ದೇವರ ಆಟ ಚಲನಚಿತ್ರದ ಹಾಡುಗಳು
- ಮೊದಲನೇ ನೋಟಕೆ ನಿನ್ನಾ ಮೇಲೆ ಮನಸಾಯಿತು
- ಈ ಸೌಂದರ್ಯಕೆ ನಿನ್ನ ಅನುರಾಗಕೆ
- ಹೋಗೇ ಅರೇ ಹೋಗೇ
- ಬೆಳ್ಳಿ ಬೋಂಬೆ ಭೂಲೋಕ ರಂಭೇ
- ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಗಂಡು : ಮೊದಲನೇ ನೋಟಕೆ ನಿನ್ನಾ ಮೇಲೆ ನಂಗೆ ಮನಸಾಯ್ತು
ಮನಸಾಗಿ ಲವ್ ಆಯ್ತು ಲವ್ ಆಗಿ ಸುಸ್ತು ಆಯ್ತು( (ಹ್ಹಾಂ )
ಮೊದಲನೇ ನೋಟಕೆ ನಿನ್ನಾ ಮೇಲೆ ನಂಗೆ ಮನಸಾಯ್ತು
ಮನಸಾಗಿ ಲವ್ ಆಯ್ತು ಲವ್ ಆಗಿ ಸುಸ್ತು ಆಯ್ತು
ಹೆಣ್ಣು : ಅಯ್ಯಯ್ಯೋ.. ಛೀ.. ಛೀ ..
ಗಂಡು : ವಯಸ್ಸಾದರೇನಾಯ್ತಮ್ಮ ಮನಸಾರ ಪ್ರೀತಿಸಮ್ಮಾ
ಹೂಂ .. ಅನ್ನೋ ತನಕ ಬೀಡೇನಮ್ಮಾ ...(ಹ್ಹಾ.. ಅಯ್ಯಯ್ಯೋ)
ವಯಸ್ಸಾದರೇನಾಯ್ತಮ್ಮ ಮನಸಾರ ಪ್ರೀತಿಸಮ್ಮಾ
ಹೂಂ .. ಅನ್ನೋ ತನಕ ಬೀಡೇನಮ್ಮಾ ..
ಹುಡುಗನಿಗೇ ನೀ ಅಂಕಲ್ ಹುಡುಗಿಗೇ ನೀ ಅಂಟೀ ಇಂಥ ಜೋಡಿ ಎಲ್ಲುಂಟು
ಆ ನಂದನ ಹೆಂಡಿರ ಚಿಕ್ಕಮ್ಮಾ ..(ಛೀ..ಛೀ.. ಈ ವಯಸ್ಸಲ್ಲಿ ಏನ್ರೀ ಇದೂ )
ಮೊದಲನೇ ನೋಟಕೆ ನಿನ್ನಾ ಮೇಲೆ ನಂಗೆ ಮನಸಾಯ್ತು
ಮನಸಾಗಿ ಲವ್ ಆಯ್ತು ಲವ್ ಆಗಿ ಸುಸ್ತು ಆಯ್ತು (ಆ)
ಗಂಡು : ಮರವನ್ನೇ ಉರುಳಿಸಬಲ್ಲೇ ಕಡಲಲ್ಲಿ ಈಜಲೂ ಬಲ್ಲೇ ಹುಲಿಯನ್ನೇ ಎದುರಿಸಬಲ್ಲೇ ನಾ (ಹ್ಹಾ..ಹ್ಹಾ )
ಮರವನ್ನೇ ಉರುಳಿಸಬಲ್ಲೇ ಕಡಲಲ್ಲಿ ಈಜಲೂ ಬಲ್ಲೇ ಹುಲಿಯನ್ನೇ ಎದುರಿಸಬಲ್ಲೇ ನಾ
ತೋಳಿನಲಿ ಶಕ್ತಿ ಇದೇ ಮನಸಿನಲಿ ಆಸೆ ಇದೆ ಇಂಥಾ ಛಾನ್ಸು ಸಿಕ್ಕದು
ಬಾ ನನ್ನೇ ಕೊಡುವೇ ಮುದಕಮ್ಮಾ
ಹೆಣ್ಣು : ಥೂ . ಬಿಡ್ರೀ, ಬಿಡ್ತಿರೋ ಇಲ್ವೋ
ಗಂಡು : ಮೊದಲನೇ ನೋಟಕೆ ನಿನ್ನಾ ಮೇಲೆ ನಂಗೆ ಮನಸಾಯ್ತು
ಮನಸಾಗಿ ಲವ್ ಆಯ್ತು ಲವ್ ಆಗಿ ಸುಸ್ತು ಆಯ್ತು
ಇಬ್ಬರು : ಅಹ್ಹಹ್ಹಹ್ಹ.. ಅಹ್ಹಹ್ಹ ಅಹ್ಹಹ್ಹಹ್ಹ ...
--------------------------------------------------------------------------------------------------------------------------
ದೇವರ ಆಟ (೧೯೮೧) - ಈ ಸೌಂದರ್ಯಕೆ ನಿನ್ನ ಅನುರಾಗಕೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ
ಗಂಡು : ಈ ಸೌಂದರ್ಯಕೆ (ಆಆಆ ) ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೇ .. ಪ್ರೇಯಸೀ ... (ಆಆಆ ಆಆಆ )
ಈ ಸೌಂದರ್ಯಕೆ (ಆಆಆ ) ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೇ ..ನಾ ಸೋತು ಹೋದೆ ಅಂದೇ .... (ಆಆಆ )
ಗಗನದ ಕೆಂಪಿನ ವರ್ಣವು ಸೋತಿದೆ ಹವಳದ ನಿನ್ನಧರಕೇ ..
ಲತೆಯ ಹಾಗೇ ಬಳುಕಿ ನೀನು ಆಡಿ ಕುಣಿಯುವಾಗ ತನುವಿನಿಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು ಚೆಲುವೇ ನಿನಗೆ ಸಾಟಿ ಯಾರೂ ಇಂದೂ ...
ಈ ಸೌಂದರ್ಯಕೆ (ಆಆಆ ) ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೇ ..ನಾ ಸೋತು ಹೋದೆ ಅಂದೇ .... (ಆಆಆ )
ಹೆಣ್ಣು : ಆಆಆ ಆಆಆ ಆಆಆ ಆಆಆ ಆಆಆ ಆಆಆ
ಗಂಡು : ಹೃದಯದ ವೀಣೆಯ ಮೀಟುತ ನುಡಿಸಿದೆ ಹೊಸ ರಾಗವ (ಆಆಆ ಆಆಆ )ನನ್ನೆದೇ ತಾಳಕೆ ನಲಿಯುತ ಕುಣಿಯುತ ತುಂಬಿದ ನೀ ಮೋಹವಾ
ಮನದ ಆಸೇ ಕಂಗಳಿಂದ ಹಾಡಿ ಕಣ್ಣ ಬಾಷೆಯಿಂದ ಮೋಡಿ ಮಾಡಿ
ಹೊಸ ಹೊಸ ಕನಸಿನ ಉಡುಗರೇ ತಂದೆ ಬಯಕೆ ಅರಳಿ ಸನಿಹ ಸೇರೇ ಬಂದೇ
ಈ ಸೌಂದರ್ಯಕೆ (ಆಆಆ ) ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೇ .. ಪ್ರೇಯಸೀ ... (ಆಆಆ ಆಆಆ )
ಈ ಸೌಂದರ್ಯಕೆ (ಆಆಆ ) ನಿನ್ನ ಅನುರಾಗಕೆ (ಆಆಆ )
ನಾ ಸೋತು ಹೋದೆ ಅಂದೇ ..(ಆಆಆ ) ನಾ ಸೋತು ಹೋದೆ ಅಂದೇ .... (ಆಆಆ )
--------------------------------------------------------------------------------------------------------------------------
ದೇವರ ಆಟ (೧೯೮೧) - ಹೋಗೇ ಅರೇ ಹೋಗೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಹೋಗೇ ಅರೇ .. ಹೋಗೇ ನನ್ನಂಥ ಭೂಪಂಗೆ ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನೂ ಮೇಲೆ ನಾಳೆ ನೀ ನೋಡು ನನ್ನ ಲೀಲೆ.. ಹ್ಹಾ.. ಹೂಂ ಹೂಂಹೂಂ
ಕೆಣಕಿದರೇ ಗುಡುಗಂತೇ ಕೆರಳಿದರೇ ಸಿಡಿಲಂತೇ
ಕೆಣಕಿದರೇ ಗುಡುಗಂತೇ ಕೆರಳಿದರೇ ಸಿಡಿಲಂತೇ
ವೈರಿಗಳು ಬಂದಾಗ ರೋಷದಲಿ ನಿಂತಾಗ ಶಿವನ ಮೂರನೇ ಕಣ್ಣಂತೇ
ಹೋಗೇ... ಹೇ.. ಹೋಗೇ ನನ್ನಂಥ ಭೂಪಂಗೆ ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನೂ ಮೇಲೆ ನಾಳೆ ನೀ ನೋಡು ನನ್ನ ಲೀಲೆ
ನೀ ಒಂಟಿ ಗುಬ್ಬಿ ಇನ್ನೂ ಮೇಲೆ ಟಂಡಡಡ ನಾಳೆ ನೀ ನೋಡು ನನ್ನ ಲೀಲೆ
ಪ್ರೀತಿಸುವೇ ಸೊಗಸಾಗಿ ಮುದ್ದಿಸುವೇ ಹಿತವಾಗಿ.. ಹಾಯ್ ಹಾಯ್..ಹಾಯ್
ಪ್ರೀತಿಸುವೇ ಸೊಗಸಾಗಿ ಮುದ್ದಿಸುವೇ ಹಿತವಾಗಿ
ನೀ ಜಂಭ ಅರೇ .. ಬಿಟ್ಟಾಗ ತಪ್ಪಾಯ್ತು ಅಂದಾಗ ನನ್ನ ಪ್ರಾಣ ಕೊಡುವೇ ನಿನಗಾಗಿ
ಹೋಗೇ ಹೋಗೂ ಅರೇ ಹೋಗೇ ಹೋಗೂ ನನ್ನಂಥ ಭೂಪಂಗೆ ಹೆಣ್ಣೊಂದು ಸಿಗದೇನು
ನೀ ಒಂಟಿ ಗುಬ್ಬಿ ಇನ್ನೂ ಮೇಲೆ ನಾಳೆ ನೀ ನೋಡು ನನ್ನ ಲೀಲೆ
ಅರೆರೆರೆರೇ .. ನೀ ಒಂಟಿ ಗುಬ್ಬಿ ಇನ್ನೂ ಮೇಲೆ ನಾಳೆ ನೀ ನೋಡು ನನ್ನ ಲೀಲೆ
--------------------------------------------------------------------------------------------------------------------------
ದೇವರ ಆಟ (೧೯೮೧) - ಬೆಳ್ಳಿ ಬೋಂಬೆ ಭೂಲೋಕ ರಂಭೇ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಓಹೋಹೋ.. ಓ... ಓಹೋಹೊಹೋ..
ಬೆಳ್ಳಿ ಬೊಂಬೆ ಭೂಲೋಕ ರಂಭೆ ನಿಲ್ಲೇ ಅಲ್ಲೇ ಸಿಹಿ ದಾಳಿಂಬೆ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ
ಬೆಳ್ಳಿ ಬೊಂಬೆ ಭೂಲೋಕ ರಂಭೆ ನಿಲ್ಲೇ ಅಲ್ಲೇ ಸಿಹಿ ದಾಳಿಂಬೆ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ
ಬಂಪರ್ ಬಂಪರ್ ಬಂಪರ್ ಬಂಪರ್ ಬಂಪರ್ ಬಂಪರ್ ಬಂಪರ್
ಪರಪಮ್ ಪರಪಮ್ ಪರಪಮ್ ಪರಪಮ್ ಪರಪಮ್ ಪರಪಮ್
ತನಕಧೀನ ತನಕಧೀನ ತನಕಧೀನ ತನಕಧೀನ
ಒಮ್ಮೇ ನನ್ನ ಪ್ರೀತಿ ಮಾಡು ಆಗ ಕಾಣೋ ಸುಖವ ನೋಡು
ಅರೇ .. ಒಮ್ಮೇ ನನ್ನ ಪ್ರೀತಿ ಮಾಡು ಆಗ ಕಾಣೋ ಸುಖವ ನೋಡು
ಗೊಗ್ಗುನಕ್ಕೂ ಗುನಕು ಗುನಕು ಹ್ಹಾ..ಹ್ಹಾ.. ಹ್ಹಾ..
ನನ್ನ ಎಂದು ಬಿಟ್ಟಿರಲಾರೇ ಬೇರೆ ಯಾರನು ನೋಡಲಾರೇ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ.. ಹ್ಹಾ...ಹ್ಹಾ...ಹ್ಹಾ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ.. ಹ್ಹಾ...ಹ್ಹಾ...ಹ್ಹಾ
ನಿನ್ನ ಗೆಣೆಯ ಸೋತು ಇಂದು ನಿಲ್ಲಲ್ಲಾರ ನನ್ನ ಮುಂದು
ಅರೆರೇ .. ನಿನ್ನ ಗೆಣೆಯ ಸೋತು ಇಂದು ನಿಲ್ಲಲ್ಲಾರ ನನ್ನ ಮುಂದು
ಗೆದ್ದು ಬಂದ ವೀರನನ್ನೂ ಮುದ್ದು ಮಾಡು ಬಾರೇ ಚಿನ್ನ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ.. ಹ್ಹಾ...ಹ್ಹಾ...ಹ್ಹಾ
ಬೆಳ್ಳಿ ಬೊಂಬೆ ಭೂಲೋಕ ರಂಭೆ ನಿಲ್ಲೇ ಅಲ್ಲೇ ಸಿಹಿ ದಾಳಿಂಬೆ
ನಾನೇ ಕಾಡಿನ ಭೀಮ ಇವನ ಬಿಟ್ಟೋರುಂಟೇ ಬಾಮ್ಮ
ನನ್ನ ಮೈಯ್ಯಿ ಕಬ್ಬಿಣ ಕಣಮ್ಮ ಮನಸ್ಸು ಕೊಬ್ಬರಿ ಮಿಠಾಯಿ ನೋಡಮ್ಮ
--------------------------------------------------------------------------------------------------------------------------
ದೇವರ ಆಟ (೧೯೮೧) - ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ ಅಮ್ಮಾಮ್ಮಾ ಮನಸೂ ಏಕೇ ಹೀಗಾಯಿತು
ನನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಯೇ ...
ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ ಅಮ್ಮಾಮ್ಮಾ ಮನಸೂ ಏಕೇ ಹೀಗಾಯಿತು
ಊರೂರು ಕೊಳ್ಳೆ ಹೊಡೆದೂ ಓಡಿ ಬಂದೋನೇ ಬಂಗಾರ ಕದ್ದು ತಂದೂ ನನಗೇ ಕೊಟ್ಟೋನೇ
ಊರೂರು ಕೊಳ್ಳೆ ಹೊಡೆದೂ ಓಡಿ ಬಂದೋನೇ ಬಂಗಾರ ಕದ್ದು ತಂದೂ ನನಗೇ ಕೊಟ್ಟೋನೇ
ವೈಯ್ಯಾರೀ ಅಂದೋನೇ ಚೆನ್ನಿಗನೇ ನನ್ನೋನೇ .. ಆ.. ಹ್ಹಹ್ಹ.. ಹ್ಹಹ್ಹ..
ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ ಅಮ್ಮಾಮ್ಮಾ ಮನಸೂ ಏಕೇ ಹೀಗಾಯಿತು
ನನ್ನನ್ನೂ ಕಂಡಾಗೆಲ್ಲಾ ನಕ್ಕೂ ನಲಿದೋನೇ ಏನೇನೋ ಹೇಳಿ ಕಾಡೀ ಆಸೇ ತಂದೋನೇ
ಹ್ಹಾ.. ನನ್ನನ್ನೂ ಕಂಡಾಗೆಲ್ಲಾ ನಕ್ಕೂ ನಲಿದೋನೇ ಏನೇನೋ ಹೇಳಿ ಕಾಡೀ ಆಸೇ ತಂದೋನೇ
ಎದೆಯಲ್ಲಿ ನಿಂತೋನೇ ಉಸಿರಲ್ಲಿ ಬೇರೆತೋನೇ ಅರೆರೆರೆರೇ ..
ಅಯ್ಯಯ್ಯೋ ನಿನ್ನ ಪ್ರೀತಿ ಏನಾಯಿತೋ ಹ್ಹೂಂ .. ಹೇ.. ಅಮ್ಮಾಮ್ಮಾ ಮನಸೂ ಏಕೇ ಹೀಗಾಯಿತು
ನನ್ನರಸ ಚೆನ್ನರಸ ಪಟ್ಟದರಸ ಪ್ರಾಣದರಸ ಯೇ ...
--------------------------------------------------------------------------------------------------------------------------
No comments:
Post a Comment