ಧರ್ಮಾತ್ಮ ಚಲನಚಿತ್ರದ ಹಾಡುಗಳು
- ಚಿನ್ನ ಚಿನ್ನ ಒಂದೇ ಆಸೆ ಎಂದು ನಿನ್ನ ನೋಡೋ ಆಸೆ
- ಗಾಳಿ ಮೈ ಸೋಕಿತು ತಂಗಾಳಿ ಚಳಿ ತುಂಬಿತು
- ದೇವರ ಮಕ್ಕಳು ನಾವುಗಳು ಮಮತೆಯ ತೋಟದ ಹೂವುಗಳು
- ಹೃದಯ ವೀಣೆಯ ಮೀಟಿದೆ ಮೀಟಿದೆ ಹೊಸರಾಗ
- ಹೊಸದಾದ ಹಾಡೊಂದನು ನಾ ಹಾಡುವೆ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಚಿನ್ನ ಚಿನ್ನ ಒಂದೇ ಆಸೆ ಎಂದು ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
ಗಂಡು : ಒಲಿದ ಮನವು ಬೆರೆತಾಗ ನಯನ ನಯನ ಕಲೆತಾಗ
ಬಿಸಿಲಾಗಲೀ ನೆರಳಾಗಲಿ ಅನುಗಾಲವೂ ಆನಂದವೇ
ತನುವು ಹೂವಾಗಿ ಓಲಾಡುವೇ ..
ಹೆಣ್ಣು : ಸುಡುವ ರವಿಯು ಶಶಿಯಂತೆ ಬಿಸಿಯ ಗಾಳಿ ತಂಪಂತೆ
ಮಳೆಯಾಗಲಿ ಗುಡುಗಾಗಲಿ ಸಂಗೀತವೇ ಸಂತೋಷವೇ
ನಲಿವ ಬಾನಾಡಿ ನೀನಾಗುವೇ
ಗಂಡು : ಪ್ರೀತಿ ಏನೆಂದು ಕಾಣುವೇ ..
ಚಿನ್ನ ಚಿನ್ನ ಒಂದೇ ಆಸೆ ಎಂದು ನಿನ್ನ ನೋಡೋ ಆಸೆ
ಹೆಣ್ಣು : ಪ್ರೀತಿ ಏನೆಂದು ಕಾಣುವೆ ವಿರಹ ವಿರಹ ಹೋದಾಗ
ಹೊಸ ಆಸೆಯ ಕಡಲಲ್ಲಿ ಬಂಗಾರದ ಮೀನಾಗುವೆ
ಪ್ರಣಯದಾನಂದ ನೀ ಕಾಣುವೇ ..
ಗಂಡು : ಕರೆಯೇ ಬರೆವೆ ಕ್ಷಣದಲ್ಲೇ ಕವಿತೆ ಕವಿತೆ ಕಣ್ಣಲ್ಲೇ
ಸವಿ ಮಾತಿನ ನುಡಿ ಆಡದೇ ಬರಿ ಮೌನದೆ ಸಿಹಿ ತುಂಬುವೆ
ಸುಖದ ಅಲೆಯಲ್ಲಿ ತೇಲಾಡುವೆ
ಹೆಣ್ಣು : ಸರಸ ಸಲ್ಲಾಪ ಆಡುವೇ...
ಗಂಡು : ಚಿನ್ನ ಚಿನ್ನ ಒಂದೇ ಆಸೆ ಎಂದು ನಿನ್ನ ನೋಡೋ ಆಸೆ
ನೋಡಿ ನೋಡಿ ಹಾಡೋ ಆಸೆ ಹಾಡಿ ಹಾಡಿ ಆಡೋ ಆಸೆ
ನಗುತ ನಗುತ ಇರುವ ಎಂಬ ಆಸೆ
--------------------------------------------------------------------------------------------------------------------------
ಧರ್ಮಾತ್ಮ (೧೯೮೮) - ಗಾಳಿ ಮೈ ಸೋಕಿತು ತಂಗಾಳಿ ಚಳಿ ತುಂಬಿತು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ
ಅಮ್ಮ..ಅಮ್ಮ...ಅಮ್ಮ...
ಗಾಳಿ ಮೈ ಸೋಕಿತು ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು ಚಿಮ್ಮಿತು ಝುಮ್ಮ ಎಂದು ಓಡಾಡಿತು
ನಿನ್ನನ್ನು ಕಂಡಾಗಲೇ ನಿನ್ನೆದುರು ನಿಂತಾಗಲೇ ಏನೋ ಆವೇಗ ತಂದೆ
ಆಸೆಯಿಂದ ನಾನು ನೊಂದೆ ಹೀಗೆಕೋ ಕಾಣೇನೇ
ನಿನ್ನಂತೆ ಯಾರಿಲ್ಲವೋ ನಿನ್ನಂಥ ಗಂಡಿಲ್ಲವೋ
ನನ್ನ ಕಣ್ಣ ತುಂಬಿಕೊಂಡೆ ನನ್ನ ಆಸೆ ತಂದೆ ಆಸೆ ಅಮ್ಮಮ್ಮ ನಾ ತಾಳೇನೇ
ಮನವು ನಡುಗಿ ತನುವು ನಡುಗಿ ಚಳಿ ಚಳಿ ..
ಗಾಳಿ ಮೈ ಸೋಕಿತು ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು ಚಿಮ್ಮಿತು ಝುಮ್ಮ ಎಂದು ಓಡಾಡಿತು
ಕಣ್ಣಲ್ಲಿ ನಾ ಕೂಗಲೇ ಕಣ್ಣಲ್ಲಿ ಮಾತಾಡಲೇ ಸಮಯ ಸಿಕ್ಕಿತೇ ನಾಳೇ
ಕಳ್ಳಿಯಂತೆ ಅಲ್ಲಿ ನಿಂತೇ ಸಂದೇಹ ಇನ್ನೇತಕೆ ಸಂಕೋಚ ದೂರಾಗಿದೆ
ಚಳಿಯಲ್ಲೂ ಬಿಸಿ ಏರಿದೆ ಸುಳ್ಳು ಹೇಳಲ್ಲ ನಾನು ಸಾಕು ಎಂದು ಹೇಳಲಾರೆ
ಮೈ ಮರೆತ ನಾನೇತಕೋ ಗೆಳೆಯ ನನಗೆ ಹೊರಗೂ ಒಳಗು ಚಳಿ ಚಳಿ..
ಗಾಳಿ ಮೈ ಸೋಕಿತು ತಂಗಾಳಿ ಛಳಿ ತುಂಬಿತು
ಮೈಯ್ಯಲ್ಲೊಂದು ಮಿಂಚು ಬಂದು ಚಿಮ್ಮಿತು ಝುಮ್ಮ ಎಂದು ಓಡಾಡಿತು
--------------------------------------------------------------------------------------------------------------------------
ಧರ್ಮಾತ್ಮ (೧೯೮೮) - ದೇವರ ಮಕ್ಕಳು ನಾವುಗಳು ಮಮತೆಯ ತೋಟದ ಹೂವುಗಳು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ,
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂ
ಪ್ರೀತಿ ಒಂದೇ ಆಧಾರ ಸ್ನೇಹ ಜೀವನ ಸುಖಸಾರ ಲೋಕವೇ ನಮ್ಮ ಸಂಗಾತಿ
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂ
ನಗುತಲಿ ಮೆರೆವ ನಿರ್ಮಲ ಹೃದಯ ದೇವನ ಆಲಯವೂ
ವೇದದ ಮಾತು ಸತ್ಯದ ಮಾತು ಈ ಬಾಳ ದೀಪವೂ
ಗೆಳೆತನ ಬೆಳೆಸಿ ನಲಿವನು ಹರಿಸಿ ಬಾಳುವ ಆಶ್ರಮವು
ಸೇವೆಯೇ ಪೂಜೆ ತ್ಯಾಗವೇ ಮಂತ್ರ ಇದು ಶಾಂತಿಧಾಮವು ಆನಂದದಾ ತಾಣವೂ ..
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂಪ್ರೀತಿ ಒಂದೇ ಆಧಾರ ಸ್ನೇಹ ಜೀವನ ಸುಖಸಾರ ಲೋಕವೇ ನಮ್ಮ ಸಂಗಾತಿ
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂ
ಕರುಣೆಯ ತೋರೋ ಹಿತಕರ ನುಡಿಯೇ ಜ್ಞಾನದ ಸ್ನಾನ ಜಲ
ಕಾರ್ಯದೆ ಶುದ್ದಿ ವಚನದೆ ಶುದ್ದಿ ಎಂದೆಂದೂ ನಿಜಬಲ
ಕ್ಷಮಿಸುವ ಮನಸು ತಾಳ್ಮೆಯ ಸೊಗಸು ನಿಮ್ಮಲಿ ತುಂಬಿರಲಿ
ಬೇಧವ ಬಿಟ್ಟು ಪ್ರೇಮವ ಇಟ್ಟು ಒಂದಾಗಿ ಬಾಳಲಿ ಜೀವನ ಜೇನಾಗಲೀ
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂಪ್ರೀತಿ ಒಂದೇ ಆಧಾರ ಸ್ನೇಹ ಜೀವನ ಸುಖಸಾರ ಲೋಕವೇ ನಮ್ಮ ಸಂಗಾತಿ
ದೇವರ ಮಕ್ಕಳು ನಾವುಗಳೂ ಮಮತೆಯ ತೋಟದ ಹೂವುಗಳೂ
--------------------------------------------------------------------------------------------------------------------------
ಧರ್ಮಾತ್ಮ (೧೯೮೮) - ಹೃದಯ ವೀಣೆಯ ಮೀಟಿದೆ ಮೀಟಿದೆ ಹೊಸರಾಗ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ,
ಹೆಣ್ಣು : ಹೃದಯ ವೀಣೆಯ ಮೀಟಿದೆ ಮೀಟಿದೆ ಹೊಸರಾಗ
ಹೊಸದು ಆಸೆಯೂ ಚಿಮ್ಮಿದೆ ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ ಕನಸು ನೂರಾಗಿದೆ
ಹೆಣ್ಣು : ಹರೆಯವಿದು ಕರೆಯುತಿದೆ ಬೆರೆಯಿರಿ ಒಂದಾಗಿ ಎಂದು
ಹೊಸ ಸಂಬಂಧ ತರೋ ಆನಂದ ಹೊಳೆಯಲಿ ತೇಲಾಡಲೂ
ಗಂಡು : ಪ್ರತಿ ನಿಮಿಷ ಹೊಸ ಹರುಷ ಜೊತೆಯಲಿ ನಿಂತಾಗ ಇಂದೂ
ಸಿಹಿ ಮುತ್ತೊಂದ ಸವಿ ಮತ್ತೊಮ್ಮೆ ಇಂದೇ ನೂರಾರು
ಹೆಣ್ಣು : ಬಂತು ಬಾಳಲಿ ಪ್ರೇಮ
ಹೃದಯ ವೀಣೆಯ ಮೀಟಿದೆ ಮೀಟಿದೆ ಹೊಸರಾಗ
ಹೊಸದು ಆಸೆಯೂ ಚಿಮ್ಮಿದೆ ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ ಕನಸು ನೂರಾಗಿದೆ
ಗಂಡು : ಸೊಬಗೇಣುವಾ ತೋಟದಲಿ ಬೆಳಗುವ ಪೌರ್ಣಮಿ ನೀನು
ಕುಡಿಗಣ್ಣಲಿ ಕರೆತಂದಾಗ ಮನಸೋತು ನಾ ನಿಂತೇನೂ
ಹೆಣ್ಣು : ತೋಳಿನಲಿ ನಾನಿರಲು ಮರೆತೇನು ಜಗವನ್ನೇ ನಾನು
ಪ್ರತಿ ಮಾತಲ್ಲಿ ಸುಖ ಕಂಡಾಗ ಹೊಸ ಸ್ವರ್ಗ ನಾ ಕಂಡೆನು
ಗಂಡು : ಮಧುರ ಬಂಧವು ಪ್ರೇಮ.. ಓಹೋಹೊಹೋ..
ಹೆಣ್ಣು : ಹೃದಯ ವೀಣೆಯ ಮೀಟಿದೆ ಮೀಟಿದೆ ಹೊಸರಾಗ
ಹೊಸದು ಆಸೆಯೂ ಚಿಮ್ಮಿದೆ ಹೊಮ್ಮಿದೆ ಅನುರಾಗ
ಮನಸು ಒಂದಾಗಿ ನಿಂತಾಗ ಕನಸು ನೂರಾಗಿದೆ
--------------------------------------------------------------------------------------------------------------------------
ಧರ್ಮಾತ್ಮ (೧೯೮೮) - ಹೊಸದಾದ ಹಾಡೊಂದನು ನಾ ಹಾಡುವೆ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ, ನಾಗೇಂದ್ರ
ಗಂಡು : ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇ
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ಹೆಣ್ಣು : ಮದುವೆಯ ಸಂತೋಷ ಹೊಸತನ ಉಲ್ಲಾಸ ಎಲ್ಲೆಲ್ಲೂ ಆನಂದವೇ..
ಗಂಡು : ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇ
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ಗಂಡು : ಗಂಡಿನ ತುಂಟಾಟ ಹೆಣ್ಣಿನ ಕಣ್ಣೋಟ ಮೋಹದ ಮೋಡಿಗೆ ಬೀಳುವ ಜೋಡಿಗೆ
ಎಂಥಾ ಸಮಯವಿದು ಆಟಕ್ಕೇ
ಹೆಣ್ಣು : ಜನಗಳ ಓಡಾಟ ಮಕ್ಕಳ ಚೆಲ್ಲಾಟ ಸೊಬಗನು ತಂದಿದೆ ಸರಸವು ತುಂಬಿದೆ
ಗಂಡು : ಎಂಥಾ ಸಮಯವಿದೆ ಬೆಸುಗೆ ಛಲ ಬಿಡದಲೇ ಕೈ ಹಿಡಿದರೆ ಹಿಡಿದ ಕೆಲಸ ಮುಗಿದ ಹಾಗೆ
ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇ
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ಹೆಣ್ಣು : ರಾತ್ರಿಯೂ ಬಂದಾಯ್ತು ಚೆಂದಿರ ಕಂಡಾಯ್ತು ನಯನವು ಸೋತಿದೆ ಬಯಕೆಯ ತೀರದೆ
ಗಂಡು : ಏನು ಮಾಡುವುದು ನಾನಿಲ್ಲಿ ಬಯಸಿದ ಮೀನು ಬಲೆಯಲಿ ಬಿದ್ದಾಯ್ತು
ಹಾಡಿನ ಮೋಡಿಯೂ ಸಾರ್ಥಕವಾಯಿತು ಗೆಳತೀ ನೋಡಿದೆಯಾ ನೀನಲ್ಲಿ ಹಾಯ್ ಅಲ್ಲಾ..
ಹೆಣ್ಣು : ನನ್ನ ಎಣಿಕೆಯು ನಿಜವಾಯಿತು ಚೆಲುವೆ ಈಗ ಗೆಲವು ನಮದೇ ..
ಗಂಡು : ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ಹೆಣ್ಣು : ಮದುವೆಯ ಸಂತೋಷ ಹೊಸತನ ಉಲ್ಲಾಸ ಎಲ್ಲೆಲ್ಲೂ ಆನಂದವೇ..
ಗಂಡು : ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇ
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
ಗಂಡು : ಹೊಸದಾದ ಹಾಡೊಂದನು ನಾ ಹಾಡುವೆ ಇಂದು ಶುಭವನ್ನು ಕೋರುವೇ
ನಮ್ಮ ಜೋಡಿಗೆ ಶಾದಿ ಮುಬಾರಕ್ ... ನವ ಜೋಡಿಗೇ ..
--------------------------------------------------------------------------------------------------------------------------
No comments:
Post a Comment