ಎಲ್ಲರಂಥಲ್ಲ ನನ್ನ ಗಂಡ ಚಲನಚಿತ್ರದ ಹಾಡುಗಳು
- ಜನುಮವ ನೀಡಿರುವೇ ಎದೆ ಹಾಲನು ಎರೆದಿರುವೇ
- ನನ್ನೊಲವಿನ ಗೆಳೆಯ ನನ್ನ ಗಂಡ ಎಲ್ಲರ ಹಾಗಲ್ಲ
- ಬಾನಿಗೆಲ್ಲ ಒಬ್ಬ ಸೂರ್ಯನಂತೇ
- ಮೋಹದ ಬಾಂಬು ನಾನು ರಾತ್ರಿಯಲಿ ಸಿಡಿದೆ
- ಈ ಹೃದಯ ದೋಚಿ ಹೋದೆ ನಲ್ಲ
- ಜೋಗುಳದ ಹರಕೆ ಇದು ಮರೆಯದಿರು ಚಿನ್ನ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಪ್ರಕಾಶ ತ್ರಿಶೂಲ ಗಾಯನ : ಡಾ|| ರಾಜಕುಮಾರ
ಜನುಮವ ನೀಡಿರುವೇ ಎದೆ ಹಾಲನು ಎರೆದಿರುವೇ
ಲಾಲಿಯ ಹಾಡಿರುವೆ ನಿನ್ನ ಮಡಿಲಲಿ ಬೆಳೆಸಿರುವೇ
ಸವಿ ಅಕ್ಕರೇ ತೋರಿರುವೇ ನೀ ನೋವನು ನುಂಗಿರುವೇ
ಸಮನಾರು ತಾಯ ಪ್ರೀತಿ ಮುಂದೆ ಏಳು ಲೋಕದೀ..
ಜನುಮವ ನೀಡಿರುವೇ ಎದೆ ಹಾಲನು ಎರೆದಿರುವೇ
ಲಾಲಿಯ ಹಾಡಿರುವೆ ನಿನ್ನ ಮಡಿಲಲಿ ಬೆಳೆಸಿರುವೇ
ಸವಿ ಅಕ್ಕರೇ ತೋರಿರುವೇ ನೀ ನೋವನು ನುಂಗಿರುವೇ
ಸಮನಾರು ತಾಯ ಪ್ರೀತಿ ಮುಂದೆ ಏಳು ಲೋಕದೀ..
ಅಣ್ಣ ತಿನ್ನದೇ ಅಳಲು ನಾನು ಬಗಲಲ್ಲಿ ತಬ್ಬಿಕೊಂಡು ಚಂದಮಾಮನನ್ನೂ ತೋರಿ ತುತ್ತು ಉಣಿಸಿದೆ
ನನ್ನ ಜೀವದಾತ ಮೊದಲ ಗುರುವು ನೀನೇ ತೊದಲು ಮಾತನಾಡೆ ನಾನು ತಿದ್ದಿ ಕಲಿಸಿದೇ
ನಿನ್ನ ಮಮತೆಗೆ ಎಲ್ಲೆಯು ಇಲ್ಲ ಋಣ ತೀರಿಸೋ ಮಾರ್ಗವೇ ಇಲ್ಲ
ಹಾಗಿದ್ದರೂ ದೇವರೇ ಬಲ್ಲ ನಿನ್ನ ರಕ್ತ ಮಾಂಸ ಪಡೆದ ಬೊಂಬೆ ನಾನು ತಾಯಿಯ
ಜನುಮವ ನೀಡಿರುವೇ ಎದೆ ಹಾಲನು ಎರೆದಿರುವೇ
ಲಾಲಿಯ ಹಾಡಿರುವೆ ನಿನ್ನ ಮಡಿಲಲಿ ಬೆಳೆಸಿರುವೇ
ಸವಿ ಅಕ್ಕರೇ ತೋರಿರುವೇ ನೀ ನೋವನು ನುಂಗಿರುವೇ
ಸಮನಾರು ತಾಯ ಪ್ರೀತಿ ಮುಂದೆ ಏಳು ಲೋಕದೀ..
ಅಂದು ನನ್ನ ಜಗಕೆ ತರಲು ಸಾವಿನೊಡನೇ ಸೆಣಸಿದೆ ನೀನು
ನಿನ್ನ ಪಾದರಕ್ಷೆಯಾದರೂ ಋಣವೂ ತೀರದು ಇಂದು ಜೀವದಾನ ಕಾಯ್ವೆ ನನ್ನ ಪ್ರಾಣ
ಎದೆ ಬಿರಿದಿದೆ ನೋವಲಿ ಅಮ್ಮ ಕಿಡಿ ಸಿಡಿದಿದೆ ರೋಷದಿ ಅಮ್ಮ
ನಿನ್ನ ಸೇವೆಯ ಮಾಡುವೇ ನಮ್ಮಜನ್ಮ ಜನ್ಮ ನಿನ್ನ ಒಡಲ ಸೇರೋ ಆಸೆ ದೈವವೇ
ಜನುಮವ ನೀಡಿರುವೇ ಎದೆ ಹಾಲನು ಎರೆದಿರುವೇ
ಲಾಲಿಯ ಹಾಡಿರುವೆ ನಿನ್ನ ಮಡಿಲಲಿ ಬೆಳೆಸಿರುವೇ
ಸವಿ ಅಕ್ಕರೇ ತೋರಿರುವೇ ನೀ ನೋವನು ನುಂಗಿರುವೇ
ಸಮನಾರು ತಾಯ ಪ್ರೀತಿ ಮುಂದೆ ಏಳು ಲೋಕದೀ..
-----------------------------------------------------------------------------------------------
ಎಲ್ಲರಂಥಲ್ಲ ನನ್ನ ಗಂಡ (೧೯೯೭) - ನನ್ನೊಲವಿನ ಗೆಳೆಯ ನನ್ನ ಗಂಡ ಎಲ್ಲರ ಹಾಗಲ್ಲ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಪ್ರಕಾಶ ತ್ರಿಶೂಲ ಗಾಯನ : ಎಸ್.ಪಿ.ಬಿ., ಚಿತ್ರಾ
ಹೆಣ್ಣು : ನನ್ನೊಲವಿನ ಗೆಳೆಯ ನನ್ನ ಗಂಡ ಎಲ್ಲರ ಹಾಗಲ್ಲ
ನನ್ನೆದುರಿನಲಿ ನನ್ನವರಿರಲಿ ಈ ಬದುಕಿಗೆ ಏನು ಬೇಕಿಲ್ಲ
ಗಂಡು : ನನ್ನೊಲವಿನ ಗೆಳೆತಿ ನನ್ನ ಮಡದಿ ಎಲ್ಲರ ಹಾಗಲ್ಲ
ನನ್ನೆದುರಿನಲಿ ಶ್ರೀಮತಿ ಇರಲೂ ಈ ಬದುಕಿಗೆ ಏನು ಬೇಕಿಲ್ಲ
ಹೆಣ್ಣು : ನನ್ನಿನಿಯನ ಸ್ಪರ್ಷ ... ಗಂಡು : ಹೇಯ್ .. ಸಂಗಾತಿಯ ಸ್ಪರ್ಷ ..
ಹೆಣ್ಣು : ನನ್ನಿನಿಯನ ಸ್ಪರ್ಷ ಝಿಲ್ ಝಿಲ್ ಎಂದಿದೆ ಅಷ್ಟೇ ಸಾಕಲ್ಲ
ಹೆಣ್ಣು : ಓ... ಕಣ್ಣು ಕಣ್ಣು ಕೂಡಿದಾಗ ಕನಸು ಕಾಣೋ ಹಬ್ಬ
ಗಂಡು : ಮನ ಮನ ಹಾಡಿದಾಗ ಪ್ರೀತಿಗೆ ಹಬ್ಬ
ಹೆಣ್ಣು : ಚಳಿಗಾಲ ಚಳಿ ಚಳಿ ತರಲು ಮದುವೆಯ ಹಬ್ಬ
ಗಂಡು : ತನು ತನು ಮಿಲನಕೆ ಸೋಬಾನ ಹಬ್ಬ
ಹೆಣ್ಣು : ಅಬ್ಬಬ್ಬಾ ಮುದ್ದಿನ ಸಿಹಿ ಹಬ್ಬ
ಗಂಡು : ಅಮ್ಮಮ್ಮ ಕಾಮನ ಮಧು ಹಬ್ಬ
ಹೆಣ್ಣು : ನನ್ನಿನಿಯನ ಸ್ಪರ್ಷ ಝಿಲ್ ಝಿಲ್ ಎನ್ನಲು ಮೋಹದ ಹಬ್ಬ
ಗಂಡು : ಸಂಗಾತಿಯ ಸ್ಪರ್ಶ ಝಿಲ್ ಝಿಲ್ ಎನ್ನಲು ಮೋಹದ ಹಬ್ಬ
ಹೆಣ್ಣು : ನನ್ನೆದುರಿನಲಿ ನನ್ನವರಿರಲು ಈ ಬದುಕಿಗೆ ಏನು ಬೇಕಿಲ್ಲ
ಗಂಡು : ನನ್ನೊಲವಿನ ಗೆಳೆತಿ ನನ್ನ ಮಡದಿ ಎಲ್ಲರ ಹಾಗಲ್ಲ
ಗಂಡು : ಓ... ನನ್ನ ಒಡತಿ ಸೋಗಲಾಡಿ ಶೃಂಗಾರದ ಗೊಂಬೆ
ಹೆಣ್ಣು : ನನ್ನ ದೊರೆ ಮದನನ ಪ್ರತಿರೂಪವಂತೇ
ಗಂಡು : ನನ್ನ ನಲ್ಲೆ ದುಂಡು ಮಲ್ಲೆ ಬೆಲ್ಲ ಕೊಡುವೆ ಬಾ ಬಾ
ಹೆಣ್ಣು : ನನ್ನ ನಲ್ಲ ತಗೋ ಇಲ್ಲೇ ನನ್ನ ಹಾಲು ಗಲ್ಲ
ಗಂಡು : ನಿನ ಗಲ್ಲ ಜೇನಿನ ರಸಗುಲ್ಲ ಹೋಯ್ ..
ಹೆಣ್ಣು : ಬೇಕೇನು ಹಗಲು ಇರುಳೆಲ್ಲಾ..
ಗಂಡು : ಕೊಟ್ಟರೆ ಬೇಡ ಅನ್ನೋಕೆ ನಾ ತಪಸ್ಸಿಗೇ ಕೂತಿಲ್ಲ
ಹೆಣ್ಣು : ಮೇನಕೆ ನಾನು ನನ್ನ ಮುಂದೆ ತಪಸ್ಸು ನಡೆಯೋಲ್ಲ
ಗಂಡು : ನನ್ನೆದುರಿನಲಿ ಶ್ರೀಮತಿ ಇರಲೂ ಈ ಬದುಕಿಗೆ ಏನು ಬೇಕಿಲ್ಲ
ಹೆಣ್ಣು : ನನ್ನೆದುರಿನಲಿ ನನ್ನವರಿರಲು ಈ ಬದುಕಿಗೆ ಏನು ಬೇಕಿಲ್ಲ
ಗಂಡು : ನನ್ನೊಲವಿನ ಗೆಳೆತಿ...
ಹೆಣ್ಣು : ಹ್ಹಾಂ .. ನನ್ನೊಲವಿನ ಗೆಳೆಯ
ಗಂಡು : ನನ್ನೊಲವಿನ ಗೆಳೆತಿ ನನ್ನ ಮಡದಿ ಎಲ್ಲರ ಹಾಗಲ್ಲ
ಹೆಣ್ಣು : ನನ್ನೊಲವಿನ ಗೆಳೆಯ ನನ್ನ ಗಂಡ ಎಲ್ಲರ ಹಾಗಲ್ಲ
ನನ್ನಿನಿಯನ ಸ್ಪರ್ಷ ... ಗಂಡು : ಹೇಯ್ .. ಸಂಗಾತಿಯ ಸ್ಪರ್ಷ ..
ಹೆಣ್ಣು : ನನ್ನಿನಿಯನ ಸ್ಪರ್ಷ ಝಿಲ್ ಝಿಲ್ ಎಂದಿದೆ ಅಷ್ಟೇ ಸಾಕಲ್ಲ
------------------------------------------------------------------------------------------------
ಹೆಣ್ಣು : ನನ್ನಿನಿಯನ ಸ್ಪರ್ಷ ಝಿಲ್ ಝಿಲ್ ಎಂದಿದೆ ಅಷ್ಟೇ ಸಾಕಲ್ಲ
------------------------------------------------------------------------------------------------
ಎಲ್ಲರಂಥಲ್ಲ ನನ್ನ ಗಂಡ (೧೯೯೭) - ಬಾನಿಗೆಲ್ಲ ಒಬ್ಬ ಸೂರ್ಯನಂತೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್. ವ್ಯಾಸರಾವ ಗಾಯನ : ಎಸ್.ಪಿ.ಬಿ, ಚಿತ್ರಾ, ಕುಸುಮ
ಗಂಡು : ಓಓಓ .. ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
ಸಿಡಿವ ಗುಂಡು ಮಾತಿನ ಧಾಟಿಯು ಪುಟಿವ ಚೆಂಡು ಮನಸಿನ ಪ್ರೀತಿಯು
ನಮ್ಮ ನಾಡಿಗವನೇ ಅಪರಂಜಿಯೂ ..
ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
ಕತ್ತಲಂತೆ ಇದ್ದ ನಮ್ಮ ಬಾಳಿನಲ್ಲಿ ಬೆಳಕಿನಂತೆ ಬಂದು ಬದುಕು ತೋರಿ ಕೊಟ್ಟ
ದ್ವೇಷವನ್ನು ಅಳಿಸಿ ಪ್ರೀತಿಯನ್ನು ಬಿತ್ತಿ ಸ್ವಾರ್ಥವನ್ನು ತಿದ್ದಿ ಕರುಣೆ ಕಲಿಸಿ ಕೊಟ್ಟ
ಹೆಣ್ಣು : ಸಹನೆ ಕಲಿಸಿದ ಮಮತೆ ತುಂಬಿದ ಬಡತನ ಸರಿಸುತ ಬವಣೆ ನೀಗಿದ
ಇವನೇ ನಮ್ಮ ಊರ ಜನನಾಯಕ
ಗಂಡು : ಓಓಓ .. ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
ಗಂಡು : ಪುಂಡರನ್ನು ಹಿಡಿದು ಒದ್ದು ಒಳಗೆ ಹಾಕಿ ಭಂಡರಲ್ಲಿ ಶಿಸ್ತು ಕಲಿಸಿದಂತ ಅಣ್ಣ
ಪುಂಡರನ್ನು ಹಿಡಿದು ಒದ್ದು ಒಳಗೆ ಹಾಕಿ ಭಂಡರಲ್ಲಿ ಶಿಸ್ತು ಕಲಿಸಿದಂತ ಅಣ್ಣ
ಹೆಣ್ಣು : ಓದು ಕಾಣದಂಥ ನಮಗೆ ವಿದ್ಯೆ ಕೊಟ್ಟ ಬದುಕಿನಲ್ಲಿ ಬೆಳೆಸುವಾಸೆ ಇಟ್ಟ
ಕಂಡೆನು ಒಲವಿನ ಭಾವ ಬಂಧನ ತುಂಬಿತು ಹೃದಯದಿ ಜೀವ ಸ್ಪಂದನ
ಇರಲಿ ಹೀಗೆ ಎಂದೂ ಆರಾಧನಾ..
ಗಂಡು : ಓಓಓ .. ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
ಸಿಡಿವ ಗುಂಡು ಮಾತಿನ ಧಾಟಿಯು ಪುಟಿವ ಚೆಂಡು ಮನಸಿನ ಪ್ರೀತಿಯು
ನಮ್ಮ ನಾಡಿಗವನೇ ಅಪರಂಜಿಯೂ ..
ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
------------------------------------------------------------------------------------------------
ಎಲ್ಲರಂಥಲ್ಲ ನನ್ನ ಗಂಡ (೧೯೯೭) - ಮೋಹದ ಬಾಂಬು ನಾನು ರಾತ್ರಿಯಲಿ ಸಿಡಿದೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಪ್ರಕಾಶ ತ್ರಿಶೂಲ ಗಾಯನ : ಮಂಜುಳಾ, ವಿಷ್ಣು, ಕೋರಸ್
ಹೆಣ್ಣು : ಮೋಹದ ಬಾಂಬು ನಾನು ರಾತ್ರಿಯಲ್ಲಿ ಸಿಡಿದೆ
ಬೊಂಬಾಯಿ ಪಾಲಾ ನೀನು ಭ್ರಾಂತಿಯಲ್ಲಿ ಇರುವೇ ..
ಮೋಹದ ಬಾಂಬು ನಾನು ರಾತ್ರಿಯಲ್ಲಿ ಸಿಡಿದೆ
ಬೊಂಬಾಯಿ ಪಾಲಾ ನೀನು ಭ್ರಾಂತಿಯಲ್ಲಿ ಇರುವೇ ..
ರಸಿಕ ರಾಣಿಯು ನಾನು ಖುಷಿಗೆ ಕಾಣಿಕೆ ಏನು
ರಸಿಕ ರಾಣಿಯು ನಾನು ಖುಷಿಗೆ ಕಾಣಿಕೆ ಏನು
ಹೇಹೇಹೇಹೇಹ್ .. ರಸಿಕ ರಾಣಿಯು ನಾನು ... ರಸಿಕ ರಾಣಿಯು ನಾನು ...
ಕೋರಸ್ : ಜಿಂಬೋಲ್ .. ಜಿಂಬೋಲ್ .. ಜಿಂಬೋಲ್ .. ಜಿಂಬೋಲ್ .. ಜಿಂಬೋಲ್ .. ಜಿಂಬೋಲ್ ..
ಹೆಣ್ಣು : ಊರಲ್ಲಿ ಯಾರನ್ನೇ ಕೇಳು ನನ್ನ ಆಟ ಪಾಠ ಎಲ್ಲೆಲ್ಲೂ ಸಿಕ್ಕೋದಿಲ್ಲ ಇಂಥ ಮೈಮಾಟ
ದಂ ಇದ್ರೇ ಹತ್ರ ಬಂದು ನೋಡು ಒಂದು ನೋಟ
ಸುಮ್ನೇ ಇದ್ರೇ ದಕ್ಕೋದಿಲ್ಲ ಇಂಥ ಮಾಲು ಬೇಟೆ
ಗುಂಡಿನ ಮತ್ತು ತುಂಡಿನ ತುತ್ತು ಗಂಡಿನ ಗತ್ತು ಏಷ್ಟೆಐತೆ ಗೊತ್ತು... ಹೇಹೇಹೇ
ರಸಿಕ ರಾಣಿಯು ನಾನು ಖುಷಿಯ ಕಾಣಿಕೆ ಏನೂ ..
ರಸಿಕ ರಾಣಿಯು ನಾನು ಖುಷಿಯ ಕಾಣಿಕೆ ಏನೂ ..
ಗಂಡು : ದುಷ್ಮನಗೇ ಕೊಡುವುದು ಷಾಕು ಲಡ್ಕಿಗೆ ಕೊಡುವುದು ಟ್ರೀಕ್ಕೂ
ಗಂಡು : ದುಷ್ಮನಗೇ ಕೊಡುವುದು ಷಾಕು ಲಡ್ಕಿಗೆ ಕೊಡುವುದು ಟ್ರೀಕ್ಕೂ
ಶೃಂಗಾರ ಆಟದಲ್ಲಿ ಎಲ್ಲ ರೀತಿ ಬಲ್ಲೆ ಮನ್ಮಥ ರಾಜ್ಯದಲ್ಲಿ ಲಗ್ಗೆ ಹಾಕೋ ನಲ್ಲೆ
ಚೈನು ಗೊತ್ತು ಗಲ್ಲಿನೂ ಗೊತ್ತು ಎಲ್ಲೈತೋ ಕಿಕ್ಕೂ ಅಲ್ಲೆಲ್ಲ ಹೊಕ್ಕು ಹೇಹೇಹೇಹೇ ..
ಆಲ್ ಇಂಡಿಯಾ ಫಿಗರು ನಾನು ನನಗೇ ಫಿಯರು ಏನೂ ..
ಗಂಡು : ದುಷ್ಮನಗೇ ಕೊಡುವುದು ಷಾಕು ಲಡ್ಕಿಗೆ ಕೊಡುವುದು ಟ್ರೀಕ್ಕೂ
ಹೆಣ್ಣು : ಮೋಹದ ಬಾಂಬು ನಾನು ರಾತ್ರಿಯಲ್ಲಿ ಸಿಡಿದೆ
ಬೊಂಬಾಯಿ ಪಾಲಾ ನೀನು ಭ್ರಾಂತಿಯಲ್ಲಿ ಇರುವೇ ..
ಮೋಹದ ಬಾಂಬು ನಾನು ರಾತ್ರಿಯಲ್ಲಿ ಸಿಡಿದೆ
ಬೊಂಬಾಯಿ ಪಾಲಾ ನೀನು ಭ್ರಾಂತಿಯಲ್ಲಿ ಇರುವೇ ..
ರಸಿಕ ರಾಣಿಯು ನಾನು ಖುಷಿಗೆ ಕಾಣಿಕೆ ಏನು
ರಸಿಕ ರಾಣಿಯು ನಾನು ಖುಷಿಗೆ ಕಾಣಿಕೆ ಏನು
ಹೇಹೇಹೇಹೇಹ್ .. ರಸಿಕ ರಾಣಿಯು ನಾನು ... ರಸಿಕ ರಾಣಿಯು ನಾನು ...
------------------------------------------------------------------------------------------------
ಎಲ್ಲರಂಥಲ್ಲ ನನ್ನ ಗಂಡ (೧೯೯೭) - ಈ ಹೃದಯ ದೋಚಿ ಹೋದೆ ನಲ್ಲ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಪ್ರಕಾಶ ತ್ರಿಶೂಲ ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಈ ಹೃದಯ ದೋಚಿ ಹೋದೆ ನಲ್ಲ ನಿನ್ನನು ಎಂದಿಗೂ ನಾನು ಮರೆಯೇ
ನೀ ಬಂದೆ ನನ್ನ ಬಾಳಿನಲ್ಲಿ ನೆನಪಿನಲಿ ಮನಸು ವಾಲೀ ವಾಲೀ
ನೆನಪಿನಲಿ ಮನಸು ಖಾಲಿ ಖಾಲಿ
ಗಂಡು : ಈ ಹೃದಯ ದೋಚಿ ಹೋದೆ ನಲ್ಲೆ ನಿನ್ನನ್ನು ಎಂದಿಗೂ ನಾನು ಮರೆಯೇ
ನೆನಪಿನಲಿ ಮನಸು ವಾಲೀ ವಾಲಿ ನೀನಿಲ್ಲದೇ ಬದುಕು ಖಾಲಿ ಖಾಲಿ
ಹೆಣ್ಣು : ಬದುಕಿನಲು ಇದುವರೆಗೆ ನೀನು ನಾನು ಯಾರೋ
ಕಂಡೊಡನೇ ಪುಲಕಿಸಿತು ತನವು ಏಕೋ ಏನೋ
ಕೋರಸ್ : ಮದಪ ಮದಪ ಮದಪ ಗಮಗಮ ಗಮಗರಿಸ
ಗಂಡು : ಗಿರಿ ವನದಿ ಜನಿಸಿರುವ ನದಿಗೆ ಕಡಲ ಆಸೆ
ಜನುಮಗಳು ಸಾಗಿದರು ನಾವು ಸೇರುವಾಸೆ
ಹೆಣ್ಣು : ಋತುರಾಜ ನೀನೇ ಓ ಜಾಣ ರತಿರಾಜ ಎಸೆದ ಹೂಬಾಣ ವಿರಹ ತಾಳೇನೂ ..
ಗಂಡು : ಈ ಹೃದಯ ದೋಚಿ ಹೋದೆ ನಲ್ಲೆ ನಿನ್ನನ್ನು ಎಂದಿಗೂ ನಾನು ಮರೆಯೇ
ನೆನಪಿನಲಿ ಮನಸು ವಾಲೀ ವಾಲಿ ನೀನಿಲ್ಲದೇ ಬದುಕು ಖಾಲಿ ಖಾಲಿ
ಗಂಡು : ಪ್ರಿಯತಮೆ ನಾನು ಬರುವೆ ನಿನ್ನ ಸೇರಲೆಂದೇ ಸಂಗಮಕೆ ಕಾಯುವೆ ನನ್ನಾ ಒಲವೇ ಕೇಳೇ
ಕೋರಸ್ : ಮದಪ ಮದಪ ಮದಪ ಗಮಗಮ ಗಮಗರಿಸ
ಹೆಣ್ಣು : ಪ್ರಿಯತಮನೇ ಅರಳಿರುವ ಹೂವು ನಾನು ಕೇಳು
ಪೂಜೆಗೆ ನಾ ಕಾದಿರುವೆ ಎಂದು ಪಡೆವೆ ಹೇಳು
ಗಂಡು : ರತಿ ರಾಣಿ ಎಸೆದೆ ಹೂಬಾಣ ಸವಿ ನೋವು ಕಾಡೇ ಈ ಪ್ರಾಣ ಬೇಗ ವರಿಸುವೇ
ಹೆಣ್ಣು : ಈ ಹೃದಯ ದೋಚಿ ಹೋದೆ ನಲ್ಲ ನಿನ್ನನು ಎಂದಿಗೂ ನಾನು ಮರೆಯೇ
ನೀ ಬಂದೆ ನನ್ನ ಬಾಳಿನಲ್ಲಿ ನೆನಪಿನಲಿ ಮನಸು ವಾಲೀ ವಾಲೀ
ನೆನಪಿನಲಿ ಮನಸು ಖಾಲಿ ಖಾಲಿ
ಗಂಡು : ಈ ಹೃದಯ ದೋಚಿ ಹೋದೆ ನಲ್ಲೆ ನಿನ್ನನ್ನು ಎಂದಿಗೂ ನಾನು ಮರೆಯೇ
ನೆನಪಿನಲಿ ಮನಸು ವಾಲೀ ವಾಲಿ ನೀನಿಲ್ಲದೇ ಬದುಕು ಖಾಲಿ ಖಾಲಿ
-----------------------------------------------------------------------------------------------
ಎಲ್ಲರಂಥಲ್ಲ ನನ್ನ ಗಂಡ (೧೯೯೭) - ಜೋಗುಳದ ಹರಕೆ ಇದು ಮರೆಯದಿರು ಚಿನ್ನ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಪ್ರಕಾಶ ತ್ರಿಶೂಲ ಗಾಯನ : ಎಸ್.ಪಿ.ಬಿ, ಕೋರಸ್
ಹೆಣ್ಣು : ಜೋಗುಳದ ಹರಕೆ ಇದು ಮರೆಯದಿರು ಚಿನ್ನ ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ
ಕನ್ನಡಕ್ಕೆ ಹೋರಾಡೋ ಕನ್ನಡದ ಕಂದ ಕನ್ನಡವ ಕಾಪಾಡೋ ನನ್ನ ಆನಂದ
ಗಂಡು : ಕನ್ನಡಕ್ಕಾಗಿ ಕೈ ಎತ್ತು.. ಕನ್ನಡಕ್ಕಾಗಿ ಕೈ ಎತ್ತು ಬಾರದು ನಿನಗೇ ಆಪತ್ತು
ನಾಡಿನ ಕ್ಷೇಮಕ್ಕೆ ಸೊಲ್ಲೆತ್ತು ಕಾಣುವೆ ನೀನು ಸಂಪತ್ತು
ಸಿರಿಗನ್ನಡ ನಿನ್ನುಸಿರಾದರೇ.. ಸವಿಗನ್ನಡ ನಿನ್ನುಸಿರಾದರೇ
ಬದುಕೆಲ್ಲಾ ನಿನಗೆ ಸಿಹಿ ಮುತ್ತೂ ಬದುಕೆಲ್ಲಾ ನಿನಗೆ ಕಿಮ್ಮತ್ತೂ ..
ಕನ್ನಡಕ್ಕಾಗಿ ಕೈ ಎತ್ತು.. ಕನ್ನಡಕ್ಕಾಗಿ ಕೈ ಎತ್ತು ಬಾರದು ನಿನಗೇ ಆಪತ್ತು
ಕೋರಸ್ : ಸಿರಿಗನ್ನಡಂ ಗೆಲ್ಗೆ .. ಸಿರಿಗನ್ನಡಂ ಬಾಳ್ಗೆ ಸವಿಗನ್ನಡಂ ಏಳ್ಗೆ ನಿಧಿಗನ್ನಡಂ ನಾಡ್ಗೆ ..
ಗಂಡು : ಕನ್ನಡ ತಾಯಿಯ ಹಾಲನು ಕುಡಿದ ಸಿಂಹವೇ ನೀನು ಎದ್ದೇಳೂ ..
ಕನ್ನಡ ತಾಯಿಯ ಹಾಲನು ಕುಡಿದ ಸಿಂಹವೇ ನೀನು ಎದ್ದೇಳೂ ..
ಜನ್ಮವ ನೀಡಿದ ಕನ್ನಡ ನಾಡಿನ ಋಣವನು ತೀರಿಸೋ ಮಗನಾಗು
ಕನ್ನಡ ಕಲಿಸಲು ಭಾಷೆಯ ಉಳಿಸಲು ಅನ್ಯರಿಗೇ ಗುರುವಾಗು
ಕನ್ನಡ ನೆಲದಲಿ ಬದುಕುತ ದ್ರೋಹವ ಮಾಡುವ ವೈರಿಗೇ ಯಮನಾಗು
ಕನ್ನಡ ನೆಲದಲಿ ಬದುಕುತ ದ್ರೋಹವ ಮಾಡುವ ವೈರಿಗೇ ಯಮನಾಗು
ಗಂಡು : ಧಡ ಧಡ ಧುಮುಕುವ ಜೋಗದ ಹಾಗೇ ಕನ್ನಡಿಗಳ ನೀ ಮುನ್ನುಗ್ಗು
ಧಡ ಧಡ ಧುಮುಕುವ ಜೋಗದ ಹಾಗೇ ಕನ್ನಡಿಗಳ ನೀ ಮುನ್ನುಗ್ಗು
ಗುಡು ಗುಡು ಗುಡುಗುವ ಸಿಡಿಲಿನ ಹಾಗೇ ಕನ್ನಡಿಗಾ ನೀ ಮಿಂಚಾಗೂ ..
ನರನಾಡಿಯೂ ಮಿಡಿಯಲಿ ಕನ್ನಡಕೆ ಗಡಿ ಕಾಯುವ ಕೆಲಸಕೆ ತಡವೇಕೆ
ನುಡಿ ಬಾಷೆಗೇ ಧಕ್ಕೆಯೂ ಬಂದಾಗ ಪರಭಾಷೆಯ ಧಾಳಿಗೇ ನಿಂತಾಗ
ಎದೆ ಉಬ್ಬಿಸಿ ಘರ್ಜಿಸು ಕನ್ನಡಿಗ
ಕಲಿ ಕನ್ನಡ.. ನುಡಿ ಕನ್ನಡ.. ಸಿರಿಗನ್ನಡ.. ನಿಧಿಗನ್ನಡ
ಕಲಿ ಕನ್ನಡ.. ನುಡಿ ಕನ್ನಡ.. ಸಿರಿಗನ್ನಡ.. ನಿಧಿಗನ್ನಡ
------------------------------------------------------------------------------------------------
No comments:
Post a Comment