ದೇವರ ಮನೆ ಚಲನಚಿತ್ರದ ಹಾಡುಗಳು
- ಪೇಟೆಯ ಬೀದಿ ಸುತ್ತಿ
- ಹುಟ್ಟುದೋರೂ ಸಾಯದೇ ಹೋದ್ರೇ
- ಕೆಂಪು ದೀಪದ ಓಣಿಯಾಗೇ
- ಮೈಯ್ಯಿಗೇ ಶಾನೇ ಶಾನೇ ಚಳಿಯಾಯ್ತು
ದೇವರ ಮನೆ (೧೯೮೫) - ಪೇಟೆಯ ಬೀದಿ ಸುತ್ತಿ
ಸಂಗೀತ : ಕೆ.ಜೆ.ಜಾಯ್, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಪ್ಯಾಟೆಯ ಬೀದಿ ಸುತ್ತೀ ಇಂಥ ಬಟ್ಟೆ ತಂದೇ ..
ಹಳ್ಳಿಯ ಸೀರೆ ಗೀರೆ ಬ್ಯಾಡ್ ಇನ್ನೂ ಮುಂದೇ ..
ಪಟ್ಟಣದ ಹುಡುಗಿರೆಲ್ಲಾ ನಾಚಬೇಕೂ ನಿಂಗೇ ..
ಕಟ್ಟಾಣೆ ಚೆಲುವೀ ನಿಂಗೇ ಸಾಟಿಯಿಲ್ಲ ಎಂದೇ..
ಬೇಲೂರ.. ಬೊಂಬೆಗೇ ರಂಗಾದ ಸಿಂಗಾರ
ಇಂಥ ಹುಡುಗೀರ ತೊಟ್ಟ ನಿನ್ನ ನಡಗಿ ಕಂಡೂ ನಾನೂ ಸೋತೇನೂ .... ಆ.. ಆ..
ಹೆಣ್ಣು : ದಮ್ಮಯ್ಯ ಬೇಡ ನಂಗೇ ಇಂಥ ಭಾರೀ ಉಡುಪೂ ..
ಮೈಯೆಲ್ಲಾ ಕಾಣತೈತೇ ಒಡಲ ತುಂಬ ನಡಕೂ
ಹಳ್ಳಿಲೀ ಮಾನವಾಗಿ ಇರುವ ಹೆಣ್ಣಿಗೇ ಏಕೇ ....
ಫಾರಂಗೀ ಬಟ್ಟೇ ತೋಡಿಸೋ ಆಸೆ ಬಂತೂ ನಿಂಗೇ..
ಊರೋರು.. ನೋಡ್ಯಾರೂ.. ಆ.. ನಾರೇರೂ ನಕ್ಕಾರೂ..
ಕೈಯ್ಯ ಮುಗಿದೂ ಕೇಳ್ಕೋತೀನಿ ಇಂಥ ಬಟ್ಟೇ .. ನಂಗೇ ಬೇಡವೋ..
ಗಂಡು : ಅರೆರೆರೆರೇ.. ಪ್ಯಾಟೆಯ ಬೀದಿ ಸುತ್ತೀ ಇಂಥ ಬಟ್ಟೆ ತಂದೇ ..
ಹೆಣ್ಣು : ಆ.. ದಮ್ಮಯ್ಯ ಬೇಡ ನಂಗೇ ಇಂಥ ಭಾರೀ ಉಡುಪೂ ..
ಗಂಡು : ಸುಮ್ಕೆನೇ ಹಿಂಗ್ಯಾಕೇ ಭಯಪಡುವೇ ನನ್ನ ಗಿಣಿಯೇ
ಕಣ್ಣತುಂಬಾ ನಾ ನೋಡಿ ಸುಖಪಡುವೇ ಮನದಣಿಯೇ ..
ಹೆಣ್ಣು : ಪ್ಯಾಟೆಯ ಹುಡುಗೀರ ಮನಸಲಿ ನೀ ಬಯಸಿರುವೇ
ನನ್ನಂಥ ಹೆಣ್ಣಿನ ಚೆಲುವನ ನೀ.. ಮರೆತಿರುವೇ
ಗಂಡು : ಅಯ್ಯಯ್ಯೋ ಇಂಥ ಮಾತೂ ನಿನ್ನನ್ನೂ ಮರೆಯೇ.. (ಆ)
ನನ್ ಮ್ಯಾಗೇ ಕೋಪ ಯಾಕೇ ಹಳ್ಳಿಯ ಸಿರಿಯೇ ..
ಹೆಣ್ಣು : ಇಂಥ ಉಡುಪೂ ಯಾಕೇ ತಂದೆ ನನ್ನ ದೊರೆಯೇ..
ಗಂಡು : ಪ್ಯಾಟೆಯ ಬೀದಿ ಸುತ್ತೀ ಇಂಥ ಬಟ್ಟೆ ತಂದೇ .. (ಊಮ್ )
ಹಳ್ಳಿಯ ಸೀರೆ ಗೀರೆ ಬ್ಯಾಡ್ ಇನ್ನೂ ಮುಂದೇ ..
ಹೆಣ್ಣು : ಹಳ್ಳಿಲೀ ಮಾನವಾಗಿ ಇರುವ ಹೆಣ್ಣಿಗೇ ಏಕೇ ....
ಫಾರಂಗೀ ಬಟ್ಟೇ ತೋಡಿಸೋ ಆಸೆ ಬಂತೂ ನಿಂಗೇ..
ಗಂಡು : ಬೇಲೂರ.. ಬೊಂಬೆಗೇ ರಂಗಾದ ಸಿಂಗಾರ
ಹೆಣ್ಣು : ಕೈಯ್ಯ ಮುಗಿದೂ ಕೇಳ್ಕೋತೀನಿ ಇಂಥ ಬಟ್ಟೇ .. ನಂಗೇ ಬೇಡವೋ..
ಗಂಡು : ಪ್ಯಾಟೆಯ ಬೀದಿ ಸುತ್ತೀ ಇಂಥ ಬಟ್ಟೆ ತಂದೇ ..
ಹೆಣ್ಣು : ದಮ್ಮಯ್ಯ ಬೇಡ ನಂಗೇ ಇಂಥ ಭಾರೀ ಉಡುಪೂ .. (ಹೂಂ )
ಹೆಣ್ಣು : ಸೊಗಸಾದ ಸೀರೆಯ ಉಡುಗರೆಯ ಕೊಡು ಉಡುವೇ
ಬೇರೇನೂ ಬೇಕಿಲ್ಲ ನಿನ್ನ ನೆನೆವೇ .. ಖುಸೀ ಪಡುವೇ ..
ಗಂಡು : ಕಣ್ಣಲ್ಲಿ ನೂರಾಸೇ ಹುಡುಗರಲೀ .. ಹರೆಯದಲೀ..
ನಿನ್ನನ್ನೇ ನಾ ಕಂಡೇ ಪಟ್ಟಣದ ಬೆಡಗಿನಲಿ
ಹೆಣ್ಣು : ಮೈತುಂಬ ಬಟ್ಟೆ ತೊಟ್ಟೂ ಕುಂಕುಮ ಇಟ್ಟೂ
ಕೈತುಂಬಾ ಬಳೆಯ ತೊಟ್ಟೂ ಕಾಡಿಗೇ ಇಟ್ಟೂ..
ಗಂಡು : ತಗ್ಗಿ ತಗ್ಗಿ ಬಾಳೋ ಹೆಣ್ಣೇ ನನ್ನ ಚೆಲುವೇ ..
ಹೆಣ್ಣು : ದಮ್ಮಯ್ಯ ಬೇಡ ನಂಗೇ ಇಂಥ ಭಾರೀ ಉಡುಪೂ .. (ಹೂಂ )
ಮೈಯೆಲ್ಲಾ ಕಾಣತೈತೇ ಒಡಲ ತುಂಬ ನಡಕೂ
ಗಂಡು : ಪಟ್ಟಣದ ಹುಡುಗಿರೆಲ್ಲಾ ನಾಚಬೇಕೂ ನಿಂಗೇ ..
ಕಟ್ಟಾಣೆ ಚೆಲುವೀ ನಿಂಗೇ ಸಾಟಿಯಿಲ್ಲ ಎಂದೇ..
ಹೆಣ್ಣು: ಊರೋರು.. ನೋಡ್ಯಾರೂ.. ಆ.. ನಾರೇರೂ ನಕ್ಕಾರೂ..
ಗಂಡು : ಇಂಥ ಹುಡುಗೀರ ತೊಟ್ಟ ನಿನ್ನ ನಡಗಿ ಕಂಡೂ ನಾನೂ ಸೋತೇನೂ ..
ಹೆಣ್ಣು : ಆ.. ದಮ್ಮಯ್ಯ ಬೇಡ ನಂಗೇ ಇಂಥ ಭಾರೀ ಉಡುಪೂ ..
ಗಂಡು: ಹಳ್ಳಿಯ ಸೀರೆ ಗೀರೆ ಬ್ಯಾಡ್ ಇನ್ನೂ ಮುಂದೇ .. ಹ್ಹಾ..
------------------------------------------------------------------------------------
ದೇವರ ಮನೆ (೧೯೮೫) - ಹುಟ್ಟುದೋರೂ ಸಾಯದೇ ಹೋದ್ರೇ
ಸಂಗೀತ : ಕೆ.ಜೆ.ಜಾಯ್, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ,
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ... ಯಪ್ಪೋ.. ಅಣ್ಣತಮ್ಮಂದಿರಾ..
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ...
ಹುಟ್ಟಸೋ ಸಾಯಿಸೋ ಎಲ್ಲಾ ಅವನಾ.. .ಆಆಆ ಅಹ್ಹಹ್ಹಹ್ಹಾ..
ಹುಟ್ಟಸೋ ಸಾಯಿಸೋ ಎಲ್ಲಾ ಅವನಾ ಆಟ ಕಂಡ್ರಣ್ಣಾ ..
ನಮ್ಮ ಆಟ ಮುಗಿಸಿ ಹೊರಡೋ ಹೊತ್ತನಾಗ್ ಕಣ್ಣೀರ ಯಾಕ್ರಣ್ಣಾ ...
ಹ್ಹಹ್ಹಹ್ಹಹ್ಹಾ.. ನೋವು ನಲಿವೂ ಯಪ್ಪೋ.. ಬದಕ್ಕಿನ ಜೊತೆಗೇ ಹೆಣೆಕೊಂಡೈತ್ರಣ್ಣಾ
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ...
ಎಲೇ ಚಿಗುರೀ ನಗ್ತೀರತದೇ ಮರದ ಮ್ಯಾಗೇ ..
ಅದು ಬಾಡಿದ ಮ್ಯಾಗೇ ಬೀಳಲೇ ಬೇಕೂ ಮಣ್ಣಿನಾಗೇ ..
ಆಸೆಯಿಂದ ಹುಟ್ಟಿ ಬರ್ತೀವಿ ಭೂಮಿಯಾಗೇ ..
ಇಲ್ಲಿ ನಡೆದಹೋಯ್ತದೇ ಏನೇನೋ ತಿಳಿಯದಾಂಗೇ...
ಇಲ್ಲಿ ನಡೆದಹೋಯ್ತದೇ ಏನೇನೋ ತಿಳಿಯದಾಂಗೇ...
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ... ಹ್ಹ.. ಹ್ಹಹ್ಹಹ್ಹಹಾ
ತಾಯೀ ಬಸರಲ್ಲ ಉಸಿರಾಡಕ್ಕೊಂದೂ ಹೋರಿ ಇರತೈತೇ ..
ತೊಟ್ಟಲಾಗಿದ್ದಾಗ ತೂಗೋ ಹಗ್ಗಕ್ಕ ಹುರಿ ಬೇಕೈತೇ
ಆವತ್ತ ನಂಗೇ ಮರ ಹತ್ತೋ ಹಗ್ಗದ ನಂಟಣ್ಣಾ...
ಇವತ್ತ ನಂಗೇ ನೇಣಿನ ಹಗ್ಗ ಕಾಯ್ತಾ ಐತ್ರಣ್ಣಾ...
ಇವತ್ತ ನಂಗೇ ನೇಣಿನ ಹಗ್ಗ ಕಾಯ್ತಾ ಐತ್ರಣ್ಣಾ...
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ...
ಎಲ್ಲೂ ನಾನು ಏರಲಾಗದಂತ ಮರವೇ ಇಲ್ಲಾಣ್ಣಾ..
ಈ ನೇಣಿನ ಮರ ನಂಗೇ ಒಂದೂ ಲೆಕ್ಕ ಏನಣ್ಣಾ.. ಯೆಕ್ಕೋ...
ಎಲ್ಲೂ ನಾನು ಏರಲಾಗದಂತ ಮರವೇ ಇಲ್ಲಾಣ್ಣಾ..
ಈ ನೇಣಿನ ಮರ ನಂಗೇ ಒಂದೂ ಲೆಕ್ಕ ಏನಣ್ಣಾ..
ನನ್ನ ತೀರ್ಪೆ ತೀರ್ಪು ಅಂದ್ರೇ .. ಕೇಳೋರ ಯಾರಣ್ಣಾ
ಇಲ್ಲೇ ನ್ಯಾಯದ ತೀರ್ಪೆ ತೀರ್ಪು ಅಂತಾ ಒಪ್ಪೋ ಬೇಕ್ರಣ್ಣಾ ...
ಇಲ್ಲೇ ನ್ಯಾಯದ ತೀರ್ಪೆ ತೀರ್ಪು ಅಂತಾ ಒಪ್ಪೋ ಬೇಕ್ರಣ್ಣಾ ...
ಹುಟ್ಟುದೋರ್ಯಾರೋ ಸಾಯದೇ ಹೋದ್ರೇ.. ಹೇಂಗೇ ಹೇಳ್ರಣ್ಣಾ...
ಮುಂದೇ ಹುಟ್ಟೋ ಮಂದಿಗೆ ಜಾಗ ಬ್ಯಾಡ್ ಏನರಣ್ಣಾ...
ಹ್ಹಾ.. ಬ್ಯಾಡ್ ಏನರಣ್ಣಾ... ಬ್ಯಾಡ್ ಏನರಣ್ಣಾ...
------------------------------------------------------------------------------------
ದೇವರ ಮನೆ (೧೯೮೫) - ಕೆಂಪು ದೀಪದ ಓಣಿಯಾಗೇ
ಸಂಗೀತ : ಕೆ.ಜೆ.ಜಾಯ್, ಸಾಹಿತ್ಯ : ಗೀತಪ್ರಿಯ, ಗಾಯನ : ವಾಣಿಜಯರಾಂ
ಕೆಂಪು ದೀಪದ ಓಣಿಯಾಗೇ ..
ಆ.. ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
ಸಂತೋಷ ಅಲ್ಲೀ .. ಪಡಿಯೋಕೇ... ಸಂಕೋಚ ಬಿಟ್ಟೂ ಬರುತ್ತಾರೇ..
ಸಂತೋಷ ಅಲ್ಲೀ .. ಪಡಿಯೋಕೇ... ಸಂಕೋಚ ಬಿಟ್ಟೂ ಬರುತ್ತಾರೇ..
ಎಲ್ಲೋ ಇರೋ... ಹೋಯ್
ಎಲ್ಲೋ ಇರೋ ಸ್ವರ್ಗಕ್ಕೇ ಇಲ್ಲಿಂದಲೇ ಏಣಿ ಹಾಕ್ತಾರೇ ..
ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
ಒಬ್ಬ ಹೋಳಿ ಮಾಡಿ ಬೀದಿ ಬಾಯಿ ಬಿಟ್ಟ
ಒಬ್ಬ ಸೇದಿ ಚುಟ್ಟಾ.. ನನ್ನಾ ಮೈಯ್ಯ ಸುಟ್ಟಾ ..
ವಿಸ್ಕೀ ಕುಡಿಸೀ... ಆಂ.. ಕುಣಿಸೋನೂ ಬಾ
ಡಿಸ್ಕೋ ಮಾಡಿಸಿ.. ನೋಡ್ತಾನ್ ಒಬ್ಬ..
ಮಸ್ತಿ ಏರಿ ಮೋಜೂ ಮಾಡೀ ಸುಸ್ತೂ ಆಗಿ ಹೋಗ್ತಾರೇ ..
ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
ನೀನೂ.. ಕೊಟ್ಟ ಸೇಂದಿ.. ನೆನೆದೂ ಮತ್ತೇ ಬ್ರಾಂದೀ..
ನನ್ನ ಬುದ್ದೀ .. ನಂಗೀ... ಇನ್ನೂ ನನಗೆ ಬಂಧೀ ..
ಮೀಸೆ ಮಾವ... ನಂಗ್ ಕುಡಿಸಾಕ್ ಇಲ್ಲವಾ..
ರಾಶಿ ಭಾವ.. ನಂಗ್ ತಿನಸಾಕ್ ಇಲ್ಲವಾ..
ನಿಮ್ಮಾ ಆಸೇ ತೀರೋಗಂಟ ಹಳ್ಳಿ ಬಿಟ್ಟೂ ಹೋಗಲಾರೇ ..
ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
ಸಂತೋಷ ಅಲ್ಲೀ .. ಪಡಿಯೋಕೇ... ಸಂಕೋಚ ಬಿಟ್ಟೂ ಬರುತ್ತಾರೇ..
ಎಲ್ಲೋ ಇರೋ... ಹೋಯ್
ಎಲ್ಲೋ ಇರೋ ಸ್ವರ್ಗಕ್ಕೇ ಇಲ್ಲಿಂದಲೇ ಏಣಿ ಹಾಕ್ತಾರೇ ..
ಕೆಂಪು ದೀಪದ ಓಣಿಯಾಗೇ ಗಮ್ಮತ್ತೇ... ಗಮ್ಮತ್ತೂ ..
ತಂಪು ತರೋ ರಾಣಿಯಿರಗೇ.. ಕಿಮ್ಮತ್ತೇ.. ಕಿಮ್ಮತ್ತೂ ...
------------------------------------------------------------------------------------
ದೇವರ ಮನೆ (೧೯೮೫) - ಮೈಯ್ಯಿಗೇ ಶಾನೇ ಶಾನೇ ಚಳಿಯಾಯ್ತು
ಸಂಗೀತ : ಕೆ.ಜೆ.ಜಾಯ್, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಹೆಣ್ಣು : ಹ್ಹಾ.. ಓ .. ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತು
ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತು
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತು
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತು
ಗಂಡು : ಓ.. ಬೆಡಗಿ ಹುಡುಗಿ ನಗೆ ಹೋಯ್ದಾಡಿ ಕಣ್ಣು ತಂಪಾಗಿ
ಓ.. ಬಯಕೆ ಬೆಂಕಿ ಭಲೇ ಕೆಂಪಾಗಿ ಮನಸ್ಸೂ ಒದ್ದಾಡಿ
ಹಗಲೂ ಇರುಳೂ ಹೊಸ ಸಿರಿ ಸುಖ ಸಿಕ್ಕದೈತೇ..
ಹೆಣ್ಣು : ಮೈಯ್ಯಾಗೇ (ಹ್ಹಾ) ಶಾನೇ ಶಾನೇ ಚಳಿಯಾಯ್ತು (ಹ್ಹಾ)
ಎದೆಯಾಗೇ (ಓ) ಕಾದೂ ಕಾದೂ ಬಿಸಿಯಾಯ್ತು
ಗಂಡು : ಆಆಆಆ.. ಮೈಯ್ಯಾಗೇ (ಹ್ಹಾ) ಶಾನೇ ಶಾನೇ ಚಳಿಯಾಯ್ತೆ (ಹ್ಹಾ)
ಎದೆಯಾಗೇ (ಹ್ಹಾ ) ಕಾದೂ ಕಾದೂ ಬಿಸಿಯಾಯ್ತೆ
ಗಂಡು : ಬೆಂದಾಗಲೂ ನೀ ಮಳೆಬಯಸಿದಾಂಗೇ
ನಿನ್ನಾ ಬಯಸೀ ದಿನ ಬಿಡಬೇಕಾದರೇ
ಘಳಿಗೇ ... ಹೇಹೇಹೇಹೇ .. ಕೂಡಿ ಬಂದೈತೇ..
ಬೆಸುಗೇ. .... ಹೇಹೇಹೇಹೇಹೇ ಹ್ಹಹ್ಹಹ್ಹಹ್ಹಾ... ಸಂಗ ಸಿಕೈತೇ
ಅರಿತು ಬೆರೆತೂ ನನ್ನ ನಿನ್ನ ಪ್ರೀತಿ ಕೂಡೈತೇ..
ಹೆಣ್ಣು : ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತು (ಹ್ಹಾ)
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತು
ಗಂಡು : ಹೂಂಹೂಂಹೂಂ .. ಮೈಯ್ಯಾಗೇ (ಹ್ಹಾ) ಶಾನೇ ಶಾನೇ ಚಳಿಯಾಯ್ತೆ (ಹ್ಹಾ)
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತೆ... ಹೇಹೇಹೇಹೇ
ಹೆಣ್ಣು : ಸೂರ್ಯ ಮೂಡಿ ಸುಮ ಅರಳಿದ್ದಂಗೇ
ಕನಸೂ ಅರಳೀ ಹೊಸ ಸೌಧ ಕಂಡೇ ..
ಹೃದಯಾ... ಆಆಆಆಅ ಆಆಆ ತುಂಬಿ ಬಂದೈತೇ......
ಸೊಗಸಾ.... ಆಆಆ ಓಓಓಓ ಮನಕೆ ಕೊಂಡೈತೇ....
ಆವೇಗ ಮೆರೆದು ತನುಮನ ತುಂಬಿ ತುಳುಕೈತೇ..
ಗಂಡು : ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತೆ
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತೆ
ಹೆಣ್ಣು : ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತೋ
ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತೋ
ಗಂಡು : ಓ.. ಬೆಡಗಿ ಹುಡುಗಿ ನಗೆ ಹೋಯ್ದಾಡಿ ಕಣ್ಣು ತಂಪಾಗಿ
ಆಆಆ... ಆಆಆ ಬಯಕೆ ಬೆಂಕಿ ಭಲೇ ಕೆಂಪಾಗಿ ಮನಸ್ಸೂ ಒದ್ದಾಡಿ
ಹಗಲೂ ಇರುಳೂ ಹೊಸ ಸಿರಿ ಸುಖ ಸಿಕ್ಕದೈತೇ..
ಹೆಣ್ಣು : ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತೋ ... (ಹಹಹಹ್ಹಾಹ್ಹಾ )
ಗಂಡು : ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತೆ
ಹೆಣ್ಣು : ಮೈಯ್ಯಾಗೇ ಶಾನೇ ಶಾನೇ ಚಳಿಯಾಯ್ತೋ ... (ಹಹಹಹ್ಹಾಹ್ಹಾ )
ಗಂಡು : ಎದೆಯಾಗೇ ಕಾದೂ ಕಾದೂ ಬಿಸಿಯಾಯ್ತೆ
ಇಬ್ಬರು : ತಂದಾನೇ .. ತಾನ್ ತಾನ್ ತಂದಾನೇ ತಂದಾನೇ .. ತಾನ್ ತಾನ್ ತಂದಾನೇ
ಅಹ್ಹಹ್ಹಹ್ಹ ಲಲಲಲಲಲಲಲಲಲಲಲ
------------------------------------------------------------------------------------
No comments:
Post a Comment