂಡು ಸಾಲದೇ
ಹೆಣ್ಣು : ಓಹೋಹೋ ಬಂಗಾರ ಸಿಂಗಾರ ಬೇಗ ಆಗಬೇಕು ಮಂಚದಲ್ಲೇಕೆ
ಗಂಡು : ಆಹ .. ಕಾಶ್ಮೀರ ಎಲ್ಲೋರ ನೋಡುವಾಗ ಬೇಕು ಕೂಡುವಾಗೇತಕೆ
ಹೆಣ್ಣು : ಶೋಭಾನೇ ....                   ಗಂಡು : ಶೋಭಾನೇ
ಇಬ್ಬರು : ಬಾಳೆಲ್ಲವೂ
ಹೆಣ್ಣು : ವರನೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
          ಝಂ ಎನ್ನುವುದೂ .. ಮೈ ಝಂ ಎನ್ನುವುದೂ
ಗಂಡು : ವಧುವೇ ಮದುವೆ ಮದುವೆ ಸುಖದ ಮಜ ನೆನೆದು ನೋಡು ನೆನೆದು ಹಾಡು
            ಝಂ ಎನ್ನವುದೂ ಝಂ ಎನ್ನವುದೂ ಗುಂ ಎನ್ನುವುದೂ ಮೈ ಗುಂ ಎನ್ನುವುದೂ
-------------------------------------------------------------------------------------------------------------------------

No comments:

Post a Comment