1144. ದೇವ (೧೯೮೯)

ದೇವ ಚಲನಚಿತ್ರದ ಹಾಡುಗಳು
  1. ದೇವಣ್ಣ ನಿನ್ನ ಮ್ಯಾಲೆ ಮನಸಣ್ಣ 
  2. ಕೊರಗಿ ಕೊರಗಿ ನಾ 
  3. ಹೆಂಡತಿ ಬೇಕೇ ಹೆಂಡತಿ 
  4. ಸುಗ್ಗಿ ಬಂದ ಹಾಗೇ 
  5. ತ್ಯಾಗೇಕೇ ಎಂದೆಂದೂ 
ದೇವ (೧೯೮೯) - ದೇವಣ್ಣ ನಿನ್ನ ಮ್ಯಾಲೇ ಮನಸಣ್ಣ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ, ಎಸ್. ಜಾನಕೀ

ಗಂಡು : ಹೇ...ಹೇ.. ರಾ.. ರಾ.. ರಾ.. ರಾ..ರರರಾ ಹೂಂ
ಹೆಣ್ಣು : ದೇವಣ್ಣ .. ಹೇ.. ದೇವಣ್ಣ ಅರೇ ಓಯ್.. ದೇವಣ್ಣೋ ನಿಲ್ಲೂ
          ದೇವಣ್ಣ ನಿನ್ನ ಮೇಲೆ ಮನಸಣ್ಣ  ಮಾಗೈತೇ  ಈ ಹಣ್ಣು ನೋಡಣ್ಣ 
          ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ  ಈ ಹಣ್ಣು ನೋಡಣ್ಣ 
          ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ  ಈ ಹಣ್ಣು ನೋಡಣ್ಣ 
ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ                
ಹೆಣ್ಣು : ಬಯಕೆಯ ಬೆಲ್ಲ ನೀ ಮೀಡಿದರೇ ನಲ್ಲ 
ಗಂಡು : ನಾ ಸವರಲೂ ಗಲ್ಲ ಈ ಸವಿ ರಸಗುಲ್ಲಾ
ಹೆಣ್ಣು :  ನೀ ಕಾಣದ ಸುಖ ಕೊಡುವೇ .. 
          ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ  ಈ ಹಣ್ಣು ನೋಡಣ್ಣ 
ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ                
 
ಹೆಣ್ಣು : ನೀ ನನ್ನ ಸೋಕಿ ಈ ನವಿರೇಕೆ ಪ್ರಣಯದ ಬೆಂಕಿಗೇ ನೀ ಸೇಳೆವೆ 
ಗಂಡು: ಅರೇ ಹ್ಹಾಂಹ್ಹಾಂಹ್ಹಾಂ
ಹೆಣ್ಣು : ನೀ ನನ್ನ ಸೋಕಿ ಈ ನವಿರೇಕೆ ಪ್ರಣಯದ ಬೆಂಕಿಗೇ ನೀ ಸೇಳೆವೆ
ಗಂಡು :  ಈ ನೋವು ಸಾಕೂ ನಾ ಸೇರಬೇಕೂ ಬರಿ ಮಾತಲ್ಲಿ ಯಾಕೇ ನೀ ಸುಡುವೇ .. 
ಹೆಣ್ಣು : ತಂಗಾಳಿ ತಂಪಾಗಿ ಬೀಸುವೆನು 
ಗಂಡು : ಈ ಬೇಗೆ ತಾಪಕ್ಕೇ ಅಂಜುವೆನೂ ಓ ನಲ್ಲೇ ಬಾರೇ ನನ್ನ ಸೇರೇ 
ಹೆಣ್ಣು : ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ  ಈ ಹಣ್ಣು ನೋಡಣ್ಣ
ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ                

ಗಂಡು : ಹೂವಂತೇ ನೀನೂ ದುಂಬಿಯಂತೇ ನಾನೂ ಮಧುವಿನ ಬಟ್ಟಲ ನಿಡುವೇಯಾ 
ಹೆಣ್ಣು : ಅರೇ ಹ್ಹಾಂಹ್ಹಾಂಹ್ಹಾಂ
ಗಂಡು : ಹೂವಂತೇ ನೀನೂ ದುಂಬಿಯಂತೇ ನಾನೂ ಮಧುವಿನ ಬಟ್ಟಲ ನಿಡುವೇಯಾ 
ಹೆಣ್ಣು : ಈ ತನವೂ ನಿಂದೂ ಈ ಮನವೂ ನಿಂದೂ ಇಡೀ ಬಾಳೆಲ್ಲಾ ನಿಂದೇ ಕೊಡು ಕೈಯ್ಯಾ 
ಗಂಡು : ತೋಳಲ್ಲಿ ನಿನ್ನನ್ನೂ ತೂಗುವೇನು 
ಹೆಣ್ಣು : ನೋವೆಲ್ಲಾ ನಿನ್ನಿಂದ ನೀಗುವೆನು ಈ ಬಾಳಿಗೆಂದು ನೀನೇ ರಾಜ  
          ದೇವಣ್ಣ ನಿನ್ನ ಮೇಲೆ ಮನಸಣ್ಣ ಮಾಗೈತೇ  ಈ ಹಣ್ಣು ನೋಡಣ್ಣ 
ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ ಬಂದಿವ್ನಿ ಕೈ ತುಂಬ ನೀಡಮ್ಮಾ                  
ಹೆಣ್ಣು : ಬಯಕೆಯ ಬೆಲ್ಲ ನೀ ಮೀಡಿದರೇ ನಲ್ಲ 
ಗಂಡು : ನಾ ಸವರಲೂ ಗಲ್ಲ ಈ ಸವಿ ರಸಗುಲ್ಲಾ
ಹೆಣ್ಣು : ನೀ ಕಾಣದ ಸುಖ ಕೊಡುವೇ .(ಹೇ ಹೇ ಹೇ) . 
ಹೆಣ್ಣು : ದೇವಣ್ಣ ನಿನ್ನ ಮೇಲೆ ಮನಸನ್ನ (ಹೊಯ್) ಮಾಗೈತೇ ಅಹ್ಹಹ್ಹ ಈ ಹಣ್ಣು ನೋಡಣ್ಣ 
ಗಂಡು : ನಿಂಗಮ್ಮಾ ನಿನ್ನ ಮ್ಯಾಲೇ ಮನಸಮ್ಮಾ (ಅಹ್) ಬಂದಿವ್ನಿ ಕೈ ತುಂಬ ನೀಡಮ್ಮಾ                
--------------------------------------------------------------------------------------------------------------------------

ದೇವ (೧೯೮೯) - ಕೊರಗಿ ಕೊರಗಿ ನಾ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್. ಜಾನಕೀ 

ಕೊರಗಿ ಕೊರಗಿ ನಾ ಪೂರಾ ಕೊರಗಿ ಆಹ್ಹಾ... ಕೊರೆವಾ ಚಳಿಗೇ ಅಮ್ಮಾ.. ಮೈಯೆಲ್ಲಾ ನಡುಗಿ
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ.. ನೀನೂ ಬಾ ಬಾರೋ
ಬಾ ಬಾರೋ.. ನೀನೂ ಬಾ ಬಾರೋ 
ಕೊರಗಿ ಕೊರಗಿ ನಾ ಪೂರಾ ಕೊರಗಿ  ಕೊರೆವಾ ಚಳಿಗೇ ಮೈಯೆಲ್ಲಾ ನಡುಗಿ 
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ 
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ 
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ.. ನೀನೂ ಬಾ ಬಾರೋ 

ಅರಿಯದ ಆಸೇ ಮೂಡಿ ಕದವನ ತಾಪ ಕನಸಲೂ ಕೂಗಿ ಕೂಗಿ ಕರೆದಿದೇ ರೂಪ  
ಬಯಕೆಯೂ ಕಾಡಿ ಕಾಡಿ ಮಿನುಗುವ ಮೋಹ ಸರಿಯದೇ ದೂರ ದೂರ ತೀರಿಸು ದಾಹ
ಭಾವನ ಕಣ್ಣತುಂಬೀ ಕಾಮನೇ ರಂಗೂ ಮನ್ಮಥ ನೀನಾಗೂ ಸಂಗದ ತುಂಡೂ
ರಾಗದ ಕಾವೇರಿ ಹೂಡಿತೇ ಮಿಣುಚಿ ಮಾತಿನ ಮತ್ತೇರಿ ಸಂತಸ ಹಂಚೀ
ಸಿಹಿ ಸಿಹಿ ಬೆಸುಗೆ ತಾರೋ ಬಾ ಬಾರೋ ಗೆಳೆಯಾ ಬಾ ಬಾರೋ  
ಬಾ ಬಾರೋ ಗೆಳೆಯಾ ಬಾ ಬಾರೋ

ಚೆಲುವಲಿ ಹೂವೂ ದುಂಬಿ ಬೆರೆತಿವೇ ಕೂಡಿ ಬೆರೆಯುವ ನಾನು ನೀನೂ ವಿರಹವ ದೂಡಿ
ಸೊಗಸಲಿ ಬಳ್ಳಿ ಮರವೂ ಬಳಸಿವೇ ಸೇರಿ ನಲಿಯುವಾ ಹಾಗೇ ನಾವೂ ಅಪ್ಪುಗೇ ಹೀರಿ
ಸೂರ್ಯನು ಬಂದಾಗ ತಾವರೇ ಕಣ್ಣೂ ಪ್ರೀತಿಯ ಸಂಗಾತೀ ನೀನಿರೇ ಚೆನ್ನಾ..
ಚಂದ್ರನ ಕಂಡಾಗ ನೈದಿಲೇ ಹುಗ್ಗಿ ನನ್ನಲ್ಲಿ ನಿನ್ನದೂ ಪ್ರೇಮದ ಸುಗ್ಗಿ
ಸವಿ ಸವಿ ಸುಖವಾ ತಾರೋ ಬಾ ಬಾರೋ ಸನಿಹ ಬಾ ಬಾರೋ
ಬಾ ಬಾರೋ ಸನಿಹ ಬಾ ಬಾರೋ
ಕೊರಗಿ ಕೊರಗಿ ನಾ ಪೂರಾ ಕೊರಗಿ ಕೊರೆವಾ ಚಳಿಗೇ ಮೈಯೆಲ್ಲಾ ನಡುಗಿ 
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ 
ನಿನ್ನ ಪುಟಿವಾ ಪ್ರಾಯ ನೋಡಿ ಬಂದೇ ನಿನ್ನ ಬಳಿಗೇ ಓಡಿ 
ನಂಗೇ ಬಿಸಿ ಬಿಸಿ ಮುತ್ತ ನೀಡೂ ಬಾ ಬಾರೋ.. ಜೋತೆಗೆ ಬಾ ಬಾರೋ 
--------------------------------------------------------------------------------------------------------------------------

ದೇವ (೧೯೮೯) - ಹೆಂಡತಿ ಬೇಕೇ ಹೆಂಡತೀ  
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಕೋರಸ್ 

ಗಂಡು : ಹೆಂಡ್ತೀ ಬೇಕಾ ನಿನ್ನ ಮುಸುಡಿಗೇ ಹೆಂಡ್ತೀ ಬೇಕಾ.. ಹ್ಹಾ...
            ಹೆಂಡ್ತೀ ಬೇಕೇ ಹೆಂಡ್ತೀ ಅರೇ ಯಾಕೇ ಹೀಗೇ ಸಾಯ್ತೀ ...
            ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ...
            ಕಂಡ ಕಂಡ ಹೆಣ್ಣಾ ಪ್ರಾಣ ಹಿಂಡ್ತಿ
            ಕಂಡ ಕಂಡ ಹೆಣ್ಣಾ ಪ್ರಾಣ ಹಿಂಡ್ತಿ ಒದ್ದರೇ ಆಗ ಕ್ಯೂಯ್ ಕ್ಯೂಯ್ ಗುಡ್ತೀ
            ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ...
            ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ... 
            ಧಾ.. ತಕ್ಕ ತಾ.. ದುರುಗೀಟ  ಧಾ.. ತಕ್ಕ ತಾ..
           ದುರುಗೀಟ ದುರುಗೀಟ ದುರುಗೀಟ ತಕಿಟತ ತಕಿಟತ ತಕಿಟತ ದುರುಗಿಟ  ಥಾ.. 
           ಧಾ.. ದತ್ತಕಿಂದೇರೇ ರೇರೇರೇರೇರೇರಾ  ಧಾ.. ದತ್ತಕಿಂದೇರೇ ರೇರೇರೇರೇರೇರಾ  
          ತಿಕಿಧಾ ಧಾತಿಕಿಧಾ ತಿಕಿಧಾ ಧಾತಿಕಿಧಾ ಧಾತಿಕಿಧಾ ಹೇಹೇ ..ಹೇಹೇ ... ಹೇಹೇ ..ಹೇಹೇ ... ಹ್ಹಾ..ಹ್ಹಾ.. 
           ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ... 
           ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ... 
 ಕೋರಸ್ : ಅಟ್ಟಾದಿ ಮೇಲೆ ಪುಟ್ಟವನಾ ಕಾದ್ವೀ ಕಟ್ಟಿ ಕೊಡೇ ಅರೇ ..ಅಮ್ಮಯ್ಯಾ ... 
                 ಬೆಟ್ಟಾದ ಮ್ಯಾಲೇ ಬೆಟ್ಟಯ್ಯತಾನೇ ಮುಟ್ಟೀ ನೋಡೇ ಅರೇ ಅಮ್ಮಯ್ಯಾ ..
                 ಅತ್ತೆಯ ಮಗನೇ ಹೊತ್ತಾಯ್ತೆ ತಾನೇ ಹೊಟ್ಟೆಗೇ ನೀಡೆ ಬಾರೇ ಅಮ್ಮಯ್ಯಾ 
                 ಗುಟ್ಟಾಗಿ ಹೋಗಿ ಪಟ್ಟಣಕೇ ಹೊರಟೇ ತರತ್ತೀವಿ ಬಾರೇ ಅರೇ ಅಮ್ಮಯ್ಯ
                ಈ ಕಣ್ಣೂ ಚಂದಾ ... ಅವ್ವಾ        ಈ ಮೂಗು ಚಂದಾ .. ಅವ್ವಾ    
                ಈ ಬಾಯಿ ಚಂದಾ.. ಅವ್ವಾ         ನುಡಿಯೆಲ್ಲಾ ಚಂದಾ... ಅವ್ವಾ
                ನನ್ನ ಗಂಡ ಇವನೇ... ಅವ್ವಾ       ಉಪ್ಪಾರಗುಂಡಾ ಇವನೇ ... ಅವ್ವಾ
               ನನ್ನ ತೋಳು ಇವನೇ... ಅವ್ವಾ   ನನ್ನ ಕೇಡಿ ಇವನೇ... ಅವ್ವಾ

ಗಂಡು :  ಕಮಲಾ ಬೇಕೇ ಈ ವಿಮಲಾ ಬೇಕೇ ಈ ಬಳ್ಳಿ ಹಾಗೇ ಇರೋ ಸರಳಾ ಬೇಕೇ... ಹ್ಹಾಂ ..
             ಜಲಜಾ ನೋಡೂ ಈ ವನಜಾ ನೋಡೂ ಈ ಮಳ್ಳಿ ಹಾಗೇ ಹೆಣ್ಣೂ ಗಿರಿಜಾ ನೋಡೂ
             ನೋಡಿ ನಿನ್ನ ಮೋತಿಯನ್ನೂ...  ನೋಡಿ ನಿನ್ನ ಮೋತಿಯನ್ನೂ... ಪ್ರೀತಿಯಿಂದ ಬಂದರೂ
ಕೋರಸ್ : ನೀನೇ ದೈವಾ.. ನೀನೇ ಜೀವಾ
                ನೀನೇ ದೈವಾ.. ನೀನೇ ಜೀವಾ ಸೇರಿ ಸುಖವಾ ಕಾಣುವಾ...
             
ಕೋರಸ್ : ಆ.. ಹರ್ಷ ಬೇಕೇ ... ಬಾರೋ        ಆ.. ಸರಸ ಬೇಕೇ.. ಬಾರೋ
                ಈ ಬೇಸರ ಯಾಕೇ .. ಬಾರೋ     ಬಾ ಆಸರೇ ಕೊಡುವೇ... ಬಾರೋ
                ನೀ ಬೆಟ್ಟದ ಬಳಿಗೇ .. ಬಾರೋ     ನಾ ಅಪ್ಪುವೇ ನಿನ್ನಾ ..  ಬಾರೋ
                ಓ.. ಉತ್ತರ ಭೂಪ... ಬಾರೋ      ಬಾ ಮುತ್ತನು ಕೊಡುವೇ.. ಬಾರೋ

ಗಂಡು : ಹೆಣ್ಣು ಅಲ್ಲಾ ಗಂಡು ಅಲ್ಲಾ ಅನ್ನೋ ಚಿಂತೇ ಯಾಕೇ
            ಇಂಥ ಒಂದು ಅಂದಕ್ಕಿಂತ ಬೇರೇ ಅಂದ ಬೇಕೇ
            ಹೆಣ್ಣು ಅಲ್ಲಾ ಗಂಡು ಅಲ್ಲಾ ಅನ್ನೋ ಚಿಂತೇ ಯಾಕೇ
           ಇಂಥ ಒಂದು ಅಂದಕ್ಕಿಂತ ಬೇರೇ ಅಂದ ಬೇಕೇ
           ಒಮ್ಮೆ ನೀನೂ ಇವಳಾ ನೋಡೀ ... 
           ಒಮ್ಮೆ ನೀನೂ ಇವಳಾ ನೋಡೀ ಬಾರೇ ರಂಭೇ ಎಂದರೇ ...... 
           ಸಾಯೋತನಕ ನಿನಗೇ ಇಲ್ಲಾ ಅಯ್ಯೋ...
           ಸಾಯೋತನಕ ನಿನಗೇ ಇಲ್ಲಾ ಕಾಮಣ್ಣ ಕೋಡೋ ತೊಂದರೇ.. ಹೇಹೇಹೇಹೇ
           ಹೆಂಡ್ತೀ ಬೇಕೇ ಹೆಂಡ್ತೀ ಯ್ಯಾ... ಅದಕ್ಯಾಕೇ ಹೀಗೇ ಸಾಯ್ತೀ ... 
           ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ... 
            ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ...
           ಹೆಂಡ್ತೀ ಬೇಕೇ ಹೆಂಡ್ತೀ ಅದಕ್ಯಾಕೇ ಹೀಗೇ ಸಾಯ್ತೀ ... 
           ಹೆಂಡ್ತೀ ಬೇಕಾ ಹೆಂಡ್ತೀ ಮೋತಿ ನೋಡು ಮೋತಿಯೇ
           ಅಹ್ಹಹ್ಹಹ್ಹಾ... ಕೋತಿಯಂಥ ಮೂತಿ ನಿನಗೇ ಬೇಕೇ ಪ್ರೀತಿ
           ಹೆಂಡ್ತೀ ಬೇಕೇ ಹೆಂಡ್ತೀ ಜಾಡಿಸೀ ಕೊಟ್ಟರೇ ಬೀಳುತಿ
--------------------------------------------------------------------------------------------------------------------------

ದೇವ (೧೯೮೯) - ಸುಗ್ಗಿ ಬಂದ ಹಾಗೇ   
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ :ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. 

ಸಂಭ್ರಮದ ಸಮಯದಲೀ ಸಂತಸದ ಗಾಳಿಯಲೀ ತೇಲಿ ಬಂದಾ ಹಾಡೂ
ನಾ ಹಾಡುವೇನೂ ಕೇಳಿ
ಡಿಂಗಿ ಡಿಂಗಿಚ್  ಡೀಡಿಂಗಿ ಡಿಂಗಿಚ್  ಡಿಂಗಿ ಡಿಂಗಿಚ್  ಡೀಡಿಡಿಂಗಿ ಡಿಂಗಿಚ್
ನಕ್ಕೂ ನಕ್ಕೂ ನಕ್ಕೂ ನಾ  ನಕ್ಕೂ ನಕ್ಕೂ ನಕ್ಕೂ ನಾ
ತದುನಾ ತದುನಾ ತದುನಾ ತಧಿನ್ ತಧಿನ್ ಧಿನ್ ಧೀನ್ ಧೀನ್
ಅರೇ ಹೊಯ್ ಅರೇ ಹೊಯ್ ಅರೇ ಹೊಯ್ ಹೊಯ್ ಹೊಯ್
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್
ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್
ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ...
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್ 
ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... 

ಎಂದೂ ನಮ್ಮ ಬಾಳೂ ಒಂದೇ ಬಳ್ಳಿ ಹೂವಂತೇ ... 
ಒಬ್ಬಾತ ಶ್ರೀಮಂತ ಇನ್ನೊಬ್ಬ ಧೀಮಂತ ಬದುಕಿದು ನಿಶ್ಚಂತೇ... 
ನೀವೇ ನನ್ನ ಪ್ರಾಣ ನಿಮ್ಮ ಬಿಟ್ಟೂ ನಾನಿಲ್ಲಾ... 
ಸೋದರರ ಏಳಿಗೆಯಲೇ ಸೌಖ್ಯವನೂ ಕಾಣುವೇನೂ ಬೇರೇನೂ ಬೇಕಿಲ್ಲಾ... 
ನನ್ನ ತಮ್ಮಾ... ಆಆಆ... ಓಓಓ 
ಡಿಂಗಿಚ್ ಟಿ ಟಿಕಿಚ್ ಡಿಂಗಿಚ್  ಡಿಗ್ ಡಿಗ್   ಡಿಂಗಿಚ್ ಟಿ ಟಿಕಿಚ್ ಡಿಂಗಿಚ್  ಡಿಗ್ ಡಿಗ್    
ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... 

ಎಲ್ಲೀ ಹೋಗೂ ನೀನೂ ಮರೆಯಬೇಡಾ ಈ ನಾಡ .. 
ಕನ್ನಡೀಗ ನಾನೆಂಬ ಹೆಮ್ಮೆಯಲೀ ನೀ ಮೆರೆದು ಜಗವನೇ ನೀ ಜಯಿಸೂ 
ನಮ್ಮ ಬಾಷೆ ಚೆಂದಾ ನಮ್ಮ ನಾಡೇ ಶ್ರಿಗಂಧಾ 
ಕನ್ನಡದಾ ಈ ನೆಲದಾ ಅನ್ನವನೂ ಉಂಡಿರುವೇ  ತೀರಿಸೋ ಆ ಋಣವಾ.. 
ನನ್ನ ತಮ್ಮಾ... ಆಆಆ ... ಓಓಓಓ 
ಶುಭವಾ ಕೋರುವೇನೂ ಅಭಯ ನೀಡುವೆನೂ 
ಶುಭವಾ ಕೋರುವೇನೂ ಅಭಯ ನೀಡುವೆನೂ 
ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ... 
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್
ಟೀಮ್ ಟೀಮ್ ಟೂಯ್ಯ್ ಟೂಯ್ಯ್ ಡೀಮ್ ಡೀಮ್ ಡೂಯ್ಯ್ ಡೂಯ್ಯ್
ನೀ ಹೋಗಿ ಬಾ ನನ್ನ ತಮ್ಮಯ್ಯಾ... ನೀ ಹೋಗಿ ಬಾ ನನ್ನ ತಮ್ಮಯ್ಯಾ...
ಸುಗ್ಗಿ ಬಂದ ಹಾಗೇ ಎದೆ ಹಿಗ್ಗಿಹುದು ಇಂದೂ ಸ್ವರ್ಗ ಕಂಡ ಹಾಗೇ ಮನ ಹಾಡಿಹುದು ಇಂದೂ
ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ 
ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ ಡಿಂಗ್ ಡಿಂಗ್ ಡಾ ಡಾಂಗ್ ಡಿಂಗರಿ ದಟ್ಟಾಟ್ 
--------------------------------------------------------------------------------------------------------------------------

ದೇವ (೧೯೮೯) - ತ್ಯಾಗೇಕೇ ಎಂದೆಂದೂ    
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ :ಗೀತಪ್ರಿಯ ಗಾಯನ : ಎಸ್.ಪಿ.ಬಿ. ಕೋರಸ್ 

ಕೋರಸ್ : ಆಆಆ... ಆಆಆ... ಆಆಆ... ಆ..ಆ...ಆ...ಆ...
ಗಂಡು : ತ್ಯಾಗಕೇ ಎಂದೆಂದೂ.... ಈ ಲೋಕದೀ ನೋವೇನೂ
           ತ್ಯಾಗಕೇ ಎಂದೆಂದೂ ಈ ಲೋಕದೀ ನೋವೇನೂ
           ಸ್ವಾರ್ಥ ಪ್ರಪಂಚದಲೀ ಆ.. ಸತ್ಯಕೇ ಸಾವೇನೂ
           ಜಗದಾಟವೆಲ್ಲಾ ಹೀಗೇನೂ ವಿಶ್ವಾಸಕ್ಕಿಲ್ಲಿ ಸೋಲೇನು ನಿಸ್ವಾರ್ಥಿಗಿಲ್ಲಿ ಚಿತೆ ಏನೋ
           ವಿಶ್ವಾಸಕ್ಕಿಲ್ಲಿ ಸೋಲೇನು ನಿಸ್ವಾರ್ಥಿಗಿಲ್ಲಿ ಚಿತೆ ಏನೋ 
          ತ್ಯಾಗಕೇ ಎಂದೆಂದೂ ಈ ಲೋಕದೀ ನೋವೇನೂ

ಕೋರಸ್ :  ಆ...ಆ... ಆ... ಆ...ಆ... ಆ... ಆ...ಆ... ಆ... 
ಗಂಡು : ಒಟ್ಟಿಗೇ ಸೇರಿ ಬಾಳುವ ಕನಸೂ ಕಂಡಾ ಜೀವಿಗಿಲ್ಲಿ 
           ಕಾಣಿಕೆಯಾಗಿ ನೀಡುವುದೀಗ ಈ ಜಗ ಬರೀದೇ ಸೋತ ಇಲ್ಲೀ 
           ಆ ದಿನ ಕಂಡಾ ಸ್ನೇಹದ ಬಂಧ ಜಗದೀ ಮಾಯೇ ಏನೂ 
           ಈ ದಿನ ಅದನು ನೋಡಲೂ ನೆನೆದೂ ಎಲ್ಲಾ ಭ್ರಾಂತಿಯೇನೂ 
           ಪ್ರೀತಿಯ ಹಂಚಿದಾ ಜೀವವೂ ಇಲ್ಲೀ ಸಂಚಿಗೇ ಬಲಿಯಾಯೀತೇನೂ  
           ನಿನ್ನಾಸೇ ಎಲ್ಲವೂ ಈಗೆಲ್ಲಿ ಹೋಯಿತೇ.. ಈಗೆಲ್ಲಿ ಹೋಯಿತೋ   
          ತ್ಯಾಗಕೇ ಎಂದೆಂದೂ ಈ ಲೋಕದೀ ನೋವೇನೂ

ಕೋರಸ್ :  ಆ...ಆ... ಆ... ಆ...ಆ... ಆ... ಆ...ಆ... ಆ... 
ಗಂಡು : ನೀ ನಗುವಾಗ ಸುತ್ತಲೂ ನಿನ್ನಾ ಬಂಧು ಬಳಗವೆಲ್ಲಾ 
            ನೀ ಅಳುವಾಗ ಹತ್ತಿರ ಯಾರೂ ಬಂದೂ ಸುಳಿವರಿಲ್ಲಾ.. 
            ನೆರಳನು ನೀಡಿ ಫಲವನೂ ಕೋಡುವಾ ಮರವಾ ಕಡಿವರಲ್ಲಾ 
            ಏರಿದ ಮೇಲೆ ಏಣಿಯ ದೂರ ದೂಡಿ ಬಿಡುವರಲ್ಲಾ 
            ವಿಷವನೇ ಅಮೃತ ಎನುತಲಿ ನೀಡುವಾ ಜನರಿಗೇ ನೀ ಸೋತೇ ಏನೂ  
            ಆ ಪ್ರೀತಿಯೆಲ್ಲವೂ ಈ ಸ್ವಾರ್ಥಕ್ಕಾಗಿಯೇ...   ಈ ಸ್ವಾರ್ಥಕ್ಕಾಗಿಯೇ...   
           ತ್ಯಾಗಕೇ ಎಂದೆಂದೂ ಈ ಲೋಕದೀ ನೋವೇನೂ
           ಸ್ವಾರ್ಥ ಪ್ರಪಂಚದಲೀ ಆ.. ಸತ್ಯಕೇ ಸಾವೇನೂ
           ಜಗದಾಟವೆಲ್ಲಾ ಹೀಗೇನೂ ವಿಶ್ವಾಸಕ್ಕಿಲ್ಲಿ ಸೋಲೇನು ನಿಸ್ವಾರ್ಥಿಗಿಲ್ಲಿ ಚಿತೆ ಏನೋ
           ವಿಶ್ವಾಸಕ್ಕಿಲ್ಲಿ ಸೋಲೇನು ನಿಸ್ವಾರ್ಥಿಗಿಲ್ಲಿ ಚಿತೆ ಏನೋ
           ವಿಶ್ವಾಸಕ್ಕಿಲ್ಲಿ ಸೋಲೇನು ನಿಸ್ವಾರ್ಥಿಗಿಲ್ಲಿ ಚಿತೆ ಏನೋ 
--------------------------------------------------------------------------------------------------------------------------

No comments:

Post a Comment