ದೇವರ ತೀರ್ಪು ಚಲನಚಿತ್ರದ ಹಾಡುಗಳು
- ಬೆಳಕು ನೀಡೋ ಸೂರ್ಯನಿಗೇ ಎಲ್ಲಿದೇ ಸ್ವಾರ್ಥ
- ಸೌಪರಿಣಿಕೆ
- ನಾನೂ ನೀನೂ ಜನ್ಮ ತಳೆದು ಬಂದೆವೂ ಒಂದಾಗಲೆಂದು
- ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲ್ಲಿ
- ಮಾನಸ ಅನುರಾಗ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಆರ್. ಎನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಹ್ಹ... ಅಹ್ಹಹ್ಹಹ್ಹಹ ಬೆಳಕು ನೀಡೋ ಸೂರ್ಯನಿಗೇ ಎಲ್ಲಿದೇ ಸ್ವಾರ್ಥ
ಬೆಳೆಯೇ ನೀಡೋ ಭೂಮಿಗೇ ಎಲ್ಲಿದೇ ಸ್ವಾರ್ಥ
ಹಾಲ ಕೊಡುವ ಹಸುವಿಗೇ ಎಲ್ಲಿದೇ ಸ್ವಾರ್ಥ
ಹಾಳ ಮನುಜನ ಒಡಲ ತುಂಬಾ ವಂಚನೇ ಸ್ವಾರ್ಥ ಬರೀ ವಂಚನೇ ಸ್ವಾರ್ಥ
ಬೆಳಕು ನೀಡೋ ಸೂರ್ಯನಿಗೇ ಎಲ್ಲಿದೇ ಸ್ವಾರ್ಥ
ಬೆಳೆಯೇ ನೀಡೋ ಭೂಮಿಗೇ ಎಲ್ಲಿದೇ ಸ್ವಾರ್ಥ
ಹಾಲ ಕೊಡುವ ಹಸುವಿಗೇ ಎಲ್ಲಿದೇ ಸ್ವಾರ್ಥ
ಹಾಳ ಮನುಜನ ಒಡಲ ತುಂಬಾ ವಂಚನೇ ಸ್ವಾರ್ಥ ಬರೀ ವಂಚನೇ ಸ್ವಾರ್ಥ
ನದಿ ನೀರೂ ಯಾವೊಂದೂ ಪ್ರತಿಫಲ ಬಯಸೋಲ್ಲಾ...
ತಂಗಾಳಿ ತನಗಾಗಿ ಏನನೂ ಕೇಳೋಲ್ಲಾ
ನದಿ ನೀರೂ ಯಾವೊಂದೂ ಪ್ರತಿಫಲ ಬಯಸೋಲ್ಲಾ...
ತಂಗಾಳಿ ತನಗಾಗಿ ಏನನೂ ಕೇಳೋಲ್ಲಾ
ಶ್ರೀಗಂಧ ಸೌಗಂಧ ಪರರಿಗೇ ತಾನಲ್ಲಾ
ಹಾಳೂ ಮನುಜನ ಒಡಲ ತುಂಬಾ ವಂಚನೇ ಸ್ವಾರ್ಥ ನಯ ವಂಚನೇ ಸ್ವಾರ್ಥ
ಬೆಳಕು ನೀಡೋ ಸೂರ್ಯನಿಗೇ ಎಲ್ಲಿದೇ ಸ್ವಾರ್ಥ
ಬೆಳೆಯೇ ನೀಡೋ ಭೂಮಿಗೇ ಎಲ್ಲಿದೇ ಸ್ವಾರ್ಥ
ಹಾಲ ಕೊಡುವ ಹಸುವಿಗೇ ಎಲ್ಲಿದೇ ಸ್ವಾರ್ಥ
ಹಾಳ ಮನುಜನ ಒಡಲ ತುಂಬಾ ವಂಚನೇ ಸ್ವಾರ್ಥ ಬರೀ ವಂಚನೇ ಸ್ವಾರ್ಥ
ವಾತ್ಸಲ್ಯ ಬಲಿಯಾಯ್ತು ಸಂಜೆಯ ಸ್ವಾರ್ಥಕ್ಕೇ
ಕವಿ ಸ್ನೇಹ ಎರೇಯಾಯ್ತು ಗೆಳೆಯನ ಸ್ವಾರ್ಥಕ್ಕೇ
ವಾತ್ಸಲ್ಯ ಬಲಿಯಾಯ್ತು ಸಂಜೆಯ ಸ್ವಾರ್ಥಕ್ಕೇ
ಕವಿ ಸ್ನೇಹ ಎರೇಯಾಯ್ತು ಗೆಳೆಯನ ಸ್ವಾರ್ಥಕ್ಕೇ
ಪ್ರೇಮಕಥೆಯ ಆಹುತಿ ನಂಬಿಕೇ ದ್ರೋಹಕ್ಕೇ
ಬಾಳಬಾನಿನಲ್ಲಿ ಇಂದೂ ತುಂಬಿದೇ ಇರುಳೂ ಇಲ್ಲಲ್ಲೇಲ್ಲಿದೇ ಹಗಲೂ
ಬೆಳಕು ನೀಡೋ ಸೂರ್ಯನಿಗೇ ಎಲ್ಲಿದೇ ಸ್ವಾರ್ಥ
ಬೆಳೆಯೇ ನೀಡೋ ಭೂಮಿಗೇ ಎಲ್ಲಿದೇ ಸ್ವಾರ್ಥ
ಹಾಲ ಕೊಡುವ ಹಸುವಿಗೇ ಎಲ್ಲಿದೇ ಸ್ವಾರ್ಥ
ಹಾಳ ಮನುಜನ ಒಡಲ ತುಂಬ ವಂಚನೇ ಸ್ವಾರ್ಥ ಬರೀ ವಂಚನೇ ಸ್ವಾರ್ಥ ಅಹ್ಹಹ್ಹ.. ಉಹ್ಹ.ಉಉಉಉಉ .
-----------------------------------------------------------------------------------------------------------------
ದೇವರ ತೀರ್ಪು(೧೯೮೩) - ಸೌಪರಿಣಿಕೆ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಎಸ್.ಕೆ.ಖರೀಮಖಾನ, ಗಾಯನ : ವಾಷಿಜಯರಾಮ
---------------------------------------------------------------------------------------------------------------
ದೇವರ ತೀರ್ಪು(೧೯೮೩) - ನಾನೂ ನೀನೂ ಜನ್ಮ ತಳೆದು ಬಂದೆವೂ ಒಂದಾಗಲೆಂದು
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಆರ್. ಎನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ನಾನೂ ನೀನೂ ಜನ್ಮ ತಳೆದು ಬಂದೇವೂ ಒಂದಾಗಲೆಂದು
ಪ್ರೇಮ ಎಂಬ ಕಾವ್ಯ ನಾವೂ ಒಂದಾಗಿ ಬರೆಯಲೂ ಎಂದೋ
ಹೆಣ್ಣು : ನಾನೂ ನೀನೂ ಜನ್ಮ ತಳೆದು ಬಂದೇವೂ ಒಂದಾಗಲೆಂದು
ಪ್ರೇಮ ಎಂಬ ಕಾವ್ಯ ನಾವೂ ಒಂದಾಗಿ ಬರೆಯಲೂ ಎಂದೋ
ಗಂಡು : ನಿನ್ನಯ ನಗುವಿನ ನಾ..ದ ನದಿಗಳ ಅಲೇಯಲೀ ಕಂಡೇ
ಮನಸ್ಸಿನ ಮುಗ್ದತೇ ಅಂದಾ.. ಹೂವಿನ ದಳದಲೀ ಕಂಡೇ ...
ಹೆಣ್ಣು : ಹೃದಯವೂ ಬಯುಸುವ ಶಾಂತೀ.. ನಿನ್ನಯ ತೋಳಲಿ ಕಂಡೇ
ಇದೇ ಬೆರೆತ ಮನಗಳ ವಸಂತಗಾನ
ಗಂಡು : ನಾನೂ ನೀನೂ ಜನ್ಮ ತಳೆದು ಬಂದೇವೂ ಒಂದಾಗಲೆಂದು
ಹೆಣ್ಣು : ಪ್ರೇಮ ಎಂಬ ಕಾವ್ಯ ನಾವೂ ಒಂದಾಗಿ ಬರೆಯಲೂ ಎಂದೋ
ಹೆಣ್ಣು : ಮೋಡವೂ ಮುಸುಕಿದರೇನೋ .. ಸೂರ್ಯನ ಅಳಿವಾಯಿತೇನೂ
ದಾರಿಗಳವಳಿದರೇನೂ ವಿರಹದ ಮತ್ತಾಣ ತಾನ
ಗಂಡು : ಮಿಲನಕೆ ತಡೆ ಬರಲೇನೂ ಪ್ರೇಮವೂ ಸುಳ್ಳಾಯಿತೇನೂ
ಇದೂ ಎಂದೂ ಅಳಿಯದಾ ಋಣಾನುಬಂಧ..
ಹೆಣ್ಣು : ನಾನೂ ನೀನೂ(ಆಆ ) ಜನ್ಮ ತಳೆದು (ಆಆ ) ಬಂದೇವೂ ಒಂದಾಗಲೆಂದು
ಗಂಡು : ಪ್ರೇಮ ಎಂಬ (ಆ ) ಕಾವ್ಯ ನಾವೂ (ಆ ) ಒಂದಾಗಿ ಬರೆಯಲೂ ಎಂದೋ
ಗಂಡು : ನಾನೂ ನೀನೂ (ಆ ) ಜನ್ಮ ತಳೆದು (ಆ ) ಬಂದೇವೂ ಒಂದಾಗಲೆಂದು
ಹೆಣ್ಣು : ಪ್ರೇಮ ಎಂಬ ಕಾವ್ಯ ನಾವೂ ಒಂದಾಗಿ ಬರೆಯಲೂ ಎಂದೋ
ಗಂಡು : ಹೋಯ್ ಒಂದಾಗಿ ಬರೆಯಲೂ ಎಂದೋ
ಹೆಣ್ಣು : ಓ ಲಾಲಲಲಲ ಲಲಲಲಲಾ
---------------------------------------------------------------------------------------------------------------
ದೇವರ ತೀರ್ಪು(೧೯೮೩) - ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲ್ಲಿ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಮ
ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲೀ
ಆಸೆಯ ಹೊನಲಿನಲಿ ದಾಹದ ಕಡಲಿನಲಿ ದಿನದಿನವೆಲ್ಲ ಕಣಕಣವೆಲ್ಲ ಕಣ ದಿನ ಕಣ್ಣ ಕಾಡಿದೇ
ಮೋಹ ಮಿಂಚಾಗೀ ಬಂದೇ.. ಕಾದ ಹೆಂಚಾಗಿ ನಿಂದೇ
ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲೀ
ಆಸೆಯ ಹೊನಲಿನಲಿ ದಾಹದ ಕಡಲಿನಲಿ
ಕರುಳೂ ಪರಿದು ಮೂರಿದು ಬಳುಕುತಿದೇ ನನ್ನ ತೋಳೂ
ಸನಿಹ ಸರಸ ಸೊಗಸೂ ಸುಖಿಸುತಿದೆ ನಿನ್ನ ಬಾಳೂ
ತುಟಿಗೇ ಚುಂಬನಾ .. ಒಡಲು ಹಸಿದ ಕಣ
ಮತೀಯ ಸ್ಪಂದನ ತಣಿದು ಸನಿದಮನ
ಜೀವ ತಂಪಾಗಿ ಉಂಡೇ ಭಾವ ತಂಪಾಗಿ ಕಂಡೇ ..
ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲೀ
ಮತೀಯ ಮರೆತೂ ಬೆರೆತೂ ಮಣಿಯುತಿದೆ ಗಲ್ಲ ಗೀಳೂ
ತಿನಕ್ ತೀನ್ ತೀನ್ ತೀನ್ ತೀನ್ ತೀನ್ ತಿನಕ್ ತೀನ್
ತನುವೂ ಮಿಡಿದು ಕುಡಿದೂ ಕುಣಿಯುತಿದೇ ನಲ್ಲಾ ಕೇಳೂ..
ಒಲವೇ ಸ್ಪಂದನ ನುಡಿಯೂ ಕಿರಿದ ಸ್ವರ ಒಳಗೇ ಕಂಪನ ನಡೆಯೂ ಹರಿತಘನ
ರಾಗ ಚೆನ್ನಾಗಿ ಮಿಂದೇ... ಭೋಗ ಒಂದಾಗಿ ತಂದೇ ..
ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲೀ
ನಗೆಯೂ ಬೆಳೆದೂ ಹೊಳದು ತುಳಿಯುತಿದೇ ಕಳ್ಳ ಕೇಳೂ
ಹೊಸದೇ ಕಲೆತು ಬಲಿತು ಮಿನುಗುತಿದೆ ಎಲ್ಲಾ ಹೇಳೂ
ಮಧುರ ರಿಂಗಣ.. ಅರಳೀ ಹೊಂಗಿರಣ ಜೋತೆಯ ಬಂಧನ ಕೇರಳೀ ಸುರತಪಣ
ಜಾಲ ಸಂಸಾಗಿ ಇಂದೇ.. ಮೇಳ ಇಂಪಾಗಿ ಬೆಂದೇ..
ಬಯಕೆಯ ಬೆಂಕಿಯಲೀ ರಸಿಕತೆ ರಂಗಿನಲೀ
ಆಸೆಯ ಹೊನಲಿನಲಿ ದಾಹದ ಕಡಲಿನಲಿ ದಿನದಿನವೆಲ್ಲ ಕಣಕಣವೆಲ್ಲ ಕಣ ದಿನ ಕಣ್ಣ ಕಾಡಿದೇ
ಮೋಹ ಮಿಂಚಾಗೀ ಬಂದೇ.. ಹ್ಹಾ ಕಾದ ಹೆಂಚಾಗಿ ನಿಂದೇ
--------------------------------------------------------------------------------------------------------------
ದೇವರ ತೀರ್ಪು(೧೯೮೩) - ಮಾನಸ ಅನುರಾಗ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ದೊಡ್ಡ ರಂಗೇಗೌಡ, ಗಾಯನ : ಮೋಹನ
-------------------------------------------------------------------------------------------------------------------
No comments:
Post a Comment