06. ಎಡೆಯೂರು ಸಿದ್ದಲಿಂಗೇಶ್ವರ (1981)

ಎಡೆಯೂರ ಸಿದ್ದಲಿಂಗೇಶ್ವರ ಚಿತ್ರದ ಹಾಡುಗಳು 
  1. ಎಲ್ಲಾ ಶಿವಮಯವೂ 
  2. ತಾಂಡವ ನಾಟ್ಯವ 
  3. ಆದಿ ಅನಾದಿ 
  4. ಸತ್ಯದಲ್ಲಿ ನಡೆಯುವುದೇ 
  5. ಸ್ವಾಗತ ಸುಸ್ವಾಗತ 
  6. ಉರಿಯೊಳಗಿನ ಕರ್ಪೂರಕ್ಕೆ ಕರಿವುಂಟೇ ಅಯ್ಯಾ
  7. ನಂಬಿಯಣ್ಣ 
  8. ಶ್ರೀಕರ ಶುಭಕರ 
  9. ಶಿವಪರಾತ್ಪರ ತರಂ ಸೂಕ್ಷಮ 
  10. ನೀರಾಮಯಂ ನೀರಾಕಾರಂ ನೀರ್ಗುಣಂ 
  11. ಧ್ಯಾನ ಮಾಡುತಿರು 
ಎಡೆಯೂರು ಸಿದ್ದಲಿಂಗೇಶ್ವರ (1981) - ಎಲ್ಲಾ ಶಿವಮಯವು ಜಗದೊಳು
ಸಂಗೀತ: ಟಿ.ಜಿ.ಲಿಂಗಪ್ಪ,  ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ.

ಗಂಡು : ಎಲ್ಲಾ ಶಿವಮಯವು ಜಗದೊಳು ಎಲ್ಲಾ ಶಿವಮಯವು
            ಶಿವಮಯವು ಶಿವಮಯವು
ಕೋರಸ್ : ಶಿವಮಯವು ಶಿವಮಯವು
               ಶಿವಮಯವು ಶಿವಮಯವು ಎಲ್ಲಾ ಶಿವಮಯವು

ಗಂಡು : ಗಗನದಿ ಬೆಳಗುವ ರವಿಚಂದ್ರರು ಜಲ ಸುರಿಸುವ ಆ ಮೇಘಗಳು
            ಗಗನದಿ ಬೆಳಗುವ ರವಿಚಂದ್ರರು ಜಲ ಸುರಿಸುವ ಆ ಮೇಘಗಳು
            ಸುಳಿಸುಳಿದಾಡುವ ತಂಬೆಲರು....
            ಸುಳಿಸುಳಿದಾಡುವ ತಂಬೆಲರು ಉಸಿರಾಡುವ ಎಲ್ಲಾ ಜೀವಕೋಟಿಯು
            ಎಲ್ಲಾ ಶಿವಮಯವು
ಕೋರಸ್ : ಶಿವಮಯವು ಶಿವಮಯವು
               ಶಿವಮಯವು ಶಿವಮಯವು ಎಲ್ಲಾ ಶಿವಮಯವು
ಗಂಡು : ಎಲ್ಲಾ ಶಿವಮಯವು 

ಗಂಡು : ನಿತ್ಯ ನಿರ್ಮಲ ಸತ್ಯವು ಶಿವನೆ ತತ್ವಕೆ ಆಧಾರ ಪರಶಿವನೆ
           ನಿತ್ಯ ನಿರ್ಮಲ ಸತ್ಯವು ಶಿವನೆ ತತ್ವಕೆ ಆಧಾರ ಪರಶಿವನೆ
            ಪರಮ ನಿರ್ಗುಣ ನಿರಂಜನ ಶಿವನೆ......
            ಪರಮ ನಿರ್ಗುಣ ನಿರಂಜನ ಶಿವನೆ ಸಚ್ಚಿದಾನಂದ ಶಾಶ್ವತ ಶಿವನೆ       
ಕೋರಸ್ : ಶಿವಮಯವು ಶಿವಮಯವು
               ಶಿವಮಯವು ಶಿವಮಯವು ಎಲ್ಲಾ ಶಿವಮಯವು
ಗಂಡು : ಎಲ್ಲಾ ಶಿವಮಯವು ಶಿವಮಯವು 
ಕೋರಸ್ : ಶಿವಮಯವು ಶಿವಮಯವು
               ಶಿವಮಯವು ಶಿವಮಯವು ಎಲ್ಲಾ ಶಿವಮಯವು
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ತಾಂಡವ ನಾಟ್ಯವ ಮಾಡುವ ಶಿವನೇ 
ಸಂಗೀತ: ಟಿ.ಜಿ.ಲಿಂಗಪ್ಪ,  ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ.

ಅತ್ಯಾಚಾರ ಅನಾಚಾರಗಳ ಕೋಲಾಹಲ ಮಿರಿದೇ ಓ...ಶಿವನೇ
ಇವುಗಳ ಅಳಿವೂ ಎಂದೋ ಭೂಮಿಯದು ಉಳಿಯುವುದೆಂದೂ ಶಿವನೇ... 

ತಾಂಡವ ನಾಟ್ಯವ ಮಾಡುವ ಶಿವನೇ ನಿನ್ನನ್ನು ಮೀರಿದ ಕಲಿಯ ವರ್ತನೇ 
ತಾಂಡವ ನಾಟ್ಯವ ಮಾಡುವ ಶಿವನೇ ನಿನ್ನನ್ನು ಮೀರಿದ ಕಲಿಯ ವರ್ತನೇ 
ಶಿವನೇ ಕಲಿಯ ವರ್ತನೇ ಶಿವನೇ ಕಲಿಯ ವರ್ತನೇ 
ತಾಂಡವ ನಾಟ್ಯವ ಮಾಡುವ ಶಿವನೇ ನಿನ್ನನ್ನು ಮೀರಿದ ಕಲಿಯ ವರ್ತನೇ 

ದಾನ ಧರ್ಮಗಳು ದಹನವಾದವೂ ನೀತಿ ನಿಯಮಗಳು ನಶಿಸಿಹೋದವೂ 
ಸತ್ಯಶೀಲಗಳೂ ಸಾವ ಕಂಡವು ಮತ್ತೇ ಲೋಕದಲಿ ತುಂಬಿತು ನೋವೂ 
ಗಂಗೆ ಗೌರಿ ಜೋತೆ ಸರಸವಾಡುತ ಲೋಕಪಾಲನೆಯ ಮರೆತು ಹೋದೆಯಾ 
ಬ್ರಹ್ಮ ವಿಷ್ಣುಗಳು ದೂರಹೋದರೂ ಧರ್ಮ ಜ್ಯೋತಿಯ ಉಳಿಸಲಾಗದು 
ನೀನೇ ಗತಿ ಶಂಭೋ..  ನೀನೇ ಮತಿ ಶಂಭೋ... ದಾರಿ...  ತೋರಿ... ಕಾಪಾಡು ಶಂಭೋ 
ತಾಂಡವ ನಾಟ್ಯವ ಮಾಡುವ ಶಿವನೇ ನಿನ್ನನ್ನು ಮೀರಿದ ಕಲಿಯ ವರ್ತನೇ 
ಶಿವನೇ ಕಲಿಯ ವರ್ತನೇ ಶಿವನೇ ಕಲಿಯ ವರ್ತನೇ 

ಧರ್ಮವ ಕಾಯುವ ದೇವನಾರೋ ನಿನ್ನನ್ನು ಬಿಟ್ಟರೇ ಯಾರಿಹರೋ 
ನಂಬುತ ನಿನ್ನಯ ಪಾದವನ್ನೇ ಬೇಡುವೆ ನಾನು ಶಿವ ಶಂಭೋ 
ನೀನೇ ಗತಿ ಶಂಭೋ..  ನೀನೇ ಮತಿ ಶಂಭೋ... 
ದಾರಿ...  ತೋರಿ... ಕಾಪಾಡು ಶಂಭೋ 
ತಾಂಡವ ನಾಟ್ಯವ ಮಾಡುವ ಶಿವನೇ ನಿನ್ನನ್ನು ಮೀರಿದ ಕಲಿಯ ವರ್ತನೇ 
ಶಿವನೇ ಕಲಿಯ ವರ್ತನೇ ಶಿವನೇ ಕಲಿಯ ವರ್ತನೇ ಶಿವನೇ ಕಲಿಯ ವರ್ತನೇ 
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಆದಿ ಅನಾದಿಗಳಿಲ್ಲದಂದು ನಾದ ಬಿಂದುಕಲೆ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ.

ಆದಿ ಅನಾದಿಗಳಿಲ್ಲದಂದು ನಾದ ಬಿಂದುಕಲೆ ಮೊಳೆದೋರದಂದು
ದೇಹ ದೇಹಿಗಳೂ ಉತ್ಪತ್ತಿಯಾಗದಂದು ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು
ಸಕಾಲಚರಾಚರಂಗಳಿಲ್ಲದಂದು ಇವೇನೋ ಏನೋ ಇಲ್ಲದಂದು ನೀನೂ ಶೂನ್ಯನಾಗಿದ್ದೇ ಅಯ್ಯಾ
ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ...  ಪ್ರಭುವೇ...  ಪ್ರಭುವೇ.... ಆಆಆ
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಸತ್ಯದಲಿ ನಡೆವುದೇ ಶೀಲ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ 

ಸತ್ಯದಲಿ ನಡೆವುದೇ ಶೀಲ ಸತ್ಯದಲಿ ನುಡಿವುದೇ ಶೀಲ
ಸತ್ಯದಲಿ ನಡೆವುದೇ ಶೀಲ ಸತ್ಯದಲಿ ನುಡಿವುದೇ ಶೀಲ
ಸಜ್ಜನರ ಸ್ನೇಹವೇ ಶೀಲ... ಸಜ್ಜನರ ಸ್ನೇಹವೇ ಶೀಲ
ಸಚ್ಚರಿತ ಸಾಧನೆಯೇ ಶೀಲ 
ಸತ್ಯದಲಿ ನಡೆವುದೇ ಶೀಲ ಸತ್ಯದಲಿ ನುಡಿವುದೇ ಶೀಲ

ಪತಿ ಪಾದ ಸೇವೆಯೇ ಶೀಲ ಸತಿಗತಿಗೆ ಸಿರಿಸುಖದ ನೋವ 
ಪತಿ ಪಾದ ಸೇವೆಯೇ ಶೀಲ ಸತಿಗತಿಗೆ ಸಿರಿಸುಖದ ನೋವ 
ಇಹಪರದ  ಸೌಭಾಗ್ಯಕಲ್ಲ ಪತಿವೃತೆಗೆ ತನ್ನ ಪತಿಯು ಎಲ್ಲಾ 
ಸತ್ಯದಲಿ ನಡೆವುದೇ ಶೀಲ ಸತ್ಯದಲಿ ನುಡಿವುದೇ ಶೀಲ

ಗುರು ಸಿದ್ಧಲಿಂಗನ ಲೀಲಾ...ಆಆಆ  ಆಆಆ  
ಗುರು ಸಿದ್ಧಲಿಂಗನ ಲೀಲಾ ಸಂತಸವು ನೆನೆವುದೇ ಶೀಲ
ಭಕುತರಿಗೆ ಭವವೆಂಬ ಧ್ಯಾನ ನೀಗುವ ನಾಕವೇ ಶ್ರೀಶೈಲ
ಸತ್ಯದಲಿ ನಡೆವುದೇ ಶೀಲ ಸತ್ಯದಲಿ ನುಡಿವುದೇ ಶೀಲ
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ , ಕೋರಸ್ .

ಕೋರಸ್ :  ಆ.. ಆ.. ಆ...ಆ.. (ಆಆಆ.) ಆ.. ಆ.. ಆ...ಆ.. (ಆಆಆ.) 
                ಆ.. ಆ.. ಆ...ಆ.. (ಆಆಆ.) ಆ.. ಆ.. ಆ...ಆ.. (ಆಆಆ.)
ಹೆಣ್ಣು : ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ..  ಪೂರ್ಣ ಚಂದ್ರನಿಗೇ
          ಸೊಗದಳು ಕಾದಿಹ ನನ್ನ ಬಳಿಗೆ
          ಸೊಗದಳು ಕಾದಿಹ ನನ್ನ ಬಳಿಗೆ
          ನಗುವ ಮುಖ ತೋರಿ ಬಾ ಮೆಲ್ಲ ಒಳಗೇ
          ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ..ಆಆಆ   ಪೂರ್ಣ ಚಂದ್ರನಿಗೇ 
ಕೋರಸ್ :  ಆ.. ಆ.. ಆ...ಆ.. ಆ.. ಆ.. ಆ...ಆ.. ಆ.. ಆ.. ಆ...ಆ.. ಆ.. ಆ.. ಆ...ಆ..
ಹೆಣ್ಣು : ಆಆಆ. ಆಆಆ. ಆಆಆ. ಆಆಆ.ಆ.. ಆ.. ಆ...ಆ.. ಆ ಆಆಆ. ಆಆಆ

ಹೆಣ್ಣು : ಸರಸವಾಣಿ ಸೊಬಗಿನ ರಾಣಿ.. ಸರಸವಾಣಿ ಸೊಬಗಿನ ರಾಣಿ
          ನಾನೇ ಶುದ್ಧ ಬೃಹ್ಮಚಾರಿಣೀ.. ನಾನೇ ಶುದ್ಧ ಬೃಹ್ಮಚಾರಿಣೀ
          ಸವಿಮಾತನಾಡಿ ರಮಣೀಯ ನೋಡು ಒಲಿದು... ನಲಿದು ಒಡನಾಡೋ
          ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ..  ಪೂರ್ಣ ಚಂದ್ರನಿಗೇ 

ಹೆಣ್ಣು : ಸುಂದರಾಂಗಿ ಶೋಭೆ ಉಂಟು ಕುಂದದಂತ ಸಂಗ ಉಂಟು
          ಅಂದವಾದ ಅಧರವುಂಟು...  ಅಂದವಾದ ಅಧರವುಂಟು
          ಎಂದೆಂದೂ ನಾನೇ ನಿನಗೇ ಗಂಟು        
          ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ..ಓಓಓಓಓ  ಪೂರ್ಣ ಚಂದ್ರನಿಗೇ 

ಕೋರಸ್   : ಸಾ...ಸಾ...ಸಾ.. (ಆಆಆ.) ರಿ ರಿ ರಿ ರಿ (ಆಆಆ) ಗ...ಗ.. ಗ..ಗ .(ಆಆಆ)
          ನಿ ...ನಿ ..ನಿ . (ಆಆಆ.) ಪದಸ ಪದಸ ಪದಸ ಸಾ ಸಾ
           (ಆಆಆ) (ಆಆಆ) (ಆಆಆ)
ಹೆಣ್ಣು : ರಾಗ ತಾಳಗಳ ಮೇಳ ಹೂಡಿ ಝೇಂಕಾರ ಕಿಂಕಿಣಿದಿಂದ ಆಡಿ
          ಭಾಗ್ಯದ ನಿಧಿಯೇ ನಿನ್ನ ನೋಡಿ..  ಭಾಗ್ಯದ ನಿಧಿಯೇ ನಿನ್ನ ನೋಡಿ
          ಭಾಗೇಶ್ವರಿ ರಾಗದಲಿ ಬೇಡುವೇನು ಹಾಡಿ
          ಸ್ವಾಗತ ಸುಸ್ವಾಗತ ಪೂರ್ಣ ಚಂದ್ರನಿಗೇ.. ಪೂರ್ಣ ಚಂದ್ರನಿಗೇ 
ಕೋರಸ್ : ಸ್ವಾಗತ ಸುಸ್ವಾಗತ
ಹೆಣ್ಣು : ದನಿಸ ಮದನಿ ಮದ ದಮ ರಿಗ ಮದನಿ
ಕೋರಸ್ : ಸ್ವಾಗತ ಸುಸ್ವಾಗತ
ಹೆಣ್ಣು : ಗಮಗರಿಸ ನಿಸನಿದಮ  ಗಮಗರಿಸ ನಿದ ಮದ ನಿದನಿ 
ಕೋರಸ್ : ಸ್ವಾಗತ ಸುಸ್ವಾಗತ 
ಹೆಣ್ಣು : ಮಮಮಮಮಮ ಮದ ದಮಗರಿಸ 
          ದದದದದದದದದ ದಸ ನಿದನಿ ಮ  
          ನಿಸನಿ ನಿದದಾಮ ದನಿಸ ಮದನಿಸ ದಮದನಿಸ ಆಆಆ...
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಉರಿಯೊಳಗಿನ ಕರ್ಪೂರಕ್ಕೆ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಗಾಯನ : ಎಸ್.ಪಿ.ಬಿ.

ಉರಿಯೊಳಗಿನ ಕರ್ಪೂರಕ್ಕೆ ಕರಿವುಂಟೇ ಅಯ್ಯಾ
ಬಯಲ ಮರೀಚಿಯ ಜಲಕ್ಕೆ ಕೆಸರುಂಟೇ ಅಯ್ಯಾ
ವಾಯು ಒತ್ತಿದ ಪರಿಮಳಕ್ಕೆ ನಿರ್ವಾಯು ಉಂಟೇ ಅಯ್ಯಾ
ನೀವೂ ನೆರವೊಲಿದ ಬಳಿಕ ಎನಗೆ ಭಯವುಂಟೇ ಅಯ್ಯಾ
ಕೂಡಲಸಂಗಮದೇವಾ ನಿನ್ನ ಚರಣಕಮಲದೊಳಗೆ ನನ್ನ 
ನಿಂಬಿಟ್ಟುಕೊಳ್ಳಯ್ಯಾ  ಅಯ್ಯಾ..ಅಯ್ಯಾ... ಆಆಆ..
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ನಂಬಿಯಣ್ಣನ ಬಿನ್ನಹಕ್ಕಾಗಿ ಸಮ್ಮತಿಸಿದ ಶಿವಯೋಗಿ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಗಾಯನ : ಪೂರ್ಣಚಂದ್ರ 

ಮಾಡಿದ ಅಡಿಗೆಯು ಮೈಲಿಗೆ ಆಗದೇ ಮಡಿಯಾಗಿರಲಿ ಎಡೆಗೆಂದು
ಮಡದಿಗೆ ಹೇಳುತ ಗೌಡರ ಜೋತೆಯಲಿ ನಡೆದನು ಮುಂದೆ ಖಡ್ಗವ ಹಿಡಿದು
ರಣವದು ಹಬ್ಬಿತು ಶೌರ್ಯವು ಉಬ್ಬಿತು ಊರುದು ಮಸಣಕೆ ಸಮವಾಯ್ತು ಆಆಆ..
ರಣವದು ಹಬ್ಬಿತು ಶೌರ್ಯವು ಉಬ್ಬಿತು ಊರದು ಮಸಣಕೆ ಸಮವಾಯ್ತು
ಖಡ್ಗಕೆ ಖಡ್ಗ ಶೂಲಕೆ ಶೂಲ ಹಗಲುತ ಕಾವಿರಿ ಕಾದಾಡಿ...
ಹೋರಾಡಿದರ ನೆತ್ತರ ಹೊಳೆಯಾಯ್ತು ಶಿವನೇ ನೆತ್ತರ ಹೊಳೆಯಾಯ್ತು ಶಿವನೇ
ನಂಬಿಯಣ್ಣನ ಬಿನ್ನಹಕ್ಕಾಗಿ ಸಮ್ಮತಿಸಿದ ಶಿವಯೋಗಿ

ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು  ನುಂಗುವುದೇ ಧರ್ಮ ಸಮ್ಮತ
ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು ನುಂಗುವುದೇ ಧರ್ಮ ಸಮ್ಮತ
ಎಂಬುದ ಯೋಚಿಸಿ ವರಗುರು ಸಂತತ ಯೋಗದಲಿದ್ದ ಸನ್ನುತ 
ಹೊತ್ತು ಹೊತ್ತಿಗೆ ದೇಹವ ಸುತ್ತಿ ಹುತ್ತ ಬೆಳೆಯಿತು ಎತ್ತರ
ಅತ್ತಲ್ಲಿತ್ತಲೂ ಅಳುಕಾಡದೇ ತಾ ಚಿತ್ತವ ನಿಟ್ಟ ಶಿವಯೋಗಿ
ಚಿತ್ತವ ನಿಟ್ಟ ಶಿವಯೋಗಿ...
ನಂಬಿಯಣ್ಣನ ಬಿನ್ನಹಕ್ಕಾಗಿ ಸಮ್ಮತಿಸಿದ ಶಿವಯೋಗಿ

ಹೂಡಿದ ಯುದ್ಧವೂ ಸಾಗಲು ಸಂತತ ಸೋತು ನಿಂತರೂ ಸಾಕು ಎನ್ನುತಾ 
ಕೈಸೆರೆಯಾದರೂ ಶಬರರಿಗೆಲ್ಲಾ ದೈವದಲ್ಲಿತ್ತೂ ಆ ಯೋಗ 
ವೈರವೂ ಹೋಯಿತು ಸ್ನೇಹವೂ ಬಂದಿತು ಮತ್ತೆ ಬೆಳೆಯಿತು ಜೀವನ 
ಹರುಷವ ಅನುತಾ ಜನರೆಲ್ಲರೂ ತಾ ಊರಿಗೆ ಬಂದು ನೆಲೆಸಾಯ್ತು 
ಊರಿಗೆ ಬಂದು ನೆಲೆಸಾಯ್ತು 
ನಂಬಿಯಣ್ಣನ ಬಿನ್ನಹಕ್ಕಾಗಿ ಸಮ್ಮತಿಸಿದ ಶಿವಯೋಗಿ 
ಪರಮ ಶಿವಯೋಗಿ ನಮ್ಮ ಶಿವಯೋಗಿ 

ಕೋರಸ್ : ಗುರುವೇ ಮಹಾ ಗುರವೇ ಗುರುವೇ ಮಹಾ ಗುರವೇ 
                ಭಕುತರ ಸಲಹುವ ಸುರಕರುಣೆ  
                ಭಕುತರ ಸಲಹುವ ಸುರಕರುಣೆ ಗುರು ನಮಃ ಶಿವಾಯಃ 
                ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
                ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
                ಸಿದ್ದಲಿಂಗ ಭವತಾಪ ಗಂಗಾ 
               ಸಿದ್ದಲಿಂಗ ಭವತಾಪ ಗಂಗಾ 
               ದಿವ್ಯನಾಮವೂ ತುಂಬಲಿ ನಮ್ಮ ಅಂತರಂಗ 
               ನಿನ್ನ ನಾಮವೂ ತುಂಬಲಿ ನಮ್ಮ ಅಂತರಂಗ
               ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
              ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ 
              ಕುಪಿತನಾಗದೇ ಅಪರಾಧವನ ಕ್ಷಮಿಸು ಮಹಾ ಗುರುವೇ 
              ಕುಪಿತನಾಗದೇ ಅಪರಾಧವನ ಕ್ಷಮಿಸು ಮಹಾ ಗುರುವೇ 
              ನಮ್ಮನು  ಕ್ಷಮಿಸು ಮಹಾ ಗುರುವೇ 
              ಓಂ ನಮೋ ಸಿದ್ದಲಿಂಗ   ಓಂ ನಮೋ ಸಿದ್ದಲಿಂಗ 
              ಓಂ ನಮೋ ಸಿದ್ದಲಿಂಗ ಓಂ ನಮೋ ಸಿದ್ದಲಿಂಗ 
              ಓಂ ನಮೋ ಸಿದ್ದಲಿಂಗ ಓಂ ನಮೋ ಸಿದ್ದಲಿಂಗ )
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಶ್ರೀಕರ ಶುಭಕರ ಶಿವಶಂಕರ 
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಪಿ.ಜಯಚಂದ್ರನ್ .

ಶ್ರೀಕರ ಶುಭಕರ ಶಿವಶಂಕರ....  ಶ್ರೀಕರ ಶುಭಕರ ಶಿವಶಂಕರ.... 
ಗೌರಿ ವಲ್ಲಭ... ಕರುಣಿಸು ದೇವ... ಗೌರಿ ವಲ್ಲಭ... ಕರುಣಿಸು ದೇವ... 
ಶ್ರೀಕರ ಶುಭಕರ ಶಿವಶಂಕರ....  

ಹರಿಯೂ ನೀನೇ.... ಹರನೂ ನೀನೇ.....   ಆಆಆಅ ಆಆಆಅ 
ಹರಿಯೂ ನೀನೇ.... ಹರನೂ ನೀನೇ.....  ಸೃಷ್ಟಿ ಸ್ಥಿತಿಲಯ ಕೃರ್ತವೂ ನೀನೇ ...  
ಸೃಷ್ಟಿ ಸ್ಥಿತಿಲಯ ಕೃರ್ತವೂ ನೀನೇ ...  ನಿನ್ನಯ ಮಹಿಮೆಯ.. ಹೋಗಳಲು ಸಾಧ್ಯವೇ... 
ನಾಹಂ.. ಸೋಹಂ.. ಮೀರಿದ ಪ್ರಭುವೇ... 
ನಾಹಂ.. ಸೋಹಂ.. ಮೀರಿದ ಪ್ರಭುವೇ... 
ಶ್ರೀಕರ ಶುಭಕರ ಶಿವಶಂಕರ....  ಶ್ರೀಕರ ಶುಭಕರ ಶಿವಶಂಕರ.... 

ಬೇಡಿದ ವರಗಳ ನೀಡುವ ವಿಭುವೇ .. ನಿನ ಸಮರಾರೋ... ಭಕ್ತರ ಬಂಧುವೇ.. 
ಬೇಡಿದ ವರಗಳ ನೀಡುವ ವಿಭುವೇ .. ನಿನ ಸಮರಾರೋ... ಭಕ್ತರ ಬಂಧುವೇ.. 
ಎಲ್ಲಾ ನೀನೇ ... ಎಲ್ಲವೂ ನೀನೇ ... ವೇದ ವೇದಗಳ ಮಂತ್ರವೂ ನೀನೇ ... 
ನಿನ್ನಯ ಘನತೆಗೇ ... ಸರಿಸಮರ್ಯಾರೋ... ಸೋಹಂ ತೊರೆದ ದಾಸೋಹಂ ನಾನೇ 
ಶ್ರೀಕರ ಶುಭಕರ ಶಿವಶಂಕರ....  ಶ್ರೀಕರ ಶುಭಕರ ಶಿವಶಂಕರ.... 

ಅವತರಿತಿಸಿದ ಗುರು ಸಿದ್ದಲಿಂಗೇಶ್ವರ.. 
ಅವತರಿತಿಸಿದ ಗುರು ಸಿದ್ದಲಿಂಗೇಶ್ವರ.. ಭಜಿಸುವ ಜನರ ಭವಬಂಗ 
ಭಜಿಸುವ ಜನರ ಭವಬಂಗ 
ಶ್ರೀಕರ ಶುಭಕರ ಶಿವಶಂಕರ....  ಶ್ರೀಕರ ಶುಭಕರ ಶಿವಶಂಕರ.... 
ಗೌರಿ ವಲ್ಲಭ... ಕರುಣಿಸು ದೇವ... ಶ್ರೀಕರ ಶುಭಕರ ಶಿವಶಂಕರ....  
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಶಿವಪರಾತ್ಪರ ತರಂ ಸೂಕ್ಷಮ 
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ.

ಶಿವಪರಾತ್ಪರತರಂ ಸೂಕ್ಷಮಮ್ ಚ ಸರ್ವದತಾವ್ಯಯಮ್ ... 
ಅನಿಂದಿತ ಮನೋಪ್ಯಯಮ್ .... ಅಪ್ರಮಾಣಮಯಾಮಯಂ... 
ಆಆಆ ಆಆಆ ಆಆಆ ಆಆಆ ಆಆಆ ಆಆಆ
--------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ನೀರಾಮಯಂ ನೀರಾರಂ ನೀರ್ಗುಣಂ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ.

ನೀರಾಮಯಂ .. ನೀರಾರಂ... ನಿರ್ಗುಣಂ...  ನಿರ್ಮಲಂ.. ಶಿವಂ 
ತಸ್ಮಾತಲಿಂಗಮ್.. ಪರ ಬ್ರಹ್ಮ.. ಸಚ್ಚಿದಾನಂದ ಲಕ್ಷಣೋ........ 
ಆಆಆಅ ಆಆಆ  ಆಆಆಅ ಆಆಆ  
-------------------------------------------------------------------------------------------------------------------------

ಎಡೆಯೂರು ಸಿದ್ದಲಿಂಗೇಶ್ವರ (1981) - ಧ್ಯಾನ ಮಾಡುತಿರು ಎಲೇ ಮನವೇ 
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ 

ಧ್ಯಾನ ಮಾಡುತಿರು ಎಲೇ ಮನವೇ... ಸಿದ್ದಲಿಂಗೇಶ್ವರನ... ನಾಮವ ನೆನೆದೂ .. 
ಧ್ಯಾನ ಮಾಡುತಿರು ಎಲೇ ಮನವೇ...ಧ್ಯಾನ ಮಾಡುತಿರು ಎಲೇ ಮನವೇ...
ಧ್ಯಾನ ಮಾಡುತಿರು ಎಲೇ ಮನವೇ... ಸಿದ್ದಲಿಂಗೇಶ್ವರನ... ನಾಮವ ನೆನೆದೂ .. 
ಧ್ಯಾನ ಮಾಡುತಿರು ಎಲೇ ಮನವೇ...ಧ್ಯಾನ ಮಾಡುತಿರು ಎಲೇ ಮನವೇ...

ನಿಂತಾಗ ಕುಳಿತಾಗ... ನೋವಿನಲಿ ಬೆಂದಾಗ... ಹರುಷದಲಿ ನಲಿವಾಗ ಗುರು ಗುರು ಎನ್ನುತ...  
ನಿಂತಾಗ ಕುಳಿತಾಗ... ನೋವಿನಲಿ ಬೆಂದಾಗ... ಹರುಷದಲಿ ನಲಿವಾಗ ಗುರು ಗುರು ಎನ್ನುತ...  
ಎಲ್ಲಾ ಅವನಿಟ್ಟ ವರಗಳು ಎನ್ನುತ.... 
ಎಲ್ಲಾ ಅವನಿಟ್ಟ ವರಗಳು ಎನ್ನುತ ಸಂತೋಷದಿ ಸುಮ್ಮಾನವೇ ಬಾಳು ಸಾಗಿಸೋ... 
ಧ್ಯಾನ ಮಾಡುತಿರು ಎಲೇ ಮನವೇ... ಸಿದ್ದಲಿಂಗೇಶ್ವರನ... ನಾಮವ ನೆನೆದೂ .. 
ಧ್ಯಾನ ಮಾಡುತಿರು ಎಲೇ ಮನವೇ...ಧ್ಯಾನ ಮಾಡುತಿರು ಎಲೇ ಮನವೇ...

ಈ ಭಕ್ತಿ ಈ ಭಾವ.. ಜೀವನದೇ ಸಂತತ.. ನೆಲೆಸಲು ಭವತಾಪ ಅರಿವುದು ಖಂಡಿತ... 
ಈ ಭಕ್ತಿ ಈ ಭಾವ.. ಜೀವನದೇ ಸಂತತ.. ನೆಲೆಸಲು ಭವತಾಪ ಅರಿವುದು ಖಂಡಿತ... 
ಮುಂದೆ ಹೊಸದೊಂದು ಜನುಮವ ತಾಳದೇ ... 
ಮುಂದೆ ಹೊಸದೊಂದು ಜನುಮವ ತಾಳದೇ ಕೈಲಾಸವ ತೋರುವ ಸಿದ್ದಲಿಂಗ... 
ಧ್ಯಾನ ಮಾಡುತಿರು ಎಲೇ ಮನವೇ... ಸಿದ್ದಲಿಂಗೇಶ್ವರನ... ನಾಮವ ನೆನೆದೂ .. 
ಧ್ಯಾನ ಮಾಡುತಿರು ಎಲೇ ಮನವೇ... ಧ್ಯಾನ ಮಾಡುತಿರು ಎಲೇ ಮನವೇ...
-------------------------------------------------------------------------------------------------------------------------

No comments:

Post a Comment