1152. ದೇವರೆಲ್ಲಿದ್ದಾನೆ (೧೯೮೫)

ದೇವರೆಲ್ಲಿದ್ದಾನೆ ಚಲನಚಿತ್ರದ ಹಾಡುಗಳು 
  1. ಏಕೋ ಏನೋ ಕಾಣೇನೂ ನಾನೂ 
  2. ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ 
  3. ಬಾನಲ್ಲಿ ಚಂದ್ರ ಬಂದ 
  4. ಸರ್ವೇಶ ಜಗದೀಶ ಲೋಕೇಶ 
  5. ಈ ರಾತ್ರಿ ಏಕೋ ಹೀಗಾಯ್ತು ಕಾಣೇ 
  6. ಹಯ್ಯಾರೇ ಆನಂದ ಬಾನಾಡಿಯಾಗಿ 
  7. ನನ್ನ ಚಿನ್ನ ಎಂಥ ಚೆನ್ನ 
ದೇವರೆಲ್ಲಿದ್ದಾನೆ (೧೯೮೫) - ಏಕೋ ಏನೋ ಕಾಣೇನೂ ನಾನೂ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಕೋರಸ್ : ತನನಂ...  ತನನಂ...  ತನನಂ.....  ಆಆಆಆಆ ... ಆಆಆಆಆ
ಹೆಣ್ಣು : ಏಕೋ ಏನೋ ಕಾಣೇನೂ ನಾನೂ ನಿನ್ನಲೂ ಮೂಡಿದ ಮೇಲೆ
          ಹಸಿವೂ ಇಲ್ಲ ನಿದಿರೆ ಇಲ್ಲ ನಿನದೇ ನೆನಪೂ ದಿನವೆಲ್ಲ..
          ಹಸಿವೂ ಇಲ್ಲ ನಿದಿರೆ ಇಲ್ಲ ನಿನದೇ ನೆನಪೂ ದಿನವೆಲ್ಲ..  ನಾನೇನೂ ಮಾಡಲೀ ...ಹೇಳೂ ನೀನೇ ..
          ಏಕೋ ಏನೋ ಕಾಣೇನೂ ನಾನೂ ನಿನ್ನಲೂ ಮೂಡಿದ ಮೇಲೆ

ಗಂಡು : ಚೆಲುವಿನ ಗಿಣಿಯೇ ಒಲವಿನ ಗಿಣಿಯೇ ನಿನ್ನೇಕೇ ನಾ ನೋಡಿದೇ...
            ಕಣ್ಣಲ್ಲಿ ನೀನೂ ತುಂಬಿ ಮನದಲ್ಲೂ ನೀನೇ ತುಂಬೀ... ಹಿತವಾದ ನೋವೇಕೇ ..
ಹೆಣ್ಣು : ಪ್ರಣಯದ ನುಡಿಗೇ ಒಲವಿನ ಸುಧೆಗೇ ಸಂಗಾತಿ ನಾ ಸೋತೇನೂ ..
           ನಿನ್ನಂತೇ ನಾನೂ ಆಗೇ ನಿನ್ನಿಂದ ನಾನೂ ನೊಂದೇ ನೀ ಹೇಳೂ ಹೀಗೇಕೇ ..
ಗಂಡು : ಮಾತಲ್ಲಿ ನೀನೂ ಜಾಣೆ ನಿನ್ನಂತೇ ಯಾರನು ನಿನ್ನಾಣೆ ಯಾರೂ ಕಾಣೇ ..
          ಏಕೋ ಏನೋ ಕಾಣೇನೂ ನಾನೂ ನಿನ್ನಲೂ ಮೂಡಿದ ಮೇಲೆ
          ಹಸಿವೂ ಇಲ್ಲ ನಿದಿರೆ ಇಲ್ಲ ನಿನದೇ ನೆನಪೂ ದಿನವೆಲ್ಲ..  ನಾನೇನೂ ಮಾಡಲೀ ...ಹೇಳೂ ನೀನೇ ..

ಕೋರಸ್ :  ಆಆಆಆಆ ... ಆಆಆಆಆ
ಹೆಣ್ಣು : ಇನಿಯನ ಧನಿಯು ಕೊಳಲಿನ ಸ್ವರವೂ ಓ ನಲ್ಲಾ ನಾ ಅರಿಯೇನೂ...
          ನೀ ಹಾಡೋ ಹಾಡು ಇಂಪೂ ನೀನಾಡೋ ಮಾತೂ ಇಂಪೂ ಹಿತವನ್ನೂ ನೀ ತಂದೇ
ಗಂಡು : ನಯನದಲಿರುವ ಮನಸಿಗೇ ಬೀಡುವಾ ಹೂಬಾಣವೂ ಸೋಕಲು..
            ಆ ಸೂರ್ಯ ಚಂದ್ರನಾದ ತಂಪಾದ ಕಾಂತಿಯಿಂದ ಆನಂದವಾ ತಂದಾ ..
ಹೆಣ್ಣು : ಬೇರೇನೂ ಕೇಳೇ ನಿನ್ನಾ ಎಂದೆಂದೂ ಹೀಗೇ ಸಂತೋಷ ನೀ ನೀಡು ....
          ಏಕೋ ಏನೋ ಕಾಣೇನೂ ನಾನೂ ನಿನ್ನಲೂ ಮೂಡಿದ ಮೇಲೆ
ಗಂಡು : ಹಸಿವೂ ಇಲ್ಲ ನಿದಿರೆ ಇಲ್ಲ ನಿನದೇ ನೆನಪೂ ದಿನವೆಲ್ಲ..
ಹೆಣ್ಣು : ಹಸಿವೂ ಇಲ್ಲ ನಿದಿರೆ ಇಲ್ಲ ನಿನದೇ ನೆನಪೂ ದಿನವೆಲ್ಲ..
ಇಬ್ಬರು : ನಾನೇನೂ ಮಾಡಲೀ ...ಹೇಳೂ ನೀನೇ ..
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಪಿ.ಬಿ.ಎಸ್.ಮಂಜುಳಾ ಗುರುರಾಜ

ಕೋರಸ್ : ತನ್ನ ತನ್ನ ತನ್ನ ತಾನ ತನ್ನ ತಾನ ತನನನ ತಾನನನ ತನನನನ .. ತನನನನನ
ಪಿಬಿ :  ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ ಸಂತೋಷ ತಂದಾಯಿತು
          ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ ಸಂತೋಷ ತಂದಾಯಿತು
          ವನ ಗೋಪಾಲನ ಲೀಲೆ ಕೊಂಡಾಡುವಾ ಸುಖ ಸಂತೋಷ ನಮಗಾಯಿತು
ಕೋರಸ್ : ಇವರಾಗೇ ಬಂದಂತೇ ಮಾಣಿಕ್ಯ ತಂದಂತೇ
ಪಿಬಿ :  ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ ಸಂತೋಷ ತಂದಾಯಿತು

ಹೆಣ್ಣು : ನೂರಾರೂ ವೃತದಿಂದ ಪೂಜಾಫಲ ತಂದ ಮುದ್ದಾದ ಈ ಕಂದನೂ
          ಹುಣ್ಣಿಮೇ ಚಂದ್ರ ಬಂದಂತೇ ಬಂದ ಚಿಂತೇ ಇನ್ನೇನೂ
ಎಸ್ಪಿ : ನಕ್ಕರೇ ಹೂಬಾಣದಂತೇ ಅತ್ತರೇ ಸಂಗೀತದಂತೇ
         ನಕ್ಕರೇ ಹೂಬಾಣದಂತೇ ಅತ್ತರೇ ಸಂಗೀತದಂತೇ ಎಂಥಾ ಚೆಂದಾ ಈ ಕಂದನೂ
ಪಿಬಿ :  ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ ಸಂತೋಷ ತಂದಾಯಿತು
ಕೋರಸ್ : ಇವರಾಗೇ ಬಂದಂತೇ ಮಾಣಿಕ್ಯ ತಂದಂತೇ
ಪಿಬಿ :  ಶ್ರೀ ಕೃಷ್ಣ ಬಂದಾಯ್ತು ಈ ಮನೆಗೇ ಸಂತೋಷ ತಂದಾಯಿತು
ಕೋರಸ್ : ಲಲಲಲಲ್ಲಲಾ ... ಲಲಲಲಲ್ಲಲಾ ಲಲಲಲಲ್ಲಲಾ ಆಆಆ.. ಲಲ್ಲಲ್ಲಲಾ ತಾನಾನನನ
               ಲಲಲಲಲ್ಲಲಾ ಆಆಆ.. ಲಲ್ಲಲ್ಲಲಾ ತಾನಾನನನ ಲಲಲಲಲ್ಲಲಾ ...
              ಲಲಲಲಲ್ಲಲಾ ಲಲಲಲಲ್ಲಲಾ

ಎಸ್ಪಿ : ಜೋಗುಳ ಹಾಡೋದೂ ತೊಟ್ಟಿಲ ತೂಗೋದು ಯಾವಾಗ ಹೇಳೆಂದೇನೀ
          ಆನಂದ ತಾನೇ ಓ ನನ್ನ ಜಾಣೆ ಹೇಳೇ ಇನ್ನೇನೇ
ಹೆಣ್ಣು : ವಂಶಕೇ ವರವಾಗಿ ಬಂದಾ ಸಂಭ್ರಮ ನಮಗಾಗಿ ತಂದಾ          
          ವಂಶಕೇ ವರವಾಗಿ ಬಂದಾ ಸಂಭ್ರಮ ನಮಗಾಗಿ ತಂದಾ          
          ಇಂಥಾ ಹರುಷಾ ನಾ ಕಂಡೇನೂ
ಪಿಬಿ :  ಶ್ರೀ ಕೃಷ್ಣ ಬಂದಾಯಿತು ಈ ಮನೆಗೇ ಸಂತೋಷ ತಂದಾಯಿತು
          ವನ ಗೋಪಾಲನ ಲೀಲೆ ಕೊಂಡಾಡುವಾ ಸುಖ ಸಂತೋಷ ನಮಗಾಯಿತು
ಕೋರಸ್ : ಇವರಾಗೇ ಬಂದಂತೇ ಮಾಣಿಕ್ಯ ತಂದಂತೇ
               ಇವರಾಗೇ ಬಂದಂತೇ
ಎಸ್ಪಿ : ಶತಮಾನಂ ಭವತಿ ಶತಾಯು ಪುರುಷಸ್ಯತೇಂದ್ರಿಯಾ ಆಯುಷ್ಯಶೇವೆಂದ್ರಿಯೇ ಪ್ರತಿತಿಶಿಷ್ಟತೇ
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ಬಾನಲ್ಲಿ ಚಂದ್ರ ಬಂದ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ,

ಹೂಂಹೂಂಹೂಂಹೂಂಹೂಂಹೂಂ... ಆಆಆ...
ಬಾನಲ್ಲಿ ಚಂದ್ರ ಬಂದ ನಿನ್ನಂದ ಕಂಡು ನಿಂತ ಇಂಪಾಗೀ ಲಾಲಿಯ ಹಾಡುತಾ ..
ತಂಪಾದ ಗಾಳಿಯ ಬೀಸುತಾ
ಬಾನಲ್ಲಿ ಚಂದ್ರ ಬಂದ ನಿನ್ನಂದ ಕಂಡು ನಿಂತ ಇಂಪಾಗಿ  ಲಾಲಿಯ ಹಾಡುತಾ ..
ತಂಪಾದ ಗಾಳಿಯ ಬೀಸುತಾ ಜೋಜೋಜೋ.. ಕಂದ ಜೋಜೋಜೋ
ಜೋಜೋಜೋ.. ಕಂದ ಜೋಜೋಜೋ

ಯಾರಿಗೇ ನಾನೂ ಜೋಗುಳ ಹಾಡಲೀ ಯಾರನೂ ನೋಡಿ ಸಂತೋಷ ಪಡಲೀ
ಯಾರಿಗೇ ನಾನೂ ದ್ರೋಹವ ಮಾಡಿದೇ ಯಾರದೋ ಶಾಪ ನಾ ಕಾಣದಾದೇ
ಮುಂದೇನೋ ದಾರೀ ಹೇಳೋರೂ ಯಾರೂ
ಜೋಜೋಜೋ.. ಕಂದ ಜೋಜೋಜೋ ಜೋಜೋಜೋ.. ಕಂದ ಜೋಜೋಜೋ
ಬಾನಲ್ಲಿ ಚಂದ್ರ ಬಂದ ನಿನ್ನಂದ ಕಂಡು ನಿಂತ ಇಂಪಾಗಿ  ಲಾಲಿಯ ಹಾಡುತಾ ..
ತಂಪಾದ ಗಾಳಿಯ ಬೀಸುತಾ

ತಾಯಿಯ ಪ್ರೇಮಾ ತಂದೆಯ ಸ್ನೇಹ ಬೇಡದೇ ಹೋಯ್ತೆ ಓ ನನ್ನ ಕಂದ
ಬಾಳಿಗೇ ಜ್ಯೋತೀ ಬೆಳಗಲು ಬಂದೂ ವೇದನೇ ಏಕೇ ನೀ ತುಂಬಿ ಹೋದೇ
ಕಣ್ಣೀರೇ ಈಗ ಗತಿಯಾಯಿತಲ್ಲಾ.. ಜೋಜೋಜೋ.. ಕಂದ ಜೋಜೋಜೋ
ಜೋಜೋಜೋ.. ಕಂದ ಜೋಜೋಜೋ
ಬಾನಲ್ಲಿ ಚಂದ್ರ ಬಂದ ನಿನ್ನಂದ ಕಂಡು ನಿಂತ ಇಂಪಾಗಿ  ಲಾಲಿಯ ಹಾಡುತಾ ..
ತಂಪಾದ ಗಾಳಿಯ ಬೀಸುತಾ ಜೋಜೋಜೋ.. ಕಂದ ಜೋಜೋಜೋ
ಜೋಜೋಜೋ.. ಕಂದ ಅಹ್ಹಹ್ಹಹ್ಹಹ್ಹ...
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ಸರ್ವೇಶ ಜಗದೀಶ ಲೋಕೇಶ ವಿಶ್ವೇಶ ಲಕ್ಷ್ಮೀಷ ನಿನ್ನಲ್ಲವೇ 
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ,

ಸರ್ವೇಶ ಜಗದೀಶ ಲೋಕೇಶ ವಿಶ್ವೇಶ ಲಕ್ಷ್ಮೀಷ ನಿನ್ನಲ್ಲವೇ
ಶ್ರೀರಾಮ ಶ್ರೀ ಕೃಷ್ಣ ಏನೇನೋ ಅವತಾರ ನೀ ಎತ್ತೀ ಬರಲಿಲ್ಲವೇ
ಸರ್ವೇಶ ಜಗದೀಶ ಲೋಕೇಶ ವಿಶ್ವೇಶ ಲಕ್ಷ್ಮೀಷ ನಿನ್ನಲ್ಲವೇ
ಶ್ರೀರಾಮ ಶ್ರೀ ಕೃಷ್ಣ ಏನೇನೋ ಅವತಾರ ನೀ ಎತ್ತೀ ಬರಲಿಲ್ಲವೇ
ಇಂದೇಕೇ ಮಾತಿಲ್ಲ ಕಲ್ಲಾಯ್ತೆ ಮನಸೆಲ್ಲ ಈ ಕೋಪ ಸರಿಯಲ್ಲ ಈ ನೀತಿ ನೀನಗಲ್ಲ
ಬಾರೋ ಎದ್ದು ಬಾರೋ ದೇವಾ ಎದ್ದು ಬಾರೋ

ಇನ್ನಾವ ರೀತಿ ಪೂಜೆಯ ಮಾಡಲೀ ಇನ್ನಾವ ರೀತಿ ನಿನ್ನನ್ನೂ ಬೇಡಲಿ
ಈ ನನ್ನ ಕಣ್ಣೀರೇ ಅಭಿಷೇಕವೂ ಈ ನನ್ನ ಗೋಳೇ ನಿನ್ನ ಮಂತ್ರವೂ
ಆ ಬಾಡೋ ಹೂವೇಕೇ ಛೀ..ನೀ  ಹೋಗೂ ದೂರಕೇ ...
ಈ ಕಾಲ ಪುಷ್ಪವನೇ ನಾ ಕೋಡುವೇ ಕಾಣಿಕೇ
ಇಂದೇಕೇ ಮಾತಿಲ್ಲ ಕಲ್ಲಾಯ್ತೆ ಮನಸೆಲ್ಲ ಈ ಕೋಪ ಸರಿಯಲ್ಲ ಈ ನೀತಿ ನೀನಗಲ್ಲ
ಬಾರೋ ಎದ್ದು ಬಾರೋ ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ ವಿಶ್ವೇಶ ಲಕ್ಷ್ಮೀಷ ನಿನ್ನಲ್ಲವೇ
ಶ್ರೀರಾಮ ಶ್ರೀ ಕೃಷ್ಣ ಏನೇನೋ ಅವತಾರ ನೀ ಎತ್ತೀ ಬರಲಿಲ್ಲವೇ

ಆ ತಾಯೀ ತನ್ನ ಕಂದನ ಕಾಣದೇ ಬಾಳಲ್ಲಿ ಶಾಂತಿ ನೆಮ್ಮದೀ ಬಾರದೇ
ಆ ಹೆಣ್ಣ ನೋವನ್ನೂ ನೀ ನೀಗದೇ ಮರೆಯಾದ ಸಂತೋಷ ನೀ ತುಂಬದೇ
ನನ್ನಾಣೇ ಇನ್ನೆಂದೂ ನಾ ನಿನ್ನ ನೋಡೇನೂ ಈ ಬದುಕಲಿ ಇನ್ನೆಂದೂ ಛೀ ನಿನ್ನ ಸ್ಮರಿಸೇನೂ
ಇಂದೇಕೇ ಮಾತಿಲ್ಲ ಕಲ್ಲಾಯ್ತೆ ಮನಸೆಲ್ಲ ಈ ಕೋಪ ಸರಿಯಲ್ಲ ಈ ನೀತಿ ನೀನಗಲ್ಲ
ಬಾರೋ ಎದ್ದು ಬಾರೋ ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ ವಿಶ್ವೇಶ ಲಕ್ಷ್ಮೀಷ ನಿನ್ನಲ್ಲವೇ
ಶ್ರೀರಾಮ ಶ್ರೀ ಕೃಷ್ಣ ಏನೇನೋ ಅವತಾರ ನೀ ಎತ್ತೀ ಬರಲಿಲ್ಲವೇ
ಇಂದೇಕೇ ಮಾತಿಲ್ಲ ಕಲ್ಲಾಯ್ತೆ ಮನಸೆಲ್ಲ ಈ ಕೋಪ ಸರಿಯಲ್ಲ ಈ ನೀತಿ ನೀನಗಲ್ಲ
ಬಾರೋ ಎದ್ದು ಬಾರೋ ದೇವಾ ಎದ್ದು ಬಾರೋ
ಬಾರೋ ಎದ್ದು ಬಾರೋ ದೇವಾ ಎದ್ದು ಬಾರೋ
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ಈ ರಾತ್ರಿ ಏಕೋ ಹೀಗಾಯ್ತು ಕಾಣೇ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಈ ರಾತ್ರಿ ಏಕೋ ಹೀಗಾಯ್ತು ಕಾಣೇ
            ಈ ರಾತ್ರಿ ಏಕೋ...  ಹೀಗಾಯ್ತು ಕಾಣೇ ತಂಗಾಳಿಯೂ ಬಿಸಿಯಾಗಿದೇ ನಾ ಬೆವರೀ.. ಹೋದೇ
            ತಂಗಾಳಿಯೂ ಬಿಸಿಯಾಗಿದೇ ನಾ ಬೆವರೀ.. ಹೋದೇ
ಹೆಣ್ಣು : ಈ ರಾತ್ರಿ ಏಕೋ...  ಹೀಗಾಯ್ತು ಕಾಣೇ ತಂಗಾಳಿಯೂ ಬಿಸಿಯಾಗಿದೇ ನಾ ಬೆವರೀ.. ಹೋದೇ

ಹೆಣ್ಣು : ಆ..ಚಂದ್ರನ ಬೆಳದಿಂಗಳೂ ತಂಪಾಗದೇ ಬಿಸಿಯಾಯಿತೇಕೆ
          ಈ ಮಲ್ಲಿಗೇ .. ಈ ಹಾಸಿಗೇ .. ಹಿತವಾಗದೇ ಮುಳ್ಳಾಯಿತೇಕೆ
ಗಂಡು: ಈ ದಾಹವಾ ಮೋಹವಾ ತಾಳಲಾರೇ
           ಈ ದಾಹವಾ ಮೋಹವಾ ತಾಳಲಾರೇ ಈ ನೋವ ದೂರಗಬೇಕಾದರೇ ನಿನ್ನಿಂದ ತಾನೇ
ಹೆಣ್ಣು : ಈ ರಾತ್ರಿ ಏಕೋ...  ಹೀಗಾಯ್ತು ಕಾಣೇ
ಗಂಡು : ಈ ರಾತ್ರಿ ಏಕೋ...  ಹೀಗಾಯ್ತು ಕಾಣೇ
ಹೆಣ್ಣು : ತಂಗಾಳಿಯೂ ಬಿಸಿಯಾಗಿದೇ ನಾ ಬೆವರೀ.. ಹೋದೇ

ಗಂಡು : ಹೀಗೇತಕೇ.. ನೀ ನೋಡುವೇ ಯಾರಿಲ್ಲವೇ ಸಂಕೋಚವೇಕೇ .. (ಅಹ್ಹಹ್ಹ )
           ಕಣ್ಣೋಟದಿ ನೀ ಕಾಡುವೇ ಬಳೀಬಾರದೇ ಈ ಆಟವೇಕೇ
ಹೆಣ್ಣು :  ಈ ಮಾತಿಗೇ ಏನನೂ  ಹೇಳಲಾರೇ..
           ಈ ಮಾತಿಗೇ ಏನನೂ  ಹೇಳಲಾರೇ ನಿಮ್ಮಾಸೇ ಪೂರೈಸಬೇಕಾದರೇ ಆತುರ ಏಕೇ
ಗಂಡು : ಈ ರಾತ್ರಿ ಅಹ್ಹಹ್ಹಾ ...  ಹೀಗಾಯ್ತು ಕಾಣೇ
ಹೆಣ್ಣು : ಈ ರಾತ್ರಿ ಏಕೋ...  ಹೀಗಾಯ್ತು ಕಾಣೇ
ಗಂಡು : ತಂಗಾಳಿಯೂ                         ಹೆಣ್ಣು : ಬಿಸಿಯಾಗಿದೇ
ಗಂಡು : ನಾ ಬೆವರೀ.. ಹೋದೇ..    ತಂಗಾಳಿಯೂ
ಹೆಣ್ಣು : ಬಿಸಿಯಾಗಿದೇ             
ಇಬ್ಬರು : ಲಲಲಲಲಾ ಲಲಲಲಾ
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ಹಯ್ಯಾರೇ ಆನಂದ ಬಾನಾಡಿಯಾಗಿ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಶೈಲಜಾ

ಹಯ್ಯಾರೇ ... ಹ್ಹ.. ಹ್ಹ.. ಹ್ಹ.. ಹ್ಹ.. ಹ್ಹ.. ಹ್ಹ.. ಹ್ಹ..
ಹಯ್ಯಾರೇ.. ಆನಂದ ಬಾನಾಡಿಯಾಗಿ ಬಾನಲ್ಲಿ ಹಾರೀ ತೇಲಾಡುವಂತೇ
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ.. ಅಹ್ಹ.. ಹ್ಹಹ್ಹ.. ಹ್ಹಹ್ಹ..
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ..
ಆನಂದ ಬಾನಾಡಿಯಾಗಿ ಬಾನಲ್ಲಿ ಹಾರೀ ತೇಲಾಡುವಂತೇ
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ........

ನೀ ಬಂದೂ ನಿಂತಾಗ ನಿನ್ನನ್ನೂ ಕಂಡಾಗ ಸಂಯೋಗ ಬೆರೆತಾಗ
ನಾನಾಗೀ ಕೊಂಡಾಗ ಮನದಲ್ಲಿ ಆವೇಗ ಎದೆಯಲ್ಲಿ ಅನುರಾಗ
ದೇಹ ನಾನಾಗೀ ಜೀವ ನೀನಾಗಿ ಸೇರಿ ಒಂದಾಗಿ ಬಾಳು ಹಾಡಾಗೀ
ಬದುಕು ಬಂಗಾರವಾಗಿ ದಿನವೂ ಸಂತೋಷವಾಗೀ
ಎಂದೆಂದೂ ಹಾಯಾಗೀ ಉಯ್ಯಾಲೆಯಂತಾಗೀ ತೂಗಿ ತೂಗಿ ಆಡುವಾಸೇ
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ........
ಆನಂದ ಬಾನಾಡಿಯಾಗಿ ಬಾನಲ್ಲಿ ಹಾರೀ ತೇಲಾಡುವಂತೇ
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ........

ಕನಸಾಗಿ ಮನಸಾಗಿ ದಿನವೆಲ್ಲಾ ನೆನಪಾಗಿ ಹೀತವಾದ ನೋವಾಗೀ 
ಉಲ್ಲಾಸ ಹೆಚ್ಚಾಗಿ ನಿನ್ನಿಂದ ಹುಚ್ಚಾಗಿ ಇರುವಂತೇ ನಿನಗಾಗಿ 
ಸೂರ್ಯ ತಂಪಾಗಿ ಮೋಡ ನೀರಾಗಿ ಸ್ವಾತೀ ಹನಿಯಾಗಿ 
ಹನಿಯು ಮುತ್ತಾಗಿ ಮುತ್ತೂ ಎಲ್ಲೇಲ್ಲೂ ಚೆಲ್ಲೀ ನೀನೂ ಮುತ್ತೊಂದು ಸ್ವಾಮೀ .. 
ಒಲವಿಂದ ನೀ ತಂದ ತುಟಿಗೊಂದು ಮುತ್ತಿಂದ ಮತ್ತೂ ಏರಿ ಹಾಡೋ ಆಸೇ 
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ........
ಹಯ್ಯಾರೇ... ಆನಂದ ಬಾನಾಡಿಯಾಗಿ ಬಾನಲ್ಲಿ ಹಾರೀ ತೇಲಾಡುವಂತೇ 
ಆಸೇ ಬಂತೀಗ ಚೆನ್ನಯ್ಯ.. ಆಆಆ... ನಿನ್ನ ಕಂಡಾಗ ಮಾವಯ್ಯ........
ಲಾಲಾಲಾಲ ಲ್ಲಲ್ಲಲ್ಲಾಲಲಾ ಲಾಲಾಲಾಲ ಆಆಆ... ಲ್ಲಲ್ಲಲ್ಲಾಲಲಾ ... ಆ.... 
--------------------------------------------------------------------------------------------------------------------------

ದೇವರೆಲ್ಲಿದ್ದಾನೆ (೧೯೮೫) - ನನ್ನ ಚಿನ್ನ ಎಂಥ ಚೆನ್ನ
ಸಂಗೀತ : ಎಸ್.ಪಿ.ಬಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ, ವಾಣಿಜಯರಾಂ

ನನ್ನ ಚಿನ್ನ ಎಂಥ ಚೆನ್ನ ಈ ಬಾಲ ಗೋಪಾಲ ನನ್ನ ಈ ಮುದ್ದು ಗೋಪಾಲ
ಬಾಳಲ್ಲಿ ಹಾಡಾಗಿ ಆನಂದ ಕಡಲಾಗಿ ಬಂದನೂ ಈ ಬಾಲ
ಆಹಾ ನಕ್ಕರೇ ಸಕ್ಕರೆಯಂತೇ ಇವ್ ಅಕ್ಕರೇ ಜೋಗಳದಂತೇ
ಹೂವಾಗಿ ಹಣ್ಣಾಗಿ ಹೊನ್ನಾಗಿ ಕಣ್ಣಾಗಿ ಬಂದಾ ಸಿಹಿ ಜೇನಾಗಿ
ನನ್ನ ಚಿನ್ನ ಎಂಥ ಚೆನ್ನ ಈ ಬಾಲ ಗೋಪಾಲ ನನ್ನ ಈ ಮುದ್ದು ಗೋಪಾಲ
ಬಾಳಲ್ಲಿ ಹಾಡಾಗಿ ಆನಂದ ಕಡಲಾಗಿ ಬಂದನೂ ಈ ಬಾಲ 

ಹೆತ್ತತಾಯೀ ಯಾರೋ ಗೋತ್ತೇ ಗೋಪಾಲ ಸಾಕಿದ ತಾಯೀ ಯಾರೋ ಹೇಳೋ ಸ್ತ್ರೀಲೋಲಾ 
ಹೆತ್ತ ತಾಯೀ ನಾನೇ  ಹೇಳೋ ಗೋಪಾಲ ಮುದ್ದಾಗಿ ಒಮ್ಮೇ ಅಮ್ಮ ಅಮ್ಮ ಎನ್ನೋ ಸ್ತ್ರೀಲೋಲಾ 
ನಿನ್ನನೇ ನೋಡು ನೋಡೋದೂ ನಿನ್ನ ಮಾತನ್ನೇ ಕೇಳೋದೂ ತುಂಟ ಗೋಪಾಲ 
ನನ್ನ ಚಿನ್ನ ಎಂಥ ಚೆನ್ನ ಈ ಬಾಲ ಗೋಪಾಲ ನನ್ನ ಈ ಮುದ್ದು ಗೋಪಾಲ
ಬಾಳಲ್ಲಿ ಹಾಡಾಗಿ ಆನಂದ ಕಡಲಾಗಿ ಬಂದನೂ ಈ ಬಾಲ 

ಚಂದಮಾಮ ಬೇಕೇ ಹೇಳೋ ಆಡೋಕೇ ಕಾಮನಬಿಲ್ಲೂ ಬೇಕೆ ನಿನ್ನಾ ಆಟಕ್ಕೇ 
ನನ್ನ ಕಂದಾ ಹಾಗೇ ಏನೂ ಕೇಳಲ್ಲಾ ಅಮ್ಮನೇ ಸಾಕೂ ಎಂದೂ ಬೇರೇ ಬೇಕಿಲ್ಲಾ 
ಈ ಕಣ್ಣೂ ನೋಡೂ ನಿನ್ನಂತೇ ಪುಟ್ಟ ಕೆನ್ನೇ ನಿನ್ನಂತೇ ನಿನ್ನ ಕಂದಂಗೆ 
ನನ್ನ ಚಿನ್ನ ಎಂಥ ಚೆನ್ನ ಈ ಬಾಲ ಗೋಪಾಲ ನನ್ನ ಈ ಮುದ್ದು ಗೋಪಾಲ
ಬಾಳಲ್ಲಿ ಹಾಡಾಗಿ ಆನಂದ ಕಡಲಾಗಿ ಬಂದನೂ ಈ ಬಾಲ 
ಆಹಾ ನಕ್ಕರೇ ಸಕ್ಕರೆಯಂತೇ ಇವ್ ಅಕ್ಕರೇ ಜೋಗಳದಂತೇ
ಹೂವಾಗಿ ಹಣ್ಣಾಗಿ ಹೊನ್ನಾಗಿ ಕಣ್ಣಾಗಿ ಬಂದಾ ಸಿಹಿ ಜೇನಾಗಿ
ನನ್ನ ಚಿನ್ನ ಎಂಥ ಚೆನ್ನ ಈ ಬಾಲ ಗೋಪಾಲ ನನ್ನ ಈ ಮುದ್ದು ಗೋಪಾಲ
ಬಾಳಲ್ಲಿ ಹಾಡಾಗಿ ಆನಂದ ಕಡಲಾಗಿ ಬಂದನೂ ಈ ಬಾಲ 
ಲಾಲ್ಲಲ್ಲಾಲಲಲ ಲಾಲ್ಲಲ್ಲಾಲಲಲ ಲಾಲ್ಲಲ್ಲಾಲಲಲ ಲಾಲ್ಲಲ್ಲಾಲಲಲ ಲಾಲ್ಲಲ್ಲಾಲಲಲ 
--------------------------------------------------------------------------------------------------------------------------

No comments:

Post a Comment