ದೇವದಾಸಿ ಚಲನಚಿತ್ರದ ಹಾಡುಗಳು
- ನಟರಾಜನ ಪ್ರೀಯ
- ಬದುಕು ಜಟಕಾ ಬಂಡಿ
- ಹೆಂಡ ಹೆಂಡತಿ ಕನ್ನಡ ಪದಗೋಳ
- ಅತಹೋ ಬೃಹ್ಮ
- ಓರೇ ನೋಟವ ಬೀರಿ
- ಕೃಷ್ಣಾ ಎನಬಾರದೇ...
- ಓ ರಸಿಕ ಈ ನಿಮಿಷ
- ಜಗದಾದಿ ದೇವತೆಯ ಪ್ರತಿ
- ನೀ ಒಲಿದ ಸಳೆದ
- ಲೋಕ ಸುಮ್ಕೇ ಕೆಟ್ಟೋಗೈತೇ
- ನಾ ಕಂಡೆ ನಿನ್ನಲ್ಲಿ
- ಸುಖವೀವ ಸುರಪಾನವಿದೇ..
ದೇವದಾಸಿ (1978) - ನಟರಾಜನ ಪ್ರೀಯ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ವಿಜಯನಾರಸಿಂಹ, ಗಾಯನ : ಎಸ್.ಜಾನಕಿ
ಸಕಲ ಕಲಾವಲ್ಲಭ ನಟರಾಜ... ಸಾಮದಾನಲೋಲ ನಟರಾಜ
ನಮೋ ನಮೋ ನಟರಾಜ ಕೋಟಿ ಸೂರ್ಯ ತೇಜ..
ಕೋಟಿ ಸೂರ್ಯ ತೇಜ.. ನಟರಾಜ
ನಟರಾಜನ ಪ್ರಿಯ ಸಖಿಯಾದೇನಾ.. ಈ ಏಳೂ ಜಗವಾಳೋ ಈಶನ ಧಾಟಿನ
ನಟರಾಜನ ಪ್ರಿಯ ಸಖಿಯಾದೇನಾ..
ಏಳೇಳೂ ಜನ್ಮದ ಪುಣ್ಯದ ಕಾರಣ... ಆಆಆ
ಏಳೇಳೂ ಜನ್ಮದ ಪುಣ್ಯದ ಕಾರಣ ಶುಭ ಲಗ್ನ ಶುಭ ಕಾರ್ಯ ತಂದಿತು ಕಲ್ಯಾಣ
ನಟರಾಜನ ಪ್ರಿಯ ಸಖಿಯಾದೇನಾ..
ಶಿವಸತಿಗಾದೇನೂ ನಾ ಸವತಿ ಪರಶಿವನೊಲಿದ ಶ್ರೀಮತೀ ..
ಶಿವಸತಿಗಾದೇನೂ ನಾ ಸವತಿ ಪರಶಿವನೊಲಿದ ಶ್ರೀಮತೀ
ವರಿಸಿದ ನನ್ನನೂ ವಿಶ್ವಪತಿ... ತಾರುಣ್ಯ ಲಾವಣ್ಯ ತುಂಬಿದ ಯುವತೀ ..
ನಟರಾಜನ ಪ್ರಿಯ ಸಖಿಯಾದೇನಾ.. ಈ ಏಳೂ ಜಗವಾಳೋ ಈಶನ ಧಾಟಿನ
ನಟರಾಜನ ಪ್ರಿಯ ಸಖಿಯಾದೇನಾ..
ಸಂಧ್ಯಾ ಸಮಯದ ರವಿಕಿರಣ ಚುಂಬಿಸಿ ತಾವರೇ ಮೃದುವದನ..
ಸಂಧ್ಯಾ ಸಮಯದ ರವಿಕಿರಣ ಚುಂಬಿಸಿ ತಾವರೇ ಮೃದುವದನ
ಭರಿಸಿತು ಲಜ್ಜೆಯ ಆಭರಣ.. ತಾಳಿತು ಕಮಲಿನಿ ಋಷಿ ಮೌನ..
ನಟರಾಜನ ಪ್ರಿಯ ಸಖಿಯಾದೇನಾ..
ಘಲಿ ಘಲಿರು ಘಲಿರು ಘಲಿರು ಕಾಲ್ಗಜ್ಜೇ ನಾದ ನವೀರೂ
ಕಲೆಯಾದ ನನ್ನ ಉಸಿರೂ ಕಾಮನಿಯ ಪ್ರೇಯಸಿಯ
ತಾಳ ಭಾಗ್ಯ ಸ್ವಾಮಿಗಾಗಿ ಮೀಸಲೂ
ದೇಹ ಮೋಹ ಪ್ರೇಮವಾಗಿ ಬೇರೆಯಲೂ
ನಟರಾಜನ ಪ್ರಿಯ ಸಖಿಯಾದೇನಾ.. ಈ ಏಳೂ ಜಗವಾಳೋ ಈಶನ ಧಾಟಿನ
ನಟರಾಜನ ಪ್ರಿಯ ಸಖಿಯಾದೇನಾ..
-----------------------------------------------------------------------
ದೇವದಾಸಿ (1978) - ಬದುಕು ಜಟಕಾ ಬಂಡಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಡಿ.ವಿ.ಗುಂಡಪ್ಪ, ಗಾಯನ : ಪೂರ್ಣಚಂದ್ರರಾವ್
ಬದುಕು ಜಟಕಾ ಬಂಡಿ....
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ.. ಕುದುರೆ ನೀನ್,
ಕುದುರೆ ನೀನ್, ಅವನು ಪೇ..ಲ್ದಂತೆ ಪಯಣಿಗರು
ಮದುವೆಗೋ... ಮಸಣಕೋ.. ಹೋಗೆಂದ ಕಡೆಗೋಡು
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ.. ಕುದುರೆ ನೀನ್,
ಕುದುರೆ ನೀನ್, ಅವನು ಪೇ..ಲ್ದಂತೆ ಪಯಣಿಗರು
ಮದುವೆಗೋ... ಮಸಣಕೋ.. ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು ಮಂಕುತಿಮ್ಮ
ಪದಕುಸಿಯ ನೆಲವಿಹುದು ಮಂಕುತಿಮ್ಮ
ಪದಕುಸಿಯ ನೆಲವಿಹುದು ಮಂಕುತಿಮ್ಮ..
ಪದಕುಸಿಯ ನೆಲವಿಹುದು ಮಂಕುತಿಮ್ಮ..
ಪದಕುಸಿಯ ನೆಲವಿಹುದು ಮಂಕುತಿಮ್ಮ..
-----------------------------------------------------------------------
ಪದಕುಸಿಯ ನೆಲವಿಹುದು ಮಂಕುತಿಮ್ಮ
ಪದಕುಸಿಯ ನೆಲವಿಹುದು ಮಂಕುತಿಮ್ಮ..
ಪದಕುಸಿಯ ನೆಲವಿಹುದು ಮಂಕುತಿಮ್ಮ..
ಪದಕುಸಿಯ ನೆಲವಿಹುದು ಮಂಕುತಿಮ್ಮ..
-----------------------------------------------------------------------
ದೇವದಾಸಿ (1978) - ಹೆಂಡ ಹೆಂಡತಿ ಕನ್ನಡ ಪದಗೋಳ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ಪಿ.ರಾಜರತ್ನಂ, ಗಾಯನ : ಎಸ್.ಪಿ.ಬಿ.
ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ!
ಗುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-ತಕ್ಕೊ! ಪದಗೊಳ್ ಬಾಣ!
ತಕ್ಕೊ! ಪದಗೊಳ್ ಬಾಣ!

ಕನ್ನಡ ಪದಗೊಳ್ ಆಡೋದ್ನೆಲ್ಲ ನಿಲ್ಲೀಸ್ ಬುಡಬೇಕ್ ರತ್ನ!' ಅಂತೌನ ಏನಾರ್ ಅಂದ್ರೇ...
ದೇವ್ರ ಆದರೇನೂ ! ಮಾಡ್ತೀನ್ ಅವನಗೇ ಖತ್ನ! ಮಾಡ್ತೀನ್ ಅವನಗೇ ಖತ್ನ!
ದೇವ್ರ ಆದರೇನೂ ! ಮಾಡ್ತೀನ್ ಅವನಗೇ ಖತ್ನ! ಮಾಡ್ತೀನ್ ಅವನಗೇ ಖತ್ನ!
ಆಜ್ಞೆ ಮಾಡೋ ಐಗೋಳ್ ಎಲ್ಲಾ ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ ಮಾನಾ ಉಳಿಸೊಕ್ಕಿಲ್ಲಾ... ಮಾನಾ ಉಳಿಸೊಕ್ಕಿಲ್ಲಾ
ನರಕಕ್ಕ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ...
ನರಕಕ್ಕ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ...
ನರಕಕ್ಕ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ...
ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ನನೀ ಕಾಣೆ! ನನ್ ಮನಸನ್ನನೀ ಕಾಣೆ!
ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ನನೀ ಕಾಣೆ! ನನ್ ಮನಸನ್ನನೀ ಕಾಣೆ!
ಯೆಂಡ ಓಗ್ಲಿ! ಯೆಡ್ತಿ ಓಗ್ಲಿ! ಎಲ್ಲಾ ಕೊಚ್ಕೊಂಡ್ ಓಗ್ಲಿ!
ಯೆಂಡ ಓಗ್ಲಿ! ಯೆಡ್ತಿ ಓಗ್ಲಿ! ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ...
ಪರ್ಪಂಚ್ ಇರೋ ತನಕ ಮುಂದೆ.. ಕನ್ನಡ್ ಪದಗೊಳ್ ನುಗ್ಲಿ! ಕನ್ನಡ್ ಪದಗೊಳ್ ನುಗ್ಲಿ!ಪರ್ಪಂಚ್ ಇರೋ ತನಕ ಮುಂದೆ.. ಕನ್ನಡ್ ಪದಗೊಳ್ ನುಗ್ಲಿ!
-----------------------------------------------------------------------
ದೇವದಾಸಿ (1978) - ಅಥಾತೋ ಬ್ರಹ್ಮ ಜಿಜ್ಞಾಸಾ ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ವಿಜಯನಾರಸಿಂಹ, ಗಾಯನ : ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ
ಗಂಡು : ಅಥಾತೋ ಬ್ರಹ್ಮ ಜಿಜ್ಞಾಸಾ ..
ಹೆಣ್ಣು : ಪ್ರಿಯ ಕಾಂತ .. ಗುರುನಾಥ ಏನೀ ಸಲ್ಲದ ವಿಪರೀತ..
ವಯಸ್ಸಿಗೇ ಒಲ್ಲದ ವೇದಾಂತ.. ವಯಸ್ಸಿಗೇ ಒಲ್ಲದ ವೇದಾಂತ..
ಪೂರ್ಣ ಶೋಡಸ್ ವರ್ಷ ಸುಂದರ ಹರೆಯ ತುಂಬಿದ ಚಂದಿರ
ಈಗಲೇ ಇವನಾದ ಬೇಕೇ ವೃದ್ಧ ಸುಮತಿದೂ ಹಸ್ಮತಿ..
ಗಂಡು : ಎಚ್ಚರ.. ತಾರಾ ಎಚ್ಚರ.. ಎಚ್ಚರ.. ತಾರಾ ಎಚ್ಚರ..
ಮೈಮೇಲೆ ಎಚ್ಚರ ಮನಸಿನಲೇ ಎಚ್ಚರ... ಪ್ರೀತಿಯಲೀ ಎಚ್ಚರ.. ನೀತಿಯಲೇ ಎಚ್ಚರ..
ಮಾಸದಿ ಅನುಸೂಯಾತನಯ ಸ್ನಾತಕ ಚಂದಿರ ಆತ್ರಯ ..
ಎಚ್ಚರದಿಂದಿರೂ ಯುವುಕ ಮರಳಿ ಮರಳುವ ತನಕ
ಎಚ್ಚರ.. ಎಚ್ಚರ.. ಎಚ್ಚರ..
ಹೆಣ್ಣು : ಚೆಲುವಿನ ಚಂದಿರ ಹರೆಯದ ಮಂದಿರ
ಮಾತು: ಎರೆಯುವ ಸುಮಗಳ ಸುಗಂಧ ಸಾರ.. ಎಲ್ಲಿ ನನ್ನ ಒಲವ ಸೂರೆಗಳಿದ ಚೆಲುವ ಎಲ್ಲೀ ..
ಗಂಡು : ಸಂಯಮ ಬಾಹಿರ ನೇಹ ಸದರ ಘೋರ ಪಾಪ ಪ್ರಖರ.. ಘೋರ ಪಾಪ ಪ್ರಖರ..
ಹೆಣ್ಣು : ಮೀರಿದ ವಯಸ್ಸಿನ ಮುದಿಪುರುಷ ತಾರಾನು ತಾರೆಗೆ ಹರುಷ..
ಹರೆಯದ ಒಲವಿದು ಪ್ರಕೃತಿ.. ಝರೆಯಿಂದಾಗಿದೇ ವಿಕೃತೀ ..
ಇನಿಯಳ ತಣಿಸದ ಪ್ರೇಮ ವಿರೋಧೀ .. ಗುರುವೇ ಆದರೂ ಅಪರಾಧೀ ..
ಹೆಣ್ಣು : (ಮಾತು ) ಕೋಮಲ ಹೂವೇ ತನುವಿಗೇ ನೋವೇ ಏನೋ ಹಾಳೂ
ಎಲ್ಲಾ ಕಳಚುವೇ ತಾಳೂ ...
-----------------------------------------------------------------------
ದೇವದಾಸಿ (1978) - ಓರೇ ನೋಟವ ಬೀರಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್.
ಓರೇ ನೋಟವ ಬೀರಿ....
ಓರೆ ನೋಟವ ಬೀರಿ ವಯ್ಯಾರವನು ತೋರ್ವ..
ಓಲಪು ಒಲಮೆಗಳೆಲ್ಲಾ ಸಂಸಾರಿಗಲ್ಲಾ..
ಮುರುಕು ಕುಲುಕೂಗಳಿಂದ ಮನವ ಕಲಕುವ ಚೆಲ್ವ
ಥಳಕೂ ಬಳಕೂಗಳೆಲ್ಲಾ.. ಸಂಸಾರಿದಲ್ಲಾ..
ನಡುಬೀದಿಯೊಳ ನಿಂತೂ ನೆರೆಯವರ ಕಡೇ ನೋಡಿ
ನಲಿದು ನಡೆಯುವ ಠೀವಿ ಸಂಸಾರಿಗಲ್ಲಾ..
ಕಣ್ಮನವ ಕೊರೈಪ್ ಕಣ್ಣ ಮನವ ಕೊರೈಪ ಕಾಮನಿಯಳಾ ರೂಪ ಕಾಂಚಾಣ ಕಲಾಪವೈ
ಕಾಂಚಾಣ ಕಲಾಪವೈ ಸಂಸಾರಿಯಲ್ಲಾ... ಆಆಆ.....
-----------------------------------------------------------------------
ದೇವದಾಸಿ (1978) - ಕೃಷ್ಣಾ ಎನಬಾರದೇ...
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಪುರಂದರದಾಸ, ಗಾಯನ : ವಾಣಿಜಯರಾಂ
ಹೆಣ್ಣು : ಕೃಷ್ಣ ಎನಬಾರದೇ ಶ್ರೀ ಕೃಷ್ಣ ಎನಬಾರದೇ
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ ...
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ ...
ಕೃಷ್ಣ... ಕೃಷ್ಣ ಎನಬಾರದೇ ಶ್ರೀ ಕೃಷ್ಣ ಎನಬಾರದೇ
ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣ ಎನಬಾರದೇ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೇ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೇ
ಬಹುಚಂದಳ್ಳೇ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ
ಕೃಷ್ಣ... ಕೃಷ್ಣ ಎನಬಾರದೇ ಶ್ರೀ ಕೃಷ್ಣ ಎನಬಾರದೇ
ಹೆಣ್ಣು : ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೇ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೇ
ದುರಿತರಾಟಿಗಳ ಸರಿತಗಿ ಬಿಸಾಡುತಲ್ಲೊಮ್ಮೆ ಕೃಷ್ಣ ಎನಬಾರದೇ
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೇ
ಕೃಷ್ಣ... ಕೃಷ್ಣ ಎನಬಾರದೇ ಶ್ರೀ ಕೃಷ್ಣ ಎನಬಾರದೇ
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ ... ಕೃಷ್ಣ...
ಕೃಷ್ಣನ ನೆನೆದರೆ ಕಷ್ಟವೂ ಒಂದಿಷ್ಟಿಲ್ಲ ... ಕೃಷ್ಣ...
ಎಲ್ಲರು : ಕೃಷ್ಣ ಎನಬಾರದೇ ಶ್ರೀ ಕೃಷ್ಣ ಎನಬಾರದೇ
ಹೆಣ್ಣು : ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ
ಜೈ ಜೈ ಕೃಷ್ಣ ಶ್ರೀಹರಿ ಕೃಷ್ಣಾ
ಎಲ್ಲರು : ಕೃಷ್ಣ ಕೃಷ್ಣ ಜೈ ಜೈ ಕೃಷ್ಣ ... ಕೃಷ್ಣ ಕೃಷ್ಣ ಜೈ ಜೈ ಕೃಷ್ಣ ಶ್ರೀ ಹರೀ ಕೃಷ್ಣ
ಹೆಣ್ಣು : ಕೃಷ್ಣಾ... ಕೃಷ್ಣಾ... ಕೃಷ್ಣಾ...
----------------------------------------------------------------------
ದೇವದಾಸಿ (1978) - ಓ ರಸಿಕ ಈ ನಿಮಿಷ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕಿ
ಓ ರಸಿಕ ಈ ನಿಮಿಷ
ಓ ರಸಿಕ ಈ ನಿಮಿಷ ಮರೆಯದ ಮಾತಾಡೋ ರಸ ನಿಮಿಷ
ಓ ರಸಿಕ ಈ ನಿಮಿಷ ಮರೆಯದ ಮಾತಾಡೋ ರಸ ನಿಮಿಷ
ಓ ರಸಿಕ....
ಮಧುಚಂದ್ರ ರಾತ್ರಿಯಲ್ಲಿ ಮಧುಚೈತ್ರ ಧಾತ್ರೆಯಲ್ಲಿ..
ಮಧುಚಂದ್ರ ರಾತ್ರಿಯಲ್ಲಿ ಮಧುಚೈತ್ರ ಧಾತ್ರೆಯಲ್ಲಿ..
ಮಧುವಾತ್ಮ ಮೈತ್ರಿಯಲ್ಲಿ ಭಾವೈಕ್ಯ ಬಂಧನದಲ್ಲಿ
ಮಧುವಾತ್ಮ ಮೈತ್ರಿಯಲ್ಲಿ ಭಾವೈಕ್ಯ ಬಂಧನದಲ್ಲಿ
ಉಲಿವ .. ನಲಿವ...
ಉಲಿವ .. ನಲಿವ... ರಸನಿಮಿಷ ..
ಓ ರಸಿಕ ಈ ನಿಮಿಷ ಮರೆಯದ ಮಾತಾಡೋ ರಸ ನಿಮಿಷ
ಓ ರಸಿಕ....
ಮಂದಾರ ನಂದನದಲ್ಲಿ ಮಾಂಗಳಿರ ಮಂಚದಲ್ಲಿ
ಮಂದಾರ ನಂದನದಲ್ಲಿ ಮಾಂಗಳಿರ ಮಂಚದಲ್ಲಿ
ಮಾಮಲರ ಹೂವ ಮಳೆಯಲ್ಲಿ.. ಈ ಬಾಹೂ ಬಂಧನದಲ್ಲಿ..
ಮಾಮಲರ ಹೂವ ಮಳೆಯಲ್ಲಿ.. ಈ ಬಾಹೂ ಬಂಧನದಲ್ಲಿ..
ಉಲಿವ .. ನಲಿವ...
ಉಲಿವ .. ನಲಿವ... ರಸನಿಮಿಷ ..
ಓ ರಸಿಕ ಈ ನಿಮಿಷ ಮರೆಯದ ಮಾತಾಡೋ ರಸ ನಿಮಿಷ
ಓ ರಸಿಕ.... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಓ ರಸಿಕ.......
----------------------------------------------------------------------
ದೇವದಾಸಿ (1978) - ಜಗದಾದಿ ದೇವತೆಯ ಪ್ರತಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ:ಮಾ||ಹಿರಣ್ಣಯ್ಯ ಗಾಯನ : ಎಸ್.ಪಿ.ಬಿ
ಜಗದಾದಿ ದೇವತೆಯ ಪ್ರತಿರೂಪವೋ ಎಂಬ
ಝಣ ಝಣದ ಝಣ ಝಣದ ರೂಪಾಯಿ ಅವಳ ಗಂಡ..
ಬಯಸಿದ ಆಸೆಯ ಸಲ್ಲಿಸಿ ಬ್ರಹ್ಮಾಂಡದೊಳೂ ಮೆರೆವ ಈ ಬೆಳ್ಳಿ ರೂಪಾಯೀ ...
ಈ ಬೆಳ್ಳಿ ರೂಪಾಯೀ ಅವಳ ಗಂಡ...
ಕಲಹ ಕಾರಣ ಅಹ್ಹಹ್ಹ.. ಸರ್ವ ಕಾರ್ಯಸಾಧನ ಪ್ರಾಣ ಗುಣ ಪೂರ್ಣ ರೂಪಾಯಿ ಅವಳ ಗಂಡ..
ಇದ್ದೂ ನಾಶವಗೈದು ಇರದೇ ಚಿಂತೆಯ ತರುವ ಈ ಬಂಧೀ ರೂಪಾಯಿ ಅವಳ ಗಂಡ
ಇದನೇಲ್ಲ ಮನ ತಿಳಿದೂ ಮಾನಮೂಳಿದೂ .. ಅಡಿಯಾಳಿನಂತವಳ ಪದದಿ ನಿಂದೂ..
ಮಡದೀ.. ಮಡದೀ... ಓ ಮೈ ಡಾರ್ಲಿಂಗ್
ಮಡದೀ.. ನೀನೆನ್ನ ಸರ್ವ ಸುಖವೆಂದೂ
ಬಡಿದಾಡಿ ಮಡಿವ ಭಂಡರೋ.. ಪುಂಡರೋ ಷಂಡರೋ ..ಗಂಡರೋ ನೀವೂ ... ಉಉಉಉಉ .. ಆಆಆ
-----------------------------------------------------------------------
ದೇವದಾಸಿ (1978) - ನೀ ಒಲಿದ ಸಳೆದ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ವಿಜಯನಾರಸಿಂಹ, ಗಾಯನ : ಎಸ್.ಜಾನಕಿ, ಕೃಷ್ಣ ಮೂರ್ತಿ
ಗಂಡು : ಆಆಆ... ಆಆಆ...
ಹೆಣ್ಣು : ನೀ ಒಲಿದ ಸೆಳೆದ ಚಿರನವಯೌವ್ವನ ಹೊಸ ಬಗೆ ಬಂಧನ ಅನುರಾಗ
ಈ ಅನುರಾಗ ಜೀವನ..
ನೀ ಒಲಿದ ಸೆಳೆದ ಚಿರನವಯೌವ್ವನ ಹೊಸ ಬಗೆ ಬಂಧನ ಅನುರಾಗ
ಈ ಅನುರಾಗ ಜೀವನ..
ಹೆಣ್ಣು : ಹೂಬಾಣದ ಹುಣ್ಣಿಮೆ ಮಧುಚಂದ್ರಮ ರಸಲೀಲೆಯೂ ಸುಂದರ ಸುಖಧಾಮ..
ಹೂಬಾಣದ ಹುಣ್ಣಿಮೆ ಮಧುಚಂದ್ರಮ ರಸಲೀಲೆಯೂ ಸುಂದರ ಸುಖಧಾಮ..
ಮಧುಮಾಸದ ಸಂದೇಶದ ಒಲವಿನ ಚೆಲುವಿನ ಸಂಭ್ರಮ
ಏನೋ ಹೊಸ ಗಂಗೂ ಆಶಾಭಾವದ ಸಂಗಮ
ಗಂಡು : ನೀ ಒಲಿದ ಸೆಳೆದ ಚಿರನವಯೌವ್ವನ ಹೊಸ ಬಗೆ ಬಂಧನ ಅನುರಾಗ
ಈ ಅನುರಾಗ ಜೀವನ..
ಹೆಣ್ಣು : ಈ ಕಾವ್ಯದ ಕನ್ನಿಕೆ ನಾನಾಗುವೇ .. ನವಚೇತನ ಧಾರೆಯ ನೀನಗಿಯುವೇ..
ಉಲ್ಲಾಸದ ಉಯ್ಯಾಲೆಯ ಅನುಪಮ ಅನುಭವ ಬಾಳುವೇ ..
ನೀನೇ ಒಲವೆಂದೇ ಪ್ರೇಮದ ಕಾಣಿಕೆ ನೀಡುವೇ
ಇಬ್ಬರು : ನೀ ಒಲಿದ ಸೆಳೆದ ಚಿರನವಯೌವ್ವನ ಹೊಸ ಬಗೆ ಬಂಧನ ಅನುರಾಗ
ಈ ಅನುರಾಗ ಜೀವನ..
ಗಂಡು : ಆಆಆ... (ಆಆಆ ) ಆಆಆ (ಆಆಆ.. ಆಆಆ... ಆಆಆ.. )
-----------------------------------------------------------------------
ದೇವದಾಸಿ (1978) - ಲೋಕ ಸುಮ್ಕೇ ಕೆಟ್ಟೋಗೈತೇ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಜಿ.ಪಿ.ರಾಜರತ್ನಂ, ಗಾಯನ : ಎಸ್.ಪ.ಬಿ
ಲೋಕ ಸುಮ್ಕೆ ಕೆಟ್ಟೋಗೈತೇ..
ಲೋಕ ಸುಮ್ಕೆ ಅಹ್ಹಹ್ಹಾ ಕೆಟ್ಟೋಗೈತೇ ಪೂರಾ ತುಂಬಾ ಬಾಳ
ಬದ್ಕೋಳಿಟ್ಟ ಕುಂತರೇ ಅದೂ ಕೈಗೋಳ ಹಾಕೋ ತಾಳ ಹ್ಹಾ.. ಹ್ಹಾ
ಲೋಕ ಸುಮ್ಕೆ ಅಹ್ಹಹ್ಹಾ ಕೆಟ್ಟೋಗೈತೇ ಪೂರಾ ತುಂಬಾ ಬಾಳ
ಬದ್ಕೋಳಿಟ್ಟ ಕುಂತರೇ ಅದೂ ಕೈಗೋಳ ಹಾಕೋ ತಾಳ
ದುಡ್ಡಿನ ಖರ್ಚು ಹೊಟ್ಟೆಕಿಚ್ಚು ಏನಂಗೇ ಹಚ್ಚಕೊಂಡೈತೆ
ಸುಖ ಶಾಂತಿ ತೃಪ್ತಿ ಎಂತೂ ಬಾಗಿಲ್ ಮುಚ್ಚಕೊಂಡೈತೇ...
ಅಯಿಕೊಂಡ್ ತಪ್ಪನ್ ಇದೂ ನಮ್ಮ ವೇಷ..ಅಹ್ಹ ಆಹ್ಹಾ..
ಅಯಿಕೊಂಡ್ ತಪ್ಪನ್ ಇದೂ ನಮ್ಮ ವೇಷ ಈಗೇನ್ ಗೈದೇ ನೋಡೂ
ಕಟುಕರ ಕೋಣೆ ನರಕಕ ಕಪ್ಪಾ ಬದುಕಿರೋ ಸುಡುಗಾಡೂ ..
ದೇವರಂತನ್ನೂ ದೊಡ್ಡಹೆಸರಬೇಕೂ
ದೇವರಂತನ್ನೂ ದೊಡ್ಡಹೆಸರಬೇಕೂ ಪದವಿ ಸಂಬಳ ಬೇಕೂ ..
ಕಟ್ಟಕೊಂಡ ಕೆಲಸ ಮಾಡದಿದ್ದ್ರೂನೇ ಅಹ್ಹಹ್ಹಾ.. ಏನೀ ಜೋಕೂ ಆಹ್ಹಾ ..
ರೂಪಾ ನಿಂಗೈತೇ ನಾನ್ಯಾಕ್ ದುಃಖಪಡಲೀ ..
ಮುನಿಯಂಗೂ ಹೆಂಡಕ್ಕೂ ಬೋಲೋರೇ ಜೈ
ಬೋಲೋರೇ ಜೈ ಬೋಲೋ ಬೋಲೋರೇ ಜೈ
ಅರೇ ಬೋಲೋರೇ ಜೈ ಅರೇ ಬೋಲೋರೇ ಜೈ
----------------------------------------------------------------------
ದೇವದಾಸಿ (1978) - ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕಿ, ವಾಣಿಜಯರಾಮ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ದ್ವೇಷ ಅಸೂಯೆಯ ಈ ಲೋಕದಲ್ಲಿ ಪಾಪದಿ ವಿಚಾರದ ಪಂಜರದಲ್ಲಿ
ದ್ವೇಷ ಅಸೂಯೆಯ ಈ ಲೋಕದಲ್ಲಿ ಪಾಪದಿ ವಿಚಾರದ ಪಂಜರದಲ್ಲಿ
ಆಶಾ ನಿರಾಶೆಯ ಈ ಬಾಳಿನಲ್ಲಿ
ಆಶಾ ನಿರಾಶೆಯ ಈ ಬಾಳಿನಲ್ಲಿ ಹೂ ಮಾಲಿ ಆವಾಗ
ಹೂ ಮಾಲಿ ಆವಾಗ ಈ ಕಾಲದಲ್ಲಿ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಕಾಮಾಂಧಕಾರದ ಸಮಾಜದಲ್ಲಿ ನಾನಾಗಿ ವಿಲಾಸದ ವೈಭೋಗದಲ್ಲಿ
ಕಾಮಾಂಧಕಾರದ ಸಮಾಜದಲ್ಲಿ ನಾನಾಗಿ ವಿಲಾಸದ ವೈಭೋಗದಲ್ಲಿ
ಮೋಹಾನುರಾಗದ ಮಾಳಿಗೆಯಲ್ಲಿ
ಮೋಹಾನುರಾಗದ ಮಾಳಿಗೆಯಲ್ಲಿ ನೆನೆನೆನೆದೂ ತಾ ಬಂದೂ
ನೆನೆನೆನೆದೂ ತಾ ಬಂದೂ ಕಣ್ಣೀರಿನಲ್ಲಿ..
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
ಆ ಸ್ನೇಹ ವಾತ್ಸಲ್ಯ ಅಜರಾಮರ
ನಾ ಕಂಡೇ ನಿನ್ನಲ್ಲಿ ಮನೆದೇವರ.. ನನ್ನ ಮನೆದೇವರ..
-----------------------------------------------------------------------
ದೇವದಾಸಿ (1978) - ಸುಖವೀವ ಸುರಪಾನವಿದೇ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ.
ಸುಖವೀವ ಸುರಪಾನವಿದೇ ಸ್ವರ್ಗ ಸಮಾನಂ
ಆಡಿಸಿ ಹ್ಹಾ.. ಕಾಡಿಸಿ.. ಹ್ಹಾ..
ಜಿಗಿದಾಡಿಸೀ ತಡಕಾಡಿಸೀ ತಲೆ ತೂಗಿಸೋ ಪಾನಂ
ತಂಪಿನ ಪಾನಂ ಅಹ್ಹಹ್ಹಹಹ ತನು ತಂಪಿನ ಪಾನಂ
ಸುರನಾರಿಯ ತಲೆ ಹಾರಿಸಿ ಪರಿಜೋಡಿದ ಜ್ಞಾನಂ
ಈ ಲೋಕದೇ ಇದೂ ಒಂದೇ ಅಮೃತ ಪಾನಂ
ಬರೀ ಮಾತಿನ ಜನ ಎಂತರಿವರೂ ಇದರಾಭಿಮಾನಂ
ಸರಕಾರದವರ ಮಾನದೊಳಿದು ಪುಟ್ಟ ಮಸಾಲಂ
ಇಂಡಿಯದೊಳ್ ಎಲ್ಲರಿಗಿದೂ ದೈವ ಸಮಾನಂ
ನಮ್ಮ ಇಂಡಿಯದೊಳ್ ಎಲ್ಲರಿಗಿದೂ ದೈವ ಸಮಾನಂ
ತಂಪಿನ ಪಾನಂ ಅಹ್ಹಹ್ಹಹಹ ತನು ತಂಪಿನ ಪಾನಂ
ಸುಖವೀವ ಸುರಪಾನವಿದೇ ಸ್ವರ್ಗ ಸಮಾನಂ
ಆಡಿಸಿ ಕಾಡಿಸಿ..ಜಿಗಿದಾಡಿಸೀ ತಡಕಾಡಿಸೀ ತಲೆ ತೂಗಿಸೋ ಪಾನಂ
ತಂಪಿನ ಪಾನಂ ಅಹ್ಹಹ್ಹಹಹ ತನು ತಂಪಿನ ಪಾನಂ
ನಶ್ವರ ಸಂಸಾರದ ವ್ಯಾಮೋಹವ ಮರೆಸೀ ..
ವೈಶ್ಯೆಯ ಸುಖ ಜಾಲದ ಬರೀ ಮಾಯೆ ಉಳಿರಿಸಿ
ಮನೆಮಠಗಳ ಮಾರಿಸೀ ಮನದಾಸೆಯ ಮುಗಿಸೀ ..
ಕೊನೆಗೂಳಿದ ಸಾಲಕೇ ಸನ್ಯಾಸವ ಕೊಡಿಸೀ ..
ಬಹುರೋಗದ ಋಣಭಾದೆಯೂರಿ ಪ್ರಾಣವ ಬೀಡಿಸಿ
ಪರಲೋಕಕೇ ಕರೆದೊಯ್ಯುವ ಬಹು ಸುಲಭ ವಿಧಾನಂ..
ತಂಪಿನ ಪಾನಂ ಅಹ್ಹಹ್ಹಹಹ ತನು ತಂಪಿನ ಪಾನಂ
ಸುಖವೀವ ಸುರಪಾನವಿದೇ ಸ್ವರ್ಗ ಸಮಾನಂ
ಆಡಿಸಿ ಕಾಡಿಸಿ..ಜಿಗಿದಾಡಿಸೀ ತಡಕಾಡಿಸೀ ತಲೆ ತೂಗಿಸೋ ಪಾನಂ
ತಂಪಿನ ಪಾನಂ ತನು ತಂಪಿನ ಪಾನಂ.. ಅಹ್ಹಹ್ಹಹಹ
ಗರ್ವಮೆಂಟ್ ಇಸ್ ದ್ ಕಮಿಂಗ್ ಇಟ್ಸ ಇನ್ಕ್ರೀಜಿಂಗ್ ಇನ್ಕಮ್
ಗ್ರೇಟ್ ಇಂಡಿಯನ್ ಏನ್ ಚಾಂಸಿಂಗ್ ಬ್ಲ್ಯಾಕ್ ಡ್ಯೂರಿಫಿಕೇಷನ್
ಬೆಸ್ಟ ಪಾಸಿಬಲ್ ಬ್ಯಾಡ ಇಂಥಿಂಗ್ ಬ್ರೀನ್ಗ ಇಮ್ಯುಲೇಷನ್
ವೆಲ್ ನೋಬಡಿ ಸ್ಟೂಡ್ ಟ್ರಸ್ಟ ದ್ ಮೈ ನೋಟಿಫಿಕೇಷನ್
ಇಫ್ ಎನಿಬಡಿ ವಾಂಟ್ಸ ಎನಿಥಿಂಗ್ ಈಲ್ಸ ಅಹ್ಹಹ್ಹಾ.. ಎನಿಬಡಿ ದ್ಯಾಟ್
ಲೇಟ ಮೀ ಖುಷ್ ಏಂಡ್ ಮೀ ಆಹ್ಹಾ..
ಮೈ ಗ್ರ್ಯಾಟಿಟಿಕೇಷನ್ ಅಹ್ಹಹ್ಹಾ .. ಮೈ ಗ್ರ್ಯಾಟಿಫಿಕೇಷನ್ ಮೆಸೇಜ್ ಟೂ ಮೈ ನೇಷನ್
ಸುಖವೀವ ಸುರಪಾನವಿದೇ ಸ್ವರ್ಗ ಸಮಾನಂ
ಆಡಿಸಿ ಹ್ಹಾಂ .. ಕಾಡಿಸಿ..ಅಹ್ಹಹ್ಹ .. ಜಿಗಿದಾಡಿಸೀ ತಡಕಾಡಿಸೀ ತಲೆ ತೂಗಿಸೋ ಪಾನಂ
ತಂಪಿನ ಪಾನಂ ಹ್ಹಾಮ್ ತನು ತಂಪಿನ ಪಾನಂ.. ಅಹ್ಹಹ್ಹಹಹ
---------------------------------------------------------------------
No comments:
Post a Comment