1172. ದೊಡ್ಡಮನೆ ಎಸ್ಟೇಟ್ (೧೯೮೦)


ದೊಡ್ಡಮನೆ ಎಸ್ಟೇಟ್ ಚಲನಚಿತ್ರದ ಹಾಡುಗಳು 
  1. ಸಂಗಾತಿ ಬೇಕೆಂದು ಇಂದೇನೇ ಮನಕೇರಳಿ 
  2. ಮನಸಿನಾಸೇ ಕೂಗಿದೇ 
  3. ಕೊರೆಯುವ ಚಳಿಯಾಗೇ 
ದೊಡ್ಡಮನೆ ಎಸ್ಟೇಟ್ (೧೯೮೦) - ಸಂಗಾತಿ ಬೇಕೆಂದು ಇಂದೇನೇ ಮನಕೇರಳಿ 
ಸಂಗೀತ : ಅಶ್ವಥ ವೈದಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಎಸ್. ಜಾನಕೀ 

ಹೆಣ್ಣು : ಹ್ಹಾ... ಸಂಗಾತಿ ಬೇಕೆಂದು ಇಂದೇನೇ ಮನಕೇರಳಿ ಕಾಮನೇ ಹೂವಾಗಿ ಬಣ್ಣ ಬಣ್ಣ ಅರಳೀ ..
          ಇಳೆಯಲ್ಲಿ ಸುಖ ಸಿಕ್ಕಿತೋ ... ಓಓಓಓ ಅರಿತು ಬೆರೆತು ಚಕ್ಕಂದ ತರವಾಯಿತು
ಗಂಡು : ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ
            ಬಳಿಯಲ್ಲಿ ಸಿರಿ ದಕ್ಕಿತೋ... ಓಓಓಓಓಓಓ ಕುಡಿದೂ .. ಮಿಡಿದು.. ನಲ್ಮೆಯ ಉಸಿರಾಡಿತೂ ..

  ಹೆಣ್ಣು : ಕನಸು ಕಂಡಂತೇ ನಲಿವೇನೋ ಮನಸು ಬೆರೆತಂತೇ ಹೊಸದೇನೂ
            ಕನಸು ಕಂಡಂತೇ ನಲಿವೇನೋ ಮನಸು ಬೆರೆತಂತೇ ಹೊಸದೇನೂ
            ಮಾಯಾಲೋಕದ ತಾರೇ ನೀನಾಗಿ ಪ್ರೀತಿ ಬೆಳಕಾಯಿತೋ
            ಸಂಗಾತಿ ಬೇಕೆಂದು ಇಂದೇನೇ ಮನಕೇರಳಿ ಕಾಮನೇ ಹೂವಾಗಿ ಬಣ್ಣ ಬಣ್ಣ ಅರಳೀ ..

ಗಂಡು : ಮಾನಸ ರಾಗ ಹ್ಹಾ ತೆರೆಯಲು ಭೋಗ ಸೆಳೆಯುವ ಮೋಹ ಹ್ಹಾ ಮಿಲನದ ಸ್ನೇಹ
            ಮಾನಸ ರಾಗ ತೆರೆಯಲು ಭೋಗ (ಆಹ್ಹಾ) ಸೆಳೆಯುವ ಮೋಹ ಮಿಲನದ ಸ್ನೇಹ (ಆಹ್ಹಾ)
            ಆನಂದ ಹೂವಾಗಿ ಹೂವಿನ ತೇರಾಗಿ ಅನುಪಮ ಚೆಲುವಾಯಿತೋ
            ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ (ಅಹ್ಹಹ್ಹಹ್ಹ ) ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ

ಹೆಣ್ಣು : ಅರಿವು ಹೊಳೆದಂತೇ ಹಿತವೇನೋ .. ಸನಿಹ ಮಿಂದಂತೇ ಸುಖವೇನೋ
ಗಂಡು : ಅರಿವು ಹೊಳೆದಂತೇ ಹಿತವೇನೋ .. ಸನಿಹ ಮಿಂದಂತೇ ಸುಖವೇನೋ
ಹೆಣ್ಣು : ನಾವಿಂದೂ ಹಾಯಾಗಿ                ಗಂಡು : ಸವಿಯಾದ ಜೇನಾಗಿ
ಇಬ್ಬರು : ಒಲುಮೆ ಹೊಳೆಯಾಯಿತೋ ..
ಹೆಣ್ಣು : ಸಂಗಾತಿ ಬೇಕೆಂದು ಇಂದೇನೇ ಮನಕೇರಳಿ ಕಾಮನೇ ಹೂವಾಗಿ ಬಣ್ಣ ಬಣ್ಣ ಅರಳೀ ..
ಇಬ್ಬರು :  ಇಳೆಯಲ್ಲಿ ಸುಖ ಸಿಕ್ಕಿತೋ ... ಓಓಓಓ
ಹೆಣ್ಣು : ಅರಿತು ಬೆರೆತು
ಗಂಡು : ಚಕ್ಕಂದ ತೆರವಾಯಿತು            ಹೆಣ್ಣು : ಚಕ್ಕಂದ ತೆರವಾಯಿತು
ಹೆಣ್ಣು : ಆಹಾ ...           ಗಂಡು : ಒಹೋ.. ಒಹೋ..
ಹೆಣ್ಣು : ಆಹಾ ...           ಗಂಡು : ಆಹಾ .. ಒಹೋ.. ಎಹೇ .. .
--------------------------------------------------------------------------------------------------------------------------

ದೊಡ್ಡಮನೆ ಎಸ್ಟೇಟ್ (೧೯೮೦) -  ಮನಸಿನಾಸೇ ಕೂಗಿದೇ 
ಸಂಗೀತ : ಅಶ್ವಥ ವೈದಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್. ಜಾನಕೀ 

ಮನಸಿನಾಸೇ ಕೂಗಿದೆ ಬಯಕೆ ತಾಪ ಮೂಡಿದೆ ತೀರದ ದಾಹವೂ ನೂರಾಗಿದೇ ...
ಮನಸಿನಾಸೇ ಕೂಗಿದೆ

ಮಾವಿನ ಹಣ್ಣ ತಿಂದ ಹಕ್ಕಿಯೂ ಹಾಡಿದೇ ತೂಗುವ ಹೂವ ಕಂಡೂ ದುಂಬಿಯೂ ಹಾರಿದೇ ..
ಮೋಡ ತೇಲಾಡಿ ಬಾನು ಓಲಾಡಿ
ಮೋಡ ತೇಲಾಡಿ ಬಾನು ಓಲಾಡಿ ನೋಟ ಕಾಡಿದೇ .. ಹೂಂಹೂಂಹೂಂಹೂಂ
ಮನಸಿನಾಸೇ ಕೂಗಿದೆ

ಬೀಸುವ ಗಾಳಿ ತುಂಬಾ ಗಂಧವೇ ತೇಲಿದೆ ಓಡುತ ದೂರ ಸಾಗಿ ನದಿಯೂ ಧುಮುಕಿದೇ ...
ದಾರಿ ತಂಪಾಗಿ.. ಹಾಡು ಇಂಪಾಗಿ..
ದಾರಿ ತಂಪಾಗಿ.. ಹಾಡು ಇಂಪಾಗಿ ಕನಸಾ ಕಲಕಿದೇ .. ಹೂಂಹೂಂಹೂಂಹೂಂ
ಮನಸಿನಾಸೇ ಕೂಗಿದೆ

ಒಂದೊಂದೂ ನೆನಪೂ ಹೃದಯ ಕೆಣಕಿದೇ .. ಏಕಾಂತ ನಡಿಗೇ ವಿರಹ ಹಣಿಸಿದೇ..
ಒಂದೊಂದೂ ನೆನಪೂ ಹೃದಯ ಕೆಣಕಿದೇ .. ಏಕಾಂತ ನಡಿಗೇ ವಿರಹ ಹಣಿಸಿದೇ..
ಬಾಳಿನ ಬೇಸರ.. ಸಾಕಾಗಿದೇ ... ಮೋಹದಾ.. ಆಸರೇ ಬೇಕಾಗಿದೇ ..
ಮನಸಿನಾಸೇ ಕೂಗಿದೆ ಬಯಕೆ ತಾಪ ಮೂಡಿದೆ ತೀರದ ದಾಹವೂ ನೂರಾಗಿದೇ ... ನೂರಾಗಿದೇ ...
ನೂರಾಗಿದೇ ...
--------------------------------------------------------------------------------------------------------------------------

ದೊಡ್ಡಮನೆ ಎಸ್ಟೇಟ್ (೧೯೮೦) - ಕೊರೆಯುವ ಚಳಿಯಾಗೇ 
ಸಂಗೀತ : ಅಶ್ವಥ ವೈದಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ರವಿ. ಸಿ.ಅಶ್ವಥ 

ರವಿ : ಕೊರೆಯುವ ಚಳಿಯಾಗೇ ... ಕಡುವಾ ಇರುಳಾಗೇ ಗತ್ತು ಗಮ್ಮತ್ತು ಬೇಕೋ ಮತ್ತ ಕಾಡಲೇ ಬೇಕೂ ..
ಅಶ್ವಥ : ನೆರೆಯುವಾ ಮಂದಿಗೇ ..ಏಏಏಏಏ 
            ನೆರೆಯುವಾ ಮಂದಿಗೇ .ಮಾನ ಮರ್ವಾದೇ ಚಿಂತೇ .
            ಸುತ್ತ ಕಟ್ಟಳೆಯಾಕೋ .. ಕತ್ತ ಎತ್ತಲೇಬೇಕೋ  ... 
ಕೋರಸ್ : ಹೌದಪ್ಪಾ .. ಹೌದೂ ಹೌದು ..

ರವಿ : ಬಡಿವಾರ ಬೇಡ ಸಣ್ಣ ಸಣ್ಣ ಮನಸ ... ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ಅಶ್ವಥ : ನಡಿವಾಗ ಕೊಂಕು ಬಣ್ಣ ಬಣ್ಣ ಹರುಷ... ನಡಿವಾಗ ಕೊಂಕು ಬಣ್ಣ ಬಣ್ಣ ಹರುಷ
ರವಿ : ಬಳಿ ಬಾರೋ ಸುರ ಹೀರೋ ..  
ಕೋರಸ್ :  ಬಳಿ ಬಾರೋ ಸುರ ಹೀರೋ ..  
ರವಿ : ಬೇರೆಯೋಣ ಹೀಗೇ ನಾವೂ ಇಲ್ಲೇ ಸರಸ...
ಕೋರಸ್ : ಬೇರೆಯೋಣ ಹೀಗೇ ನಾವೂ ಇಲ್ಲೇ ಸರಸ

ರವಿ : ಎಂದೆಂದೂ ಬಾಳಿನಾಗೇ ಇದ್ದೇ ಇದೇ ವಿರಸ  ನಾಳಿನ ಹಗಲಾಗೇ ಹೊಸ ಹೊಸ ಬೆಳಸ
ಅಶ್ವಥ : ಎಂದೆಂದೂ ಬಾಳಿನಾಗೇ ಇದ್ದೇ ಇದೇ ವಿರಸ ನಾಳಿನ ಹಗಲಾಗೇ ಹೊಸ ಹೊಸ ಬೆಳಸ
ರವಿ : ಆರೇಳು ಹತ್ತು ಕನಸ ಇರುವಾಗ ನಗುತ ನಗುತ
ಅಶ್ವಥ : ಆರೇಳು ಹತ್ತು ಕನಸ ಇರುವಾಗ ನಗುತ ನಗುತ
ರವಿ : ಬಾಳೇಳು ...                ಅಶ್ವಥ : ಇರುವಾಗ
ಇಬ್ಬರು : ಈ ಹೊತ್ತೇ ಖುಷಿ ಕಾಣೋ .. ನಿಜ ಕಾಣೋ ಮಜ ಕಾಣೋ
           ನಿಜ ಕಾಣೋ ಮಜ ಕಾಣೋ ತೆರೆಯೋಣ ಹಾದಿ ಪೂರ ಮತ್ತೇ ಮನಸ
           ತೆರೆಯೋಣ ಹಾದಿ ಪೂರ ಮತ್ತೇ ಮನಸ
ರವಿ : ಬಡಿವಾರ ಬೇಡ ಸಣ್ಣ ಸಣ್ಣ ಮನಸ ...

ರವಿ : ಆಆ .. ಯಾವತ್ತೂ ಜೀವನದಾಗೇ .. ಏಳೋಬಿಳೋ ಇರೊದೇನೇ
        ದಿನದಿನವೂ ಸವಾಲಾಗಿ ಕೆಣಕೋದು ನಿನ್ನನ್ನೇ... ಏಏಏಏಏ
        ಬಿಡು ಸೋಕೇ ಹೋದರಂತೂ .. ಲೋ ಬಸವಾ..
        ಬಿಡು ಸೋಕೇ ಹೋದರಂತೂ ನೂರೆಂಟೂ ಗಂಟೆನೇ .. ಏಏಏ
        ಅಂಟಿದರೂ ಅಂಟದಾಂಗೇ ನಡೆದರೇ ಸಿಹಿ ಜೇನೇ
ಅಶ್ವಥ : ದೂರದಿಂದ ಹಗಲಿರುಳು ಅಕ್ಕ ಪಕ್ಕ ದುಡಿದೂ
            ಶ್ರಮದಿಂದ ಬಳಲಿಹರು ಮತ್ತೇ ಮತ್ತೇ ಪುಟಿದು
ರವಿ : ದೂರದಿಂದ ಹಗಲಿರುಳು ಅಕ್ಕ ಪಕ್ಕ ದುಡಿದೂ
        ಶ್ರಮದಿಂದ ಬಳಲಿಹರು ಮತ್ತೇ ಮತ್ತೇ ಪುಟಿದು
ಇಬ್ಬರು : ಆಸೆಗೂ ನಿರಾಸೆಗೂ .. 
            ಆಸೆಗೂ ನಿರಾಸೆಗೂ ಅರಿಯೋಣ ನಾವು ನಮ್ಮ ನಮ್ಮ ಬದುಕ
ಎಲ್ಲರು : ಅರಿಯೋಣ ನಾವು ನಮ್ಮ ನಮ್ಮ ಬದುಕ
ರವಿ : ಬಡಿವಾರ ಬೇಡ ಸಣ್ಣ ಸಣ್ಣ ಮನಸ ... ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ಎಲ್ಲರು : ಹಾಡಬೇಕೂ .. ಕುಣಿದಾಡಬೇಕೂ .. ಹಾಡಬೇಕೂ .. ಕುಣಿದಾಡಬೇಕೂ ..
            ಹಾಡಬೇಕೂ .. ಕುಣಿದಾಡಬೇಕೂ ..ಹಾಡಬೇಕೂ .. ಕುಣಿದಾಡಬೇಕೂ ..
            ಹಾಡಬೇಕೂ .. ಕುಣಿದಾಡಬೇಕೂ ..ಹಾಡಬೇಕೂ .. ಕುಣಿದಾಡಬೇಕೂ ..
            ಹಾಡಬೇಕೂ .. ಕುಣಿದಾಡಬೇಕೂ ..ಹಾಡಬೇಕೂ .. ಕುಣಿದಾಡಬೇಕೂ ..
           ಹಾಡಬೇಕೂ .. ಕುಣಿದಾಡಬೇಕೂ ..ಹಾಡಬೇಕೂ .. ಕುಣಿದಾಡಬೇಕೂ ..
------------------------------------------------------------------------------------------------------------------------

No comments:

Post a Comment